Search
  • Follow NativePlanet
Share
» »ಮನಸೆಳೆವ ಕೇರಳದ ಅದ್ಭುತ ಕಾಡುಗಳು

ಮನಸೆಳೆವ ಕೇರಳದ ಅದ್ಭುತ ಕಾಡುಗಳು

By Vijay

ಪಶ್ಚಿಮ ಘಟ್ಟಗಳ ಭವ್ಯ ವನಸಿರಿಯಿಂದ ಬಹುತೇಕವಾಗಿ ಆವರಿಸಿರುವ ಕೇರಳ ರಾಜ್ಯವು ಪ್ರಕೃತಿ ಪ್ರಿಯ ಪ್ರವಾಸಿಗರ ಪಾಲಿಗೆ ಸ್ವರ್ಗವೆಂದರೂ ತಪ್ಪಾಗಲಾರದು. ಕೇರಳದ ಅಕ್ಕ ಪಕ್ಕದಲ್ಲಿರುವ ಕರ್ನಾಟಕ, ತಮಿಳುನಾಡು ರಾಜ್ಯಗಳು ಮಾತ್ರವಲ್ಲದೆ ದೇಶದೆಲ್ಲೆಡೆಯಿಂದ ಪ್ರವಾಸಿಗರು, ಪ್ರಸನ್ನಗೊಳಿಸುವ ಅದ್ಭುತ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಈ ಸುಂದರ ಪುಟ್ಟ ರಾಜ್ಯಕ್ಕೆ ಭೇಟಿ ನೀಡುತ್ತಲೆ ಇರುತ್ತಾರೆ.

ಉಚಿತ ಕೂಪನ್ : ಯಾತ್ರಾ ಮೂಲಕ ಹೋಟೆಲ್ ಬುಕ್ಕಿಂಗ್ ಮೇಲೆ 50% + 30% ರಷ್ಟು ಕಡಿತ ಪಡೆಯಿರಿ

ಕೇರಳದಲ್ಲಿ ಸಾಕಷ್ಟು ಜೀವ ವೈವಿಧ್ಯವುಳ್ಳ ಹಲವಾರು ಕಾಡುಗಳು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ. ರಾಜ್ಯದ ಪಶ್ಚಿಮ ಭಾಗವು ಅರಬ್ಬಿ ಸಮುದ್ರದಿಂದ ಕಂಗೊಳಿಸಿದರೆ ಇನ್ನುಳಿದ ಭಾಗವು ಅಪ್ಪಟ ವನಸಿರಿಯ ಅದ್ಭುತ ಕಾಡು, ಮೇಡು ಪ್ರದೇಶಗಳ ಅಗಾಧ ಸೊಬಗಿನಿಂದ ಚುಂಬಕದಂತೆ ಆಕರ್ಷಿಸುತ್ತದೆ. ದೀರ್ಘ ರಜಾ ಸಮಯವನ್ನು ಅದ್ಭುತವಾಗಿ ಸದುಪಯೋಗಪಡಿಸಿಕೊಳ್ಳಲು ಕೇರಳವೂ ಸಹ ಒಂದು ಉತ್ತಮ ಆಯ್ಕೆಯಾಗಿದೆ.

