Search
  • Follow NativePlanet
Share
» »ಅಚ್ಚರಿಗೊಳಿಸುವ ಪ್ರವಾಸಿಗರ ನೆಚ್ಚಿನ ಗುಹೆಗಳು

ಅಚ್ಚರಿಗೊಳಿಸುವ ಪ್ರವಾಸಿಗರ ನೆಚ್ಚಿನ ಗುಹೆಗಳು

By Vijay

ಗುಹೆಗಳು ಮೊದಲಿನಿಂದಲೂ ಕುತೂಹಲ ಕೆರಳಿಸುವ ಪ್ರವಾಸಿ ತಾಣಗಳಾಗಿವೆ. ಗತ ಕಾಲದ ವೈಭವ, ಇಂದಿನಂತೆ ಆಧುನಿಕ ಸೌಲಭ್ಯಗಳಿಲ್ಲದೆಯೂ ನಿಪುಣತೆಯಿಂದ ಬಂಡೆಗಳಲ್ಲಿ ಗುಹೆಗಳನ್ನುಕೆತ್ತಲಾದ ಅಥವಾ ನಿರ್ಮಿಸಲಾದ ಅಂದಿನ ಜನರ ಕೈಚಳಕ ತಿಳಿಸಿ ಕೊಡುವ, ಅದ್ಭುತ ಕಥೆ-ಹಿನ್ನಿಲೆಗಳನ್ನು ಅನಾವರಣಗೊಳಿಸುವ ಪ್ರವಾಸಯೋಗ್ಯ ಸ್ಥಳಗಳಾಗಿವೆ.

ತಿಳಿದುಕೊಳ್ಳಬೇಕಾಗಿರುವ ಒಂದು ವಿಶೇಷ ಸಂಗತಿಯೆಂದರೆ ಭಾರತದಲ್ಲಿ ಸಾಕಷ್ಟು ಗುಹಾ ತಾಣಗಳು ಹಲವು ರಾಜ್ಯಗಳಲ್ಲಿ ಕಂಡುಬಂದರೂ ಮಹಾರಾಷ್ಟ್ರ ರಾಜ್ಯವೊಂದರಲ್ಲೆ ಕಂಡುಬರುವಷ್ಟು ಗುಹಾ ತಾಣಗಳು ಮತ್ತಿನ್ನೆಲ್ಲೂ ಕಂಡುಬರಲಾರದು. ಹೌದು, ಈ ನಿಟ್ಟಿನಲ್ಲಿ ಮಹಾರಾಷ್ಟ್ರ ರಾಜ್ಯವನ್ನು ಭಾರತದ ಗುಹೆಗಳ ರಾಜಧಾನಿ ಎಂದು ಕರೆದರೂ ಸಹ ತಪ್ಪಾಗಲಿಕ್ಕಿಲ್ಲ.

ವಿಶೇಷ ಲೇಖನ : ಭಾರತದ ಪ್ರಮುಖ ಗುಹಾ ದೇವಾಲಯಗಳು

ಸಹ್ಯಾದ್ರಿ ಪರ್ವತ ಶ್ರೇಣಿಗಳ ರುದ್ರಮಯ ಬೆಟ್ಟ ಪರ್ವತಗಳ ಅಂದು-ಸಂದುಗಳಲ್ಲಿ ಹಿಂದೆ ಬೌದ್ಧ ಸನ್ಯಾಸಿಗಳು, ಜೈನ ಸನ್ಯಾಸಿಗಳು ವಾಸಿಸಲು, ತಮ್ಮ ಗುರುಗಳನ್ನು ಪೂಜಿಸಲೆಂದು ನಿರ್ಮಿಸಿದ ಅದೆಷ್ಟೊ ಆಕರ್ಷಕ ಗುಹೆಗಳು ಇಂದು ಮಹಾರಾಷ್ಟ್ರ ರಾಜ್ಯದಲ್ಲಿ ಕಂಡುಬರುತ್ತವೆ. ಇಲ್ಲಿನ ಕೆಲ ಗುಹೆಗಳಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಗಳಿಸಿ ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿವೆ.

ನಿಮಗೇನಾದರೂ ಮಾಹಾರಾಷ್ಟ್ರ ಹಾಗೂ ಅಲ್ಲಿನ ಗುಹೆಗಳ ಬಗ್ಗೆ ಕಿರು ಮಾಹಿತಿ ಮಾತ್ರ ಇದ್ದು ಇನ್ನೂ ಹೆಚ್ಚಿನ ವಿಷಯಗಳ ಕುರಿತೊ ಅಥವಾ ಅಲ್ಲಿಗೆ ಭೇಟಿ ನೀಡಿದಾಗ ಒಂದು ಸಲವಾದರೂ ಸಂದರ್ಶಿಸಲೇಬೇಕಾದ ಕೆಲ ಜನಪ್ರೀಯ ಗುಹೆಗಳ ಕುರಿತು ತಿಳಿಯಬೇಕೆಂದಿದ್ದರೆ ಈ ಲೇಖನವನ್ನೊಮ್ಮೆ ಓದಿ.

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಪಾಂಡವಲೇಣಿ ಗುಹೆಗಳು : ಎರಡು ಹಾಗೂ ಮೂರನೇಯ ಶತಮಾನಗಳ ಮಧ್ಯದಲ್ಲಿ ಬಂಡೆಯಲ್ಲಿ ಕಡಿಯಲಾದ, ಹೀನಯಾನವನ್ನು ಬೌದ್ಧತ್ವವನ್ನು ಪ್ರತಿನಿಧಿಸುವ 24 ಪ್ರತ್ಯೇಕ ಗುಹಾ ರಚನೆಗಳ ಸಮೂಹವಾಗಿದೆ ಪಾಂಡವಲೇಣಿ ಗುಹೆಗಳು. ಇಲ್ಲಿ ಕಂಡುಬರುವ ಎಲ್ಲ ಗುಹಾ ರಚನೆಗಳು ವಿಹಾರಗಳಾಗಿದ್ದು, 18 ನೇಯ ಗುಹೆ ಮಾತ್ರ ಚೈತ್ಯವಾಗಿದೆ. ಅಂದರೆ ಬೌದ್ಧ ಧರ್ಮದಲ್ಲಿ ವಿಹಾರಗಳನ್ನು ಸಾಮಾನ್ಯವಾಗಿ ಆಶ್ರಯ ತಾಣ ಅಥವಾ ಆಶ್ರಮ ಎನ್ನಲಾಗುತ್ತದೆ ಮತ್ತು ಚೈತ್ಯಗಳೆಂದರೆ ಪ್ರಾಥನಾ ಮಂದಿರ. ಇಲ್ಲಿ ಸ್ತೂಪಗಳನ್ನೂ ಸಹ ಕಾಣಬಹುದು.

