Search
  • Follow NativePlanet
Share
» »ಪ್ರವಾಸಿ ಆಕರ್ಷಣೆಯ ಸರ್ಪ ಉದ್ಯಾನಗಳು

ಪ್ರವಾಸಿ ಆಕರ್ಷಣೆಯ ಸರ್ಪ ಉದ್ಯಾನಗಳು

By Vijay

ಸರಿಸೃಪಗಳ ವರ್ಗಕ್ಕೆ ಸೇರಿರುವ, ಆದರೆ ನೆಲದ ಮೇಲೆ ಹರಿದಾಡುವ ಜಂತುವಾಗಿ ಸರ್ಪ ಅಥವಾ ಹಾವುಗಳನ್ನು ಕಂಡಾಗ ಯಾರಿಗೆ ಆಗಲಿ ಒಂದು ರೀತಿಯ ಭಯ ಮಿಶ್ರಿತ ಕುತೂಹಲ ಮೂಡುವುದು ಸಹಜ. ಸಾಮಾನ್ಯವಾಗಿ ಕಣ್ಣಿಗೆ ಸುಲಭವಾಗಿ ಗೋಚರಿಸದ ಈ ಸರಿಸೃಪಗಳು ಸಾಕಷ್ಟು ವಿಷಕಾರಿ ಹಾಗೂ ಅಪಾಯಕಾರಿಯೂ ಹೌದು.

ಹಿಂದುಗಳು ಸಾಮಾನ್ಯವಾಗಿ ಆರಾಧಿಸುವ ಈ ಹಾವುಗಳಲ್ಲಿ ಸಾಕಷ್ಟು ಬಗೆ ಬಗೆಯ ವಿಧಗಳಿವೆ. ಹಾವುಗಳಿಗೆಂದೆ ಮುಡಿಪಾದ ನಾಗರ ಪಂಚಮಿಯನ್ನೂ ಸಹ ಭಾರತ ದೇಶದೆಲ್ಲೆಡೆ ಆಚರಿಸಲಾಗುವುದು ಮತ್ತೊಂದು ವಿಶೇಷ. ಶಿವನ ಕುತ್ತಿಗೆಗೆ ಸುರುಳಿಯಾಕಾರದಲ್ಲಿ ಸುತ್ತಿಕೊಂಡಂತೆ, ವಿಷ್ಣುವಿನ ವಿಶ್ರಾಂತಿ ಮಂಚವಾಗಿ ಹಾವನ್ನು ಪೌರಾಣಿಕ ಗ್ರಂಥಗಳಲ್ಲಿ ವಿಶ್ಲೇಷಿಸಲಾಗಿದೆ.

ಬಲು ಅಪರೂಪದ ಜೀವಿಗಳು ಇಲ್ಲಿ ಮಾತ್ರ ನೋಡಬಹುದು

ಇನ್ನೂ ಈ ಹಾವುಗಳನ್ನು ವೀಕ್ಷಿಸುವುದು ಸಹ ಬಹಳಷ್ಟು ರೋಮಾಂಚನ ನೀಡುವ ಚಟುವಟಿಕೆಯಾಗಿದ್ದು ಇದಕ್ಕೆಂದೆ ಕೆಲವು ವಿಶೇಷವಾದ ಪ್ರಾಣಿ ಸಂಗ್ರಹಾಲಯಗಳು ಭಾರತದ ಹಲವಾರು ಸ್ಥಳಗಳಲ್ಲಿ ಕಾಣಬಹುದಾಗಿದೆ. ಈ ಸರ್ಪಗಳ ಉದ್ಯಾನಗಳಿಗೆ ಸಾಕಷ್ಟು ಜನ ಪ್ರವಾಸಿಗರು ಭೇಟಿ ನೀಡುತ್ತಾರೆ ಹಾಗೂ ಇವು ಪ್ರವಾಸಿ ತಾಣಗಳಾಗಿಯೂ ಗಮನ ಸೆಳೆದಿವೆ.

ಹಾವುಗಳಿಗೆಂದೆ ವಿಶೇಷವಾದ ಕೆಲವು ಆಯ್ಧ ಹಾಗೂ ಅದ್ಭುತವಾಗಿರುವ ಹಾವೋದ್ಯಾನಗಳು ಯಾವುವು ಎಂಬುದರ ಕುರಿತು ಈ ಲೇಖನದ ಮೂಲಕ ತಿಳಿಯಿರಿ. ಅಲ್ಲದೆ ಈ ಉದ್ಯಾನಗಳಲ್ಲಿ ಯಾವೆಲ್ಲ ರೀತಿಯ ಸರ್ಪಗಳು ನಿಮಗೆ ಕಾಣಸಿಗಬಹುದೆಂಬುದರ ಕುರಿತು ತಿಳಿಯಿರಿ.

