Search
  • Follow NativePlanet
Share
» »ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲಿನ ರಾಮಾಯಣದಲ್ಲಿ ಪ್ರಮುಖವಾದ ಪಾತ್ರಗಳಲ್ಲಿ ಒಬ್ಬ. ಇತನು ಹಿಂದೂ ದೇವತೆಯಾಗಿದ್ದು, ಭಾರತ ದೇಶದಾದ್ಯಂತ ಅಪಾರ ಭಕ್ತರನ್ನು ಹೊಂದಿದ್ದಾನೆ. ಇತನನ್ನು ವಾಯುಪುತ್ರ, ಕಪಿವೀರ, ಅಂಜನಾದೇವಿಯ ಮಗ, ರಾಮನ ಪರಮಭಕ್ತ ಎಂದು

ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲಿನ ರಾಮಾಯಣದಲ್ಲಿ ಪ್ರಮುಖವಾದ ಪಾತ್ರಗಳಲ್ಲಿ ಒಬ್ಬ. ಇತನು ಹಿಂದೂ ದೇವತೆಯಾಗಿದ್ದು, ಭಾರತ ದೇಶದಾದ್ಯಂತ ಅಪಾರ ಭಕ್ತರನ್ನು ಹೊಂದಿದ್ದಾನೆ. ಇತನನ್ನು ವಾಯುಪುತ್ರ, ಕಪಿವೀರ, ಅಂಜನಾದೇವಿಯ ಮಗ, ರಾಮನ ಪರಮಭಕ್ತ ಎಂದು ಅನೇಕ ಹೆಸರುಗಳಿಂದ ಕರೆಯುತ್ತಾರೆ. ಹನುಮಂತನನ್ನು ಶಕ್ತಿ ದೇವತೆ ಎಂದು ಕರೆಯುತ್ತಾರೆ. ಭಾರತದಾದ್ಯಂತ ಹನುಮಂತನ ಅನೇಕ ದೇವಾಲಯಗಳು ನಾವು ಕಾಣಬಹುದು.

ಹನುಮಂತನು ಸಪ್ತ ಚಿರಂಜೀವಿಗಳಲ್ಲಿ ಒಬ್ಬ. ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ಮಹಾ ಮೇಧಾವಿಯಾಗಿದ್ದನು. ಇತನು ಸ್ವಾಮಿ ನಿಷ್ಟೆಗೆ ಸೂಕ್ತವಾದ ಹೆಸರೇ ಹನುಮಂತ. ರಾಜಸ್ಥಾನದಲ್ಲಿ ಬಾಲಾಜಿ ಎಂಬ ಹೆಸರಿನಿಂದ ಈತನ ಒಂದು ಮಹಿಮಾನ್ವಿತವಾದ ದೇವಾಲಯವಿದೆ. ಆ ದೇವಾಲಯದಲ್ಲಿ ಸ್ವತಃ ಸ್ವಾಮಿಯೇ ಭೂತ, ಪ್ರೇತವನ್ನು ಓಡಿಸುತ್ತಾನಂತೆ. ಅದೇ ರೀತಿ ಈ ಲೇಖನದಲ್ಲಿಯೂ ಆಂಜನೇಯ ಸ್ವಾಮಿಯು ಜೀವಂತವಾಗಿದ್ದಾನೆ ಎಂಬುದಕ್ಕೆ ಈ ದೇವಾಲಯವೇ ನಿದರ್ಶನವಾಗಿದೆ.

ಹಾಗಾಗದರೆ ಆ ದೇವಾಲಯ ಯಾವುದು? ಆ ದೇವಾಲಯ ಎಲ್ಲಿದೆ? ಎಂಬುದನ್ನು ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿಯೋಣ.

