Search
  • Follow NativePlanet
Share
» »ಭಾರತದ ತನ್ನದೇ ಆದ ಯಾವುದೇ ಉಪಯೋಗವಿಲ್ಲದ ಬರ್ಮುಡಾ ಟೈಯಾಂಗಲ್ ನ ಒಂದು ಅನ್ವೇಷಣೆ

ಭಾರತದ ತನ್ನದೇ ಆದ ಯಾವುದೇ ಉಪಯೋಗವಿಲ್ಲದ ಬರ್ಮುಡಾ ಟೈಯಾಂಗಲ್ ನ ಒಂದು ಅನ್ವೇಷಣೆ

ಅರುಣಾಚಲ ಪ್ರದೇಶವು ಭಾರತದ ಒಂದು ಸುಂದರವಾದ ರಾಜ್ಯವಾಗಿದ್ದು ಇದು ಹೇರಳವಾದ ಪ್ರಕೃತಿ ಸೌಂದರ್ಯದಿಂದ ಹರಸಲ್ಪಟ್ಟಿದೆ. ಭಾರತದ ಈ ಸುಂದರವಾದ ರಾಜ್ಯದಲ್ಲಿ ನಿಗೂಢವಾದ ಹಾಗೂ ಯಾವುದೇ ಉಪಯೋಗವಿಲ್ಲದ ಒಂದು ಸರೋವರದ ಬಗ್ಗೆ ನಿಮಗೆ ತಿಳಿದಿದೆಯೇ? ಹಾಗಿದ್

By Manjula Balaraj Tantry

ಅರುಣಾಚಲ ಪ್ರದೇಶವು ಅಲ್ಲಿಯ ಅವರ್ಣನೀಯ ಹಾಗೂ ದೈವದತ್ತವಾದ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ ಭಾರತದ ಈ ರಾಜ್ಯವು ಕೆಲವು ನಿಗೂಡ ವಾದ ಸರೋವರಗಳನ್ನು ಹೊಂದಿವೆ. ಅದರಲ್ಲಿ ಹೆಚ್ಚು ನಿಗೂಢವಾಗಿರುವುದು ಯಾವುದೇ ಉಪಯೋಗಕಾರಿ ಅಲ್ಲದ ಸರೋವರ. ಅನೇಕ ಪುರಾಣಗಳು ಈ ಸರೋವರದೊಂದಿಗೆ ಹೆಣೆದುಕೊಂಡಿದೆ, ಇದನ್ನು ಭಾರತದ ಬರ್ಮುಡಾ ಟ್ರಿಯಾಂಗಲ್ ಎಂದೂ ಕರೆಯಲಾಗುತ್ತದೆ. ಇದರ ಹಿಂದೆ ಇರುವ ನಿಗೂಢ ಕಥೆಗಳನ್ನು ತಿಳಿಯಿರಿ.

ನಿಗೂಢತೆಯ ಬಗ್ಗೆ ತಿಳಿಯುವ ಒಲವು ಮನುಕುಲದ ಒಂದು ಸಹಜವಾದ ಗುಣವಾಗಿದೆ. ಯಾವುದಾದರೂ ನಿಗೂಢವಾದದ್ದು, ಇದು ನಮ್ಮ ಸಾಮಾನ್ಯ ಜೀವನದಲ್ಲಿ ನಡೆಯುವುದಾಗಲಿ, ದೂರದ ಪ್ರದೇಶದ್ದೇ ಆಗಲಿ ಅಥವಾ ಯಾವುದಾದರೊಂದು ಕಥೆಯಾಗಲಿ, ಅದರ ಬಗ್ಗೆ ಕುತೂಹಲ ಹುಟುವುದು ಸುಳ್ಳಲ್ಲ. ನಿಮಗೆ ನಿಗೂಢಗಳ ಬಗ್ಗೆ ತಿಳಿಯುವ ಕುತೂಹಲ ಇದ್ದಲ್ಲಿ ಯಾವುದೇ ಉಪಯೋಗವಿಲ್ಲದ ಸರೋವರವು ನಿಮಗೆ ಖಂಡಿತವಾಗಿಯು ನಿಮಗೆ ತಿಳಿಯುವ ಕುತೂಹಲ ಹೆಚ್ಚಿಸುತ್ತದೆ.

