Search
  • Follow NativePlanet
Share
» »ಗೋವಾ ಬೀಚ್‌ನಲ್ಲಿ ಗುಂಡು ತುಂಡು ಪಾರ್ಟಿ ಮಾಡೋಕೆ ಬರೀ 25 ದಿನ ಮಾತ್ರ ಬಾಕಿ

ಗೋವಾ ಬೀಚ್‌ನಲ್ಲಿ ಗುಂಡು ತುಂಡು ಪಾರ್ಟಿ ಮಾಡೋಕೆ ಬರೀ 25 ದಿನ ಮಾತ್ರ ಬಾಕಿ

ರಜಾ ಸಿಕ್ಕಿದ್ರೆ ಸಾಕು ಗೋವಾಕ್ಕೆ ಹೋಗೋಣ ಎಂದು ಹೆಚ್ಚಿನವರು ತುದಿಗಾಲಲ್ಲಿ ನಿಲ್ಲುತ್ತಾರೆ. ಆದ್ರೆ ಗೋವಾವನ್ನೇ ಯಾಕೆ ಆಯ್ಕೆ ಮಾಡುತ್ತಾರೆ ಅನ್ನೋದು ನಿಮಗೇನಾದರೂ ಗೊತ್ತಾ? ಗೋವಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಹೊಂದಿರುವ ಅದ್ಭುತ ತಾಣವಾಗಿದೆ. ಇಲ್ಲಿ ಮೋಜಿ ಮಸ್ತಿಗೇನೂ ಕಮ್ಮಿ ಇಲ್ಲ. ಯುವಕರಿಗಂತೂ ಇದು ಅಚ್ಚುಮೆಚ್ಚಿನ ತಾಣವಾಗಿದೆ. ಬಿಕಿನಿ ಬಾಲೆಯರು ಕಾಣಬಹುದು. ಹಾಗೆಯೇ ಡ್ರಿಂಕ್ಸ್‌ಗಳನ್ನು ಬಿಂದಾಸ್‌ ಆಗಿ ಕುಡಿಯಬಹುದು.

15ರ ನಂತರ ಬೀಚ್‌ನಲ್ಲಿ ಡ್ರಿಂಕ್ಸ್ ಬ್ಯಾನ್

15ರ ನಂತರ ಬೀಚ್‌ನಲ್ಲಿ ಡ್ರಿಂಕ್ಸ್ ಬ್ಯಾನ್

ಇದೀಗ ಆಗಸ್ಟ್‌ 15 ರ ನಂತರ ಗೋವಾಕ್ಕೆ ಹೋಗಬೇಕು ಎಂದು ಪ್ಲ್ಯಾನ್ ಮಾಡುವವರಿಗೆ ಒಂದು ಬ್ಯಾಡ್ ನ್ಯೂಸ್ ಇದೆ. ಅದೇನೆಂದರೆ ಈ ವರೆಗೆ ನೀವೂ ಗೋವಾದ ಬೀಚ್‌ನಲ್ಲಿ ಪಾರ್ಟಿ ಮಾಡಿರುವಿರಿ, ಕುಡಿದಿರುವಿರಿ. ಆದ್ರೆ ಸ್ವಾತಂತ್ರ್ಯ ದಿನಾಚರಣೆಯ ನಂತರ ಗೋವಾದ ಬೀಚ್‌ನಲ್ಲಿ ಡ್ರಿಂಕ್ ಮಾಡುವಂತಿಲ್ಲ.

ಸಾವಿನ ಕೊನೆಘಳಿಗೆಯಲ್ಲಿರುವವರಿಗಾಗಿ ಮುಕ್ತಿ ಭವನ; ಇದರೊಳಗಿದೆ ಕರುಣಾಜನಕ ಕಥೆಸಾವಿನ ಕೊನೆಘಳಿಗೆಯಲ್ಲಿರುವವರಿಗಾಗಿ ಮುಕ್ತಿ ಭವನ; ಇದರೊಳಗಿದೆ ಕರುಣಾಜನಕ ಕಥೆ

ದಂಡ ಕಟ್ಟಬೇಕು

ದಂಡ ಕಟ್ಟಬೇಕು

ಈ ಸಂದೇಶವನ್ನು ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ಆಗಸ್ಟ್ 15 ರಿಂದ ಗೋವಾದ ಬೀಚ್‌ಗಳಲ್ಲಿ ಡ್ರಿಂಕ್ಸ್‌ನ್ನು ನಿಷೇಧಿಸಲಾಗುವುದು. ಒಂದು ವೇಳೆ ಈ ಕಾಯಿದೆಯನ್ನು ಯಾರಾದರೂ ಪಾಲಿಸದೇ ಇದ್ದಲ್ಲಿ ಅವರ ಮೇಲೆ ದಂಡ ಹೇರಲಾಗುವುದು. ಶುಲ್ಕದ ಮೊತ್ತವನ್ನು ಇನ್ನೂ ನಿಗಧೀಕರಿಸಲಾಗಿಲ್ಲ.

