Search
  • Follow NativePlanet
Share
» »1000 ರೂ. ಕೊಟ್ಟು ಈ ದೋಸೆ ತಿನ್ತೀರಾ? ಇದು ಬರೀ ಬೆಂಗ್ಳೂರಲ್ಲಷ್ಟೇ ಸಿಗೋದು

1000 ರೂ. ಕೊಟ್ಟು ಈ ದೋಸೆ ತಿನ್ತೀರಾ? ಇದು ಬರೀ ಬೆಂಗ್ಳೂರಲ್ಲಷ್ಟೇ ಸಿಗೋದು

ದೋಸೆಯಲ್ಲಿ ಎಷ್ಟೆಲ್ಲಾ ವಿಧಗಳಿರುತ್ತೆ ಅಲ್ವಾ? ಆದರೆ ಬೆಂಗಳೂರಿನಲ್ಲಿ ಒಂದು ವಿಶೇ‍ಷ ದೋಸೆ ಇದೆ. ಇದು ನಿಮಗೆ ಬೇರೆಲ್ಲೂ ಕಾಣಸಿಗೋದಿಲ್ಲ. ಬೆಂಗಳೂರಿನಲ್ಲಿರುವ ಬಹಳಷ್ಟು ಜನರಿಗೆ ಈ ಬಗ್ಗೆ ಗೊತ್ತಿರಲಿಕ್ಕಿಲ್ಲ ಅನ್ನಿಸುತ್ತೆ. ಹಾಗಾದ್ರೆ ಅದು ಎಂಥಹಾ ದೋಸೆ ಅಂತ ತಿಳಿಯಬೇಕಾ?

ಗೋಲ್ಡ್‌ ಪ್ಲೇಟೆಡ್ ದೋಸೆ

ಗೋಲ್ಡ್‌ ಪ್ಲೇಟೆಡ್ ದೋಸೆ

ಗೋಲ್ಡ್‌ ಪ್ಲೇಟೆಡ್ ಆಭರಣಗಳನ್ನು ನೀವು ನೋಡಿರುವಿರಿ , ಆದರೆ ಗೋಲ್ಡ್‌ ಪ್ಲೇಟೆಡ್ ದೋಸೆ ಬಗ್ಗೆ ನೀವು ಕೇಳಿದ್ದೀರಾ? ಇಲ್ಲಾ ಅಂದ್ರೆ ಬೆಂಗಳೂರಿನಲ್ಲಿದೆ ಗೋಲ್ಡ್‌ ಪ್ಲೇಟೆಡ್ ದೋಸೆ.

1ಮೀ.ಅಗಲ 3 ಮೀ.ಎತ್ತರದ ಗುಹೆಯ ಈ ಪುಣ್ಯಧಾಮಕ್ಕೆಬಗ್ಗಿಕೊಂಡು ಹೋಗೋ ತಾಕತ್ತಿದ್ಯಾ?1ಮೀ.ಅಗಲ 3 ಮೀ.ಎತ್ತರದ ಗುಹೆಯ ಈ ಪುಣ್ಯಧಾಮಕ್ಕೆಬಗ್ಗಿಕೊಂಡು ಹೋಗೋ ತಾಕತ್ತಿದ್ಯಾ?

