• Follow NativePlanet
Share
Menu
» »ನಿಮಿಷಕ್ಕೆ ಒಮ್ಮೆ ಭಾರ ಹೆಚ್ಚಾಗುವ ಮೂರ್ತಿ ಇವನು....

ನಿಮಿಷಕ್ಕೆ ಒಮ್ಮೆ ಭಾರ ಹೆಚ್ಚಾಗುವ ಮೂರ್ತಿ ಇವನು....

Written By:

ಶ್ರೀ ಮಹಾ ವಿಷ್ಣುವಿನ ವಾಹನವಾದ ಗರುಡ ದೇವನು ತಮಿಳುನಾಡಿನ ನಾಚಿಯಾರ್ ಕೋವೆಲ್ ಎಂಬ ಸ್ಥಳದಲ್ಲಿ ಅದೃಶ್ಯ ರೂಪದಲ್ಲಿ ಸಂಚಾರ ಮಾಡುತ್ತಿದ್ದಾನೆ ಎಂದು ಕೆಲವು ಯೋಗಿಗಳು ಹೇಳುತ್ತಿದ್ದಾರೆ. 108 ಶ್ರೀ ವೈಷ್ಣವ ದೇವಾಲಯಗಳಲ್ಲಿ ಒಂದಾದ ತಿರುನಾಯಾರ್ ಎಂಬ ಕ್ಷೇತ್ರದಲ್ಲಿ ಗರುಡ ಸ್ವಾಮಿಗೆ ಸಂಬಂಧಿಸಿದ ಒಂದು ಅದ್ಭುತವಾದ ವಿಷಯ ನಡೆಯುತ್ತದೆ. ಆ ವಿಷಯ ಯಾವುದು? ಎಂಬುದನ್ನು ತಿಳಿಯಲು ಲೇಖನವನ್ನು ಓದಿ.....

ಎಲ್ಲಿದೆ?

ಎಲ್ಲಿದೆ?

ಈ ಮಾಹಿಮಾನ್ವಿತವಾದ ದೇವಾಲಯವು ತಮಿಳುನಾಡು ರಾಜ್ಯದ ಕುಂಭಕೋಣಂ ಎಂಬ ಪಟ್ಟಣಕ್ಕೆ ಸಮೀಪದಲ್ಲಿರುವ ತಿರುನಾಯಾರ್ ಎಂಬ ಕ್ಷೇತ್ರದಲ್ಲಿ ಉತ್ಸವ ಮೂರ್ತಿಯಾಗಿ ನೆಲೆಸಿದ್ದಾನೆ. ಈ ಸ್ವಾಮಿಯನ್ನು ಉತ್ಸವದ ಸಮಯದಲ್ಲಿ ಬೀದಿ-ಬೀದಿಯಲ್ಲಿ ಕರೆದುಕೊಂಡು ಹೋಗಿ ಆರಾಧನೆ ಮಾಡುತ್ತಾರೆ. ಆ ಸಮಯದಲ್ಲಿ ಗರುಡ ಸ್ವಾಮಿಯು ತನ್ನ ಭಾರವನ್ನು ಹೆಚ್ಚು ಮಾಡುತ್ತಾ ಹೋಗುತ್ತಾನೆ.

ಗರುಡವಾಹನ

ಗರುಡವಾಹನ

ಈ ಕ್ಷೇತ್ರದಲ್ಲಿ ನೆಲೆಸಿರುವ ಮಹಾವಿಷ್ಣುವಿಗೆ ವರ್ಷಕ್ಕೆ 2 ಬಾರಿ ಉತ್ಸವ ನಡೆಸುತ್ತಾರೆ. ಈ ಉತ್ಸವದಲ್ಲಿ ದೇವಿಯು ಹಂಸ ವಾಹನದಲ್ಲಿದ್ದರೆ, ವಿಷ್ಣು ಮೂರ್ತಿಯು ಗರುಡವಾಹನದ ಮೇಲೆ ದೇವಿಯ ಹಿಂದೆ ಹೋಗುತ್ತಿರುತ್ತಾರೆ. ಸ್ವಾಮಿ ಆ ಸಯಮದಲ್ಲಿ ಒಂದು ಕ್ಲಿಷ್ಟವಾದ ಪರಿಸ್ಥಿತಿಗೆ ಬೀಳುತ್ತಾರೆ. ಅದೆನೆಂದರೆ..

ಗರುಡವಾಹನ

ಗರುಡವಾಹನ

ಅದೆನೆಂದರೆ.. ಗರುಡವಾಹನದ ವೇಗ ಹಂಸವಾಹನಕ್ಕಿಂತ ಅಧಿಕವಾದುದು. ಹಾಗಾಗಿ ಗರುಡ ವಾಹನ ಮುಂದೆ ಹೋದರೆ ದೇವಿಯು ವೇಗದಲ್ಲಿ ಹಿಂದೆ ಬೀಳುತ್ತಾಳೆ. ಗರುಡ ಸ್ವಾಮಿಯು ಮಹಾವಿಷ್ಣುವಿಗೆ ಹೀಗೆ ಹೇಳುತ್ತಾನೆ "ನಾನು ಹಂಸವಾಹನದ ಮೇಲೆ ಕುಳಿತಿರುವ ಆ ತಾಯಿಯನ್ನು ಹಿಂಬಾಲಿಸುತ್ತೇನೆ ವಿನಃ ಮುಂದಕ್ಕೆ ಹೋಗುವುದಿಲ್ಲ" ಎಂದು ಹೇಳುತ್ತಾನೆ ಗರುಡ ಸ್ವಾಮಿ.

