Search
  • Follow NativePlanet
Share
» »ಅಂಡಮಾನ್ ಮತ್ತು ನಿಕೋಬಾರ್ : ಕುತೂಹಲಕಾರಿ ಸತ್ಯಗಳು

ಅಂಡಮಾನ್ ಮತ್ತು ನಿಕೋಬಾರ್ : ಕುತೂಹಲಕಾರಿ ಸತ್ಯಗಳು

By Vijay

ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರಗಳು ಸಂಧಿಸುವ ಸ್ಥಳದಲ್ಲಿ ನೆಲೆಸಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತ ದೇಶಕ್ಕೆ ಸೇರಿದ ಏಳು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಒಂದಾಗಿದೆ. ಇದು ಭಾರತ ದೇಶದ ಮೂರು ಸೇನಾ ಪಡೆಗಳು ಜಂಟಿಯಾಗಿ ಕಾರ್ಯನಿರ್ವಹಿಸುವ ಭಾರತೀಯ ಸಶಸ್ತ್ರ ಸೇನಾ ಪಡೆಗಳ ನೆಲೆಯಾಗಿದೆ.

ಇನ್ನೂ ಪ್ರವಾಸೋದ್ಯಮದ ದೃಷ್ಟಿಯಿಂದ ಈ ದ್ವೀಪಗಳನ್ನು ನೋಡಿದಾಗ, ಈ ಎರಡು ದ್ವೀಪ ಸಮೂಹಗಳು ನಿಗೂಢ ಹಾಗೂ ಅಷ್ಟೆ ಕುತೂಹಲ ಕೆರಳಿಸುವ ಪ್ರವಾಸಿ ತಾಣಗಳಾಗಿ ಕಂಡುಬರುತ್ತವೆ. ಇದಕ್ಕೆ ಮುಖ್ಯ ಕಾರಣವೆಂದರೆ ಇಲ್ಲಿರುವ ಅದ್ಭುತವಾದ ಪ್ರಕೃತಿಯ ಸೊಬಗು, ವಿಶಿಷ್ಟವಾದ ಬುಡಕಟ್ಟು ಜನಾಂಗ, ವೈವಿಧ್ಯಮಯ ಜಲಜೀವ ರಾಶಿಗಳು, ಅತಿ ವಿರಳ ಜನಸಂಖ್ಯೆ, ನಿಶ್ಕಲ್ಮಶ ವಾತಾವರಣ ಹಾಗೂ ಆಶ್ಚರ್ಯಕರ ಇತಿಹಾಸ.

ವಿಶೇಷ ಲೇಖನ : ಆಲಕ್ಷಿಸದಿರಿ...ಏಕೆಂದರೆ ಇದು ಲಕ್ಷದ್ವೀಪ

ಅಂಡಮಾನಿನ ಹ್ಯಾವ್ಲಾಕ್ ನಡುಗಡ್ಡೆಯ ರಾಧಾನಗರ ಕಡಲ ತೀರವು ಅತ್ಯಂತ ರೋಮಾಂಚಕವಾದ ಹಾಗೂ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಸುಂದರ ಕಡಲ ತೀರವಾಗಿದೆ. ಪ್ರತಿಷ್ಠಿತ ಟೈಮ್ ನಿಯತಕಾಲಿಕೆಯು ಈ ಕಡಲ ತೀರವನ್ನು 2004 ರಲ್ಲಿ ಏಷಿಯಾದ ಅತಿ ಸುಂದರ ಕಡಲ ತೀರ ಹಾಗೂ ಜಗತ್ತಿನ ಏಳನೆಯ ಅದ್ಭುತ ಕಡಲ ತೀರ ಎಂಬ ಪಟ್ಟವನ್ನು ಕಟ್ಟಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮುಲತಃ ಹಲವಾರು ನಡುಗಡ್ಡೆಗಳ ಸಮೂಹವಾಗಿದ್ದು ಕೃಷಿ, ಕೈಗಾರಿಕೆ ಮುಂತಾದವುಗಳು ಅತಿ ಕಡಿಮೆ ಪ್ರಮಾಣದಲ್ಲಿ ನಡೆಯುತ್ತವೆ. ಅಂಡಮಾನ್ ಮತ್ತು ನಿಕೋಬಾರ್ ಸರ್ಕಾರಕ್ಕೆ ಪ್ರವಾಸೋದ್ಯಮವು ಅತಿ ಮುಖ್ಯವಾದ ಆದಾಯದ ಮೂಲವಾಗಿದೆ. ಅಂತೆಯೆ ಸಾಕಷ್ಟು ಜನರು ಭಾರತ ಹಾಗೂ ಜಗತ್ತಿನೆ ವಿವಿಧೆಡೆಗಳಿಂದ ಈ ದೀಪಗಳನ್ನು ಸುತ್ತಲು ಭೇಟಿ ನೀಡುತ್ತಾರೆ.

ಪ್ರಸ್ತುತ ಲೇಖನದ ಮೂಲಕ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕುರಿತು ಹಲವು ಸ್ವಾರಸ್ಯಕರ ವಿಷಯಗಳು ಮತ್ತು ಕೆಲವು ಸತ್ಯಗಳನ್ನು ತಿಳಿಯಿರಿ.

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಭಾರತದ ಪ್ರಮುಖ ಪ್ರವಾಸಿ ತಾಣ ಮತ್ತು ರಜಾ ದಿನಗಳನ್ನು ಕಳೆಯಲು ಇರುವ ಅತ್ಯಂತ ಸೂಕ್ತ ಸ್ಥಳ ಅಂಡಮಾನ್ ನಿಕೋಬಾರ್ ಬಂಗಾಳ ಕೊಲ್ಲಿಯಲ್ಲಿದೆ. ಇದು ಭಾರತದ ದಕ್ಷಿಣದ ತುತ್ತತುದಿಯಾಗಿದ್ದು ಸುಮಾರು 8000 ಚದರ ಕಿಲೋಮೀಟರ್ ಹರಡಿದೆ ಮತ್ತು ಎಲ್ಲೇ ನೋಡಿದರೂ ಹಚ್ಚ ಹಸಿರಿನಿಂದ ಕೂಡಿದೆ.