ವಿದೇಶಿ ಐಡಿಯಾ ಸ್ವದೇಶದಲ್ಲಿ

ವಿದೇಶಿ ಐಡಿಯಾ ಸ್ವದೇಶದಲ್ಲಿ

ನನ್ನ ರೆಸ್ಟೋರೆಂಟ್‌ನಲ್ಲಿ ಏನಾದರೂ ಒಂದು ವಿಶೇಷ ತಿನಿಸನ್ನು ತಯಾರಿಸಬೇಕೆಂದು ಯೋಚಿಸುತ್ತಿದ್ದಾಗ ವಿದೇಶದಲ್ಲಿ ಪಿಜ್ಜಾಗೆ, ಐಸ್‌ಕ್ರೀಮ್‌ಗೆ ಗೋಲ್ಡ್‌ ಫೋಯಿಲ್ಸ್‌ನ್ನು ಬಳಸುತ್ತಿದ್ದದ್ದನ್ನು ಟಿವಿಯಲ್ಲಿ ನೋಡಿದೆ. ಇದನ್ನು ಭಾರತದಲ್ಲಿ ಬೇರೆಯಾವುದಾದರೂ ತಿನಿಸಿಗೆ ಅಳವಡಿಸಬೇಕೆನಿಸಿತು. ಹಾಗಾಗಿ ದೋಸೆಗೆ ಇದನ್ನು ಮಾಡಿದೆ ಎನ್ನುತ್ತಾರೆ ಈ ರೆಸ್ಟೋರೆಂಟ್‌ನ ಮಾಲಿಕ ಚಂದನ್ ಲೋಕೇಶ್.

ದೋಸೆಯ ಬೆಲೆ ಎಷ್ಟು?

ದೋಸೆಯ ಬೆಲೆ ಎಷ್ಟು?

ಇದು ಅಂತಿಂಥಾ ದೋಸೆ ಅಲ್ಲ . ಗೋಲ್ಡನ್ ಪ್ಲೇಟೆಡ್ ಅಂದ ಮೇಲೆ ಅದರ ಬೆಲೆಯೂ ಹಾಗೆಯೇ ಇರುತ್ತದೆ ಅಲ್ಲವೆ, ಇಲ್ಲಿನ ಒಂದು ದೋಸೆಗೆ ಒಂದು ದೋಸಕ್ಕೆ 1,011 ರೂ.

ಬೆಂಗಳೂರಿನ ತುರಾಹಳ್ಳಿ ಅರಣ್ಯಕ್ಕೆ ಹೋಗಿದ್ದೀರಾ?ಬೆಂಗಳೂರಿನ ತುರಾಹಳ್ಳಿ ಅರಣ್ಯಕ್ಕೆ ಹೋಗಿದ್ದೀರಾ?

ಸಿಲ್ವರ್ ಪ್ಲೇಟ್ ದೋಸೆ ಕೂಡಾ ಇದೆ

ಸಿಲ್ವರ್ ಪ್ಲೇಟ್ ದೋಸೆ ಕೂಡಾ ಇದೆ

ಇಲ್ಲಿ ಗೋಲ್ಡನ್‌ ಪ್ಲೇಟೆಡ್ ಮಾತ್ರವಲ್ಲದೆ, ಸಿಲ್ವರ್ ಪ್ಲೇಟ್ ಕೂಡಾ ಬರುತ್ತದೆ. ಇದು ಬರೀ 151 ರೂ.ಗೆ ಸಿಗುತ್ತದೆ. ಈ ರೆಸ್ಟೋರೆಂಟ್ ಮಾಲಿಕನ ಮಾರ್ಕೇಟಿಂಗ್ ಸ್ಟ್ಯಾಟಜಿ ಗೋಲ್ಡ್‌ನ್ ಪ್ಲೇಟೆಡ್ ದೋಸೆಯನ್ನು ಸಖತ್ ಹಿಟ್ ಮಾಡಿದೆ.

ಎಲ್ಲಿದೆ ಈ ಗೋಲ್ಡನ್ ಪ್ಲೇಟೆಡ್ ದೋಸೆ

ಎಲ್ಲಿದೆ ಈ ಗೋಲ್ಡನ್ ಪ್ಲೇಟೆಡ್ ದೋಸೆ

ನೀವು ಈ ದೋಸೆ ತಿನ್ನಬೇಕಾದರೆ ಮಲ್ಲೇಶ್ವರಂಗೆ ಹೋಗಬೇಕು. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವೀನಾ ಸ್ಟೋರ್‌ನ ಮುಂದುಗಡೆ ಮಾರ್ಗೋಸಾ ಕಾರ್ನರ್‌ ರಾಜ್‌ಬೋಗ್‌ 15 ನೇ ಕ್ರಾಸ್‌ನಲ್ಲಿ ಈ ದೋಸೆ ಸಿಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X