Search
  • Follow NativePlanet
Share
» »ಈ ಊರಿಗೆಲ್ಲಾ ರೈಲಿನಲ್ಲಿ ಪ್ರಯಾಣಿಸೋದಕ್ಕಿಂತ ವಿಮಾನದಲ್ಲಿ ಪ್ರಯಾಣಿಸೋದೇ ಅಗ್ಗ

ಈ ಊರಿಗೆಲ್ಲಾ ರೈಲಿನಲ್ಲಿ ಪ್ರಯಾಣಿಸೋದಕ್ಕಿಂತ ವಿಮಾನದಲ್ಲಿ ಪ್ರಯಾಣಿಸೋದೇ ಅಗ್ಗ

ನಾವು ಬೇರೆ ರಾಜ್ಯಕ್ಕೆ ಸುತ್ತಾಡಬೇಕೆಂದು ಅಂದುಕೊಂಡಾಗ ಮೊದಲು ಬಸ್‌ ಟಿಕೇಟ್ ಅಥವಾ ರೈಲು ಟಿಕೇಟ್ ಅಥವಾ ವಿಮಾನದ ಟಿಕೇಟ್ ಮುಂಚಿತವಾಗಿಯೇ ಮಾಡಿಸುತ್ತೇವೆ. ಎಲ್ಲರಿಗೂ ವಿಮಾನದಲ್ಲಿ ಓಡಾಡಬೇಕೆಂಬ ಆಸೆ ಇರುತ್ತದೆ. ಆದರೆ ವಿಮಾನದ ಪ್ರಯಾಣ ದರ ಹೆಚ್ಚು ಇರೋದರಿಂದ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗೋದಿಲ್ಲ. ಹೀಗಿರುವಾಗ ನಾವು ಎಲ್ಲದಕ್ಕಿಂತಲೂ ಚೀಪ್ ಆಂಡ್ ಬೆಸ್ಟ್‌ ಅಂತಾ ರೈಲಿನ ಮೊರೆ ಹೋಗುತ್ತೇವೆ. ಬಸ್‌ ದರಕ್ಕಿಂತಲೂ ರೈಲಿನ ದರ ಅತ್ಯಂತ ಕಡಿಮೆ ಎಂದು ರೈಲಿನಲ್ಲಿ ಪ್ರಯಾಣ ಬೆಳೆಸುತ್ತೇವೆ.

ವಿಮಾನದ ದರವು ರೈಲಿಗಿಂತ ಕಡಿಮೆ

ವಿಮಾನದ ದರವು ರೈಲಿಗಿಂತ ಕಡಿಮೆ

ನಮ್ಮ ದೇಶದಲ್ಲಿ ಕೆಲವು ಊರಿಗೆ ಪ್ರಯಾಣಿಸುವುದಾದರೆ ವಿಮಾನದ ದರವು ರೈಲಿನ ದರಕ್ಕಿಂತಲೂ ಕಡಿಮೆ ಇರುತ್ತದೆ. ಆದರೆ ನಮ್ಮೆಲ್ಲರ ತಲೆಯಲ್ಲಿ ಎಲ್ಲದಕ್ಕಿಂತಲೂ ಅಧಿಕ ವಿಮಾನದ ದರ ಎಂದೇ ಇರುತ್ತದೆ . ಹಾಗಾಗಿ ನಾವು ವಿಮಾನದ ದರ ಎಷ್ಟಿದೆ ಎನ್ನುವುದನ್ನು ಕಂಡುಕೊಳ್ಳಲು ಹೋಗುವುದಿಲ್ಲ. ಆದರೆ ಕೆಲವೊಮ್ಮೆ ನಿಮ್ಮ ರೈಲಿನ ಪ್ರಯಾಣದರಕ್ಕಿಂತಲೂ ವಿಮಾನದ ಪ್ರಯಾಣದರ ಕಡಿಮೆ ಇರುತ್ತದೆ. ಇದರಿಂದ ನಿಮ್ಮ ಸಮಯವೂ ಉಳಿತಾಯವಾಗುತ್ತದೆ. ಜೊತೆಗೆ ಹಣವೂ ಉಳಿತಾಯವಾಗುತ್ತದೆ.

