» »ಮನ ಸೆಳೆಯುವ ಗಡಿಯಾರದ ಗೋಪುರಗಳು

ಮನ ಸೆಳೆಯುವ ಗಡಿಯಾರದ ಗೋಪುರಗಳು

Posted By: Divya

ಭಾರತದೆಲ್ಲೆಡೆ ನೋಡಬಹುದಾದಂತಹ ಅನೇಕ ತಾಣಗಳಿವೆ. ಕೆಲವು ಪ್ರಮುಖ ನಗರ ಭಾಗಗಳಲ್ಲಿ ಎತ್ತರದ ಗಡಿಯಾರದ ಗೋಪುರಗಳು ಪ್ರವಾಸಿಗರನ್ನು ಆಕರ್ಷಿಸುವುದು ವಿಶೇಷ. ಗಡಿಯಾರದ ಗೋಪುರ ಎಂದೊಡನೆ ಒಂದೇ ಬಗೆಯ ಗೋಪುರ ಎಂದು ಭಾವಿಸಬೇಕಾಗಿಲ್ಲ. ಪ್ರತಿಯೊಂದು ವಿಭಿನ್ನ ಆಕಾರ, ಎತ್ತರ ಹಾಗೂ ವಿಶೇಷತೆಯನ್ನು ಹೊಂದಿರುತ್ತದೆ.

ದೇಶ ವಿದೇಶದಲ್ಲಿಯೂ ಕಂಗೊಳಿಸುವ ಗಡಿಯಾರದ ಗೋಪುರಗಳು ಕೆಲವು ಶತಮಾನಗಳ ಪ್ರತೀಕವಾಗಿದ್ದರೆ, ಕೆಲವು ವ್ಯಕ್ತಿಯ ಹಿನ್ನೆಲೆಯನ್ನು ಇನ್ನೂ ಕೆಲವು ಸ್ಥಳಗಳ ಪ್ರಾಮುಖ್ಯತೆಯನ್ನು ಬಿಂಬಿಸುತ್ತವೆ. ಭಾರತದಲ್ಲಿ ಇಂತಹ ಸುಂದರ ಪರಿಕಲ್ಪನೆಯಲ್ಲಿ ರೂಪುಗೊಂಡ ಗಡಿಯಾರದ ಗೋಪುರಗಳು ಹಲವಾರಿವೆ. ಅವುಗಳ ಫೋಟೋಪ್ರವಾಸ ಮಾಡೋಣ ಬನ್ನಿ...

ರಾಜಬೈ ಗಡಿಯಾರ ಗೋಪುರ

ರಾಜಬೈ ಗಡಿಯಾರ ಗೋಪುರ

ಮುಂಬೈನ ದಕ್ಷಿಣ ಭಾಗದಲ್ಲಿರುವ ಈ ಗೋಪುರ ಮುಂಬೈ ವಿಶ್ವವಿದ್ಯಾನಿಲಯದ ಆವರಣದಲ್ಲಿದೆ. 1869ರಲ್ಲಿ ನಿರ್ಮಾಣಗೊಂಡ ಈ ಗೋಪುರ 280 ಅಡಿ ಎತ್ತರದಲ್ಲಿದೆ. ಸರ್ ಜಾರ್ಜ್ ಗಿಲ್ಬರ್ಟ್ ಸ್ಕಾಟ್ ಅವರು ಇದರ ವಾಸ್ತುಶಿಲ್ಪಿ. ಮುಂಬೈನ ಸ್ಟಾಕ್ ಎಕ್ಸ್ ಚೇಂಜ್ ಸ್ಥಾಪಕ ಪ್ರೇಮ್ ಚಂದ್ ರಾಯ್ ಚಂದ್ ಅವರು ತಮ್ಮ ತಾಯಿಯ ಹೆಸರನ್ನು ಈ ಗೋಪುರಕ್ಕೆ ಇಟ್ಟಿದ್ದಾರೆ.
PC: wikipedia.org

