Search
  • Follow NativePlanet
Share
» »ಆಗುಂಬೆಯ ಗೋಪಾಲ ಕೃಷ್ಣ ದೇವಾಲಯದಲ್ಲಿದೆ ಕೃಷ್ಣನ 108 ಹೆಸರುಗಳನ್ನು ಸಂಕೇತಿಸುವ ಮೆಟ್ಟಿಲುಗಳು

ಆಗುಂಬೆಯ ಗೋಪಾಲ ಕೃಷ್ಣ ದೇವಾಲಯದಲ್ಲಿದೆ ಕೃಷ್ಣನ 108 ಹೆಸರುಗಳನ್ನು ಸಂಕೇತಿಸುವ ಮೆಟ್ಟಿಲುಗಳು

ಗೋಪಾಲ ಕೃಷ್ಣ ದೇವಾಲಯವು ಕರ್ನಾಟಕದ ರಾಜ್ಯದ ಆಗುಂಬೆಯ ಸಮೀಪದಲ್ಲಿದೆ. ಆರ್.ಕೆ.ನಾರಾಯಣ್ ಅವರ ಕಾದಂಬರಿಯನ್ನು ಆಧರಿಸಿದ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್‌ನ ಹಲವಾರು ಸಂಚಿಕೆಗಳನ್ನು ಇದೇ ಆಗುಂಬೆಯ ಸುತ್ತಮುತ್ತಲೂ ಚಿತ್ರೀಕರಿಸಲಾಗಿದೆ ಎಂಬುದು ಅನೇಕರಿಗೆ ತಿಳಿದಿಲ್ಲ.

ಅಂದಹಾಗೆ ಆಗುಂಬೆಯ ಹತ್ತಿರದಲ್ಲಿರುವ ಕೆಲವು ಜನಪ್ರಿಯ ಪ್ರವಾಸಿ ತಾಣಗಳ ಪೈಕಿ ಕಬ್ಬಿನಾಲೆ ಗ್ರಾಮದ ಬೆಟ್ಟದ ಮೇಲಿರುವ 14 ನೇ ಶತಮಾನದ ಗೋಪಾಲಕೃಷ್ಣ ದೇವಾಲಯವೂ ಒಂದು. ದೇವಾಲಯವು ಈ ಪ್ರದೇಶದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಆಗುಂಬೆಯಿಂದ ನೀವು ದೇವಾಲಯಕ್ಕೆ ತೆರಳಲು 25 ಕಿ.ಮೀ. ದೂರ ಕ್ರಮಿಸಬೇಕಾಗುತ್ತದೆ.

ಪುರಾತನ ಕಾಲದ ದೇವಾಲಯ

ಪುರಾತನ ಕಾಲದ ದೇವಾಲಯ

ಈ ದೇವಾಲಯವು ಈ ಸಣ್ಣ ಕುಗ್ರಾಮದಲ್ಲಿದ್ದರೂ ಸಾಕಷ್ಟು ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪುರಾತನ ಕಾಲದ ಹಿಂದೂ ದೇವಾಲಯವಾಗಿರುವ ಗೋಪಾಲ ಕೃಷ್ಣ ದೇವಾಲಯವು ಕರ್ನಾಟಕದ ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿದೆ. ಹಾಗಾಗಿ ಆಗುಂಬೆಗೆ ಪ್ರವಾಸ ಕೈಗೊಂಡಾಗ ಒಮ್ಮೆ ನೀವು ಈ ಸ್ಥಳವನ್ನು ನೋಡಲೇಬೇಕು. ಗೋಪಾಲ ಕೃಷ್ಣ ದೇವಾಲಯವು ಹೊಯ್ಸಳರ ಕಾಲದ ದೇವಾಲಯವಾಗಿದೆ. ಇದು ಶ್ರೀ ಕೃಷ್ಣನಿಗೆ ಸಮರ್ಪಿತವಾಗಿದೆ.