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಎಲ್ಲಿದೆ?
ರಾಮೇಶ್ವರವು ತಮಿಳುನಾಡಿನ ರಾಮನಾಥಪುರಂ ಎಂಬ ಜಿಲ್ಲೆಯಲ್ಲಿದೆ. ಇದು ಪಂಬನ್ ದ್ವೀಪದ ಸಮೀಪದಲ್ಲಿಯೇ ಇದೆ. ಅಲ್ಲಿನ ಒಂದು ಪರ್ವತದಲ್ಲಿ ಆಂಜನೇಯ ಸ್ವಾಮಿಯು ನೆಲೆಸಿದ್ದಾನೆ. ಆಂಜನೇಯ ಸ್ವಾಮಿಯು ಆಗಾಗ ಈ ದೇವಾಲಯಕ್ಕೆ ಬರುತ್ತಿರುತ್ತಾನೆ ಎಂದು ನಂಬಲಾಗಿದೆ. ಇದೊಂದು ಮಹಿಮಾನ್ವಿತವಾದ ದೇವಾಲಯ ಎಂದೇ ಭಾವಿಸಲಾಗಿದೆ. ಕೆಲವರು ಇಲ್ಲಿನ ಆಂಜನೇಯ ಸ್ವಾಮಿಯನ್ನು ಪ್ರತ್ಯಕ್ಷವಾಗಿ ನೋಡಿರುವುದಾಗಿ ಹೇಳುತ್ತಾರೆ. 21 ನೇ ಶತಮಾನದಲ್ಲಿ ಇದ್ದರು ಕೂಡ ಇದನ್ನು ನಂಬಬೇಕೆ ಎಂದು ಅನುಮಾನ ವ್ಯಕ್ತ ಪಡಿಸಿದರು ಅಷ್ಟೇ, ಇಲ್ಲಿ ಹನುಮಂತ ಬರುವುದು ಮಾತ್ರ ನಿಜವಾದುದು ಎಂದು ಅಲ್ಲಿನ ಜನರು ವಾದಿಸುತ್ತಾರೆ.

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಹೇಗೆ ತಲುಪಬೇಕು?
ಈ ಶಕ್ತಿವಂತ ಪರ್ವತವು ರಾಮೇಶ್ವರದಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ದ್ವೀಪದ ಪಶ್ಚಿಮ ಗಡಿಯಲ್ಲಿರುವ ನಾಶವಾದ ಧನುಷ್ಕೋಡಿ ನಗರಕ್ಕೆ ಹೋಗುವ ಮಾರ್ಗದಲ್ಲಿ ನೆಲೆಗೊಂಡಿದೆ. ರಾಮೇಶ್ವರದಿಂದ ಸಮೀಪದಲ್ಲಿಯೇ ಇರುವ ಈ ದೇವಾಲಯಕ್ಕೆ ಸುಲಭವಾಗಿ ತೆರಳಬಹುದಾಗಿದೆ.

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಗಂದಮಾತನ ಮಲೈ ದೇವಾಲಯ
ಇಷ್ಟಕ್ಕೂ ಆ ದೇವಾಲಯದ ಹೆಸರು ಗಂದಮಾತನ ಮಲೈ ದೇವಾಲಯ. ಇದೇ ಸ್ಥಳದಿಂದ ಲಂಕಾಕ್ಕೆ ದಾರಿ ಮಾಡಿಕೊಂಡು ಆಂಜನೇಯ ಸ್ವಾಮಿಯು ಹೋದನು ಎಂದು ನಂಬಲಾಗಿದೆ. ರಾಮನ ಭಕ್ತನಾದ ಆಂಜನೇಯ ಸ್ವಾಮಿಯು ನಿಷ್ಠೆಯನ್ನು ತೋರಿಸುವ ಸಲುವಾಗಿ ತನ್ನ ಎದೆಯನ್ನೇ ಬಗೆದ ಚಿತ್ರವನ್ನು ಇಲ್ಲಿ ಕಾಣಬಹುದಾಗಿದೆ.

