Search
  • Follow NativePlanet
Share
» »ಒಡಿಶಾದಲ್ಲಿನ ಗಂಜಾಂನ ಸೌಂದರ್ಯವನ್ನೊಮ್ಮೆ ನೋಡಿ

ಒಡಿಶಾದಲ್ಲಿನ ಗಂಜಾಂನ ಸೌಂದರ್ಯವನ್ನೊಮ್ಮೆ ನೋಡಿ

ಗಂಜಾಂ ಪವಿತ್ರ ಮತ್ತು ಪುರಾತನವಾದ ದೇವಾಲಯಗಳಿಂದ ಕೂಡಿದೆ. ಈ ಸ್ಥಳದಲ್ಲಿ ಸಾವಿರಾರು ಭಕ್ತರು ಭಗವಂತನ ಪರಮಾಧಿಕಾರದ ಪವಾಡಗಳನ್ನು ನೋಡಲು ಗುಂಪುಗುಂಪಾಗಿ ಬರುತ್ತಾರೆ.

ಗಂಜಾಂ ಒಡಿಶಾ ರಾಜ್ಯದ ಪ್ರಮುಖ ಜಿಲ್ಲೆಯಾಗಿದೆ. ಈ ಸ್ಥಳದ ಹೆಸರು ಗನ-ಇ-ಆಮ್ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ. ಇದರ ಅರ್ಥ ಆಹಾರ ಧಾನ್ಯಗಳ ಸಂಗ್ರಹ ಮಳಿಗೆ ಎಂದರ್ಥ. ಗಂಜಾಂ ಬಂಗಾಳ ಕೊಲ್ಲಿಯ ತೀರದ ಮೇಲೆ ನೆಲೆಗೊಂಡಿದೆ. ಇದು ಅಸಂಖ್ಯಾತ ವಿಲಕ್ಷಣವಾದ ಕಡಲ ತೀರಗಳನ್ನು ಹೊಂದಿದ್ದು, ವರ್ಷವಿಡೀ ಪ್ರವಾಸಿಗರನ್ನು ತಮ್ಮತ್ತ ಆಕರ್ಷಿಸಿ ಪ್ರವಾಸೋದ್ಯಮವನ್ನು ವರ್ಧಿಸುತ್ತವೆ.

ಗಂಜಾಂ ಪವಿತ್ರ ದೇವಾಲಯಗಳಿಂದ ಕೂಡಿದೆ

ಗಂಜಾಂ ಪವಿತ್ರ ದೇವಾಲಯಗಳಿಂದ ಕೂಡಿದೆ

PC: TheDashd

ಸಮೃದ್ಧ ಹಸಿರಿನಿಂದ ಅಲಂಕರಿಸಿಕೊಂಡಿರುವ ಇದು ಬೃಹತ್ ಪರ್ವತಗಳು ಮತ್ತು ಅದ್ಭುತ ನದಿಗಳನ್ನು ಹೊಂದಿದೆಯಲ್ಲದೇ, ಜೊತೆಗೆ ಸುಂದರವಾದ ಸ್ಥಳವು ಪ್ರಾಚೀನ ಅವಶೇಷಗಳ ಶ್ರೀಮಂತಿಕೆಯನ್ನು ಹೊಂದಿದೆ. ಗಂಜಾಂ ಪವಿತ್ರ ಮತ್ತು ಪುರಾತನವಾದ ದೇವಾಲಯಗಳಿಂದ ಕೂಡಿದೆ. ಈ ಸ್ಥಳದಲ್ಲಿ ಸಾವಿರಾರು ಭಕ್ತರು ಭಗವಂತನ ಪರಮಾಧಿಕಾರದ ಪವಾಡಗಳನ್ನು ನೋಡಲು ಗುಂಪುಗುಂಪಾಗಿ ಬರುತ್ತಾರೆ.

ಇಲ್ಲಿ ನಡೆಯುವ ಹಬ್ಬಗಳು

ಇಲ್ಲಿ ನಡೆಯುವ ಹಬ್ಬಗಳು

PC:Bibhuprasadsanatan
ಡೊಲೊ ಯಾತ್ರಾ, ತಾರಾತಾರಿಣಿ ಮೇಳ, ದಂಡ ಯಾತ್ರಾ ಮತ್ತು ಠಾಕೂ ರಾಣಿ ಯಾತ್ರಾ ಮುಂತಾದ ಹಬ್ಬಗಳ ಸಂದರ್ಭಗಳಲ್ಲಿ ಗಂಜಾಂ ಪ್ರವಾಸೋದ್ಯಮವು ಹೆಚ್ಚು ಗರಿಗೆದರುತ್ತದೆ. ಈ ಹಬ್ಬಗಳಲ್ಲಿ ದೇಶದ ವಿವಿಧ ಭಾಗಗಳಿಂದ ಅಪಾರ ಪ್ರಮಾಣದ ಭಕ್ತರು ಭಾಗವಹಿಸಿ ಹಬ್ಬಗಳ ಕಳೆಯನ್ನು ಹೆಚ್ಚಿಸುತ್ತಾರೆ.