ಚಿತ್ರಕೃಪೆ: Pauk

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ ಮತ್ತು ನಿಕೋಬಾರ್ ಗಳು ಎರಡು ಪ್ರತ್ಯೇಕ ದ್ವೀಪ ಸಮೂಹಗಳಾಗಿದ್ದು 10 ಡಿಗ್ರಿ ಉತ್ತರ ಅಕ್ಷಾಂಶದಿಂದ ಬೇರ್ಪಟ್ಟಿವೆ. ಇದರ ರಾಜಧಾನಿಯಾದ ಪೋರ್ಟ್ ಬ್ಲೇರ್, ಈ ದ್ವೀಪ ಸಮೂಹಗಳಿಗೆ ಪ್ರವೇಶದ್ವಾರವಾಗಿದ್ದು ವಿಮಾನ ನಿಲ್ದಾಣವನ್ನು ಹೊಂದಿದೆ. ಅಂದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಭಾರತದ ಇತರೆ ಭಾಗಗಳಿಂದ ತಲುಪಲು ಮೊದಲಿಗೆ ಪೋರ್ಟ್ ಬ್ಲೇರ್ ಗೆ ತೆರಳಬೇಕು.

ಚಿತ್ರಕೃಪೆ: Ankur P

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಈ ದ್ವೀಪ ಸಮೂಹಗಳಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರವಾಗಿದೆ ಪೋರ್ಟ್ ಬ್ಲೇರ್. ಇಲ್ಲಿಗೆ ತಲುಪಿದ ಬಳಿಕ ನಂತರ ಇತರೆ ಪ್ರವಾಸಿ ಆಕರ್ಷಣೆಗಳಿಗೆ ಭೇಟಿ ನೀಡಲು ಸ್ಥಳೀಯ ಸಂಚಾರ ಮಾಧ್ಯಮಗಳನ್ನು ಆಯ್ದುಕೊಳ್ಳಬಹುದು. ಹೀಗೆ ಇದು ಉತ್ತರದಿಂದ ದಕ್ಷಿಣದ ತನಕ ಸುಮಾರು 800 ಕಿಲೋಮೀಟರ್ ನಷ್ಟು ಹಬ್ಬಿದೆ. ಪೋರ್ಟ್ ಬ್ಲೇರ್ ಗೆ ನೀವು ಚೆನ್ನೈ ಅಥವಾ ಕೋಲ್ಕತ್ತಾದಂತಹ ಭಾರತದ ಪೂರ್ವ ಕರಾವಳಿಯಿಂದ ದೋಣಿಯ ಮೂಲಕವೂ ತಲುಪಬಹುದು.

ಚಿತ್ರಕೃಪೆ: Ankur P

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕೊನೆಯಿಲ್ಲದ ಶುದ್ಧ ಬಿಳಿ ಮರಳಿನ ಕಡಲ ತೀರಗಳ ಸಮೂಹವಾಗಿದೆ. ಸ್ಕೂಬಾ ಡೈವಿಂಗ್ ಹಾಗೂ ಸಾಗರದ ಆಳದಲ್ಲಿ ಅನ್ವೇಷಣೆ ನಡೆಸುವುದು ಮುಂತಾದ ರೋಮಾಂಚನಕಾರಿ ಚಟುವಟಿಕೆಗಳಿಗೆ ಇಲ್ಲಿ ಅವಕಾಶವಿದೆ. ಲಕ್ಷ್ಮಣಪುರ ಕಡಲ ತೀರ.

ಚಿತ್ರಕೃಪೆ: Jaswintravels

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ವಿವಿಧ ಪಕ್ಷಿ ಹಾಗೂ ಪ್ರಾಣಿ ಸಂಕುಲಗಳನ್ನೊಳಂಗೊಂಡ ಇಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯವು ಪ್ರವಾಸಿಗರನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ. ಇದರ ಜೂತೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು 'ಪರಿಸರ ಸ್ನೇಹಿ ರಜಾ ತಾಣ' ಎಂಬ ಬಿರುದನ್ನೂ ತಮ್ಮದಾಗಿಸಿಕೊಂಡಿವೆ.

ಚಿತ್ರಕೃಪೆ: Antony Grossy

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಸಾಕಷ್ಟು ಪ್ರವಾಸಿಗರು ಈ ದ್ವೀಪ ಸಮೂಹಗಳನ್ನು ಅವುಗಳು ಹೊಂದಿರುವ ಪ್ರಖ್ಯಾತ ಕಡಲ ತೀರಗಳಿಗೆಂದು ಭೇಟಿ ನೀಡುತ್ತಾರೆ. ಆದರೆ ಅಚ್ಚರಿಯ ಸಂಗತಿಯೆಂದರೆ ಅಂಡಮಾನ್ ಮತ್ತು ನಿಕೋಬಾರ್ ಕೇವಲ ಕಡಲ ತೀರಗಳಿಗಷ್ಟೆ ಅಲ್ಲದೆ ವೈವಿಧ್ಯಮಯ ಪಕ್ಷಿಗಳು, ಬಣ್ಣ ಬಣ್ಣದ ಹೂವುಗಳು ಮತ್ತು ಹಲವಾರು ದೊಡ್ಡ ದಟ್ಟ ಅರಣ್ಯಗಳು ಹಾಗೂ ಜೀವರಾಶಿಗಳಿಗೆ ಹೆಸರುವಾಸಿಯಾಗಿದೆ. ನವ ದಂಪತಿಗಳ ಪಾಲಿಗಂತೂ ಇದು ಸ್ವರ್ಗದಂತೆಯೆ ಇದೆ.

