Search
  • Follow NativePlanet
Share
» »ಗಣಪತಿಪುಲೆಯಲ್ಲಿರುವ ಪಶ್ಚಿಮ ದ್ವಾರಪಾಲಕನ ದರ್ಶನ ಪಡೆದಿದ್ದೀರಾ?

ಗಣಪತಿಪುಲೆಯಲ್ಲಿರುವ ಪಶ್ಚಿಮ ದ್ವಾರಪಾಲಕನ ದರ್ಶನ ಪಡೆದಿದ್ದೀರಾ?

ಮಹಾರಾಷ್ಟ್ರದ ಸುಂದರವಾದ ಹಳ್ಳಿಯಾದ ಗಣಪತಿಪುಲೆ ಸ್ವಾತಂತ್ರ್ಯ ಹೋರಾಟಗಾರ 'ಲೋಕಮಾನ್ಯ ತಿಲಕ' ನ ಜನ್ಮಸ್ಥಳವಾಗಿದೆ. ಈ ಹಳ್ಳಿಯು ಭಾರತದ ನೈಋತ್ಯ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿದೆ. ಗಣಪತಿ ಪುಲೆ ಎನ್ನುವ ಪುಟ್ಟ ಗ್ರಾಮದಲ್ಲಿ ಏನೆಲ್ಲಾ ವಿಶೇಷತೆ ಇದೆ ಅನ್ನೋದನ್ನು ತಿಳಿಯೋಣ.

ಗಣಪತಿಪುಲೆ

ಗಣಪತಿಪುಲೆ

PC:Pradeep717

ಸ್ಥಳೀಯ ದಂತಕಥೆಯ ಪ್ರಕಾರ, ಒಬ್ಬ ಹಳ್ಳಿಗ ಕಾಡುಗಳ ಮೂಲಕ ಹಾದು ಹೋದಾಗ ಗಣಪತಿಯ ವಿಗ್ರಹದ ಮೇಲೆ ಎಡವುತ್ತಾನೆ. ಆ ವಿಗ್ರಹ ದೊರೆತ ಸ್ಥಳದಲ್ಲಿ ದೇವಾಲಯವನ್ನು ಕಟ್ಟಿದರು. ಕಳೆದ 400 ವರ್ಷಗಳಲ್ಲಿ, ಜನರು ದೇವಾಲಯಕ್ಕೆ ಸತತವಾಗಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ವಿಗ್ರಹವು ಒಂದು ವಿಶೇಷ ಕಲ್ಲಿನದಾಗಿದ್ದು, ಇದನ್ನು ಸ್ವಯಂ ಭೂ ಗಣೇಶ ಎನ್ನುತ್ತಾರೆ.

ಐದು ತಲೆಯ ಕಾಳಿಂಗನನ್ನು ಹೋಲುವ ಜಲಪಾತವನ್ನು ನೋಡಿದ್ದೀರಾ?

ಸ್ವಯಂಭೂ ಗಣಪತಿ ದೇವಸ್ಥಾನ

ಸ್ವಯಂಭೂ ಗಣಪತಿ ದೇವಸ್ಥಾನ

PC: Kprateek88

ಗಣಪತಿಪುಲೆ ಬಸ್ ನಿಲ್ದಾಣದಿಂದ 1 ಕಿ.ಮೀ ದೂರದಲ್ಲಿರುವ ಸ್ವಯಂಭೂ ಗಣಪತಿ ದೇವಾಲಯ ಮಹಾರಾಷ್ಟ್ರದ ಗಣಪತಿಪುಲೆ ಬೀಚ್‌ನಲ್ಲಿರುವ ಪುರಾತನ ದೇವಾಲಯವಾಗಿದೆ. ಗಣಪತಿಪುಲೆ ಮತ್ತು ಮಹಾರಾಷ್ಟ್ರದ ಜನಪ್ರಿಯ ಗಣೇಶ ದೇವಾಲಯಗಳಲ್ಲೊಂದರಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳಲ್ಲಿ ಇದು ಕೂಡ ಒಂದು. ಸ್ವಯಂಭೂ ಗಣಪತಿ ದೇವಸ್ಥಾನವು ರತ್ನಾಗಿರಿ ಪಟ್ಟಣದಿಂದ 20 ಕಿ.ಮೀ ದೂರದಲ್ಲಿದೆ.

