Search
  • Follow NativePlanet
Share
» »ವಿಸ್ಮಯಕರ ಈ ಶಿಲಾ ರಚನೆಗಳನ್ನೊಮ್ಮೆ ನೋಡಿ

ವಿಸ್ಮಯಕರ ಈ ಶಿಲಾ ರಚನೆಗಳನ್ನೊಮ್ಮೆ ನೋಡಿ

By Vijay

ಮಾನವನ ಸರ್ವ ಅವಶ್ಯಕತೆಗಳನ್ನು ಪೂರೈಸಿರುವ ಪ್ರಕೃತಿಯು ತನ್ನದೆ ಆದ ಹಲವು ವಿಸ್ಮಯಗಳನ್ನೂ ಒಳಗೊಂಡಿದೆ. ಆದರೆ ಅದನ್ನು ಸೂಕ್ಷ್ಮ ದೃಷ್ಟಿಯಿಂದ ನೋಡುವ ಮನಸ್ಥಿತಿ ನಮ್ಮಲ್ಲಿರಬೇಕಷ್ಟೆ. ಇಂದಿಗೂ ಪ್ರಕೃತಿಯ ಹಲವು ಆಶ್ಚರ್ಯಕರ ರಚನೆಗಳನ್ನು ಜಗತ್ತಿನೆಲ್ಲೆಡೆ ಕಾಣಬಹುದು.

ಇದಕ್ಕೆ ಭಾರತವೂ ಹೊರತಾಗಿಲ್ಲ. ನಮ್ಮ ದೇಶದ ಹಲವು ಭಾಗಗಳಲ್ಲಿ ವಿಸ್ಮಯಗೊಳಿಸುವ ಕೆಲವು ಅಮೋಘ ಪ್ರಾಕೃತಿಕ ರಚನೆಗಳನ್ನು ಕಾಣಬಹುದು. ಮರದ ಬೇರುಗಳಿಂದ ನಿರ್ಮಿತವಾದ ಸೇತುವೆಯಾಗಿರಬಹುದು, ಇಳಿಜಾರಿನಲ್ಲೂ ಒಂದಷ್ಟು ಕದಲದೆ ನಿಂತಲ್ಲೆ ನಿಂತ ಬೆಟ್ಟದ ಬೃಹತ್ ಗುಂಡಾಗಿರಬಹುದು ಎಲ್ಲವೂ ಇಂದು ಜನಪ್ರೀಯ ಪ್ರವಾಸಿ ಆಕರ್ಷಣೆಗಳಾಗಿವೆ.

ನಿಮಗಿಷ್ಟವಾಗಬಹುದಾದ : ಭಾರತದ ಏಳು ಪ್ರಾಕೃತಿಕ ವಿಸ್ಮಯಗಳು

ಅದರಂತೆ ಕೆಲವು ಸ್ಥಳಗಳಲ್ಲಿ ಬಂಡೆಗಳೂ ಸಹ ತಮ್ಮದೆ ಆದ ಒಂದು ವಿಶಿಷ್ಟ ರೀತಿಯಲ್ಲಿ ನೆಲೆಸಿದ್ದು ಒಂದೊಂದು ರೀತಿಯ ವಿಶಿಷ್ಟವಾದ ವೇಷದಲ್ಲಿ, ರೂಪದಲ್ಲಿರುವುದನ್ನು ಗಮನಿಸಬಹುದಾಗಿದೆ. ಅಲ್ಲದೆ ಇವು ಪ್ರವಾಸಿ ಆಕರ್ಷಣೆಗಳಾಗಿಯೂ ಪ್ರವಾಸಿಗರನ್ನು ಸೆಳೆಯುತ್ತವೆ.

