Search
  • Follow NativePlanet
Share
» »ಬೆಂಗಳೂರಿನ ಸಖತ್ ಶಾಪಿಂಗ್ ಸ್ಥಳಗಳು

ಬೆಂಗಳೂರಿನ ಸಖತ್ ಶಾಪಿಂಗ್ ಸ್ಥಳಗಳು

By Vijay

ಪ್ರವಾಸ ಹೊರುಡುವುದಾಗಲಿ ಅಥವಾ ಶಾಪಿಂಗ್ ಮಾಡುವುದಾಗಲಿ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದೆ. ನಾವು ಪಿಕ್ನಿಕ್ ಅಥವಾ ಪ್ರವಾಸಕ್ಕೆಂದು ಯಾವುದೇ ಸ್ಥಳಕ್ಕೆ ಭೇಟಿ ನೀಡಿದರೆ ಅಲ್ಲೆನಾದರೂ ಒಂದು ವಸ್ತುವನ್ನೊ ಅಥವಾ ಖಾದ್ಯಗಳನ್ನೊ ಖರಿದಿಸುತ್ತಲೆ ಇರುತ್ತೇವೆ. ಇನ್ನೂ ಮಹಾನಗರಗಳಿಗಂತೂ ಭೇಟಿ ನೀಡಿದರೆ ಮುಗಿಯಿತು, ಬೇಕಾದಂತಹ ವಸ್ತುಗಳನ್ನು ನಿರಾಯಾಸವಾಗಿ ಖರೀದಿ ಮಾಡಬಹುದು. ಅಷ್ಟೆ ಅಲ್ಲ, ನಗರಗಳಲ್ಲಿ ವ್ಯಾಪಾರ ಸ್ಪರ್ಧೆಯು ಬಿರುಸಾಗಿಯೆ ಇರುವುದರಿಂದ ನಮಗೆ ಬೇಕಾದಂತಹ ವಸ್ತುಗಳನ್ನು ಕೈಗೆಟುಕುವ ದರದಲ್ಲೂ ಕೂಡ ಕೊಂಡುಕೊಳ್ಳಬಹುದು. ಇದು ಪ್ರವಾಸದಿಂದಾಗುವ ಮತ್ತೊಂದು ಪ್ರಯೋಜನವೆಂದೆ ಹೇಳಬಹುದು.

ತುಂಬಿ ತುಳುಕುತ್ತಿದ್ದರೂ ಕೂಡ ಬೆಂಗಳೂರು ಮಹಾನಗರವೂ ಯಾವ ಭೇದ ಭಾವವೂ ಇಲ್ಲದೆ ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಹೃತ್ಪೂರ್ವಕವಾಗಿ ತುಂಬು ಹೃದಯದಿಂದ ಸ್ವಾಗತಿಸುತ್ತಿರುತ್ತದೆ. ಆದರೆ ಇದರ ಮಹತ್ವವನ್ನು ಅರಿಯದ ಅನೇಕ ಮೂಢ ಜನ ನಗರವನ್ನು ಅಶುಭ್ರ ಹಾಗು ಕಲುಷಿತಗೊಳಿಸುತ್ತಿರುವುದು ಅಷ್ಟೆ ಖೇದಕರ ಹಾಗು ನಾಚಿಕೆಗೇಡಿನ ಸಂಗತಿ. ಅದಿರಲಿ...ಬೆಂಗಳೂರು ಮಹಾನಗರದಲ್ಲಿ ವಿವಿಧ ಬಗೆಯ ವಸ್ತುಗಳನ್ನು ಖರೀದಿಸಲು ಪ್ರತ್ಯೇಕವಾದ ವಿವಿಧ ಶಾಪಿಂಗ್ ಪ್ರದೇಶಗಳನ್ನು ಹೊಂದಿದೆ. ಆಯಾ ವಸ್ತುಗಳನ್ನು ಇಂತಹ ಇಂತಹ ಪ್ರದೇಶಗಳಲ್ಲಿ ಕೊಂಡರೆ ಉತ್ತಮ ಗುಣಮಟ್ಟ, ಕಡಿಮೆ ಬೆಲೆ ಗ್ಯಾರಂಟಿ ಎಂದೆ ಹೇಳಬಹುದು.

ಬನ್ನಿ ಈ ಲೇಖನದ ಮೂಲಕ ನಮ್ಮ ಶಾಪಿಂಗ್ ಪ್ರವಾಸವನ್ನು ಆರಂಭಿಸೋಣ.