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಕಾತ್ರಜ ಸರ್ಪೋದ್ಯಾನ : ಮಹಾರಾಷ್ಟ್ರದ ಪುಣೆ ಮಹಾ ನಗರದ ಬಳಿ ಇರುವ ಕಾತ್ರಜ ಎಂಬಲ್ಲಿರುವ ರಾಜೀವ್ ಗಾಂಧಿ ಪ್ರಾಣಿ ಸಂಗ್ರಹಾಲಯದಲ್ಲಿ ಹಾವುಗಳಿಗೆಂದೆ ಮುಡಿಪಾದ ಪ್ರತ್ಯೇಕವಾದ ಸ್ಥಳವಿದ್ದು ಇದು ಸ್ನೇಕ್ ಪಾರ್ಕ್ ಎಂದೆ ಪ್ರಖ್ಯಾತವಾಗಿದೆ.

ಚಿತ್ರಕೃಪೆ: Mark Dumont

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಹಿಂದೆ ಕಾತ್ರಜ್ ಸ್ನೇಕ್ ಪಾರ್ಕ್ ಎಂದು ಗುರುತಿಸಲ್ಪಡುತ್ತಿದ್ದ ಈ ಸ್ಥಳದ ಹೆಸರು ಇತ್ತೀಚಿಗಷ್ಟೆ ರಾಜೀವ್ ಗಾಂಧಿ ಪ್ರಾಣಿ ಸಂಗ್ರಹಾಲಯ ಎಂದಾಗಿದೆ. ಇತರೆ ಪ್ರಾಣಿ-ಪಕ್ಷಿಗಳೂ ಸಹ ಇರುವ ಈ ಆಲಯದಲ್ಲಿ ಹಾವುಗಳಿಗೆಂದೆ ವಿಶೇಷವಾದ ಸ್ಥಳಗಳಿದ್ದು ಅಲ್ಲಿ ವಿವಿಧ ಬಗೆಯ ಅದ್ಭುತ ಸರ್ಪಗಳನ್ನು ನೋಡಬಹುದಾಗಿದೆ.

ಚಿತ್ರಕೃಪೆ: punezoo.in

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಪುಣೆ ಪೌರಾಡಳಿತ ಕೆಂದ್ರದಿಂದ ನಿರ್ವಹಿಸಲ್ಪಡುವ ಈ ಉದ್ಯಾನವು ನಗರ ಕೇಂದ್ರಕ್ಕೆ ಹತ್ತಿರದಲ್ಲಿದ್ದು ತೆರಳಲು ಬಸ್ಸುಗಳು, ಬಾಡಿಗೆ ರಿಕ್ಷಾಗಳು ದೊರೆಯುತ್ತವೆ. ಹಾಗಾದರೆ ಇಲ್ಲಿ ಕಂಡುಬರುವ ಕೆಲವು ಅದ್ಭುತ ಹಾವುಗಳು ಯಾವುವೆಂದು ನೀವೇ ನೋಡಿ ಆನಂದಿಸಿ.

ಚಿತ್ರಕೃಪೆ: Hectonichus

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ವಾರದ ಎಲ್ಲ ದಿನಗಳಲ್ಲೂ ತೆರೆದಿರುವ ಈ ಪ್ರಾಣಿ ಸಂಗ್ರಹಾಲಯವು ಒಂದನೇಯ ಏಪ್ರಿಲ್ ನಿಂದ ಜೂನ್ 15 ರವರೆಗೆ ಬೆಳಿಗ್ಗೆ 9.30 ರಿಂದ ಸಂಜೆ 6.00 ಘಂಟೆಯವರೆಗೂ ಹಾಗೂ 16 ನೇಯ ಜೂನ್ ನಿಂದ ಮುಂದಿನ ಮಾರ್ಚ್ 31 ರವರೆಗೆ ಬೆಳಿಗ್ಗೆ 9.30 ರಿಂದ ಸಂಜೆ 5.00 ಘಂಟೆಯವರೆಗೆ ತೆರೆದಿರುತ್ತದೆ. ಕಾತ್ರಜ್ ನಲ್ಲಿರುವ ಬಾಂಬೂ ಪಿಟ್ ವೈಪರ್. ಯಾವೆಲ್ಲ ಸರ್ಪಗಳು ಇಲ್ಲಿ ಕಂಡುಬರುತ್ತವೆ ಎಂಬುದನ್ನು ಮುಂದಿನ ಸ್ಲೈಡುಗಳಲ್ಲಿ ತಿಳಿಯಿರಿ.

