Search
  • Follow NativePlanet
Share
» »ಹಿಮವದ್ ಗೋಪಾಲಸ್ವಾಮಿ ಬೆಟ್ಟ

ಹಿಮವದ್ ಗೋಪಾಲಸ್ವಾಮಿ ಬೆಟ್ಟ

By Vijay

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬರುವ ಗೋಪಾಲಸ್ವಾಮಿ ಬೆಟ್ಟವು ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯ ಸ್ಥಳವಾಗಿದೆ. ಸಮುದ್ರ ಮಟ್ಟದಿಂದ 1450 ಮೀ ಎತ್ತರವಿರುವ ಈ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿನ ಅತಿ ಎತ್ತರದ ಪ್ರದೇಶವಾಗಿದ್ದು ಬೆಟ್ಟದ ತುದಿಯಲ್ಲಿರುವ ಕೃಷ್ಣನಿಗೆ ಮುಡಿಪಾದ ವೇಣುಗೋಪಾಲಸ್ವಾಮಿಯ ದೇವಸ್ಥಾನದಿಂದ ಪ್ರಖ್ಯಾತವಾಗಿದೆ.

ವರ್ಷದ ಬಹುತೇಕ ಸಮಯವು ಈ ಬೆಟ್ಟ ಪ್ರದೇಶದಲ್ಲಿ ದಟ್ಟವಾದ ಮಂಜು ಆವರಿಸುವುದರಿಂದ ಇದಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟವೆಂದೆ ಕರೆಯಲಾಗುತ್ತದೆ. ಅರಣ್ಯ ಪ್ರದೇಶದಲ್ಲಿರುವುದರಿಂದ ಈ ಪ್ರದೇಶದಲ್ಲಿ ವನ್ಯಜೀವಿ ಸಂಪತ್ತು ಹೇರಳವಾಗಿರುವುದನ್ನು ಕಾಣಬಹುದು.

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಈ ಸ್ಥಳವು ಬೆಂಗಳೂರಿನಿಂದ ಸುಮಾರು 220 ಕಿ.ಮೀ ಹಾಗೂ ಮೈಸೂರಿನಿಂದ ಸುಮಾರು 75 ಕಿ.ಮೀ ಗಳಷ್ಟು ದೂರದಲ್ಲಿದೆ. ಮೈಸೂರು - ಊಟಿ ರಸ್ತೆಯಲ್ಲಿ ಬರುವ ಗುಂಡ್ಲುಪೇಟೆಯಿಂದ ಸುಮಾರು 10 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Ananth BS

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಬೆಟ್ಟದ ತುದಿಯವರೆಗೂ ವಾಹನದಲ್ಲಿ ಸಾಗಬಹುದಾದ ರಸ್ತೆಯಿದ್ದು, ತೆರಳಲು ಅರಣ್ಯ ಇಲಾಖೆಯು ನಿಗದಿತ ಶುಲ್ಕವನ್ನು ಪ್ರವೇಶ ಶುಲ್ಕವನ್ನಾಗಿ ತೆಗೆದುಕೊಳ್ಳುತ್ತದೆ.

ಚಿತ್ರಕೃಪೆ: Ramesh Meda

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಪೂಜಾ ವಿಧಿ ವಿಧಾನಗಳಿಗೆಂದು ಬೇಕಾಗುವ ಸಾಮಗ್ರಿಗಳನ್ನು ಹೊರತುಪಡಿಸಿ ಇತರೆ ತಿಂಡಿ ತಿನಿಸುಗಳನ್ನು ಕೊಂಡೊಯ್ಯಲು ಅನುಮತಿ ಇರುವುದಿಲ್ಲ. ಆದರೆ ಸಾಮಗ್ರಿಗಳನ್ನು ಪ್ಲಾಸ್ಟಿಕ್ ಬ್ಯಾಗುಗಳಲ್ಲಿ ಕೊಂಡೊಯ್ಯುವಂತಿಲ್ಲ.