ಚಿತ್ರಕೃಪೆ: Rashmi.parab

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಸಾಮಾನ್ಯವಾಗಿ ಅಲೆಮಾರಿ ಬೌದ್ಧ ಸನ್ಯಾಸಿಗಳು ಅಲೆದಾಡುವಾಗ ಆಶ್ರಯಾರ್ಥವಾಗಿ ವಿಹಾರಗಳನ್ನು ಬಳಸುತ್ತಿದ್ದರು. ಈ ವಿಹಾರಗಳು ಅವರಿಗೆ ಧರ್ಮ ಛತ್ರಗಳಾಗಿದ್ದು ಮಳೆ, ಬಿಸಿಲು ಹಾಗೂ ಚಳಿಯಿಂದ ರಕ್ಷಿಸಿಕೊಳ್ಳಲು ನೆರವಾಗುತ್ತಿದ್ದವು. ಪಾಂಡವಲೇಣಿ ಗುಹೆಗಳು ಮಹಾರಾಷ್ಟ್ರದ ನಾಶಿಕ್ ಪಟ್ಟಣದ ದಕ್ಷಿಣಕ್ಕೆ ಎಂಟು ಕಿ.ಮೀ ದೂರವಿರುವ ಪವಿತ್ರವಾದ ಬೌದ್ಧ ತಾಣದಲ್ಲಿ ಸ್ಥಿತವಿದೆ ಹಾಗೂ ಇಲ್ಲಿಗೆ ಸುಲಭವಾಗಿ ತೆರಳಬಹುದಾಗಿದೆ.

ಚಿತ್ರಕೃಪೆ: Pmohite

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಪೀತಲ್ ಖೋರಾ ಗುಹೆಗಳು : ಹದಿನೆಂಟು ಬಂಡೆಯಲ್ಲಿ ಕಡಿದ ಗುಹೆಗಳ ಸಮೂಹವಾಗಿರುವ ಈ ತಾಣವು ಕ್ರಿ.ಪೂ ಎರಡನೇಯ ಶತಮಾನಕ್ಕೆ ಸಂಬಂಧಿಸಿದ ಗುಹೆಗಳಾಗಿವೆ. ಭಾರತದಲ್ಲಿ ಪ್ರಪ್ರಥಮವಾಗಿ ಬಂಡೆಯಲ್ಲಿ ಕಡಿದ ಗುಹೆಗಳ ಉದಾಹರಣೆಗಳ ಪೈಕಿ ಇದೂ ಸಹ ಒಂದಾಗಿದೆ. ಪೀತಲ್ ಖೋರಾ ಮಹಾರಾಷ್ಟ್ರದ ಔರಂಗಾಬಾದ್ ಪಟ್ಟಣದಿಂದ 80 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: maharashtratourism.gov.in

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಬೌದ್ಧ ವಾಸ್ತು ಶಿಲ್ಪ, ವರ್ಣಕಲೆಗಳಿಗೆ ಅದ್ಭುತವಾದ ಉದಾಹರಣೆಯಾಗಿರುವ ಈ ಬೌದ್ಧ ಗುಹೆಗಳು ಪಶ್ಚಿಮ ಘಟ್ಟಗಳ ಚಂದೋರಾ ಎಂಬ ಬೆಟ್ಟದ ಮೇಲೆ ಸ್ಥಿತವಿದೆ. ಇಲ್ಲಿರುವ ಗುಹಾ ರಚನೆಗಳಲ್ಲಿ ಮೂರನೆಯ ಕ್ರಮದಲ್ಲಿರುವ ಗುಹೆಯು ಮುಖ್ಯವಾಗಿದೆ. ಏಕೆಂದರೆ ಇದು ಚೈತ್ಯವಾಗಿದ್ದು ಉಳಿದವುಗಳು ವಿಹಾರಗಳಾಗಿವೆ.

ಚಿತ್ರಕೃಪೆ: maharashtratourism.gov.in

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಈ ತಾಣವು ಹೆಚ್ಚು ಜನವಸತಿಯಿಲ್ಲದ ನಿರ್ಜನ ಪ್ರದೇಶದಲ್ಲಿ ನೆಲೆಸಿದ್ದರೂ ಸಹ ಒಮ್ಮೆಯಾದರೂ ಭೇಟಿ ಮಾಡಲೇಬೇಕಾದ ಗುಹಾ ರಚನೆಗಳಾಗಿವೆ. ಔರಂಗಾಬಾದ್ ಇಲ್ಲಿಗೆ ತಲುಪಲು ಪ್ರಮುಖ ಪಟ್ಟಣವಾಗಿದ್ದು ಅಲ್ಲಿಂದ ಸರ್ಕಾರಿ ಬಸ್ಸುಗಳು ತೆರಳಲು ಲಭ್ಯವಿದೆ.

ಚಿತ್ರಕೃಪೆ: maharashtratourism.gov.in

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾಕಾಲಿ ಗುಹೆಗಳು : ಕ್ರಿ.ಪೂ ಒಂದನೇಯ ಶತಮಾನದಿಂದ ಹಿಡಿದು ಕ್ರಿ.ಶ ಆರನೇಯ ಶತಮಾನದ ಮಧ್ಯದಲ್ಲಿ ರಚಿಸಲ್ಪಟ್ಟಿರುವ ಈ ಬಂಡೆಯಲ್ಲಿ ಕಡಿದ ಗುಹೆಗಳು 19 ರಚನೆಗಳ ಸಮೂಹವಾಗಿದೆ. ಮುಂಬೈ ನಗರದ ಅಂಧೇರಿ ಪ್ರದೇಶದ ಪಶ್ಚಿಮದಲ್ಲಿ ಈ ಗುಹೆಗಳು ನೆಲೆಸಿವೆ.