ಫಿಝಿಲ್ಕಾ ಗಡಿಯಾರ ಗೋಪುರ

ಫಿಝಿಲ್ಕಾ ಗಡಿಯಾರ ಗೋಪುರ

ಪಂಜಾಬ್‍ನಲ್ಲಿರುವ ಈ ಗೋಪುರವು ಫಿಝಿಲ್ಕಾದ ನಾಲ್ಕು ಮಾರುಕಟ್ಟೆಯು ಸಂಗಮವಾಗುವ ಸ್ಥಳದಲ್ಲಿದೆ. 1996ರಲ್ಲಿ ನಿರ್ಮಾಣಗೊಂಡ ಈ ಗೋಪುರ 1000 ಅಡಿ ಎತ್ತರವನ್ನು ಹೊಂದಿದೆ. ಇದು ಭಾರತದ ಎರಡನೇ ಅತಿ ಎತ್ತರದ ಗಡಿಯಾರದ ಗೋಪುರ ಎಂದು ಗುರುತಿಸಲಾಗಿದೆ.
PC: flickr.com

ಲಕ್ನೋ ಗಡಿಯಾರ ಗೋಪುರ

ಲಕ್ನೋ ಗಡಿಯಾರ ಗೋಪುರ

ಸರ್ ಜಾರ್ಜ್ ಕೂಪರ್ ಅವರ ಆಗಮನದ ಗುರುತಿಗಾಗಿ ನವಾಬ್ ನಾಸಿರ್-ಉದ್ ಹೈದರ್ 1881ರಲ್ಲಿ ನಿರ್ಮಿಸಿದರು. ಆಕಾಲದಲ್ಲಿ ಇದರ ನಿರ್ಮಾಣಕ್ಕಾಗಿ 1.75 ಲಕ್ಷ ರೂಪಾಯಿ ವ್ಯಯಿಸಲಾಯಿತು. ಇದು 219 ಅಡಿ ಎತ್ತರವನ್ನು ಹೊಂದಿದೆ.
PC: wikipedia.org

ಸಿಕಂದರಾಬಾದ್ ಗಡಿಯಾರ ಗೋಪುರ

ಸಿಕಂದರಾಬಾದ್ ಗಡಿಯಾರ ಗೋಪುರ

120 ಅಡಿ ಎತ್ತರವನ್ನು ಹೊಂದಿರುವ ಈ ಗೋಪುರವನ್ನು ನಿಜಾಮ್ ಎನ್ನುವವರು ವಿನ್ಯಾಸ ಗೊಳಿಸಿದರು. ಸಿಕಂದರಾಬಾದ್ ಕ್ಯಾಂಟೋನ್ಮೆಂಟ್ ಪೋಸ್ಟ್ ನಲ್ಲಿದ್ದ ಬ್ರಿಟಿಷ್ ಅಧಿಕಾರಿಯೊಬ್ಬರ ನೆನಪಿಗಾಗಿ ಈ ಗೋಪುರವನ್ನು ನಿರ್ಮಿಸಲಾಯಿತು. 1897 ರಲ್ಲಿ ನಿರ್ಮಾಣಗೊಂಡಿದೆ.
PC: wikipedia.org

ದೆಹ್ರಾದೂನ್ ಗಡಿಯಾರ ಗೋಪುರ

ದೆಹ್ರಾದೂನ್ ಗಡಿಯಾರ ಗೋಪುರ

ದೆಹ್ರಾದೂನ್‍ನ ಪಲ್ತಾನ್ ಮಾರುಕಟ್ಟೆಯ ನಗರ ಭಾಗದಲ್ಲಿ ಈ ಗೋಪುರ ನಿಂತಿದೆ. ಷಡ್ಭುಜೀಯ ವಾಸ್ತುಶಿಲ್ಪವನ್ನು ಹೊಂದಿರುವ ಈ ಗೋಪುರಕ್ಕೆ ಆರು ಮುಖಗಳಿವೆ.ಇದನ್ನು ಬಲ್ಬೀರ್ ಟವರ್ ಎಂತಲೂ ಕರೆಯುತ್ತಾರೆ. ಭಾರತದ ಸ್ವಾತಂತ್ರ್ಯದ ಸಂಭ್ರಮದ ನೆನಪಿಗಾಗಿ ನಿರ್ಮಿಸಲಾಗಿದೆ. 1948ರಲ್ಲಿ ಇದರ ಅಡಿಪಾಯ ಮುಹೂರ್ತ ಮಾಡಲಾಯಿತು. ನಂತರ 1953ರ ವೇಳೆಗೆ ಸಿದ್ಧಗೊಂಡಿತು ಎನ್ನಲಾಗುತ್ತದೆ.
PC: wikipedia.org

