Search
  • Follow NativePlanet
Share
» »ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮಗಳಿವು

ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮಗಳಿವು

By Vijay

ವೈಜ್ಞಾನಿಕವಾಗಿ ಮನುಷ್ಯ ಸಂಗ ಜೀವಿ ಎಂದು ಹೇಳಲಾಗಿದೆ. ಆದರೆ ಇದು ಇಂದು ಕೇವಲ ಮನುಷ್ಯ ಮನುಷ್ಯರ ಮಧ್ಯದಲ್ಲಿ ಮಾತ್ರ ಅಸ್ತಿತ್ವದಲ್ಲಿಯೇನೋ ಎಂಬ ಭಾವ ಮೂಡದೆ ಇರಲಾರದು. ಏಕೆಂದರೆ ನಮ್ಮಂತೆಯೆ ತಮ್ಮಿಚ್ಛೆಯಂತೆ ಬದುಕಲು ಕಾಡಿನ ಎಲ್ಲ ಜೀವಿಗಳಿಗೂ ಹಕ್ಕಿದೆ. ಆದರೆ ಮನುಷ್ಯನ ಸ್ವಾರ್ಥಕ್ಕೆ ಅದೇಷ್ಟೊ ಪ್ರಾಣಿಗಳು ಬಲಿಯಾಗಿವೆ.

ಗೊಐಬಿಬೊ ಹೋಟೆಲ್ ಮತ್ತು ಫ್ಲೈಟ್ ಬುಕಿಂಗ್ ಮೇಲೆ 50% ರಷ್ಟು ಕಡಿತ!

ಈ ವಿಷಯವನ್ನು ಮನಗಂಡು ಪ್ರಾಣಿಗಳ ಸುರಕ್ಷತೆಗಾಗಿ ಇಂದು ಸಾಕಷ್ಟು ಕಾನೂನುಗಳನ್ನು ಜಾರಿಗೆ ತರುವುದಲ್ಲದೆ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನೂ ಸಹ ತೆಗೆದುಕೊಳ್ಳಲಾಗಿದೆ. ಇಂತಹ ಕೆಲವು ಕ್ರಮಗಳ ಪೈಕಿ ಪ್ರಮುಖವಾಗಿದೆ ವನ್ಯಜೀವಿ ಧಾಮಗಳು. ಅರಣ್ಯ ಇಲಾಖೆಯ ಸುಪರ್ದಿಗೆ ಒಳಪಡುವ ಈ ಧಾಮಗಳಲ್ಲಿ ಕಾಡಿನ ಸಕಲ ಜೀವರಾಶಿಗಳು ಮನುಷ್ಯನ ಆತಂಕವಿಲ್ಲದೆ ತಮ್ಮದೆ ಆದ ಸಹಜ ಜೀವನ ಶೈಲಿಯಲ್ಲಿ ಬದುಕುವುದನ್ನು ಕಾಣಬಹುದು.

ವಿಶೇಷ ಲೇಖನ : ದಾಂಡೇಲಿ ಎಂಬ ದಂಡಕಾರಣ್ಯ

ನಮ್ಮ ದೇಶದಲ್ಲಿ ಬಹುತೇಕ ಪ್ರತಿಯೊಂದು ರಾಜ್ಯದಲ್ಲೂ ಸಹ ಹಲವಾರು ವನ್ಯಜೀವಿ ಧಾಮಗಳಿರುವುದನ್ನು ಕಾಣಬಹುದು. ವಿಶೇಷವೆಂದರೆ ಈ ಧಾಮಗಳು ಪ್ರಾಣಿ ಪಕ್ಷಿಗಳಿಗೆ ಸುರಕ್ಷತೆಯನ್ನು ಒದಗಿಸುವುದೂ ಅಲ್ಲದೆ ಆಯಾ ರಾಜ್ಯಗಳ ಪ್ರವಾಸೋದ್ಯಮದ ಅಭಿವೃದ್ಧಿಗೂ ಸಹ ತಮ್ಮ ಕೊಡುಗೆ ನೀಡುತ್ತವೆ. ಪ್ರಕೃತಿ ಪ್ರಿಯರು, ಕಾಡು ಜೀವಿಗಳನ್ನು ನೋಡಲು ಇಷ್ಟ ಪಡುವ ಪ್ರವಾಸಿಗರು, ಅಷ್ಟೆ ಏಕೆ ಜೀವ ವಿಜ್ಞಾನಿಗಳು, ಸಂಶೋಧಕರು, ವಿದ್ಯಾರ್ಥಿಗಳು ಹೀಗೆ ಹಲವರು ವನ್ಯ ಜೀವಿ ಧಾಮಗಳಿಗೆ ಭೇಟಿ ನೀಡುತ್ತಲೆ ಇರುತ್ತಾರೆ.