ಚಿತ್ರಕೃಪೆ: Ankur P

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಎಷ್ಟು ಅನನ್ಯ ಎಂಬುದು ಈ ಮಾಹಿತಿ ನಿಮಗೆ ಸ್ಪಷ್ಟ ಗೊಳಿಸುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ಗಳಲ್ಲಿ 2200 ಪ್ರಭೇದದ ಸಸ್ಯಗಳು ಕಂಡುಬರುತ್ತವೆ. ಇವುಗಳಲ್ಲಿ ಸುಮಾರು 1300 ಸಂತತಿಗಳು ಭಾರತದಲ್ಲೂ ಕಾಣಸಿಗುವುದಿಲ್ಲ ಅಮ್ದರೆ ನಿಮ ಅಚ್ಚರಿಯಾಗದೆ ಇರಲಾರದು. ಇನ್ನೊಂದು ವಿಶೇಷವೆಂದರೆ ಇಲ್ಲಿನ ಸ್ಥಳೀಯರು ತಮ್ಮ ಸಂಪ್ರದಾಯದ ಕೌಶಲ್ಯಗಳಿಂದ ಪ್ರಕೃತಿದತ್ತವಾಗಿ ಲಭಿಸುವ ಗಿಡ ಮರಗಳ ನಾರು ಬೇರುಗಳನ್ನು ಬಳಸಿಕೊಂಡು ಕುಟೀರಗಳನ್ನು ನಿರ್ಮಿಸಿದ್ದು ಅವುಗಳಲ್ಲಿ ಪ್ರವಾಸಿಗರು ತಂಗಬಹುದಾಗಿದೆ. ಅಲ್ಲದೆ ರಿಸಾರ್ಟುಗಳು ಸಹ ಲಭ್ಯವಿದೆ.

ಚಿತ್ರಕೃಪೆ: wikimedia

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಅಲಂಕಾರಿಕ ಚಿಪ್ಪುಮೀನು ಮತ್ತು ಸಿಂಪಿ ಹುಳುಗಳ ಬೃಹತ್ ಮಾರುಕಟ್ಟೆಯನ್ನು ಹೊಂದಿವೆ. ಕೈಗಾರಿಕೆ, ಕೃಷಿ ಚಟುವಟಿಕೆಗಳಿದ್ದರೂ ಸಹ ಅವು ಅಲ್ಪ ಪ್ರಮಾಣದಲ್ಲಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವಿಪಗಳು ಹೆಚ್ಚು ಅನ್ವೇಷಿಸಲ್ಪಡದೆ ಇರುದ್ದುದುದು ಈ ದ್ವೀಪಗಳ ಕುರಿತು ಪ್ರವಾಸಿಗರಿಗೆ ಕುತೂಹಲ ಹೆಚ್ಚಿಸಿದ್ದುದ್ದರ ಮುಖ್ಯ ಕಾರಣ.

ಚಿತ್ರಕೃಪೆ: Ankur P

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಹೀಗೆ ಗೌಪ್ಯತೆಯನ್ನು ಸೂಕ್ತವಾಗಿ ಕಾಯ್ದಿಟ್ಟ ಪ್ರದೇಶ ಎಂಬ ಹೆಚ್ಚುಗಾರಿಕೆಯನ್ನು ಹೊಂದಿರುವ ಅಂಡಮಾನ್ ನಿಕೋಬಾರ್ ದ್ವೀಪಗಳು, ಇಷ್ಟರಲ್ಲಿಯೆ, ಬೇಸಿಗೆಯನ್ನು ಕಳೆಯಲು ಸಹ ಅತ್ಯಂತ ಸೂಕ್ತವಾದ ಪ್ರವಾಸಿ ತಾಣ ಎಂಬ ಹೆಗ್ಗಳಿಕೆಯನ್ನೂ ಪಡೆಯುವ ಸಮಯ ಬಲು ದುರವಿಲ್ಲವೆಂದೆ ಹೇಳಬಹುದು.

ಚಿತ್ರಕೃಪೆ: Venkatesh Katta

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಪ್ರವಾಸ ಎಂದ ಕೂಡಲೇ ಹೆಚ್ಚಿನ ಪ್ರವಾಸಿಗರು ಜಾಲಿ ಬಾಯ್ ಗೆ ಹೋಗಲೇ ಬೇಕು ಎನ್ನುತ್ತಾರೆ. ಜಾಲಿ ಬಾಯ್ ದ್ವೀಪ ಇತರ ದ್ವೀಪಗಳಾದ ಹಾವ್ ಲಾಕ್ ದ್ವೀಪ, ಸಿಕ್ಯೂ ದ್ವೀಪ ಗಳೊಂದಿಗೆ ಸೇರಿಕೊಂಡು ಪ್ರಸಿದ್ಧ ಮಹಾತ್ಮಾ ಗಾಂಧಿ ರಾಷ್ಟ್ರೀಯ ಸಾಗರ ಉದ್ಯಾನವನ್ನು ನಿರ್ಮಿಸಿವೆ. ಹ್ಯಾವ್ಲಾಕ್ ದ್ವೀಪದ ಕಡಲದಾಳದಲ್ಲಿ ಈಲ್ ಮೀನು ಹವಳದ ದಿಬ್ಬಗಳ ಮೇಲೆ...