ಕಮರ್ಷಿಯಲ್ ಸ್ಟ್ರೀಟ್:

ಕಮರ್ಷಿಯಲ್ ಸ್ಟ್ರೀಟ್:

ಬೆಂಗಳೂರಿನ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ ವಿಧಾನ ಸೌಧದ ಆರು ಕಿ.ಮೀ ವ್ಯಾಸದಲ್ಲಿ ನೆಲೆಸಿದೆ. ಈ ಭಾಗವು ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇಲ್ಲಿರುವ ಒಂದು ರಸ್ತೆಯು ಎಲ್ಲ ರೀತಿಯ ವ್ಯಾಪಾರ ಮಳಿಗೆಗಳಿಂದಾಗಿ ಹೆಸರುವಾಸಿಯಾಗಿದೆ. ಅದೇ ಕಮರ್ಷಿಯಲ್ ಸ್ಟ್ರೀಟ್. ನಿತ್ಯವೂ ಸಾಕಷ್ಟು ಜನಸಂದಣಿ ಹೊಂದಿರುವ ಈ ರಸ್ತೆಯಲ್ಲಿ ಬೆಳಗಿನ ಸಮಯದಲ್ಲೆ ಹೊಟ್ಟೆ ತುಂಬುವಷ್ಟು ತಿಂಡಿಯನ್ನು ಸೇವಿಸಿಯೆ ಖರಿದಿಗೆಂದು ಇಳಿಯಬೇಕು. ಗಮನದಲ್ಲಿಡಬೇಕಾದ ಒಂದು ಅಂಶವೆಂದರೆ ಇಲ್ಲಿನ ಅನೇಕ ವ್ಯಾಪಾರಿಗಳು ವಸ್ತುಗಳಿಗೆ ಹೆಚ್ಚಿನ ಬೆಲೆಯನ್ನು ಹೇಳುವುದರಿಂದ ಚೌಕಾಸಿ ಮಾಡುವ ಚಾತೂರ್ಯ ನಿಮಗಿರಬೇಕು.

ಚಿತ್ರಕೃಪೆ: GatesPlusPlus

ಎಂ.ಜಿ. ರಸ್ತೆ:

ಎಂ.ಜಿ. ರಸ್ತೆ:

ಬೆಂಗಳೂರಿನ ಪ್ರಖ್ಯಾತ ಎಂ.ಜಿ ರಸ್ತೆಯು ಹಲವು ವೈಭವಯುತ ಶಾಪಿಂಗ್ ಮಳಿಗೆಗಳಿಗೆ ಹೆಸರುವಾಸಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡಗಳನ್ನು ಕೊಳ್ಳಲು ಇಷ್ಟವಿದ್ದಲ್ಲಿ ಎಂ.ಜಿ ರಸ್ತೆಯಲ್ಲಿನ ಮಳಿಗೆಗಳಿಗೆ ಒಮ್ಮೆಯಾದರೂ ಭೇಟಿ ನೀಡಬಹುದು. ಈ ರಸ್ತೆಯು ಟ್ರಿನಿಟಿ ವೃತ್ತದಿಂದ ಕುಂಬ್ಳೆ ವೃತ್ತದವರೆಗೆ ಚಾಚಿದೆ. ಪ್ರಸ್ತುತ ಮೆಟ್ರೊ ರೈಲು ಸಂಚಾರವು ಇಲ್ಲಿ ಪ್ರಾರಂಭವಾಗಿರುವುದರಿಂದ ಮುಂಚಿನ ಎಂ.ಜಿ ರಸ್ತೆಯ ಅಮೋಘ ನೋಟವು ಕಳೆದುಹೋಗಿದೆ. ಚಿತ್ರದಲ್ಲಿರುವುದು ಮೆಟ್ರೊ ಮುಂಚಿನ ಎಂ.ಜಿ ರಸ್ತೆಯ ಒಂದು ನೋಟ.