ಕೃಷ್ಣನ 108 ಹೆಸರುಗಳನ್ನು ಸಂಕೇತಿಸುವ ಮೆಟ್ಟಿಲುಗಳು

ಕೃಷ್ಣನ 108 ಹೆಸರುಗಳನ್ನು ಸಂಕೇತಿಸುವ ಮೆಟ್ಟಿಲುಗಳು

ಗೋಪಾಲ ಕೃಷ್ಣ ದೇವಾಲಯವು ಸುಂದರವಾದ ಶಿಲ್ಪಕಲೆಗೆ ಹೆಸರುವಾಸಿಯಾಗಿದೆ. ಈ ವಿಶಿಷ್ಟ ದೇವಾಲಯವನ್ನು ಹೆಸರಾಂತ ವಾಸ್ತುಶಿಲ್ಪಿ ಮುನಿಯಂಗಳ ಕೃಷ್ಣ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಲಾಗಿದೆ. ಒಳಗಿನ ಗರ್ಭಗುಡಿ ಹೆಚ್ಚುವರಿ ಬಾಹ್ಯ ಸಭಾಂಗಣದಿಂದ ಮುಚ್ಚಲ್ಪಟ್ಟಿದೆ. ಇದು ತುಳುನಾಡು ಶೈಲಿಯಲ್ಲಿರುವುದರಿಂದ ಬಹಳ ವಿಶಿಷ್ಟವಾಗಿದೆ.

ನೆಲಮಾಳಿಗೆಯಿಂದ ಗರ್ಭ ಗೃಹಕ್ಕೆ ಹೋಗುವ 108 ಮೆಟ್ಟಿಲುಗಳಿದ್ದು, ಮೆಟ್ಟಿಲುಗಳು ಶ್ರೀ ಕೃಷ್ಣನ 108 ಹೆಸರುಗಳನ್ನು ಸಂಕೇತಿಸುತ್ತದೆ. ಸುಂದರವಾದ ಗೋಪಾಲ ಕೃಷ್ಣ ದೇವಾಲಯವು ಒಂದು ಹೆಗ್ಗುರುತಾಗಿದ್ದು, ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೆಟ್ಟದ ಮೇಲಿರುವ ಈ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ಮಾತ್ರ ಪ್ರವೇಶಿಸಬಹುದಾಗಿದೆ. ದೇವಸ್ಥಾನವು ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ. ಪ್ರವೇಶ ಉಚಿತ.

ದೇವಸ್ಥಾನಕ್ಕೆ ಭೇಟಿ ನೀಡಲು ಉತ್ತಮ ಸಮಯ

ದೇವಸ್ಥಾನಕ್ಕೆ ಭೇಟಿ ನೀಡಲು ಉತ್ತಮ ಸಮಯ

ದೇವಸ್ಥಾನಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಸೆಪ್ಟೆಂಬರ್-ಮಾರ್ಚ್. ಈ ಸಮಯದಲ್ಲಿ ಹವಾಮಾನವು ತುಂಬಾ ತಂಪಾಗಿರುತ್ತದೆ. ಈ ದಿನಗಳಲ್ಲಿ ಬೆಟ್ಟದ ಮೇಲಿರುವ ದೇವಸ್ಥಾನ ನೋಡಲು ಆಹ್ಲಾದಕರ ವಾತವರಣವಿರುತ್ತದೆ. ಬೇಸಿಗೆಯಲ್ಲಿ ಮಾತ್ರ ಆಗುಂಬೆಯಲ್ಲಿ ಸಾಕಷ್ಟು ಬಿಸಿಲು ಇರುತ್ತದೆ. ಮಳೆಗಾಲದಲ್ಲಿ ಹೋಗುವುದು ಅಷ್ಟು ಸೂಕ್ತವಲ್ಲ.

