Search
  • Follow NativePlanet
Share
» »ಈ ಮುಂಗಾರಿನಲ್ಲಿ ಸಕಲೇಶಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ?

ಈ ಮುಂಗಾರಿನಲ್ಲಿ ಸಕಲೇಶಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ?

ಮುಂಗಾರು ಆರಂಭವಾಗುವಾಗಲೇ ಸಕಲೇಶ್‌ಪುರಕ್ಕೆ ಹೋಗಬೇಕು. ಅಲ್ಲಿನ ಹಚ್ಚ ಹಸಿರಿನ ವಾತಾವರಣ ನಿಮ್ಮನ್ನು ಮಂತ್ರ ಮುಗ್ಧಗೊಳಿಸೋದರಲ್ಲಿ ಎರಡು ಮಾತಿಲ್ಲ. ಈ ಸೀಸನ್‌ನಲ್ಲಿ ಸಕಲೇಶ್‌ಪುರಕ್ಕೆ ಹೋಗಿ ಚಾರಣ ಕೈಗೊಂಡರೆ ಅಥವಾ ಪಿಕ್‌ನಿಕ್‌ ಪ್ಲ್ಯಾನ್ ಮಾಡಿದ್ರೆ ಎಷ್ಟೊಂದು ಚೆನ್ನಾಗಿರುತ್ತೆ ಅಲ್ವಾ..? ಕಾಫಿ ತೋಟದ ನಡುವೆ, ಚುಮ್ಮು ಚುಮ್ಮು ಚಳಿ, ಮಂಜಿನ ವಾತಾವರಣ, ಹನಿ ಹನಿ ಸುರಿಯುವ ಮಳೆ ಇದೆಲ್ಲದರ ಜೊತೆಗೆ ನಿಮ್ಮ ಜೊತೆ ನಿಮ್ಮ ಸಂಗಾತಿ ಇದ್ದರೆ ಆ ಅನುಭವವನ್ನು ಬಣ್ಣಿಸಲಸಾಧ್ಯ.

ಮಲೆನಾಡು

ಮಲೆನಾಡು

PC: Ravi Mundkur

ಸಕಲೇಶಪುರವು ಕರ್ನಾಟಕದ ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣ ಮತ್ತು ಸಕಲೇಶಪುರವು ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದೆ. ಪಟ್ಟಣವು ಜೀವವೈವಿಧ್ಯತೆಯ ಕೇಂದ್ರವೂ ಆಗಿದೆ. ಪಶ್ಚಿಮ ಘಟ್ಟಗಳ ತಪ್ಪಲಲ್ಲಿದ್ದು ಮಲೆನಾಡ ಪ್ರದೇಶದಲ್ಲಿದೆ. ಇದು ಸಮುದ್ರಮಟ್ಟದಿಂದ 949 ಮೀಟರ್ (3113 ಅಡಿ)ಎತ್ತರವಿದೆ. ಹೇಮಾವತಿ ನದಿಯು ಸಕಲೇಶಪುರ ಪಟ್ಟಣದಲ್ಲಿ ಹರಿಯುತ್ತದೆ .

ವಾತಾವರಣ ಹೇಗಿದೆ?

ವಾತಾವರಣ ಹೇಗಿದೆ?

PC: Ashwin Kumar

ಜೂನ್ ತಿಂಗಳಿನಿಂದ ಆರಂಭವಾಗುವ ಮುಂಗಾರು ಮಳೆಯೂ ಸೆಪ್ಟಂಬರ್ ವರೆಗೂ ಬಿಡುವಿಲ್ಲದೆ ಸುರಿಯುತ್ತದೆ. ಈ ಸಮಯದಲ್ಲಿ ಪ್ರಕೃತಿಯು ಹಸಿರಿನಿಂದ ಕಂಗೊಳಿಸುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ವರೆಗೂ ಚಳಿಗಾಲದ ವಾತವರಣವಿರುತ್ತದೆ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಹೆಚ್ಚು ಚಳಿ ಇರುತ್ತದೆ.

ಕಾಫಿಯ ನಾಡು

ಕಾಫಿಯ ನಾಡು

PC: youtube

ಸಕಲೇಶಪುರವು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಇಲ್ಲಿ ಪ್ರಮುಖವಾಗಿ ಕಾಫಿ, ಅಕ್ಕಿ, ಮೆಣಸು, ಏಲಕ್ಕಿ, ಶುಂಠಿ ಮತ್ತು ಚಹಾವನ್ನು ಬೆಳೆಯಲಾಗುತ್ತದೆ. ಇಲ್ಲಿ ಕಾಫೀ ತೋಟಗಳು ಹೆಚ್ಚಿನ ಪ್ರಮಾಣದಲ್ಲಿ ಇದೆ. ಈ ಪ್ರದೇಶವನ್ನು ಕಾಫೀಯ ನಾಡು ಎಂದೇ ಕರೆಯಲಾಗುತ್ತಿದೆ.

