Search
  • Follow NativePlanet
Share
» »ಬೆಂಗಳೂರಿನ - ಚುಂಚಿ ಜಲಪಾತಕ್ಕೆ -ಒಂದು ಭೇಟಿ

ಬೆಂಗಳೂರಿನ - ಚುಂಚಿ ಜಲಪಾತಕ್ಕೆ -ಒಂದು ಭೇಟಿ

ಭಾರತದಲ್ಲಿ ಬೆಂಗಳೂರು ಅತ್ಯಂತ ಮೋಜಿನ ಮತ್ತು ಸ್ನೇಹಿ ನಗರಗಳಲ್ಲಿ ಒಂದಾಗಿದೆ. ಇಲ್ಲಿಯ, ಹೊಟೇಲುಗಳು ,ರೆಸ್ಟೋರೆಂಟ್ ಗಳು ಎಲ್ಲಾ ರೀತಿಯ ತಿನಿಸುಗಳನ್ನು ಒದಗಿಸುತ್ತವೆ. ಇಲ್ಲಿರುವ ಉದ್ಯಾನವನಗಳು ಮತ್ತು ಸರೋವರಗಳು ಹಸಿರು ಎಲ್ಲಾ ಸೇರಿ ನಗರವನ್ನು

By Manjula

ಭಾರತದಲ್ಲಿ ಬೆಂಗಳೂರು ಅತ್ಯಂತ ಮೋಜಿನ ಮತ್ತು ಸ್ನೇಹಿ ನಗರಗಳಲ್ಲಿ ಒಂದಾಗಿದೆ. ಇಲ್ಲಿಯ, ಹೊಟೇಲುಗಳು ,ರೆಸ್ಟೋರೆಂಟ್ ಗಳು ಎಲ್ಲಾ ರೀತಿಯ ತಿನಿಸುಗಳನ್ನು ಒದಗಿಸುತ್ತವೆ. ಇಲ್ಲಿರುವ ಉದ್ಯಾನವನಗಳು ಮತ್ತು ಸರೋವರಗಳು ಹಸಿರು ಎಲ್ಲಾ ಸೇರಿ ನಗರವನ್ನು ಹಸಿರುಯುಕ್ತಗೊಳಿಸಿದೆ.

ಇಲ್ಲಿ ಮಳೆ ಮತ್ತು ತಂಪಾದ ಉಷ್ಣಾಂಶವನ್ನು ಹೊಂದಿರುವ ಹವಾಮಾನವು ನಿರಂತರವಾಗಿ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುತ್ತದೆ. ಬೆಂಗಳೂರಿಗೆ ಎಲ್ಲರಿಗೂ ಏನನ್ನಾದರೂ ಒದಗಿಸುವ ಒಂದು ಸ್ಥಳವಾಗಿದೆ. ಅದಕ್ಕಿಂತ ಹೆಚ್ಚಾಗಿ ಈ ನಗರವು ನಿಮ್ಮ ದಣಿವು ನಿವಾರಿಸಲು ಸಹಾಯವಾಗುವಂತಹ ಸುಂದರ ತಾಣಗಳಿಂದ ಸುತ್ತುವರಿದಿದೆ.

PC: Mishrasasmita

ಬೆಂಗಳೂರಿನ - ಚುಂಚಿ ಜಲಪಾತಕ್ಕೆ -ಒಂದು ಭೇಟಿ

ಅದರಲ್ಲಿ ಒಂದು ಬೆಂಗಳೂರಿನಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಚುಂಚಿ ಫಾಲ್ಸ್ ಎಂದು ಕರೆಯಲ್ಪಡುವ ಸುಂದರ ಪ್ರದೇಶ ಬೆಂಗಳೂರಿನ ಹೊರವಲಯದಲ್ಲಿದೆ. ಇಲ್ಲಿಯ ಪ್ರದೇಶವು ನಯನ ಮನೋಹರವಾದುದಾಗಿದೆ. ವಾರಾಂತ್ಯದಲ್ಲಿ ನೀವು ಪ್ರಕೃತಿಯ ಮಡಿಲಲ್ಲಿ ಕಳೆಯಲು ಬಯಸಿದರೆ, ಚುಂಚಿ ಫಾಲ್ಸ್ ಗಿಂತಲೂ ಉತ್ತಮ ಸ್ಥಳ ಇನ್ನ್ನೊಂದುವಿಲ್ಲ. ಅಂತಹ ಒಂದು ವಾರಾಂತ್ಯದಲ್ಲಿ, ನನ್ನ ಸ್ನೇಹಿತರು ಮತ್ತು ನಾನು ಒಂದು ದಿನವನ್ನು ಹೊರಗೆ ಯಾವುದಾದರೂ ಸುಂದರವಾದ ದೃಶ್ಯ ಹೊಂದಿರುವ ಕಳೆಯಲು ನಿರ್ಧರಿಸಿ ತೆರಳಿದೆವು.