ವಿಶೇಷ ಲೇಖನ : ವೈವಿಧ್ಯಮಯ ವಯನಾಡ್ ವನ್ಯಜೀವಿ ಧಾಮ

ಪ್ರಸ್ತುತ ಲೇಖನವು ಕೇರಳ ರಾಜ್ಯದಲ್ಲಿ ಕಂಡುಬರುವ ಅಥವಾ ಭೇಟಿ ನೀಡಬಹುದಾದ ಕೆಲ ಪ್ರಮುಖ ಅರಣ್ಯ ಪ್ರದೇಶಗಳ ಕುರಿತು ತಿಳಿಸುತ್ತದೆ. ಬರುತಿರುವ ರಜಾ ಕಾಲಕ್ಕೆ ದೀರ್ಘವಾದ ಪ್ರವಾಸ ಯೋಜನೆಯೊಂದನ್ನು ಹಾಕಿ ಇಲ್ಲಿ ತಿಳಿಸಲಾಗಿರುವ ಯಾವುದಾದರೊಂದು ಅರಣ್ಯ ತಾಣಕ್ಕೆ ಭೇಟಿ ನೀಡಿ ಅಲ್ಪ ಕಾಲವಾದರೂ ಸರಿ ಪ್ರಕೃತಿಯೊಡನೆ ಬೆರೆತು ನಿಮ್ಮೆಲ್ಲ ಒತ್ತಡಗಳನ್ನು ಮರೆಯಿರಿ ಹಾಗೂ ಮರಳಿ ಜೀವನೋತ್ಸಾಹ ಪಡೆಯಿರಿ.

ವಿಶೇಷ ಲೇಖನಗಳು : ಮುನ್ನಾರ್ ಭೇಟಿಯ ಹಿಂದಿರುವ ರಹಸ್ಯ ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮಗಳು

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನ : ಕೇರಳದ ಪಾಲಕ್ಕಾಡ್ ಜಿಲ್ಲೆಯ ನೀಲ್ಗಿರಿ ಬೆಟ್ಟಗಳಲ್ಲಿ ಸೈಲೆಂಟ್ ವ್ಯಾಲಿ ಎಂಬ ಹೆಸರಿನ ರಾಷ್ಟ್ರೀಯ ಉದ್ಯಾನವಿದೆ. ಕನ್ನಡದಲ್ಲಿ ಈ ಉದ್ಯಾನದ ಹೆಸರು ಅಕ್ಷರಶಃ "ಶಾಂತ ಕಣಿವೆ" ಎಂದು ಅರ್ಥ ನೀಡುತ್ತದೆ ಹಾಗೂ ಹೆಸರಿಗೆ ತಕ್ಕ ಹಾಗೆಯೆ ಈ ಉದ್ಯಾನವು ಶಾಂತ ಹಾಗೂ ಮನಮೋಹಿತಗೊಳಿಸುವ ವಾತಾವರಣದಿಂದ ಕೂಡಿದೆ. ಇದೊಂದು ನಿತ್ಯ ಹರಿದ್ವರ್ಣದ ಕಾಡಾಗಿದ್ದು ಯಾವುದೆ ರೀತಿಯ ತೊಂದರೆಗಳಿಗೆ ಒಳಗಾಗಿಲ್ಲ.

ಚಿತ್ರಕೃಪೆ: NIHAL JABIN

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಸ್ಥಳೀಯವಾಗಿ ಅಂದರೆ ಮಲಯಾಳಂ ಭಾಷೆಯಲ್ಲಿ ಈ ಅರಣ್ಯವು ಸೈರಂಧ್ರಿವನಂ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಸ್ಥಳ ಪುರಾಣದ ಪ್ರಕಾರ ಹಿಂದೆ ಪಾಂಡವರು ವನವಾಸ ಅನುಭವಿಸುತ್ತಿದ್ದಾಗ ದ್ರೌಪದಿಯು ರಾಣಿ ಸುದೇಶ್ನಾಳ ಸಹಾಯಕಿ ಸೈರಂಧ್ರಿಯ ವೇಷಧರಿಸಿ ಅಲೆದಾಡುತ್ತ ಕೊನೆಗೆ ಈ ಸ್ಥಳದಲ್ಲಿ ವಿಶ್ರಮಿಸಿದರು. ಅದರಂತೆ ಈ ವನಕ್ಕೆ ಸೈರಿಂಧ್ರಿವನಂ ಎಂಬ ಹೆಸರು ಬಂದಿತು. ಅಲ್ಲದೆ ಕುಂತಿಯ ಕಾರಣದಿಂದ ಇಲ್ಲಿರುವ ಒಂದು ನದಿಗೆ ಕುಂತಿಪುಳ ಎಂಬ ಹೆಸರೂ ಬಂದಿತು. ಕುಂತಿಪುಳಕ್ಕೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ.