ಅಂತಹ ಕೆಲವು ಆಯ್ದ ಬೆಟ್ಟ ಗುಡ್ಡಗಳು, ಬಂಡೆ ರಚನೆಗಳ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ. ಪ್ರಕೃತಿಯನ್ನು ಪ್ರೀತಿಸುವ, ಗೌರವಿಸುವ ಪ್ರತಿಯೊಬ್ಬರಿಗೂ ಸಹ ಈ ಬೆಟ್ಟ/ಬಂಡೆಗಳನ್ನು ನೋಡಿದಾಗ ಒಂದು ರೀತಿಯ ಕುತೂಹಲ, ಆನಂದ ಉಂಟಾಗದೆ ಇರದಿರಲು ಸಾಧ್ಯವಿಲ್ಲ.

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಇದನ್ನು ಅಕ್ಕ-ತಂಗಿ ಗುಂಡು ಅಥವಾ ಗುಡ್ಡ ಎಂದೆ ಕರೆಯಲಾಗುತ್ತದೆ. ಇದರ ಹಿನ್ನಿಲೆಯನ್ನು ಸಂಕ್ಷೀಪ್ತವಾಗಿ ಹೇಳಬೇಕೆಂದರೆ ತಂಗಿಯು ಗುಡ್ಡದಿಂದ ಕೆಳ ಬೀಳುತ್ತಿರುವಾಗ ಅಕ್ಕ ಅವಳ ಕೈಯನ್ನು ಹಿಡಿದು ತಡೆಯುತ್ತಾಳೆ ಹಾಗೂ ಆ ಕ್ಷಣದಲ್ಲೆ ಇಬ್ಬರೂ ಬಂಡೆಯಾಗಿ ಪರಿವರ್ತಿತರಾಗುತ್ತಾರೆ. ಇದು ವಿಶ್ವವಿಖ್ಯಾತ ಹಂಪಿಯಲ್ಲಿದೆ. ಹಂಪಿಗೆ ಹೋದರೆ ಇದನ್ನು ನೋಡಲು ಮರೆಯದಿರಿ.

ಚಿತ್ರಕೃಪೆ: Dr. Murali Mohan Gurram

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಅಗ್ನಿ ಶಿಲೆಯಲ್ಲಿ ಬೆಳೆ ಹುಲ್ಲು. ವೈಜ್ಞಾನಿಕವಾಗಿ ಸಾಮಾನ್ಯ ಪ್ರಕ್ರಿಯೆ ಎನಿಸಿದರೂ ಸಾಮಾನ್ಯ ಜನರಿಗೆ ಒಂದು ರೀತಿಯಲ್ಲಿ ಕುತೂಹಲವೆ ಸರಿ. ಅಣಶಿ ರಾಷ್ಟ್ರೀಯ ಉದ್ಯಾನ ದಾಂಡೇಲಿಯಲ್ಲಿ.

ಚಿತ್ರಕೃಪೆ: L. Shyamal

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಈ ಬಂಡೆಗಳು ಯಾವುದೆಂದು ತಿಳಿಯಿತೆ? ಪ್ರಖ್ಯಾತ ಜೋಗದ ಗುಂಡಿ ಅರ್ಥಾತ ಜೋಗ ಜಲಪಾತದ ಕಂದಕ. ಬೇಸಿಗೆ ಕಾಲದ ಸಮಯದಲ್ಲಿ.

ಚಿತ್ರಕೃಪೆ: J budissin

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟಗಳ ಗಡಿಯಲ್ಲಿರುವ ಬ್ರಹ್ಮಗಿರಿ ಬೆಟ್ಟದ ಮುನಿಕಲ್ ಗುಹೆಗಳು. ಇದು ಚಾರಣಕ್ಕೆ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Sharadaprasad

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಮಂಡ್ಯ ಜಿಲ್ಲೆಯ ಪಾಂಡವಪುರದ ಬಳಿಯಿರುವ ಕುಂತಿ ಬೆಟ್ಟಗಳಲ್ಲಿನ ಒಂದು ಭಾಗ. ಇದನ್ನು ದೂರದಿಂದ ಸೂಕ್ಷ್ಮವಾಗಿ ಗಮನಿಸಿದರೆ ಆದಿ ಕಾಲದಲ್ಲಿದ್ದ ಡೈನೋಸಾರಸ್ ಎಂಬ ಪ್ರಾಣಿಯ ಮುಖವು ನೆನಪಿಗೆ ಬರುವಂತಿದೆಯಲ್ಲವೆ...