ಚಿತ್ರಕೃಪೆ: Kprateek88

ಬ್ರಿಗೇಡ್ ರಸ್ತೆ:

ಬ್ರಿಗೇಡ್ ರಸ್ತೆ:

ಇದೊಂದು ನಗರದ ಹಾಯ್ ಎಂಡ್ ಶಾಪಿಂಗ್ ಸ್ಟ್ರೀಟ್. ಎಂ.ಜಿ ರಸ್ತೆ ಹಾಗು ರೆಸಿಡೆನ್ಸಿ ರಸ್ತೆಯ ಮಧ್ಯದಲ್ಲಿ ಇರುವ ಈ ಬೀದಿಯು ಉತ್ಸಾಹಭರಿತ ವ್ಯಾಪಾರಿ ಬೀದಿಯಾಗಿದೆ. ಈ ರಸ್ತೆಯ ಇನ್ನೊಂದು ವಿಶೇಷತೆಯೆಂದರೆ ಹೊಸ ವರ್ಷವನ್ನು ರಾತ್ರಿಯ ವೇಳೆ ಜನರು ಗುಂಪಾಗಿ ಇಲ್ಲಿ ಸೇರಿ ಅತ್ಯಂತ ಹರ್ಷ ಹಾಗು ಸಡಗರದಿಂದ ಸ್ವಾಗತಿಸುತ್ತಾರೆ. ಆ ಸಮಯದಲ್ಲಿ ಎಲ್ಲ ವ್ಯಾಪಾರಿ ಮಳಿಗೆಗಳು ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡು ಮಿನುಗುತ್ತಿರುತ್ತದೆ.

ಚಿತ್ರಕೃಪೆ: Amit

ಮಲ್ಲೇಶ್ವರಂ:

ಮಲ್ಲೇಶ್ವರಂ:

ಬೆಂಗಳೂರಿನ ಪುರಾತನ ಪ್ರದೇಶಗಳ ಪೈಕಿ ಒಂದಾಗಿರುವ ಮಲ್ಲೇಶ್ವರಂ ಒಂದು ಸಾಂಪ್ರದಾಯಿಕ ಸ್ಥಳವಾಗಿದೆ. ಹಲವಾರು ದೇವಸ್ಥಾನಗಳನ್ನು ಹೊಂದಿರುವ ಈ ಪ್ರದೇಶವು ಪೂಜಾ ಹಾಗು ಗ್ರಂಥಿಗೆ ಸಾಮಗ್ರಿಅಗಳ ಮಳಿಗೆಗಳಿಗೆ ಪ್ರಸಿದ್ಧವಾಗಿದೆ. ಹಬ್ಬ ಹರಿದಿನಗಳ ಸಾಕಷ್ಟು ಸಾಮಗ್ರಿಗಳು ಈ ಪ್ರದೇಶದಲ್ಲಿ ದೊರಕುತ್ತವೆ. ಈ ಪ್ರದೇಶವು ಹೂವಿನ ಹಾಗು ತರಕಾರಿ ಮಾರುಕಟ್ಟೆಗಳಿಗೆ ಪ್ರಸಿದ್ಧವಾಗಿದೆ.

ಚಿತ್ರಕೃಪೆ

ಮಾರತಹಳ್ಳಿ:

ಮಾರತಹಳ್ಳಿ:

ಬೆಂಗಳೂರಿನಲ್ಲಾದ ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಮುಂಚೆ ಇದೊಂದು ಸಾಧಾರಣ ಹಳ್ಳಿ/ಪ್ರದೇಶವಾಗಿತ್ತು. ಮತ್ತೊಂದು ರೋಚಕ ಸಂಗತಿಯೆಂದರೆ ಹಿಂದೊಮ್ಮೆ ಮಾರುತ ಎಂಬ ಯುದ್ಧ ವಿಮಾನವೊಂದು ಆಕಸ್ಮಿಕವಾಗಿ ಈ ಸ್ಥಳದಲ್ಲಿ ಅಪಘಾತಗೊಂಡಿತ್ತು. ತದನಂತರ ಈ ಹಳ್ಳಿಗೆ ಮಾರುತಹಳ್ಳಿ ಎಂದು ಹೆಸರುಬಂದು ಕ್ರಮೇಣವಾಗಿ ಇಂದು ಮಾರತಹಳ್ಳಿ ಎಂಬ ಹೆಸರಿನಿಂದ ಚಿರಪರಿಚಿತವಾಗಿದೆ. ಐಟಿ ಪ್ರದೇಶಗಳಾದ ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ ರಸ್ತೆ, ಹೆಚ್.ಎ.ಎಲ್ ನಿಲ್ದಾಣ ಹಾಗು ಹೊರ ವರ್ತುಲ ರಸ್ತೆಗಳಿಗೆ ಈ ಪ್ರದೇಶವು ಹತ್ತಿರದಲ್ಲಿರುವುದರಿಂದ ಇಂದು ಈ ಪ್ರದೇಶವು ಪ್ರಮುಖ ಸ್ಥಳಗಳ ಪೈಕಿ ಒಂದಾಗಿದೆ ಹಾಗು ಅಸಂಖ್ಯಾತ ಪ್ರತಿಷ್ಠಿತ ವ್ಯಾಪಾರಿ ಮಳಿಗೆಗಳು, ಶಾಪಿಂಗ್ ಮಾಲ್‍ಗಳು ಇಂದು ಇಲ್ಲಿ ತಲೆ ಎತ್ತಿವೆ. ಇದು ಕೂಡ ಶಾಪಿಂಗ್ ಮಾಡಲು ಒಂದು ಉತ್ತಮವಾದ ಸ್ಥಳವಾಗಿದೆ.

