Search
  • Follow NativePlanet
Share
» »ಊಟಿಯಲ್ಲಿರುವ ಈ ಪ್ರಸಿದ್ಧ ಮಂದಿರಗಳನ್ನು ನೀವು ನೋಡಿರಲಿಕ್ಕಿಲ್ಲ

ಊಟಿಯಲ್ಲಿರುವ ಈ ಪ್ರಸಿದ್ಧ ಮಂದಿರಗಳನ್ನು ನೀವು ನೋಡಿರಲಿಕ್ಕಿಲ್ಲ

ಊಟಿಗೆ ಹೋಗಬೇಕು ಎನ್ನುವುದು ಬಹುತೇಕರ ಕನಸಾಗಿರುತ್ತದೆ. ಊಟಿಯಲ್ಲಿನ ಹಚ್ಚಹಸಿರಿನ ಪ್ರಕೃತಿ ಸೌಂದರ್ಯ, ತಂಪಾದ ಗಾಳಿ, ಚಳಿಯ ವಾತಾವರಣ ಇದೆಲ್ಲಾ ನಿಮ್ಮನ್ನು ಒಂದು ರೀತಿಯ ಅನುಭವವನ್ನು ಉಂಟುಮಾಡುತ್ತದೆ. ಊಟಿಯಲ್ಲಿ ಅನೇಕ ಜಲಪಾತಗಳಿವೆ, ಟೀ ಎಸ್ಟೇಟ್, ಕ್ಯಾರೇಟ್ ತೋಟ ಎಲ್ಲಾ ಕಾಣಸಿಗುತ್ತದೆ. ಇವಿಷ್ಟೇ ಅಲ್ಲ ಊಟಿಯಲ್ಲಿ ಇನ್ನೂ ಅನೇಕ ತಾಣಗಳಿವೆ. ಅವುಗಳಲ್ಲೂ ಇಲ್ಲಿನ ಪ್ರಸಿದ್ಧ ಮಂದಿರಗಳ ಬಗ್ಗೆ ನೀವು ತಿಳಿಯಲೇ ಬೇಕು.

ಯಾವೆಲ್ಲಾ ಮಂದಿರಗಳಿವೆ

ಯಾವೆಲ್ಲಾ ಮಂದಿರಗಳಿವೆ

ತಮಿಳುನಾಡಿನಲ್ಲಿರುವ ಊಟಿ ಬೇಸಿಗೆಗಾಲದಲ್ಲಂತೂ ಸುತ್ತಾಡಲು ಯೋಗ್ಯವಾದ ತಾಣವಾಗಿದೆ. ಬಹಳಷ್ಟು ನವದಂಪತಿಗಳ ಹನಿಮೂನ್ ತಾಣವೂ ಆಗಿದೆ. ಬೇಸಿಗೆಯಿಂದ ಮುಕ್ತಿ ಪಡೆಯಲು ಅನೇಕರು ರಜಾದಿನಗಳಲ್ಲಿ ಊಟಿಗೆ ಪ್ರವಾಸ ಹೋಗುತ್ತಾರೆ. ಊಟಿಯಲ್ಲಿ ಅನೇಕ ಕೆರೆಗಳು, ಕಾಡುಗಳು, ಬೆಟ್ಟಗಳು ಹಾಗೂ ಹಲವಾರು ಸುಂದರವಾದ ಸ್ಥಳಗಳಿವೆ. ಬಹುತೇಕರಿಗೆ ಊಟಿಯ ಪ್ರಕೃತಿ ಸೌಂದರ್ಯ ಇಷ್ಟವಾಗುತ್ತದೆ. ಇಲ್ಲಿ ಅನೇಕ ಮಂದಿರಗಳೂ ಇವೆ. ಇವು ಐತಿಹಾಸಿಕ ಮಹತ್ವವನ್ನು ಹೊಂದಿವೆ. ಹಾಗಾದ್ರೆ ಬನ್ನಿ ಈ ಸುಂದರ ಹಿಲ್‌ಸ್ಟೇಶನ್‌ನಲ್ಲಿರುವ ಮಂದಿರಗಳ ಬಗ್ಗೆ ತಿಳಿಯೋಣ...

ಒಸಾಮಾ ಬಿನ್ ಲಾಡೆನ್ ಆಧಾರ್ ಕಾರ್ಡ್ ಮಾಡಿಸಿದ್ದು ಇಲ್ಲೇ !ಒಸಾಮಾ ಬಿನ್ ಲಾಡೆನ್ ಆಧಾರ್ ಕಾರ್ಡ್ ಮಾಡಿಸಿದ್ದು ಇಲ್ಲೇ !

