Search
  • Follow NativePlanet
Share
» »ಗಾಯತ್ರಿ ತಪೋಭೂಮಿಯಲ್ಲಿ ಕುಳಿತು ಗಾಯತ್ರಿ ಮಂತ್ರವನ್ನೊಮ್ಮೆ ಜಪಿಸಿದ್ರೆ....

ಗಾಯತ್ರಿ ತಪೋಭೂಮಿಯಲ್ಲಿ ಕುಳಿತು ಗಾಯತ್ರಿ ಮಂತ್ರವನ್ನೊಮ್ಮೆ ಜಪಿಸಿದ್ರೆ....

ಓಂ ಭೂರ್ಭುವಃ ಸ್ವಃ | ತತ್ಸವಿತುರ್ವರೇಣ್ಯಂ | ಭರ್ಗೋ
ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ||

ಈ ಮಂತ್ರವನ್ನು ಪ್ರತಿಯೊಬ್ಬರೂ ಕೇಳಿಯೇ ಇರುತ್ತೀರಿ. ಎಲ್ಲಾ ವೇದಗಳಿಗೂ ಮೂಲ ಗಾಯತ್ರಿ ಮಂತ್ರ ಎನ್ನಲಾಗುತ್ತದೆ. ಇದನ್ನು ಪಠಿಸಿದರೆ ದುಷ್ಟ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ. ಅಂತಹ ಗಾಯತ್ರಿ ದೇವಾಲಯವೊಂದು ಕರ್ನಾಟಕದಲ್ಲಿದೆ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

ಗಾಯತ್ರಿ ತಪೋಭೂಮಿಯು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸ ಗ್ರಾಮದಲ್ಲಿ. ಹಾವೇರಿಯಿಂದ ೫೦ ಕಿ.ಮೀ ದೂರದಲ್ಲಿದೆ. ಶ್ವೇತವರ್ಣದ ಈ ದೇವಾಲಯ ಸುಂದರವಾಗಿದೆ. ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

ಹೆಳವನಕಟ್ಟೆ ರಂಗನಾಥನ ದರ್ಶನ ಪಡೆದಿದ್ದೀರಾ?ಹೆಳವನಕಟ್ಟೆ ರಂಗನಾಥನ ದರ್ಶನ ಪಡೆದಿದ್ದೀರಾ?

ಗಾಯತ್ರಿ ಮಂತ್ರ

ಗಾಯತ್ರಿ ಮಂತ್ರ

ಇದು ದಕ್ಷಿಣ ಭಾರತದ ಏಕೈಕ ಗಾಯತ್ರಿ ಮಂದಿರ ಇದಾಗಿದೆ. ಇಷ್ಟಾರ್ಥವನ್ನು ಈಡೇರಿಸುವ ಪುಣ್ಯಕ್ಷೇತ್ರ. ಓಂ ಭೂರ್ಭುವಃ ಸ್ವಃ | ತತ್ಸವಿತುರ್ವರೇಣ್ಯಂ | ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || ಮನಸ್ಸಿನಲ್ಲಿ ಚೈತನ್ಯ ಮೂಡಿಸಲು ಈ ಮಂತ್ರವನ್ನು ಪಠಿಸಲಾಗುತ್ತದೆ.

ಪೌರಾಣಿಕ ಕಥೆ

ಪೌರಾಣಿಕ ಕಥೆ

ತಪೋಭೂಮಿಯಲ್ಲಿ ಅಗಾಧವಾದ ಶಕ್ತಿ ಬಂದಿರುವುದಕ್ಕೆ ಐತಿಹ್ಯವಿದೆ. ರಾಕ್ಷಸ ಅರುಣಾಸುರನು ತನಗೆ ದೇವತೆಗಳಿಂದ, ಮನುಷ್ಯರಿಂದ, ಸ್ತ್ರೀಯರಿಂದ, ಪ್ರಾಣಿಗಳಿಂದ ಸಾವು ಬಾರದಂತಹ ವರ ಪಡೆಯುತ್ತಾನೆ. ಸರಸ್ವತಿ ದೇವಿಯು

