Search
  • Follow NativePlanet
Share
» »ಶರಾವತಿಯೊಡನೆ ಜೊತೆಯಾಗಿ ಪಯಣಿಸಿದಾಗ

ಶರಾವತಿಯೊಡನೆ ಜೊತೆಯಾಗಿ ಪಯಣಿಸಿದಾಗ

By Vijay

ಕರ್ನಾಟಕದಲ್ಲಿ ಹುಟ್ಟಿ ಇಲ್ಲಿಯೆ ಹರಿದು ಕೊನೆಯದಾಗಿ ತನ್ನ ಅಂತಿಮ ಸ್ಥಳವಾದ ಅರಬ್ಬಿ ಸಮುದ್ರದಲ್ಲಿ ಸಂಗಮ ಹೊಂದುವ ಸುಂದರ ನದಿ ಶರಾವತಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆನ್ನುವಂತೆ ಈ ಸುಂದರ ನದಿಯು ಕೇವಲ 120 ಕಿ.ಮೀ ಉದ್ದದ ಹರಿಯುವ ಪಥವನ್ನು ಹೊಂದಿದ್ದರೂ, ವಿಶ್ವವೆ ನಿಬ್ಬೆರಗಾಗಿ ನೋಡುವಂತೆ ಮಾಡುವ ಜೋಗ ಜಲಪಾತದ ನಿರ್ಮಾತೃ.

ನಿಮಗಿಷ್ಟವಾಗಬಹುದಾದ : ಕರ್ನಾಟಕದ ಈ ಜಲಪಾತಗಳು ನಿಮಗೆ ಗೊತ್ತೆ?

ಅಲ್ಲದೆ, ಈ ಸುಂದರ ನದಿಗೆ ಹೊನ್ನಾವರದ ಬಳಿ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ಕರ್ನಾಟಕದ ಅತ್ಯಂತ ಉದ್ದದ ಸೇತುವೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಶರಾವತಿ ನದಿಯು ಹರಿಯುವ ಮಾರ್ಗವನ್ನು ಶರಾವತಿ ಕಣಿವೆ ಪ್ರದೇಶ ಎಂದು ಕರೆಯಲಾಗುತ್ತದೆ ಹಾಗೂ ಶರಾವತಿ ಕಣಿವೆಯು ಅದ್ಭುತವಾದ ಮನಸೆಳೆವಂತಹ ಸೃಷ್ಟಿ ಸೌಂದರ್ಯದಿಂದ ಕೂಡಿದ್ದು ಭೇಟಿ ನೀಡುಗರಿಗೆ ರೋಮಾಂಚನ ಉಂಟು ಮಾಡುವುದರಲ್ಲಿ ಸಂದೇಶವಿಲ್ಲ.

ಶರಾವತಿ ನದಿಯ ಕುರಿತು ಹಾಗೂ ಅದರ ಜೊತೆ ಸಾಗುವಾಗ ಕಂಡುಬರುವ ಅಭೂತಪೂರ್ವ ಪ್ರಕೃತಿ ಸೌಂದರ್ಯದ ದೃಶ್ಯಗಳು ಹಾಗೂ ಅದರ ತಟದಲ್ಲಿ ನೆಲೆಸಿರುವ ಸುಂದರ ಪ್ರೇಕ್ಷಣೀಯ ಸ್ಥಳಗಳ ಕುರಿತು ಈ ಲೇಖನದ ಮೂಲಕ ತಿಳಿಯಿರಿ. ಮಳೆಗಾಲದ ಸಂದರ್ಭದಲ್ಲಿ ಶರಾವತಿಯು ಮೈದುಂಬಿ ಹರಿಯುವುದನ್ನು ನೋಡುವುದೆ ಕಣ್ಣಿಗೆ ಒಂದು ಹಬ್ಬವಿದ್ದಂತೆ.

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಕರ್ನಾಟಕದಲ್ಲೆ ಹುಟ್ಟಿ ಸಂಪೂರ್ಣವಾಗಿ ಕರ್ನಾಟಕದಲ್ಲೆ ಹರಿದು ಕೊನೆಯದಾಗಿ ಸಮುದ್ರ ಸೇರುವ ನದಿ ಇದಾಗಿದೆ.

