Search
  • Follow NativePlanet
Share
» »ಈ ದೇವಸ್ಥಾನದಲ್ಲಿ ಸ್ಟ್ಯಾಂಪ್ ಪೇಪರ್‌ನಲ್ಲಿ ತಮ್ಮ ಬೇಡಿಕೆಯನ್ನು ಬರೆತ್ತಾರಂತೆ ಜನ

ಈ ದೇವಸ್ಥಾನದಲ್ಲಿ ಸ್ಟ್ಯಾಂಪ್ ಪೇಪರ್‌ನಲ್ಲಿ ತಮ್ಮ ಬೇಡಿಕೆಯನ್ನು ಬರೆತ್ತಾರಂತೆ ಜನ

ಈ ವರೆಗೂ ನೀವು ಜನರನ್ನು ದೇವಸ್ಥಾನಕ್ಕೆ ಹೋಗಿ ತಮ್ಮ ಬೇಡಿಕೆಯನ್ನು ಮುಂದಿಡುವುದನ್ನು ನೋಡಿರುವಿರಿ. ತಮ್ಮ ಮನೋಕಾಮನೆಯನ್ನು ಪೂರೈಸುವಂತೆ ಜನರು ವಿಭಿನ್ನ ರೀತಿಯಲ್ಲಿ ದೇವರನ್ನು ಬೇಡಿಕೊಳ್ಳುತ್ತಾರೆ. ಅಂತಹದ್ದೇ ಒಂದು ವಿಶೇಷ ಮಂದಿರದ ಬಗ್ಗೆ ನಾವಿಂದು ತಿಳಿಸಲಿದ್ದೇವೆ. ಈ ಮಂದಿರವು ಉತ್ತರಖಂಡದ ಅಲ್ಮೋಡಾ ಹಾಗೂ ನೈನಿತಾಲ್ ಜಿಲ್ಲೆಯಲ್ಲಿ ಇದೆ. ಅದುವೇ ಗೋಲೂ ದೇವತೆಯ ಮಂದಿರ.

ಚೀಟಿಯಿಂದ ತುಂಬಿರುವ ದೇವಾಲಯ

ಚೀಟಿಯಿಂದ ತುಂಬಿರುವ ದೇವಾಲಯ

PC: pramod nagher

ಗೋಲೂ ದೇವತೆಯು ಭಕ್ತರಿಗೆ ಶೀಘ್ರವೇ ನ್ಯಾಯ ಒದಗಿಸುವುದರಲ್ಲೂ ಪ್ರಸಿದ್ಧಿ ಹೊಂದಿದೆ. ಹಾಗಾಗಿ ಇಲ್ಲಿನ ದೇವರನ್ನು ನ್ಯಾಯ ದೇವತೆ ಎನ್ನಲಾಗುತ್ತದೆ. ನೈನಿತಾಲ್ ಜಿಲ್ಲೆಯ ಬಾವಲಿಯಲ್ಲಿರುವ ಗೋಲೂ ದೇವತಾ ಮಂದಿರವು ಚೀಟಿಗಳಿಂದ ತುಂಬಿರುವುದು ಕಾಣಸಿಗುತ್ತದೆ. ಇದನ್ನು ಗಂಟೆಗಳ ಮಂದಿರ ಎಂದೂ ಕರೆಯಲಾಗುತ್ತದೆ. ಇಲ್ಲಿ ಮನೋಕಾಮನೆ ಈಡೇರಿದರೆ ಗಂಟೆಯನ್ನೂ ಕಟ್ಟಲಾಗುತ್ತದೆ.

ಸೋಮನಾಥ ದೇವಾಲಯದ ಬಗ್ಗೆ ನಿಮಗೆ ತಿಳಿದಿಲ್ಲದೇ ಇರುವ ಸಂಗತಿಗಳಿವುಸೋಮನಾಥ ದೇವಾಲಯದ ಬಗ್ಗೆ ನಿಮಗೆ ತಿಳಿದಿಲ್ಲದೇ ಇರುವ ಸಂಗತಿಗಳಿವು

 ಸ್ಟ್ಯಾಂಪ್ ಪೇಪರ್

ಸ್ಟ್ಯಾಂಪ್ ಪೇಪರ್

ಈ ದೇವಾಲಯದ ವಿಶೇಷತೆ ಏನೆಂದರೆ ಇಲ್ಲಿ ಭಕ್ತರು ಚೀಟಿ ಬರೆಯುವ ಮೂಲಕ ತಮ್ಮ ಬೇಡಿಕೆಯನ್ನು ದೇವರ ಮುಂದಿಡುತ್ತಾರೆ. ಅದು ಕೂಡಾ ಸಾಮಾನ್ಯವಾದ ಚೀಟಿಯಲ್ಲ. ಭಕ್ತರಯ ಸ್ಟ್ಯಾಂಪ್ ಪೇಪರ್ ಮೂಲಕ ತಮ್ಮ ಬೇಡಿಕೆಯನ್ನು ಬರೆದು ದೇವರಿಗೆ ಸಮರ್ಪಿಸುತ್ತಾರೆ.

