Search
  • Follow NativePlanet
Share
» »ಭಾರತದಲ್ಲಿರುವ ಬೆರಗುಗೊಳಿಸುವ ಆಣೆಕಟ್ಟುಗಳು

ಭಾರತದಲ್ಲಿರುವ ಬೆರಗುಗೊಳಿಸುವ ಆಣೆಕಟ್ಟುಗಳು

By Vijay

ಭೂಮಿಯ ಬಹು ಭಾಗವು ನೀರಿನಿಂದ ಆವೃತವಾಗಿದ್ದರೂ ಮನುಷ್ಯನ ಬಳಕೆಗೆ ಯೋಗ್ಯವಾದ ತಾಜಾ ನೀರಿನ ಪ್ರಮಾಣ ಅತ್ಯಂತ ಕಡಿಮೆಯಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕುಡಿಯಲು ಅನುಕೂಲಕರವಾದ ಈ ಸಿಹಿ ನೀರಿನ ಮೂಲಗಳೆಂದರೆ ನದಿಗಳು, ಕೆರೆಗಳು, ತೊರೆಗಳು, ಹಳ್ಳ ಕೊಳ್ಳಗಳು ಹಾಗೂ ಅಂತರ್ಜಲದ ಬಾವಿಗಳು.

ಆದರೆ ಸಾಮಾನ್ಯವಾಗಿ ನದಿಗಳು ನೀರಾವರಿ ಹಾಗೂ ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿದ್ದು ಹರಿಯುತ್ತ ಕೊನೆಯದಾಗಿ ಸಮುದ್ರ ಸೇರುತ್ತವೆ. ಹೀಗೆ ನದಿಗಳ ನೀರು ಶೀಘ್ರವಾಗಿ ಸಮುದ್ರ ಸೇರುವ ಬದಲು ಅದನ್ನು ಒಂದೆಡೆ ಶೇಖರಿಸಿ ಅವಶ್ಯಕತೆಗಳಿಗನುಸಾರವಾಗಿ ಬಳಸಬೇಕೆಂಬ ಕಲ್ಪನೆ ಬಂದಿದ್ದೆ ತಡ ಆಣೆಕಟ್ಟುಗಳ ಪರಿಕಲ್ಪನೆ ಮೂಡಿತು. ಇಂದು ಭಾರತದಾದ್ಯಂತ ಹಲವಾರು ಆಣೆಕಟ್ಟುಗಳನ್ನು ಕಾಣಬಹುದಾಗಿದೆ.

ವಿಶೇಷ ಲೇಖನ : ಕೇರಳದ ಸುಂದರ ಜಲಾಶಯಗಳು

ಹಲವು ಆಣೆಕಟ್ಟುಗಳು ನೀರಾವರಿ, ಕುಡಿಯುವ ನೀರಿನ ಉದ್ದೇಶಗಳಿಗೆಂದು ನಿರ್ಮಾಣಗೊಂಡಿದ್ದರೆ ಇನ್ನೂ ಕೆಲವು ಜಲ ವಿದ್ಯುತ್ ಉತ್ಪಾದನೆಗೆಂದು ಪ್ರತ್ಯೇಕವಾಗಿ ನಿರ್ಮಿಸಲ್ಪಟ್ಟಿವೆ. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಭಾರತದಲ್ಲಿರುವ ಸಾಕಷ್ಟು ದೊಡ್ಡ ಹಾಗೂ ಸುಂದರ ಆಣೆಕಟ್ಟುಗಳು ಪ್ರವಾಸಿ ಆಕರ್ಷಣೆಗಳಾಗಿವೆ.

ಕೆಲವು ಆಣೆಕಟ್ಟುಗಳು ಹಿನ್ನೀರು ಹಾಗೂ ಸುಂದರವಾದ ಉದ್ಯಾನಗಳನ್ನು ಹೊಂದಿದ್ದು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ. ಪ್ರಸ್ತುತ ಲೇಖನದ ಮೂಲಕ ಭಾರತದಲ್ಲಿರುವ ಕೆಲವು ರೋಮಾಂಚನವನ್ನುಂಟು ಮಾಡುವ ದೊಡ್ಡ ಹಾಗೂ ಅದ್ಭುತವಾದ ಆಣೆಕಟ್ಟುಗಳ ಕುರಿತು ತಿಳಿಯಿರಿ.

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ತೆಹರಿ ಆಣೆಕಟ್ಟು : ಇದು ಭಾರತದ ಅತಿ ಎತ್ತರದ ಆಣೆಕಟ್ಟಾಗಿದೆ. ಉತ್ತರಾಖಂಡ ರಾಜ್ಯದ ತೆಹರಿ ಗಡ್ವಾಲ್ ಜಿಲ್ಲೆಯ ಪ್ರತಾಪನಗರದ ಬಳಿ ಭಾಗೀರತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. 855 ಅಡಿಗಳಷ್ಟು ಎತ್ತರ ಹಾಗೂ 1,886 ಅಡಿಗಳಷ್ಟು ಅಗಲವನ್ನು ಈ ಬೃಹತ್ ಆಣೆಕಟ್ಟು ಹೊಂದಿದೆ. ಜಲವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ಚಟುವಟಿಕೆಗಳಿಗಾಗಿ ಇದರ ನಿರ್ಮಾಣ ಮಾಡಲಾಗಿದೆ.