ಚಿತ್ರಕೃಪೆ: Prakashmatada

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಭಾರತದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ಸಂಖ್ಯೆ ವಿರಳವಾಗಿದ್ದು ಅವುಗಳಲ್ಲೊಂದಾಗಿದೆ ಶರಾವತಿ ನದಿ.

ಚಿತ್ರಕೃಪೆ: Ashwin Kumar

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಶರಾವತಿ ನದಿಯ ಮತ್ತೊಂದು ವಿಶೇಷವೆಂದರೆ ಈ ನದಿ ಹಾಗೂ ಇದು ಹರಿದಿರುವ ಸುತ್ತಮುತ್ತಲಿನ ಪ್ರದೇಶಗಳು ಜೀವ ವೈವಿಧ್ಯತೆಯಿಂದ ಕೂಡಿರುವುದು. ಅಂದರೆ ಇಲ್ಲಿ ಅಪರೂಪದ ಸಸ್ಯಗಳಾಗಲಿ, ಕೀಟಗಳನ್ನಾಗಲಿ ಕಾಣಬಹುದು. ಅಲ್ಲದೆ ಸಾಕಷ್ಟು ಬಗೆಯ ಪ್ರಾಣಿ ಸಂಕುಲದಿಂದಲೂ ಶ ಇದು ಶ್ರೀಮಂತವಾಗಿದೆ.

ಚಿತ್ರಕೃಪೆ: Ashwin Kumar

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥ ಎಂಬಲ್ಲಿ ಶರಾವತಿ ನದಿಯು ಉಗಮಗೊಳ್ಳುತ್ತದೆ. ಇದೊಂದು ದಟ್ಟ ಹಸಿರಿನ ಮಧ್ಯವಿರುವ ಬೆಟ್ಟವಾಗಿದ್ದು ತೀರ್ಥಹಳ್ಳಿಯಿಂದ ಸುಮಾರು ಹದಿನೈದು ಕಿ.ಮೀ ದೂರವಿದೆ.

ಚಿತ್ರಕೃಪೆ: Vinay~knwiki

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ದಂತಕಥೆಯ ಪ್ರಕಾರ, ತ್ರೇತಾಯುಗದಲ್ಲಿ ರಾಮನು ಈ ಪ್ರದೇಶದಲ್ಲಿ ಸಾಗುತ್ತಿರುವಾಗ ಸೀತೆಗೆ ಬಾಯಾರಿಕೆಯಾಯಿತು. ಅವಳ ಬಾಯಾರಿಕೆಯನ್ನು ತಣಿಸುವ ಉದ್ದೆಶದಿಂದ ರಾಮನು ತನ್ನ ಅಂಬುವಿನಿಂದ (ಅಂಬು ಎಂದರೆ ಬಿಲ್ಲು-ಬಾಣ ಎಂಬರ್ಥವೂ ಇದೆ) ಈ ಪ್ರದೇಶದಲ್ಲಿ ನೀರು ಉಕ್ಕಿಹರಿಯುವಂತೆ ಮಾಡಿದ. ಹಾಗಾಗಿ ಇದಕ್ಕೆ ಅಂಬುತೀರ್ಥ ಎಂಬ ಹೆಸರು ಬಂದಿತೆನ್ನಲಾಗಿದೆ.

ಚಿತ್ರಕೃಪೆ: Vpsmiles

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಇನ್ನೂ, ಶರ ಅಂದರೆ ಬಾಣದಿಂದ ಭೂ ಒಡಲು ಛೇದಿಸಿ ಬಂದ ಆ ನೀರಿಗೆ ಶರ+ಆವತಿ ಯಿಂದಾಗಿ ಶರಾವತಿ ಎಂಬ ಹೆಸರು ಬಂದಿತೆನ್ನಲಾಗಿದೆ.

ಚಿತ್ರಕೃಪೆ: Soumya Kodliwad

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಇಂದಿಗೂ ಅಂಬುತೀರ್ಥದ ಬೆಟ್ಟದ ಮೇಲೆ ರಾಮನಿಗೆ ಮುಡಿಪಾದ ಚಿಕ್ಕ ದೇವಾಲಯವೊಂದನ್ನು ಕಾಣಬಹುದು. ದೇವಾಲಯದ ಪಕ್ಕದಲ್ಲೆ ಎಂದಿಗೂ ಬತ್ತದ ಕೊಳವಿದ್ದು ಅದರ ತಳದಲ್ಲೆ ಶರಾವತಿ ನದಿಯ ಮೂಲವಿದೆ.