ಅರುಣಾಚಲಪ್ರದೇಶದ ಮತ್ತು ಚಂಗ್ಲಾಂಗ್ ಜಿಲ್ಲೆಯ ಗಡಿಭಾಗದಲ್ಲಿ, ಉಪಯೋಗಕ್ಕೆ ಬಾರದ ಸರೋವರವು ಪಾನ್ಸಾವ್ ಪ್ರದೇಶದ ಭಾಗಶಃ ಭಾಗದಲ್ಲಿ ಬರುತ್ತದೆ, ಇದು ಮ್ಯಾನ್ಮಾರ್ ಗಡಿಯಲ್ಲಿರುವ ಸಣ್ಣ ಪಟ್ಟಣವಾಗಿದೆ.ಪ್ಯಾನ್ಸಾ ಪಾಸ್ ನಿಂದ ನೀವು ಈ ಸರೋವರವನ್ನು ನೋಡಬಹುದು ಮತ್ತು ಇದು ನಾಂಪಾಂಗ್ ಹಳ್ಳಿಯಿಂದ 12 ಕಿ.ಮೀ ದೂರದಲ್ಲಿದೆ. ಇದನ್ನು ಭಾರತದ ಬರ್ಮುಡಾ ಟ್ರೈಯಾಂಗಲ್ ಎಂದು ಯಾಕೆ ಕರೆಯುತ್ತಾರೆ ಎಂದು ನೋಡೋಣ...

ಸರೋವರದ ಹೆಸರಿನ ಮೂಲ

Arunachal Pradesh

PC: Sanatdutta

ಈ ಹೆಸರು ಬರಲು ಒಂದು ಮುಖ್ಯವಾದ ಹಾಗೂ ಒಪ್ಪಿಕೊಳ್ಳಬಹುದಾದ ಅಂಶವೇನೆಂದರೆ, ಎರಡನೇ ಮಹಾಯುದ್ದದ ಸಮಯದಲ್ಲಿ ಈ ಸರೋವರಕ್ಕೆ ಕೆಲವು ಜಂಟಿ ವಿಮಾನಗಳು ಅಪಘಾತಕ್ಕೊಳಗಾಗಿ ಬಿದ್ದು ಹಲವು ಜೀವಗಳ ನಾಶಕ್ಕೆ ಕಾರಣವಾಗಿತ್ತುಈ ವಿಷಯವನ್ನು ಭಾರತೀಯ ಪ್ರೆಸ್ಸಿನಲ್ಲಿ ಮತ್ತು ಅನೇಕ ಅಮೆರಿಕನ್ ಮೂಲಗಳಲ್ಲಿ ಪುನರಾವರ್ತಿಸಲಾಗಿದೆ.

ಈ ಹೆಸರು ಅದರ ಮೂಲದ ಮೂರು ಆವೃತ್ತಿಗಳನ್ನು ಹೊಂದಿದೆ. ಒಂದು ಸಿದ್ದಾಂತದ ಪ್ರಕಾರ ಕೆಲವು ಜಪಾನಿನ ಸೈನಿಕರು ಹಿಂತಿರುಗುವಾಗ ಈ ಸರೋವರದಲ್ಲಿ ಸಿಕ್ಕಿಹಾಕಿಕೊಂಡು ತಮ್ಮ ದಾರಿಯನ್ನು ಕಾಣದಾದರು ಮತ್ತು ಅವರು ಮಲೇರಿಯಾಗೆ ತುತ್ತಾಗಿ ಹೆಚ್ಚು ಕಮ್ಮಿ ತಮ್ಮ ಪ್ರಾಣವನ್ನೇ ಕಳೆದುಕೊಂಡರು ಎಂದು ಹೇಳಲಾಗುತ್ತದೆ.