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಪ್ರಯಾಣ (ಪ್ಲಾನ್)
ಪ್ರತಿ ಪ್ರವಾಸದ ಸಮಯದಲ್ಲಿಯೂ ನೀವು ನಿಖರವಾಗಿ ಯೋಜನೆಗಳನ್ನು ಮಾಡಿಕೊಳ್ಳಬೇಕು. ಸಮಯವೇ ಆಗಲಿ, ಹಣವೇ ಆಗಲಿ ಹೇಗೆ ಉಳಿತಾಯ ಮಾಡಬೇಕು ಎಂಬುದನ್ನು ಮೊದಲೇ ಯೋಜನೆ ಮಾಡಿದ್ದಾರೆ ಒಳ್ಳೆಯದು. ಚೆನ್ನೈನಿಂದ ರಾಮೇಶ್ವರಕ್ಕೆ ಹೇಗೆ ತಲುಪಬೇಕು ಎಂಬುದನ್ನು ಇಲ್ಲಿನ ಪೋಸ್ಟನ ಮೂಲಕ ನೋಡಬಹುದು.

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಇಲ್ಲಿಗೆ ಭೇಟಿ ನೀಡಿ
ಇಲ್ಲಿ ಪ್ರಣಯವನ್ನು ಹೆಚ್ಚಿಸುವ ಅನೇಕ ಬೀಚ್‍ಗಳು ಹಾಗು ಸ್ಥಳಗಳಿಗೆ ಭೇಟಿ ನೀಡಬಹುದು. ಗೋವಾದ ಪ್ರಸಿದ್ಧವಾದ ಈ ವೆಲ್ಸ್ ಬೀಚ್, ಸಿರಿಡಾ ಬೀಚ್, ಲವರ್ಸ್ ಬೀಚ್, ಹೋಲಾಂಡ್ ಬೀಚ್, ಬಟ್ಟರ್ ಪ್ಲೈ ಬೀಚ್, ವ್ಯಾಗೆಟರ್ ಬೀಚ್, ಆಶ್ವಂ ಬೀಚ್‍ಗಳಿಗೂ ಕೂಡ ಒಮ್ಮೆ ಭೇಟಿ ನೀಡಿ ಬನ್ನಿ.

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಚೆನ್ನೈ-ರಾಮೇಶ್ವರಂ
ರಾಮೇಶ್ವರದಿಂದ ಚೆನ್ನೈಗೆ ಸುಮಾರು 11 ಗಂಟೆಗಳ ದೂರದಲ್ಲಿದೆ. ಸ್ವಂತ ವಾಹನವಿದ್ದರೆ ಕೇವಲ 2 ಗಂಟೆಗಳಿಗಿಂತಲೂ ಕಡಿಮೆ ಸಮಯದಲ್ಲಿಯೇ ಇಲ್ಲಿಗೆ ತಲುಪಬಹುದು. ದಾರಿಯಲ್ಲಿ ಮೆಲ್ಮಾರವೂಥೂರ್, ಅರಿಯಲೂರ್, ತಿರುಚ್ಚಿ ಮತ್ತು ಶಿವಗಂಗೈ ನಂತಹ ಹಲವಾರು ಸ್ಥಳಗಳಿಗೆ ಭೇಟಿ ನೀಡಬಹುದು. ರಾಮೇಶ್ವರದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಮೊದಲಿಗೆ ಆಂಜನೇಯ ವಾಸಿಸಿದ ಸ್ಥಳವನ್ನು ನೋಡೋಣ.

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ರಾಮೇಶ್ವರ-ಆಂಜನೇಯ ವಾಸಿಸಿದ ಸ್ಥಳ
ಆಂಜನೇಯ ಸ್ವಾಮಿ ವಾಸಿಸಿದ ಸ್ಥಳವು ಇಂದು ದೇವಾಲಯವಾಗಿದೆ. ಆ ದೇವಾಲಯವನ್ನು ರಾಮ ಶರೋಘ ಎಂದು ಕರೆಯುತ್ತಾರೆ. ಇದೊಂದು ಪರ್ವತ ಪ್ರದೇಶವಾಗಿದ್ದು, 3 ಕಿ.ಮೀ ಕಾಲ್ನಡಿಗೆಯಲ್ಲಿ ಹೋಗಬೇಕಾಗುತ್ತದೆ. ಈ ದೇವಾಲಯಕ್ಕೆ ಅನೇಕ ಪ್ರವಾಸಿಗರು, ಭಕ್ತರು ಭೇಟಿ ನೀಡುತ್ತಿರುತ್ತಾರೆ.

