Search
  • Follow NativePlanet
Share
» »ಕರ್ನಾಟಕದ 7 ಪ್ರಸಿದ್ದ ಪೂಜ್ಯನೀಯ ಯಾತ್ರಾ ಸ್ಥಳಗಳು

ಕರ್ನಾಟಕದ 7 ಪ್ರಸಿದ್ದ ಪೂಜ್ಯನೀಯ ಯಾತ್ರಾ ಸ್ಥಳಗಳು

ಶತಮಾನಗಳಿಂದಲೂ ಭಾರತದಲ್ಲಿ ವಿವಿಧ ಸಂಸೃತಿ ಮತ್ತು ಸಂಪ್ರದಾಯಗಳನ್ನು ಜನರು ಉತ್ಸಾಹ ಭರಿತ ಹಬ್ಬಗಳ ರೂಪದಲ್ಲಿ ಅಥವಾ ದೇವಾಲಯಗಳ ಮತ್ತು ಇನ್ನಿತರ ಧಾರ್ಮಿಕ ಮಹತ್ವವುಳ್ಳ ಸ್ಥಳಗಳನ್ನು ನಿರ್ಮಿಸುವ ಮೂಲಕ ಆಚರಿಸುತ್ತಾ ಬಂದಿದ್ದಾರೆ. ಆದ್ದರಿಂದ, ಕೆಲವು ಪ್ರದೇಶಗಳು ಜನರನ್ನು ಒಟ್ಟುಗೂಡಿಸುವ ಅನೇಕ ದೇವಾಲಯಗಳಿಗೆ ಹೆಸರುವಾಸಿಯಾಗಿದೆ.

ಕರ್ನಾಟಕವು ಮೌರ್ಯ, ಚಾಲುಕ್ಯ ವಿಜಯನಗರ ಸಾಮ್ರಾಜ್ಯದಂತಹ ಅನೇಕ ರಾಜವಂಶದ ಆಳ್ವಿಕೆಗೆ ಒಳಪಟ್ಟಿದೆ. ಈ ಎಲ್ಲಾ ಆಡಳಿತಗಾರರು ಅನೇಕ ಸುಂದರವಾದ ವಾಸ್ತು ಶಿಲ್ಪಗಳನ್ನು ತಮ್ಮ ಹಿಂದೆ ಬಿಟ್ಟು ಹೋಗಿದ್ದಾರೆ . ಅವುಗಳಲ್ಲಿ ಕೆಲವು ಇಂದು ಪ್ರಸಿದ್ದ ಯಾತ್ರೀ ಸ್ಥಳವಾಗಿ ಪರಿಣಮಿಸಿದೆ. ಪ್ರತಿ ವರ್ಷ ಸಾವಿರಾರು ಯಾತ್ರಿಕರು ಈ ಸ್ಥಳಗಳಿಗೆ ಪ್ರಯಾಣವನ್ನು ಯೋಜಿಸುತ್ತಾರೆ. ನಿಮ್ಮ ರಜೆಯಲ್ಲಿ ಆಧ್ಯಾತ್ಮಿಕ ಅನುಭವವನ್ನು ಪಡೆಯಬಯಸುವಿರಾದಲ್ಲಿ, ಕರ್ನಾಟಕದ ಈ ಜನಪ್ರಿಯ ತಾಣಗಳಿಗೆ ಭೇಟಿ ನೀಡುವುದು ಉತ್ತಮ