ಚಿತ್ರಕೃಪೆ: Arun Katiyar

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಇದನ್ನು ವಂಡೂರು ಸಾಗರ ಉದ್ಯಾನ ಎಂದೂ ಕರೆಯುತ್ತಾರೆ. ಮಾಲಿನ್ಯ ತಡೆ ಮತ್ತು ಕಲಬೆರಕೆ ತಡೆಗಾಗಿ ಸಾಕಷ್ಟು ನಿಗಾ ವಹಿಸುವ ಮತ್ತು ಪರಿಸರದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವ ಈ ದ್ವೀಪ ಸಮೂಹದಲ್ಲಿನ ಸಮಶೀತೋಷ್ಣ ಹವಾಮಾನವನ್ನು ಎಲ್ಲರೂ ಇಷ್ಟಪಡುವುದರಲ್ಲಿ ಸಂಶಯವಿಲ್ಲ. ಹ್ಯಾವ್ಲಾಕ್ ದ್ವೀಪದ ಕಡಲ ತಡಿಯ ನೋಟ.

ಚಿತ್ರಕೃಪೆ: Snap®

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಇಲ್ಲಿನ ಸ್ವಚ್ಛವಾದ ಕಡಲ ಕಿನಾರೆಗಳು, ವೈವಿಧ್ಯಮಯ ಜಲಜೀವಿಗಳು, ಇಲ್ಲಿ ಕಂಡುಬರುವ ಸಸ್ಯ ಮತ್ತು ಪ್ರಾಣಿಗಳಿಗೆ ಸಮಾನವಾಗಿರುವ ಪ್ರದೇಶ ಬೇರೊಂದಿಲ್ಲ.

ಚಿತ್ರಕೃಪೆ: Ana Raquel S. Hernandes

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಪೋರ್ಟ್ ಬ್ಲೇರ್ ಈ ದ್ವೀಪ ಸಮೂಹಗಳ ರಾಜಧಾನಿ ನಗರ. ಇದು ಈ ದ್ವೀಪ ಸಮೂಹಗಳಲ್ಲಿಯೇ ಅತ್ಯಂತ ದೊಡ್ಡ ದ್ವೀಪವಾದ ದಕ್ಷಿಣ ಅಂಡಮಾನ್ ದ್ವೀಪದಲ್ಲಿದೆ. ದ್ವೀಪದ ದಕ್ಷಿಣದಲ್ಲಿರುವ ಕಾರಣ ಹಿತಕರವಾದ ಉಷ್ಣವಲಯದ ಹವಾಮಾನವನ್ನು ಹೊಂದಿದೆ.

ಚಿತ್ರಕೃಪೆ: Sankara Subramanian

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಮಳೆಗಾಲದಲ್ಲಿ ಬೀಳುವ ಮಳೆ ಇದನ್ನು ಅತ್ಯುತ್ತಮ ರಜಾಕಾಲ ಕಳೆಯುವ ಸ್ಥಳವನ್ನಾಗಿಸಿದೆ. ಇದು ಭಾರತೀಯ ಮತ್ತು ವಿದೇಶಿ ಪ್ರವಾಸಿಗರಿಬ್ಬರಲ್ಲೂ ಅತ್ಯಂತ ಪ್ರಸಿದ್ಧ ತಾಣವಾಗಿದೆ. ಅದರಲ್ಲೂ ಇಲ್ಲಿ ವಿದೇಶಿಯರಿಗೆ ಮೀಸಲಾಗಿರಿಸಿರುವ ಕೆಲವು ಪ್ರದೇಶಗಳು ವಿದೇಶಿಯರನ್ನು ಮತ್ತಷ್ಟು ಆಕರ್ಷಿಸುತ್ತದೆ.

ಚಿತ್ರಕೃಪೆ: Sankara Subramanian

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಒಂದು ನಗರವಾಗಿ ಪೋರ್ಟ್ ಬ್ಲೇರ್ ಹಲವಾರು ಕಾರಣಗಳಿಗೆ ಪ್ರಮುಖವಾಗಿದೆ. ಇದು ಭಾರತದ ಟ್ರೈ ಸರ್ವೀಸ್ ಕಮಾಂಡ್ ನ ಕೇಂದ್ರ ಕಾರ್ಯಾಲಯವೂ ಆಗಿದೆ. ಅಂದರೆ ನೀವು ಊಹಿಸಿರುವಂತೆ ಇಲ್ಲಿ ಭಾರತೀಯ ವಾಯುಪಡೆ, ನೌಕಾಪಡೆ ಮತ್ತು ಭೂಸೈನ್ಯದ ಸೇನೆಗಳಿವೆ.

ಚಿತ್ರಕೃಪೆ: Indian Navy

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಲ್ಲದೆ ಪೋರ್ಟ್ ಬ್ಲೇರ್ ದ್ವೀಪದಲ್ಲಿ ಕೆಲವು ಮೋಜಿನ ಆಟಗಳಿರುವ ಕಡಲ ತೀರಗಳಿದ್ದು ಯುವ ಜನಾಂಗದವರಿಗೆ ಹೆಚ್ಚು ಇಷ್ಟವಾಗುವಂತೆ ಮಾಡುತ್ತವೆ ಹಾಗೂ ಕುಟುಂಬ ಸಮೇತ ಹಾಯಾಗಿ ರಜಾ ದಿನಗಳನ್ನು ಕಳೆಯುವ ತಾಣಗಳನ್ನೂ ಸಹ ಪೋರ್ಟ್ ಬ್ಲೇರ್ ಹೊಂದಿದ್ದು ಒಟ್ಟಾರೆಯಾಗಿ ಒಂದು ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ.