ಚಿತ್ರಕೃಪೆ: Cj.samson

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಕುಂತಿಪುಳ ನದಿಯು ಕಾಡಿನ ಬಹುತೇಕ 15 ಕಿ.ಮೀ ಉದ್ದವನ್ನು ಆಕ್ರಮಿಸಿದ್ದು ಕೊನೆಗೆ ಭರತಪುಳ ಎಂಬ ನದಿಗೆ ಸೇರ್ಪಡೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಕುಂತಿಪುಳ ನದಿಯು ರಾಷ್ಟ್ರೀಯ ಉದ್ಯಾನವನ್ನು 2 ಕಿ.ಮೀ ಹಾಗೂ 5 ಕಿ.ಮೀ ಅಗಲವುಳ್ಳ ಎರಡು ಭಾಗಗಳಲ್ಲಿ ವಿಭಾಗಿಸುತ್ತದೆ. ಈ ಅದ್ಭುತ ಕಾಡು ಪ್ರದೇಶವು ಮುದುಗರ್ ಹಾಗೂ ಇರುಳಾ ಎಂಬ ಎರಡು ಬುಡಕಟ್ಟು ಜನಾಂಗದವರ ಆವಾಸ ಸ್ಥಾನವಾಗಿದೆ. ಬುಡಕಟ್ಟು ಜನಾಂಗದ ಒಬ್ಬ ನಾಯಕ.

ಚಿತ್ರಕೃಪೆ: Marcus334

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಇನ್ನೂ ಜೀವ ಸಂಕುಲದೆಡೆ ಬಂದರೆ ಇಲ್ಲಿ ಸಾಕಷ್ಟು ವೈವಿಧ್ಯಮಯ ಜೀವಲೋಕವನ್ನು ಕಾಣಬಹುದು. ಅದರಲ್ಲೂ ವಿಶೇಷವಾಗಿ ಈ ಕಾಡು ಹೆಚ್ಚಿನ ಸಂಖ್ಯೆಯಲ್ಲಿರುವ ಸಿಂಹ ಬಾಲದ ಕೋತಿಗಳಿಗೆ ಆವಾಸ ಸ್ಥಾನವಾಗಿದೆ. ಒಟ್ಟಾರೆ ಇಲ್ಲಿ 34 ಬಗೆಯ ಸಸ್ತನಿ ಪ್ರಭೇದಗಳಿರುವುದನ್ನು ದಾಖಲಿಸಲಾಗಿದೆ.

ಚಿತ್ರಕೃಪೆ: Nagesh Jayaraman

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ನೀಲ್ಗಿರಿ ಪಾರಿವಾಳಗಳೂ ಸಹ ಈ ಉದ್ಯಾನದಲ್ಲಿ ಕಂಡುಬರುತ್ತವೆ. ಪ್ರಮುಖವಾಗಿ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಕಂಡುಬರುವ ಈ ಕಾಡು ಪಾರಿವಾಳಗಳು ನಗರದಲ್ಲಿರುವ ಪಾರಿವಾಳಗಳಿಗಿಂತ ಆಕಾರದಲ್ಲಿ ದೊಡ್ಡದಾಗಿರುತ್ತವೆ ಹಾಗೂ ನೋಡಲು ಸಾಕಷ್ಟು ಆಕರ್ಷಕವಾಗಿರುತ್ತವೆ.