ಚಿತ್ರಕೃಪೆ: AshLin

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಕಾತ್ರಜ್ ನಲ್ಲಿ ಭಾರತೀಯ ಹೆಬ್ಬಾವು ಸಹ ಕಾಣಸಿಗುತ್ತದೆ.

ಚಿತ್ರಕೃಪೆ: Rushikesh.nijampurkar

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಕಾತ್ರಜ್ ನಲ್ಲಿರುವ ರಸೆಲ್ ವೈಪರ್. ಇದೊಂದು ವಿಷಕಾರಿ ಸರ್ಪವಾಗಿದೆ.

ಚಿತ್ರಕೃಪೆ: Gupt.sumeet

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಹೆಡೆ ಎತ್ತಿ ಸದೆ ಬಡೆಯುವೆ ಎಂದು ಮತ್ತೊಂದು ಹಾವಿಗೆ ಹೂಂಕಾರ ಹಾಕುತ್ತಿರುವ ನಾಗರಹಾವು.

ಚಿತ್ರಕೃಪೆ: _paVan_

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಹಣ್ಣಿನ ಗೊಂಚಲುಗಳಂತೆ ಒಂದೆಡೆ ನೆರೆದು ಸಭೆ ಸೇರಿರುವ ಸರ್ಪಗಳು! ಕಾತ್ರಜ್ ನಲ್ಲಿ.

ಚಿತ್ರಕೃಪೆ: JJ Hall

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಪರಸ್ಸಿನಿಕ್ಕಾಡುವು ಸರ್ಪ ಉದ್ಯಾನ : ಕೇರಳದ ಕಣ್ಣೂರು ಜಿಲ್ಲೆಯ ಕಣ್ಣೂರು ನಗರ ಕೆಂದ್ರದಿಂದ ಸುಮಾರು 16 ಕಿ.ಮೀ ದೂರದಲ್ಲಿರುವ ಆಂತೂರು ಎಂಬಲ್ಲಿ ಈ ಹಾವಿನ ಉದ್ಯಾನವಿದೆ. ಕಾಳಿಂಗ ಸರ್ಪ, ನಾಗರ ಹಾವು, ರಸೆಲ್ ವೈಪರ್ ರೀತಿಯ ಹಲವು ವಿಷಕಾರಿ ಹಾವುಗಳನ್ನು ಇಲ್ಲಿ ನೋಡಬಹುದಾಗಿದೆ.

ಚಿತ್ರಕೃಪೆ: Ks.mini

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಈ ಸರ್ಪ ಉದ್ಯಾನದ ಮೂಲ ಉದ್ದೇಶ ಎಲ್ಲ ಬಗೆಯ ಹಾಗೂ ಗಮನೀಯವಾಗಿ ಅಳಿವಿನಂಚಿನಲ್ಲಿರುವ ಸರ್ಪಗಳ ಸಂತತಿಗಳನ್ನು ಉಳಿಸಿ ಬೆಳೆಸುವುದಾಗಿದೆ.

ಚಿತ್ರಕೃಪೆ: Vaikoovery

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಅಷ್ಟೆ ಅಲ್ಲ, ತರಬೇತಿ ಪಡೆದವನೊಬ್ಬನಿಂದ ಇಲ್ಲಿ ಜನರಿಗೆ ಹಾವುಗಳ ಕುರಿತು ಇರುವ ಅಂಧತ್ವವನ್ನು ನಿವಾರಿಸುವ ಉದ್ದೇಶದಿಂದ ಹಾವಿನೊಡನೆ ಸಾಹಸದಂತಹ ಚಟುವಟಿಕೆಗಳು ಆಯೋಜಿಸಲ್ಪಡುತ್ತವೆ.