ಉಪಯುಕ್ತ ಕೊಂಡಿಗಳು : ದಾಂಡೇಲಿ ಹೋಟೆಲ್ಸ್ ನಾಗರಹೊಳೆ ಹೋಟೆಲ್ಸ್ ಬಂಡೀಪುರ ಹೋಟೆಲ್ಸ್

ವಿಶೇಷ ಲೇಖನ : ನಾಗರಹೊಳೆ ಅಭಯಾರಣ್ಯ

ಕರ್ನಾಟಕದ ಅಭಯಾರಣ್ಯಗಳು:

ಕರ್ನಾಟಕದ ಅಭಯಾರಣ್ಯಗಳು:

ಪ್ರತಿ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕ ರಾಜ್ಯದಲ್ಲೂ ಸಹ ಸಾಕಷ್ಟು ವನ್ಯಜೀವಿ ಧಾಮಗಳಿವೆ. ಪ್ರಸ್ತುತ ಲೇಖನದ ಮೂಲಕ ಕರ್ನಾಟಕದಲ್ಲಿರುವ ಕೆಲ ಪ್ರಮುಖ ವನ್ಯಜೀವಿ ಧಾಮಗಳ ಕುರಿತು ತಿಳಿಯಿರಿ ಹಾಗೂ ಸಮಯಾವಕಾಶ ಸಿಕ್ಕರೆ ಈ ಧಾಮಗಳಿಗೊಮ್ಮೆ ಭೇಟಿ ನೀಡಿ ಕಾಡಿನ ಜೀವಿಗಳು ನಡೆಸುವ ಲವಲವಿಕೆಯ ಜೀವನದೊಂದಿಗೆ ಪ್ರಕೃತಿಯ ಸುಂದರತೆಯನ್ನೂ ಸಹ ಕಣ್ತುಂಬಿಕೊಳ್ಳಿ.

ಕರ್ನಾಟಕದ ಅಭಯಾರಣ್ಯಗಳು:

ಕರ್ನಾಟಕದ ಅಭಯಾರಣ್ಯಗಳು:

ಅಣಶಿ ರಾಷ್ಟ್ರೀಯ ಉದ್ಯಾನ : ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಈ ಅಭಯಾರಣ್ಯವು ಗೋವಾ ರಜ್ಯದ ಗಡಿ ಬಳಿ ಸ್ಥಿತವಿದೆ. ವಿಶೇಷವಾಗಿ ಬಂಗಾಳ ಹುಲಿಗಳು, ಕಪ್ಪು ಚಿರತೆ ಹಾಗೂ ಭಾರತೀಯ ಆನೆಗಳಿಗೆ ಆಶ್ರಯ ಒದಗಿಸಿರುವ ಈ ಧಾಮವು ವೈವಿಧ್ಯಮಯ ಸಸ್ಯ ಸಂಪತ್ತು ಹಾಗೂ ಕೆಲ ವಿಶಿಷ್ಟ ಔಷಧೀಯ ಗಿಡ ಮೂಲಿಕೆಗಳಿಗೆ ತವರಾಗಿದೆ. ಅಕ್ಟೋಬರ್ ನಿಂದ ಮೇ ವರೆಗಿನ ಸಮಯವು ಈ ಧಾಮಕ್ಕೆ ಭೇಟಿ ನೀಡಲು ಯೋಗ್ಯ ಸಮಯವಾಗಿದ್ದು, ಭೇಟಿ ನೀಡುವವರಿಗೆ ಇದು ಬೆಳಿಗ್ಗೆ 6 ಘಂಟೆಯಿಂದ ಸಂಜೆ 6 ಘಂಟೆಯವರೆಗೆ ತೆರೆದಿರುತ್ತದೆ.

