Search
  • Follow NativePlanet
Share
» »ಫ್ಯಾಮಿಲಿ ಜೊತೆ ಪಿಕ್ನಿಕ್ ಹೋಗೋದಾದರೆ ಈ ಟಿಪ್ಸ್‌ ನೆನಪಿರಲಿ

ಫ್ಯಾಮಿಲಿ ಜೊತೆ ಪಿಕ್ನಿಕ್ ಹೋಗೋದಾದರೆ ಈ ಟಿಪ್ಸ್‌ ನೆನಪಿರಲಿ

ನೀವು ರಜೆಯ ಮೇಲೆ ಹೋಗುತ್ತೀರಾ ಅಥವಾ ಕೆಲವು ಕುಟುಂಬ ರಜೆಯ ವಿಚಾರಗಳನ್ನು ಕುರಿತು ಯೋಚಿಸುತ್ತೀರಾ, ನಿಮ್ಮ ಪ್ರೀತಿಪಾತ್ರರೊಂದಿಗೆ ಅದ್ಭುತ ಸಮಯವನ್ನು ಕಳೆಯಬೇಕೆಂದಿದ್ದರೆ ಈ ಅಂಶಗಳನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು.

ಈಗ ಬೇಸಿಗೆ ರಜಾ ಬೇರೆ ಇದೆ ಫ್ಯಾಮಿಲಿ ಜೊತೆ ಪಿಕ್ನಿಕ್ ಹೋಗೋದಕ್ಕೆ ಒಳ್ಳೆ ಸಮಯ. ಒಬ್ಬರೇ ಫ್ರೆಂಡ್ಸ್‌ ಜೊತೆ ಪಿಕ್ನಿಕ್ ಹೋಗೋದಾದರೆ ಯಾವುದೇ ಪ್ಲ್ಯಾನಿಂಗ್ ಇಲ್ಲದೇ ಬೇಕಾದಂತೆ ಹೋಗಬಹುದು. ಆದರೆ ಫ್ಯಾಮಿಲಿ ಜೊತೆ ಪಿಕ್ನಿಕ್ ಹೋಗೋದಾದರೆ ಹಾಗೆಲ್ಲಾ ಬೇಕಾಬಿಟ್ಟಿ ಹೋಗೋಹಾಗಿಲ್ಲ. ಅದಕ್ಕೆ ಪೂರ್ಣ ರೀತಿಯಲ್ಲಿ ತಯಾರಿ ಮಾಡಬೇಕು. ನಾವಿಂದು ಫ್ಯಾಮಿಲಿ ಪಿಕ್ನಿಕ್ ಹೋಗೋದಾದರೆ ಕೆಲವು ಟಿಪ್ಸ್‌ಗಳನ್ನು ನೆನಪಿಡಿ.

ನೀವು ರಜೆಯ ಮೇಲೆ ಹೋಗುತ್ತೀರಾ ಅಥವಾ ಕೆಲವು ಕುಟುಂಬ ರಜೆಯ ವಿಚಾರಗಳನ್ನು ಕುರಿತು ಯೋಚಿಸುತ್ತೀರಾ, ನಿಮ್ಮ ಪ್ರೀತಿಪಾತ್ರರೊಂದಿಗೆ ಅದ್ಭುತ ಸಮಯವನ್ನು ಕಳೆಯಬೇಕೆಂದಿದ್ದರೆ ಈ ಅಂಶಗಳನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು.

ಸ್ಥಳವನ್ನು ಸರಿಯಾಗಿ ಆಯ್ಕೆ ಆಯ್ಕೆ ಮಾಡಿಕೊಳ್ಳಿ


ನೀವು ಯಾವುದೇ ತಾಣವನ್ನು ಆಯ್ಕೆ ಮಾಡುವ ಮೊದಲು ನಿಮ್ಮ ಫ್ಯಾಮಿಲಿ ಸದಸ್ಯರ ಇಷ್ಟ ಕಷ್ಟಗಳಿಗೆ ಆದ್ಯತೆ ನೀಡಿ. ತಾಣವನ್ನು ಆಯ್ಕೆ ಮಾಡುವಾಗ ಎಲ್ಲರಿಗೂ ಇಷ್ಟವಾಗುವಂತಹ ತಾಣವನ್ನು ಆಯ್ಕೆ ಮಾಡಿ. ವಯಸ್ಕರು, ಮಕ್ಕಳು, ಯುವಕರಿಗೆ ಸೂಕ್ತವಾದ ತಾಣವನ್ನು ಆಯ್ಕೆ ಮಾಡಿಕೊಳ್ಳಿ.