ಚಿತ್ರಕೃಪೆ: N A Nazeer

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಮಲಬಾರ್ ಪ್ಯಾರಾಕೀಟ್ : ಮಲಬಾರ್ ಗಿಣಿಗಳು ಇಲ್ಲಿ ಕಂಡುಬರುವ ಅದ್ಭುತ ಹಕ್ಕಿಗಳು. ಇವು ಈ ಒಂದು ಕಾಡಿಗೆ ಮಾತ್ರ ಸೀಮಿತವಾಗಿರುವುದನ್ನು ಗಮನಿಸಬಹುದು. ಉದ್ದನೆಯ ಬಾಲವುಳ್ಳ ಈ ಸುಂದರ ಬಣ್ಣದ ಗಿಣಿಗಳು ಚಿಲಿಪಿಲಿ ಗುಟ್ಟುತ್ತ ಕಾಡಿನ ಸಂದು ಸಂದುಗಳಲ್ಲಿ ವೇಗವಾಗಿ ಹಾರಾಡುತ್ತವೆ.

ಚಿತ್ರಕೃಪೆ: Srikaanth Sekar

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಮಲಬಾರ್ ಗ್ರೇ ಹಾರ್ನ್ ಬಿಲ್, ಇಲ್ಲಿ ಕಂಡುಬರುವ ಮತ್ತೊಂದು ವಿಶಿಷ್ಟ ಹಕ್ಕಿ. ದೊಡ್ಡದಾದ ಚುಂಚುಳ್ಳ ಈ ಹಕ್ಕಿಗಳು ಸಾಮಾನ್ಯವಾಗಿ ಬಗೆ ಬಗೆಯ ಧ್ವನಿಗಳಲ್ಲಿ ಕೂಗುತ್ತವೆ. ಒಮ್ಮೆ ಜೋರಾಗಿ ಕೂಗಿಕೊಂಡರೆ ಕೆಲವೊಮ್ಮೆ ದೊಡ್ಡದಾಗಿ ನಗುತ್ತಿರುವಂತೆ ಕೂಗುತ್ತವೆ. ಕಾಡಿನಲ್ಲಿ ಹಾಯಾಗಿ ಅಲೆಯುತ್ತ ಈ ಪಕ್ಷಿ ವೀಕ್ಷಣೆ ಮಾಡುವುದೆ ಪ್ರವಾಸಿಗರಿಗೊಂದು ಚೆಂದದ ಅನುಭವವಾಗಿರುತ್ತದೆ.

ಚಿತ್ರಕೃಪೆ: Sankara Subramanian

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಸೈಲೆಂಟ್ ವ್ಯಾಲಿ ಕಾಡಿನಲ್ಲಿ ಕಂಡುಬರುವ ಅದ್ಭುತವಾದ ಮಲಬಾರ್ ಪಿಟ್ ವೈಪರ್ ಎಂಬ ಹೆಸರಿನ ಹಾವು.

ಚಿತ್ರಕೃಪೆ: Chinmayisk

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಸೈಲೆಂಟ್ ವ್ಯಾಲಿ ಕಾಡಿನಲ್ಲಿರುವ ಭವಾನಿಪುಳ ಎಂಬ ಒಂದು ಸಣ್ಣ ನೀರಿನ ತೊರೆ.

ಚಿತ್ರಕೃಪೆ: Sreejith K

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಸೈಲೆಂಟ್ ವ್ಯಾಲಿ ಕಾಡಿನಲ್ಲಿರುವ ಕರುವರಾ ಜಲಪಾತ.

ಚಿತ್ರಕೃಪೆ: നിരക്ഷരൻ

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಪೆರಿಯಾರ್ ರಾಷ್ಟ್ರೀಯ ಉದ್ಯಾನ : ಪೆರಿಯಾರ್ ವನ್ಯಜೀವಿ ಧಾಮವು ಒಂದು ರಕ್ಷಿತ ಅರಣ್ಯ ಪ್ರದೇಶವಾಗಿದ್ದು, ಕೇರಳದ ಇಡುಕ್ಕಿ ಹಾಗೂ ಪಥನಾಂತಿಟ್ಟ ಜಿಲ್ಲೆಗಳಲ್ಲಿ ಜಂಟಿಯಾಗಿ ಹರಡಿದೆ. ಇದನ್ನು ಪೆರಿಯಾರ್ ವನ್ಯಜೀವಿ ಧಾಮ ಅಥವಾ ತೆಕ್ಕಡಿ ಎಂತಲೂ ಕರೆಯಲಾಗುತ್ತದೆ.