12 ವರ್ಷಕ್ಕೊಮ್ಮೆ ಅರಳುವ ಹೂವು ; ನೀಲಗಿರಿ ಬೆಟ್ಟಕ್ಕೆ ಈ ಹೆಸರು ಬರಲು ಕಾರಣವೇನು?12 ವರ್ಷಕ್ಕೊಮ್ಮೆ ಅರಳುವ ಹೂವು ; ನೀಲಗಿರಿ ಬೆಟ್ಟಕ್ಕೆ ಈ ಹೆಸರು ಬರಲು ಕಾರಣವೇನು?

ಚಾರಣಕ್ಕೆ ಬೆಸ್ಟ್

ಚಾರಣಕ್ಕೆ ಬೆಸ್ಟ್

PC:Ravi Mundkur

ಬಿಸಿಲೆ ಅರಣ್ಯವ್ಯಾಪ್ತಿಯ ಎಡಕುಮರಿ, ದೋಣಿಗಾಲ್ ಮತ್ತು ಕೆಂಪುಹೊಳೆ ಪ್ರದೇಶಗಳು ಚಾರಣಕ್ಕೆ ಯೋಗ್ಯವಾಗಿದೆ. ಬಹಳಷ್ಟು ಚಾರಣಿಗರು ಇಷ್ಟಪಡುವ ಸ್ಥಳ ಇದಾಗಿದೆ. ಬಿಸಿಲೆ ಮಾರ್ಗವಾಗಿ ಚಾರಣಕ್ಕೆ ಹೊರಟರೆ ಕುಮಾರಪರ್ವತ ದಲ್ಲಿ ಚಾರಣವನ್ನು ಕೊನೆಗೊಳಿಸಬಹುದು ಆಳವಾದ ಕಣಿವೆಗಳು, ರಭಸವಾಗಿ ಹರಿಯುವ ನದಿಗಳು ಚಾರಣಕ್ಕೆ ಸೂಕ್ತವಾಗಿದೆ.

ಇತರ ಪ್ರೇಕ್ಷಣೀಯ ಸ್ಥಳಗಳು

ಇತರ ಪ್ರೇಕ್ಷಣೀಯ ಸ್ಥಳಗಳು

PC: Dhanalakshmi .K. T

ಹಾಸನಾಂಬ ದೇವಾಲಯವು ಇಲ್ಲಿನ ಪ್ರಾದೇಶಿಕ ಸಂಸ್ಕೃತಿಯನ್ನು ಶ್ರೀಮಂತವಾಗಿ ಪ್ರತಿನಿಧಿಸುವುದರಿಂದಾಗಿಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಬೇಲೂರು, ಹಳೇಬೀಡು, ಶ್ರವಣ ಬೆಳಗೊಳ ಮತ್ತು ಗೊರೂರು ಜಲಾಶಯಗಳು ಪ್ರಮುಖ ಪ್ರವಾಸಿ ತಾಣಗಳಾಗಿವೆ.

ಸೇಬಿನ ತೋಟ ನೋಡ್ಬೇಕಾದ್ರೆ ಇಲ್ಲಿಗೆ ಹೋಗಿಸೇಬಿನ ತೋಟ ನೋಡ್ಬೇಕಾದ್ರೆ ಇಲ್ಲಿಗೆ ಹೋಗಿ

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Shameersh

ವಿಮಾನ: ಹತ್ತಿರದ ವಿಮಾನ ನಿಲ್ದಾಣ ಮಂಗಳೂರಿನ ಬಜ್ಪೆಯ ವಿಮಾನ ನಿಲ್ದಾಣ. ಅಲ್ಲಿಂದ ಬಸ್ ಮೂಲಕ ಸಕಲೇಶ್‌ಪುರಕ್ಕೆ ಹೋಗಬೇಕು.
ಬಸ್ಸು : ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಸಕಲೇಶ್‌ಪುರಕ್ಕೆ ಹೋಗುತ್ತವೆ.
ರೈಲು : ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಎಲ್ಲಾ ರೈಲುಗಳಿಗೆ ಹೋಗುತ್ತವೆ.ಹಾಗಾಗಿ ನೀವು ಈ ಮೂರು ಮಾರ್ಗಗಳ ಮೂಲಕ ಸಕಲೇಶ್‌ಪುರ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X