Search
  • Follow NativePlanet
Share
» »ಈ ದೇವಾಲಯವನ್ನು ಸಂದರ್ಶಿಸಿದರೆ ಕೈಲಾಸವನ್ನು ಸಂದರ್ಶಿಸಿದ ಹಾಗೆ...

ಈ ದೇವಾಲಯವನ್ನು ಸಂದರ್ಶಿಸಿದರೆ ಕೈಲಾಸವನ್ನು ಸಂದರ್ಶಿಸಿದ ಹಾಗೆ...

ರಾವಣನ, ಆತ್ಮಲಿಂಗ, ವಿನಾಯಕ ಎಂಬ ತಕ್ಷಣವೇ ಹಿಂದೂ ಪುರಾಣಗಳ ಬಗ್ಗೆ ಗೊತ್ತಿರುವವರಿಗೆ ಬೇಗ ಕರ್ನಾಟಕದಲ್ಲಿನ ಪ್ರವಿತ್ರವಾದ ಪುಣ್ಯಕ್ಷೇತ್ರ ಗೋಕರ್ಣ ನೆನಪಿಗೆ ಬರುತ್ತದೆ. ಅಲ್ಲಿ ಶಿವನ ಆತ್ಮಲಿಂಗವನ್ನು ಭಕ್ತರು ಇಂದಿಗೂ ಭೇಟಿ ನೀಡಿ ಬರುತ್ತಿರುತ್ತಾರೆ.

ಆದರೆ ಇಂತಹದೇ ಗೋಕರ್ಣ ಉತ್ತರ ಭಾರತ ದೇಶದಲ್ಲಿಯೂ ಕೂಡ ಇದೆ ಎಂಬುದು ನಿಮಗೆ ಗೊತ್ತೆ? ಇದನ್ನು "ಚೋಟಿ ಕಾಶಿ" ಎಂದು ಕೂಡ ಕರೆಯುತ್ತಾರೆ. ಈ ಚೋಟಿ ಕಾಶಿ ಎಂದು ಕರೆಯುವ ಉತ್ತರ ಪ್ರದೇಶ ಗೋಕರ್ಣವನ್ನು ಸಂದರ್ಶಿಸಿದರೆ ಕೈಲಾಸವನ್ನು ಸಂದರ್ಶಿಸಿದ ಪುಣ್ಯ ಲಭಿಸುತ್ತದೆ ಎಂದು ಅಲ್ಲಿನ ಭಕ್ತರ ಪ್ರಬಲವಾದ ನಂಬಿಕೆಯಾಗಿದೆ. ಅಸಲಿಗೆ ಕರ್ನಾಟಕದಲ್ಲಿನ ಗೋಕರ್ಣಕ್ಕೂ ಉತ್ತರ ಭಾರತ ದೇಶದಲ್ಲಿನ ಗೋಕರ್ಣಕ್ಕೂ ಏನು ಸಂಬಂಧವಿದೆ? ಅಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳು ಯಾವುವು ಎಂಬುದೆಲ್ಲಾ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿದುಕೊಳ್ಳಿ.

1.ಗೋಲ ಗೋಕರ್ಣ

1.ಗೋಲ ಗೋಕರ್ಣ

PC:YOUTUBE

ಉತ್ತರ ಪ್ರದೇಶದಲ್ಲಿನ ಲಖಿಂಪೂರಿ ಖೇರಿಗೆ ಸಮೀಪದಲ್ಲಿರುವ ಚಿಕ್ಕ ಪಟ್ಟಣವೇ ಗೋಲ ಗೋಕರ್ಣನಾಥ್ ಪಟ್ಟಣ. ಇಲ್ಲಿರುವ ಶಿವಾಲಯವು ಉತ್ತರ ಭಾರತ ದೇಶದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಹೊಂದಿದೆ. ಈ ಶಿವಾಲಯದಲ್ಲಿನ ಪರಮೇಶ್ವರನನ್ನು ದರ್ಶಿಸುವುದಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