ತಾಮ್ರದ ವಿಗ್ರಹ

ತಾಮ್ರದ ವಿಗ್ರಹ

PC: Apoo8338

ಸ್ವಯಂಭೂ ಗಣಪತಿ ದೇವಸ್ಥಾನವನ್ನು ಬಿಳಿ ಮರಳಿನಿಂದ ನಿರ್ಮಿಸಲಾಗಿದೆ. ಈ ವಿಗ್ರಹವು ಸ್ವಯಂ ಹುಟ್ಟಿಕೊಂಡಿತು ಆದರಿಂದ ಇದನ್ನು ಸ್ವಯಂ ಭೂ ಹೇಳಲಾಗುತ್ತದೆ. ಇಲ್ಲಿ ಗಣಪತಿಯ ಒಂದು ತಾಮ್ರದ ವಿಗ್ರಹವಿದೆ, ಇದನ್ನು ಪವಿತ್ರ ಸ್ಥಳದಲ್ಲಿ ಇರಿಸಲಾಗಿದೆ. ಈ ವಿಗ್ರಹವು ಸೂರ್ಯನ ಬೆಳಕು ಈ ವಿಗ್ರಹಕ್ಕೆ ಬೀಳುತ್ತದೆ.

ಬೆಂಗಳೂರಿನಲ್ಲಿರುವ ಬಾಣಂತಿಮಾರಿ ಬೆಟ್ಟಕ್ಕೆ ಹೋಗಿದ್ದೀರಾ?

ಪಶ್ಚಿಮ ದ್ವಾರಪಾಲಕ

ಪಶ್ಚಿಮ ದ್ವಾರಪಾಲಕ

Pradeep717

ಗಣಪತಿಪುಲೆಯಲ್ಲಿರುವ ಗಣೇಶ ದೇವಾಲಯವು ವಿಶಿಷ್ಟವಾದುದು ಏಕೆಂದರೆ ಪಶ್ಚಿಮ ಘಟ್ಟಗಳನ್ನು ಕಾಪಾಡುವ ಸಲುವಾಗಿ ಈ ದೇವಸ್ಥಾನವು ಪಶ್ಚಿಮಕ್ಕೆ ಎದುರಾಗಿರುವ ಕೆಲವು ದೇವಾಲಯಗಳಲ್ಲಿ ಒಂದಾಗಿದೆ. ಇದು ಭಾರತದ ಅಷ್ಟ ಗಣಪತಿ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿನ ಗಣೇಶನನ್ನು ಪಶ್ಚಿಮ ದ್ವಾರಪಾಲಕ ಎಂದು ಕರೆಯುತ್ತಾರೆ.

100 ಮನೆಗಳಿರುವ ಪುಟ್ಟ ಹಳ್ಳಿ

100 ಮನೆಗಳಿರುವ ಪುಟ್ಟ ಹಳ್ಳಿ

PC:Pradeep717

ಇದು ಸುಮಾರು 100 ಮನೆಗಳೊಂದಿಗೆ ಒಂದು ಸಣ್ಣ ಪಟ್ಟಣವಾಗಿದೆ. ಗಣಪತಿ ದೇವಸ್ಥಾನ ಸುಮಾರು 400 ವರ್ಷ ಹಳೆಯದು ಮತ್ತು ಗಣಪತಿಪುಲೆಯಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಇದು ಪ್ರತಿವರ್ಷ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ.