ಚಿತ್ರಕೃಪೆ: Ankur P

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ನಮ್ಮಲ್ಲಿ ಬಹುತೇಕರು "ಕಾಲಾಪಾನಿ"ಯ ಕುರಿತು ಕೇಳಿರಬಹುದಲ್ಲವೆ? ಹೌದು ಇತಿಹಾಸ ಪ್ರಸಿದ್ಧ ಆ ಕಾಲಾಪಾನಿ ಶಿಕ್ಷೆಯ ಜೈಲು ಇರುವುದು ಪೋರ್ಟ್ ಬ್ಲೇರ್ ನಲ್ಲಿಯೆ. ಎಂದಿಗೂ ಮರೆಯಲಾಗದ ಇತಿಹಾಸದ ಆ ಗತಿಸಿ ಹೋದ ಕಹಿ ಘಟನೆಯನ್ನು ಇಂದಿಗೂ ನೆನಪಿಸುವ, ಭೇಟಿ ನೀಡುವ ಪ್ರವಾಸಿಗರಿಗೆ ಕಥೆ ಹೇಳುವ ಐತಿಹಾಸಿಕ ಪ್ರವಾಸಿ ಆಕರ್ಷಣೆಯಾಗಿ ಉಳಿದುಕೊಂಡಿದೆ ಕಾಲಾಪಾನಿ. ಇದೊಂದು ವೃತ್ತಾಕಾರ ಜೈಲಾಗಿದ್ದು ಸೆಲ್ಯೂಲರ್ ಜೈಲ್ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Jomesh

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಭಾರತೀಯ ಹೋರಾಟಗಾರರನ್ನು ಬಂಧಿಸಿಡಲು ಬ್ರಿಟೀಷರು 1800 ರ ಕೊನೆಯಲ್ಲಿ ಕಟ್ಟಿದ ಜೈಲು ಇದಾಗಿದೆ. ಇದು ಅಷ್ಟೊಂದು ಕುಖ್ಯಾತವಾಗಲು ಕಾರಣ ಸಹಿಸಲಾಗದ ರೀತಿಯಲ್ಲಿ ಬ್ರಿಟೀಷರು ಅನುಸರಿಸಿದ ಕೆಲವು ಶಿಕ್ಷೆ ನೀಡುವ ತಂತ್ರಗಳು!

ಚಿತ್ರಕೃಪೆ: Abhijeet Rane

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಪೋರ್ಟ್ ಬ್ಲೇರ್ ನಲ್ಲಿ ಭೇಟಿ ನೀಡಬೇಕಾದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ರಾಷ್ಟ್ರೀಯ ಸಾಗರ ಉದ್ಯಾನ. ಈ ಒಂದು ಉದ್ಯಾನಕ್ಕೆ ಭೇಟಿ ನೀಡಿದರೆ ನೀವು ನೂರಕ್ಕೂ ಹೆಚ್ಚು ನಡುಗಡ್ಡೆಗಳಿಗೆ ಭೇಟಿ ನೀಡಿದ ಅನುಭವವನ್ನು ಪಡೆದುಕೊಳ್ಳಬಹುದು. ಇಲ್ಲಿ ತರಹೇವಾರಿ ಚಟುವಟಿಕೆಗಳಿದ್ದು ನಿಮ್ಮ ಇಷ್ಟಾನುಸಾರವಾಗಿ ನಿಮ್ಮ ಪ್ರವಾಸವನ್ನು ಕೆಲವು ಘಂಟೆಗಳಿಂದ ಹಿಡಿದು ಕೆಲವು ದಿನಗಳವರೆಗೂ ವಿಸ್ತರಿಸಿಕೊಳ್ಳಬಹುದು.

ಚಿತ್ರಕೃಪೆ: Joseph Jayanth

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಪೋರ್ಟ್ ಬ್ಲೇರ್ ಅನ್ನು ಪ್ರವಾಸಿಗರು ಸುಲಭವಾಗಿ ತಲುಪಬಹುದಾಗಿದೆ. ಇಲ್ಲಿನ ವೀರ್ ಸಾವರ್ಕರ್ ವಿಮಾನ ನಿಲ್ದಾಣಕ್ಕೆ ಭಾರತದ ಕೊಲ್ಕತ್ತಾ, ಭುವನೇಶ್ವರ್ ಮತ್ತು ಚೆನ್ನೈನಿಂದ ತಲುಪುವುದು ಒಂದು ಮರೆಯಲಾಗದ ಅನುಭವವೇ ಸರಿ. ಇದರ ಜೊತೆಗೆ ಭಾರತದ ನೌಕಾಯಾನ ನಿಗಮ ಹಲವಾರು ನಗರಗಳಿಂದ ಹಡಗು ಸೌಕರ್ಯಗಳನ್ನೂ ಕಲ್ಪಿಸಿದೆ.

ಚಿತ್ರಕೃಪೆ: Kotoviski

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ವೈಪರ್ ನಡುಗಡ್ಡೆ ಪೋರ್ಟ್ ಬ್ಲೇರ್ ನಲ್ಲಿ ಭೇಟಿ ನೀಡಬಹುದಾದ ಮತ್ತೊಂದು ಆಕರ್ಷಣೆಯಾಗಿದೆ. ವೈಪರ್ ಐಲ್ಯಾಂಡ್ ಎಂತಲೂ ಕರೆಯಲಾಗುವ ಈ ನಡುಗಡ್ಡೆಯು ಪೋರ್ಟ್ ಬ್ಲೇರ್ ನ ವಾಯವ್ಯಕ್ಕೆ ಸುಮಾರು 8 ಕಿ.ಮೀ ದೂರದಲ್ಲಿ ನೆಲೆಸಿದೆ. ಇಲ್ಲಿರುವ ದಾಖಲೆಗಳು ಹೇಳುವ ಪ್ರಕಾರ, ಸ್ವತಂತ್ರಪೂರ್ವ ಭಾರತದಲ್ಲಿ ಬ್ರಿಟೀಷ್ ಆಡಳಿತವನ್ನು ಕೊನೆಗೊಳಿಸಲು ಪಾಲ್ಗೊಂಡಿದ್ದಕ್ಕಾಗಿ ಅಂದಿನ ಭಾರತದ ರಾಜರುಗಳು ಮತ್ತು ಸಾಮಾನ್ಯ ಪ್ರಜೆಗಳನ್ನು ಒಂದೆ ರೀತಿಯಲ್ಲಿ ವಿವಿಧ ಹಿಂಸೆಗಳಿಗೆ ಇಲ್ಲಿನ ಜೈಲಿನಲ್ಲಿ ಒಳಪಡಿಸಲಾಗಿತ್ತು. ಇಂದು ಹಳೆಯ ಮತ್ತು ಅವಶೇಷಾವಸ್ಥೆಯಲ್ಲಿರುವ ಆ ಜೈಲನ್ನು ನೋಡಲು ಹಾಗೂ ಒಂದು ಕ್ಷಣ ಇತಿಹಾಸದ ಆ ದಿನಗಳಲ್ಲಿ ಮರೆತು ಹೋಗಲು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇದರ ಜೊತೆಗೆ ವೈಪರ್ ದ್ವೀಪ ಒಂದು ಉತ್ತಮ ಪಿಕ್ನಿಕ್ ಸ್ಥಳವೂ ಆಗಿದೆ.