ಚಿತ್ರಕೃಪೆ: Sainath Parkar

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಬಸಾಲ್ಟ್ ಕಲ್ಲಿನ ಒಂದು ಬೃಹತ್ ಬಂಡೆಯಲ್ಲಿ ಈ ಗುಹೆಗಳನ್ನು ಕಡಿಯಲಾಗಿದೆ. ಒಂಭತ್ತನೆಯ ಕ್ರಮಾಂಕದ ಗುಹೆಯು ದೊಡ್ಡದಾಗಿದ್ದು ಬುದ್ಧನ ಹಲವಾರು ಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Sainath468

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಂಗಿ ತುಂಗಿ ಗುಡ್ಡಗಳು : ಇವು ನಾಶಿಕ್ ಜಿಲ್ಲೆಯ ಮಂಗಿ ತುಂಗಿ ಎಂಬ ಗುಡ್ಡಗಳ ಮೇಲಿರುವ ಜೈನ ಗುಹೆಗಳ ರಚನೆಗಳಾಗಿವೆ. ಪಶ್ಚಿಮ ಘಟ್ಟಗಳ ಸೆಲ್ಬರಿ ಶ್ರೇಣಿಯಲ್ಲಿರುವ ಎರಡು ಬೆಟ್ಟಗಳಾಗಿವೆ ಮಂಗಿ ತುಂಗಿ. ಜೈನ ಧರ್ಮಿಯರಿಂದ ಇದೊಂದು ಸಿದ್ಧಕ್ಷೇತ್ರ ಎಂಬ ಹೆಸರು ಪಡೆದಿದ್ದು ಅವರ ನಂಬಿಕೆಯಂತೆ ಇಲ್ಲಿ ಜೈನ ಧರ್ಮದ ಮಹಾವ್ಯಕ್ತಿಗಳು ಹಾಗೂ 99 ಕೋಟಿ ಜೈನ ಮುನಿಗಳು ನಿರ್ವಾಣ ಹೊಂದಿದ್ದಾರೆನ್ನಲಾಗಿದೆ.

ಚಿತ್ರಕೃಪೆ: maharashtratourism.gov.in

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಕುಡಾ ಗುಹೆಗಳು : ಪ್ರಕೃತಿ ಸೊಬಗಿನಿಂದ ಕೂಡಿದ ಸುಂದರ ಕರಾವಳಿ ಭಾಗದಲ್ಲಿ ಈ ಗುಹೆಗಳು ನೆಲೆಸಿವೆ. ಮುಂಬೈನಿಂದ 130 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಗುಹೆಗಳು ರಾಯಗಡ್ ಜಿಲ್ಲೆಯ ಕುಡಾ ಎಂಬ ಹಳ್ಳಿಯ ಬಳಿಯಿರುವ ಬೆಟ್ಟದಲ್ಲಿ ಕಂಡುಬರುತ್ತವೆ. ಇವು ನೆಚ್ಚಿನ ಪ್ರವಾಸಿ ತಾಣವಾಗಿದ್ದು ಇದಕ್ಕೆ ಮುಖ್ಯ ಕಾರಣ ಇದರ ಸುತ್ತಮುತ್ತಲಿರುವ ಸುಂದರ ಪ್ರಕೃತಿ ವೈಭವ ಹಾಗೂ ಇದರ ಅದ್ವಿತೀಯ ಶಿಲ್ಪಕಲೆ.

ಚಿತ್ರಕೃಪೆ: maharashtratourism.gov.in

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಲೇಣ್ಯಾದ್ರಿ ಗುಹೆಗಳು : ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ಎಂಬಲ್ಲಿ ಈ ಗುಹಾ ರಚನೆಗಳಿವೆ. ಈ ಸಮೂಹದಲ್ಲಿ ಒಟ್ಟು 30 ಬಂಡೆಯಲ್ಲಿ ಕಡಿದ ಗುಹಾ ರಚನೆಗಳನ್ನು ಕಾಣಬಹುದು.

ಚಿತ್ರಕೃಪೆ: Niemru

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮೂವತ್ತರಲ್ಲಿ 26 ಗುಹೆಗಳನ್ನು ಪ್ರತ್ಯೇಕವಾಗಿ ಕ್ರಮಾಂಕಿಸಲಾಗಿದೆ. ದಕ್ಷಿಣಕ್ಕೆ ಮುಖ ಮಾಡಿರುವ ಗುಹೆಗಳನ್ನು ಪೂರ್ವದಿಂದ ಪಶ್ಚಿಮವೆಂಬಂತೆ ಕ್ರಮಾಂಕಗಳನ್ನು ನೀಡಲಾಗಿದೆ. 6 ಹಾಗೂ 14 ನೇಯ ಗುಹೆಗಳು ಚೈತ್ಯಗಳಾಗಿದ್ದು ಮಿಕ್ಕಿದ್ದು ವಿಹಾರಗಳಾಗಿವೆ.

ಚಿತ್ರಕೃಪೆ: Niemru

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಇನ್ನೊಂದು ಇಲ್ಲಿನ ವಿಶೇಷವೆಂದರೆ ಏಳನೇಯ ಕ್ರಮಾಂಕದ ಗುಹೆಯು ಹಿಂದು ದೇಗುಲವಾಗಿದ್ದು ಗಣೇಶನಿಗೆ ಮುಡಿಪಾಗಿದೆ. ಇಲ್ಲಿ ಸುಂದರವಾದ ಗಣಪನ ವಿಗ್ರಹವನ್ನು ಕಾಣಬಹುದಾಗಿದೆ. ಅಲ್ಲದೆ ಈ ಗಣಪ ಲೇಣ್ಯಾದ್ರಿ ಗಣಪನೆಂದೆ ಪ್ರಸಿದ್ಧನಾಗಿದ್ದು ಮಹಾರಾಷ್ಟ್ರದ ಅತಿ ಪ್ರಸಿದ್ಧ ಅಷ್ಟ ವಿನಾಯಕರ ಪೈಕಿ ಒಂದಾಗಿದ್ದಾನೆ.

ಚಿತ್ರಕೃಪೆ: Magiceye

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಕಾರ್ಲಾ ಗುಹೆಗಳು : ಮಹಾರಾಷ್ಟ್ರದ ಪ್ರಖ್ಯಾತ ಗಿರಿಧಾಮವಾದ ಲೋಣಾವಲಾ ಬಳಿಯಿರುವ ಕರ್ಲಿ ಎಂಬ ಸ್ಥಳದ ಬಳಿ ನೆಲೆಸಿರುವ ಬಂಡೆಯಲ್ಲಿ ಕಡಿದ ಈ ಬೌದ್ಧ ಗುಹೆಗಳೆ ಕಾರ್ಲಾ ಗುಹೆಗಳು ಅಥವಾ ಕಾರ್ಲೆ ಗುಹೆಗಳೆಂದು ಕರೆಯಲ್ಪಡುತ್ತವೆ.

ಚಿತ್ರಕೃಪೆ: Pradeep717

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಕ್ರಿ.ಪೂ ಎರಡರಿಂದ ಕ್ರಿ.ಶ ಐದನೇಯ ಶತಮಾನಗಳ ಮಧ್ಯದಲ್ಲಿ ನಿರ್ಮಾಣಗೊಂಡ ಈ ಗುಹೆಗಳು ಐತಿಹಾಸಿಕವಾಗಿ ಬೌದ್ಧ ಧರ್ಮದ ಮಹಾಸಂಘಿಕ ಹಾಗೂ ನಂತರ ಹಿಂದೂ ಧರ್ಮದೊಂದಿಗೆ ನಂಟು ಹಾಕಿಕೊಂಡಿವೆ.