ಚಿತ್ರಕೃಪೆ: Amol.Gaitonde

ಜಯನಗರ:

ಜಯನಗರ:

ಬೆಂಗಳೂರಿನ ಜಯನಗರವು ಪ್ರತಿಷ್ಠಿತ ನಗರಗಳ ಪೈಕಿ ಒಂದಾಗಿದೆ. 1948 ರಲ್ಲೆ ಈ ನಗರದ ಸ್ಥಾಪನೆಗೆ ಅಡಿಪಾಯವನ್ನು ಹಾಕಲಾಗಿದ್ದು ಇಂದು ವಿಸ್ತಾರವಾದ 10 ಬ್ಲಾಕುಗಳಲ್ಲಿ ಇದು ವಿಂಗಡನೆಗೊಂಡಿದೆ. ಖರೀದಿ ಪ್ರಿಯ ಪ್ರವಾಸಿಗರಿಗೆ ಸಾಕಷ್ಟು ಆಯ್ಕೆಗಳು ಇಲ್ಲಿ ಲಭ್ಯವಿದೆ. ಸಣ್ಣ ಪ್ರಮಾಣದ ಅಂಗಡಿಗಳಿಂದ ಹಿಡಿದು ಅಂತಾರಾಷ್ಟ್ರೀಯ ಗುಣಮಟ್ಟದ ಬ್ರ್ಯಾಂಡ್ ಮಳಿಗೆಗಳನ್ನು ಇಲ್ಲಿ ಕಾಣಬಹುದು. ನಾಲ್ಕನೆ ಬ್ಲಾಕಿನ ಬಿ.ಡಿ.ಎ ವಾಣಿಜ್ಯ ಸಂಕೀರ್ಣವು ಅಲಂಕಾರಿಕ ಹಾಗು ಸಾಂಪ್ರದಾಯಿಕ ಮಳಿಗೆಗಳಿಗೆ ಹೆಸರುವಾಸಿಯಾಗಿದೆ. ಅಷ್ಟೆ ಅಲ್ಲ ಇಲ್ಲಿನ ನಂದನವನ ಹೈಟೆಕ್ ಕಿಡ್ಸ್ ಪಾರ್ಕ್ ಒಂದು ಆದರ್ಶಪ್ರ್ಯಾವದ ಉದ್ಯಾನವಾಗಿದೆ. ಇದಿರುವುದು ಜಾಯನಗರದ ನಾಲ್ಕನೆ ಬ್ಲಾಕಿನಲ್ಲಿ.

ಚಿಕ್ಪೇಟೆ:

ಚಿಕ್ಪೇಟೆ:

ಹಲವು ಉತ್ಪನ್ನಗಳು ಸುಲಭವಾಗಿ ದೊರೆಯಲೆಂದು ಮೊದಲನೆಯ ಕೆಂಪೇಗೌಡರು 1537 ರಲ್ಲಿ ಸಮಗ್ರ ಬೆಂಗಳೂರುಪೇಟೆಯನ್ನು ಸ್ಥಾಪಿಸಿದ್ದರು. ಇಲ್ಲಿರುವ ಹಲವು ಪೇಟೆಗಳಲ್ಲಿ ಚಿಕ್ಪೇಟೆಯು ಒಂದಾಗಿದೆ. ಈ ಮಾರುಕಟ್ಟೆ ಪ್ರದೇಶವು ಬಟ್ಟೆ ಹಾಗು ವಿವಿಧ ವಸ್ತ್ರಗಳಿಗೆ ಬಹು ಪ್ರಸಿದ್ಧವಾಗಿದೆ. ಮುಖ್ಯವಾಗಿ ಮದುವೆ ಮುಂಜಿ ಮುಂತಾದ ಸಮಾರಂಭಗಳಿಗೆ ಖರೀದಿಸುವ ರೇಷ್ಮೆ ಸೀರೆಗಳು, ಪಂಚೆ, ಶಲ್ಯ ಇತ್ಯಾದಿ ಗುಣಮಟ್ಟದ ವಸ್ತುಗಳು ಇಲ್ಲಿ ನಿರಾಯಾಸವಾಗಿ ದೊರೆಯುತ್ತವೆ ಅದು ಕೂಡ ಕೊಂಚ ಕಡಿಮೆ ಬೆಲೆಯಲ್ಲಿ.