ಕೊಲ್ಲಂ ಗಡಿಯಾರ ಗೋಪುರ

ಕೊಲ್ಲಂ ಗಡಿಯಾರ ಗೋಪುರ

ಇದು 1944ರಲ್ಲಿ ನಿರ್ಮಾಣಗೊಂಡಿದೆ. ಈ ಗೋಪುರ ಮಾಜಿ ಕೊಲ್ಲಂ ಮುನ್ಸಿಪಲ್ ಅಧ್ಯಕ್ಷ ಕೆ.ಜಿ.ಪರಮೇಶ್ವರನ್ ಪಿಳ್ಳೈ ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ. ನಾಲ್ಕು ದಿಕ್ಕುಗಳಲ್ಲಿ ಮುಖವನ್ನು ಹೊಂದಿರುವ ಈ ಗೋಪುರವನ್ನು ಬಿಳಿ ಸಿಮೆಂಟ್‍ನಿಂದ ನಿರ್ಮಿಸಲಾಗಿದೆ ಎನ್ನಲಾಗುತ್ತದೆ.
PC: wikimedia.org

ಬಹರೈಚ್ ಗಡಿಯಾರ ಗೋಪುರ

ಬಹರೈಚ್ ಗಡಿಯಾರ ಗೋಪುರ

ಉತ್ತರ ಪ್ರದೇಶದಲ್ಲಿರುವ ಈ ಗಡಿಯಾರ ಗೋಪುರ ಸರಯು ನದಿ ದಡದ ಪ್ರದೇಶದಲ್ಲಿ ನಿಂತಿದೆ. ಇದು ಲಕ್ನೋದಿಂದ 125 ಕಿ.ಮೀ. ದೂರದಲ್ಲಿದೆ.
PC: wikipedia.org

ಮುರ್ಷಿದಾಬಾದ್ ಗಡಿಯಾರ ಗೋಪುರ

ಮುರ್ಷಿದಾಬಾದ್ ಗಡಿಯಾರ ಗೋಪುರ

ನಿಜಾಮತ್ ಉದ್ಯಾನದಲ್ಲಿ ನಿಂತಿರುವ ಗೂಪುರ ಗಡಿಯಾರ ಗಟ್ಟಿಯಾದ ಶಬ್ದವನ್ನು ಹೊರ ಹೊಮ್ಮಿಸುತ್ತದೆ. ಇದನ್ನು ಸಗೂರ ಮಿಸ್ಟ್ರೀ ಎನ್ನುವವರು ವಿನ್ಯಾಸಗೊಳಿಸಿದರು ಎನ್ನಲಾಗುತ್ತದೆ. ಈ ಗೋಪುರ ಗಡಿಯಾರದ ಮುಖವು ಭಾಗಿರಥಿ ನದಿಯಕಡೆಗಿದೆ.
PC: wikipedia.org

ಮೈಸೂರು ಗೂಪುರ ಗಡಿಯಾರ

ಮೈಸೂರು ಗೂಪುರ ಗಡಿಯಾರ

ಈ ಗೋಪುರ ಮೈಸೂರಿನ ಹೊಸ ಬಸ್‍ನಿಲ್ದಾಣದ ಬಳಿಯಿದೆ. ದೇವರಾಜ ಮಾರುಕಟ್ಟೆ ಎದುರು ನಿಂತಿರುವ ಈ ಗೋಪುರಕ್ಕೆ ಡೆಫರಿನ್ನ ಗಡಿಯಾರ ಗೋಪುರ ಎಂದು ಕರೆಯುತ್ತಾರೆ. ಇದು 1886ರಲ್ಲಿ ನಿರ್ಮಾಣಗೊಂಡಿತು ಎನ್ನಲಾಗುತ್ತದೆ.
PC: wikipedia.org

Read more about: mysore