2.ಕರ್ನಾಟಕದಲ್ಲಿನ ಗೋಕರ್ಣ ಕ್ಷೇತ್ರಕ್ಕೆ ಹೋಲಿಕೆ

2.ಕರ್ನಾಟಕದಲ್ಲಿನ ಗೋಕರ್ಣ ಕ್ಷೇತ್ರಕ್ಕೆ ಹೋಲಿಕೆ

PC:YOUTUBE

ಈ ಪುಣ್ಯಕ್ಷೇತ್ರಕ್ಕೆ ಸಂಬಂಧಿಸಿದ ಕಥೆಯು ಸುಮಾರು ಕರ್ನಾಟಕದಲ್ಲಿನ ಗೋಕರ್ಣ ಕ್ಷೇತ್ರಕ್ಕೆ ಹೋಲಿಕೆಯಾಗುತ್ತದೆ. ತಾಯಿಯ ಕೋರಿಕೆಗಳನ್ನು ತೀರಿಸುವ ಸಲುವಾಗಿ ರಾವಣನು ಶಿವನಿಗಾಗಿ ಹಿಮಾಲಯದಲ್ಲಿ ಘೋರವಾದ ತಪಸ್ಸು ಮಾಡುತ್ತಾನೆ. ರಾವಣನ ತಪಸ್ಸಿಗೆ ಮೆಚ್ಚಿದ ಶಿವನು ತನ್ನ ಆತ್ಮಲಿಂಗವನ್ನು ಆತನಿಗೆ ನೀಡಿ ಲಂಕಕ್ಕೆ ಸೇರುವವರೆವಿಗೂ ಈ ಆತ್ಮಲಿಂಗವನನು ಯಾವುದೇ ಕಾರಣಕ್ಕೂ ಭೂಮಿಗೆ ತಾಕಿಸಬೇಡ ಎಂದು ಹೇಳುತ್ತಾನೆ.

3.ಆತ್ಮಲಿಂಗ

3.ಆತ್ಮಲಿಂಗ

PC:YOUTUBE

ಆದರೆ ರಾವಣನು ಗೊಲ ಗೋಕರ್ಣಕ್ಕೆ ಸೇರುತ್ತಿದ್ದಂತೆ ಸಂಧ್ಯಾವಂದನ ಮಾಡುವ ಸಮಯವಾಗಿರುತ್ತದೆ. ಇದರಿಂದಾಗಿ ಅಲ್ಲಿನ ಪಶುಗಳನ್ನು ಮೇಯಿಸುತ್ತಿರುವ ಒಬ್ಬ ಬಾಲಕನ ಕೈಗೆ ಕೆಲವು ಬಂಗಾರದ ನಾಣ್ಯವನ್ನು ನೀಡಿ ಆತ್ಮಲಿಂಗವನ್ನು ಆ ಬಾಲಕನ ನೆತ್ತಿಯ ಮೇಲೆ ಇಡುತ್ತಾನೆ. ತಾನು ಹಿಂದಿರುಗಿ ಬರುವವರೆವಿಗೂ ಈ ಆತ್ಮಲಿಂಗವನ್ನು ಭೂಮಿಯ ಮೇಲೆ ಯಾವುದೇ ಕಾರಣಕ್ಕೂ ಇಡಬಾರದು ಎಂದು ಹೇಳುತ್ತಾನೆ.

4.ವಿಫಲ

4.ವಿಫಲ

PC:YOUTUBE

ಆದರೆ ರಾವಣನು ಸ್ವಲ್ಪ ದೂರ ಹೋಗುತ್ತಿದ್ದಂತೆ ಆ ಬಾಲಕನ ವೇಶದಲ್ಲಿದ್ದ ಗೋಪಾಲ ಬಾಲಕನು ಶಿವಲಿಂಗವನ್ನು ಭೂಮಿಯ ಮೇಲೆ ಇಟ್ಟುಬಿಡುತ್ತಾನೆ. ಇದರಿಂದಾಗಿ ರಾವಣನು ಆ ಆತ್ಮಲಿಂಗವನ್ನು ಭೂಮಿಯಿಂದ ತೆಗೆಯಲು ತೀವ್ರವಾದ ಪ್ರಯತ್ನವನ್ನು ಮಾಡಿ ವಿಫಲನಾಗುತ್ತಾನೆ. ಇದರಿಂದಾಗಿ ಕೋಪಗೊಂಡ ರಾವಣನು ಆ ಶಿವಲಿಂಗದ ಮೇಲೆ ಗಟ್ಟಿಯಾಗಿ ಹಿಂಡುತ್ತಾನೆ.

