Search
  • Follow NativePlanet
Share
» »2019ನೇ ಜನವರಿಯಲ್ಲಿ ಯಾವೆಲ್ಲಾ ಹಬ್ಬಗಳಿವೆ , ಎಲ್ಲಿ ಆಚರಿಸುತ್ತೀರಾ?

2019ನೇ ಜನವರಿಯಲ್ಲಿ ಯಾವೆಲ್ಲಾ ಹಬ್ಬಗಳಿವೆ , ಎಲ್ಲಿ ಆಚರಿಸುತ್ತೀರಾ?

2019ನೇ ಇಸವಿ ಪ್ರಾರಂಭವಾದ ಮೇಲೆ ಹಬ್ಬಗಳ ಸಾಲುಗಳೂ ಆರಂಭವಾಗುತ್ತದೆ. ಇಂದು ನಾವು ಈ ಜನವರಿ ತಿಂಗಳಲ್ಲಿ ಯಾವ್ಯಾವ ಹಬ್ಬಗಳು, ಉತ್ಸವವಗಳು ಇವೆ ಅನ್ನೋದನ್ನು ತಿಳಿಸಿಕೊಡಲಿದ್ದೇವೆ. ಈ ಹಬ್ಬಗಳನ್ನು ಆಯಾಯಾ ರಾಜ್ಯಗಳಲ್ಲಿ ಆಚರಿಸುವುದೇ ಒಂದು ರೀತಿಯ ಖುಷಿ. ಬೇರೆ ಬೇರೆ ರಾಜ್ಯಗಳಲ್ಲಿ ಒಂದೊಂದು ಉತ್ಸವಗಳಿವೆ ಅವುಗಳ ಬಗ್ಗೆ ತಿಳಿಯೋಣ. ಸಾಧ್ಯವಾದರೆ ಈ ಹಬ್ಬಗಳನ್ನು ಅಲ್ಲೇ ಅಚರಿಸೋಣ.

ರಾನ್ ಉತ್ಸವ

ರಾನ್ ಉತ್ಸವ

PC: gujarat tourism

ರನ್ ಆಫ್ ಕಚ್ ಅಥವಾ ರಾನ್ ಉತ್ಸವ್ ಕಚ್ನಲ್ಲಿನ ಅದ್ಭುತವಾದ ಬಿಳಿ ಉಪ್ಪು ಮರುಭೂಮಿಯಲ್ಲಿ 3 ತಿಂಗಳ ಕಾಲ ಆಚರಿಸುತ್ತಾರೆ. ನಂಬಲಾಗದ ಜಾನಪದ ನೃತ್ಯಗಳು, ಸಂಗೀತ, ಕರಕುಶಲ ಮಳಿಗೆಗಳು, ಸಾಹಸ ಕ್ರೀಡೆಗಳು, ಮತ್ತು ಆಹಾರಗಳೊಂದಿಗೆ ಉತ್ಸವವು ಈ ಪ್ರದೇಶದ ಸುಂದರವಾದ ಪರಂಪರೆ ಮತ್ತು ಸಂಸ್ಕೃತಿಯನ್ನು ತೋರಿಸುತ್ತದೆ. 2019 ರ ನವೆಂಬರ್ 1 ರಿಂದ 2019 ರ ಫೆಬ್ರುವರಿ 28 ರವರೆಗೆ ನಡೆಯಲಿದೆ. ಬಿಳಿ ಉಪ್ಪು ಚಂದ್ರನ ಬೆಳದಿಂಗಳಲ್ಲಿ ಯಾವ ರೀತಿ ಹೊಳೆಯುತ್ತದೆ ಎನ್ನುವುದನ್ನು ನೋಡಲು ಹುಣ್ಣಿಮೆಯಲ್ಲಿ ಈ ಸ್ಥಳಕ್ಕೆ ಭೇಟಿ ನೀಡಬೇಕು. ಮುಂದಿನ ಹುಣ್ಣಿಮೆ ರಾತ್ರಿ ಜನವರಿ 21 ರಂದು ಬರಲಿದೆ.