ಚಿತ್ರಕೃಪೆ: Sanyam Bahga

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಜಾಲಿ ಬಾಯ್, ಪೋರ್ಟ್ ಬ್ಲೇರ್ ಗೆ ಹತ್ತಿರದಲ್ಲಿರುವ ಒಂದು ಆಕರ್ಷಕ ಪ್ರವಾಸಿ ತಾಣ. ಇದು ವಂದೂರು ರಾಷ್ಟ್ರೀಯ ಸಾಗರ ಉದ್ಯಾನವೆಂದು ಪ್ರಖ್ಯಾತವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಸಾಗರ ಉದ್ಯಾನದ ಒಂದು ಭಾಗವಾಗಿದೆ. ಹಾಗು ಈ ದ್ವೀಪ ಇಲ್ಲಿ ಬರುವ ಪ್ರವಾಸಿಗರಿಗೆ ಹವಳದ ಬಂಡೆಗಳನ್ನು ಹತ್ತಿರದಿಂದ ನೋಡುವ ಮತ್ತು ಅವುಗಳನ್ನು ಅನುಭವಿಸುವ ಅವಕಾಶವನ್ನು ನಿಡುತ್ತದೆ.

ಚಿತ್ರಕೃಪೆ: Ankur P

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಇಲ್ಲಿನ ಶುದ್ಧ ಬಿಳಿ ಮರಳಿನ ಕಡಲ ತಡಿಗಳು ಜನಾಕರ್ಷಣೆಯ ಮತ್ತೊಂದು ಮೂಲವಾಗಿದೆ. ನೀವು ಅದೃಶ್ಟಶಾಲಿಗಳಾಗಿದ್ದರೆ ಒಂದೆರಡು ಡಾಲ್ಫಿನ್ ಗಳನ್ನೂ ಕಾಣಬಹುದು.

ಚಿತ್ರಕೃಪೆ: Ankur P

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಜಾಲಿ ಬಾಯ್ ದ್ವೀಪವನ್ನು ತಲುಪುವುದೇ ಒಂದು ಸುಂದರವಾದ ಅನುಭವ. ಮೊದಲಿಗೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ನಂತರ ಹಡಗಿನ ಟಿಕೆಟ್ಟುಗಳನ್ನು ಪಡೆದುಕೊಳ್ಳಬೇಕು. ಅರಣ್ಯ ಇಲಾಖೆಯಿಂದ ಅನುಮತಿ ಮತ್ತು ಹಡಗಿವ ದರಗಳು ಕ್ರಮವಾಗಿ 50 ಮತ್ತು 500 (ಪ್ರಸ್ತುತ ಬದಲಾವಣೆಗೊಳಪಟ್ಟಿರಬಹುದು) ರೂ ಗಳಾಗಿವೆ ಆದರೆ ಅಲ್ಲಿಗೆ ತಲುಪಿದ ಮೇಲೆ ಇದು ನಗಣ್ಯ ಎಂದು ನಿಮಗೆ ಅನ್ನಿಸದೆ ಇರಲಾರದು.

ಚಿತ್ರಕೃಪೆ: Ankur P

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಜಾಲಿ ಬಾಯ್ ದ್ವೀಪಕ್ಕೆ ತಲುಪುವ ಪ್ರಯಾಣ ಪೋರ್ಟ್ ಬ್ಲೇರ್ ನಿಂದ ಆರಂಭವಾಗುತ್ತದೆ ಹಾಗೂ ದಾರಿಯ ಮಧ್ಯೆ ರುದ್ರ ರಮಣೀಯವಾದ ನಿಸರ್ಗ ಸೌದರ್ಯವನ್ನು ಅನುಭವಿಸುವ ಅವಕಾಶವನ್ನು ನೀವು ಪಡೆದುಕೊಳ್ಳುತ್ತೀರಿ. ನಿಮ್ಮ ಜೊತೆ ಬರುವ ಮಾರ್ಗದರ್ಶಕರು ದಾರಿಯಲ್ಲಿ ಸಿಗುವ ದ್ವೀಪಗಳ ಬಗ್ಗೆ, ಇಲ್ಲಿನ ಸಸ್ಯರಾಶಿಯ ಬಗ್ಗೆ ಮತ್ತು ಜಲಜೀವನದ ಬಗೆಗಿನ ಅಧಿಕೃತ ಮಾಹಿತಿಯನ್ನು ನೀಡುತ್ತಾ ನಿಮ್ಮನ್ನು ಕೊಂಡೊಯ್ಯುತ್ತಾರೆ.