ಚಿತ್ರಕೃಪೆ: Ms.Mulish

ಕರ್ನಾಟಕದ ಅಭಯಾರಣ್ಯಗಳು:

ಕರ್ನಾಟಕದ ಅಭಯಾರಣ್ಯಗಳು:

ಬಂಡೀಪುರ ಅಭಯಾರಣ್ಯ : ಬಂಡೀಪುರ ರಾಷ್ಟ್ರೀಯ ಉದ್ಯಾನವು ಪಶ್ಚಿಮ ಘಟ್ಟಗಳ ಭವ್ಯ ವನಸಿರಿಯಲ್ಲಿ ನೆಲೆಸಿದ್ದು ಮುದುಮಲೈ ಅಭಯಾರಣ್ಯ, ನಾಗರಹೊಳೆ ಹಾಗೂ ವಯನಾಡ್ ಅಭಯಾರಣ್ಯಗಳಿಂದ ಸುತ್ತುವರೆದಿದೆ. ಇವೆಲ್ಲವೂ ಸೇರಿ ಒಟ್ಟಾರೆಯಾಗಿ 874 ಚ.ಕಿ.ಮೀ ಗಳಷ್ಟು ವಿಸ್ತೀರ್ಣದಷ್ಟು ದಟ್ಟ ಹಸಿರಿನ ಜೈವಿಕ ಪರಿಸರ ಹೊಂದಿದ್ದು, ಭಾರತದಲ್ಲೆ ವಿಶಿಷ್ಟವಾದ "ನೀಲ್ಗಿರಿ ಜೀವಗೋಳ" ಅಥವಾ ಜೈವಿಕ ಮಂಡಲವನ್ನು ಸೃಷ್ಟಿಸಿದೆ.

ಚಿತ್ರಕೃಪೆ: Yathin S Krishnappa

ಕರ್ನಾಟಕದ ಅಭಯಾರಣ್ಯಗಳು:

ಕರ್ನಾಟಕದ ಅಭಯಾರಣ್ಯಗಳು:

ಬನ್ನೇರುಘಟ್ಟ ಅಭಯಾರಣ್ಯ : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ತಲುಪಲು ಹತ್ತಿರದಲ್ಲಿರುವ ಬಸ್ಸು ನಿಲ್ದಾಣ, ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಿರುವುದು ಬೆಂಗಳೂರಿನಲ್ಲೆ. ಬೆಂಗಳೂರಿನಿಂದ ಕೇವಲ 25 ಕಿ.ಮೀಗಳಷ್ಟು ದೂರದಲ್ಲಿರುವ ಈ ರಾಷ್ಟ್ರೀಯ ಉದ್ಯಾನವು ಮಂಗಳವಾರವೊಂದನ್ನು ಹೊರತುಪಡಿಸಿ ವಾರದ ಉಳಿದೆಲ್ಲ ದಿನ ಬೆಳಿಗ್ಗೆ 9.30 ಘಂಟೆಯಿಂದ ಸಂಜೆ 5 ಘಂಟೆಯವರೆಗೆ ತೆರೆದಿರುತ್ತದೆ. ಮೂಲತಃ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ್ನು ವನ್ಯಜೀವನವನ್ನು ರಕ್ಷಿಸಿ ಉಳಿಸುವ ದೃಷ್ಟಿಯಿಂದ 1971 ರಲ್ಲಿ ಸ್ಥಾಪಿಸಲಾಯಿತು. ನಂತರ 2002 ರಲ್ಲಿ ಈ ಬೃಹತ್ ಉದ್ಯಾನದಿಂದ ಒಂದು ಭಾಗವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನ ಎಂಬ ಪ್ರತ್ಯೇಕ ಸಂಗ್ರಹಾಲಯವನ್ನಾಗಿ ರಚಿಸಲಾಯಿತು. ಪ್ರಸ್ತುತ ಈ ಜೈವಿಕ ಉದ್ಯಾನವು ಬೆಂಗಳೂರಿನ ಅತಿ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Karthik Narayana