ಪ್ರೇಮ ವಿವಾಹ ಸುಖವಾಗಿರುತ್ತದೆ

ಪ್ರೇಮ ವಿವಾಹ ಸುಖವಾಗಿರುತ್ತದೆ

ಪ್ರೇಮ ವಿವಾಹಕ್ಕಾಗಿ ಯುವಕ-ಯುವತಿಯರು ಗೋಲು ದೇವತೆಯ ಮೊರೆ ಹೋಗುತ್ತಾರೆ. ಇಲ್ಲಿ ಯಾರ ವಿವಾಹವಾಗುತ್ತದೆಯೋ ಅವರ ಸಂಸಾರ ಸುಖವಾಗಿರುತ್ತದೆ ಎನ್ನಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ಪ್ರೇಮಿಗಳು ಇಲ್ಲಿಗೆ ಬಂದು ತಮ್ಮ ಬೇಡಿಕೆಯನ್ನು ಮುಂದಿಡುತ್ತಾರೆ.

ಗೋಲು ದೇವತೆಯ ಕಥೆ

ಗೋಲು ದೇವತೆಯ ಕಥೆ

PC: wikipedia

ಗೋಲೂ ಉತ್ತರಖಂಡದ ಕುಮಾಂವು ಕ್ಷೇತ್ರದ ಪ್ರಸಿದ್ಧ ಪೌರಾಣಿಕ ದೇವತೆ. ಅಲ್ಮೋಡಾದಲ್ಲಿರುವ ಗೋಲೂ ದೇವತೆ ಮಂದಿರವು ಬಿನ್‌ಸರ್ ವನ್ಯ ಜೀವಿ ಅಭಯಾರಣ್ಯದಿಂದ ನಾಲ್ಕು ಕಿ.ಮೀ ದೂರದಲ್ಲಿದೆ. ಹಾಗೂ ಅಲ್ಮೋಡಾದಿಂದ 10 ಕಿ.ಮಿ ದೂರದಲ್ಲಿದೆ. ಮೂಲ ರೂಪದಲ್ಲಿ ಗೋಲು ದೇವತೆಯನ್ನು ಬೈರವ ಶಿವನ ರೂಲದಲ್ಲಿ ಪೂಜಿಸಲಾಗುತ್ತದೆ.

ಬೆಂಗಳೂರಿನ ತೊಟ್ಟಿಕಲ್ಲು ಫಾಲ್ಸ್‌ ನೋಡಿದ್ದೀರಾ?ಬೆಂಗಳೂರಿನ ತೊಟ್ಟಿಕಲ್ಲು ಫಾಲ್ಸ್‌ ನೋಡಿದ್ದೀರಾ?

ವಿಭಿನ್ನ ಕಥೆ

ವಿಭಿನ್ನ ಕಥೆ

ಒಂದು ವಿಭಿನ್ನ ಕಥೆಯ ಪ್ರಕಾರ, ಗೋಲು ದೇವತೆಯು ಚಂದ್ ರಾಜ ಬಾಜ್‌ ಬಹಾದೂರ್‌ನ ಸೇನೆಯ ಜನರಲ್ ಆಗಿದ್ದನು. ಹಾಗೂ ಯಾವುದೇ ಯುದ್ಧದಲ್ಲೂ ವೀರತೆಯ್ನು ಪ್ರದರ್ಶಿಸುತ್ತಿದ್ದನು. ಹೀಗೆ ಯುದ್ಧದಲ್ಲಿ ಆತ ಮರಣಹೊಂದುತ್ತಾನೆ. ಹಾಗಾಗಿ ಅವರ ಸ್ಮರಣಾರ್ಥವಾಗಿ ಅಲ್ಮೋಡಾದಲ್ಲಿ ಚಿತಾಯಿ ಮಂದಿರವನ್ನು ಸ್ಥಾಪಿಸಲಾಯಿತು.

ಕುಲದೇವತೆಯನ್ನಾಗಿ ಪೂಜಿಸುತ್ತಾರೆ

ಕುಲದೇವತೆಯನ್ನಾಗಿ ಪೂಜಿಸುತ್ತಾರೆ

ಚಮೋಲಿಯಲ್ಲಿ ಗೋಲು ದೇವತೆಯನ್ನು ಕುಲದೇವತೆಯನ್ನಾಗಿ ಪೂಜಿಸಲಾಗುತ್ತದೆ. ಚಮೋಲಿಯಲ್ಲಿ ಒಂಭತ್ತು ದಿನಗಳ ಕಾಲ ಗೋಲು ದೇವತೆಯನ್ನು ವಿಶೇಷ ರೂಪದಲ್ಲಿ ಪೂಜಿಸಲಾಗುತ್ತದೆ. ಗೋಲು ದೇವತೆಯನ್ನು ಗೌರಿಲ್ ದೇವತೆ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X