Search
  • Follow NativePlanet
Share
» »ಬೆಂಗಳೂರಿನ ಈ ಮಿಲಿಟರಿ ಹೋಟೆಲ್‌ಗಳಲ್ಲಿ ತಲೆಮಾಂಸ, ಖೀಮಾ ಸವಿಯಲೇ ಬೇಕು

ಬೆಂಗಳೂರಿನ ಈ ಮಿಲಿಟರಿ ಹೋಟೆಲ್‌ಗಳಲ್ಲಿ ತಲೆಮಾಂಸ, ಖೀಮಾ ಸವಿಯಲೇ ಬೇಕು

ಮಿಲಿಟರಿ ಹೋಟೆಲ್ ಹೆಸರನ್ನು ನೀವು ಕೇಳಿರುವಿರಿ. ಬಹುತೇಕರಿಗೆ ಮಿಲಿಟ್ರಿ ಹೋಟೆಲ್‌ನಲ್ಲಿ ಊಟ ಮಾಡೋದಂದ್ರೆ ತುಂಬಾನೇ ಇಷ್ಟವಾಗುತ್ತದೆ. ಬೆಂಗಳೂರಿನಲ್ಲಿರುವ ಮಿಲಿಟರಿ ಹೋಟೆಲ್‌ಗೆ ದೊಡ್ಡ ಚರಿತ್ರೆಯೇ ಇದೆ. ಮರಾಠ ಯೋಧರಿಗೆ ಮಾಂಸಾಹಾರವನ್ನು ತಯಾರಿಸಿ ಬಡಿಸುತ್ತಿದ್ದ ಗೋವಿಂದ ರಾವ್ ಎನ್ನುವವರು ಈ ಮಿಲಿಟರಿ ಹೋಟೆಲ್‌ನ್ನು ಪ್ರಾರಂಭಿಸಿದರು. ಈ ಹೋಟೆಲ್‌ನಲ್ಲಿ ಭೋಜನ ಬಹಳ ರುಚಿಕರವಾಗಿರುತ್ತದೆಯೆಂದು ಸಾಕಷ್ಟು ಜನರು ಇಲ್ಲಿಗೆ ಆಗಮಿಸುತ್ತಾರೆ.

ತಲೆಮಾಂಸ

ತಲೆಮಾಂಸ

PC: youtube

ಕುರಿಯ ತಲೆಮಾಂಸವನ್ನು ಇಷ್ಟಪಡುವವರು ಅನೇಕರಿದ್ದಾರೆ. ಇಲ್ಲಿ ತಲೆ ಮಾಂಸ ಹಾಗೂ ಖೀಮಾ ಬಹಳ ರುಚಿಕರವಾಗಿರುತ್ತದೆ. ಬೇಜಾಪ್ರೈ, ಬೋಟಿ ಮಸಾಲಕ್ಕೆ ಸಾಕಷ್ಟು ಡಿಮ್ಯಾಂಡ್. ಈ ಹೋಟೆಲ್‌ ಹೆಚ್ಚಾಗಿ ಕಾಟನ್‌ಪೇಟೆ, ಜಯನಗರ, ಮಲ್ಲೇಶ್ವರಂ ಹಾಗೂ ಇನ್ನಿತರ ಕಡೆಗಳಲ್ಲಿ ಈ ಮಿಲಿಟ್ರಿ ಹೋಟೆಲ್‌ನ್ನು ಕಾಣಬಹುದು.

ಪಂಜನ್ನು ಮೈಮೇಲೆ ಎಸೆಯುವ ಬೆಂಕಿಯ ಕಾಳಗ ನಡೆಸ್ತಾರಂತೆ ಈ ಕ್ಷೇತ್ರದಲ್ಲಿಪಂಜನ್ನು ಮೈಮೇಲೆ ಎಸೆಯುವ ಬೆಂಕಿಯ ಕಾಳಗ ನಡೆಸ್ತಾರಂತೆ ಈ ಕ್ಷೇತ್ರದಲ್ಲಿ

 ಶಿವಾಜಿ ಮಿಲಿಟರಿ ಹೋಟೆಲ್

ಶಿವಾಜಿ ಮಿಲಿಟರಿ ಹೋಟೆಲ್

PC: youtube

ಈ ಹೋಟೆಲ್‌ನ್ನು 1930ರಲ್ಲಿ ಬೆಂಗಳೂರಿನಲ್ಲಿ ಲಕ್ಷಣ ರಾವ್ ಎನ್ನುವವರು ಪ್ರಾರಂಭಿಸಿದರು. ಪ್ರಸ್ತುತ ಅವರ ಮಗ ಈ ಹೋಟೆಲ್‌ನ್ನು ನಡೆಸುತ್ತಿದ್ದಾರೆ. ಇಲ್ಲಿ ದೊನ್ನೆ ಬಿರಿಯಾಣಿ ತುಂಬಾನೇ ಫೇಮಸ್.