3 ದಿನದ ರಜೆಯಲ್ಲಿ ಚಿಕ್ಕಮಗಳೂರಿನಲ್ಲಿ ಏಲ್ಲೆಲ್ಲಾ ತಿರುಗಾಡಬಹುದು

ಅಂತರಾಷ್ಟ್ರೀಯ ಗಾಳಿಪಟ ಉತ್ಸವ

ಅಂತರಾಷ್ಟ್ರೀಯ ಗಾಳಿಪಟ ಉತ್ಸವ

PC: gujarat tourism

ಗುಜರಾತ್‌ನ ಅಹಮದಾಬಾದ್‌ನಲ್ಲಿ ಈಗಾಗಲೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭವಾಗಿದೆ. ಜನವರಿ 6ರಿಂದ ಜನವರಿ 14ರ ವರೆಗೆ ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ, ಉತ್ತರಾಯಣದ ಪ್ರಯುಕ್ತ ಈ ಅಂತರಾಷ್ಟ್ರೀಯ ಗಾಳೀಪಟ ಉತ್ಸವವನ್ನು ಪ್ರತಿವರ್ಷ ಆಯೋಜಿಸಲಾಗುವುದು. ಸಬರಮತಿ ರಿವರ್‌ಫ್ರಂಟ್‌ ಬಳಿ ಈ ಉತ್ಸವವನ್ನು ಆಯೋಜಿಸಲಾಗಿದೆ. ಈ ಬಾರಿ 30 ನೇ ವರ್ಷದ ಗಾಳೀಪಟ ಉತ್ಸವವನ್ನು ಆಚರಿಸಲಾಗುತ್ತಿದೆ. ಈ ಗಾಳಿಪಟ ಉತ್ಸವದಲ್ಲಿ ನೀವು ಗುಜರಾತಿ ಖಾದ್ಯಗಳನ್ನೂ ಸವಿಯಬಹುದು.

ಅಂತರಾಷ್ಟ್ರೀಯ ಗಾಳಿಪಟ ಉತ್ಸವ

ಅಂತರಾಷ್ಟ್ರೀಯ ಗಾಳಿಪಟ ಉತ್ಸವ

PC: youtube

ಹೆಸರಾಂತ ಲೇಖಕರು ಮತ್ತು ವಾಘ್ಮಿಗಳನ್ನು ಭೇಟಿ ಮಾಡಲು ಮತ್ತು ಸಾಹಿತ್ಯವನ್ನು ಆಚರಿಸಲು ಜೈಪುರ್ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳಲೇ ಬೇಕು. ಜೈಪುರ ಸಾಹಿತ್ಯ ಉತ್ಸವದ 12 ನೇ ಆವೃತ್ತಿಯು ವಿಜ್ಞಾನ ಮತ್ತು ಭವಿಷ್ಯದ ಬಗ್ಗೆ ಇರುತ್ತದೆ. ಜಾಫ್ರಿ ಆರ್ಚರ್, ಯಾನ್ ಮಾರ್ಟೆಲ್ (ಲೈಫ್ ಆಫ್ ಪೈ), ಆಂಡ್ರೆ ಆಸಿಯಾಮನ್ (ಕಾಲ್ ಮಿ ಬೈ ಬೈ ಯುವರ್ ನೇಮ್), ಮತ್ತು ಕೋಲ್ಸನ್ ವೈಟ್ಹೆಡ್ (ದಿ ಅಂಡರ್ಗ್ರೌಂಡ್ ರೈಲ್ರೋಡ್) ಲೇಖಕಕರನ್ನು ಭೇಟಿಯಾಗಬಹುದು. ಸಾಹಿತ್ಯಾಸಕ್ತರು ಈ ಉತ್ಸವದಲ್ಲಿ ಪಾಲ್ಗೊಳ್ಳುವುದನ್ನು ಮಿಸ್ ಮಾಡಿಕೊಳ್ಳಬೇಡಿ. ಈ ಉತ್ಸವವರು ಜನವರಿ 26ರಿಂದ 28ರ ವರೆಗೆ ಡಿಗ್ಗಿ ಪ್ಯಾಲೆಸ್‌ ಹೋಟೆಲ್‌ನಲ್ಲಿ ನಡೆಯಲಿದೆ.