ಕರ್ನಾಟಕದ ಅಭಯಾರಣ್ಯಗಳು:

ಕರ್ನಾಟಕದ ಅಭಯಾರಣ್ಯಗಳು:

ಭದ್ರಾ ಅಭಯಾರಣ್ಯ : ಭದ್ರಾ ಅಭಯಾರಣ್ಯವು ವನ್ಯ ಸಂಪತ್ತಿನಿಂದ ಕಂಗೊಳಿಸುತ್ತ ಪ್ರವಾಸಿಗರನ್ನು ಚುಂಬಕದಂತೆ ತನ್ನೆಡೆ ಸೆಳೆಯುತ್ತದೆ. ಭದ್ರಾ ವನ್ಯಜೀವಿ ಧಾಮವು ಹಲವು ಜೀವ ರಾಶಿಗಳಿಂದ ಸಂಪದ್ಭರಿತವಾಗಿದೆ. ಈ ಅರಣ್ಯ ಭಾಗದಲ್ಲಿರುವ ಹೆಬ್ಬೆ ಗಿರಿಯು ಪ್ರದೇಶದ ಅತಿ ಎತ್ತರದ ಶಿಖರವಾಗಿದೆ. ಭದ್ರಾ ವನ್ಯಜೀವಿ ಧಾಮವು ಪ್ರಾಥಮಿಕವಾಗಿ ಎರಡು ಭಾಗಗಳಲ್ಲಿ ವಿಂಗಡನೆಗೊಂಡಿದೆ. ಒಂದು ಪಶ್ಚಿಮ ಭಾಗದ ಲಕ್ಕವಳ್ಳಿ-ಮುತ್ತೊಡಿ ವಿಭಾಗವಾಗಿದ್ದರೆ ಇನ್ನೊಂದು ಪೂರ್ವ ವಲಯದ ಬಾಬಾ ಬುಡನ್‍ಗಿರಿ ವಿಭಾಗವಾಗಿದೆ.

ಚಿತ್ರಕೃಪೆ: Subharnab Majumdar

ಕರ್ನಾಟಕದ ಅಭಯಾರಣ್ಯಗಳು:

ಕರ್ನಾಟಕದ ಅಭಯಾರಣ್ಯಗಳು:

ಬಿ ಆರ್ ಹಿಲ್ಸ್ ಅಭಯಾರಣ್ಯ : ಮೈಸೂರಿನಿಂದ ಸುಮಾರು 80 ಕಿ.ಮೀ ದೂರವಿರುವ ಇದು ತಮಿಳುನಾಡಿನ ಈರೋಡ್ ಜಿಲ್ಲೆಯೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಅಲ್ಲದೆ ಈ ರಕ್ಷಿತ ಅರಣ್ಯವನ್ನು ಡಿಸೆಂಬರ್ 2010 ರಲ್ಲಿ ಹುಲಿ ಮೀಸಲು ಪ್ರದೇಶವನ್ನಾಗಿ ಘೋಷಿಸಲಾಗಿದೆ. ಪಶ್ಚಿಮ ಘಟ್ಟದ ಪೂರ್ವ ತುದಿಯಲ್ಲಿ ನೆಲೆಸಿರುವ ಈ ಬೆಟ್ಟ ಶ್ರೇಣಿಯು ವೈವಿಧ್ಯಮಯ ಪ್ರಾಣಿ ಸಂಪತ್ತು ಹಾಗೂ ಸಸ್ಯ ಸಂಪತ್ತಿನಿಂದ ಕೂಡಿದ್ದು, ದಟ್ಟವಾದ ಗಿಡ ಮರಗಳು ಪ್ರದೇಶಕ್ಕೆ ಹಸಿರು ಹಾಸಿಗೆಯನ್ನು ಹೊದಿಸಿದ ಹಾಗೆ ಮಾಡಿವೆ.