ಇದು ಒಂದು ವಾರಾಂತ್ಯದ ಕಾರಣ, ನಾವು ಸುಮಾರು 10 ಗಂಟೆಗೆ ಪ್ರಯಾಣವನ್ನು ಪ್ರಾರಂಭಿಸಿದೆವು. ಸ್ವಲ್ಪ ಸಮಯದ ನಂತರ ಎರಡು ಕಾರುಗಳಲ್ಲಿ ಹೊರಟೆವು, ಪ್ರವಾಸವು ಖಂಡಿತವಾಗಿ ವಿನೋದದಿಂದ ಕೂಡಿದ್ದಾಗಿರುವುದರಲ್ಲಿ ಸಂಶಯವಿಲ್ಲ. ಉಪಾಹಾರಕ್ಕಾಗಿ ಕನಕಪುರ ರಸ್ತೆಯಲ್ಲಿ ನಾವು ನಿಲ್ಲಿಸಿ, ಪ್ರಯಾಣ ಮುಂದುವರಿಸುವ ಮೊದಲು ಕೆಲವು ರುಚಿಕರವಾದ ಇಡ್ಲಿಗಳು ಮತ್ತು ದೋಸೆಗಳನ್ನು ತಿಂದೆವು.

ಕನಕಪುರ ರಸ್ತೆಯನ್ನು ಬಿಟ್ಟ ನಂತರ ನಿಮಗೆ ಎರಡು ರಸ್ತೆಗಳು ಸಿಗುತ್ತವೆ.ಅದರಲ್ಲಿ ಎಡಭಾಗವು ಚುಂಚಿ ಜಲಪಾತದ ಕಡೆ ಹೋಗುತ್ತದೆ. ಮತ್ತು ಬಲ ಭಾಗಕ್ಕೆ ಹೋದರೆ ಶಿವನಸಮುದ್ರಕ್ಕೆ ಕಡೆಗೆ ಹೋಗುತ್ತದೆ. ಅಂತಿಮವಾಗಿ ಸುಂದರವಾದ ಸ್ಥಳವನ್ನು ಚುಂಚಿ ಫಾಲ್ಸ್ ತಲುಪಲು ಸುಮಾರು 2 ಗಂಟೆಗಳ ಸಮಯ ಬೇಕಾಗುವುದು. ಪ್ರವಾಸಿಗರ ವಾಹನಗಳು ನಿಲ್ಲಿಸಲು ಮುಕ್ತ ಸ್ಥಳ ಲಭ್ಯವಿದೆ.

PC: Nagarjun Kandukuru

ಬೆಂಗಳೂರಿನ - ಚುಂಚಿ ಜಲಪಾತಕ್ಕೆ -ಒಂದು ಭೇಟಿ

ದೂರದಿಂದ, ನಾವು ಸುಮಾರು 330 ಅಡಿ ಎತ್ತರದಿಂದ ಬಿದ್ದ ಬಂಡೆಗಳ ಮಧ್ಯ ಭಾಗದಿಂದ ಹರಿವ ಒಂದು ದೊಡ್ಡ ಜಲಪಾತವವು ಭೂಮಿಯ ಕಡೆಗೆ ಹರಿಯುವುದನ್ನು ಕಾಣಬಹುದು. ಒಂದು ಕಡೆ ಕಲ್ಲಿನ ಭೂಪ್ರದೇಶ ಮತ್ತು ಇನ್ನೊಂದೆಡೆ ಹಚ್ಚ ಹಸಿರಿನ ಪ್ರದೇಶ ಎರಡೂ ಸೇರಿ, ಸುಂದರವಾದ ದೃಶ್ಯ ಕಾಣುತ್ತದೆ. ಇಲ್ಲಿ ಹರಿಯುವ ನೀರು ಅರ್ಕಾವತಿ ನದಿಗೆ ಸೇರುತ್ತದೆ.