ಕರಕುಶಲ ಕಲೆಗಳು

ಕರಕುಶಲ ಕಲೆಗಳು

PC: TheDashd
ಸೊಗಸಾದ ಕರಕುಶಲ ಕಲೆಗಳಾದ ಶಿಲ್ಪಕಲೆ ಕೆತ್ತನೆಗಳು, ಬಿದಿರು ಕೆತ್ತನೆಗಳು, ಮರ ಕೆತ್ತನೆಗಳು, ಕಂಚು ಮತ್ತು ತಾಮ್ರವಿನ್ಯಾಸಗಳು ಗಂಜಾಂ ಜಿಲ್ಲೆಯ ವೈಭವಕ್ಕೆ ಇನ್ನು ಹೆಚ್ಚಿನ ಮೆರಗನ್ನು ನೀಡಿವೆ. ಗಂಜಾಂ ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು ಗಂಜಾಂ ಅನ್ನು ಪ್ರಕೃತಿಯ ಆಟ ಎಂದು ಕರೆಯಬಹುದು. ಏಕೆಂದರೆ ಇದು ಅನೇಕ ದೇವರಗಳ ವಾಸಿಸುವಿಕೆಯಿಂದ ಶಕ್ತಿಯುತವಾಗಿದೆ.

ಗಂಜಾಂ ಪ್ರವಾಸೋದ್ಯಮ

ಗಂಜಾಂ ಪ್ರವಾಸೋದ್ಯಮ

PC: Buddy.forever.985
ಗಂಜಾಂ ಪ್ರವಾಸೋದ್ಯಮವು ವಿಶೇಷ ಕಡಲ ತೀರಗಳು, ಹಚ್ಚು ಹಸುರಿನ ಕಣಿವೆಗಳು, ದೈತ್ಯಾಕಾರದ ಬೆಟ್ಟಗಳು ಮತ್ತು ನಿಗೂಢ ಗುಹೆಗಳು , ಆಕರ್ಷಕ ಗುಹೆಗಳು ಮುಂತಾದವುಗಳಿಂದ ಅಭಿವೃದ್ಧಿಗೊಂಡಿದೆ. ಸುಂದರ ಮತ್ತು ಮರಳು ಕಡಲು ತೀರಗಳಾದ ಅರ್ಯಪಳ್ಳಿ ಮತ್ತು ಹುಮ ಕಾಂತಿಯಗಡ ಇವುಗಳನ್ನು ಜಗತ್ತಿನ ಯಾವ ಕಡಲ ತೀರಗಳೊಂದಿಗೆ ಹೋಲಿಸುವುದು ಅಸಾಧ್ಯ. ಗಿರಿಸೋಲಾವನ್ನು ಆಂಧ್ರಪ್ರದೇಶದಿಂದ ಒರಿಸ್ಸಾಕ್ಕೆ ಇರುವ ಪ್ರವೇಶದ್ವಾರ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಇದು ಸೊನೆಪುರ ಕಡಲ ತೀರ ಮತ್ತು ಭೈರವಿ ದೇವಾಲಯಗಳಿಗೆ ಹತ್ತಿರದಲ್ಲಿದ್ದು, ಗಿರಿಸೋಲಾವನ್ನು ಪ್ರವಾಸಿಗರ ಪ್ರಿಯ ತಾಣವನ್ನಾಗಿ ಮಾಡುತ್ತವೆ.