ಚಿತ್ರಕೃಪೆ: india-wris.nrsc.gov.in

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಇಡುಕ್ಕಿ ಆಣೆಕಟ್ಟು : ಈ ಆಣೆಕಟ್ಟು ಕಮಾನಿನಾಕಾರದಲ್ಲಿರುವುದು ವಿಶೇಷ. ಈ ರೀತಿಯ ಆಣೆಕಟ್ಟು ಭಾರತದಲ್ಲೆ ಪ್ರಪ್ರಥಮವಾಗಿದೆ. ಪೆರಿಯಾರ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಆರ್ಚ್ ಡ್ಯಾಮ್ ಇಡುಕ್ಕಿ ಜಿಲ್ಲೆಯ ಕುರವನಮಲ ಹಾಗೂ ಕುರಂತಿಮಲ ಎಂಬ ಎರಡು ಗುಡ್ಡಗಳ ಮಧ್ಯದಲ್ಲಿ ಸ್ಥಿತವಿದೆ. ಇದಕ್ಕೆ ಹತ್ತಿರದಲ್ಲಿರುವ ಪಟ್ಟಣವೆಂದರೆ ತೋಡುಪುಲೈ. ಜಲವಿದ್ಯುತ್ ಉತ್ಪಾದನೆಗೆಂದು ನಿರ್ಮಿಸಲಾಗಿರುವ ಈ ಆಣೆಕಟ್ಟೆಯ ಎತ್ತರ 167.68 ಮೀ.

ಚಿತ್ರಕೃಪೆ: india-wris.nrsc.gov.in

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾಕ್ರಾ ಆಣೆಕಟ್ಟು : ಇದೊಂದು "ಕಾಂಕ್ರೀಟ್ ಗ್ರ್ಯಾವಿಟಿ" ಶೈಲಿಯ ಆಣೆಕಟ್ಟಾಗಿದ್ದು ಇದನ್ನು ಹಿಮಾಚಲ ಪ್ರದೇಶ ರಾಜ್ಯದ ಬಿಲಾಸಪುರದಲ್ಲಿ ಸಟ್ಲೆಜ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಭಾಕ್ರಾ ಹಳ್ಳಿಯ ಬಳಿಯಿರುವ ಒಂದು ಕಂದಕಮಯ ಪ್ರದೇಶದಲ್ಲಿ ಈ ಆಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ. ಈ ಅದ್ಭುತ ವಿವಿಧೋದ್ದೇಶಗಳ ಆಣೆಕಟ್ಟು 226 ಮೀ. ಗಳಷ್ಟು ಎತ್ತರವನ್ನು ಹೊಂದಿದೆ. ಈ ಆಣೆಕಟ್ಟೆಯ ಕೆಳ ಮುಖದಲ್ಲಿ ಸುಮಾರು 15 ಕಿ.ಮೀ ಬಳಿಕ ನಾಂಗಲ್ ಎಂಬ ಸ್ಥಳವಿದ್ದು ಅಲ್ಲಿಯೂ ಸಹ ಒಂದು ಆಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ. ಈ ಎರಡು ಆಣೆಕಟ್ಟುಗಳನ್ನು ಒಟ್ಟಾರೆಯಾಗಿ ಭಾಕ್ರಾ-ನಾಂಗಲ್ ಆಣೆಕಟ್ಟು ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: india-wris.nrsc.gov.in

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಸರ್ದಾರ ಸರೋವರ ಆಣೆಕಟ್ಟು : ನರ್ಮದಾ ನದಿಯ ಮೇಲೆ ನಿರ್ಮಿಸಲು ಯೋಜಿಸಲಾಗಿರುವ ಮುವತ್ತು ಆಣೆಕಟ್ಟುಗಳ ಪೈಕಿ ಸರ್ದಾರ ಸರೋವರ ಈವರೆಗೂ ನಿರ್ಮಿಸಲಾದ ಅತಿ ದೊಡ್ಡದಾದ ಆಣೆಕಟ್ಟಾಗಿದೆ. ಈ ಆಣೆಕಟ್ಟು ಗುಜರಾತ್ ರಾಜ್ಯದ ತಾಪಿ ಜಿಲ್ಲೆಯ ನವಗ್ರಾಮ ಎಂಬಲ್ಲಿ ಸ್ಥಿತವಿದೆ. ಇದರ ಎತ್ತರ 535 ಅಡಿಗಳು ಹಾಗು ಉದ್ದ 1.2 ಕಿ.ಮೀಗಳು.

ಚಿತ್ರಕೃಪೆ: india-wris.nrsc.gov.in

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ನಾಗಾರ್ಜುನ ಸಾಗರ್ ಆಣೆಕಟ್ಟು: ಆಂಧ್ರದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ನಾಗಾರ್ಜುನ ಸಾಗರ್ ಆಣೆಕಟ್ಟು ಗಾರೆ ಕೆಲಸದ (ಮೇಸನ್ರಿ) ಜಗತ್ತಿನ ದೊಡ್ಡ ಆಣೆಕಟ್ಟುಗಳ ಪೈಕಿ ಒಂದಾಗಿದೆ. 490 ಅಡಿ ಎತ್ತರ ಹಾಗು 1.6 ಕಿ.ಮೀ ಉದ್ದವಿರುವ ಈ ಆಣೆಕಟ್ಟು 26 ಕ್ರಸ್ಟ್ ಗೇಟ್ ಗಳನ್ನು ಒಳಗೊಂಡಿದೆ.