ಚಿತ್ರಕೃಪೆ: Sowpar

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಭೌಗೋಳಿಕವಾಗಿ ಈ ಗುಹೆಗಳು ಸ್ಥಿತವಿರುವ ಪ್ರದೇಶವು ಉತ್ತರ ಭಾರತ ಹಾಗೂ ದಕ್ಷಿಣ ಭಾರತವನ್ನು ವಿಭಾಗಿಸುವ ಕೊಂಡಿಯಾಗಿದೆ. ಪುಣೆ ನಗರದಿಂದ 60 ಕಿ.ಮೀ ದೂರದಲ್ಲಿ ಬೆಟ್ಟವೊಂದರ ಬಂಡೆಗಳಲ್ಲಿ ಸುಂದರವಾಗಿ ಈ ಗುಹಾ ರಚನೆಗಳನ್ನು ಕಡಿಯಲಾಗಿದೆ. ಇಲ್ಲಿನ ಶಿಲ್ಪಕಲೆಯೂ ಸಹ ಸಾಕಷ್ಟು ಜನರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Amitmahadik100

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಕಾನ್ಹೇರಿ ಗುಹೆಗಳು : ಈ ಸುಂದರ, ಅದ್ಭುತ ಗುಹಾ ರಚನೆಗಳು ಮಹಾರಾಷ್ಟ್ರದ ರಾಜಧಾನಿ ನಗರವಾದ ಮುಂಬೈನ ಹೊರವಲಯದಲ್ಲೆ ನೆಲೆಸಿರುವುದು ವಿಶೇಷ. ಹಾಗಾಗಿ ಮುಂಬೈ ನಗರವಾಸಿಗಳಿಗೆ ಇದೊಂದು ವಾರಾಂತ್ಯದ ಆದರ್ಶಮಯವ ಪ್ರವಾಸಿ ತಾಣವಾಗುವುದರಲ್ಲಿ ಯಾವುದೆ ಸಂಶಯವಿಲ್ಲ.

ಚಿತ್ರಕೃಪೆ: Ting Chen

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಕಾನ್ಹೇರಿ ಗುಹೆಗಳು, ಉತ್ತರ ಮುಂಬೈನ ಹೊರವಲಯದ ಬೋರಿವಿಲಿ ಎಂಬ ಪ್ರದೇಶದ ಬಳಿ ನೆಲೆಸಿವೆ ಹಾಗೂ ಸುಲಭವಾಗಿ ಈ ತಾಣಕ್ಕೆ ಭೇಟಿ ನೀಡಬಹುದಾಗಿದೆ. ಭಾರತೀಯ ಶೈಲಿಯ ಬಂಡೆ ಕೆತ್ತನೆ ಕಲೆಗೆ ಉತ್ತಮ ಉದಾಹರಣೆಯಾಗಿರುವ ಈ ಗುಹೆಗಳು ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನವನದ ಭಾಗವಾಗಿದ್ದು ಅದರ ಮುಖ್ಯ ದ್ವಾರದಿಂದ ಆರು ಕಿ.ಮೀ ಗಳಷ್ಟು ಒಳಾಂಗಣದಲ್ಲಿ ನೆಲೆಸಿವೆ ಹಾಗೂ ಬೋರಿವಿಲಿ ರೈಲು ನಿಲ್ದಾಣದಿಂದ ಇದು ಏಳು ಕಿ.ಮೀ ದೂರವಿದೆ.

ಚಿತ್ರಕೃಪೆ: Varun Patil

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಪ್ರವಾಸಿಗರು ಈ ಗುಹಾ ತಾಣಕ್ಕೆ ಬೆಳಿಗ್ಗೆ 7:30 ಗಂಟೆಯ ನಂತರ ಪ್ರವೇಶಿಸಬಹುದು. ದೊಡ್ಡದಾದ ಬಸಾಲ್ಟ್ ಕಲ್ಲಿನ ಬಂಡೆಯಲ್ಲಿ ಕೆತ್ತಲಾದ ಈ ಗುಹಾ ರಚನೆಗಳು ಪುರಾತನ ಭಾರತೀಯ ಕಲೆಯ ಮೇಲೆ ಯಾವ ರೀತಿ ಬೌದ್ಧ ಧರ್ಮದ ಪ್ರಭಾವ ಉಂಟಾಯಿತು ಎಂಬುದನ್ನು ಉದಾತ್ತವಾಗಿ ತಿಳಿಸುತ್ತದೆ. ಸ್ಥಳ ಪುರಾಣದ ಪ್ರಕಾರ, ಕಾನ್ಹೇರಿ ಎಂಬ ಹೆಸರು ಮೂಲತಃ ಕೃಷ್ಣಗಿರಿ ಎಂಬ ಸಂಸ್ಕೃತ ಪದದಿಂದ ವ್ಯುತ್ಪತ್ತಿಯಾಗಿದೆ ಎಂದು ಹೇಳಲಾಗುತ್ತದೆ. ಕೃಷ್ಣಗಿರಿ ಎಂದರೆ ಕಪ್ಪು ಬೆಟ್ಟ ಎಂದಾಗುತ್ತದೆ. ಈ ಗುಹಾ ರಚನೆಗಳ ಕಾಲಮಾನವು 10 ನೆಯ ಶತಮಾನಕ್ಕೆ ಕರೆದೊಯ್ಯುತ್ತವೆ.

ಚಿತ್ರಕೃಪೆ: Ting Chen

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಇಲ್ಲಿಯವರೆಗೆ ಸುಮಾರು 109 ಗುಹಾ ರಚನೆಗಳನ್ನು ಉತ್ಖನನ ಮಾಡಿ ಹೊರ ತೆಗೆಯಲಾಗಿದೆ. ಪ್ರತಿಯೊಂದು ಗುಹೆಗಳಲ್ಲಿ ಬೌದ್ಧ ಸ್ತೂಪ ಹಾಗೂ ಕಂಬಗಳ ಆಧಾರವಿರುವುದನ್ನು ಗಮನಿಸಬಹುದು. ಅಲ್ಲದೆ ಬುದ್ಧನ ವಿಗ್ರಹಗಳನ್ನು ಸಹ ಇಲ್ಲಿ ಕಾಣಬಹುದು.