ಚಿತ್ರಕೃಪೆ: Vinayraghavendra

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಅರಸೀಕೆರೆಯಲ್ಲಿರುವ ಜೇನುಕಲ್ಲು ಸಿದ್ಧೇಶ್ವರ ಬೆಟ್ಟ. ಬೆಟ್ಟದ ಮೇಲೆ ದೇವಾಲಯವೂ ಇದ್ದು ಇದೊಂದು ಧಾರ್ಮಿಕ ಮಹತ್ವವುಳ್ಳ ಪ್ರವಾಸಿ ತಾನವಾಗಿದೆ.

ಚಿತ್ರಕೃಪೆ: Karsolene

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಹಚ್ಚ ಹಸಿರಿನ ಮಧ್ಯೆ ಏಕಾಂದಿಯಾಗಿ ಕಂಗೊಳಿಸುವ ಕುಂತಿ ಬೆಟ್ಟ. ಇದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿದೆ.

ಚಿತ್ರಕೃಪೆ: Shyamal

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಕನಕಪುರದ ಬಳಿಯಿರುವ ಬಿಳಿಕಲ್ ರಂಗನಾಥ ಸ್ವಾಮಿ ಬೆಟ್ಟವು ಒಂದು ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಒಂದು ಬೃಹತ್ ಗಾತ್ರ ಬಂಡೆಯ ಕೆಳ ಭಾಗದಲ್ಲಿ ಈ ದೇವಾಲಯವಿರುವುದು ವಿಶೇಷವಾಗಿದೆ.

ಚಿತ್ರಕೃಪೆ: VikasHegde

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಬೃಹತ ಬೆಟ್ಟ ಬಂಡೆಗಳ ಮಧ್ಯೆ ರಚಿತವಾಗಿರುವ ಪ್ರಸಿದ್ಧ ಬಳ್ಳಾರಿ ಐತಿಹಾಸಿಕ ಕೋಟೆ. ಹಿಂದೆ ಕಲ್ಲು ಬಂಡೆಗಳುಳ್ಳ ಬೆಟ್ಟಗಳು ರಕ್ಷಣಾತ್ಮಕ ದೃಷ್ಟಿಯಿಂದ ಕೋಟೆ ಕಟ್ಟಲು ಆದರ್ಶಮಯ ಸ್ಥಳಗಳಾಗಿದ್ದವು.

ಚಿತ್ರಕೃಪೆ: Vikashegde

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಬೆಂಗಳೂರಿನಿಂದ ಕೇವಲ 150 ಕಿ.ಮೀ ದೂರದಲ್ಲಿರುವ ಹೊಗೇನಕ್ಕಲ್ ಜಲಪಾತ ತಾಣವು ತನ್ನ ಸುತ್ತಲೂ ಕಡಿದಾದ ಬಂಡೆಗಳಿಂದ ಸುತ್ತುವರೆದಿದೆ.

ಚಿತ್ರಕೃಪೆ: ezhuttukari

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ತುಮಕೂರು ಜಿಲ್ಲೆಯ ಮಧುಗಿರಿ ತಾಲುಕಿನಲ್ಲಿರುವ ಮಧುಗಿರಿ ಏಕ ಶಿಲಾ ಬೆಟ್ಟ ಕೋಟೆಯು ಒಂದು ರೋಮಾಂಚಕ ಪ್ರವಾಸಿ ತಾಣವಾಗಿದ್ದು ಚಾರಣ ಚಟುವಟಿಕೆಗೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Saurabh Sharan

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಮಧುಗಿರಿ ಏಕಶಿಲಾ ಬೆಟ್ಟದ ಇನ್ನೊಂದು ಸುಂದರ ನೋಟ.