ಚಿತ್ರಕೃಪೆ: Sankara Subramanian

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಜಾಲಿ ಬಾಯ್ ದ್ವೀಪಕ್ಕೆ ಸಮೀಪವಾಗುತ್ತಿದ್ದಂತೆ ದೊಡ್ಡ ಹಡಗು ಅಲ್ಲಿಗೆ ನಿಮ್ಮನ್ನು ತಲುಪಿಸಲಾಗದ ಕಾರಣ ನಿಮ್ಮನ್ನು ಇನ್ನೊಂದು ಸಣ್ಣ ದೋಣಿಯಲ್ಲಿ ಕರೆತರಲಾಗುತ್ತದೆ. ಈ ಸಣ್ಣ ದೋಣಿಯ ಕೆಳಭಾಗವು ಗಾಜಿನಿಂದ ಮಾಡಲಾಗಿದ್ದು ಇದು ನಿಮಗೆ ಅಲ್ಲಿನ ಹವಳದ ದಂಡೆಗಳ ಸೌಂದರ್ಯವನ್ನು ಎಂದು ಮರೆಯದಂತೆ ಕಣ್ಣಲ್ಲಿ ಸೆರೆಹಿಡಿಯಲು ನೆರವಾಗುತ್ತದೆ.

ಚಿತ್ರಕೃಪೆ: Ankur P

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಜಾಲಿ ಬಾಯ್ ದ್ವೀಪದಲ್ಲಿ ನಿರ್ಬಂಧಗಳು ಸ್ವಲ್ಪ ಹೆಚ್ಚು. ನೀವು ಭಾರತ ಸರ್ಕಾರ ಅನುಮತಿ ನೀಡಿದ ಮತ್ತು ಪೋರ್ಟ್ ಬ್ಲೇರ್ ನಲ್ಲಿ ವಿತರಿಸುವ ಆಹಾರವನ್ನು ಮಾತ್ರ ತೆಗೆದುಕೊಂಡು ಹೋಗಬೇಕು. ಆದರೆ ನೀವು ಜಾಲಿ ಬಾಯ್ ತಲುಪಿದ ಬಳಿಕ ಇದರ ಹಿಂದಿರುವ ಉದ್ದೇಶ ನಿಮಗೆ ಅರ್ಥವಾಗದೇ ಉಳಿಯದು. ಇಲ್ಲಿನ ಸ್ವಚ್ಛ ಕಡಲ ಕಿನಾರೆಗಳು, ಹಾಗೂ ಆಧುನಿಕತೆಗೆ ಒಳಗಾಗದೆ ಶುದ್ಧವಾಗಿರುವ ಪರಿಸರ ಎಲ್ಲಿಯೂ ಕಾಣಲು ಸಿಗದು. ಜಾಲಿ ಬಾಯ್ ದ್ವೀಪದಲ್ಲಿ ಸೂರ್ಯ ಮತ್ತು ಬಿಳಿ ಮರಳಿನ ಮೇಲೆ ನೀವು ಕಳೆಯುವ ಮಧಾಹ್ನದ ಅವಧಿ ನಿಮ್ಮ ಮಧುಚಂದ್ರದ ಅತ್ಯಂತ ಸುಮಧುರ ಮಧ್ಯಾಹ್ನದ ಸಮಯವಾಗಲಿದೆ.

ಚಿತ್ರಕೃಪೆ: Ankur P

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಪೋರ್ಟ್ ಬ್ಲೇರ್ ನ ಈಶಾನ್ಯಕ್ಕೆ ಸುಮಾರು 84 ಮೈಲು ದೂರದಲ್ಲಿರುವ ಬ್ಯಾರನ್ ಒಂದು ಸಣ್ಣ ದ್ವೀಪವಾಗಿದೆ. ಇದು ದಕ್ಷಿಣ ಏಷ್ಯಾ ಮತ್ತು ಭಾರತದಲ್ಲಿ ಇರುವ ಏಕಮಾತ್ರ ಜ್ವಲಂತ ಜ್ವಾಲಾಮುಖಿಯ ಸ್ಥಳವಾಗಿದೆ. ಹೊರಜಗತ್ತನ್ನು ಅನ್ವೇಷಿಸುವ ಮಾನವರ ಕುತೂಹಲದ ಗುಣದಿಂದಾಗಿ ಇದು ಇಂದು ಒಂದು ಪ್ರವಾಸಿ ತಾಣವಾಗಿದೆ. ಹೆಸರೆ ಹೇಳುವಂತೆ ಬ್ಯಾರನ್ ದ್ವೀಪ ಬಂಜರು ಭೂಮಿಯಾಗಿದೆ. ಇಲ್ಲಿ ಜನವಸತಿ ಇಲ್ಲ ಹಾಗೂ ಕೇವಲ ಕೆಲವೆ ಕೆಲವು ಪ್ರಾಣಿಗಳು ಇಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: NASA

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ದ್ವೀಪದಲ್ಲಿರುವ ಬಾರಾಟಾಂಗ್ ನಡುಗಡ್ಡೆಯು ಭಾರತದಲ್ಲಿ ಗುರುತಿಸಲ್ಪಟ್ಟ ಕೆಲವೆ ಕೆಲವು ಮಣ್ಣಿನ ಜ್ವಾಲಾಮುಖಿಗಳಿಗೆ ಉದಾಹರಣೆಯಾದ ಪ್ರವಾಸಿ ಕೇಂದ್ರವಾಗಿದೆ.

ಚಿತ್ರಕೃಪೆ: Biswarup Ganguly

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಸಮೂಹದಲ್ಲಿ ಇದೊಂದು ಪ್ರಮುಖ ನಡುಗಡ್ಡೆಯಾಗಿದ್ದು ಬಂಗಾಳ ಕೊಲ್ಲಿ ಹಾಗೂ ಅಂಡಮಾನ್ ಸಮುದ್ರದ ಬಳಿ ನೆಲೆಸಿದೆ. ಪೋರ್ಟ್ ಬ್ಲೇರ್ ನ ದಕ್ಷಿಣಕ್ಕೆ ಸುಮಾರು ನೂರು ಕಿ.ಮೀ ಗಳಷ್ಟು ಅಂತರದಲ್ಲಿ ಈ ನಡುಗಡ್ಡೆಯಿದೆ.