ಚಿತ್ರಕೃಪೆ: Milind13

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಇಲ್ಲಿರುವ ಗುಹೆಗಳಲ್ಲಿ ಬಹುತೇಕ ಗುಹೆಗಳನ್ನು ಬೌದ್ಧ ವಿಹಾರಗಳನ್ನಾಗಿ ಬಳಸಲಾಗುತ್ತಿತ್ತು. ಅಂದರೆ ವಾಸಿಸುವುದರ ಜೊತೆಗೆ ಧ್ಯಾನ ಮಾಡುವುದು ಹಾಗೂ ಅಧ್ಯಯನಗೋಸ್ಕರ ಇವು ಬಳಸಲ್ಪಡುತ್ತಿದ್ದವು. ಪ್ರಾರ್ಥನಾ ಮಂದಿರ.

ಚಿತ್ರಕೃಪೆ: Marco Zanferrari

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಬಹು ಸಂಖ್ಯೆಯಲ್ಲಿರುವ ವಿಹಾರಗಳು ಅಂದಿನ ಸಮಯದಲ್ಲಿ ಬೌದ್ಧ ಸನ್ಯಾಸಿಗಳು ಹೇಗೆ ವ್ಯವಸ್ಥಿತ ರೀತಿಯಲ್ಲಿ ವಾಸಿಸುತ್ತಿದ್ದರು ಎಂಬುದನ್ನು ಮನೋಜ್ಞವಾಗಿ ತಿಳಿಸುತ್ತವೆ. ಮೌರ್ಯರು ಹಾಗೂ ಕುಶಾನರು ಆಳುತ್ತಿದ್ದ ಸಮಯದಲ್ಲಿ ಕಾನ್ಹೇರಿ ಒಂದು ವಿಶ್ವವಿದ್ಯಾಲಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.

ಚಿತ್ರಕೃಪೆ: Ting Chen

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಪ್ರಸ್ತುತ ಈ ಗುಹಾ ತಾಣವು ಸುತ್ತಲೂ ಸಂಜಯ ಗಾಂಧಿ ಅಭಯಾರಣ್ಯದ ದಟ್ಟ ವನಸಿರಿಯಲ್ಲಿ ನೆಲೆಸಿರುವ ಈ ಸುಂದರ ಗುಹಾ ತಾಣವು ಶಾಂತ ಪರಿಸರದಲ್ಲಿದ್ದು ಭೇಟಿ ನೀಡುವವರಿಗೆ ಒಂದು ವಿಶಿಷ್ಟ ಅನುಭೂತಿಯನ್ನು ಕರುಣಿಸುತ್ತದೆ. ಅದರಲ್ಲೂ ವಿಶೇಷವಾಗಿ ಮಳೆಗಾಲದ ಸಮಯವು ಇಲ್ಲಿಗೆ ಭೇಟಿ ನೀಡಲು ಬಲು ಆದರ್ಶಮಯವಾಗಿದೆ. ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ನೆಲೆಸಿರುವ ಈ ರಚನೆಗಳಿಗೆ ಮಳೆಗಾಲದಲ್ಲುಂಟಾಗುವ ತಾತ್ಕಾಲಿಕ ಜಲಪಾತಗಳ ಸವಿಯನ್ನು ಸವಿಯುತ್ತ ಭೇಟಿ ನೀಡುವುದೆ ಒಂದು ಸಂತಸ.

ಚಿತ್ರಕೃಪೆ: Steph C

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಇಲ್ಲಿಗೆ ತಲುಪಲು ಬೋರಿವಿಲಿಯಿಂದ ಪ್ರತಿ ಗಂಟೆಗೊಮ್ಮೆ ಬಸ್ಸುಗಳ ವ್ಯವಸ್ಥೆಯಿದೆ. ಪ್ರವಾಸಿಗರು ರಾಷ್ಟ್ರೀಯ ಉದ್ಯಾನದ ಮುಖ್ಯ ದ್ವಾರ ಹಾಗೂ ಗುಹಾ ರಚನೆಗಳ ಪ್ರವೇಶ ಸ್ಥಳಗಳಲ್ಲಿ ಶುಲ್ಕ ಪಾವತಿಸಿ ಒಳ ಪ್ರವೇಶಿಸಬೇಕಾಗುತ್ತದೆ.

ಚಿತ್ರಕೃಪೆ: Chaitu

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಜೋಗೇಶ್ವರಿ ಗುಹೆಗಳು : ಮುಂಬೈ ನಗರವಲಯದಲ್ಲೆ ಇರುವ ಜೋಗೇಶ್ವರಿ ಪ್ರದೇಶದಲ್ಲಿ ಸ್ಥಿತವಿರುವ ಈ ಪುರಾತನ ಗುಹಾ ರಚನೆಗಳನ್ನು ಕಾಣಬಹುದಾಗಿದೆ. ನಿಜ ಹೇಳಬೇಕೆಂದರೆ ಮುಂಬೈನ ಪ್ರಖ್ಯಾತ ಸ್ಥಳಗಳ ಪೈಕಿ ಒಂದಾದ ಜೋಗೇಶ್ವರಿಗೆ, ಜೋಗೇಶ್ವರಿ ಎಂಬ ಹೆಸರು ಈ ಬಂಡೆಯಲ್ಲಿ ಕಡಿಯಲಾದ ಗುಹೆಗಳಲ್ಲಿರುವ ಜೋಗೇಶ್ವರಿ/ಯೋಗೇಶ್ವರಿ ದೇವಿಯಿಂದಾಗಿಯೆ ಬಂದಿದೆ. 520 ರಿಂದ 550 ರ ಸಮಯಕ್ಕೆ ಸಂಬಂಧಿಸಿದ ಈ ಗುಹಾ ರಚನೆಗಳು ಹಿಂದೂ ಹಾಗೂ ಬೌದ್ಧ ಧರ್ಮಗಳೆರಡರ ಸಾಕ್ಷಿಗಳಿಗೆ ಅದ್ಭುತ ಉದಾಹರಣೆಯಾಗಿದೆ.