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ನಂತರ ಶರಾವತಿಯು ಮುಂದೆ ಪಶ್ಚಿಮಾಭಿಮುಖವಾಗಿ ಅರಬ್ಬಿ ಸಮುದ್ರದತ್ತ ತನ್ನ ಪ್ರಯಾಣ ಬೆಳೆಸುತ್ತಾಳೆ. ಈ ಸಂದರ್ಭದಲ್ಲಿ ಶರಾವತಿಯು ಅದ್ಭುತ ಪ್ರಾಕೃತಿಕ ತಾಣವಾದ ಶರಾವತಿ ವನ್ಯಜೀವಿಧಾಮ, ಹೊನ್ನೆಮರುಡು, ಲಿಂಗನಮಕ್ಕಿ, ಗೇರುಸೊಪ್ಪ, ರಾಮಚಂದ್ರಪುರ, ಇಡಗುಂಜಿ ಹಾಗೂ ಹೊನಾವರದ ಮುಲಕ ಸಾಗುತ್ತ ಸಮುದ್ರ ಸೇರುತ್ತಾಳೆ.

ಚಿತ್ರಕೃಪೆ: Arun Prabhu

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಶರಾವತಿ ನದಿ ಹರಿಯುವ ಪಥದ ಎರಡೂ ಬದಿಗಳಲ್ಲಿರುವ ಸ್ಥಳಗಳು ಶ್ರೀಮಂತ ಪ್ರಕೃತಿ ಸೌಂದರ್ಯ ಹಾಗೂ ವೈವಿಧ್ಯಮಯ ಜೀವಸಂಕುಲಗಳಿಂದ ಸಂಪದ್ಭರಿತವಾಗಿದ್ದು ಪ್ರಕೃತಿಪ್ರಿಯ ಪ್ರವಾಸಿಗರಿಗೆ ಸ್ವರ್ಗದಂತಿದೆ.

ಚಿತ್ರಕೃಪೆ: Sankara Subramanian

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಈ ನದಿಯ ಜಲಾನಯನ ಪ್ರದೇಶದ ಒಂದು ಭಾಗವನ್ನು ಶರಾವತಿ ವನ್ಯಜೀವಿಧಾಮ ಎಂದು ಘೋಷಿಸಲಾಗಿದ್ದು, ಇದು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವುದು ಮತ್ತಷ್ಟು ವಿಶೇಷವಾಗಿದೆ. ಈ ವನ್ಯಜೀವಿಧಾಮವು ಪ್ರಕೃತಿಪ್ರಿಯ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಅಷ್ಟೊಂದು ವೈವಿಧ್ಯಮಯವಾಗಿದೆ ಇಲ್ಲಿ ಸಸ್ಯ ಹಾಗೂ ಪ್ರಾಣಿಸಂಕುಲ. ಸಿಂಹ ಬಾಲದ ಕೋತಿ. ಇದು ಇಲ್ಲಿ ಕಮ್ಡು ಬರುವ ಅಳಿವಿನಂಚಿನಲ್ಲಿರುವ ಜೀವಿಯಾಗಿದೆ.

ಚಿತ್ರಕೃಪೆ: N. A. Naseer

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಶರಾವತಿ ವನ್ಯಜೀವಿಧಾಮದಲ್ಲಿ ಮೊದಲ ಬಾರಿಗೆ ಶೋಧಿಸಲಾದ ಒಂದು ಬಗೆಯ ವಿಶಿಷ್ಟವಾದ ಕ್ಯಾಟ್ ಫಿಶ್.