ಚಿತ್ರಕೃಪೆ: Biswarup Ganguly

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಇಲ್ಲಿ ಪೋರ್ಟ್ ಬ್ಲೇರ್ ಹಾಗೂ ಮಧ್ಯ ಅಂಡಮಾನನ್ನು ಬೆಸೆಯುವ ಒಂದು ನದಿ ಹರಿದಿದ್ದು ಇದನ್ನು ದಾಟಿ ಹೋಗಲು ಕನಿಷ್ಠ ಹತ್ತು ನಿಮಿಷ ಬೇಕಾಗಬಹುದು.

ಚಿತ್ರಕೃಪೆ: Biswarup Ganguly

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಪೋರ್ಟ್ ಬ್ಲೇರ್ ನಿಂದ ಕೇವಲ 2 ಕಿ.ಮೀ ಪೂರ್ವಕ್ಕೆ ನೀವು ಇಲ್ಲಿಯವರೆಗೆ ನೋಡಿದ ಎಲ್ಲಾ ಅವಶೇಷಗಳಿಗಿಂತಲೂ ಸುಂದರವಾದ ಅವಶೇಷಗಳಿವೆ. ಬೇರೆ ಬೇರೆ ಕಾಲಾವಧಿಯ ಸುಂದರವಾದ ಅವಶೇಷಗಳನ್ನು ಹೊಂದಿರುವ ರಾಸ್ ದ್ವೀಪ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಬ್ರಿಟೀಷರ ಅವಧಿಯಿಂದಲೂ ಇಲ್ಲಿ ಕಟ್ಟಲಾದ ಬೇರೆ ಬೇರೆ ತರಹದ ಕಟ್ಟಡಗಳು ನೋಡಲರ್ಹವಾಗಿವೆ.

ಚಿತ್ರಕೃಪೆ: Shimjithsr

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಪೋರ್ಟ್ ಬ್ಲೇರ್ ನಿಂದ ಫೋನಿಕ್ಸ್ ಜೆಟ್ಟಿಗೆ ಇರುವ ದೋಣಿ ಸಂಪರ್ಕದ ಮೂಲಕ ನೀವು ಇಲ್ಲಿಗೆ ತಲುಪಬಹುದು. ಈ ದ್ವೀಪವನ್ನು ಭಾರತ ನೌಕಾಪಡೆ ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿದೆ. ಇಲ್ಲಿ ಒಳಬರುವ ಮತ್ತು ಹೊರಹೋಗುವ ಎಲ್ಲಾ ಪ್ರವಾಸಿಗರು ಭದ್ರತೆಯ ದೃಷ್ಟಿಯಿಂದ ಸಹಿ ಮಾಡಿ ಹೋಗಬೇಕಾಗುತ್ತದೆ.

ಚಿತ್ರಕೃಪೆ: Kotoviski

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಇಲ್ಲಿಂದ, ಈ ಭವ್ಯ ದ್ವೀಪ ಸಮೂಹಗಳಲ್ಲಿ ಕಂಡುಬರುವ ಜಲ ಜೀವ ರಾಶಿಗಳು ಯಾವುವು ಹಾಗೂ ಕಡಲ ತೀರಗಳ ಸುಂದರ ಪ್ರಕೃತಿ ಸೊಬಗಿನ ಕುರಿತು ತಿಳಿಯಿರಿ. ಹ್ಯಾವ್ಲಾಕ್ ದ್ವೀಪದ ಒಂದು ಸುಂದರ ಕಡಲ ತೀರ.

ಚಿತ್ರಕೃಪೆ: Ana Raquel S. Hernandes

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಹವಳದ ದಿಬ್ಬಗಳ ಮಧ್ಯದಲ್ಲಿ ವಿಶಿಷ್ಟ ರೀತಿಯ ಮೀನು.

ಚಿತ್ರಕೃಪೆ: Louise Ireland

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನಿನ ಸಮುದ್ರದಾಳದಲ್ಲಿ ಕಂಡುಬರುವ ವಿಶಿಷ್ಟ ಕ್ಲೋನ್ ಮೀನುಗಳು.

ಚಿತ್ರಕೃಪೆ: ichat

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಹ್ಯಾವ್ಲಾಕ್ ಕಡಲದಾಳದಲ್ಲಿ ಕಂಡುಬರುವ ಬಟರ್ ಫ್ಲೈ ಎಂಬ ಹೆಸರಿನ ಸುಂದರವಾದ ಮೀನುಗಳು.

ಚಿತ್ರಕೃಪೆ: Arun Katiyar

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಪೈನಾಪಲ್ ಸೀ ಕುಕುಂಬರ್ ಎಂಬ ಹೆಸರಿನ ಒಂದು ವಿಶಿಷ್ಟಮಯವಾದ ಜಲಚರ.

ಚಿತ್ರಕೃಪೆ: Arun Katiyar

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಫೆದರ್ ಸ್ಟಾರ್ ಎಂಬ ನಕ್ಷತ್ರ ಮೀನು.

ಚಿತ್ರಕೃಪೆ: Arun Katiyar

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಅಂಡಮಾನ್ ಮತ್ತು ನಿಕೋಬಾರ್ ಅಚ್ಚರಿಗಳು:

ಕಡಿಮೆ ಆಳವಿರುವ ಸ್ಥಳದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ಪ್ಯಾರಟ್ ಮೀನುಗಳು.

ಚಿತ್ರಕೃಪೆ: Arun Katiyar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X