ಚಿತ್ರಕೃಪೆ: Wouter Hagens

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ದಕ್ಷಿಣ ಭಾಗದ ಪಶ್ಚಿಮ ಘಟ್ಟಗಳಲ್ಲಿ ಹರಡಿರುವ ಏಲ ಮಲ (ಏಲಕ್ಕಿ ಬೆಟ್ಟ) ಹಾಗೂ ಪೆಂಡಾಲಂ ಬೆಟ್ಟಗಳ ಮೇಲೆ ಈ ರಾಷ್ಟ್ರೀಯ ಉದ್ಯಾನವು ವಿಶಾಲವಾಗಿ ಚಾಚಿದೆ. ಇದು ತಮಿಳುನಾಡಿನ ಗಡಿಯಲ್ಲಿಯೂ ಸಹ ಬರುತ್ತದೆ. ಏಲಕ್ಕಿ ಬೆಟ್ಟದ ಅದ್ಭುತ ದೃಶ್ಯ. ಇಲ್ಲಿ ಏಲಕ್ಕಿ ಗಿಡಗಳು ಸಾಕಷ್ಟಿರುವುದರಿಂದ ಇದಕ್ಕೆ ಏಲಕ್ಕಿ ಬೆಟ್ಟ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Marc Shandro

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಉಷ್ಣವಲಯದ ನಿತ್ಯ ಹರಿದ್ವರ್ಣ ಹಾಗೂ ತೇವಾಂಶದಿಂದ ಕೂಡಿರುವ ಕಾಡುಗಳ ಸಮ್ಮಿಲನವಾಗಿರುವ ಈ ತಾಣವು, ದಟ್ಟವಾದ ಹುಲ್ಲುಗಾವಲು ಹಾಗೂ ನೀಲ್ಗಿರಿ ಮರಗಳಿಗೆ ಆಶ್ರಯವಾಗಿದೆ. ಅಲ್ಲದೆ ಸುಂದರವಾದ ನದಿ ಹಾಗೂ ಕೆರೆಗೆ ಆವಾಸಸ್ಥಾನವಾಗಿದೆ.

ಚಿತ್ರಕೃಪೆ: Bernard Gagnon

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಗವಿ ತೆಕ್ಕಡಿ ಬಳಿಯಿರುವ ಮತ್ತೊಂದು ಸುಂದರ ತಾಣವಾಗಿದೆ. ಪೆರಿಯಾರ್ ರಕ್ಷಿತ ಹುಲಿ ಪ್ರದೇಶದ ಭಾಗವಾಗಿರುವ ಗವಿಯನ್ನು ವಂಡಿಪೆರಿಯಾರ್ ಮೂಲಕ ಸುಲಭವಾಗಿ ಕಾರಿನಲ್ಲಿ ತಲುಪಬಹುದು. ಇದು ಛಾಯಾಗ್ರಾಹಕರ ಪಾಲಿಗೆ ಸ್ವರ್ಗವೆಂದರೂ ತಪ್ಪಾಗಲಾರದು.

ಚಿತ್ರಕೃಪೆ: Arun Suresh

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ನಿಗದಿತ ಶುಲ್ಕ ಪಾವತಿಸುವ ಮೂಲಕ ಇಲ್ಲಿ ಹಗಲು ಹಾಗೂ ರಾತ್ರಿಗಳಲ್ಲಿ ತಂಗಲು ವ್ಯವಸ್ಥೆಯಿದೆ. ಅಲ್ಲದೆ ಕ್ಯಾಮೆರಾಗಳ ಮೂಲಕ ಸ್ಥಿರ ಚಿತ್ರ ಹಾಗೂ ಚಲನಚಿತ್ರ ಮಾಡಲು ಶುಲ್ಕ ಪಾವತಿಸಬೇಕಾಗುತ್ತದೆ.