ಧರ್ಮಸ್ಥಳ

ಧರ್ಮಸ್ಥಳ

ನೇತ್ರಾವತಿ ನದಿ ದಡದಲ್ಲಿ ನೆಲೆಸಿರುವ ಧರ್ಮಸ್ಥಳವು ಅತ್ಯಂತ ಜನಪ್ರಿಯವಾದ ದೇವಾಲಯವಿರುವ ಪಟ್ಟಣವಾಗಿದೆ. ಇದು ಬೆಂಗಳೂರಿನಿಂದ ಸುಮಾರು 300 ಕಿ.ಮೀ ಗಳ ಅಂತರದಲ್ಲಿದ್ದು, ಧರ್ಮಸ್ಥಳ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ಶಿವ, ಚಂದ್ರನಾಥ, ಮಂಜುನಾಥ ಮುಂತಾದ ದೇವರುಗಳಿಗೆ ಅರ್ಪಿತವಾದ ದೇವಾಲಯಗಳಿಗೆ ನೆಲೆಯಾಗಿದೆ. ನವೆಂಬರ್ ತಿಂಗಳಿನಿಂದ ಡಿಸೆಂಬರ್ ತಿಂಗಳಲ್ಲಿ ಇಲ್ಲಿ ಲಕ್ಷದೀಪೋತ್ಸವದಂತಹ ಭವ್ಯವಾದ ಉತ್ಸವವು ನಡೆಯುವುದರಿಂದ ಈ ಸಮಯವು ಭೇಟಿಗೆ ಯೋಗ್ಯವಾದ ಸಮಯವಾಗಿದೆ. ಈ ಸಮಯದಲ್ಲಿ ಈ ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ.

ಪಟ್ಟದಕಲ್

ಪಟ್ಟದಕಲ್

ಉತ್ತರ ಕರ್ನಾಟಕದಲ್ಲಿ ನೆಲೆಸಿರುವ ಪಟ್ಟದಕಲ್ ಪಟ್ಟಣವು ಮಲಪ್ರಭಾ ನದಿ ದಂಡೆಯಲ್ಲಿ ನೆಲೆಸಿದೆ. ಈ ತಾಣದ ಅದ್ಬುತ ವಾಸ್ತುಶಿಲ್ಪಗಳ ಚಾಕಚಕ್ಯತೆಗಾಗಿ ಯುನೆಸ್ಕೋ ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪವಿರುವ ಇಲ್ಲಿಯ ದೇವಾಲಯಗಳು ಚಾಲುಕ್ಯ ರಾಜವಂಶಸ್ಥರ ಆಳ್ವಿಕೆಯ ಅವಧಿಯಲ್ಲಿ ನಿರ್ಮಿಸಲ್ಪಟವುಗಳಾಗಿವೆ. ಇಲ್ಲಿ ಒಟ್ಟು 10 ದೇವಾಲಯಗಳಿದ್ದು, ಎಲ್ಲವೂ ಶಿವ ದೇವರಿಗೆ ಅರ್ಪಿತವಾದವುಗಳಾಗಿವೆ. ಇಲ್ಲಿಯ ಗಲಗನಾಥ ದೇವಾಲಯ, ಕಾಶಿ ವಿಶ್ವನಾಥ ದೇವಾಲಯ ಇತ್ಯಾದಿ ದೇವಾಲಯಗಳಿಗೆ ಭೇಟಿ ನೀಡಿ ಇಲ್ಲಿ ಸುಂದರ ದೇವಾಲಯಗಳ ಸಂಕೀರ್ಣಗಳ ಮಾಹಿತಿಗಳನ್ನು ಪಡೆಯಿರಿ.

ಗೋಕರ್ಣ

ಗೋಕರ್ಣ

ಕರ್ನಾಟಕದ ಗಡಿಭಾಗದಲ್ಲಿರುವ ಗೋಕರ್ಣ ಪಟ್ಟಣವು ಕರ್ನಾಟಕದ ಪ್ರಸಿದ್ದ ದೇವಾಲಯ ನಗರವೆನಿಸಿದೆ.ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಈ ಸ್ಥಳವು ತನ್ನಲ್ಲಿ ಹೊಂದಿರುವ ಕಡಲತೀರಗಳಿಗಾಗಿಯೂ ಹೆಸರನ್ನು ಪಡೆದಿದೆ. ಇಲ್ಲಿಯ ಮುಖ್ಯ ದೇವಾಲಯವೆಂದರೆ ಅದು ಶಿವ ದೇವರಿಗೆ ಅರ್ಪಿತವಾದ ಮಹಾಬಲೇಶ್ವರ ದೇವಾಲಯ. ಈ ಸ್ಥಳದಲ್ಲಿ ಭೇಟಿ ಕೊಡಬಹುದಾದ ದೇವಾಲಯಗಳಲ್ಲಿ ಭದ್ರಕಾಳಿ ದೇವಾಲಯ, ವೆಂಕಟರಮಣ ದೇವಾಲಯ, ಮಹಾಗಣಪತಿ ದೇವಾಲಯ ಇತ್ಯಾದಿಗಳು ಸೇರಿವೆ. ಗೋಕರ್ಣದಲ್ಲಿ ಕೇವಲ ದೇವಾಲಯಗಳು ಮಾತ್ರವಲ್ಲದೆ ಓಂ ಬೀಚ್ ಕುಡ್ಲ ಬೀಚ್ ಇತ್ಯಾದಿ ಕಡಲ ತೀರಗಳಿಗೂ ಭೇಟಿ ಕೊಡಬಹುದಾಗಿದೆ.