ಗರುಡವಾಹನ

ಗರುಡವಾಹನ

ಅದಷ್ಟೂ ತನ್ನ ವೇಗವನ್ನು ಕಡಿಮೆ ಮಾಡಿಕೊಂಡು ಹಂಸವಾಹನದ ಹಿಂದೆಯೇ ತೆರಳುತ್ತೇನೆ ಎಂದು ಹೇಳುತ್ತಾನಂತೆ ಎಂಬ ಈ ಕಥೆಯನ್ನು ಅಲ್ಲಿನ ಪಂಡಿತರು ಹೇಳುತ್ತಾರೆ. ಈ ದೇವಾಲಯದಲ್ಲಿ ಒಂದು ವಿಚಿತ್ರ ನಡೆಯುತ್ತದೆ. ಅದೆನೆಂದರೆ ಸ್ವಾಮಿಯನ್ನು ಉತ್ಸವಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ಕೇವಲ 4 ಜನರು ಹೊತ್ತುಕೊಂಡು ಹೋಗುತ್ತಾರೆ.

ಗರುಡವಾಹನ

ಗರುಡವಾಹನ

ಹಾಗೆಯೇ ಕೆಲವು ದೂರ ಸಾಗುತ್ತಿದ್ದಂತೆ ಗರುಡವಾಹನ ದೇವಾಲಯದ 5 ಪ್ರಾಕಾರಗಳನ್ನು ದಾಟಿ ಸಿಂಹದ್ವಾರ ಸಮೀಪದಲ್ಲಿ ಬರುವ ಸಮಯಕ್ಕೆ ಸರಿಯಾಗಿ ಭಾರ ಹೆಚ್ಚಾಗುತ್ತಾನೆ. ಹಾಗೆಯೇ 8 ಪ್ರಾಕಾರವನ್ನು ದಾಟುತ್ತಿದ್ದಂತೆ 8 ಮಂದಿ ಹೊತ್ತುಕೊಳ್ಳುತ್ತಾರೆ.

ಗರುಡವಾಹನ

ಗರುಡವಾಹನ

ಅಲ್ಲಿಂದ ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ 16 ಮಂದಿ ಹೊತ್ತಿಕೊಳ್ಳುತ್ತಾರೆ. ಈ ಪ್ರಾಕಾರವಾಗಿ ಸ್ವಾಮಿಯು ವೇಗವಾಗಿ ತನ್ನ ಭಾರವನ್ನು ಹೆಚ್ಚಿಸಿಕೊಳ್ಳುತ್ತಿರುತ್ತಾನೆ. ಕೊನೆಯದಾಗಿ ಗರುಡವಾಹನ ವಿಪರೀತ ಭಾರವಾಗಿ ಸುಮಾರು 120 ಮಂದಿ ಹೊತ್ತಿಕೊಳ್ಳಲೇಬೇಕಾಗುತ್ತದೆ.

ಗರುಡವಾಹನ

ಗರುಡವಾಹನ

ಹೀಗೆ ಭಾರ ಹೆಚ್ಚಾಗುತ್ತಾ ಸಾಗಿದಂತೆ ಹೊತ್ತಿಕೊಳ್ಳುವ ಜನರು ಕೂಡ ಹೆಚ್ಚಾಗುತ್ತಾರೆ. ಹಾಗೆಯೇ ಇಲ್ಲಿನ ಸ್ವಾಮಿಯ ವಿಗ್ರಕ್ಕೆ ಸೆಕೆಯಾಗುವ ವಿಚಿತ್ರವನ್ನು ಕಾಣಬಹುದು.

ಗರುಡವಾಹನ

ಗರುಡವಾಹನ

ಗರುಡ ಸ್ವಾಮಿಯು ಪ್ರಾರಂಭದಲ್ಲಿ ಕಡಿಮೆ ಭಾರವಿದ್ದು, ಕ್ರಮವಾಗಿ ಹೆಚ್ಚಾಗುತ್ತಾ ಇದ್ದಂತೆ ಆತನಿಗೆ ಸೆಕೆಯಾಗುವುದು ಪ್ರಾರಂಭವಾಗುತ್ತದೆ. ಇದನ್ನು ಭಕ್ತರು ಬಲವಾಗಿ ನಂಬುತ್ತಾರೆ. ಈ ಗರುಡ ಸ್ವಾಮಿಗೆ "ಕಾಲಗರುಡ" ಎಂದು ಸಹ ಕರೆಯುತ್ತಾರೆ.

ಗರುಡವಾಹನ

ಗರುಡವಾಹನ

ಈ ದೇವಾಲಯವು ತಮಿಳುನಾಡಿನಲ್ಲಿದೆ. ಬೆಂಗಳೂರಿನಿಂದ ಸುಮಾರು 16 ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಕಾರಿನಲ್ಲಿ ತೆರಳಬೇಕಾದರೆ ಕೇವಲ 15 ಗಂಟೆ ಕಾಲ ಪ್ರಯಾಣ ಮಾಡಬೇಕಾಗುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