ಲಿಟಲ್ ಇಂಗ್ಲೆಂಡ್‌ಗೆ ಹೋಗಬೇಕಾದ್ರೆ ಪಾಸ್‌ಪೋರ್ಟ್, ವೀಸಾ ಬೇಕಾಗಿಲ್ಲಲಿಟಲ್ ಇಂಗ್ಲೆಂಡ್‌ಗೆ ಹೋಗಬೇಕಾದ್ರೆ ಪಾಸ್‌ಪೋರ್ಟ್, ವೀಸಾ ಬೇಕಾಗಿಲ್ಲ

4ತಿಂಗಳು ಮೊದಲೇ ಟಿಕೇಟ್ ಬುಕ್ ಮಾಡಿ

4ತಿಂಗಳು ಮೊದಲೇ ಟಿಕೇಟ್ ಬುಕ್ ಮಾಡಿ

ನಮ್ಮ ದೇಶದಲ್ಲಿ ಅಂತಹ 17 ಮಾರ್ಗಗಳಿವೆ. ಅಲ್ಲಿಗೆ ನೀವು ರೈಲಿನ ಬದಲಾಗಿ ಫ್ಲೈಟ್‌ನಲ್ಲಿ ಪ್ರಯಾಣ ಮಾಡಿದರೆ ನಿಮ್ಮ ಹಣ ಹಾಗೂ ಸಮಯ ಉಳಿತಾಯವಾಗುತ್ತದೆ. ಈ ರಸ್ತೆಯಲ್ಲಿ ನೀವು 120 ದಿನಕ್ಕೂ ಮೊದಲೇ ಟಿಕೇಟ್ ಬುಕ್ ಮಾಡಿದರೆ ನಿಮಗೆ ರೈಲಿಗಿಂತಲೂ ಕಡಿಮೆ ಬೆಲೆಗೆ ಫ್ಲೈಟ್ ಟಿಕೇಟ್ ಸಿಗುತ್ತದೆ. ಹಾಗಾದ್ರೆ ಅದು ಯಾವ ರೂಟ್ ಅನ್ನೋದನ್ನು ನೋಡೋಣ.

ದೆಹಲಿ-ಚೆನ್ನೈ

ದೆಹಲಿ-ಚೆನ್ನೈ

ದೆಹಲಿ-ಚೆನ್ನೈ ರಾಜಧಾನಿ ರೈಲಿನಲ್ಲಿ ಥರ್ಡ್ ಕ್ಲಾಸ್ ಎಸಿ ಟಿಕೇಟ್ 3760ರೂ. ಆದರೆ ಫ್ಲೈಟ್‌ನಲ್ಲಿ 3000ರೂ. ಆಗುತ್ತದೆ. ಅಂಡಮಾನ್ ಎಕ್ಸ್‌ಪ್ರೇಸ್‌ನಲ್ಲಿ ಥರ್ಡ್ ಕ್ಲಾಸ್ ಎಸಿ ಟಿಕೇಟ್ 2000 ರೂ. ನಲ್ಲಿ ಸಿಗುತ್ತದೆ. ಆದರೆ 44 ಗಂಟೆ ರೈಲಿನಲ್ಲಿ ಪ್ರಯಾಣಿಸಬೇಕಾಗುತ್ತದೆ. ಅದೇ ಫ್ಲೈಟ್‌ನಲ್ಲಿ ಬರೀ 2.50 ಗಂಟೆಯಲ್ಲಿ ತಲುಪುತ್ತೀರಿ.