ಉಡುಪಿ

ಉಡುಪಿ

ಕರಾವಳಿಯ ಸುಂದರ ಪಟ್ಟಣವೆನಿಸಿದ ಉಡುಪಿಯು ದೇವಾಲಯಗಳು ಮತ್ತು ವಿಭಿನ್ನ ಶೈಲಿಯ ಪಾಕ ಪದ್ದತಿಗೆ ಪ್ರಸಿದ್ದಿಯನ್ನು ಪಡೆದಿದೆ. ಇಲ್ಲಿಯ ಅತ್ಯಂತ ಪ್ರಸಿದ್ದ ದೇವಾಲಯಗಳಲ್ಲಿ ಕೃಷ್ಣ ದೇವಾಲಯವು ಪ್ರಮುಖವಾದುದಾಗಿದ್ದು ಇದನ್ನು ಕೃಷ್ಣ ಮಠವೆಂದೂ ಕೂಡಾ ಕರೆಯಲಾಗುತ್ತದೆ. ಇಲ್ಲಿಯ ದೇವಾಲಯದ ಪೂಜೆಯನ್ನು ಅಷ್ಟ ಮಠಗಳಿಂದ ನಿರ್ವಹಿಸಲಾಗುತ್ತದೆ. ಇಲ್ಲಿ ನಡೆಯುವ ಪರ್ಯಾಯ ಉತ್ಸವವು ಜನವರಿ ತಿಂಗಳಲ್ಲಿ ನಡೆಯುತ್ತದೆ ಮತ್ತು ಈ ಸಮಯದಲ್ಲಿ ಪಟ್ಟಣದಲ್ಲಿ ಸಾವಿರಾರು ಜನ ಭಕ್ತರು ಸೇರುತ್ತಾರೆ. ಉಡುಪಿಯ ವಿಭಿನ್ನ ಶೈಲಿಯ ಪಾಕಪದ್ದತಿಯನ್ನು ಸವಿಯಿರಿ ಮತ್ತು ಇಲ್ಲಿಯ ಕಾಪು ಬೀಚ್, ಮಲ್ಪೆ ಬೀಚ್, ಸೈಂಟ್ ಮೇರೀಸ್ ದ್ವೀಪ ಇತ್ಯಾದಿಗಳಿಗೂ ಒಮ್ಮೆ ಭೇಟಿ ಕೊಡಿ.

ಶ್ರವಣಬೆಳಗೊಳ

ಶ್ರವಣಬೆಳಗೊಳ

ಜೈನ ಯಾತ್ರಿಗಳಿಗೆ ಶ್ರವಣಬೆಳಗೊಳವು ಒಂದು ಪ್ರಸಿದ್ದ ಯಾತ್ರಾ ಸ್ಥಳವಾಗಿದೆ ಮತ್ತು ಇಲ್ಲಿ ಗೋಮ್ಮಟೇಶ್ವರ ಪ್ರತಿಮೆಯಿದ್ದು ಇದು ಪ್ರಮುಖ ಭೇಟಿ ಕೊಡುವ ತಾಣವಾಗಿದೆ. ಈ ಪ್ರತಿಮೆಯು ವಿಂಧ್ಯಾಗಿರಿ ಬೆಟ್ಟದ ಮೇಲೆ ನೆಲೆಸಿದೆ. ಈ ಗೋಮಟೇಶ್ವರ ಪ್ರತಿಮೆಯು ಬೃಹತ್ ಏಕಶಿಲೆಯಿಂದ ಮಾಡಲಾಗಿದೆ ಮತ್ತು ಇದು 57 ಅಡಿ ಎತ್ತರವಿದ್ದು ಅದ್ಭುತವಾಗಿದೆ. ಈ ಪ್ರತಿಮೆಯ ಪ್ರಮುಖ ಆಕರ್ಷಣೆಯೆಂದರೆ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಉತ್ಸವ. ಈ ಉತ್ಸವದ ಸಮಯದಲ್ಲಿ ಗೋಮಟೇಶ್ವರ ವಿಗ್ರಹವನ್ನು ತಾಜಾವಾಗಿರಿಸಲು ಕೇಸರಿ, ತುಪ್ಪ ಹಾಲು ಮುಂತಾದವುಗಳಿಂದ ಸ್ನಾನ ಮಾಡಿಸಲಾಗುತ್ತದೆ. ಫೆಬ್ರವರಿ 2018 ರಲ್ಲಿ ಈ ಮಸ್ತಕಾಭಿಷೇಕವು ನಡೆಯಿತು.