ಚಿತ್ರಕೃಪೆ: Dhruvaraj S

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಮತ್ತೊಂದು ಅಂಶವೆಂದರೆ ಚೆಕ್ ಪೊಸ್ಟ್ ನಲ್ಲಿ ಪ್ರವೇಶ ಶುಲ್ಕ ಕೊಟ್ಟು ತೆರಳಿದ ನಂತರ ಒಂದುವರೆ ಘಂಟೆಯಷ್ಟು ಮಾತ್ರ ಸಮಯ ಕಳೆಯಬಹುದಾಗಿದ್ದು ಮತ್ತೆ ಹಿಂತಿರುಗಬೇಕು. ಈ ದೇವಸ್ಥಾನ ಪ್ರದೇಶವು ಸಾರ್ವಜನಿಕರಿಗೆಂದು ಬೆಳಿಗ್ಗೆ 8.30 ರಿಂದ ಸಂಜೆ 4 ಘಂಟೆಯವರೆಗೆ ಮಾತ್ರ ತೆರೆದಿರುತ್ತದೆ. ರಾತ್ರಿಯ ಸಮಯ ತಂಗುವುದಕ್ಕೆ ಅವಕಾಶವಿರುವುದಿಲ್ಲ.

ಚಿತ್ರಕೃಪೆ: Dhruvaraj S

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಬೆಟ್ಟದ ತಪ್ಪಲಿನಲ್ಲಿರುವ ವೇಣುಗೋಪಾಲ ಸ್ವಾಮಿಯ ದೇವಸ್ಥಾನವನ್ನು ಕ್ರಿ.ಶ. 1315 ರಲ್ಲಿ ಹೊಯ್ಸಳ ದೊರೆ ಬಲ್ಲಾಳನು ನಿರ್ಮಿಸಿದ್ದಾನೆ. ತದನಂತರ ಮೈಸೂರಿನ ವಡೇಯರ್ ಸಾಮ್ರಾಜ್ಯದ ಅರಸರು ಇದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು.

ಚಿತ್ರಕೃಪೆ: benuski

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಕೃಷ್ಣನಿಗೆ ಮುಡಿಪಾದ ವೇಣುಗೋಪಾಲಸ್ವಾಮಿಯ ಈ ದೇವಸ್ಥಾನವು ಗೋಪುರ, ಧ್ವಜಸ್ಥಂಬ, ಮುಖ ಮಂಟಪದಲ್ಲಿ ಬಲಿಪೀಠವನ್ನು ಹೊಂದಿದೆ. ಮುಖಮಂಟಪದ ಗೋಡೆಗಳ ಮೇಲೆ ದಶಾವತಾರದ ಕೆತ್ತನೆಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: benuski

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಗರ್ಭಗುಡಿಯೊಳಗೆ ಕೃಷ್ಣನ ಮೂಲ ವಿಗ್ರಹವು ಕೊಳಲನ್ನು ಬಾರಿಸುತ್ತ ಮರದ ಕೆಳಗೆ ನಿಂತಿರುವ ಭಂಗಿಯಲ್ಲಿದ್ದು ನೋಡಲು ಆಕರ್ಷಕವಾಗಿದೆ.

ಚಿತ್ರಕೃಪೆ: benuski

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ದಂತಕಥೆಯ ಪ್ರಕಾರ, ಒಂದೊಮ್ಮೆ ಅಗಸ್ತ್ಯ ಮುನಿಗಳು ಇಲ್ಲಿ ಕಠಿಣವಾದ ತಪಸ್ಸನ್ನಾಚರಿಸಿದ್ದರಿಂದ ಸ್ವತಃ ವಿಷ್ಣುವೆ ಪ್ರತ್ಯಕ್ಷನಾಗಿ ಅವರ ಇಚ್ಛೆಯನುಸಾರವಾಗಿ ಇಲ್ಲಿ ಬಂದು ನೆಲೆಸಲು ಸಮ್ಮತಿಸಿದನಂತೆ. ಅಂದಿನಿಂದ ಇದನ್ನು ಹಂಸತೀರ್ಥ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು.