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಹಿರಾಕುಡ್ ಆಣೆಕಟ್ಟು: ಬುಡಕಟ್ಟು ರಾಜ್ಯ ಒಡಿಶಾದ ಮಹಾನದಿಗೆ ನಿರ್ಮಿಸಲಾಗಿರುವ ಈ ಆಣೆಕಟ್ಟು ಜಗತ್ತಿನ ಅತಿ ಉದ್ದದ ಆಣೆಕಟ್ಟುಗಳ ಪೈಕಿ ಒಂದಾಗಿದೆ. ಒಟ್ಟಾರೆ 26 ಕಿ.ಮೀ ಗಳಷ್ಟು ಉದ್ದವಿರುವ ಈ ಆಣೆಕಟ್ಟು ಗಾಂಧಿ ಮೀನಾರ್ ಹಾಗು ನೆಹರು ಮೀನಾರ್ ಗಳೆಂಬ ಎರಡು ವೀಕ್ಷಣಾ ಗೋಪುರಗಳನ್ನು ಹೊಂದಿದೆ.

ಚಿತ್ರಕೃಪೆ: india-wris.nrsc.gov.in

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಶ್ರೀಶೈಲಂ ಆಣೆಕಟ್ಟು : ಹೌದು ಧಾರ್ಮಿಕ ಪ್ರಖ್ಯಾತಿಯ ಶ್ರೀಶೈಲಂ ಬಳಿ ಈ ಅದ್ಭುತ ಜಲವಿದ್ಯುತ್ ಉತ್ಪಾದನಾ ಆಣೆಕಟ್ಟನ್ನು ಕಾಣಬಹುದು. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಆಣೆಕಟ್ಟು ದೇಶದಲ್ಲೆ ಮೂರನೇಯ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಅನ್ನು ಉತ್ಪಾದಿಸುವ ಆಣೆಕಟ್ಟು ಎಂಬ ಖ್ಯಾತಿಗೆ ಒಳಗಾಗಿದೆ. ಇಲ್ಲಿ ಉತ್ಪಾದನೆಗೊಳ್ಳುವ ವಿದ್ಯುತ್ತಿನ ಒಟ್ಟು ಸಾಮರ್ಥ್ಯ 1670 ಮೆಗಾ ವಾಟ್ (MW). 476 ಅಡಿಗಳಷ್ಟು ಎತ್ತರ, 1680 ಅಡಿಗಳಷ್ಟು ಉದ್ದವನ್ನು ಹೊಂದಿರುವ ಈ ವಿಶಾಲಕಾಯದ ಆಣೆಕಟ್ಟು ನಲ್ಲಮಲ ಪರ್ವತ ಶ್ರೇಣಿಗಳಲ್ಲಿ ನಿರ್ಮಿತವಾಗಿದ್ದು ಒಂದು ಬದಿಯಲ್ಲಿ ತೆಲಂಗಾಣ ರಾಜ್ಯದ ಗಡಿ ಇನ್ನೊಂದು ಬದಿಯಲ್ಲಿ ಆಂಧ್ರಪ್ರದೇಶ ರಾಜ್ಯದ ಗಡಿಗಳಿಗೆ ಹೊಂದಿಕೊಂಡಂತೆ ನೆಲೆಸಿದೆ.

ಚಿತ್ರಕೃಪೆ: wikimedia

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ರಂಜೀತ್ ಸಾಗರ ಆಣೆಕಟ್ಟು : ಪಂಜಾಬ್ ರಾಜ್ಯದ ಪಠಾನಕೋಟ್ ಜಿಲ್ಲೆಯ ಪಠಾನಕೋಟ್ ನಗರದ ಬಳಿ ರಾವಿ ನದಿಗೆ ಅಡ್ಡಲಾಗಿ ಈ ವಿವಿಧೋದ್ದೇಶದ ಆಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ. 600 ಮೆಗಾ ವ್ಯಾಟ್ ನಷ್ಟು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿರುವ ಈ ಆಣೆಕಟ್ಟೆಯ ಎತ್ತರ 145 ಮೀ ಹಾಗೂ ಉದ್ದ 617 ಮೀ.

ಚಿತ್ರಕೃಪೆ: india-wris.nrsc.gov.in

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ತುಂಗಭದ್ರಾ ಅಣೆಕಟ್ಟು: ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಪಟ್ಟಣದ ಬಳಿ ಹರಿದಿರುವ ಕೃಷ್ಣಾ ನದಿಯ ಉಪನದಿಯಾದ ತುಂಗಭದ್ರಾ ನದಿಗೆ ಅಡ್ಡಲಾಗಿ ಈ ಬೃಹತ್ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಅಡಿಪಾಯವನ್ನು ಹೊರತುಪಡಿಸಿ ಭೂಮಟ್ಟದಿಂದ 49 ಮೀ ಗಳಷ್ಟು ಎತ್ತರವಿರುವ ಈ ಅಣೆಕಟ್ಟು ಬಹುಪಯೋಗಿ ಜಲಾಶಯವಾಗಿದೆ.