ಆಧಾರ್‌ ಲಿಂಕ್ ಮಾಡಿದ್ರೆ ತಿಂಗಳಲ್ಲಿ 12 ಟಿಕೇಟ್ ಬುಕ್ ಮಾಡಬಹುದಂತೆ

ಬಿಕಾನೆರ್ ಒಂಟೆಗಳ ಉತ್ಸವ

ಬಿಕಾನೆರ್ ಒಂಟೆಗಳ ಉತ್ಸವ

PC: youtube

ರಾಜಸ್ತಾನದ ಬಿಕಾನೆರ್ ಒಂಟೆಗಳ ಉತ್ಸವದಲ್ಲಿ ನೀವು ಬಣ್ಣ ಬಣ್ಣದ ಬಟ್ಟೆಗಳಿಂದ ಕಂಗೊಳಿಸುವ ಒಂಟೆಗಳನ್ನು ಕಾಣಬಹುದು. ಈ ಒಂಟೆಗಳೂ ರೇಸ್‌ನಲ್ಲಿ ಭಾಗವಹಿಸುತ್ತವೆ. ಒಂಟೆಗಳ ಸೌಂದರ್ಯ ಪ್ರದರ್ಶನಗಳು ಮತ್ತು ಒಂಟೆ ನೃತ್ಯಗಳಲ್ಲಿ ಭಾಗವಹಿಸುವುದನ್ನು ನೋಡಲು ನೀವು ಬಿಕಾನೆರ್ ಕ್ಯಾಮೆಲ್ ಫೆಸ್ಟಿವಲ್‌ನಲ್ಲಿ ಪಾಲ್ಗೊಳ್ಳಬೇಕು. ಉತ್ಸವವು ಮರುಭೂಮಿಯ ಪ್ರಾಣಿಗಳು ಯಾವರೀತಿ ಆಚರಿಸಿಕೊಳ್ಳುತ್ತವೆ ಎನ್ನುವುದನ್ನು ತಿಳಿಸುತ್ತದೆ. ಈ ಉತ್ಸವವು ಬಾಣಬಿರುಸು ಪ್ರದರ್ಶನಗಳೊಂದಿಗೆ ಮತ್ತು ರಾಜಸ್ಥಾನಿ ಜಾನಪದ ಕಲಾವಿದರ ಮನರಂಜನೆಯ ಪ್ರದರ್ಶನದೊಂದಿಗೆ ಕೊನೆಗೊಳ್ಳುತ್ತದೆ. ಈ ಉತ್ಸವವು ಜನವರಿ 12 ಹಾಗೂ 13ರಂದು ನಡೆಯುತ್ತದೆ.

ಲೊಹರಿ

ಲೊಹರಿ

PC: youtube ಲೊಹರಿಯ ಆಹ್ಲಾದಕರ ಉತ್ಸವವು ಸುಗ್ಗಿಯ ಋತುವಿನ ಆರಂಭದ ಆಚರಣೆಯಾಗಿದೆ. ಮುಖ್ಯವಾಗಿ ಸಿಖ್ ಮತ್ತು ಹಿಂದು ಸಮುದಾಯಗಳು ಪಂಜಾಬ್ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ಇದನ್ನು ಆಚರಿಸುತ್ತಾರೆ. ಉತ್ಸವವು ಪವಿತ್ರ ಅಗ್ನಿಯನ್ನು ಹೊತ್ತಿಸಿ ಅದರ ಸುತ್ತಲೂ ಪ್ರಾರ್ಥೀಸುತ್ತಾ ನೃತ್ಯ ಮಾಡುತ್ತಾರೆ. ಇದು ಹೆಚ್ಚಾಗಿ ಪಂಜಾಬ್ ಹಾಗೂ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ. ಲೊಹರಿಯನ್ನು ಜನವರಿ13ರಂದು ಆಚರಿಸಲಾಗುತ್ತದೆ.