ಜಯನಗರ

ಜಯನಗರ

PC: youtube

ಇಲ್ಲಿ ಚಿಕನ್ ಲೆಗ್‌ ಫ್ರೈ, ಮಟನ್ ಫ್ರೈ ಕೂಡಾ ತುಂಬಾನೇ ಫೇಮಸ್. ಇದು ಜಯನಗರದ ೮ನೇ ಬ್ಲಾಕ್ ೪೫ ಕ್ರಾಸ್‌ನಲ್ಲಿ ಇದೆ.ಇಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ3.30ರವರೆಗೆ ಆಹಾರ ಲಭ್ಯವಿರುತ್ತವೆ.

ಈ ದೇವಾಲಯದಲ್ಲಿ ಭಕ್ತರ ತಲೆಗೆ ತೆಂಗಿನಕಾಯಿ ಹೊಡೆಯುತ್ತಾರೆ ಯಾಕೆ?<br /> ಈ ದೇವಾಲಯದಲ್ಲಿ ಭಕ್ತರ ತಲೆಗೆ ತೆಂಗಿನಕಾಯಿ ಹೊಡೆಯುತ್ತಾರೆ ಯಾಕೆ?

ರಂಗಣ್ಣ ಮಿಲಿಟರಿ ಹೋಟೆಲ್

ರಂಗಣ್ಣ ಮಿಲಿಟರಿ ಹೋಟೆಲ್

PC: youtube

ತಲೆ ಮಾಂಸ ಪದಾರ್ಥ, ಪಾಯ ಇಲ್ಲಿ ಸಿಗುವಷ್ಟು ರುಚಿಯಾದದ್ದು ಬೇರೆಲ್ಲೂ ಸಿಗೋದಿಲ್ಲ ಎನ್ನುತ್ತಾರೆ. ಕೈಮಾ ಪ್ರೈ ಕೂಡಾ ಇಲ್ಲಿ ಬಹಳ ರುಚಿಯಾಗಿರುತ್ತದೆ. ಬೆಳಗ್ಗೆ ಕಾಲ್‌ ಸೂಪ್ ಹಾಗೂ ಇಡ್ಲಿಗೆ ಇಲ್ಲಿ ಬಾರೀ ಡಿಮ್ಯಾಂಡ್ ಇರುತ್ತದೆ.

ರಂಗಣ್ಣನ ಹೋಟೆಲ್

ರಂಗಣ್ಣನ ಹೋಟೆಲ್

PC: youtube

ಬೆಳಗ್ಗೆ ೭.೩೦ ಗಂಟೆಯಿಂದ ಸಂಜೆ ೪ ಗಂಟೆಯ ವರೆಗೆ ಹಾಗೂ ಸಂಜೆ ೭ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ಈ ಹೋಟೆಲ್ ತೆರೆದಿರುತ್ತದೆ. ಜಯನಗರದ ಕೆ ಆರ್‌ ರಸ್ತೆ ಬಳಿಯ ರಂಗಣ್ಣನ ಹೋಟೆಲ್ ಯಾವಾಗಲೂ ಜನಜಂಗುಳಿಯಿಂದ ಕೂಡಿರುತ್ತದೆ.

ನೀವು ಇಷ್ಟಪಟ್ಟವರನ್ನೇ ಬಾಳ ಸಂಗಾತಿಯನ್ನಾಗಿ ಕರುಣಿಸುವ ದೇವಾಲಯ ಇದು !<br /> ನೀವು ಇಷ್ಟಪಟ್ಟವರನ್ನೇ ಬಾಳ ಸಂಗಾತಿಯನ್ನಾಗಿ ಕರುಣಿಸುವ ದೇವಾಲಯ ಇದು !

ನ್ಯೂ ಗೋವಿಂದರಾವ್ ಮಿಲಿಟರಿ ಹೋಟೆಲ್

ನ್ಯೂ ಗೋವಿಂದರಾವ್ ಮಿಲಿಟರಿ ಹೋಟೆಲ್

PC: youtube

ಸುಮಾರು ೧೦೦ ವರ್ಷಗಳಿಂದ ಈ ಮಿಲಿಟರಿ ಹೋಟೆಲ್ ನಡೆಯುತ್ತಿದೆ. ಇಲ್ಲಿ ಮಟನ್‌ಗೆ ಸಂಬಂಧಿಸಿದ ಎಲ್ಲಾ ರೀತಿಯ ಆಹಾರಗಳು ರುಚಿಕರವಾಗಿದೆ. ಬಹಳಷ್ಟು ಗ್ರಾಹಕರು ಇಲ್ಲಿಗೆ ಬರುತ್ತಾರೆ.

