Search
  • Follow NativePlanet
Share
» »ಬೆಣ್ಣೆ ದೋಸೆ ತಿನ್ನೋಕೆ ಧಾರವಾಡಕ್ಕೆ ಹೋದ್ರೆ ನೀರ್‌ ದೋಸೆ ತಿನ್ನೋಕೆ ಮಂಗ್ಳೂರುಗೆ ಬರ್ಲೇ ಬೇಕು

ಬೆಣ್ಣೆ ದೋಸೆ ತಿನ್ನೋಕೆ ಧಾರವಾಡಕ್ಕೆ ಹೋದ್ರೆ ನೀರ್‌ ದೋಸೆ ತಿನ್ನೋಕೆ ಮಂಗ್ಳೂರುಗೆ ಬರ್ಲೇ ಬೇಕು

ಕರ್ನಾಟಕ ರಾಜ್ಯದಲ್ಲಿ ಒಂದೊಂದು ಊರು ಒಂದೊಂದು ತಿಂಡಿಗೆ ಫೇಮಸ್ ಆಗಿದೆ. ಆ ತಿಂಡಿಯ ಮೂಲಕವೇ ಊರನ್ನು ಗುರುತಿಸುವಂತಾಗಿದೆ. ಅಲ್ಲದೆ ಆ ತಿಂಡಿ ಇಡೀ ದೇಶದಲ್ಲೇ ಪ್ರಸಿದ್ಧಿ ಹೊಂದಿದೆ. ನೀವು ಕರ್ನಾಟಕದ ಈ ಊರಿಗೆ ಭೇಟಿ ನೀಡಿದ್ದಲ್ಲಿ ಈ ತಿಂಡಿಗಳನ್ನು ತಿನ್ನೋದನ್ನು ಮರೆಯದಿರಿ.

ವಯಸ್ಸು 30 ಆಗೋ ಒಳಗೆ ಪ್ರತಿಯೊಬ್ಬರೂ ನೋಡಲೇ ಬೇಕಾದ ಸ್ಥಳಗಳಿವು...ವಯಸ್ಸು 30 ಆಗೋ ಒಳಗೆ ಪ್ರತಿಯೊಬ್ಬರೂ ನೋಡಲೇ ಬೇಕಾದ ಸ್ಥಳಗಳಿವು...

ಮೈಸೂರು ಪಾಕ್

ಮೈಸೂರು ಪಾಕ್

Pic credit: Wiki Commons
ಮೈಸೂರ್ ಪಾಕ್ ಬಹಳ ಹಿಂದಿನಿಂದಲೂ ಬಂದಿರುವ ಸಿಹಿ ತಿನಿಸಾಗಿದೆ. ದಂತಕಥೆಗಳ ಪ್ರಕಾರ ಮೈಸೂರು ಪಾಕ್ ಮೈಸೂರು ಪ್ಯಾಲೇಸ್‌ನ ಅಡುಗೆ ಮನೆಯಲ್ಲಿ ತಯಾರಾಗುತ್ತಿದ್ದಂತಹ ಸಿಹಿ ತಿಂಡಿಯಾಗಿದೆ. ಸಿಹಿ ಪಾಕದಿಂದ ತಯಾರಿಸಲಾಗುವ ಈ ಸಿಹಿಯು ಜನಸಾಮಾನ್ಯರಿಗೂ ದೊರೆಯುವಂತಾಗಿದೆ. ಹಾಗಾಗಿ ಇದಕ್ಕೆ ಮೈಸೂರು ಪಾಕ್ ಎಂದು ಕರೆಯುತ್ತಾರೆ.

ದಾವಣಗೆರೆ ಬೆಣ್ಣೆ ದೋಸೆ

ದಾವಣಗೆರೆ ಬೆಣ್ಣೆ ದೋಸೆ

Pic credit: Wiki Commons
ನೀವೆಲ್ಲಾ ಹೋಟೆಲ್‌ಗಳಲ್ಲಿ ಬೆಣ್ಣೆ ದೋಸೆ ತಿಂದಿರುವಿರಿ. ಆದರೆ ಆ ಬೆಣ್ಣೆ ದೋಸೆಯ ಮೂಲ ಯಾವುದೆಂಬುವುದು ನಿಮಗೆ ಗೊತ್ತಾ? ಬೆಣ್ಣೆ ದೋಸೆ ತಯಾರಾಗಿದ್ದು ದಾವಣಗೆರೆಯಲ್ಲಿ . ಇದು ನಾರ್ಮಲ್ ದೋಸೆಗಿಂತ ಸ್ವಲ್ಪ ಭಿನ್ನವಾಗಿರುತ್ತದೆ.

ಮದ್ದೂರು ವಡೆ

ಮದ್ದೂರು ವಡೆ

PC: Subhashish Panigrahi
ಇದೊಂದು ಸಂಜೆಯ ಚಹಾಕ್ಕೆ ತಿನ್ನುವಂತಹ ತಿಂಡಿಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಮದ್ದೂರು ಎನ್ನುವ ಸ್ಥಲವಿದೆ. ಈ ವಡೆಯ ಮೂಲ ಮದ್ದೂರು ಅಕ್ಕಿ ಹುಡಿಯಿಂದ ತಯಾರಿಸಲಾಗುವ ಈ ವಡೆ ತಿನ್ನಲೂ ರುಚಿಕರವಾಗಿದೆ. ಇದೀಗ ಮದ್ದೂರು ವಡೆ ಇಡೀ ದೇಶದಲ್ಲೇ ಫೇಮಸ್ ಆಗಿದೆ.