ಅರುಣಾಸುರನಿಗೆ ಗಾಯತ್ರಿಮಂತ್ರವನ್ನು ಹೇಳಿಕೊಡುತ್ತಾಳೆ. ಈ ಮೂಲಕ ಯಾರಿಂದಲೂ ಸಾವು ಬರುವುದಿಲ್ಲ ಎನ್ನುವ ವರ ನೀಡುತ್ತಾಳೆ. ಅಸುರ ಈ ಮಂತ್ರವನ್ನು ಬಳಸಿ ಅನ್ಯಾಯ ಮಾಡುತ್ತಿದ್ದ. ಒಮ್ಮೆ ಅರುಣಾಸುರ ಮಂತ್ರ ನಿಲ್ಲಿಸಿದರಿಂದ ಆತನ ವಧೆಯಾಯಿತು ಎನ್ನಲಾಗುತ್ತದೆ.

ಅಂಬೋಲಿ ಜಲಪಾತ ; ಇಲ್ಲಿನ ನೀರಿನ ಸದ್ದು ಕೇಳಿದ್ರೆ ಬೆರಗಾಗ್ತೀರಾ ! ಅಂಬೋಲಿ ಜಲಪಾತ ; ಇಲ್ಲಿನ ನೀರಿನ ಸದ್ದು ಕೇಳಿದ್ರೆ ಬೆರಗಾಗ್ತೀರಾ !

ಇಷ್ಟಾರ್ಥವನ್ನು ಈಡೇರುತ್ತದೆ

ಇಷ್ಟಾರ್ಥವನ್ನು ಈಡೇರುತ್ತದೆ

ಈ ಮಂತ್ರಕ್ಕಿದೆ ಅಪಾರ ಶಕ್ತಿ ಉದ್ಯೋಗ ದೊರೆಯಲು, ಮಾಟಮಂತ್ರದಿಂದ ಮುಕ್ತಿ ಪಡೆಯಲು, ಆಯಸ್ಸು ವೃದ್ಧಿ, ದುಷ್ಟಶಕ್ತಿಯಿಂದ ಮುಕ್ತಿ ಪಡೆಯಲು ಈ ಮಂತ್ರ ಸಹಕಾರಿಯಾಗಿದೆ ಎನ್ನಲಾಗುತ್ತದೆ. ಕುಂಕುಮಾರ್ಚನೆ, ರುದ್ರಾಭಿಷೇಕ, ಹೋಮಗಳನ್ನು ನಡೆಸಲಾಗುತ್ತದೆ.

ಗಾಯತ್ರಿ ಮಂತ್ರದ ಲಾಭಗಳು

ಗಾಯತ್ರಿ ಮಂತ್ರದ ಲಾಭಗಳು

ಶತ್ರಗಳನ್ನು ನಾಶಮಾಡಲು, ಒತ್ತಡವನ್ನು ಕಡಿಮೆ ಮಾಡಲು, ಆಕ್ರಮಣದಿಂದ ರಕ್ಷಣೆ ಪಡೆಯಲು, ಸಬಲತೆಗಾಗಿ, ಧರ್ಮ ಪಾಲನೆ, ವಿನಯ, ಗೌರವ ಪಡೆಯಲು, ಸುಖ ದಾಂಪತ್ಯ, ಶಾಂತಿ, ಯಶಸ್ಸು, ಆರೋಗ್ಯ, ಐಶ್ವರ್ಯ ಹೀಗೆ ಬೇರೆ ಬೇರೆ ಶಕ್ತಿ, ರಕ್ಷಣೆ ಮಡೆಯಲು ಬೇರೆ ಬೇರೆ ದೇವತೆಗಳ ಗಾಯತ್ರಿ ಮಂತ್ರ ಜಪಿಸಬೇಕು.