ಮಂಡ್ಯದಲ್ಲಿರುವ ಭೀಮೇಶ್ವರಿಯಲ್ಲಿ ಮೀನಿಗೆ ಗಾಳ ಹಾಕಿದ್ದೀರಾ?

ಮದ್ರಾಸ್ ಮ್ಯೂಸಿಕಲ್ ಉತ್ಸವ

ಮದ್ರಾಸ್ ಮ್ಯೂಸಿಕಲ್ ಉತ್ಸವ

PC: youtube

ಮದ್ರಾಸ್ ಮ್ಯೂಸಿಕಲ್ ಉತ್ಸವವು ಮುಂಬರುವ ಮತ್ತು ಪ್ರಖ್ಯಾತ ಸಂಗೀತ ಕಲಾವಿದರಿಗೆ ವೇದಿಕೆಯಾಗಿದೆ. ಮದ್ರಾಸ್ ಮ್ಯೂಸಿಕ್ ಫೆಸ್ಟಿವಲ್ ಭಾರತದ ಅತೀ ದೊಡ್ಡ ವಾರ್ಷಿಕ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮವಾಗಿದೆ. ಇದು ಸಾಂಪ್ರದಾಯಿಕ ನೃತ್ಯಗಳು, ದಕ್ಷಿಣ ಭಾರತೀಯ ಕರ್ನಾಟಕ ಸಂಗೀತ, ಮತ್ತು ಇತರ ಕಲೆಗಳನ್ನು ತೋರಿಸುತ್ತದೆ. ಈ ತಿಂಗಳ ಅವಧಿಯ ಉತ್ಸವದಲ್ಲಿ ಚೆನ್ನೈನಲ್ಲಿ 1000 ಪ್ರದರ್ಶನಗಳು ನಡೆಯುತ್ತವೆ. ಇದು ಡಿಸೆಂಬರ್ ಕೊನೆಯಿಂದ ಜನವರಿ ಮಧ್ಯದ ವರೆಗೆ ನಡೆಯುತ್ತಾ ಇರುತ್ತದೆ.

ಗಣರಾಜ್ಯೋತ್ಸವ

ಗಣರಾಜ್ಯೋತ್ಸವ

PC: Rushrrs09

ಭಾರತದ ಸಂವಿಧಾನದ ಗೌರವಾರ್ಥವಾಗಿ ಆಚರಿಸಲಾಗುವ, ಗಣರಾಜ್ಯೋತ್ಸವವು ಒಂದು ರಾಷ್ಟ್ರೀಯ ಹಬ್ಬವಾಗಿದೆ. ಭಾರತೀಯ ಸೈನ್ಯ, ನೌಕಾಪಡೆ ಮತ್ತು ವಾಯು ಪಡೆಗಳ ಮೂರು ವಿಭಾಗಗಳನ್ನು ಪ್ರದರ್ಶಿಸುವ ಒಂದು ಅದ್ಭುತ ಮೆರವಣಿಗೆಯ ಕವಾಯತುಗಳು ಇಲ್ಲಿ ಕಾಣಬಹುದು. ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳನ್ನು ನೀವು ನೋಡಬೇಕಾದರೆ ದೆಹಲಿಗೆ ಹೋಗಬೇಕು. ಜನವರಿ 26ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.

ಹಿಮಾಲಯದಲ್ಲಿರುವ ಯಮುನೋತ್ರಿಯ ಬಗ್ಗೆ ಗೊತ್ತಾ?