ಜೋಳದ ರೊಟ್ಟಿ

ಜೋಳದ ರೊಟ್ಟಿ

Pic credit: Wiki Commons
ರೊಟ್ಟಿಯನ್ನು ಹೆಚ್ಚಾಗಿ ಉತ್ತರ ಕರ್ನಾಟಕದ ಜನರು ತಿನ್ನುತ್ತಾರೆ. ಈ ಜೋಳದಿಂದ ತಯಾರಿಸಲಾಗುವ ರೊಟ್ಟಿಯ ಮೂಲ ಉತ್ತರ ಕರ್ನಾಟಕ. ಇಲ್ಲಿಯವರ ದಿನನಿತ್ಯದ ಆಹಾರ ಇದಾಗಿದೆ. ಎಣ್ಣೆಗಾಯಿ, ಮುಂತಾದ ಪದಾರ್ಥದ ಜೊತೆಗೆ ಇದನ್ನು ಸೇವಿಸಲಾಗುತ್ತದೆ.

ಧಾರವಾಡ ಪೇಡ

ಧಾರವಾಡ ಪೇಡ

Pic credit: Wiki Commons
ಧಾರವಾಡ ಪೇಡ ಇಡೀ ದೇಶದಲ್ಲೇ ಫೇಮಸ್ ಆಗಿದೆ. ಕಂದು ಬಣ್ಣದ ಈ ಲಡ್ಡು ಧಾರವಾಡದಲ್ಲಿ ತಯಾರಿಸಲಾಗಿದ್ದು. ಹಾಗಾಗಿ ಧಾರವಾಡ ಪೇಡ ಎಂದೇ ಪ್ರಸಿದ್ಧಿಯಾಗಿದೆ.

ಮಂಗಳೂರು ಗೋಳಿ ಬಜೆ

ಮಂಗಳೂರು ಗೋಳಿ ಬಜೆ

Pic credit: Wiki Commons
ಇದೂ ಕೂಡಾ ಸಂಜೆಯ ಚಹಾಕ್ಕೆ ಹೇಳಿಮಾಡಿಸಿದ ತಿಂಡಿಯಾಗಿದೆ. ಮಂಗಳೂರಿನಲ್ಲಿ ಸಿಗುವಂತಹ ಗೋಳಿ ಬಜೆ ಬೇರೆ ಎಲ್ಲೂ ಸಿಗೋದಿಲ್ಲ.

ಬಿಡದಿ ತಟ್ಟೆ ಇಡ್ಲಿ

ಬಿಡದಿ ತಟ್ಟೆ ಇಡ್ಲಿ

Pic credit: Wiki Commons
ತಟ್ಟೆ ಇಡ್ಲಿಗೆಂದೇ ಬಿಡದಿ ಫೇಮಸ್ ಆಗಿದೆ. ಬೆಂಗಳೂರು-ಮೈಸೂರು ಹೈವೆಯಲ್ಲಿರುವ ಬಿಡದಿಯಲ್ಲಿ ಇಡ್ಲಿ ಆಲೂಗಡ್ಡೆ ಸಾಗು ಹಾಗೂ ಕೆಂಪು ಚಟ್ನಿ ಜೊತೆ ನೀಡಲಾಗುತ್ತದೆ. ಬಿಡದಿಗೆ ಹೋದಲ್ಲಿ ತಟ್ಟೆ ಇಡ್ಲಿ ತಿನ್ನೋದನ್ನು ಮಾತ್ರ ಮರೀಬೇಡಿ.

ಗೋಕಾಕ್ ಕರ್ದಂಡ್

ಗೋಕಾಕ್ ಕರ್ದಂಡ್

PC: youtube
ಕರ್ದಂಡ್ ಅಂದರೆ ಒಂದು ರೀತಿಯ ಸಿಹಿ ತಿಂಡಿ, ಡ್ರೈಫ್ರೂಟ್ಸ್ ಎಲ್ಲಾ ಹಾಕಿ ಇದನ್ನು ಮಾಡಲಾಗಿರುತ್ತದೆ. ಇದರ ಬೆಲೆಯೂ ಅಷ್ಟೇ ದುಬಾರಿ. ಇದು ಗೋಕಾಕ್‌ನ ಪ್ರಸಿದ್ಧ ಸಿಹಿತಿಂಡಿಯಾಗಿದೆ. ಹಾಗಾಗಿ ಇದನ್ನು ಗೋಕಾಕ್ ಕರ್ದಂಡ್ ಎಂದೇ ಕರೆಯಲಾಗುತ್ತದೆ.

ನೀರ್‌ ದೋಸೆ

ನೀರ್‌ ದೋಸೆ


ಕರ್ನಾಟಕದ ಕರಾವಳಿ ಭಾಗದಲ್ಲಿ ಮಾತ್ರ ಈ ನೀರು ದೋಸೆ ಸಿಗುತ್ತದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಫೇಮಸ್ ಫುಡ್ ಆಗಿದೆ. ಕೋಳಿ ಸಾರು ಜೊತೆ ಬೆಸ್ಟ್ ಕಾಮೀನೇಶನ್. ನೀರು ದೋಸೆ ಎಂದರೆ ನೆನಪಾಗುವುದೇ ತುಳುನಾಡು.

Read more about: karnataka food travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X