ಶೃಂಗೇರಿ

ಶೃಂಗೇರಿ

ಪ್ರಸಿದ್ಧ ಹಿಂದೂ ಧರ್ಮಶಾಸ್ತ್ರಜ್ಞರೆನಿಸಿದ ಆದಿ ಶಂಕರರಿಂದ ಮೊದಲ ಮಠವನ್ನು ಸ್ಥಾಪಿಸಿದ ಸ್ಥಳವಾದ್ದರಿಂದ ಶೃಂಗೇರಿ ಪೂಜ್ಯ ನೀಯ ಪಟ್ಟಣವೆನಿಸಿದೆ. ಇವರು ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದರು. ಶೃಂಗೇರಿಗೆ ಪ್ರವಾಸದ ಸಮಯದಲ್ಲಿ ಇಲ್ಲಿ ಭೇಟಿ ನೀಡಬಹುದಾದ ಸ್ಥಳಗಳಲ್ಲಿ ವಿದ್ಯಾಶಂಕರ ದೇವಾಲಯ, ಶಾರದಾಂಬ ದೇವಾಲಯ, ಸಿರಿಮನೆ ಜಲಪಾತ ಇತ್ಯಾದಿಗಳು ಸೇರಿವೆ. ಈ ಸ್ಥಳವು ಜೈನ ದೇವಾಲಯಕ್ಕೂ ನೆಲೆಯಾಗಿದ್ದು ಈ ನಗರದ ಹೃದಯ ಭಾಗದಲ್ಲಿ ಪಾರ್ಶ್ವನಾಥ ಸ್ವಾಮಿಯ ಬಸದಿಯಿದೆ.

ಮುರುಡೇಶ್ವರ

ಮುರುಡೇಶ್ವರ

ಮುರುಡೇಶ್ವರವು ಅರಬ್ಬೀ ಸಮುದ್ರದ ಕರಾವಳಿ ಪ್ರದೇಶದಲ್ಲಿದೆ. ಈ ಸ್ಥಳವು ವಿಶ್ವದ ಎರಡನೇ ಅತ್ಯಂತ ಎತ್ತರವಾದ ಶಿವನ ಪ್ರತಿಮೆಯ ನೆಲೆಯಾಗಿದೆ.ಈ ಪ್ರತಿಮೆಯು 123 ಅಡಿ ಎತ್ತರವಿದೆ ಹಾಗೂ ದೇವಾಲಯದಲ್ಲಿ 20 ಅಂತಸ್ತಿನ ಗೋಪುರವನ್ನು ನಿರ್ಮಿಸಲಾಗಿದೆ. ಇದು ಕರ್ನಾಟಕ ಮತ್ತು ಕೇರಳದ ಪ್ರವಾಸಿಗರಿಗೆ ಅತ್ಯಂತ ನೆಚ್ಚಿನ ಪ್ರವಾಸಿ ತಾಣವಾಗಿದೆ. ಮುರುಡೇಶ್ವರದಲ್ಲಿ ನೀವು ಭೇಟಿ ನೀಡಬೇಕಾದ ಇತರ ಕೆಲವು ಸ್ಥಳಗಳಲ್ಲಿ ಪ್ರಶಾಂತವಾದ ಮುರುಡೇಶ್ವರ ಬೀಚ್, ನೇತ್ರಾಣಿ ದ್ವೀಪ, ಮುರುಡೇಶ್ವರ ಕೋಟೆ ಮುಂತಾದವುಗಳು ಸೇರಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X