ಚಿತ್ರಕೃಪೆ: Vinay Siddapura

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಕನಕಪುರ ತಾಲೂಕಿನಲ್ಲಿರುವ ಮೇಕೆದಾಟು ಒಂದು ಅದ್ಭುತ ಪ್ರವಾಸಿ ತಾನವಾಗಿದೆ. ಬೆಂಗಳೂರಿನಿಂದ ಒಂದೆ ದಿನದಲ್ಲಿ ಈ ತಾಣಕ್ಕೆ ಹೋಗಿಬರಬಹುದಾಗಿರುವುದರಿಂದ ಸಾಕಷ್ಟು ಜನರು ಬೆಂಗಳೂರಿನಿಂದ ಮೇಕೆದಾಟುವಿಗೆ ವಾರಾಂತ್ಯದ ರಜೆಗಳ ಸಂದರ್ಭದಲ್ಲಿ ತೆರಳುತ್ತಾರೆ. ಇದರ ವಿಶೇಷವೆಂದರೆ ಅತ್ಯಂತ ಕಡಿದಾದ ಬಂಡೆಗಳ ಮಧ್ಯೆ ಕಾವೇರಿಯು ಕೇವಲ ಹತ್ತು ಮೀ. ಗಳಷ್ಟು ಮಾತ್ರವೆ ಅಗಲದಲ್ಲಿ ಹರಿಯುತ್ತಾಳೆ. ಬಂಡೆಗಳು ವಿಶಿಷ್ಟ ರೂಪಗಳಿಂದಿದ್ದು ಜಾಗರೂಕವಾಗಿ ಇದರ ಮೆಲೆ ನಡೆಯಬೇಕು.

ಚಿತ್ರಕೃಪೆ: Karthik Prabhu

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಸಾವನದುರ್ಗ ಬೆಂಗಳೂರಿನಿಂದ ಸುಮಾರು 60 ಕಿ.ಮೀ ಗಳಷ್ಟು ದೂರವಿದೆ. ಹೋಗಲು ಎರಡು ಆಯ್ಕೆಗಳಿವೆ. ಒಂದು ಮಾಗಡಿ ಮೂಲಕವಾಗಿದ್ದರೆ ಇನ್ನೊಂದು ಮೈಸೂರು ರಸ್ತೆಯ ಮೂಲಕವಾಗಿದೆ. ಕರ್ನಾಟಕದ ಅತಿ ಎತ್ತರದ ಹಾಗೂ ಅಪಾಯಕಾರಿಯಾದ ಏಕಶಿಲಾ ಬೆಟ್ಟ.

ಚಿತ್ರಕೃಪೆ: Sudarshana

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಮೂಲತಃ ಇದು ಕರಿ ಗುಡ್ಡ ಹಾಗೂ ಬಿಳಿ ಗುಡ್ಡ ಎಂಬ ಎರಡು ಶಿಲೆಗಳ ಸಮಾಗಮದಿಂದ ರಚಿತವಾಗಿದೆ ಎಂದು ಹೇಳಲಾಗುತ್ತದೆ. ಇದನ್ನು ಹಿಂದೆ ಸಾವಿನ ಕೋಟೆ ಎಂತಲೂ ಕರೆಯಲಾಗಿದೆ. ಇನ್ನೂ ಬೆಟ್ಟ ಹತ್ತುವಾಗ ಸಾಕಷ್ಟು ಜಾಗರೂಕತೆವಹಿಸುವುದು ಅವಶ್ಯ. ಏಕೆಂದರೆ ಕೆಲವು ಕಡೆಗಳಲ್ಲಿ ಬೆಟ್ಟವು ಹೆಚ್ಚಿಗೆ ಲಂಬವಾಗಿರುವುದರಿಂದ ಏರುವುದು ಕಷ್ಟವಾಗಬಹುದು. ಒಳ್ಳೆಯ ಹಿಡಿತ (ಗ್ರಿಪ್) ವಿರುವ ಬೂಟು ಧರಿಸಿದ್ದರೆ ಉತ್ತಮ.