ಚಿತ್ರಕೃಪೆ: Vks0009

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಪ್ರಸಿದ್ಧ ಇತಿಹಾಸಕಾರ ವಾಲ್ಟರ್ ಸ್ಪಿಂಕ್ ಅವರ ಪ್ರಕಾರ ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಅತಿ ಹಳೆಯ ಹಾಗೂ ಉದ್ದವಾದ ಗುಹಾ ತಾಣವು ಇದಾಗಿದೆಯಂತೆ. ಪಶ್ಚಿಮ ಹೆದ್ದಾರಿ ಬಳಿ ಇರುವ ಈ ಗುಹಾ ರಚನೆಯ ಸುತ್ತುಮುತ್ತಲೂ ಇಂದು ಸಾಕಷ್ಟು ವಸತಿ ಪ್ರದೇಶಗಳಿರುವುದನ್ನು ಕಾಣಬಹುದು. ಅಲ್ಲದೆ ಉತ್ಪತ್ತಿಯಾಗುವ ಕಲುಶಿತ ನೀರು, ಒಳಚರಂಡಿಯ ನೀರು ಈ ಗುಹಾ ರಚನೆಗಳಲ್ಲಿ ಅಲ್ಲಲ್ಲಿ ಹರಿಯುತ್ತಿರುವುದು ದುರದೃಷ್ಟಕರ. ಆದಾಗ್ಯೂ ಸಾಕಷ್ಟು ಜನರು ಇಲ್ಲಿರುವ ಕೆಲ ದೇಗುಲಗಳಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Vks0009

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಉದ್ದನೆಯ ಪಾದ ಮಾರ್ಗ, ಅಲ್ಲಲ್ಲಿ ಶಿಥಿಲಗೊಂಡ ಕಲ್ಲಿನ ರಚನೆಗಳನ್ನು ಈ ಗುಹೆಗಳ ಮೂಲಕವಾಗಿ ಹಾದು ಹೋಗುವಾಗ ಗಮನಿಸಬಹುದು.

ಚಿತ್ರಕೃಪೆ: Vks0009

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಉದ್ದನೆಯ ಗುಹಾ ರಚನೆಯಲ್ಲಿ ಸಾಗುವಾಗ ಕಂಡುಬರುವ ಗಣೇಶನ ದೇಗುಲ.

ಚಿತ್ರಕೃಪೆ: Vks0009

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಪ್ರತಿ ಶನಿವಾರಗಳಂದು ಈ ಗುಹಾ ತಾಣದಲ್ಲಿರುವ ಈ ಆಂಜನೇಯಾನ ದರ್ಶನಕ್ಕೆಂದೂ ಸಾಕಷ್ಟು ಜನ ಬರುತ್ತಾರೆ.

ಚಿತ್ರಕೃಪೆ: Aalokmjoshi

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಜೋಗೇಶ್ವರಿ ಗುಹೆಗಳಲ್ಲಿರುವ ಜೋಗೇಶ್ವರಿ ದೇವಿಯ ದೇಗುಲ. ಜೋಗೇಶ್ವರಿಯು ಮುಂಬೈನಲ್ಲಿ ವಾಸವಿರುವ ಹಲವಾರು ಮರಾಠಿ ಮನೆತನಗಳ ಮನೆ ದೇವರಾಗಿಯೂ ಪೂಜಿಸಲ್ಪಡುತ್ತಾಳೆ.

ಚಿತ್ರಕೃಪೆ: Vks0009

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಬಾಜಾ/ಭಜೆ ಗುಹೆಗಳು : ಎರಡನೇಯ ಶತಮಾನಕ್ಕೆ ಸಂಬಂಧಿಸಿದ ಪುಣೆ ಜಿಲ್ಲೆಯ ಪ್ರಖ್ಯಾತ ಗಿರಿಧಾಮ ಪ್ರದೇಶವಾದ ಲೋಣಾವಲಾ ಬಳಿ ನೆಲೆಸಿರುವ ಬೌದ್ಧ ಗುಹಾ ರಚನೆಗಳ ಸಮೂಹ ಇದಾಗಿದೆ. ಚೈತ್ಯ, ವಿಹಾರ ಹಾಗೂ ಬೌದ್ಧ ಸ್ತೂಪಗಳನ್ನೊಳಗೊಂಡ ಈ ತಾಣದಲ್ಲಿ ಒಟ್ಟು 22 ಗುಹಾ ರಚನೆಗಳನ್ನು ಕಾಣಬಹುದಾಗಿದೆ. ಕೌಟುಂಬಿಕ ಇಲ್ಲವೆ ಶೈಕ್ಷಣಿಕ ಪ್ರವಾಸ ಮಾಡಲು ಯೋಗ್ಯವಾದ ಸ್ಥಳ ಇದಾಗಿದೆ.

ಚಿತ್ರಕೃಪೆ: Belasd

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಎಲಿಫಂಟಾ ಗುಹೆಗಳು : ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿರುವ ಎಲಿಫೆಂಟಾ ಗುಹೆಗಳು ಮುಂಬೈನ ಕಡಲ ತೀರದಲ್ಲಿವೆ. ಈ ಸ್ಥಳವನ್ನು ಗರಪೂರಿ ಎಂದೂ ಕರೆಯುತ್ತಾರೆ, ಇದರ ಅರ್ಥ 'ಗುಹೆ' ಎಂಬುದಾಗಿದೆ. ಇಲ್ಲಿ ಎರಡು ವಿಭಿನ್ನವಾದ ಗುಂಪಿನ ಗುಹೆಗಳಿದ್ದು, ಒಂದು ಹಿಂದೂ ಹಾಗೂ ಮತ್ತೊಂದು ಬೌದ್ಧ ಧರ್ಮಕ್ಕೆ ಸೇರಿದ್ದಾಗಿದೆ.

ಚಿತ್ರಕೃಪೆ: Christian Haugen

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮುಂಬೈ ನಗರದ ಗೇಟ್ ವೇ ಸಮೀಪದ ಕೊಲಾಬಾದಿಂದ ಈ ದ್ವೀಪಕ್ಕೆ ದೋಣಿ ಅಥವಾ ಫೆರ್ರಿಗಳಲ್ಲಿ ಪ್ರಯಾಣಿಸಬಹುದು. ಹೆಚ್ಚು ಶುಲ್ಕವಿಲ್ಲದೆ ಸಾಮಾನ್ಯ ಟಿಕೆಟ್ ದರ ಹೊಂದಿರುವ ಫೆರ್ರಿ ಬೋಟುಗಳು ಸದಾ ಲಭ್ಯವಿರುತ್ತದೆ. ಇಲ್ಲಿಂದ ದ್ವೀಪಕ್ಕೆ ಸುಮಾರು ಒಂದು ಗಂಟೆಗಳ ಪ್ರಯಾಣವಿದ್ದು ಪ್ರವಾಸಿಗರು ಈ ಯಾನವನ್ನು ಖಂಡಿತವಾಗಿ ಎಂಜಾಯ್ ಮಾಡಬಹುದು ಹಾಗೂ ಇಲ್ಲಿನ ಸುಂದರ ಪ್ರಕೃತಿ ಸೌಂದರ್ಯ, ಮುಂಬೈ ಬಂದರು ಪ್ರವಾಸಿಗರಿಗೆ ಖುಷಿ ಕೊಡುವುದರಲ್ಲಿ ಅನುಮಾನವಿಲ್ಲ.