ಪೊಂಗಲ್

ಪೊಂಗಲ್ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಸುಗ್ಗಿಯ ಉತ್ಸವವಾಗಿದ್ದು, ಈ ಮೂಲಕ ಪ್ರಕೃತಿಗೆ ಧನ್ಯವಾದಗಳನ್ನು ಸಲ್ಲಿಸಲಾಗುತ್ತದೆ. ಪೊಂಗಲ್ ಖಾದ್ಯವನ್ನು ತಯಾರಿಸಿ, ರಂಗೋಲಿಗಳನ್ನು ತಯಾರಿಸುವುದು, ನೃತ್ಯ ಮಾಡುವುದು ಮತ್ತು ಕುಟುಂಬದೊಂದಿಗೆ ಒಟ್ಟಿಗೆ ಸೇರಿ ಭೋಜನ ಮಾಡುವುದು ಈ ಹಬ್ಬದ ಕೆಲವು ಪ್ರಮುಖ ಅಂಶಗಳಾಗಿವೆ. ಮುಖ್ಯವಾಗಿ ತಮಿಳುನಾಡಿನಲ್ಲಿಇದನ್ನು ಆಚರಿಸಲಾಗುತ್ತದೆ. ಜನವರಿ 15 ಹಾಗೂ 16ರಂದು ಪೊಂಗಲ್‌ನ್ನು ಆಚರಿಸಲಾಗುತ್ತದೆ.

ಮಕರ ಸಂಕ್ರಾಂತಿ

ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ . ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆ . ಮನೆಯಲ್ಲಿ ಎಳ್ಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ "ಎಳ್ಳುಹಂಚುವುದು" ಸಂಕ್ರಾಂತಿಯ ಸಂಪ್ರದಾಯ. ಎಳ್ಳಿನ ಜೊತೆಗೆಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು.ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೆಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು ಬೆಲ್ಲ" ತಯಾರಿಸಲಾಗುತ್ತದೆ.

ಅರಕ್ಕೂ ಬಲೂನ್ ಉತ್ಸವ

ಅರಕ್ಕೂ ಬಲೂನ್ ಉತ್ಸವ

PC: arakuballoonfestival

ಆಂಧ್ರ ಪ್ರದೇಶ ಪ್ರವಾಸೋದ್ಯಮದಿಂದ ಆಯೋಜಿಸಲ್ಪಟ್ಟ ಉತ್ಸವ ಇದಾಗಿದೆ. ಅರಾಕು ಬಲೂನ್ ಉತ್ಸವದ ಎರಡನೇ ಆವೃತ್ತಿಯು ನಿಸರ್ಗ ಮಧ್ಯೆ ಬಿಸಿ ಗಾಳಿಯ ಬಲೂನ್ ಸವಾರಿಗಳನ್ನು ತೆರೆದಿಡುತ್ತದೆ. ರಾತ್ರಿಯ ಶಿಬಿರವು ಅರಣ್ಯದಲ್ಲಿ, ಕಾಫಿ ತೋಟದ ಪ್ರವಾಸಗಳು, ಮತ್ತು ಅರಕುವಿನ ಸಾಂಸ್ಕೃತಿಕ ಪ್ರವೃತ್ತಿಯನ್ನು ತರುತ್ತದೆ. ನೈಸರ್ಗಿಕ ಭೂದೃಶ್ಯಗಳು, ಆರೊಮ್ಯಾಟಿಕ್ ಕಾಫಿ ತೋಟಗಳು, ಪ್ರದೇಶದ ಸಾಂಸ್ಕೃತಿಕ ಜನಾಂಗೀಯತೆ, ಅದ್ಭುತ ಜಲಪಾತಗಳು ಮತ್ತು ಅರಕು ಕಣಿವೆಗಳು ಎಲ್ಲವನ್ನೂ ಒದಗಿಸುತ್ತದೆ. ಈ ಉತ್ಸವವವು ಅರಕೂವಿನಲ್ಲಿ ಜನವರಿ 18 ರಿಂದ 20 ರವರೆಗೆ ನಡೆಯಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more