ಚಿತ್ರಕೃಪೆ: Arunjayantvm

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಇನ್ನೊಂದು ವಿಷಯವೆಂದರೆ ಸರ್ಪ ಕಡಿತ ಚಿಕಿತ್ಸಾ ಕೇಂದ್ರವಿದ್ದು ಅಲ್ಲಿ ಸರ್ಪ ಕಡಿತಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಇದು ದೇಶದ ಹಾಗೂ ವಿದೇಶೀಯ ಅನೇಕ ಅಧ್ಯನಕಾರ ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ.

ಚಿತ್ರಕೃಪೆ: Vaikoovery

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಚೆನ್ನೈ ಸರ್ಪ ಉದ್ಯಾನ : ಗಿಂಡಿ ಸ್ನೇಕ್ ಪಾರ್ಕ್ ಎಂತಲೂ ಕರೆಯಲ್ಪಡುವ ಇದು ಭಾರತದಲ್ಲೆ ಪ್ರಥಮವಾಸ ಸರಿಸೃಪಗಳ ಉದ್ಯಾನ ಎಂಬ ಖ್ಯಾತಿಗೆ ಪಾತ್ರವಾಗಿದೆ. ತಮಿಳುನಾಡಿನ ಗಿಂಡಿ ರಾಷ್ಟ್ರೀಯ ಉದ್ಯಾನದಲ್ಲಿರುವ ಮಕ್ಕಳ ಉದ್ಯಾನದ ಪಕ್ಕದಲ್ಲೆ ಈ ಸರ್ಪ ಉದ್ಯಾನ ಸ್ಥಿತವಿದೆ.

ಚಿತ್ರಕೃಪೆ: bunnicula

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಹೆಬ್ಬಾವು, ನಾಗರ, ಕಳಿಂಗ ಹೀಗೆ ಹತ್ತು ಹಲವು ಬಗೆಯ ವಿಷಕಾರಿ ಸರ್ಪಗಳು ಹಾಗೂ ಇತರೆ ಸರೀಸೃಪಗಳನ್ನು ಇಲ್ಲಿ ನೋಡಬಹುದಾಗಿದೆ. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಕಂಡುಬಂದಾಗ ಮನುಷ್ಯ ಏಕಾಏಕಿ ಇವುಗಳ ಮೇಲೆ ದಾಳಿ ಮಾಡಿ ಕೊಂದು ಬಿಡುತ್ತಾನೆ. ಹೀಗಾಗದಿರಲು ಅವುಗಳಿಗೂ ಕೂಡ ಬದುಕುವ ಸಮಾನ ಹಕ್ಕಿದೆ ಎಂತಲೂ ಹಾಗು ಅವುಗಳೊಂದಿಗೆ ಮನುಷ್ಯ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವ ಉದ್ದೇಶದಿಂದಲೂ ಈ ಸರ್ಪೋದ್ಯಾನವನ್ನು ಸ್ಥಾಪಿಸಲಾಗಿದೆ.

ಚಿತ್ರಕೃಪೆ: bunnicula

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಈ ಸರ್ಪ ಉದ್ಯಾನವು ಗಿಂಡಿ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಎಕರೆಯಷ್ಟು ವಿಸ್ತೀರ್ಣವಾದ ಪ್ರದೇಶದಲ್ಲಿ ಹರಡಿದ್ದು ವಾರ್ಷಿಕವಾಗಿ ಏಳು ಲಕ್ಷ ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ ಎಂದರೆ ನೀವೇ ಊಹಿಸಿಕೊಳ್ಳಬಹುದು ಇದರ ಜನಪ್ರೀಯತೆಯನ್ನು. ಉದ್ಯಾನದಲ್ಲಿ ತರಬೇತುದಾರನೊಬ್ಬ ಹಾವಿನ ಕುರಿತು ಸಮಗ್ರ ಮಾಹಿತಿ ನೀಡುತ್ತಿರುವುದು.