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ರಾಮ ಶುರಿಕ ದೇವಾಲಯ
ಈ ರಾಮ ಶುರಿಕ ದೇವಾಲಯವು ರಾಮಪದಂ ಎಂಬಲ್ಲಿ ನೆಲೆಸಿದೆ. ರಾಮೇಶ್ವರದಿಂದ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಹಲವಾರು ಗೋಪುರಗಳು ಮತ್ತು ದೇವಾಲಯಗಳನ್ನು ಕಾಣಬಹುದಾಗಿದೆ.

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಮಾರ್ಗದಲ್ಲಿ ದೊರೆಯುವ ದೇವಾಲಯಗಳು
ದಾರಿಯಲ್ಲಿ ಅನೇಕ ಪ್ರಮುಖವಾದ ದೇವಾಲಯಗಳನ್ನು ಕಾಣಬಹುದು. ಅವುಗಳಲ್ಲಿ ಪಿಲ್ಲಯಾರ್ ದೇವಾಲಯ, ಸುಕ್ರೀವರ್ ತೀರ್ಥಂ, ಅಮ್ಮನ್ ದೇವಾಲಯ, ಅಂಗಾಧ ತೀರ್ಥಂ, ಜಂಬವನ್ ತೀರ್ಥಂ, ಶಕೀಸ್ ಹನುಮಾನ್ ದೇವಾಲಯ ಮತ್ತು ರಾಮ ಪಾದಂ ದೇವಾಲಯ.

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಕುನ್ನಾಂಠಾನ ಪರ್ವತ
ಕುನ್ನಾಂಠಾನ ಪರ್ವತದ ಬೆಟ್ಟವು ಬಹಳ ಸುಂದರವಾಗಿದೆ. ರಾಮೇಶ್ವರದ ಜನರು ಆಗಾಗ ಈ ಬೆಟ್ಟಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಈ ಪರ್ವತವು ರಾಮ ಪದಾಮ್ ಎಂಬ ದೇವಾಲಯವನ್ನು ಹೊಂದಿದೆ. ಈ ಪರ್ವತದ ಮೇಲೆ ಅದ್ಭುತವಾದ ಸೂರ್ಯೋದಯ ಹಾಗು ಸೂರ್ಯಾಸ್ತದ ದೃಶ್ಯವನ್ನು ಕಾಣಬಹುದು.

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಸುಗ್ರೀವರ್ ತೀರ್ಥಂ
ಈ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ನೀವು ಸುಕ್ರೀವರ್ ತೀರ್ಥವನ್ನು ಕಾಣಬಹುದು. ಸುಕ್ರೀವರ್ ದೇವಾಲಯ ಈ ಬೆಟ್ಟಕ್ಕೆ ಸಮೀಪದಲ್ಲಿಯೇ ಇದೆ. ಈ ಬೆಟ್ಟದಿಂದ ಇಡೀ ರಾಮೇಶ್ವರವನ್ನು ನೋಡಬಹುದಾಗಿದೆ. ಹಾಗಾಗಿಯೇ ಈ ದೇವಾಲಯಕ್ಕೆ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಆಂಜನೇಯ ಜೀವಂತವಾಗಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ...

ಸಮೀಪದ ಪ್ರವಾಸಿ ತಾಣಗಳು
ರಾಮತೀರ್ಥಂ, ಭೀಮಾ ತೀರ್ಥಂ, ಅರ್ಜುನ ತೀರ್ಥಂ, ಕಂದಾಮಂತ ತೀರ್ಥಂ, ಧರ್ಮ ತೀರ್ಥಂ, ವೀರ ತೀರ್ಥಂ, ಪಂಚ ತೀರ್ಥಂ, ಸಹದೇವ ತೀರ್ಥಂ, ಪರಶುರಾಮ ತೀರ್ಥಂ, ಕುಮುದ ತೀರ್ಥಂ ಇನ್ನು ಹಲವಾರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X