ಚಿತ್ರಕೃಪೆ: Haxplorer

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಆಲಮಟ್ಟಿ ಅಣೆಕಟ್ಟು: ಉತ್ತರ ಕರ್ನಾಟಕ ಭಾಗದ ಬಿಜಾಪುರದ ಬಸವನಬಾಗೇವಾಡಿ ಬಳಿ ಹರಿದಿರುವ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದು ಕೂಡ ವಿವಿಧೋದ್ದೇಶದ ಜಲಾಶಯವಾಗಿದ್ದು ವಿದ್ಯುತ್ ಉತ್ಪಾದನೆಯನ್ನೂ ಸಹ ಒಳಗೊಂಡಿದೆ. ಅಲ್ಲದೆ ಜಲಾಶಯ ಸುತ್ತಲಿನ ಪ್ರದೇಶದಲ್ಲಿ ಉದ್ಯಾನಗಳನ್ನು ನಿರ್ಮಿಸಲಾಗಿದ್ದು, ಪ್ರಮುಖ ಪ್ರವಾಸಿ ಆಕರ್ಷಣೆಯಾಗಿಯೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Murughendra

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಹೇಮಾವತಿ ಅಣೆಕಟ್ಟು: ಹೇಮಾವತಿ ಕರ್ನಾಟಕದ ಒಂದು ನದಿಯಾಗಿದೆ. ಪಶ್ಚಿಮ ಘಟ್ಟದ ಚಿಕ್ಕಮಗಳೂರು ಜಿಲ್ಲೆಯ ಬಲ್ಲಾಳರಾಯನದುರ್ಗ ಎಂಬಲ್ಲಿ ಉಗಮಗೊಳ್ಳುವ ಈ ನದಿಯು ಹರಿಯುತ್ತ ನಂತರ ಯಗಚಿ ನದಿಯೊಂದಿಗೆ ವಿಲೀನವಾಗಿ ಕೃಷ್ಣರಾಜಸಾಗರದ ಬಳಿ ಕಾವೇರಿ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಹಾಸನ ಜಿಲ್ಲೆಯ ಗೋರೂರಿನ ಬಳಿ ಈ ನದಿಗೆ ಬೃಹತ್ತಾದ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದನ್ನೆ ಹೇಮಾವತಿ ಜಲಾಶಯ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Technofreak

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಲಿಂಗನಮಕ್ಕಿ ಅಣೆಕಟ್ಟು: ಲಿಂಗಮಕ್ಕಿ ಜಲಾಶಯವನ್ನು ಶರಾವತಿ ನದಿಗೆ ಅಡ್ಡಲಾಗಿ, 1964ರಲ್ಲಿ ನಿರ್ಮಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಈ ಅಣೆಕಟ್ಟು 2.4 ಕಿ.ಮೀ ಗಳಷ್ಟು ಉದ್ದವಿದ್ದು, 1819 ಅಡಿಗಳಷ್ಟು ಎತ್ತರವಿದೆ. 4368 ಘನ ಮೀ ಗಳಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯವನ್ನು ಈ ಜಲಾಶಯ ಹೊಂದಿದೆ.

ಚಿತ್ರಕೃಪೆ: ಜಿ.ಎಸ್. ಜಯಕೃಷ್ಣ ತಲವಾಟ

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಸೂಪಾ ಆಣೆಕಟ್ಟು : ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ಕಾಳಿ ನದಿಗೆ ಅಡ್ಡಲಾಗಿ ಜೋಯಿಡಾ ತಾಲೂಕಿನ ಬಳಿ ಈ ಜಲಾಶಯವನ್ನು ನಿರ್ಮಿಸಲಾಗಿದೆ. ಇದೊಂದು ಜಲ ವಿದ್ಯುತ್ ಉತ್ಪಾದನೆಯ ಯೋಜನೆಯೂ ಸಹ ಆಗಿದೆ. 101 ಮೀ ಗಳಷ್ಟು ಎತ್ತರ ಹಾಗೂ 331.29 ಮೀ. ಗಳಷ್ಟು ಉದ್ದವನ್ನು ಆಣೆಕಟ್ಟು ಹೊಂದಿದೆ.

ಚಿತ್ರಕೃಪೆ: india-wris.nrsc.gov.in

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಕೃಷ್ಣರಾಜ ಸಾಗರ ಅಣೆಕಟ್ಟು: ಜನಪ್ರಿಯವಾಗಿ ಕೆ ಆರ್ ಎಸ್ ಎಂತಲೆ ಕರೆಯಲ್ಪಡುವ ಕೃಷ್ಣರಾಜಸಾಗರ, ಅಣೆಕಟ್ಟು ಹಾಗೂ ಜಲಾಶ್ಯದ ಹೆಸರಾಗಿದೆ. ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರದ ಬಳಿ ಕಾವೇರಿ ನದಿಗೆ ನಿರ್ಮಿಸಲಾಗಿರುವ ಈ ಸುಂದರ ಪ್ರವಾಸಿ ಆಕರ್ಷಣೆಯುಳ್ಳ ಜಲಾಶಯ ಮೈಸೂರು ನಗರಕ್ಕೆ ಬಹು ಹತ್ತಿರದಲ್ಲಿದೆ. ಇದರ ಆವರಣದಲ್ಲಿರುವ ಬೃಂದಾವನ ಉದ್ಯಾನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Ashwin Kumar