ಪ್ಲಾಸ್ಟಿಕ್ ಕೂಡಾ ಬ್ಯಾನ್

ಪ್ಲಾಸ್ಟಿಕ್ ಕೂಡಾ ಬ್ಯಾನ್

ಈ ಸುದ್ದಿಯು ಬಾರ್ ಮಾಲೀಕರಿಗೆ ಆಘಾತಕ್ಕೀಡಾಗಿಸಿದೆ. ಅವರ ಬ್ಯುಸ್‌ನೆಸ್‌ಗೂ ಧಕ್ಕೆ ಉಂಟಾಗಲಿದೆ. ಬಾಟಲಿ ಹಿಡಿದುಕೊಂಡು ಬೀಚ್‌ನಲ್ಲಿ ಪಾರ್ಟಿ ಮಾಡಬೇಕೆನ್ನುವ ಯುವಕರ ಕನಸಿಗೂ ತಣ್ಣೀರೆರಚಿದಂತಾಗುತ್ತದೆ. ಅಷ್ಟೇ ಅಲ್ಲದೆ ಗೋವಾ ಸಿಟಿಯಲ್ಲಾಗಲೀ ಅಥವಾ ಬೀಚ್‌ನಲ್ಲಿ ಪ್ಲಾಸ್ಟಿಕ್ ಬ್ಯಾಗ್‌ನ್ನೂ ಬಳಸುವಂತಿಲ್ಲ. ಒಂದು ವೇಳೆ ಪ್ಲಾಸ್ಟಿಕ್ ಬ್ಯಾಗ್ ಬಳಸಿದ್ದು ಕಂಡುಬಂದಲ್ಲಿ 100೦ರೂ.ಯಿಂದ 2500 ರೂ.ವರೆಗೆ ದಂಡ ವಿಧಿಸಲಾಗುವುದು.

ವಿಶ್ವದ ಮೊದಲ ಮನುಷ್ಯನನ್ನು ದೇವರು ಸೃಷ್ಠಿಸಿದ್ದು ಎಲ್ಲಿ ಗೊತ್ತಾ?ವಿಶ್ವದ ಮೊದಲ ಮನುಷ್ಯನನ್ನು ದೇವರು ಸೃಷ್ಠಿಸಿದ್ದು ಎಲ್ಲಿ ಗೊತ್ತಾ?

ಈವಾಗಲೇ ಹೋಗಿ ಬನ್ನಿ

ಈವಾಗಲೇ ಹೋಗಿ ಬನ್ನಿ

ನಿಮ್ಮಲ್ಲಿ ಯಾರಾದರೂ ಗೋವಾಕ್ಕೆ ಹೋಗುವ ಪ್ಲ್ಯಾನ್ ಹಾಕಿದ್ರೆ ಈ ತಿಂಗಳಲ್ಲೇ ಹೋಗಿ ಬನ್ನಿ. ಪಾರ್ಟಿ ಮಾಡೋದಾದ್ರೆ ಈವಾಗ್ಲೇ ಮಾಡಿ. ಇಲ್ಲಾ ಮುಂದಿನ ತಿಂಗಳಲ್ಲಿ ಹೋಗೋಣ ಎಂದು ಕಾದ್ರೆ ನಿಮಗೆ ಬೀಚ್‌ನಲ್ಲಿ ಡ್ರಿಂಕ್ಸ್ ಪಾರ್ಟಿಯ ಮಜಾವನ್ನು ಪಡೆಯಲು ಅಂತೂ ಖಂಡಿತಾ ಸಾಧ್ಯವಿಲ್ಲ.

ಅತ್ಯಂತ ಸಣ್ಣ ರಾಜ್ಯ

ಅತ್ಯಂತ ಸಣ್ಣ ರಾಜ್ಯ

ಗೋವ - ಭಾರತದ ರಾಜ್ಯಗಳಲ್ಲೊಂದು. ವಿಸ್ತೀರ್ಣದಲ್ಲಿ ಇದು ಭಾರತದ ಅತ್ಯಂತ ಸಣ್ಣ ರಾಜ್ಯ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಇದು ಉತ್ತರದ ಮಹಾರಾಷ್ಟ್ರಲ್ಲಿ , ಪೂರ್ವ ಮತ್ತು ದಕ್ಷಿಣದಲ್ಲಿ ಕರ್ನಾಟಕ ಹಾಗೂ ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ. ಪ್ರಪಂಚದಲ್ಲೇ ಅತ್ಯಂತ ಸುಂದರವಾದ ಕೆಲವು ಬೀಚುಗಳು ಗೋವದಲ್ಲಿವೆ. ಕಲಾಂಗೂಟೆ, ಕೋಲ್ವ, ದೋನಾ ಪಾಲಾ, ಸಿರಿದಾವೊ, ವಾಗತೋರ, ಮಾಂದ್ರೇ ಮತ್ತು ಮೋರ್ಜಿ ಬೀಚುಗಳಿಗೆ ಪ್ರವಾಸಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X