ಏಕೆಂದರೆ ಇದು ಅತ್ಯಂತ ಆರ್ದ್ರ ಸ್ಥಳವಾಗಿದೆ. ನೀವು ಅದೃಷ್ಟವಂತರಾಗಿದ್ದರೆ ನೀವು ದೇವಸ್ಥಾನದ ಮಾರ್ಗದಲ್ಲಿ ಕೆಲವು ಕಾಡೆಮ್ಮೆಗಳನ್ನು ಕಾಣಬಹುದು. ದೊಡ್ಡ ನಗರಗಳ ಗದ್ದಲದಿಂದ ದೂರವಾಗಿ ಶಾಂತಿಯುತ ಸಮಯವನ್ನು ಕಳೆಯಲು ಬಯಸುವವರು ಆಗುಂಬೆಗೆ ಭೇಟಿ ನೀಡಬಹುದು.

ಆಗುಂಬೆಗೆ ಭೇಟಿ ನೀಡುವವರಿಗೆ ಸಲಹೆಗಳು

ಆಗುಂಬೆಗೆ ಭೇಟಿ ನೀಡುವವರಿಗೆ ಸಲಹೆಗಳು

*ಆಗುಂಬೆಯು ಭಾರತದಲ್ಲಿ ಎರಡನೇ ಅತಿ ಹೆಚ್ಚು ತೇವವಿರುವ ಸ್ಥಳವಾಗಿದೆ. ಆದ್ದರಿಂದ ಮಳೆಗಾಲದ ಸಮಯದಲ್ಲಿ ರೈನ್‌ಕೋಟ್‌ಗಳು, ಛತ್ರಿಗಳು ಇತ್ಯಾದಿಗಳನ್ನು ಒಯ್ಯುವುದನ್ನು ಮರೆಯದಿರಿ. ಮಳೆಗಾಲದ ಅವಧಿಯಲ್ಲಿ ಗ್ರಾಮದ ಸೌಂದರ್ಯವು ಇನ್ನಷ್ಟು ಹೆಚ್ಚುತ್ತದೆ.

* ರಾಫ್ಟಿಂಗ್ ಮಾಡುವಾಗ ಹತ್ತಿ ಬಟ್ಟೆಯನ್ನು ಧರಿಸಬೇಡಿ. ಸಿಂಥೆಟಿಕ್ ಅಥವಾ ಪಾಲಿಯೆಸ್ಟರ್ ಫೈಬರ್ ಬಟ್ಟೆಗಳನ್ನು ಧರಿಸಿ. ಮಹಿಳೆಯರು ಸೀರೆ ಧರಿಸುವುದನ್ನು ತಪ್ಪಿಸಬೇಕು.

* ಗರಿಗರಿಯಾದ ಮಸಾಲಾ ವಡ (ಅಂಬೋಡೆ), ಕಷಾಯ ಮತ್ತು ಪ್ರಾದೇಶಿಕ ವಿಶೇಷತೆಗಳಾಗಿರುವ ವೆನಿಲ್ಲಾ ಸುವಾಸನೆಯಿರುವ ಚಹಾವನ್ನು ಪ್ರಯತ್ನಿಸಲು ಮರೆಯಬೇಡಿ.

*ಇದು ಕಾಳಿಂಗಗಳ ನೈಸರ್ಗಿಕ ಆವಾಸಸ್ಥಾನವಾಗಿದೆ. ಹಾಗಾಗಿ ಕಾಡಿನಲ್ಲಿ ನಡೆಯುವಾಗ ಹುಷಾರಾಗಿರಿ.