ಚಿತ್ರಕೃಪೆ: Nvvchar

ಮೆಜೆಸ್ಟಿಕ್/ಗಾಂಧಿನಗರ:

ಮೆಜೆಸ್ಟಿಕ್/ಗಾಂಧಿನಗರ:

ಮೆಜೆಸ್ಟಿಕ್ ಬೆಂಗಳೂರು ನಗರದ ಹೃದಯ ಬಡಿತ ಎಂದರೆ ತಪ್ಪಾಗಲಾರದು. ಅತ್ಯಂತ ಜನಸಂದಣಿಯಿಂದ ಕೂಡಿರುವ ಈ ಪ್ರದೇಶದಲ್ಲಿ ಎಲ್ಲ ರೀತಿಯ ವಸ್ತುಗಳು ಅತಿ ಕಡಿಮೆ ದರದಿಂದ ಹಿಡಿದು ದುಬಾರಿ ಮೊತ್ತದವರೆಗೂ ಲಭಿಸುತ್ತವೆ. ಕೇಂದ್ರ ಬಸ್ ನಿಲ್ದಾಣ ಹಾಗು ರೈಲು ನಿಲ್ದಾಣಗಳು ಈ ಪ್ರದೇಶದಲ್ಲೆ ಇರುವುದರಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಿರುತ್ತಾರೆ. ರಸ್ತೆ ಬದಿಯ ಪುಟ್ಟ ಚಹಾ ಅಂಗಡಿಯಿಂದ ಹಿಡಿದು ಪಂಚತಾರಾ ಸೌಲಭ್ಯವುಳ್ಳ ಹೋಟೆಲ್‍ಗಳು ಇಲ್ಲಿವೆ. ಬೆಂಗಳೂರಿನ ಸಂಸ್ಕೃತಿಯನ್ನು ಅತಿ ಹತ್ತಿರದಿಂದ ನೋಡ ಬಯಸಲು ಇಷ್ಟವಿದ್ದಲ್ಲಿ ಈ ಪ್ರದೇಶದಲ್ಲಿ ಒಮ್ಮೆ ಸುತ್ತಾಡಿದರೆ ಸಾಕು.

ಗಾಂಧಿ ಬಜಾರ್:

ಗಾಂಧಿ ಬಜಾರ್:

ಬೆಂಗಳೂರಿನ ಬಸವನಗುಡಿ ಪ್ರದೇಶದಲ್ಲಿರುವ ಗಾಂಧಿ ಬಜಾರ್ ಮಾರುಕಟ್ಟೆ ಪ್ರದೇಶವು ಹಲವು ಚಿಕ್ಕ ಪುಟ್ಟ ಅಂಗಡಿ ಮುಗ್ಗಟ್ಟುಗಳಿಂದ ಝಗಮಗಿಸುತ್ತದೆ. ಹೂವಿನ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಬಟ್ಟಬರೆಗಳ ಮಳಿಗೆಗಳು, ಉಪಹಾರ ದರ್ಶಿನಿಗಳು, ಗಿಫ್ಟ್ ಐಟಮ್ ಅಂಗಡಿಗಳು ಹೀಗೆ ಪಟ್ಟಿ ಬೆಳೆಯುತ್ತಲೆ ಸಾಗುತ್ತದೆ. ಬೆಂಗಳೂರಿನಲ್ಲಿದ್ದಾಗ ಒಮ್ಮೆ ಭೇಟಿ ನೀಡಲೇಬೇಕಾದ ಪ್ರದೇಶ ಇದಾಗಿದೆ.