ಚಿತ್ರಕೃಪೆ: PlaneMad

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಯಾಣವು ಒಂದು ಪ್ರವಾಸಿ ತಾಣವಾಗಿದ್ದು ತನ್ನಲ್ಲಿರುವ ವಿಶಿಷ್ಟಮಯ ಕಲ್ಲಿನ ರಚನೆಗಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Srinivas G

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಅಸಾಧಾರಣ ಹಾಗೂ ಅಸ್ವಾಭಾವಿಕ ಬಂಡೆಗಳಿಂದ ರಚನೆಗೊಂಡಿರುವ ಯಾಣದಲ್ಲಿರುವ ಶಿಲೆಗಳ ಬೃಹತ್ ಗಾತ್ರದ ರಚನೆಯು ಪರಿಸರ ಪ್ರೇಮಿಗಳನ್ನು ಸೇರಿದಂತೆ ಅನೇಕ ಪ್ರವಾಸಿರನ್ನೂ ಸಹ ಆಕರ್ಷಿಸುತ್ತದೆ.

ಚಿತ್ರಕೃಪೆ: Vinodtiwari2608

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಇಲ್ಲಿ ಆ ರೀತಿಯ ಎರಡು ರಚನೆಗಳಿದ್ದು, ಸ್ಥಳೀಯವಾಗಿ ಇವುಗಳನ್ನು ಭೈರವೇಶ್ವರ ಶಿಖರ ಹಾಗೂ ಮೋಹಿನಿ ಶಿಖರಗಳೆಂದು ಕರೆಯಲಾಗುತ್ತದೆ. ಭೈರವೇಶ್ವರ ಶಿಖರ 390 ಅಡಿಗಳಷ್ಟು ಎತ್ತರವಾಗಿದ್ದರೆ, ಮೋಹಿನಿ ಶಿಖರವು ಸುಮಾರು 300 ಅಡಿಗಳಷ್ಟು ಎತ್ತರವಾಗಿದೆ.

ಚಿತ್ರಕೃಪೆ: Vinodtiwari2608

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಉಡುಪಿಯ ಮಲ್ಪೆ ಕಡಲ ತೀರ ಪ್ರದೇಶದಲ್ಲೆ ಕಂಡುಬರುವ ಸೇಂಟ್ ಮೇರಿಯ ದ್ವೀಪ ಸಮೂಹವು ಉಡೂಪಿಯ ಪ್ರೇಕ್ಷಣೀಯ ಸ್ಥಳವಾಗಿದೆ. ವಿಶೇಷವೆಂದರೆ ಇಲ್ಲಿ ಕಂಡುಬರುವ ಬಸಾಲ್ಟ್ ಶಿಲಾ ರಚನೆಗಳು ಜ್ವಾಲಾಮುಖಿಯಿಂದ ರೂಪಿತವಾದ ರಚನೆಗಳಾಗಿವೆ.

ಚಿತ್ರಕೃಪೆ: Bodhisattwa

ವಿಸ್ಮಯಕರ ಬೆಟ್ಟ-ಬಂಡೆಗಳು:

ವಿಸ್ಮಯಕರ ಬೆಟ್ಟ-ಬಂಡೆಗಳು:

ಈ ರಚನೆಗಳು ಮಡಗಾಸ್ಕರ್ ದೇಶವು ಭಾರತ ಉಪಖಂಡದೊಂದಿಗೆ ಹೊಂದಿಕೊಂಡಿದ್ದಾಗ ಉಂಟಾದವುಗಳು ಎಂದಿ ತಜ್ಞರು ವಿಶ್ಲೇಷಿಸುತ್ತಾರೆ. ಮಲ್ಪೆ ಕಡಲ ತೀರದಿಂದ ಆರು ಕಿ.ಮೀ ದೂರವಿರುವ ಈ ದ್ವೀಪ ಸಮೂಹಕ್ಕೆ ದೋಣಿಯಿಂದ ಮಾತ್ರವೆ ಹೋಗಲು ಸಾಧ್ಯ. ಇದನ್ನು ಕೋಕೋನಟ್ ದ್ವೀಪ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Arun Prabhu

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X