ಚಿತ್ರಕೃಪೆ: Elroy Serrao

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಫೆರ್ರಿ ನಿಮ್ಮನ್ನು ದ್ವೀಪದ ತೀರದಲ್ಲಿ ಇಳಿಸುತ್ತಿದ್ದಂತೆ ಮುಖ್ಯ ಗುಹೆಯು ನಿಮ್ಮನ್ನು ತನ್ನತ್ತ ಸೆಳೆಯುತ್ತದೆ. ಗುಹೆಯ ಒಳಭಾಗಕ್ಕೆ ಕರೆದುಕೊಂಡು ಹೋಗಲು 'ಗೌಗಿ ಮಿನಿ ಟ್ರೇನ್' ಅಥವಾ 'ಎಲಿಫೆಂಟಾ ಎಕ್ಸ್ ಪ್ರೆಸ್ ಟ್ರೇನ್' ಇದೆ. ಎಲಿಫೆಂಟಾ ಕೇವ್ ಸೃಷ್ಠಿಕರ್ತರು ಯಾರು ಎಂದು ಈವರೆಗೂ ತಿಳಿಯದೇ ಇದ್ದರೂ ಇದರ ಮೂಲ ಸುಮಾರು ಕ್ರಿ.ಶ.5 ರಿಂದ 8 ನೇ ಶತಮಾನ ಎಂದು ತಿಳಿದುಬಂದಿದೆ. ಶಿವ ಗುಹೆಯು ಮುಖ್ಯವಾದ ದೇವಾಲಯವಾಗಿದ್ದು ಇಲ್ಲಿ ನರ್ತಿಸುತ್ತಿರುವ ಶಿವನ ವಿವಿಧ ಭಂಗಿಗಳನ್ನು ನೋಡಬಹುದಾಗಿದೆ.

ಚಿತ್ರಕೃಪೆ: Dan Harrelson

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮತ್ತೊಂದು ವಿಶೇಷವೆಂದರೆ ಇಲ್ಲಿರುವ ಕಲ್ಲಿನಲ್ಲಿ ಅದ್ವಿತೀಯವಾಗಿ ಕೆತ್ತಲಾದ ಶಿವನ ತ್ರಿಮೂರ್ತಿ ರೂಪದ ವಿಗ್ರಹ. ಇದು ಗುಪ್ತರ ಕಾಲದಲ್ಲಿ ಅರಳಿದ ಅತಿ ಶ್ರೇಷ್ಠ ಶಿಲ್ಪ ಎಂದು ಪರಿಗಣಿಸಲ್ಪಟ್ಟಿದೆ. ಶಿವನ ಮೂರು ಮುಖಗಳು ಸೃಷ್ಟಿ, ಸ್ಥಿತಿ ಹಾಗೂ ಲಯಗಳನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ. 20 ಅಡಿಗಳಷ್ಟು ಎತ್ತರದ ಈ ಬೃಹತ್ ಶಿಲ್ಪ ವಿಗ್ರಹವನ್ನು ನೋಡುತ್ತಿರುವಾಗ ಮೈಮನಗಳಲ್ಲಿ ರೋಮಾಂಚನವಾಗದೆ ಇರಲಾರದು. ಅಲ್ಲದೆ ಮುಂಬೈ ಪ್ರವಾಸೋದ್ಯಮ ಇಲಾಖೆಯು "ಗೇಟ್ ವೇ ಆಫ್ ಇಂಡಿಯಾ" ಅನ್ನು ಹಿನ್ನಿಲೆಯಾಗಿ ಪರಿಗಣಿಸಿ ಈ ತ್ರಿಮೂರ್ತಿ ವಿಗ್ರಹವನ್ನು ತನ್ನ ಲಾಂಛನದಲ್ಲಿ ಬಳಸಿಕೊಂಡಿದೆ.

ಚಿತ್ರಕೃಪೆ: Arian Zwegers

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಸ್ವಲ್ಪ ಕಷ್ಟ.. ಸ್ವಲ್ಪ ಧೈರ್ಯ.. ಇವೆರಡನ್ನೂ ಒಟ್ಟಾಗಿ ಸೇರಿಸಿ ಗುಹೆಯ ಮೇಲ್ಭಾಗಕ್ಕೆ ಏರಿದರೆ ಅಲ್ಲೊಂದು ಎತ್ತರದ ಬುರುಜನ್ನು ಕಾಣಬಹುದು. ಅದರ ಮೇಲೆ ನಿಂತರೆ ಅದೊಂದು ಮುಂಬೈ ನಗರದ ವಿಶಾಲವಾದ ಸಮುದ್ರ ತೀರ ಸುಂದರವಾದ ವಿಹಂಗಮ ನೋಟವನ್ನು ನೋಡುಗರಿಗೆ ಉಣಬಡಿಸುತ್ತದೆ. ಅನೇಕ ಪ್ರವಾಸಿಗರ ಅನುಭವದ ಪ್ರಕಾರ, ಮೇಲ್ಭಾಗಕ್ಕೆ ಹತ್ತುವುದು ಬಹಳ ಕಷ್ಟವಾಗಿದ್ದು ಒಮ್ಮೆ ಹತ್ತಿದರೆ ಅದು ನಿಜಕ್ಕೂ ಲಾಭದಾಯಕವೆ ಹೌದು ಎನ್ನುತ್ತಾರೆ.

ಚಿತ್ರಕೃಪೆ: Nickelodian

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಅಜಂತಾ ಗುಹೆಗಳು : ಕ್ರಿ.ಪೂ 2 ನೇ ಶತಮಾನದಷ್ಟು ಹಿನ್ನೆಲೆಯುಳ್ಳ , ಅಜಂತಾ ಗುಹೆಗಳು ಹಿಂದು ಧರ್ಮ, ಬೌದ್ಧ ಮತ್ತು ಜೈನ್ ಧರ್ಮಗಳಿಗೆ, ಸಾಕ್ಷಿಯಾಗಿ ನಿಂತಿರುವ ಮಹಾರಾಷ್ಟ್ರದಲ್ಲಿರುವ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಅದ್ಭುತ ಗುಹಾ ತಾಣಗಳಾಗಿವೆ. ಮಹಾರಾಷ್ಟ್ರ ರಾಜ್ಯದ ಪ್ರಮುಖ ನಗರವಾದ ಔರಂಗಾಬಾದಿನ ಹತ್ತಿರವಿರುವ ಐತಿಹಾಸಿಕ ತಾಣವಾದ ಎಲ್ಲೋರ ಗುಹೆಗಳ ಜೊತೆಗೆ ಅಜಂತ ಗುಹೆಗಳೂ ಸಹ ಪ್ರಪಂಚದ ಒಂದು ಪ್ರಸಿದ್ದ ಪಾರಂಪರಿಕ ಕ್ಷೇತ್ರವೆಂದು ಯುನೆಸ್ಕೋ ಸಂಸ್ಥೆಯಿಂದ ಘೋಷಿತವಾಗಿದೆ.