5. ಗೋಳಾಕಾರವಾಗಿ ಮಾರ್ಪಾಟಾಗಿದೆ

5. ಗೋಳಾಕಾರವಾಗಿ ಮಾರ್ಪಾಟಾಗಿದೆ

PC:YOUTUBE

ಇದರಿಂದಾಗಿ ಆ ಶಿವಲಿಂಗ ಭೂಮಿಯ ಒಳಗೆ ಹೋಗಿಬಿಡುತ್ತದೆ. ಅಷ್ಟೇ ಅಲ್ಲದೇ ಆ ಶಿವಲಿಂಗದ ಮೇಲಿನ ಭಾಗದಲ್ಲಿ ಗೋಳಾಕಾರವಾಗಿ ಮಾರ್ಪಾಟಾಗಿದೆ. ಅದ್ದರಿಂದಲೇ ಈ ಪ್ರದೇಶಕ್ಕೆ ಗೋಲ ಗೋಕರ್ಣ ಎಂಬ ಹೆಸರಿನಿಂದ ಕರೆಯುತ್ತಾರೆ. ಚೈತ್ರ ಮಾಸದಲ್ಲಿ ಮಹಾಶಿವನಿಗೆ ಒಂದು ತಿಂಗಳ ಕಾಲ ವಿಶೇಷವಾದ ಕಾರ್ಯಕ್ರಮಗಳು ನಿರ್ವಹಿಸುತ್ತಾರೆ. ಈ ಸಮಯದಲ್ಲಿ ಉತ್ತರ ಭಾರತ ದೇಶದಲ್ಲಿನ ಅನೇಕ ಪ್ರದೇಶಗಳಿಂದ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

6.ಕಪ್ಪೆ ದೇವಾಲಯ

6.ಕಪ್ಪೆ ದೇವಾಲಯ

PC:YOUTUBE

ಈ ಗೋಲ ಗೋಕರ್ಣಕ್ಕೆ ಸುಮಾರು 35 ಕಿ.ಮೀ ದೂರದಲ್ಲಿ ಒಂದು ವಿಭಿನ್ನವಾದ ದೇವಾಲಯವಿದೆ. ಅದೇ ಕಪ್ಪೆ ಆಕಾರದಲ್ಲಿರುವ ದೇವಾಲಯ. ಇಲ್ಲಿ ತಾಂತ್ರಿಕವಾದ ಪೂಜೆಗಳನ್ನು ನಿರ್ವಹಿಸುತ್ತಾರೆ ಎಂದು ಹೇಳುತ್ತಾರೆ. ಈ ದೇವಾಲಯವು ಅತ್ಯಂತ ಪುರಾತನವಾದುದು. ಅಂದರೆ ಸರಿಸುಮಾರು ಕ್ರಿ.ಶ 1860-1870 ಮಧ್ಯದಲ್ಲಿ ಒಯೋಲ್ ರಾಜ ನಿರ್ಮಾಣ ಮಾಡಿದನು ಎಂದು ಹೇಳುತ್ತಾರೆ.

7.ಶಿವಲಿಂಗ

7.ಶಿವಲಿಂಗ

PC:YOUTUBE

ಈ ದೇವಾಲಯದಲ್ಲಿ ಪ್ರಧಾನವಾದ ದೈವವಾಗಿ ಮಹಾಶಿವನು ನೆಲೆಸಿದ್ದಾನೆ. ಈ ದೇವಾಲಯ ಅಷ್ಟದಳ ತಾವರೆ ಆಕಾರದಲ್ಲಿ ನಿರ್ಮಾಣ ಮಾಡಿದ್ದಾರೆ. ವಾರಾಣಾಸಿಯಿಂದ ತೆಗೆದುಕೊಂಡು ಬಂದು ಶಿವಲಿಂಗವನ್ನು ಈ ದೇವಾಲಯದಲ್ಲಿ ಪ್ರತಿಷ್ಟಾಪಿಸಿ ಪೂಜಿಸಿದ್ದಾರೆ. ದೇವಾಲಯದ ಪ್ರಧಾನವಾದ ದ್ವಾರವು ಪೂರ್ವಕ್ಕೆ ಮುಖ ಮಾಡಿದೆ. ಮತ್ತೊಂದು ದ್ವಾರವು ದಕ್ಷಿಣ ದಿಕ್ಕಿಗೆ ಇದೆ.

8.ಪ್ರವಾಸಿ ತಾಣಗಳು

8.ಪ್ರವಾಸಿ ತಾಣಗಳು

PC:YOUTUBE

ಇನ್ನು ಇದಕ್ಕೆ ಸಮೀಪದಲ್ಲಿ ದೇವಕಾಳಿ ದೇವಾಲಯವು ಕೂಡ ಇದೆ. ದೇವಕಾಳಿ ಬ್ರಹ್ಮದೇವನ ಕುಮಾರಿ. ಆಕೆಯು ಇಲ್ಲಿಯೇ ತಪ್ಪಸ್ಸು ಮಾಡಿದ್ದರಿಂದ ಈ ದೇವಾಲಯಕ್ಕೆ ದೇವಕಾಶಿ ದೇವಾಲಯ ಎಂಬ ಹೆಸರು ಬಂದಿತು. ಇನ್ನು ಇಲ್ಲಿಯೇ ಪರಿಕ್ಷೀತ್ ಮಹಾರಾಜನ ಕುಮಾರ ಜನಮೇಜಯನು ಸರ್ಪಯಾಗವನ್ನು ಮಾಡಿದನು ಎಂದು ಕೂಡ ಹೇಳುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more