ಇನ್ನೊಂದು ಆವೃತ್ತಿಯ ಪ್ರಕಾರ ಸರೋವರವನ್ನು ಪರಿಶೀಲಿಸಲು ಯುಎಎಸ್ ಆರ್ಮಿ ಸೈನಿಕರ ಗುಂಪನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು ಎಂದು ಹೇಳಲಾಗುತ್ತದೆ. ಲೆಡೊ ರಸ್ತೆ (ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳನ್ನು ಚೀನಿಯರಿಗೆ ಪೂರೈಸಲು ಬಳಸಿದ ರಸ್ತೆ) ಮೇಲೆ ಕೆಲಸ ಮಾಡುತ್ತಿದ್ದ ಈ ಸೈನಿಕರು, ನೀರಿನಲ್ಲಿದ್ದ ಗಿಡಗಳಿಂದ ಸಿಕ್ಕಿಹಾಕಿಕೊಂಡು ಇದರಿಂದ ತಪ್ಪಿಸಲು ಪ್ರಯತ್ನಿಸಿದರೂ ಅಸಫಲರಾದರು ಎಂದು ಹೇಳಲಾಗುತ್ತದೆ.

ಈ ಸರೋವರದ ಬಗ್ಗೆ ಹಳೇ ಜಾನಪದ ಪುರಾಣದ ಪ್ರಕಾರ

Arunachal Pradesh

PC: Arup1981

ಈ ಸಿದ್ಧಾಂತಗಳ ಹೊರತಾಗಿ, ಹಳ್ಳಿಗರಲ್ಲಿ ಈ ಸರೋವರದ ಬಗ್ಗೆ ಒಂದು ಜಾನಪದ ಕಥೆಯೂ ಕೂಡ ಇದೆ. ತಲೆಮಾರುಗಳ ಹಿಂದೆ ಹಾದುಹೋಗಿರುವ ಈ ಕಥೆಯ ಪ್ರಕಾರ ಈ ನೀರಿನಲ್ಲಿ ಒಂದು ಹಳ್ಳಿಗನು ಅಸಾಧಾರಣವಾದ ಹಾಗೂ ದೊಡ್ಡ ಮೀನನ್ನು ಹಿಡಿಡಿದ್ದ . ಒಬ್ಬ ಮುದುಕಿ ಮತ್ತು ಅವಳ ಮೊಮ್ಮಗಳ ಹೊರತಾಗಿ ಇಡೀ ಹಳ್ಳಿಯನ್ನು ತಾನು ಹಿಡಿದಿದ್ದ ಮೀನಿನ ಊಟಕ್ಕೆ ಕರೆದಿದ್ದ.

ಇದರಿಂದ ಕೋಪಗೊಂಡಿದ್ದ ಅವರನ್ನು ಸರೋವರವನ್ನು ನೋಡಿಕೊಳ್ಳುವವರು, ಅಜ್ಜಿ ಮೊಮ್ಮಗಳನ್ನು ಹಳ್ಳಿಯಿಂದ ಮರುದಿನ ಓಡಿ ಹೋಗಲು ಹೇಳಿದರು.ಆದರೆ ಇಡೀ ಹಳ್ಳಿಯು ಈ ಸರೋವರದಲ್ಲಿ ಮುಳುಗಿ ಹೋಯಿತು. ಆದರೆ ಹೊರಡುವ ಮುನ್ನ ಮುದುಕಿ ಯು ತನ್ನಲ್ಲಿದ್ದ ಬಿದಿರಿನ ಕಡ್ಡಿಯನ್ನು ತಲೆ ಕೆಳಗಾಗುವಂತೆ ಎಸೆದರು ಇದು ಸರೋವರದ ಒಳಗಡೆ ಇಂದಿನವರೆಗೂ ಬೆಳೆಯುತ್ತಿದೆ ಎಂದು ಹಳ್ಳಿಗರು ನಂಬುತ್ತಾರೆ.