ಮುಂಚಿತವಾಗಿ ಎಲ್ಲವನ್ನೂ ರಿಸರ್ವ್ ಮಾಡಿ

ತಮ್ಮ ಕುಟುಂಬದೊಂದಿಗೆ ಪ್ರಯಾಣಿಸುತ್ತಿರುವಾಗ ಹೋಟೆಲುಗಳು, ವಿಮಾನಗಳು, ದೃಶ್ಯವೀಕ್ಷಣೆಯ ಟಿಕೆಟ್‌ಗಳನ್ನು ಮುಂಚಿತವಾಗಿ ಬುಕ್ ಮಾಡಿ. ಹೀಗೆ ಮುಂಚಿತವಾಗಿ ಬುಕ್ ಮಾಡುವುದರಿಂದ ಅಲ್ಲಿ ಹೋಗಿ ಟಿಕೇಟ್‌ಗಾಗಿ ಪರದಾಡುವ ಜಂಜಾಟವಿರುವುದಿಲ್ಲ. ವಿಮಾನದ ಟಿಕೇಟ್, ರೈಲು ಟಿಕೇಟ್ ಮುಂಚಿತವಾಗಿ ಬುಕ್ ಮಾಡಿದರೆ ನಿಮಗೆ ಬೇಕಾದಂತೆ ಕಂಫರ್ಟ್‌ ಆದ ಸೀಟ್ ಸಿಗುತ್ತದೆ. ಆರಾಮವಾಗಿ ಪ್ರಯಾಣ ಬೆಳೆಸಬಹುದು.

ನಿಮ್ಮ ಪ್ರಯಾಣ ದಾಖಲೆಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ

ಪ್ರಯಾಣ ಮಾಡುವಾಗ ನಿಮ್ಮ ಪ್ರಯಾಣ ದಾಖಲೆಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತದೆ. ಅದಕ್ಕಾಗಿ ಎಲ್ಲಾ ದಾಖಲೆಗಳನ್ನು ಜಾಗರೂಕತೆಯಿಂದ ಇಟ್ಟುಕೊಳ್ಳಿ. ನಿಮ್ಮ ಪಾಸ್ಪೋರ್ಟ್, ಐಡಿ ಕಾರ್ಡ್‌ಗಳನ್ನು, ಲೈಸೆನ್ಸ್‌ಗಳನ್ನೆಲ್ಲಾ ಒಂದು ಸಣ್ಣ ಚೀಲದ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ. ತಮ್ಮ ಚೀಲ ಹಾಗೂ ಪುಟ್ಟ ಮಕ್ಕಳ ಬಗ್ಗೆ ಕಾಳಜಿ ವಹಿಸಿ.

ಮೊದಲು ಗಮ್ಯಸ್ಥಾನದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ಕುರಿತು ತಿಳಿದುಕೊಳ್ಳಿ

ನಿಮ್ಮ ಯಾವುದೇ ತಾಣಕ್ಕೆ ಹೋಗುವುದಾದರೂ ಅಲ್ಲಿನ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಿ. ವಿಶೇಷವಾಗಿ ನೀವು ಅಲ್ಲೇ ಮಾಡಬೇಕಾಗಿರುವುದು, ಮಾಡಬಾರದವುಗಳನ್ನು ತಿಳಿಯಿರಿ. ಇಲ್ಲವಾದಲ್ಲಿ ಅನಾವಶ್ಯಕ ದಂಡ ವಿಧಿಸಬೇಕಾಗುವುದು. ಅಲ್ಲಿನ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.

ಪ್ರಥಮ ಚಿಕಿತ್ಸಾ ಕಿಟ್ ನಿಮ್ಮೊಂದಿಗಿರಲಿ

ಪ್ರಯಾಣದ ಸಮಯದಲ್ಲಿ ವಿಶೇಷವಾಗಿ ಪ್ರಥಮ ಚಿಕಿತ್ಸಾ ಕಿಟ್ ಅನ್ನು ಮರೆಯಬೇಡಿ. ಫ್ಯಾಮಿಲಿ ಜೊತೆ ಪ್ರವಾಸಕ್ಕೆ ಹೋಗುತ್ತಿದ್ದೀರೆಂದರೆ ಯಾವುದೇ ಕ್ಷಣದಲ್ಲಾದರೂ ಪ್ರೃಥಮ ಚಿಕಿತ್ಸಾ ಕಿಟ್‌ನ ಅಗತ್ಯ ಬರಬಹುದು.
- ನಿಮ್ಮ ಕುಟುಂಬದ ಯಾವುದೇ ಸದಸ್ಯರ ಮೆಡಿಕಲ್ ಹಿಸ್ಟರಿಯನ್ನು ತಿಳಿದುಕೊಳ್ಳಿ, ಅವರ ಔಷಧಿಗಳನ್ನೂ ಜೊತೆಗೆ ಇಟ್ಟುಕೊಳ್ಳಿ.