ಹುಬ್ಬಳ್ಳಿ ಸುತ್ತಮುತ್ತ ನೀವು ನೋಡಲೇ ಬೇಕಾದ ತಾಣಗಳು ಇವು

PC:Pradeep717

PC:Pradeep717

PC:Hydkat

ಗಣಪತಿ ಪುಲೆಯಲ್ಲಿರುವ ಇತರ ಆಕರ್ಷಣೆಗಳಲ್ಲಿ ಜೈಗಡ್ ಕೋಟೆಯು ಒಂದು. ಜೈಗಡ್ ಕೋಟೆಯು ರತ್ನಾಗಿರಿ ಜಿಲ್ಲೆಯಲ್ಲಿ ಪರ್ಯಾಯದ್ವೀಪದ ತುದಿಯಲ್ಲಿರುವ ಪ್ರಸಿದ್ಧ ಸಮುದ್ರ ಕೋಟೆಯಾಗಿದೆ. ಈ ಕೋಟೆಯು ಒಂದು ತೊಗಟೆಯಂತೆ ಕಾಣುವ ಬಂಡೆಯ ಮೇಲೆ ನೆಲೆಸಿದ್ದು, ಶಾಸ್ತ್ರಿ ನದಿಯು ಅರೇಬಿಯನ್ ಸಮುದ್ರಕ್ಕೆ ಪ್ರವೇಶಿಸುವ ಸ್ಥಳವಾಗಿದೆ. ಇದು ಗಣಪತಿಪುಲೆಯಿಂದ ಕೇವಲ 35 ಕಿಲೋಮೀಟರ್ ದೂರದಲ್ಲಿದೆ. ಕೋಟೆಗೆ ಹತ್ತಿರದಲ್ಲಿ ಲೈಟ್ ಹೌಸ್ ಮತ್ತು ಜೆಟ್ಟಿ ಬಂದರು ಇದೆ.

ಗಣಪತಿಪುಲೆ ಕಡಲತೀರ

ಗಣಪತಿಪುಲೆ ಕಡಲತೀರ

PC: Dmpendse

ಬೆಳ್ಳಿಯಂತೆ ಕಂಗೊಳಿಸುವ ಬಿಳಿ ಮರಳಿನಿಂದ ಹರಡಿದ ಗಣಪತಿಪುಲೆ ಕಡಲತೀರವು ಕುಟುಂಬದ ರಜೆಯನ್ನು ಆನಂದಿಸಲು ಸೂಕ್ತವಾದ ತಾಣವಾಗಿದೆ. ಸಾಹಸ ಉತ್ಸಾಹಿಗಳು ಇಲ್ಲಿ ಸಾಹಸ ಕ್ರೀಡೆಗನಳನ್ನು ಪ್ರಯತ್ನಿಸಬಹುದು. ಕಡಲತೀರದ ಕೊನೆಯಲ್ಲಿ ಒಂದು ಸಣ್ಣ ಬಂಡೆಯಿದೆ. ಮೇಲ್ಭಾಗದಿಂದ ವೀಕ್ಷಿಸಿ ನಿಜವಾಗಿಯೂ ಆಕರ್ಷಕವಾಗಿದೆ. ಕಡಲತೀರವು ಹಲವಾರು ಮಾವಿನ ಮರಗಳಿಂದ ಕೂಡಿದೆ . ಇಲ್ಲಿ ಕಡಲತೀರದ ಸಸ್ಯಾಹಾರಿ ಮರಾಠಿ ಭಕ್ಷ್ಯಗಳನ್ನು ನೀವು ಆನಂದಿಸಬಹುದು.