ತೆರೆದಿರುವ ಸಮಯ

ತೆರೆದಿರುವ ಸಮಯ

PC: youtube

ಬೆಳಗ್ಗೆ ೬ ಗಂಟೆಯಿಂದ ಮದ್ಯಾಹ್ನ ೩.೩೦ರವರೆಗೆ ಹಾಗೂ ಸಂಜೆ ೭ ಗಂಟೆಯಿಂದ ರಾತ್ರಿ ೧೦.೩೦ರವರೆಗೆ ಇಲ್ಲಿ ಮಾಂಸಾಹಾರ ಸಿದ್ಧವಿರುತ್ತದೆ.

ಈ ಜೈಲಿನಲ್ಲಿ ಕೈದಿಗಳಿಗೆ ಅಪಾರ್ಟ್‌ಮೆಂಟ್ ಕೊಡ್ತಾರೆ, ಹೆಂಡ್ತಿ ಮಕ್ಕಳ ಜೊತೆ ವಾಸಿಸಬಹುದು<br /> ಈ ಜೈಲಿನಲ್ಲಿ ಕೈದಿಗಳಿಗೆ ಅಪಾರ್ಟ್‌ಮೆಂಟ್ ಕೊಡ್ತಾರೆ, ಹೆಂಡ್ತಿ ಮಕ್ಕಳ ಜೊತೆ ವಾಸಿಸಬಹುದು

ನಾಯ್ಡು ಮಿಲಿಟರಿ ಹೋಟೆಲ್

ನಾಯ್ಡು ಮಿಲಿಟರಿ ಹೋಟೆಲ್

PC: youtube

ಈ ಸಣ್ಣ ಹೋಟೆಲ್‌ನಲ್ಲಿ ಆಹಾರ, ಪದಾರ್ಥಗಳು ಮಾತ್ರ ರುಚಿಕರವಾಗಿರುತ್ತದೆ. ಮುಖ್ಯವಾಗಿ ಇಲ್ಲಿ ಸಿಗುವ ಪೆಪ್ಪರ್ ಚಿಕನ್‌ಗಾಗಿ ತುಂಬಾ ದೂರದಿಂದ ಜನರು ಇಲ್ಲಿಗೆ ಬರುತ್ತಾರೆ. ಸಿಟಿ ಮಾರ್ಕೇಟ್‌ನಲ್ಲಿ ವೆಂಕಟ ಚಲ್ಲಯ್ಯ ಲೈನ್‌ನಲ್ಲೇ ಈ ಹೋಟೇಲ್ ಇದೆ.

ಗೌಡ್ರು ಮಿಲಿಟರಿ ಹೋಟೆಲ್

ಗೌಡ್ರು ಮಿಲಿಟರಿ ಹೋಟೆಲ್

PC: youtube

ರೋಮೆಯೋ ಜೂಲಿಯೆಟ್ ಜೊಡಿ ಎಷ್ಟು ಫೇಮಸ್ಸೋ ಹಾಗೆಯೇ ಗೌಡ್ರು ಮಿಲಿಟರಿ ಹೋಟೆಲ್ ಕೂಡಾ ಮಾಂಸಾಹಾರಕ್ಕೆ ಫೇಮಸ್ . ಇಲ್ಲಿ ರಾಗಿಮುದ್ದೆಯೊಂದಿಗೆ ಯಾವುದೇ ನಾನ್‌ವೆಜ್ ಡಿಶ್ ಕೂಡಾ ಸೂಟ್ ಆಗುತ್ತದೆ. ಮಟನ್‌ ಕರಿ ಜೊತೆ ರಾಗಿ ಮುದ್ದೆಯನ್ನು ಇಲ್ಲಿಗೆ ಬರುವ ಹೆಚ್ಚಿನ ಗ್ರಾಹಕರು ತಿನ್ನುತ್ತಾರೆ.

ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!<br /> ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!

ಮಟನ್‌ ಚಾಪ್ಸ್‌

ಮಟನ್‌ ಚಾಪ್ಸ್‌

PC: youtube

ಇಲ್ಲಿ ಬೇಜಾ ಫ್ರೈ, ಮಟನ್‌ ಚಾಪ್ಸ್‌, ಬೋಟಿ ಮಸಾಲ ಕೂಡಾ ತುಂಬಾ ರು ಚಿಕರವಾಗಿರುತ್ತದೆ. ಇಂದಿರಾನಗರದಲ್ಲಿ ಪಾಪರೆಡ್ಡಿ ಪಾಳ್ಯದಲ್ಲಿ ಈ ಮಿಲಿಟರಿ ಹೋಟೆಲ್ ಇದೆ. ಇದು ಬೆಳಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆ ವರೆಗೆ ಹಾಗೆಯೇ ಸಂಜೆ ೭ ಗಂಟೆಯಿಂದ ೧೦.೩೦ರವರೆಗೂ ತೆರೆದಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X