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಪಳಾಸ್ಸಿ ಆಣೆಕಟ್ಟು: ಕೇರಳದ ಕನ್ನೂರ್ ಜಿಲ್ಲೆಯಲ್ಲಿ ಈ ಜಲಾಶಯದ ನಿರ್ಮಾಣವಾಗಿದೆ. ಕುಯಿಲೂರ್ ಬಳಿಯಿರುವ ವಳಾಪಟ್ಟನಂ ನದಿಗೆ ಇದನ್ನು ನಿರ್ಮಿಸಲಾಗಿದೆ. ಕಣ್ಣೂರ್ ಜಿಲ್ಲೆಯ ಬಹುತೇಕ ಕೃಷಿ ಭೂಮಿಗಳಿಗೆ ನೀರಾವರಿ ಉದ್ದೇಶಕ್ಕಾಗಿ ನಿರ್ಮಿಸಲಾದ ಈ ಆಣೆಕಟ್ಟು ಲೋಕಾರ್ಪಣೆಯಾಗಿದ್ದು 1979 ರ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಂದ. ಕೇರಳದ ಪ್ರಖ್ಯಾತ ಅರಸ ಪಳಾಸ್ಸಿ ರಾಜಾ ಜನ್ಮಿಸಿದ ಸ್ಥಳದಿಂದ ಈ ಜಲಾಶಯವು ಕೇವಲ 11 ಕಿ.ಮೀ ದೂರವಿರುವುದರಿಂದ ಇದಕ್ಕೆ ಪಳಾಸ್ಸಿ ಎಂಬ ಹೆಸರನ್ನಿಡಲಾಗಿದೆ. ಈ ಜಲಾಶಯದ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವು ಆಕರ್ಷಕವಾಗಿದೆ.

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ನೆಯ್ಯಾರ್ ಡ್ಯಾಮ್: ತಿರುವನಂತಪುರಂ ಜಿಲ್ಲೆಯಲ್ಲಿ ಹರಿದಿರುವ ನೆಯ್ಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಇದೊಂದು ಗ್ರ್ಯಾವಿಟಿ ಡ್ಯಾಮ್ ಆಗಿದೆ. ತಿರುವನಂತಪುರಂ ಪಟ್ಟಣದಿಂದ ಕೇವಲ 30 ಕಿ.ಮೀ ದೂರದಲ್ಲಿ, ಪಶ್ಚಿಮ ಘಟ್ಟಗಳ ಹಾಸಿನಲ್ಲಿ ನೆಲೆಸಿರುವ ಈ ತಾಣವು 1958 ರಿಂದಲೇ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಹೊರಹೊಮ್ಮಿದೆ.

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಮಲಂಪುಳಾ ಆಣೆಕಟ್ಟು: ಕೇರಳದಲ್ಲೆ ಅತಿ ದೊಡ್ಡದಾದ ಆಣೆಕಟ್ಟು ಇದಾಗಿದೆ. ಪಾಲಕ್ಕಾಡ್ ಬಳಿಯ ಸುಂದರ ಪಶ್ಚಿಮ ಘಟ್ಟಗಳ ಮನೋಹರ ನೋಟವನ್ನು ಹಿನ್ನಿಲೆಯಾಗಿ ಹೊಂದಿರುವ ಈ ಆಣೆಕಟ್ಟು ಮೇಸನ್ರಿ ಹಾಗು ಅರ್ಥ್ ಡ್ಯಾಮ್ ಗಳೆರಡನ್ನೂ ಹೊಂದಿದೆ.

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಮೇಸನ್ರಿ ಡ್ಯಾಮ್ ನ ಉದ್ದ 1,849 ಮೀ. ಗಳಾಗಿದ್ದು, ಅರ್ಥ್ ಡ್ಯಾಮ್ ನ ಉದ್ದ 220 ಮೀ. ಆಗಿದೆ. ಮಲಂಪುಳಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಆಣೆಕಟ್ಟಿನ ಎತ್ತರ 6,066 ಅಡಿಗಳಾಗಿದ್ದು, ಪ್ರವಾಸಿ ದೃಷ್ಟಿಯಿಂದ ಸುಂದರವಾದ ಉದ್ಯಾನವನ್ನೂ ಸಹ ಇಲ್ಲಿ ಕಾಣಬಹುದು.

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಶೋಲಯಾರ್ ಆಣೆಕಟ್ಟು: ತ್ರಿಶ್ಶೂರ್ ಜಿಲ್ಲೆಯ ಚಾಲಕ್ಕುಡಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ ಈ ಕಾಂಕ್ರೀಟ್ ಆಣೆಕಟ್ಟನ್ನು. ಈ ಆಣೆಕಟ್ಟಿಗೆ ಎರಡು ಜಲಾಶಯಗಳಿದ್ದು ಅವುಗಳನ್ನು ಮೇಲ್ಭಾಗದ ಶೋಲಯಾರ್ ಹಾಗು ಕೆಳಭಾಗದ ಶೋಲಯಾರ್ ಗಳಾಗಿ ವಿಂಗಡಿಸಲಾಗಿದೆ.

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಪೀಚಿ ಆಣೆಕಟ್ಟು: ಕೇರಳದ ತ್ರಿಶ್ಶೂರ್ ನಗರದಿಂದ ಸುಮಾರು 22 ಕಿ.ಮೀಗಳ ದೂರದಲ್ಲಿ ಈ ಪೀಚಿ ಆಣೆಕಟ್ಟನ್ನು ಕಾಣಬಹುದು. ಮನಾಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಆಣೆಕಟ್ಟನ್ನು ತ್ರಿಶ್ಶೂರ್ ನಗರದ ನೀರಿನ ಬವಣೆ ನೀಗಿಸಲು ಹಾಗು ಕೃಷಿ ಬಳಕೆಗಾಗಿ ನಿರ್ಮಿಸಲಾಗಿದೆ.