ಔರಂಗಜೇಬನನ್ನೇ ನಡುಗಿಸಿದ ಧ್ಯಾನಾಂಜನೇಯನ ದರ್ಶನ ಪಡೆದ್ರೆ ಎಲ್ಲವೂ ಶುಭವೇ

ಜೈಗಡ್ ಲೈಟ್ಹೌಸ್

ಜೈಗಡ್ ಲೈಟ್ಹೌಸ್

1832 ರಲ್ಲಿ ನಿರ್ಮಿಸಲಾದ ಜೈಗಡ್ ಲೈಟ್ಹೌಸ್ ಸಿದ್ಧ ಬುರುಜ್ ಎಂದು ಕರೆಯಲ್ಪಡುವ ಕೋಟೆಯ ಮೇಲೆ ನೆಲೆಗೊಂಡಿದೆ. ಗಣಪತಿಪುಲೆಯಿಂದ 19 ಕಿ.ಮೀ ದೂರದಲ್ಲಿ ಮತ್ತು ರತ್ನಗಿರಿಯಿಂದ 42 ಕಿ.ಮೀ. ದೂರದಲ್ಲಿ ಜೈಗಡ್ ಕೋಟೆ ಮಹಾರಾಷ್ಟ್ರದ ಜೈಗಡ್ ಗ್ರಾಮದ ಹತ್ತಿರದಲ್ಲಿದೆ. ಇದು ಕೊಂಕಣ ಪ್ರದೇಶದಲ್ಲಿ ಜನಪ್ರಿಯ ಕೋಟೆಗಳಲ್ಲಿ ಒಂದಾಗಿದೆ ಮತ್ತು ಇತಿಹಾಸ ಪ್ರಿಯರಿಗೆ ಪುಣೆ ಸಮೀಪದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಇದು ಭಾರತದ ಆರ್ಕಿಯಾಲಜಿಕಲ್ ಸರ್ವೆ ಅಡಿಯಲ್ಲಿ ರಕ್ಷಿತ ಸ್ಮಾರಕವಾಗಿದೆ. ಶಾಸ್ತ್ರೀ ನದಿ ಮತ್ತು ಅರೇಬಿಯನ್ ಸಮುದ್ರ ಸೇರುವ ಸ್ಥಳವನ್ನು ಜೈಗಡ್ ನ ಕೊಲ್ಲಿ ಎಂದು ಕರೆಯಲಾಗುತ್ತದೆ. ಇದು ಸೋಮವಾರದಿಂದ ಶನಿವಾರದವರೆಗೆ 4 ರಿಂದ 5 ರವರೆಗೆ ಭೇಟಿ ನೀಡುವವರಿಗೆ ತೆರೆದಿರುತ್ತದೆ.

ಮಲ್ಗುಂಡ್

ಮಲ್ಗುಂಡ್

ಗಣಪತಿಪುಲೆಯಿಂದ 1 ಕಿ.ಮೀ. ದೂರದಲ್ಲಿರುವ ಮಲ್ಗುಂಡ್, ಮರಾಠಿ ಕವಿ ಕೇಶವಸುತ ಅವರ ಜನ್ಮಸ್ಥಳ ಎನ್ನಲಾಗುತ್ತದೆ. 1866 ರಲ್ಲಿ ಜನಿಸಿದ ಈ ಕವಿ ಅವರು ಆಧುನಿಕ ಮರಾಠಿ ಕವಿತೆಯ ಉದಯವನ್ನು ಘೋಷಿಸಿದರು. ಅವರ ಕೆಲಸಕ್ಕೆ ಮೀಸಲಾಗಿರುವ ಮಾಲ್ಗುಂಡ್‌ನಲ್ಲಿ ಒಂದು ಸ್ಮಾರಕವಿದೆ ಮತ್ತು ಮರಾಠಿ ಭಾಷೆಯ ಆಧುನಿಕ ಕವಿಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯುವ ಮ್ಯೂಸಿಯಂ ಸಹ ಇಲ್ಲಿದೆ. ಮರಾಠಿ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಜನರಿಗೆ ಉತ್ತಮವಾದ ಸ್ಥಳ ಇದಾಗಿದೆ.

ಅಬ್ಬಾಬ್ಬಾ ...111 ಫೀಟ್ ಎತ್ತರದ ಶಿವಲಿಂಗ ಇದು, ಎಲ್ಲಿದೆ ಗೊತ್ತಾ?

ರೈಲು ನಿಲ್ದಾಣ

ರೈಲು ನಿಲ್ದಾಣ

PC: Attarde

ರತ್ನಗಿರಿ ರೈಲು ನಿಲ್ದಾಣವು ಗಣಪತಿಪುಲೆಗೆ ಹತ್ತಿರದ ರೈಲು ನಿಲ್ದಾಣವಾಗಿದೆ. ಇದು ಗಣಪತಿಪುಲೆದಿಂದ 45 ಕಿ.ಮೀ ದೂರದಲ್ಲಿದೆ ಮತ್ತು ಮುಂಬೈ ಮತ್ತು ಪುಣೆ ಮುಂತಾದ ವಿವಿಧ ನಗರಗಳಿಗೆ ಸಂಪರ್ಕ ಹೊಂದಿದೆ.