ಚಿತ್ರಕೃಪೆ: Tootapi

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಟ್ರೆಕ್ ಮಾಡಲೂ ಸಹ ಪೆರಿಯಾರ್ ರಾಷ್ಟ್ರೀಯ ಉದ್ಯಾನವೂ ಬಲು ಜನಪ್ರೀಯವಾಗಿದೆ. ದಟ್ಟ ಹಸಿರಿನ ವನಸಿರಿಯಲ್ಲಿ ಸಾಗುವ ಟ್ರೆಕ್ ಮನಸ್ಸನ್ನು ಪ್ರಸನ್ನಗೊಳಿಸಿ ಸಾಕಷ್ಟು ಹುರುಪನ್ನು ತುಂಬುತ್ತದೆ. ಉದ್ಯಾನದ ಟ್ರೆಕ್ ಹೊರಡಲು ಬೇಸ್ (ಆಧಾರ) ಪಾಯಿಂಟ್.

ಚಿತ್ರಕೃಪೆ: McKay Savage

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ವಯನಾಡ್ ವನ್ಯಜೀವಿ ಧಾಮ : ಮೈಸೂರಿನಿಂದ ಸುಲ್ತಾನ್ ಬತೇರಿಗೆ ಹೋಗುವ ಮಾರ್ಗದಲ್ಲಿ ಮಂತ್ರಮುಗ್ಧಗೊಳಿಸುವಂತಹ ಒಂದು ಅಭಯಾರಣ್ಯ ಪ್ರದೇಶವು ನಿಮ್ಮನ್ನು ಸ್ವಾಗತಿಸುತ್ತದೆ. ಪಶ್ಚಿಮ ಘಟ್ಟಗಳ ಸುಂದರ ಹಾಗೂ ಅಷ್ಟೆ ದಟ್ಟವಾದ ಹಚ್ಚ ಹಸಿರಿನ ಮರಗಳಿಂದ ಕೂಡಿರುವ ಈ ಅಭಯಾರಣ್ಯವು ತನ್ನಲ್ಲಿರುವ ವೈವಿಧ್ಯಮಯ ಜೀವ ಜಂತುಗಳು ಹಾಗೂ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದುವೆ ವಯನಾಡ್ ವನ್ಯಜೀವಿ ಧಾಮ.

ಚಿತ್ರಕೃಪೆ: Nagesh Jayaraman

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಇದು ದಕ್ಷಿಣ ಭಾರತದಲ್ಲೆ ಜನಪ್ರಿಯ ವನ್ಯಜೀವಿ ಧಾಮವಾಗಿದ್ದು, ಕೇರಳದ ಎರಡನೆ ಪ್ರಮುಖ ವನ್ಯಜೀವಿ ಧಾಮವಾಗಿದೆ. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಇಲ್ಲಿನ ಜೀವ ಸಂಕುಲವನ್ನು ವೀಕ್ಷಿಸಲು ಆಗಮಿಸುತ್ತಿರುತ್ತಾರೆ. ಈ ಧಾಮದಲ್ಲಿ, ಜಿಂಕೆ, ಆನೆ, ಇಂಡಿಯನ್ ಬೈಸನ್, ಹುಲಿಯಂತಹ ಪ್ರಾಣಿಗಳು ಮತ್ತು ನವಿಲು, ಪೀ ಫಾವ್ಲ್ಸ್ ನಂತಹ ಪಕ್ಷಿಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Sarath Kuchi

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ನೀಲ್ಗಿರಿ ಜೈವಿಕ ಮಂಡಳದ ಭಾಗವಾಗಿರುವ ಈ ಧಾಮವು ಸುತ್ತಲು ಕರ್ನಾಟಕದ ನಾಗರಹೊಳೆ, ಬಂಡೀಪುರ ಅಭಯಾರಣ್ಯ ಹಾಗೂ ತಮಿಳುನಾಡಿನ ಮುದುಮಲೈ ಅಭಯಾರಣ್ಯ ಗಳಿಂದ ಸುತ್ತುವರೆದಿದೆ.