ಸಮಯ ಕಳೆಯಲು ನಿಮಗೆ ಸಹಾಯ ಮಾಡುವ ವಸ್ತುವನ್ನು ಇಟ್ಟುಕೊಳ್ಳಿ

ಇದು ಗೇಮ್ ಬಾಯ್, ಟ್ಯಾಬ್ಲೆಟ್ ಅಥವಾ ನಿಮ್ಮ ಫೋನ್‌ನಲ್ಲಿರುವ ಆಟವಾಗಲಿ, ನಿಮ್ಮ ಸಮಯವನ್ನು ಕಳೆದುಕೊಳ್ಳಲು ಸಹಾಯವಾಗುವಂತಹ ಕನಿಷ್ಠ ಏನನ್ನಾದರೂ ನಿಮ್ಮ ಜೊತೆ ಇಟ್ಟುಕೊಳ್ಳಿ. ಇದು ಪುಸ್ತಕವೂ ಆಗಿರಬಹುದು ನಿಮ್ಮ ಕುಟುಂಬದೊಂದಿಗೆ ಕೆಲವು ಅರ್ಥಪೂರ್ಣ ಮತ್ತು ಮೋಜಿನ ಸಮಯವನ್ನು ಕಳೆಯಲು ಗೆಮ್ಸ್‌ಗಳನ್ನು ಇಟ್ಟುಕೊಳ್ಳುವುದು ಉಚಿತ.

ನಗದು ಹಾಗೂ ಕಾರ್ಡ್‌ ಕೂಡಾ ಇರಲಿ

ನೀವು ಹೋದ ಸ್ಥಳಗಳಲ್ಲೆಲ್ಲಾ ಕ್ರೆಡಿಟ್‌ ಕಾರ್ಡ್ ಬಳಕೆ ಸಾಧ್ಯವಾಗೋದಿಲ್ಲ. ಹಾಗಾಗಿ ನಿಮ್ಮ ಜೊತೆಗೆ ಕರೆನ್ಸಿ ನೋಟುಗಳನ್ನೂ ಇಟ್ಟುಕೊಳ್ಳಿ. ಒಂದು ವೇಳೆ ಆ ಸ್ಥಳದಲ್ಲಿ ಎಟಿಎಂ ಇಲ್ಲದೇ ಇದ್ದಲ್ಲಿ ಹಣಕ್ಕಾಗಿ ಪರದಾಡುವ ಪರಿಸ್ಥಿತಿ ಬರಬಹುದು. ನೀವು
ನಿಮ್ಮ ಕುಟುಂಬ ಸದಸ್ಯರ ಪಾಕೆಟ್‌ನಲ್ಲಿ ಒಂದು ಐಡಿ ಅನ್ನು ಇರಿಸಿ

ಫೋನ್ ನಂಬರ್ ಇಟ್ಟುಕೊಳ್ಳಿ

ಫ್ಯಾಮಿಲಿಯ ಪ್ರತೀ ಸದಸ್ಯರ ಪಾಕೆಟ್‌ನಲ್ಲಿ ಫ್ಯಾಮಿಲಿ ಸದಸ್ಯರ ಫೋನ್ ನಂಬರ್ ಇರಲಿ, ಒಂದು ವೇಳೆ ಕಳೆದು ಹೋದಲ್ಲಿ ಸಂಪರ್ಕಿಸಲು ಅನುಕೂಲವಾಗುತ್ತದೆ. ಅಪಘಾತ ಸಂಭವಿಸಿದರೆ ಆ ನಂಬರ್ ಮೂಲಕ ಸಂಪರ್ಕಿಸಬಹುದು. ಇದು ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ ಮಾತ್ರವಲ್ಲದೆ ಮೊದಲ ಬಾರಿಗೆ ಪ್ರಯಾಣಿಕರಿಗೂ ಕೂಡಾ ಉಪಕಾರಿಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X