ವಿಮಾನ ನಿಲ್ದಾಣ

ವಿಮಾನ ನಿಲ್ದಾಣ

ರತ್ನಗಿರಿ ವಿಮಾನ ನಿಲ್ದಾಣವು ಗಣಪತಿಪುಲೆಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇದು ಗಣಪತಿಪುಲೆದಿಂದ 50 ಕಿಲೋಮೀಟರ್ ದೂರದಲ್ಲಿದೆ ಮತ್ತು ಪುಣೆ ಮತ್ತು ಮುಂಬೈ ಮುಂತಾದ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ರತ್ನಗಿರಿ ವಿಮಾನ ನಿಲ್ದಾಣ ಮತ್ತು ಗಣಪತಿಪುಲೆ ನಡುವೆ ಟ್ಯಾಕ್ಸಿ ಕ್ಯಾಬ್‌ಗಳು ಚಲಿಸುತ್ತವೆ.

ಕುದಿಯುವ ಪಾಯಸಕ್ಕೆ ಕೈ ಹಾಕಿ ಹುಲಿಗೆಮ್ಮನಿಗೆ ನೈವೇದ್ಯ ಕೋಡ್ತಾರೆ

ರಸ್ತೆ ಮೂಲಕ

ರಸ್ತೆ ಮೂಲಕ

PC: Pradeep717

ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 14 ಮತ್ತು ಗೋವಾ-ಮುಂಬೈ ಹೆದ್ದಾರಿ ಮುಂಬೈ ಅನ್ನು ಗಣಪತಿಪುಲೆಗೆ ಸಂಪರ್ಕಿಸುತ್ತವೆ. ಕಾರ್ / ಟ್ಯಾಕ್ಸಿ ಮೂಲಕ ಪ್ರಯಾಣಿಸುವವರಿಗೆ ಪ್ರಯಾಣವು ಸುಮಾರು 6 ರಿಂದ 7 ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ. ರಾಜ್ಯ ಸಾರಿಗೆ ಬಸ್ಸುಗಳು ಗಣಪತಿಪುಲೆ ಮತ್ತು ಹತ್ತಿರದ ನಗರಗಳಾದ ಮುಂಬೈ ಮತ್ತು ಪುಣೆ ನಡುವೆ ಚಲಿಸುತ್ತವೆ.

ಭಂಡಾರ್ಪುಲೆ ಬೀಚ್

ಭಂಡಾರ್ಪುಲೆ ಬೀಚ್

PC: Debjeet20

ಗಣಪತಿಪುಲೆ ಬಸ್ ನಿಲ್ದಾಣದಿಂದ 3.5 ಕಿ.ಮೀ ದೂರದಲ್ಲಿರುವ ಭಂಡಾರ್ಪುಲೆ ಮಹಾರಾಷ್ಟ್ರದ ಕೊಂಕಣ ಕರಾವಳಿಯಲ್ಲಿರುವ ಅತ್ಯಂತ ಸುಂದರ ಬೀಚ್ ಆಗಿದೆ. ಭಂಡರ್ಪೂಲೆಯಲ್ಲಿರುವ ಕಡಲತೀರವು ಗಣಪತಿಪುಲೆಗಿಂತ ಏಕಾಂತ ಮತ್ತು ಕಡಿಮೆ ಜನಸಂದಣಿಯನ್ನು ಹೊಂದಿದೆ. ಆದಾಗ್ಯೂ ಇಲ್ಲಿ ಸಮುದ್ರವು ಒರಟಾಗಿರುತ್ತದೆ ಮತ್ತು ಈಜುವುದಕ್ಕೆ ಸೂಕ್ತವಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more