ಅರುಣಾಚಲ ಪ್ರದೇಶದ ಪ್ರವಾಸೋದ್ಯಮದ ಬೆಳವಣಿಗೆಗಾಗಿ ಪುರಾಣ ಮತ್ತು ದಂತಕಥೆಗಳನ್ನು ಹೆಚ್ಚಾಗಿ ಪ್ರಚಾರ ಮಾಡಲಾಗುತ್ತದೆ. ಈ ಸ್ಥಳೀಯ ಬರ್ಮುಡಾ ಟ್ರೈಯಾಂಗಲ್ ನ ಈ ಕಥೆಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ನಂಬಲಾಗುತ್ತದೆ.

ಚಾಂಗ್ಲಾಂಗ್ ನ ಭೇಟಿ ನೀಡಬಹುದಾದ ಇನ್ನಿತರ ಜಾಗಗಳು

Arunachal Pradesh

PC: Travelling Slacker

ಟ್ರಾವೆಲಿಂಗ್ ಸ್ಲೇಕರ್ ಚಾಂಗ್ಲ್ಯಾಂಗ್ ಎರಡನೇ ವಿಶ್ವ ಸಮರ ಯುದ್ಧದಲ್ಲಿ ತಮ್ಮ ಪ್ರಾಣ ಕಳೆದುಕೊಂಡ ಹಲವು ಯೋಧರ ಸ್ಮಶಾನಗಳ ನೆಲೆಯಾಗಿದೆ.ನಂಪಾಂಗ್ ಒಂದು ಸುಂದರ ಗ್ರಾಮವಾಗಿದ್ದು, ಇಲ್ಲಿನ ಹಚ್ಚ ಹಸಿರು ಮತ್ತು ಪ್ರಕೃತಿಯ ಸೌಂದರ್ಯವನ್ನು ನೀವು ನಗರದ ಸುತ್ತಲೂ ಕಾಣಬಹುದು.

ಚಾಂಗ್ಲ್ಯಾಂಗ್ನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ನಮ್ದಾಫಾ ರಾಷ್ಟ್ರೀಯ ಉದ್ಯಾನವನ್ನೂ ನೀವು ಭೇಟಿ ಮಾಡಬಹುದು.ಈಶಾನ್ಯದ ದೊಡ್ಡ ರಾಷ್ಟ್ರೀಯ ಉದ್ಯಾನವನಗಳಲ್ಲಿ ಇದೂ ಒಂದಾಗಿದೆ ಮತ್ತು ಸುಮಾರು 2000 ಚ.ಕಿ.ಮೀ. ಪ್ರದೇಶದಲ್ಲಿ ಆವರಿಸಿದೆ ಮತ್ತು ಶ್ರೀಮಂತ ಜೀವ ವೈವಿಧ್ಯತೆಯನ್ನು ಹೊಂದಿದೆ.

ನೀವು ಜನವರಿಯಲ್ಲಿ ಪಾಂಗ್ಸೌ ಪಾಸ್ಗೆ ಭೇಟಿ ನೀಡಿದರೆ, 3 ದಿನಗಳ ಕಾಲ ಪಾಂಗ್ಸಾ ಪಾಸ್ ಚಳಿಗಾಲದ ಉತ್ಸವದಲ್ಲಿ ಭಾಗಿಯಾಗುವುದನ್ನು ತಪ್ಪಿಸಿಕೊಳ್ಳಬೇಡಿ.ಇದು ಸ್ಥಳೀಯ ಬುಡಕಟ್ಟು ಜನಾಂಗದವರ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಮತ್ತು ಉತ್ತೇಜಿಸುವ ಒಂದು ಉತ್ಸವವಾಗಿದ್ದು, ಮ್ಯಾನ್ಮಾರ್ ಮತ್ತು ಭಾರತ ನಡುವೆ ಉತ್ತಮ ಸಂಬಂಧಗಳನ್ನು ನಿರ್ಮಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X