ಚಿತ್ರಕೃಪೆ: shrikant rao

ಕರ್ನಾಟಕದ ಅಭಯಾರಣ್ಯಗಳು:

ಕರ್ನಾಟಕದ ಅಭಯಾರಣ್ಯಗಳು:

ಬ್ರಹ್ಮಗಿರಿ ಅಭಯಾರಣ್ಯ : ಕೊಡಗು ಜಿಲ್ಲೆಯಲ್ಲಿರುವ ಬ್ರಹ್ಮಗಿರಿ ಅಭಯಾರಣ್ಯವು ಪಶ್ಚಿಮ ಘಾಟ್ಟಗಳ ಒಂದು ಭಾಗವಾಗಿದೆ. ಬೆಂಗಳೂರಿನಿಂದ 200 ಹಾಗೂ ಕೊಡಗಿನಿಂದ 60 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಅಭಯಾರಣ್ಯವು ನಿತ್ಯ ಹರಿದ್ವರ್ಣ ಹಗೂ ಅರೆ ನಿತ್ಯ ಹರಿದ್ವರ್ಣ ಕಾಡುಗಳಿಂದ ಸಂಪದ್ಭರಿತವಾಗಿದ್ದು ವೈವಿಧ್ಯಮಯ ಜೀವ ಸಂಪತ್ತಿನಿಂದ ಕಂಗೊಳಿಸುತ್ತದೆ.

ಚಿತ್ರಕೃಪೆ: Bopannap

ಕರ್ನಾಟಕದ ಅಭಯಾರಣ್ಯಗಳು:

ಕರ್ನಾಟಕದ ಅಭಯಾರಣ್ಯಗಳು:

ಕಾವೇರಿ ಅಭಯಾರಣ್ಯ : ಕಾವೇರಿ ಅರಣ್ಯಧಾಮ ಎಂತಲೂ ಕರೆಯಲ್ಪಡುವ ಭೀಮೇಶ್ವರಿ ರಕ್ಷಿತ ಅರಣ್ಯವು ಮಂಡ್ಯ, ಚಾಮರಾಜನಗರ ಹಾಗೂ ರಾಮನಗರ ಹೀಗೆ ಮುರೂ ಜಿಲ್ಲೆಗಳಲ್ಲಿ ತನ್ನ ತೆಕ್ಕೆಯನ್ನು ಚಾಚಿದೆ. ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ ಮಂಡ್ಯ (60 ಕಿ.ಮೀ) ಹಾಗೂ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿದೆ. ಆಗಸ್ಟ್ ನಿಂದ ಫೆಬ್ರುವರಿ ಮಧ್ಯದವರೆಗಿನ ಸಮಯವು ಭೀಮೇಶ್ವರಿಗೆ ಭೇಟಿ ನೀಡಲು ಆದರ್ಶಮಯವಾಗಿದೆ. ಮೂಲತಃ ವಾಗಿ ಬೆಂಗಳೂರಿಗೆ ಹತ್ತಿರದಲ್ಲಿರುವ ಪ್ರವಾಸಿ ತಾಣಗಳಾದ ಶಿವನ ಸಮುದ್ರ ಜಲಪಾತ ಹಾಗೂ ಮೇಕೆದಾಟುಗಳ ಮಧ್ಯದಲ್ಲಿ ನೆಲೆಸಿರುವ ಭೀಮೇಶ್ವರಿ ಮೀನುಗಾರಿಕಾ ಶಿಬಿರಕ್ಕೆ ಪ್ರಖ್ಯಾತಿ ಪಡೆದಿದೆ.

ಚಿತ್ರಕೃಪೆ: Ashwin Kumar

ಕರ್ನಾಟಕದ ಅಭಯಾರಣ್ಯಗಳು:

ಕರ್ನಾಟಕದ ಅಭಯಾರಣ್ಯಗಳು:

ದಾಂಡೇಲಿ ಅಭಯಾರಣ್ಯ : ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ದಾಂಡೇಲಿ ಹಿಂದೆ ದಂಡಕಾರಣ್ಯವಿದ್ದ ಪ್ರದೇಶವಾಗಿತ್ತೆಂದು ಹೇಳಲಾಗುತ್ತದೆ. ಅಣಶಿ ಅಭಯಾರಣ್ಯದ ಪಕ್ಕದಲ್ಲೆ ಇರುವ ದಾಂಡೇಲಿ ಅಭಯಾರಣ್ಯವು ಸಾಕಷ್ಟು ವನ್ಯ ಸಮ್ಪತ್ತಿನಿಂದ ತುಂಬಿದೆ. ಇಲ್ಲಿ ಬಲು ಅಪರೂಪದ ಹಾಗೂ ವೈವಿಧ್ಯಮಯ ಪಕ್ಷಿಗಳನ್ನು ಕಾಣಬಹುದು.