ಏಲ್ಕಾ ಹಿಲ್ ಮುರುಗನ್ ಮಂದಿರ

ಏಲ್ಕಾ ಹಿಲ್ ಮುರುಗನ್ ಮಂದಿರ

PC-Redtigerxyz

ಏಲ್ಕಾ ಹಿಲ್ ಮುರುಗನ್ ಮಂದಿರವು ಊಟಿಯ ಏಲ್ಕಾ ಬೆಟ್ಟದ ಮೇಲೆ ಇದೆ. ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ನೀವು ಈ ಮಂದಿರವನ್ನು ತಲುಪಬೇಕಾದರೆ ಬೆಟ್ಟ ಹತ್ತಲೇ ಬೇಕು. ಧಾರ್ಮಿಕ ಮಹತ್ವವನ್ನು ಹೊರತುಪಡಿಸಿ ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಶಿವನ ಆಕರ್ಷಕ ಮೂರ್ತಿ. ಈ ಮೂರ್ತಿಯು ೪೦ ಫೀಟ್ ಎತ್ತರವಿದೆ. ಇಲ್ಲಿನ ಸುತ್ತಮುತ್ತಲ ವಾತಾವರಣ ಕೂಡಾ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಧ್ಯಾನ ಮಾಡುವವರಿಗಂತೂ ಈ ಸ್ಥಳ ಸೂಕ್ತವಾಗಿದೆ.

ಟೋಡಾ ಮಂದಿರ

ಟೋಡಾ ಮಂದಿರ

ಟೋಡಾ ಮಂದಿರವು ಊಟಿ ಪಟ್ಟಣದಿಂದ ಸುಮಾರು 10 ಕಿ.ಮಿ ದೂರದಲ್ಲಿದೆ. ಈ ಮಂದಿರವ ಮೇಲ್ಚಾವಣಿ ಟೋಡಾ ಜನಾಂಗದವರ ಮನೆಯ ಸೂರಿನಂತೆ ಇದೆ. ಟೋಡಾ ಜನಾಂಗದವರಿಗೆ ಈ ಮಂದಿರದೊಳಗೆ ಪ್ರವೇಶ ನಿರಾಕರಿಸಲಾಗಿದೆ. ಟೋಡಾ ಮಂದಿರವು ಈ ಕ್ಷೇತ್ರದ ಪ್ರಮುಖ ಮಂದಿರವಾಗಿದೆ. ಟೋಡಾ ಜನಾಂಗದ ಜನರು ಪಾರಂಪರಿಕ ಜೀವನಶೈಲಿಯನ್ನು ನೋಡಲು ನೀವು ಟೋಡಾ ಮಂದಿರಕ್ಕೆ ಭೇಟಿ ನೀಡಲೇ ಬೇಕು.

ವಲ್‌ಪರಾಯ್ ಲಿಂಗ ಮಂದಿರ

ವಲ್‌ಪರಾಯ್ ಲಿಂಗ ಮಂದಿರ

ಊಟಿಯ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಈ ಮಂದಿರದ ಹೆಸರು ವಲ್‌ಪರಾಯ್ ಲಿಂಗ ಮಂದಿರ. ಇದು ಶಿವ ಲಿಂಗ ರೂಪಕ್ಕೆ ಸಮರ್ಪಿತವಾಗಿದೆ. ಇದು ಊಟಿಯಲ್ಲಿನ ಶಿವ ಭಕ್ತರ ಪ್ರಮುಖ ಮಂದಿರವಾಗಿದೆ. ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶಿವನ ದರ್ಶನಕ್ಕಾಗಿ ಆಗಮಿಸುತ್ತಾರೆ. ಶಿವರಾತ್ರಿಯಂದು ಇದು ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ.

ಈ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ರೆ ಹೆರಿಗೆ ಸುಸೂತ್ರವಾಗಿ ನಡೆಯುತ್ತಂತೆ !ಈ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ರೆ ಹೆರಿಗೆ ಸುಸೂತ್ರವಾಗಿ ನಡೆಯುತ್ತಂತೆ !

ಇಲ್ಲಿನ ಮುಖ್ಯ ಆಕರ್ಷಣೆ

ಇಲ್ಲಿನ ಮುಖ್ಯ ಆಕರ್ಷಣೆ

PC- Redtigerxyz

ಇಲ್ಲಿ ವರ್ಷದ ದೇವಿ ಮಾರಿಯಮ್ಮನಿಗೆ ಸಮರ್ಪಿತವಾದ ಊಟಿಯ ಈ ಮಂದಿರವು ಬಹಳ ಸುಂದರವಾಗಿದೆ. ಇಲ್ಲಿ ಹಿಂದೂ ಭಕ್ತರು ವರ್ಷಾ ದೇವಿಯನ್ನು ಪ್ರಸನ್ನಗೊಳಿಸಲು ಸುಡುವ ಕೆಂಡದ ಮೇಲೆ ನಡೆಯುತ್ತಾರೆ. ಈ ಮಂದಿರದ ಈ ಆಕರ್ಷಣೆಗಳು ನಿಮಗೂ ಇಷ್ಟವಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X