ಚಿತ್ರಕೃಪೆ: _paVan_

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ : ಕರ್ನಾಟಕದ ಬೆಂಗಳೂರು ಮಹಾನಗರದ ವ್ಯಾಪ್ತಿಗೆ ಹತ್ತಿರದಲ್ಲಿರುವ ಈ ಅದ್ಭುತ ರಾಷ್ಟ್ರೀಯ ಉದ್ಯಾನವು ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿದೆ. ವಾರಾಂತ್ಯದ ರಜಾ ದಿನಗಳಲ್ಲಿ ಜನರಿಂದ ತುಂಬಿರುವ ಈ ರಾಷ್ಟ್ರೀಯ ಉದ್ಯಾನದಲ್ಲಿ ಸರ್ಪಗಳಿಗೆ ಮೀಸಲಾದ ಸ್ನೇಕ್ ಸಫಾರಿಯೂ ಸಹ ಇರುವುದು ವಿಶೇಷ. ಸಾಕಷ್ಟು ತಳಿಯ, ಪ್ರಬೇಧಗಳ ಸರ್ಪಗಳನ್ನು ಇಲ್ಲಿ ಕಾಣಬಹುದಾಗಿದೆ. ರ್ಯಾಟ್ ಸ್ನೇಕ್.

ಚಿತ್ರಕೃಪೆ: Jiths

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಒಂದು ಭಾಗವಾಗಿರುವ ಸರ್ಪ ಉದ್ಯಾನವು ಸಾಕಷ್ಟು ಸರ್ಪಗಳಿಗೆ ಆಶ್ರಯ ಒದಗಿಸಿದೆ. ಕಬ್ಬಿಣದ ಎತ್ತರವಾದ ಬೋನುಗಳಿಂದ ಸುತ್ತುವರೆದಿರುವ ಈ ಸ್ಥಳವು ಸ್ವಾಭಾವಿಕವಾದ ರೀತಿಯಲ್ಲಿ ಗಿಡ ಮರಗಳು, ಕಲ್ಲು, ಪೊದೆಗಳನ್ನು ಹೊಂದಿದ್ದು ಹಾವುಗಳಿಗೆ ತಕ್ಕುದಾದ ಸ್ಥಿತಿಗತಿಗಳನ್ನು ಹೊಂದಿದೆ. ಬೇಟೆಗಾಗಿ ಕಾಯುತ್ತಿರಬಹುದಾ? ಇಲ್ಲವೆ ತಿಂದು ತೇಗಿ ವಿಶ್ರಮಿಸುತ್ತಿರಬಹುದಾ?

ಚಿತ್ರಕೃಪೆ: _paVan_

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಭಾರತದ ವಿವಿಧ ಪ್ರದೇಶಗಳಲ್ಲಿ ಕಂಡುಬರುವ ವಿಷಕಾರಿ ಹಾಗೂ ವಿಷಗಳಿರದ ಎರಡೂ ರೀತಿಯ ಹಾವುಗಳನ್ನು ಇಲ್ಲಿ ಕಾಣಬಹುದಾಗಿದೆ. ಮಕ್ಕಳಿಗಂತೂ ಈ ಸರ್ಪೋದ್ಯಾನದಲ್ಲಿ ಸುತ್ತಾಡುವುದೆಂದರೆ ಬಲು ಖುಷಿ ನೀಡುತ್ತದೆ. ಎಲ್ಲಿ ನೋಡಿದರಲ್ಲಿ ಮನುಷ್ಯರೆ...ಎಲ್ಲಿಗಪ್ಪಾ ಹನಿಮೂನ್ ಗೆ ಹೋಗುವುದು?

ಚಿತ್ರಕೃಪೆ: Sooraj Shajahan

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಕೇವಲ ಮಕ್ಕಳಲ್ಲದೆ, ಆರು ಅಡಿಗಳಷ್ಟು ಎದ್ದು ನಿಲ್ಲುವ ಸುಮಾರು ಹದಿನೈದು ಅಡಿಗಳಷ್ಟು ಉದ್ದದ ಕಳಿಂಗ ಸರ್ಪಗಳನ್ನು ನೋಡಿದಾಗ ಹಿರಿಯರಿಗೂ ಒಂದು ರೀತಿಯ ರೋಮಾಂಚನವುಂಟಾಗುವುದರಲ್ಲಿ ಸಂದೇಹವಿಲ್ಲ. ಮರದ ಪೊದೆಯಿಂದ ಬುಸುಗುಡುತ್ತಿರುವ ನಾಗಪ್ಪ...

ಚಿತ್ರಕೃಪೆ: Raj

ಅದ್ಭುತ ಸರ್ಪಗಳ ಉದ್ಯಾನಗಳು

ಅದ್ಭುತ ಸರ್ಪಗಳ ಉದ್ಯಾನಗಳು

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿರುವ ಕಳಿಂಗ ಸರ್ಪ.

ಚಿತ್ರಕೃಪೆ: _paVan_

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X