ಚಿತ್ರಕೃಪೆ: Sarath Kuchi

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಹೆಚ್ಚಿನ ಮಳೆಯನ್ನು ಪಡೆಯುವ ಈ ಧಾಮವು ವೈವಿಧ್ಯಮಯ ಪ್ರಾಣಿ ಪಕ್ಷಿಗಳು ಹಾಗೂ ವಿವಿಧ ಬಗೆಯ ಕೀಟಗಳಿಂದ ಸಂಪದ್ಭರಿತವಾಗಿದೆ. ಜೀವಶಾಸ್ತ್ರ ಇಷ್ಟಪಡುವ ಪ್ರವಾಸಿಗರಿಗೆ ಈ ಅಭಯಾರಣ್ಯವು ನೆಚ್ಚಿನ ತಾಣವಾಗುವುದರಲ್ಲಿ ಸಂಶಯವಿಲ್ಲ.

ಚಿತ್ರಕೃಪೆ: Sarath Kuchi

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಎರವಿಕುಲಂ ರಾಷ್ಟ್ರೀಯ ಉದ್ಯಾನವು 97 ಚ.ಕಿಮೀ ಗಳಷ್ಟು ವಿಶಾಲವಾಗಿ ಹರಡಿದ್ದು ಕೇರಳದ ಮೊದಲ ರಾಷ್ಟ್ರೀಯ ಉದ್ಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇರಳ ಅರಣ್ಯ ಇಲಾಖೆಯಿಂದ ಈ ವನ್ಯಜೀವಿಧಾಮವು ನಿರ್ವಹಿಸಲ್ಪಡುತ್ತದೆ. ರಾಷ್ಟ್ರೀಯ ಉದ್ಯಾನದಿಂದ ಕಂಡುಬರುವ ಆನಮುಡಿ ಶಿಖರದ ಅದ್ಭುತ ನೋಟ.

ಚಿತ್ರಕೃಪೆ: Arunguy2002

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಈ ಉದ್ಯಾನದಲ್ಲಿ ಎತ್ತರವಾಗಿ ಚಾಚಿರುವ ಅದ್ಭುತ ಬೆಟ್ಟಗಳ ಶೋಲಾ ಹುಲ್ಲು ಗಾವಲುಳ್ಳ ಬೆಟ್ಟ ಗುಡ್ಡಗಳ ಸಾಲುಗಳನ್ನು ನೋಡಬಹುದು. ಅಷ್ಟೆ ಏಕೆ ಭಾರತದಲ್ಲೆ ಹಿಮಾಲಯ ಪರ್ವತಗಳ ನಂತರ ದಕ್ಷಿಣದಲ್ಲಿ ಅತಿ ಎತ್ತರದ ಪರ್ವತ ಶ್ರೇಣಿಗಳನ್ನು ಇಲ್ಲಿ ಕಾಣಬಹುದು. ಅಲ್ಲದೆ ಇಲ್ಲಿ ಟ್ರೆಕ್ ಮಾಡಲೂ ಸಹ ಅದ್ಭುತ ಮಾರ್ಗಗಳಿವೆ. ಎರವಿಕುಲಂ ರಾಷ್ಟ್ರೀಯ ಉದ್ಯಾನದ ಒಂದು ಟ್ರೆಕ್ ಮಾರ್ಗ.

ಚಿತ್ರಕೃಪೆ: Arun Suresh

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಎರವಿಕುಲಂ ರಾಷ್ಟ್ರೀಯ ಉದ್ಯಾನದಲ್ಲಿರುವ ಲಕ್ಕೋಮ್ ಜಲಪಾತ.