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಪಾಂಗ್ ಆಣೆಕಟ್ಟು : ಹಿಮಾಚಲ ಪ್ರದೇಶ ರಾಜ್ಯದ ತಲ್ವಾರಾ ಎಂಬಲ್ಲಿ ಬಯಾಸ್ ನದಿಗೆ ಅಡ್ಡಲಾಗಿ ಈ ಆಣೆಕಟ್ಟೆಯ ನಿರ್ಮಾಣ ಮಾಡಲಾಗಿದೆ. ಜಲ ವಿದ್ಯುತ್ ಉತ್ಪನ್ನ ಹಾಗೂ ನೀರಾವರಿ ಚಟುವಟಿಕೆಗೆಂದು ಇದರ ನಿರ್ಮಾಣ ಮಾಡಲಾಗಿದೆ. 436 ಅಡಿ ಎತ್ತರ ಹಾಗೂ ಸುಮಾರು 1.9 ಕಿ.ಮೀ ಗಳಷ್ಟು ಉದ್ದವನ್ನು ಹೊಂದಿರುವ "ಅರ್ಥ್ ಫಿಲ್ ಎಂಬ್ಯಾಕ್ಮೆಂಟ್" ಆಣೆಕಟ್ಟು ಇದಾಗಿದೆ.

ಚಿತ್ರಕೃಪೆ: india-wris.nrsc.gov.in

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಲಕ್ಯಾ ಆಣೆಕಟ್ಟು : ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿ ಲಕ್ಯಾ ನದಿಗೆ ಅಡ್ಡಲಾಗಿ ಈ ಆಣೆಕಟ್ಟೆಯ ನಿರ್ಮಾಣವಾಗಿದೆ. ನೀರು ಸಂಗ್ರಹಣೆಯ ಮುಖ್ಯ ಉದ್ದೇಶದಿಂದ ನಿರ್ಮಾಣವಾಗಿರುವ ಈ ಆಣೆಕಟ್ಟೆಯ ಎತ್ತರ 108 ಮೀ. ಹಾಗೂ ಉದ್ದ 1048 ಮೀ.

ಚಿತ್ರಕೃಪೆ: solarisgirl

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಕೊಯ್ನಾ ಆಣೆಕಟ್ಟು : ಮಹಾರಾಷ್ಟ್ರ ರಾಜ್ಯದಲ್ಲಿರುವ ದೊಡ್ಡ ಆಣೆಕಟ್ಟುಗಳ ಪೈಕಿ ಒಂದಾಗಿದೆ ಕೊಯ್ನಾ ಆಣೆಕಟ್ಟು. ಪ್ರಖ್ಯಾತ ಪ್ರವಾಸಿ ಕೇಂದ್ರವಾದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ಮಹಾಬಲೇಶ್ವರದಲ್ಲಿ ಉಗಮಗೊಳ್ಳುವ ಕೊಯ್ನಾ ನದಿಗೆ ಅಡ್ಡಲಾಗಿ ಈ ಆಣೆಕಟ್ಟನ್ನು ಸತಾರಾ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಕೊಯ್ನಾ ನಗರದಲ್ಲಿ ನಿರ್ಮಿಸಲಾಗಿದೆ. ಇದು ಪ್ರಮುಖವಾಗಿ ಜಲ ವಿದ್ಯುತ್ ಯೋಜನೆಯಾಗಿದ್ದು ಸುತ್ತಮುತ್ತಲಿನ ಕೆಲವು ಪ್ರದೇಶಗಳಿಗೆ ನೀರಾವರಿ ಯೋಜನೆಯಾಗಿಯೂ ಬಳಸಲ್ಪಡುತ್ತದೆ. 103 ಮೀ ಎತ್ತರ ಹಾಗೂ 807 ಮೀ ಉದ್ದವನ್ನು ಹೊಂದಿರುವ ಈ ಆಣೆಕಟ್ಟು 1,920 ಮೆಗಾ ವ್ಯಾಟ್ ನಷ್ಟು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಇದರ ಸುತ್ತಲಿನ ಪ್ರದೇಶವು ಪ್ರಕೃತಿ ವೈಭವದಿಂದ ಸಂಪದ್ಭರಿತವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: india-wris.nrsc.gov.in

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಕರ್ಜಾನ್ ಆಣೆಕಟ್ಟು : ಗುಜರಾತ್ ರಾಜ್ಯದ ನರ್ಮದಾ ಜಿಲ್ಲೆಯಲ್ಲಿ ಕರ್ಜಾನ್ ನದಿಗೆ ಅಡ್ಡಲಾಗಿ ಈ ಆಣೆಕಟ್ಟನ್ನು ನಿರ್ಮಿಸಲಾಗಿದೆ. ರಾಜಪಿಪಲಾ ಪಟ್ಟಣದ ಬಳಿ ಸ್ಥಿತವಿರುವ ಈ ಆಣೆಕಟ್ಟು 100 ಮೀ. ಎತ್ತರ ಹಾಗೂ 903 ಮೀ. ಉದ್ದವನ್ನು ಹೊಂದಿದ್ದು ನೀರಾವರಿ ಉದ್ದೇಶಕ್ಕಾಗಿ ನಿರ್ಮಾಣ ಮಾಡಲಾದ ರಚನೆಯಾಗಿದೆ.