ಆಗಸ್ಟ್‌ನಲ್ಲಿ ಯಾವೆಲ್ಲಾ ಹಬ್ಬ ಇದೆ, ಅದನ್ನು ಆಚರಿಸಲು ಎಲ್ಲಿಗೆ ಹೋದ್ರೆ ಬೆಸ್ಟ್ಆಗಸ್ಟ್‌ನಲ್ಲಿ ಯಾವೆಲ್ಲಾ ಹಬ್ಬ ಇದೆ, ಅದನ್ನು ಆಚರಿಸಲು ಎಲ್ಲಿಗೆ ಹೋದ್ರೆ ಬೆಸ್ಟ್

ದೆಹಲಿ-ಗೋವಾ

ದೆಹಲಿ-ಗೋವಾ

ದೆಹಲಿ-ಗೋವಾ ರೂಟ್‌ನ ಫ್ಲೈಟ್‌ ಟಿಕೇಟ್‌ನ ಬೆಲೆಯು ರೈಲಿನ ಥರ್ಡ್ ಕ್ಲಾಸ್ ಎಸಿ ಶ್ರೇಣಿಗಿಂತಲೂ ಕಡಿಮೆ ಇದೆ. ದೆಹಲಿ-ಗೋವಾದ ಆಗಸ್ಟ್‌ ತಿಂಗಳಿನ ಫ್ಲೈಟ್ ಟಿಕೇಟ್ ಸುಮಾರು 3400 ರೂ ಆಸುಪಾಸಾದರೆ. ರೈಲಿನಲ್ಲಿ ಥರ್ಡ್ ಕ್ಲಾಸ್ ಎಸಿ 3545 ರೂ. ಆಗುತ್ತದೆ. ಫಸ್ಟ್‌ ಕ್ಲಾಸ್‌ ಎಸಿಯಲ್ಲಿ 6175 ರೂ. ಆಗುತ್ತದೆ. ರೈಲಿನಲ್ಲಿ ನೀವು 27-38 ಗಂಟೆಯೊಳಗೆ ಗೋವ ತಲುಪಿದರೆ ವಿಮಾನದಲ್ಲಿ ಬರೀ 2.30 ಗಂಟೆಯಲ್ಲಿ ಗೋವಾ ತಲುಪುತ್ತೀರಾ.

ಮುಂಬೈ-ದೆಹಲಿ

ಮುಂಬೈ-ದೆಹಲಿ

ಮುಂಬೈ-ದೆಹಲಿಗೆ ಥರ್ಡ್ ಕ್ಲಾಸ್ ಎಸಿ ಟಿಕೇಟ್‌ 2550 ರೂ. ಆದರೆ ಆಗಸ್ಟ್‌ನ ಮೊದಲ ಎರಡು ವಾರಗಳಲ್ಲಿ ಫ್ಲೈಟ್‌ ಟಿಕೇಟ್ ಬರೀ 2300 ರೂ. ಗೆ ಸಿಗುತ್ತದೆ. ರೈಲಿನಲ್ಲಿ ದೆಹಲಿಯಿಂದ ಮುಂಬೈ ತಲುಪಲು 16ಗಂಟೆ ಬೇಕಾಗುತ್ತದೆ. ಆದರೆ ವಿಮಾನದಲ್ಲಿ ಕೇವಲ 2.10 ಗಂಟೆ ಸಾಕು.

ಇಲ್ಲೆಲ್ಲಾ ವಿಮಾನ ದರವೇ ಕಡಿಮೆ

ಇಲ್ಲೆಲ್ಲಾ ವಿಮಾನ ದರವೇ ಕಡಿಮೆ

ಇವಿಷ್ಟೇ ಅಲ್ಲದೆ ಹೈದರಾಬಾದ್‌ನಿಂದ ನವದೆಹಲಿ, ಬೆಂಗಳೂರಿನಿಂದ ನವದೆಹಲಿಗೆ , ಭುವನೇಶ್ವರದಿಂದ ನವದೆಹಲಿ ಹಾಗೂ ಕೊಲ್ಕತ್ತಾದಿಂದ ಬೆಂಗಳೂರಿಗೆ ಪ್ರಯಾಣಿಸುವುದಾದರೂ ರೈಲಿನ ಪ್ರಯಾಣದರಕ್ಕಿಂತ ವಿಮಾನದ ಪ್ರಯಾಣ ದರವೇ ಕಡಿಮೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X