ಮನುಷ್ಯನನ್ನು ಜೀವಂತ ಸಮಾಧಿ ಮಾಡಿ ನಿರ್ಮಿಸಲಾದ ಕೋಟೆ ಇದು ! ಮನುಷ್ಯನನ್ನು ಜೀವಂತ ಸಮಾಧಿ ಮಾಡಿ ನಿರ್ಮಿಸಲಾದ ಕೋಟೆ ಇದು !

ಸರ್ವಶ್ರೇಷ್ಠ ಮಂತ್ರ

ಸರ್ವಶ್ರೇಷ್ಠ ಮಂತ್ರ

ಗಾಯತ್ರಿ ಮಂತ್ರ ಬಹಳ ಚಮತ್ಕಾರಿ ಹಾಗೂ ಶಕ್ತಿಶಾಲಿಯಾಗಿದೆ. ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಹಾಗೂ ಶಾರೀರಿಕ ಶಕ್ತಿಗಾಗಿ ಗಾಯತ್ರಿ ಮಂತ್ರ ಸರ್ವಶ್ರೇಷ್ಠವೆಂದು ನಂಬಲಾಗಿದೆ.

ಉಳಿಯಲು ವ್ಯವಸ್ಥೆ

ಉಳಿಯಲು ವ್ಯವಸ್ಥೆ

ಇಲ್ಲಿ ಗಣಪತಿ, ಸ್ಕಂದ, ಅನ್ನಪೂರ್ಣೇಯ ವಿಗ್ರಹವೂ ಇದೆ. ಪ್ರತಿದಿನ ಮೂರು ಹೊತ್ತು ಪೂಜೆ ನಡೆಯುತ್ತದೆ. ಭಕ್ತರಿಗೆ ಗಾಯತ್ರಿ ಮಂತ್ರದ ಮಹತ್ವ ತಿಳಿಸಲಾಗುತ್ತದೆ. ಭಕ್ತರಿಗೆ ಉಚಿತ ಅನ್ನದಾನವಿದೆ. ಉಳಿಯಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.

ನಾಡಕಲಸಿಯಲ್ಲಿನ ಜಿರಳೆ ಕಲ್ಲು ಕಂಬದ ಪವಾಡ ಅಂತಿಂಥದ್ದಲ್ಲ! ನಾಡಕಲಸಿಯಲ್ಲಿನ ಜಿರಳೆ ಕಲ್ಲು ಕಂಬದ ಪವಾಡ ಅಂತಿಂಥದ್ದಲ್ಲ!

ತಲುಪುವುದು ಹೇಗೆ?

ತಲುಪುವುದು ಹೇಗೆ?

ಹಾವೇರಿಗೆ ಹೋಗಲು ಸಾಕಷ್ಟು ಬಸ್‌ ವ್ಯವಸ್ಥೆಗಳು ಇವೆ. ಬೆಂಗಳೂರಿನಿಂದ ಹಾವೇರಿ ಸರ್ಕಾರಿ ಹಾಗೂ ಖಾಸಗಿ ಬಸ್‌ ಸೌಲಭ್ಯಗಳಿವೆ. ಬೆಂಗಳೂರಿನಿಂದ ೩೩೪ ಕಿ.ಮೀ ದೂರದಲ್ಲಿದೆ.

ನೀವು ವಿಮಾನದ ಮೂಲಕ ಹೋಗುವುದಾದರೆ ಬೆಳಗಾವಿ ವಿಮಾನ ನಿಲ್ದಾಣವನ್ನು ತಲುಪಿ ಅಲ್ಲಿಂದ ಬಸ್‌ ಅಥವಾ ಟ್ಯಾಕ್ಸಿ ಹಿಡಿಯಿರಿ. ಇನ್ನು ಹಾವೇರಿಗೆ ಸುಮಾರು ೧೪ ಡೈರೆಕ್ಟ್‌ ರೈಲುಗಳಿವೆ. ರೈಲಿನಲ್ಲಿ ೩೮೮ ಕಿ.ಮೀ ಆಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X