ಚಿತ್ರಕೃಪೆ: india-wris.nrsc.gov.in

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ರಿಹಂದ ಆಣೆಕಟ್ಟು : ಉತ್ತರ ಪ್ರದೇಶ ರಾಜ್ಯದ ಸೋನಭದ್ರ ಜಿಲ್ಲೆಯ ಪಿಪ್ರಿ ಎಂಬಲ್ಲಿ ಈ ವಿಶಾಲವಾದ ಆಣೆಕಟ್ಟಿದೆ. ರಿಹಂದ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಕಾಂಕ್ರೀಟ್ ಡ್ಯಾಮ್ 91.46 ಮೀ ಎತ್ತರ ಹಾಗೂ 932 ಮೀ ಉದ್ದವನ್ನು ಹೊಂದಿದ್ದು ಜಲವಿದ್ಯುತ್ ಉತ್ಪಾದನೆ ಮತ್ತು ನೀರಾವರಿ ಉದ್ದೇಶಕ್ಕೆ ಬಳಸಲ್ಪಡುತ್ತದೆ.

ಚಿತ್ರಕೃಪೆ: Kartiktiwary

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಇಂದಿರಾ ಸಾಗರ ಆಣೆಕಟ್ಟು : ಮಧ್ಯ ಪ್ರದೇಶ ರಾಜ್ಯದ ಖಾಂಡ್ವಾ ಜಿಲ್ಲೆಯ ಮುಂಡಿಯ ನರ್ಮದಾ ನಗರದಲ್ಲಿ ಹರಿದಿರುವ ನರ್ಮದಾ ನದಿಗೆ ಅಡ್ಡಲಾಗಿ ಈ ಆಣೆಕಟ್ಟಿನ ನಿರ್ಮಾಣವಾಗಿದೆ. ಇದೊಂದು ವಿವಿಧೋದ್ದೇಶದ ಆಣೆಕಟ್ಟಾಗಿದ್ದು, 92 ಮೀ. ಎತ್ತರ ಹಾಗೂ 653 ಮೀ. ಉದ್ದವನ್ನು ಹೊಂದಿದೆ.

ಚಿತ್ರಕೃಪೆ: india-wris.nrsc.gov.in

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಕೊಲ್ಕಿವಾಡಿ ಆಣೆಕಟ್ಟು : ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿ ಈ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಕೊಂಕಣ ಭಾಗದ ಚಿಪ್ಲುನ್ ಬಳಿಯಿರುವ ಅಲೋರ್ ನಿಂದ ಮೂರು ಕಿ.ಮೀ ದೂರದಲ್ಲಿರುವ ಕೊಲ್ಕಿವಾಡಿ ಎಂಬಲ್ಲಿ ಈ ಆಣೆಕಟ್ಟನ್ನು ನೋಡಬಹುದು. ಈ ಆಣೆಕಟ್ಟು ಕೊಯ್ನಾ ಜಲ ವಿದ್ಯುತ್ ಯೋಜನೆಯ ಭಾಗವಾಗಿದೆ.

ಚಿತ್ರಕೃಪೆ: Nichalp

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ವಿಲ್ಸನ್ ಆಣೆಕಟ್ಟು : ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಭಂಡಾರಧಾರಾ ಎಂಬ ಪ್ರವಾಸಿ ಖ್ಯಾತಿಯ ಹಳ್ಳಿಯಲ್ಲಿ ಈ ಆಣೆಕಟ್ಟನ್ನು ಕಾಣಬಹುದು. ಭಾರತದಲ್ಲಿ ಕಂಡುಬರುವ ಹಳೆಯ ಆಣೆಕಟ್ಟುಗಳ ಪೈಕಿ ಇದೂ ಸಹ ಒಂದಾಗಿದೆ. ಪ್ರವರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಆಣೆಕಟ್ಟಿನ ಕೆಳ ಭಾಗದಲ್ಲಿ ಉದ್ಯಾನವಿದ್ದು ಪ್ರವಾಸಿಗರು ಅದ್ಭುತವಾಗಿ ಪ್ರಕೃತಿಯನ್ನು ಆಸ್ವಾದಿಸುತ್ತ ಸಮಯ ಕಳೆಯಬಹುದು.

ಚಿತ್ರಕೃಪೆ: www.win7wallpapers.com

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಧೋಮ್ ಆಣೆಕಟ್ಟು : ಸತಾರಾ ಜಿಲ್ಲೆಯ ವೈ ಎಂಬ ಸ್ಥಳದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಈ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಇದು ಪ್ರಮುಖವಾಗಿ ವೈ, ಪಂಚಗಣಿ ಹಾಗೂ ಮಹಾಬಳೇಶ್ವರಗಳ ಪ್ರಮುಖ ನೀರಿನ ಮೂಲವಾಗಿದೆ. ಈ ಆಣೆಕಟ್ಟಿನ ಎತ್ತರ 160 ಅಡಿಗಳಷ್ಟಿದ್ದರೆ ಉದ್ದವು 8,130 ಅಡಿಗಳಷ್ಟಿದೆ.