ಚಿತ್ರಕೃಪೆ: Soman

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

30 ಗುಹೆಗಳ ಗುಂಪಾಗಿರುವ ಅಜಂತಾವು, ಮೂರು ಧರ್ಮಗಳ ಚಿತ್ರಕಲೆ, ಶಿಲ್ಪಕಲೆ ಹಾಗು ಹಸಿಚಿತ್ರಗಳನ್ನು ನಿರೂಪಿಸುತ್ತದೆ. ಅಜಂತದ ಈ ರತ್ನದಂತಹ ಗುಹೆಗಳು ನಿರ್ಮಾಣಗೊಂಡಾಗ ಅದರ ಎಲ್ಲ ಗೋಡೆಗಳು ಕ್ರಿ.ಪೂ 2 ನೇ ಶತಮಾನದಿಂದ ಕ್ರಿ.ಪೂ 6 ಮತ್ತು 7ನೇ ಶತಮಾನದ ವಾಸ್ತವಿಕತೆಗೆ ಕಿಟಕಿಯಂತಿದೆ. ಅಜಂತಾ ಗುಹೆಗಳ ಸವಿವರವಾದ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Leon Yaakov

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಎಲ್ಲೋರಾ ಗುಹೆಗಳು : ಅಜಂತಾ ಬಳಿಯಲ್ಲೆ ಇರುವ ಎಲ್ಲೋರಾ ಗುಹೆಗಳೂ ಸಹ ವಿಶ್ವ ಪಾರಂಪರಿಕ ತಾಣವೆಂಬ ಮಾನ್ಯತೆ ಪಡೆದ ಅದ್ಭುತ ಹಾಗೂ ಸುಂದರವಾಗಿ ಕೆತ್ತಲಾದ ಗುಹಾ ರಚನೆಗಳ ಸಮೂಹವಾಗಿದೆ. ಔರಂಗಾಬಾದ್‌ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಪ್ರಖ್ಯಾತ ಪುರಾತನ ತಾಣವಾದ ಎಲ್ಲೋರಾ ಗುಹೆಗಳನ್ನು ಒಂದು ಜಾಗತಿಕ ಪಾರಂಪರಿಕ ತಾಣ ಎಂದು ಗುರುತಿಸಲಾಗಿದೆ. ಇಲ್ಲಿ ಬಂಡೆಯಲ್ಲಿ ಕಡೆಯಲಾದ ಶಿಲ್ಪಕಲೆಗಳು ನೋಡುಗರನ್ನು ನಿಜಕ್ಕೂ ಮಂತ್ರಮುಗ್ಧರನ್ನಾಗಿಸುತ್ತದೆ.

ಚಿತ್ರಕೃಪೆ: World8115

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಇಲ್ಲಿರುವ ಒಟ್ಟು 34 ರಚನೆಗಳು ಸಾಮಾನ್ಯವಾಗಿ ಮೂರು ಗುಂಪುಗಳಲ್ಲಿರುತ್ತದೆ. ಬುದ್ಧ ಗುಂಪು, ಹಿಂದೂ ಗುಂಪು ಮತ್ತು ಜೈನ ಗುಂಪು. ಬುದ್ಧ ಗುಂಪು ಮೊದಲ ಹನ್ನೆರಡು ಗುಹೆಗಳನ್ನು ಹೊಂದಿರುತ್ತದೆ. ಹಿಂದೂ ಗುಂಪು ನಂತರದ ಹದಿನೇಳು ಗುಹೆಗಳನ್ನು ಹೊಂದಿದೆ. ಹಾಗೇ ಜೈನ ಗುಂಪು ಕೇವಲ ಐದು ಗುಹೆಗಳನ್ನು ಹೊಂದಿದೆ. ಎಲ್ಲಾ ಗುಹೆಗಳೂ ಕೂಡಾ ಸಮೀಪದಲ್ಲೇ ಇವೆ. ಆ ಎಲ್ಲಾ ಗುಹೆಗಳೂ ಕೂಡಾ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಗುಹಾ ಸಂಖ್ಯೆ 12. ತೀನ್ ತಾಲ್. ಕೇವಲ ಒಂದು ಬಂಡೆಯಲ್ಲೆ ಈ ರೀತಿ ವಿಶಿಷ್ಟವಾಗಿ ಅಂತಸ್ತುಗಳನ್ನು ಕೆತ್ತಲಾಗಿರುವುದು ಬಲು ವಿಶೇಷ ಹಾಗೂ ಅಪರೂಪ.

ಚಿತ್ರಕೃಪೆ: Andy king50

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಮಹಾರಾಷ್ಟ್ರದ ಅದ್ಭುತ ಗುಹೆಗಳು:

ಎಲ್ಲೋರಾದಲ್ಲಿ ಕಾಣಸಿಗುವ ಕೊನೆಯ ಗುಹೆಗಳ ಜೋಡಿಯು ಜೈನ ಮತಕ್ಕೆ ಸಂಬಂಧಿಸಿದ್ದಾಗಿದೆ. ಜೈನರ ಪ್ರತಿನಿಧಿಯಾಗಿ ಇವು ಕೊನೆಯ ಪಳೆಯುಳಿಕೆಗಳು. ಇಲ್ಲಿ ಕಾಣುವ ಬಹುತೇಕ ಗುಹೆಗಳು ಸಂಪೂರ್ಣವಾಗಿಲ್ಲ. ಆದರೆ ಬುದ್ಧ ಮತ್ತು ಹಿಂದೂ ಗುಹೆಗಳ ನಿರ್ಮಾಣ ಕಾರ್ಯದಲ್ಲಿ ನಿಪುಣ ತಂತ್ರಜ್ಞರನ್ನು ಬಳಸಿಕೊಳ್ಳಲಾಗಿತ್ತು. ಅತ್ಯದ್ಭುತ ಶಿಲ್ಪಕಲೆಗೆ ಉದಾಹರಣೆಯಾದ ಎಲ್ಲೋರಾ ಗುಹೆಗಳ ಕೈಲಾಸನಾಥ ದೇವಾಲಯ. ಎಲ್ಲೋರಾ ಕುರಿತು ಹೆಚ್ಚಿನ ಮಾಹಿತಿ.

ಚಿತ್ರಕೃಪೆ: Pipimaru

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X