ಆಧ್ಯಾತ್ಮಿಕತೆಯನ್ನು ಅನುಭವಿಸಬಹುದು

ಆಧ್ಯಾತ್ಮಿಕತೆಯನ್ನು ಅನುಭವಿಸಬಹುದು

PC: TheDashd
ಅಸ್ಕಾದಿಂದ ಬಗುಡಾಕ್ಕೆ ಬರುವ ದಾರಿಯಲ್ಲಿ, ಭೇತನಾನಿ ಎಂಬ ಸ್ಥಳವಿದ್ದು, ಇಲ್ಲಿ ಪ್ರವಾಸಿಗರು ಕೆಲ ಸಮಯವನ್ನು ಕಳೆದು, ಇಲ್ಲಿನ ಸುಂದರ ವಿಹಂಗಮ ದೃಶ್ಯವನ್ನು ನೋಡಿ ಆನಂದಿಸಬೇಕು. ಗಂಜಾಂ ಇದು ಅನೇಕ ಪ್ರಾಚೀನ ಮತ್ತು ಪವಿತ್ರ ದೇವಾಲಯಗಳನ್ನು ಹೊಂದಿದ್ದು ಗಂಜಾಂ ಜಿಲ್ಲೆಯನ್ನು ಆಧ್ಯಾತ್ಮಿಕ ಪರಮ ಸುಖದ ಗಮ್ಯಸ್ಥಾನವನ್ನಾಗಿ ನಿರ್ಮಿಸಿದೆ. ಅಥಗಡಪಟ್ಟಣ ಪ್ರಾಚೀನ ಮತ್ತು ವೈಭವಯುತವಾದ ಜಗನ್ನಾಥನ ದೇವಸ್ಥಾನವನ್ನು ಹೊಂದಿದೆ. ಮಹುರಿಕಲುವಾ ದೇವಸ್ಥಾನವು ಇನ್ನೊಂದು ಪ್ರಮುಖ ಆಕರ್ಷಣೆಯಾಗಿದ್ದು ಗಂಜಾಂ ಮತ್ತು ಬೇಹಾರಮಪುರಕ್ಕೆ ಭೇಟಿ ಕೊಡುವ ಪ್ರತಿಯೊಬ್ಬ ಪ್ರವಾಸಿಗನು ಇದನ್ನು ನೋಡಲೇ ಬೇಕು.

ನಿರ್ಮಲಝರ

ನಿರ್ಮಲಝರ

PC: Sidsahu
ನಿರ್ಮಲಝರ ಒಂದು ಅದ್ಭುತ ಸ್ಥಳವಾಗಿದ್ದು, ಇಲ್ಲಿ ವಿಷ್ಣುವಿನ ಪ್ರತಿಮೆಯ ಪಾದದಿಂದ ನೀರಿನ ತೊರೆಯು ಉದಯವಾಗುತ್ತದೆ. ಇದನ್ನು ನಂಬಲು ಅಸಾಧ್ಯವಾದರೂ ಸಹ ಇದು ನಿಜವಾಗಿದೆ. ಪಂಚಮ ಮತ್ತು ಜಾಲೇಶ್ವರದಲ್ಲಿರುವ ಇತರ ದೇವಾಲಯಗಳು ಅಪರೂಪದ ದೇವಾಲಯಗಳಾಗಿದ್ದು, ಇಲ್ಲಿ ದೇವತೆಗಳು ಪ್ರಕೃತಿಯ ಸೌಂದರ್ಯ ಮತ್ತು ಆನಂದದ ನಡುವೆ ಪೂಜಿಸಲ್ಪಡುತ್ತಾರೆ. ಜೌಗಡದಲ್ಲಿರುವ ಆಶೋಕನ ಶಿಲಾಶಾಸನಗಳು ಅಪಾರ ಪ್ರಮಾಣದ ಪ್ರವಾಸಿಗರನ್ನು ವರ್ಷಪೂರ್ತಿ ಆಕಷಿಸುತ್ತವೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: Sidsahu
ಅಕ್ಟೋಬರನಿಂದ ಫೆಬ್ರುವರಿ ತಿಂಗಳುಗಳು ಗಂಜಾಂ ನಗರಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯವಾಗಿದೆ. ಈ ಸಮಯದಲ್ಲಿ ಇಲ್ಲಿನ ಹವಾಮಾನವು ತಂಪು ಮತ್ತು ಆಹ್ಲಾದಕರವಾಗಿರುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಗಂಜಾಂ ನಗರವು ಉತ್ತಮ ರೈಲ್ವೆ ಸಂಪರ್ಕವನ್ನು ಹೊಂದಿದೆ. ಇಲ್ಲಿಗೆ ಹತ್ತಿರ ಇರುವ ರೇಲ್ವೆ ನಿಲ್ದಾಣ ಎಂದರೆ ಬೇಹ್ರಮಪುರ ರೈಲ್ವೆ ನಿಲ್ದಾಣ. ಗಂಜಾಂ ನಗರಕ್ಕೆ ಹತ್ತಿರ ಇರುವ ವಿಮಾನ ನಿಲ್ದಾಣ ಎಂದರೆ ಭುವನೇಶ್ವರ ವಿಮಾನ ನಿಲ್ದಾಣ. ಈ ಜಿಲ್ಲೆಯು ಎಲ್ಲ ರೀತಿಯ ಉತ್ತಮ ರಸ್ತೆಗಳನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X