ಕೆ.ಆರ್.ಮಾರುಕಟ್ಟೆ:

ಕೆ.ಆರ್.ಮಾರುಕಟ್ಟೆ:

ಕೃಷ್ಣ ರಾಜೇಂದ್ರ ಮಾರುಕಟ್ಟೆ ನಗರದ ಹೃದಯಭಾಗದಲ್ಲಿರುವ ಅತ್ಯಂತ ಜನಸಂದಣಿಯಿಂದ ಕೂಡಿರುವ ಸದಾ ಚಟುವಟಿಕೆಯಿಂದ ಕೂಡಿರುವ ಮಾರುಕಟ್ಟೆ ಪ್ರದೇಶ ಇದಾಗಿದೆ. ಅತಿ ಕಡಿಮೆ ಬೆಲೆಯಲ್ಲಿ ವಿವಿಧ ವಸ್ತುಗಳನ್ನು ಕೊಳ್ಳುವ ಆಸೆ ನಿಮಗಿದ್ದರೆ ಈ ಪ್ರದೇಶಕ್ಕೊಮ್ಮೆ ಭೇಟಿ ನೀಡಲೇಬೇಕು. ಮೆಜೆಸ್ಟಿಕ್ ಬಸ್ಸು ನಿಲ್ದಾಣದಿಂದ ಸಾಕಷ್ಟು ಸಂಖ್ಯೆಯಲ್ಲಿ ಬಸ್ಸುಗಳು ಈ ಮಾರುಕಟ್ಟೆಗೆ ತೆರಳಲು ದೊರಕುತ್ತವೆ.

ಚಿತ್ರಕೃಪೆ: MrEccentric

ಬನಶಂಕರಿ:

ಬನಶಂಕರಿ:

ಬೆಂಗಳೂರಿನ ದಕ್ಷಿಣ ವಲಯದಲ್ಲಿರುವ ಬನಶಂಕರಿ ಪ್ರದೇಶವು ನಗರದ ಅತ್ಯಂತ ದೊಡ್ಡ ಪ್ರದೇಶವಾಗಿದೆ. ಮೈಸೂರು ರಸ್ತೆಯಿಂದ ಹಿಡಿದು ಕನಕಪುರ ರಸ್ತೆಯವರೆಗೆ ಈ ಪ್ರದೇಶವು ವ್ಯಾಪಿಸಿದೆ. ಈ ಒಂದು ಪ್ರದೇಶವು ಮಾದರಿಯಾದ ಘಟ್ಟ ಹಾಗು ಭಾಗಗಳಾಗಿ ವಿಂಗಡನೆಗೊಂಡಿದೆ. ಬನಶಂಕರಿಯು ಒಟ್ಟಾರೆಯಾಗಿ ಆರು ಘಟ್ಟಗಳಲ್ಲಿ ವಿಭಜನೆಗೊಂಡಿದೆ. ಅವುಗಳಲ್ಲಿ ಆರನೆಯ ಘಟ್ಟವು ಬೃಹತ್ತಾಗಿ ಹರಡಿದೆ. ಇದು ದೊಡ್ಡ ಪ್ರದೇಶವಾಗಿರುವುದರಿಂದ ಅನೇಕ ಬಗೆಯ ಸರಕು ಸರಂಜಾಮುಗಳ ಮಳಿಗೆಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Rangakuvara

ಶಿವಾಜಿ ನಗರ:

ಶಿವಾಜಿ ನಗರ:

ಕಮರ್ಷಿಯಲ್ ಬೀದಿಯ ಪಕ್ಕದಲ್ಲೆ ಇರುವ ಶಿವಾಜಿ ನಗರ ಬೆಂಗಳೂರಿನ ಮತ್ತೊಂದು ಹೆಸರಾಂತ ಶಾಪಿಂಗ್ ಪ್ರದೇಶ. ಸಾಕು ಪ್ರಾಣಿಗಳ ಅಂಗಡಿಗಳು, ರಸ್ತೆ ಬದಿಯಲ್ಲಿ ಮಾರುವ ವಸ್ತುಗಳು, ವಿವಿಧ ಬಟ್ಟೆಗಳ ಅಂಗಡಿಗಳು, ಅಲಂಕಾರಿಕ ವಸ್ತುಗಳ ಮಳಿಗೆಗಳು, ವಿವಿಧ ಹಣ್ಣುಗಳ ಮಾರುಕಟ್ಟೆ ಮುಂತಾದ ವಿವಿಧ ಬಗೆಯ ಮಳಿಗೆಗಳನ್ನು ಇಲ್ಲಿ ಕಾಣಬಹುದು. ಇನ್ನೊಂದು ಸಂಗತಿಯೆಂದರೆ ಈ ಪ್ರದೇಶವು ಬಿರಿಯಾನಿ ಖಾದ್ಯಕ್ಕೆ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Claude Renault

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X