ಪಾರ್ಕಿಂಗ್ ಸ್ಥಳದಿಂದ ಸ್ವಲ್ಪಮಟ್ಟಿನ ದೂರಕ್ಕೆ ನಡೆಯಬೇಕು ಅಲ್ಲಿ ನೀವು ಜಲಪಾತದ ಮೊದಲ ನೋಟವನ್ನು ನೋಡಬಹುದು. ನಂತರ 1-2 ಕಿಲೋಮೀಟರಿನ ನಡಿಗೆಯು ನಿಮ್ಮನ್ನು ಜಲಪಾತದ ಕೆಳಗೆ ಮತ್ತು ನದಿಯೊಳಗೆ ಕರೆದೊಯ್ಯುತ್ತದೆ. ಇಲ್ಲಿಯ ಕಲ್ಲುಗಳು ಜಾರುವುದರಿಂದ ಅತ್ಯಂತ ಅಪಾಯಕಾರಿಯಾಗಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ಉತ್ತಮ ಮಾರ್ಗವನ್ನು ತೋರಿಸುವುದಕ್ಕಾಗಿ ಕಡಿಮೆ ಶುಲ್ಕ ಕೊಟ್ಟು ಸ್ಥಳೀಯ ಮಾರ್ಗದರ್ಶಿಗಳನ್ನು ನೇಮಿಸಿ ಅವರಿಂದ ಸಲಹೆ ಪಡೆಯಬಹುದು. ಅವರು ನಿಮ್ಮನ್ನು ಅಂಕು ಡೊಂಕಾದ ಕಲ್ಲುಗಳಿಂದ ಆವರಿಸಲ್ಪಟ್ಟ ಮಾರ್ಗಗಳಲ್ಲಿ ಕರೆದುಕೊಂಡು ಹೋಗುತ್ತಾರೆ. ಇದು ನಿಮ್ಮನ್ನು ಸುರಕ್ಷಿತವಾಗಿ ಜಲಪಾತದ ಕೆಳಭಾಗಕ್ಕೆ ಕೊಂಡೊಯ್ಯುತ್ತದೆ.

PC: Nagarjun Kandukuru

ಬೆಂಗಳೂರಿನ - ಚುಂಚಿ ಜಲಪಾತಕ್ಕೆ -ಒಂದು ಭೇಟಿ

ನಾವು ಇಲ್ಲಿ ಸ್ವಲ್ಪ ಸಮಯವನ್ನು ಕಳೆದು, ಕೇವಲ ವಿಶ್ರಮಿಸಿ, ಅಂತಿಮವಾಗಿ ನಾವು ಸ್ಥಳದಿಂದ ಹೊರಬರುವ ಮೊದಲು ಸುತ್ತಲಿನ ಪ್ರಕೃತಿಯನ್ನು ಕಣ್ತುಂಬಿಕೊಂಡೆವು.ಮೇಲೆ ತಲುಪಿದಾಗ ಅದು ಮಧಾಹ್ನವಾಗಿತ್ತು.

ಇಲ್ಲಿ ಸಣ್ಣ ಪುಟ್ಟ ಮಾರಾಟಗಾರರು ಕತ್ತರಿಸಿದ ತಾಜಾ ಹಣ್ಣುಗಳು ಅಥವಾ ತರಕಾರಿಗಳನ್ನು ಉಪ್ಪು ಮತ್ತು ಮೆಣಸುಗಳಿಂದ ಬೆರೆಸಿ ಮಾರಾಟ ಮಾಡುತ್ತಾರೆ.

ಇದನ್ನು ತಿಂದು ತಾತ್ಕಾಲಿಕವಾಗಿ ನಮ್ಮ ಹಸಿವನ್ನು ನೀಗಿಸಿಕೊಂಡೆವು . ಇಲ್ಲಿಗೆ ತಿಂಡಿ ಮತ್ತು ನೀರಿನ ಬಾಟಲಿಗಳನ್ನು ಸಾಗಿಸಲು ಸಲಹೆ ನೀಡಲಾಗುತ್ತದೆ ಯಾಕೆಂದರೆ ಇದು ಜಲಪಾತದ ಸುತ್ತಲೂ ಲಭ್ಯವಿರುವುದಿಲ್ಲ.

ಚುಂಚಿ ಜಲಪಾತಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಆಗಸ್ಟ್ನಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ, ಇದು ನೀರಿನಿಂದ ಹರಿಯುವ ಸಮಯ. ಬೇಸಿಗೆಯಲ್ಲಿ ಜಲಪಾತವು ಅದರ ಕಡಿಮೆ ಮಟ್ಟದಲ್ಲಿರಬಹುದು. ರಸ್ತೆಯ ಮೂಲಕ ಇಲ್ಲಿಗೆ ಪ್ರವಾಸವನ್ನು ಮಾಡುವುದರಿಂದ ಬಹುಶಃ ಸಂತೋಷಕರ ಅನುಭವವನ್ನು ನೀವು ಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X