Search
  • Follow NativePlanet
Share
» »ಇಲ್ಲೆಲ್ಲಾ ನಿಮಗೆ ಪ್ರತಿದಿನ ಉಚಿತ ಊಟ ಸಿಗುತ್ತದೆ...ದುಡ್ಡು ಕೋಡೋ ಅಗತ್ಯವಿಲ್ಲ

ಇಲ್ಲೆಲ್ಲಾ ನಿಮಗೆ ಪ್ರತಿದಿನ ಉಚಿತ ಊಟ ಸಿಗುತ್ತದೆ...ದುಡ್ಡು ಕೋಡೋ ಅಗತ್ಯವಿಲ್ಲ

ಭಾರತದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಪರದಾಡುವವರು ಅನೇಕರು ಇದ್ದಾರೆ. ಹೀಗಿರುವಾಗ ಸಾಕಷ್ಟು ಅನ್ನವನ್ನು ಬಿಸಾಡುವವರೂ ನಮ್ಮ ದೇಶದಲ್ಲಿ ಇದ್ದಾರೆ. ಆ ಅನ್ನವನ್ನು ಬಿಸಾಡುವ ಬದಲು ಹಸಿದವರಿಗೆ ನೀಡಿದರೆ ಅದರಲ್ಲಿ ಸಿಗುವ ಸಂತೃಪ್ತಿ ಬೇರೆಯಾವುದರಲ್ಲೂ ಸಿಗದು. ಭಾರತದಲ್ಲಿ ಅನೇಕ ರೆಸ್ಟೋರೆಂಟ್‌ಗಳು ಇಂತಹ ಸಾಮಾಜಿಕ ಕಾರ್ಯಕ್ಕೆ ಕೈ ಹಾಕಿವೆ. ಉಚಿತ ಊಟ ನೀಡುವಂತಹ ಕೆಲಸವನ್ನು ಮಾಡುತ್ತಿದೆ. ಅಂತಹ ಯಾವೆಲ್ಲಾ ರೆಸ್ಟೋರೆಂಟ್‌ಗಳಿವೆ ಅನ್ನೋದನ್ನು ನೋಡೋಣ.

ಇಲ್ಲಿ ಪ್ರಾರ್ಥಿಸಿದರೆ ಶನಿದೆಸೆಯಿಂದ ಮುಕ್ತಿ ಸಿಗುತ್ತಂತೆ! ಇಲ್ಲಿ ಪ್ರಾರ್ಥಿಸಿದರೆ ಶನಿದೆಸೆಯಿಂದ ಮುಕ್ತಿ ಸಿಗುತ್ತಂತೆ!

ಜನಕೀಯ ಭಕ್ಷನಾಲಯ ಕೇರಳ

ಜನಕೀಯ ಭಕ್ಷನಾಲಯ ಕೇರಳ

ಭಾರತದಲ್ಲಿ ಒಂದು ವಿಶೇಷ ರೆಸ್ಟೋರೆಂಟ್ ಓಪನ್ ಆಗಿದೆ. ಇಲ್ಲಿ ಬಿಲ್‌ನ ಟೆನ್ಷನ್ ಇಲ್ಲದೆಯೇ ಎಷ್ಟು ಬೇಕೋ ಅಷ್ಟು ತಿನ್ನಬಹುದು. ಈ ವಿಶೇಷ ರೆಸ್ಟೋರೆಂಟ್ ಇರುವುದು ಕೇರಳದಲ್ಲಿ , ಕೇರಳದ ಅಲಪ್ಪಿಯಲ್ಲಿ ಜನಕೀಯ ಭಕ್ಷನಾಲಯ ಎನ್ನುವ ರೆಸ್ಟೋರೆಂಟ್ ಓಪನ್ ಆಗಿದೆ. ಇಲ್ಲಿ ನೀವು ಬಿಲ್‌ನ ಚಿಂತೆ ಬಿಟ್ಟು ಹೊಟ್ಟೆ ತುಂಬುವವರೆಗೂ ತಿನ್ನಬಹುದು. ಇಲ್ಲಿ ಉಚಿತವಾಗಿ ತಿನ್ನಬಹುದು. ಈ ರೆಸ್ಟೋರೆಂಟ್‌ನ್ನು ತೆರೆಯುವುದರ ಹಿಂದೆ ದೊಡ್ಡ ಕ್ರಾಂತಿಕಾರಿ ಉದ್ದೇಶವೇ ಇದೆ. ಇದೊಂದು ಜನತಾ ಭೋಜನಾಲಯವಾಗಿದೆ. ಇಲ್ಲಿ ಯಾರೂ ಬೇಕಾದರೂ ಬಂದು ಮೂರು ಹೊತ್ತು ಊಟ ಮಾಡಬಹುದು.