ಚಿತ್ರಕೃಪೆ: Prajwalkm

ಕರ್ನಾಟಕದ ಅಭಯಾರಣ್ಯಗಳು:

ಕರ್ನಾಟಕದ ಅಭಯಾರಣ್ಯಗಳು:

ದಾರೋಜಿ ಕರಡಿ ಅಭಯಾರಣ್ಯ : ಸುಮಾರು 56 ಚ.ಕಿ.ಮೀ ಗಳಷ್ಟು ವಿಸ್ತಾರದಲ್ಲಿ ಹರಡಿರುವ ಈ ಅಭಯಾರಣ್ಯವು ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿದೆ. ಬಿಳಿಕಲ್ಲು ಮೀಸಲು ಅರಣ್ಯದ 5587.30 ಹೆಕ್ಟೇರ್ ಗಳಷ್ಟು ಪ್ರದೇಶವನ್ನು ಕರ್ನಾಟಕ ಸರ್ಕಾರವು 1994 ರಲ್ಲಿ ದಾರೋಜಿ ಕರಡಿ ಧಾಮವನ್ನಾಗಿ ಘೋಷಿಸಿತು. ಈ ಅಭಯ ಧಾಮವು ವಿಶೇಷವಾಗಿ ಕಪ್ಪು ಕರಡಿಗಳಿಗೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: L. Shyamal

ಕರ್ನಾಟಕದ ಅಭಯಾರಣ್ಯಗಳು:

ಕರ್ನಾಟಕದ ಅಭಯಾರಣ್ಯಗಳು:

ನಾಗರಹೊಳೆ ಅಭಯಾರಣ್ಯ : ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಎಂತಲು ಕರೆಯಲ್ಪಡುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ಕೊಡಗು ಹಾಗೂ ಸಾಂಸ್ಕೃತಿಕ ರಾಜಧಾನಿ ಎಂಬ ಖ್ಯಾತಿಯ ಮೈಸೂರು ಜಿಲ್ಲೆಗಳಲ್ಲಿ ಹರಡಿದೆ. ನಾಗರಹೊಳೆ ಉದ್ಯಾನವು ಸಾಕಷ್ಟು ದಟ್ಟವಾದ ಗಿಡ ಮರ, ಹಳ್ಳ ಕೊಳ್ಳ, ಜಲಪಾತ ಹಾಗೂ ವೈವಿಧಮಯ ಜೀವರಾಶಿಯಿಂದ ಕೂಡಿದ್ದು, ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Yathin S Krishnappa

ಕರ್ನಾಟಕದ ಅಭಯಾರಣ್ಯಗಳು:

ಕರ್ನಾಟಕದ ಅಭಯಾರಣ್ಯಗಳು:

ಕುದುರೆಮುಖ ಅಭಯಾರಣ್ಯ : ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯವು ಸಾಕಷ್ಟು ಸಂಶೋಧನೆಯ ನಂತರ 1987 ರಲ್ಲಿ ಅಧಿಕೃತವಾಗಿ ಪ್ರವರ್ಧಮಾನಕ್ಕೆ ಬಂದಿತು. ಈ ಅಭಯಾರಣ್ಯವು ಪಶ್ಚಿಮ ಕರಾವಳಿ ಭಾಗಗಳಲ್ಲಿ ದಟ್ಟನೆಯ ಕಾಡುಗಳಿಂದ ಆವೃತವಾಗಿದ್ದು ಪಶ್ಚಿಮ ಘಟ್ಟಗಳ ಎತ್ತರದ ಪ್ರದೇಶಗಳು ಶೋಲಾ ಅರಣ್ಯಗಳಿಂದ ಸಂಪದ್ಭರಿತವಾಗಿದೆ. ವೈವಿಧ್ಯಮಯ ವನ್ಯ ಜೀವಿ ಸಂಪತನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Karunakar Rayker

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X