ಚಿತ್ರಕೃಪೆ: Dhruvaraj S

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಪಾಂಪಾಡುಮ್ ಶೋಲಾ ಅರಣ್ಯ : ಕೇರಳದ ಇಡುಕ್ಕಿ ಜಿಲ್ಲೆಯಲ್ಲೆ ಇರುವ ಈ ರಾಷ್ಟ್ರೀಯ ಉದ್ಯಾನವು ರಾಜ್ಯದ ಅತಿ ಚಿಕ್ಕ ಉದ್ಯಾನವಾಗಿದೆ.

ಚಿತ್ರಕೃಪೆ: Varkey Parakkal

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಕೇರಳದ ಇಡುಕ್ಕಿ ಜಿಲ್ಲೆಯ ದೇವಿಕುಲಂ ತಾಲೂಕಿನ ಮರಯೂರ್ ಬಳಿಯಿರುವ ವನ್ಯಜೀವಿ ಧಾಮದ ಹೆಸರೆ ಚಿನ್ನಾರ್ ವನ್ಯಜೀವಿ ಧಾಮ. ಕೇರಳದ ರಕ್ಷಿತ ಪ್ರದೇಶಗಳ ಪೈಕಿ ಇದೂ ಸಹ ಒಂದು.

ಚಿತ್ರಕೃಪೆ: Marcus334

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಇದು ಪಶ್ಚಿಮ ಘಟ್ಟಗಳ ಮಳೆ ನೆರಳಿನ ಪ್ರದೇಶದಲ್ಲಿದ್ದು ವಾರ್ಷಿಕವಾಗಿ ಸರಾಸರಿ ಕೇವಲ 500 ಮಿ.ಮಿ ಮಳೆಯನ್ನು ಸುಮಾರು 48 ದಿನಗಳ ಕಾಲದವರೆಗೆ ಪಡೆಯುತ್ತದೆ.

ಚಿತ್ರಕೃಪೆ: nishad kaippally

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಚಿನ್ನಾರ್ ಅಭಯಾರಣ್ಯದಲ್ಲಿರುವ ಆಕರ್ಷಕ ತೂವನಂ ಜಲಪಾತ.

ಚಿತ್ರಕೃಪೆ: Ajith U

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಚಿನ್ನಾರ್ ಅಭಯಾರಣ್ಯದ ಒಂದು ಸುಂದರ ನೋಟ.

ಚಿತ್ರಕೃಪೆ: Kerala Tourism

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಬಲು ಅಪರೂಪದ ಅಲ್ಬಿನೊ ತಳಿಯ ಕಾಡೆಮ್ಮೆಗಳು ಚಿನ್ನಾರ್ ವನ್ಯಜೀವಿ ಧಾಮದಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: N. A. Naseer

ಕೇರಳದ ಅದ್ಭುತ ಕಾಡುಗಳು:

ಕೇರಳದ ಅದ್ಭುತ ಕಾಡುಗಳು:

ಕೇರಳದ ತಿರುವನಂತಪುರಂ ಬಳಿಯಿರುವ ನೆಯ್ಯಾರ್ ರಾಷ್ಟ್ರೀಯ ಉದ್ಯಾನವು ಪಶ್ಚಿಮ ಘಟ್ಟಗಳ ಸುಂದರ ವನಸಿರಿಯಲ್ಲಿ ನೆಲೆಸಿದ್ದು ಅದ್ಭುತ ಪ್ರವಾಸಿ ಆಕರ್ಷಣೆಯಾಗಿ ಪ್ರವಾಸಿಗರನ್ನು ಸೆಳೆಯುತ್ತದೆ. ಮಗ್ಗರ್ ಎಂಬ ಪ್ರಭೇದದ ಮೊಸಳೆಗಳಿಗೆ ಈ ರಕ್ಷಿತ ಕಾಡು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Kerala Tourism

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X