ಚಿತ್ರಕೃಪೆ: W.A. Djatmiko

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಮುಂದೆ ಈ ನದಿಗೆ ಅಡ್ಡಲಾಗಿ ಸಾಗರ ತಾಲೂಕಿನಲ್ಲಿ ಲಿಂಗನಮಕ್ಕಿ ಜಲಾಶಯವನ್ನು ನಿರ್ಮಿಸಲಾಗಿದೆ. ಲಿಂಗಮಕ್ಕಿ ಜಲಾಶಯವನ್ನು ಶರಾವತಿ ನದಿಗೆ ಅಡ್ಡಲಾಗಿ, 1964ರಲ್ಲಿ ನಿರ್ಮಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಈ ಅಣೆಕಟ್ಟು 2.4 ಕಿ.ಮೀ ಗಳಷ್ಟು ಉದ್ದವಿದ್ದು, 1819 ಅಡಿಗಳಷ್ಟು ಎತ್ತರವಿದೆ. 4368 ಘನ ಮೀ ಗಳಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯವನ್ನು ಈ ಜಲಾಶಯ ಹೊಂದಿದೆ.

ಚಿತ್ರಕೃಪೆ: ಜಿ.ಎಸ್. ಜಯಕೃಷ್ಣ ತಲವಾಟ

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಪ್ರಖ್ಯಾತ ಜೋಗ ಜಲಪಾತವೂ ಸಹ ಸಾಗರದಲ್ಲೆ ಶರಾವತಿ ನದಿಯಿಂದ ರೂಪಗೊಂಡಿದ್ದು ನೋಡಲು ನಯನ ಮನೋಹರವಾಗಿದೆ. ಭಾರತದಲ್ಲೆ ಕಂಡುಬರುವ ಅತಿ ಎತ್ತರದಿಂದ ಧುಮುಕುವ ಅದ್ಭುತ ಜಲಪಾತಗಳ ಪೈಕಿ ಒಂದಾಗಿದೆ ಈ ಸುಂದರ ಜೋಗ ಜಲಪಾತ.

ಚಿತ್ರಕೃಪೆ: Krishna Kumar

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಮಳೆಗಾಲದ ಸಂದರ್ಭದಲ್ಲಿ ಅಂದರೆ ಜುಲೈ ನಿಂದ ಸೆಪ್ಟಂಬರ್ ಸಮಯದಲ್ಲಿ ಈ ಜೋಗದ ಗುಂಡಿಯು ತನ್ನೆಲ್ಲ ಶಕ್ತಿಯನ್ನು ಕ್ರೋಢಿಕರಿಸಿಕೊಂಡು ಧರೆಗಪ್ಪಳಿಸುವುದನ್ನು ನೋಡಿದಾಗ ಒಂದು ಕ್ಷಣ ಯಾರಿಗಾದರೂ ಸರಿ, ಬಾಯಿಂದ ಮಾತುಗಳೆ ಹೊರಬರುವುದಿಲ್ಲ. ಅಷ್ಟೊಂದು ಅದ್ಭುತವಾಗಿ ಗೋಚರಿಸುತ್ತದೆ ಈ ಜಲಪಾತ.

ಚಿತ್ರಕೃಪೆ: Sarvagnya

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಜೋಗದಗುಂಡಿಗೆ ಅಳವಡಿಸಲಾದ ಜಲೋತ್ಪನ್ನ ವಿದ್ಯುತ್ ಘಟಕದ ವಿಹಂಗಮ ಚಿತ್ರ.

ಚಿತ್ರಕೃಪೆ: Thangaraj Kumaravel

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಹೊನ್ನೆಮರುಡು ಶರಾವತಿ ತಟದಲ್ಲಿ ನೆಲೆಸಿರುವ ಶಿವಮೊಗ್ಗ ಜಿಲ್ಲೆಯ ಒಂದು ಪ್ರವಾಸಿ ತಾಣ. ಯಾರು ಸಾಹಸವನ್ನು ಇಷ್ಟ ಪಡುತ್ತಾರೋ, ಜಲ ಕ್ರೀಡೆಗಳನ್ನು ಇಷ್ಟ ಪಡುತ್ತಾರೋ ಅಂತಹವರಿಗೆ ಹೊನ್ನೇಮರಡು ಅತ್ಯಂತ ಪ್ರಿಯ ಎನಿಸುವುದರಲ್ಲಿ ಸಂಶಯವಿಲ್ಲ.