ಇಲ್ಲಿ ಉಳಿದುಕೊಳ್ಳಬಹುದು

ಇಲ್ಲಿ ಉಳಿದುಕೊಳ್ಳಬಹುದು

ಆಗುಂಬೆಯು ಒಂದು ಚಿಕ್ಕ ಗ್ರಾಮವಾದ್ದರಿಂದ ಉಳಿದುಕೊಳ್ಳಲು ಹೆಚ್ಚಿನ ವ್ಯವಸ್ಥೆಗಳಿಲ್ಲ. ಆದರೆ ಹೋಮ್‌ಸ್ಟೇಗಳ ಹೊರತಾಗಿ ತೀರ್ಥಹಳ್ಳಿ (32 ಕಿಮೀ), ಶೃಂಗೇರಿ (28 ಕಿಮೀ) ಅಥವಾ ಹೆಬ್ರಿ (20 ಕಿಮೀ)ಯಲ್ಲಿ ಇರುವ ಹೆಚ್ಚಿನ ಹೋಟೆಲ್‌ಗಳು ಮತ್ತು ಲಾಡ್ಜ್‌ ಗಳಲ್ಲಿ ನೀವು ಉಳಿಯಬಹುದು. ಆನ್‌ಲೈನ್ ಬುಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಿನ ವಸತಿ ಆಯ್ಕೆಗಳು ಲಭ್ಯವಿದ್ದರೂ, ಆಗುಂಬೆಯ ಸೌಂದರ್ಯ ಸವಿಯಲು ಅನುಭವಿಸುವವರಿಗೆ ಕೆಲವು ವಸತಿ ಆಯ್ಕೆಗಳಿದ್ದು, ಹೊರಡುವ ಮುನ್ನ ಪರಿಶೀಲಿಸಬಹುದು.

ದೇವಸ್ಥಾನಕ್ಕೆ ತೆರಳುವ ಮಾರ್ಗ

ದೇವಸ್ಥಾನಕ್ಕೆ ತೆರಳುವ ಮಾರ್ಗ

ಆಗುಂಬೆ ಬೆಂಗಳೂರಿನಿಂ 378 ಕಿಮೀ ದೂರದಲ್ಲಿದೆ. ಶಿವಮೊಗ್ಗದಿಂದ 80 ಕಿ.ಮೀ. ದೂರದಲ್ಲಿದೆ. ಸಾರಿಗೆ ವ್ಯವಸ್ಥೆ ಚೆನ್ನಾಗಿದ್ದು, ಆಗುಂಬೆಗೆ ಕ್ಯಾಬ್ ಅನ್ನು ಒಯ್ಯಬಹುದು.

ವಿಮಾನ: ಹತ್ತಿರದ ವಿಮಾನ ನಿಲ್ದಾಣ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಶಿವಮೊಗ್ಗದಿಂದ 132 ಕಿ.ಮೀ.ದೂರದಲ್ಲಿದೆ.

ರಸ್ತೆ: ಹೆಬ್ರಿಯಿಂದ ಆಗುಂಬೆಗೆ ಹೋಗುವ ರಸ್ತೆಯಲ್ಲಿ ಘಾಟ್ ಸಿಗುತ್ತದೆ. ಈ ಘಾಟ್‌ಗಳ ವಿಭಾಗದಲ್ಲಿ ಮಿನಿ ಬಸ್ ಅಥವಾ ಎಲ್‌ಎಂವಿ ಮಾತ್ರ ಅನುಮತಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಬೆಂಗಳೂರು, ಮಂಗಳೂರು, ಶಿವಮೊಗ್ಗ ಮತ್ತು ಉಡುಪಿಯಿಂದ ಆಗುಂಬೆಯವರೆಗೆ ಸಂಚರಿಸುತ್ತವೆ. ಮೇಲೆ ತಿಳಿಸಿದ ಸ್ಥಳಗಳಿಂದ ಅನೇಕ ಖಾಸಗಿ ಬಸ್ ಸೇವೆಗಳು ಲಭ್ಯವಿವೆ. ಬೆಂಗಳೂರಿನಿಂದ ಕ್ಯಾಬ್‌ನಲ್ಲಿ ಪ್ರಯಾಣ ಮಾಡಿದರೆ ನಿಮಗೆ ತಲುಪಲು ಎಂಟು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ರೈಲು: ಉಡುಪಿ ರೈಲು ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ. ಇದು ಆಗುಂಬೆಯಿಂದ 54 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಪ್ರಯಾಣಿಸುವ ಜನರು ಶಿವಮೊಗ್ಗ ಟೌನ್ ನಿಲ್ದಾಣದಲ್ಲಿ ಇಳಿದು ನಂತರ ರಸ್ತೆ ಮೂಲಕ ಆಗುಂಬೆಗೆ ಹೋಗಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X