ಎಕ್ಸ್‌ಚೇಂಜ್ ಓವರ್ ,ದೆಹಲಿ

ಎಕ್ಸ್‌ಚೇಂಜ್ ಓವರ್ ,ದೆಹಲಿ

ದೆಹಲಿಯ ಉತ್ತರದ ಕ್ಯಾಂಪಸ್ ಪ್ರದೇಶದಲ್ಲಿರುವ ಈ ರೆಸ್ಟೋರೆಂಟ್ ಎಲ್ಲರಿಗೂ ಒಳ್ಳೆಯದು. XCO ಎಂದೂ ಕರೆಯಲ್ಪಡುವ ಈ ಸ್ಥಳವು ಕೆಲವೇ ಕೆಲವು ಆಸನಗಳ ಸೌಲಭ್ಯ ಹೊಂದಿದೆ, ಮತ್ತು ಯಾವಾಗಲೂ ಯುವ ಜನರೊಂದಿಗೆ ತುಂಬಿರುತ್ತದೆ. ಇಲ್ಲಿ ನೀವು ಉಚಿತ ಆಹಾರ ಪಡೆಯಬೇಕಾದರೆ ನಿಮ್ಮ ಯಾವುದಾದರೂ ಹಳೆಯ ಕಾದಂಬರಿಯನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು.

ಪಾಪಡಾವಾಡ, ಕೊಚ್ಚಿ

ಪಾಪಡಾವಾಡ, ಕೊಚ್ಚಿ

ಈ ರೆಸ್ಟೋರೆಂಟ್ ಇತರ ರೆಸ್ಟೋರೆಂಟ್‌ಗಿಂತ ಭಿನ್ನವಾಗಿದೆ. ಇಲ್ಲಿ ಇದರ ಮಾಲಿಕ ತನ್ನ ಶಾಪ್‌ನ ಹೊರಗಡೆ ಒಂದು ಫ್ರಿಡ್ಜ್‌ನ್ನು ಇಟ್ಟಿದ್ದಾರೆ. ಜನರಿಗೆ ತಮ್ಮಲ್ಲಿ ಉಳಿದ ಆಹಾರವನ್ನು ಈ ಫ್ರಿಡ್ಜ್‌ನಲ್ಲಿ ತಂದು ಇಡಲು ಹೇಳಿದ್ದಾರೆ. ಆ ಆಹಾರವು ಹಸಿದಿರುವ ಬಡವರನ್ನು ಸೇರುತ್ತದೆ. ಅನೇಕ ಮನೆಯವರು ತಮ್ಮ ಮನೆಯಲ್ಲಿ ಉಳಿದ ಆಹಾರವನ್ನು ಅಂದಂದೇ ಆ ಫ್ರಿಡ್ಜ್‌ನಲ್ಲಿ ಹಾಕಿ ಹೋಗುತ್ತಾರೆ. ಈ ಮೂಲಕ ಹಸಿದವರಿಗೆ ಉಚಿತವಾಗಿ ಆಹಾರ ಸಿಗುತ್ತದೆ.

ಗೋಲ್ಡನ್ ಟೆಂಪಲ್

ಗೋಲ್ಡನ್ ಟೆಂಪಲ್

ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್‌ ದಿನಕ್ಕೆ 1ಲಕ್ಷಕ್ಕೂ ಅಧಿಕ ಜನರಿಗೆ ಆಹಾರ ನೀಡುತ್ತದೆ. ಇದೇನು ರೆಸ್ಟೋರೆಂಟ್ ಅಲ್ಲ. ಬದಲಾಗಿ ದೇವಸ್ಥಾನ. ಈ ದೇವಸ್ಥಾನವು ಇಲ್ಲಿಗೆ ಬರುವ ಭಕ್ತರಿಗೆ ಪ್ರತಿದಿನ ಉಚಿತವಾಗಿ ಭಕ್ತರಿಗೆ ನೀಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X