ಚಿತ್ರಕೃಪೆ: akalle

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಹೊನ್ನೇಮರಡು ಹಳ್ಳಿಯು, ಹೊನ್ನೆಮರಡು ಎಂಬ ಅದೇ ಹೆಸರಿನ ಜಲಾಶಯದ ಬಳಿಯಿರುವ ಬೆಟ್ಟದ ಇಳಿಜಾರಿನಲ್ಲಿ ಸ್ಥಿತವಿದೆ. ಈ ತಾಣವು ಶಿವಮೂಗ್ಗ ಜಿಲ್ಲೆಯಲ್ಲಿಯ ಸಾಗರ ತಾಲೂಕಿನಲ್ಲಿದ್ದು, ಬೆಂಗಳೂರಿನಿಂದ 392 ಕೀ. ಮಿ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Dheepak Ra

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಹೊನ್ನೆಮರಡು ತನ್ನ ಹೆಸರನ್ನು 'ಹೊನ್ನೆ' ಮರದಿಂದ ಪಡೆದಿದೆಯಾದರೂ ಇದರ ಅಕ್ಷರಶಃ ಅರ್ಥ "ಬಂಗಾರದ ಸರೋವರ" ಎಂದಾಗುತ್ತದೆ. ಇಲ್ಲಿ ಕಂಡುಬರುವ ಬಂಗಾರದಂತಹ ಸೂರ್ಯೋದಯದ ನೋಟವೂ ಸಹ ಇದಕ್ಕೆ ಪೂರಕವಾಗಿದೆ ಎಂಬ ಅಂಶವು ಮನದಲ್ಲಿ ಮೂಡಿದರೂ ತಪ್ಪಿಲ್ಲ. ಹೊನ್ನೇಮರಡು ಗ್ರಾಮವು ಶರಾವತಿಯ ಹಿನ್ನೀರಿನಲ್ಲಿ ಸ್ಥಿತವಿರುವ ಅದ್ಭುತ ಪ್ರದೇಶವಾಗಿದೆ.

ಚಿತ್ರಕೃಪೆ: Srinath.holla

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿರುವ ಶರಾವತಿ ನದಿ ತಟದ ರಾಮಚಂದ್ರಾಪುರ ಮಠವು ಧಾರ್ಮಿಕ ಮಹತ್ವದ ತಾಣವಾಗಿದ್ದು ಸಾಕಷ್ಟು ಭಕ್ತಾದಿಗಳನ್ನು ಸೆಳೆಯುತ್ತದೆ.

ಚಿತ್ರಕೃಪೆ: Vinay~knwiki

ನಯನ ಮನೋಹರ ಶರಾವತಿ:

ನಯನ ಮನೋಹರ ಶರಾವತಿ:

ಕೊನೆಯದಾಗಿ ಹೊನ್ನಾವರದಲ್ಲಿ ಈ ನದಿಯು ಅರಬ್ಬಿ ಸಮುದ್ರದಲ್ಲಿ ಸೇರ್ಪಡೆಗೊಳ್ಳುತ್ತದೆ. ಇನ್ನೊಂದು ವಿಶೇಷವೆಂದರೆ ಸುಮಾರು ಎರಡು ಕಿ.ಮೀ ಗಿಂತಲೂ ಅಧಿಕ ಉದ್ದವಿರುವ ಸೇತುವೆಯಿರುವುದು ಹೊನ್ನಾವರದಲ್ಲೆ. ಈ ಸೇತುವೆಯನ್ನು ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು ನೋಡಲು ನಯನಮನೋಹರವಾಗಿ ಕಂಡುಬರುತ್ತದೆ. ಅದರಲ್ಲೂ ವಿಶೇಷವಾಗಿ ಕರಿಕಣ್ಣಮ್ಮ ದೇವಿ ನೆಲೆಸಿರುವ ಗುಡ್ಡದ ಮೇಲಿಂದ ಈ ಸೇತುವೆಯ ನೋಟ ವರ್ಣನಾತೀತ. ಚಿತ್ರವನ್ನು ಗಮನವಿಟ್ಟು ನೋಡಿ, ದೂರದಲ್ಲಿರುವ ಸೇತುವೆಯ ದೃಶ್ಯ.

ಚಿತ್ರಕೃಪೆ: Ravi Aparanji

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X