ಚಿತ್ರಕೃಪೆ: benuski

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬರುವುದರಿಂದ ವಿಶೇಷವಾಗಿ ಕಾಡಾನೆಗಳು ಈ ಪ್ರದೇಶದಲ್ಲಿ ಕಂಡುಬರುತ್ತಿರುತ್ತವೆ. ಅಲ್ಲದೆ ಈ ಬೆಟ್ಟದ ಮೇಲಿಂದ ನೋಡಿದಾಗ ಸುಂದರವಾದ ಭೂದೃಶ್ಯಾವಳಿಗಳನ್ನು ನೋಡುಗರ ಕಣ್ಮನಗಳನ್ನು ಸೆಳೆಯುತ್ತದೆ. ಇಲ್ಲಿಂದ ಕಂಡುಬರುವ ಸೂರ್ಯೋದಯ ಹಾಗೂ ಸೂರ್ಯಾಸ್ತಗಳ ನೋಟಗಳೂ ನೋಡಲು ಬಲು ಚೆಂದವಾಗಿರುತ್ತದೆ.

ಚಿತ್ರಕೃಪೆ: Sajith T S

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಈ ದೇವಸ್ಥಾನವು ಬಂಡೀಪುರ ರಾಷ್ಟ್ರೀಯ ಉದ್ಯಾನದ ಹೃದಯ ಭಾಗದಲ್ಲಿದ್ದು ಸಾಕಷ್ಟು ಇತರೆ ಕಾಡು ಪ್ರಾಣಿಗಳು ಇಲ್ಲಿ ಕಂಡುಬರುತ್ತವೆ. ಈ ಅಮೂಲ್ಯ ವನ್ಯಜೀವಿ ಸಂಪತ್ತಿಗೆ ತೊಂದರೆಯಾಗದ ನಿಟ್ಟಿನಲ್ಲಿ ದೇವಸ್ಥಾನದ ನಂತರದ ಪ್ರದೇಶಗಳಿಗೆ ತೆರಳಲು, ಪಿಕ್ನಿಕ್ ಮಾಡಲು ಅವಕಾಶವಿಲ್ಲ.

ಚಿತ್ರಕೃಪೆ: Abhijeet Rane

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟದ ಮೇಲಿರುವ ವೇಣುಗೋಪಾಲಸ್ವಾಮಿಯ ಸುಂದರವಾದ ದೇವಸ್ಥಾನ.

ಚಿತ್ರಕೃಪೆ: Sajith T S

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟದ ಮೇಲಿರುವ ವೇಣುಗೋಪಾಲಸ್ವಾಮಿಯ ಸುಂದರವಾದ ದೇವಸ್ಥಾನ.

ಚಿತ್ರಕೃಪೆ: Abhijeet Rane

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟದ ಮೇಲಿರುವ ವೇಣುಗೋಪಾಲಸ್ವಾಮಿಯ ಸುಂದರವಾದ ದೇವಸ್ಥಾನ.

ಚಿತ್ರಕೃಪೆ: benuski

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟದ ಮೇಲಿರುವ ವೇಣುಗೋಪಾಲಸ್ವಾಮಿಯ ಸುಂದರವಾದ ದೇವಸ್ಥಾನ.

ಚಿತ್ರಕೃಪೆ: benuski

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟದ ಮೇಲಿರುವ ವೇಣುಗೋಪಾಲಸ್ವಾಮಿಯ ಸುಂದರವಾದ ದೇವಸ್ಥಾನ.

ಚಿತ್ರಕೃಪೆ: Abhijeet Rane

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟದ ಮನಮೋಹಕ ಪರಿಸರ.

ಚಿತ್ರಕೃಪೆ: Mahesh Telkar

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟದ ಮನಮೋಹಕ ಪರಿಸರ.

ಚಿತ್ರಕೃಪೆ: Mahesh Telkar

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟದ ಮನಮೋಹಕ ಪರಿಸರ.

ಚಿತ್ರಕೃಪೆ: benuski

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟದ ಮನಮೋಹಕ ಪರಿಸರ.

ಚಿತ್ರಕೃಪೆ: benuski

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟದ ಮನಮೋಹಕ ಪರಿಸರ.

ಚಿತ್ರಕೃಪೆ: benuski

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟದ ಮನಮೋಹಕ ಪರಿಸರ.

ಚಿತ್ರಕೃಪೆ: benuski

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟ:

ಗೋಪಾಲಸ್ವಾಮಿ ಬೆಟ್ಟದ ಮನಮೋಹಕ ಪರಿಸರ.

ಚಿತ್ರಕೃಪೆ: benuski

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X