ಚಿತ್ರಕೃಪೆ: Pauk

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಜಯಕ್ವಾಡಿ ಆಣೆಕಟ್ಟು : ಮಹಾರಾಷ್ಟ್ರದ ನೀರಾವರಿ ಯೋಜನೆಗೆಂದು ಮೀಸಲಾದ ಬೃಹತ್ ಆಣೆಕಟ್ಟುಗಳ ಪೈಕಿ ಒಂದಾಗಿದೆ. ಇದರ ನೀರನ್ನು ಪ್ರಮುಖವಾಗಿ ಬರ ಸಂಭವದ ಮರಾಠವಾಡಾದ ಕೃಷಿ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಔರಂಗಾಬಾದ್ ಜಿಲ್ಲೆಯ ಪೈಠಾನ್ ತಾಲೂಕಿನ ಜಯಕ್ವಾಡಿ ಹಳ್ಳಿಯಲ್ಲಿ ಗೋದಾವರಿ ನದಿಗೆ ಅಡ್ಡಲಾಗಿ ಈ ಆಣೆಕಟ್ಟನ್ನು ನಿರ್ಮಿಸಲಾಗಿದೆ.

ಚಿತ್ರಕೃಪೆ: Prasad P. Khangaonkar

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಉಜ್ಜನಿ ಆಣೆಕಟ್ಟು : ಭೀಮಾ ಆಣೆಕಟ್ಟು ಅಥವಾ ಭೀಮಾ ನೀರಾವರಿ ಯೋಜನೆ ಎಂತಲೂ ಸಹ ಇದು ಕರೆಯಲ್ಪಡುತ್ತದೆ. ಭೀಮಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಆಣೆಕಟ್ಟು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಾಧಾ ತಾಲೂಕಿನ ಉಜ್ಜನಿ ಎಂಬ ಗ್ರಾಮದ ಬಳಿ ಸ್ಥಿತವಿದೆ. 185 ಅಡಿಗಳಷ್ಟು ಎತ್ತರ ಹಾಗೂ 8,314 ಅಡಿಗಳಷ್ಟು ಉದ್ದವನ್ನು ಈ ಆಣೆಕಟ್ಟು ಹೊಂದಿದೆ.

ಚಿತ್ರಕೃಪೆ: Nvvchar

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಹಾರಂಗಿ ಅಣೆಕಟ್ಟು: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹ್ಡ್ಗೂರು ಎಂಬ ಹಳ್ಳಿಯ ಬಳಿ ಹಾರಂಗಿ ಅಣೆಕಟ್ಟು ಜಲಾಶಯವಿದೆ. ಕಾವೇರಿ ನದಿಯ ಉಪನದಿಯಾದ ಹಾರಂಗಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಪಶ್ಚಿಮ ಘಟ್ಟದ ಪುಷ್ಪಗಿರಿ ಬೆಟ್ಟಗಳಲ್ಲಿ ಹುಟ್ಟುವ ಹಾರಂಗಿ ನದಿಗೆ ನೀರಿನ ಮೂಲ ನೈರುತ್ಯ ಮಾರುಗಳಿಂದುಂಟಾಗುವ ಮಳೆಯಾಗಿದೆ.

ಚಿತ್ರಕೃಪೆ: Salmanrkhan91

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ನವೀಲುತೀರ್ಥ: ಬೆಳಗಾವಿಯ ಪೂರ್ವ ದಿಕ್ಕಿಗೆ ಸುಮಾರು 84 ಕಿ.ಮೀಗಳ ಅಂತರದಲ್ಲಿ ನೆಲೆಗೊಂಡಿರುವ ನವೀಲುತೀರ್ಥ ಒಂದು ಆಣೆಕಟ್ಟಾಗಿರುವುದಲ್ಲದೆ ಒಂದು ಸುಪ್ರಸಿದ್ಧ ಪಿಕ್ನಿಕ್ ತಾಣವೂ ಹೌದು. ಸವದತ್ತಿಗೆ ಅತಿ ಹತ್ತಿರದಲ್ಲಿರುವ ಈ ತಾಣವನ್ನು ಬೆಳಗಾವಿಯಿಂದ ಸವದತ್ತಿಗೆ ತೆರಳಿ ಸುಲಭವಾಗಿ ಅಲ್ಲಿಂದ ತಲುಪಬಹುದು. ಮಲಪ್ರಭಾ ನದಿಗೆ ಅಡ್ಡಲಾಗಿ ಈ ಆಣೆಕಟ್ಟನ್ನು ನಿರ್ಮಿಸಲಾಗಿದ್ದು ಇದರಿಂದ ರೂಪಗೊಂಡಿರುವ ನೀರಿನ ಬೃಹತ್ ಜಲಾಶ್ಯವನ್ನು ರೇಣುಕಾ ಸಾಗರ ಎಂದು ಕರೆಯಲಾಗುತ್ತದೆ.

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ಭಾರತದ ಪ್ರಸಿದ್ಧ ಆಣೆಕಟ್ಟುಗಳು:

ರಾಣಾ ಪ್ರತಾಪ ಸಾಗರ ಆಣೆಕಟ್ಟು : 177 ಅಡಿಗಳಷ್ಟು ಎತ್ತರ ಹಾಗೂ 3,750 ಅಡಿಗಳಷ್ಟು ಉದ್ದವಿರುವ ಈ ಆಣೆಕಟ್ಟನ್ನು ರಾಜಸ್ಥಾನ ರಾಜ್ಯದ ರಾವತ್ಭಾತಾ ಜಿಲ್ಲೆಯಲ್ಲಿ ಹರಿದಿರುವ ಚಂಬಲ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.

ಚಿತ್ರಕೃಪೆ: Nvvchar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X