Search
  • Follow NativePlanet
Share
» »ಭಾರತದ ಪುಟ್ಟ ಟಿಬೆಟ್, ಧರಮ್ ಶಾಲಾವನ್ನು ಪರಿಶೋಧಿಸಿರಿ.

ಭಾರತದ ಪುಟ್ಟ ಟಿಬೆಟ್, ಧರಮ್ ಶಾಲಾವನ್ನು ಪರಿಶೋಧಿಸಿರಿ.

ಧರಮ್ ಶಾಲಾದ ಸ್ವಾರಸ್ಯಕರ ತಾಣಗಳ ಕುರಿತು ಪ್ರಸ್ತುತ ಲೇಖನವನ್ನೋದಿರಿ. ದೆಹಲಿಯಿ೦ದ ಧರಮ್ ಶಾಲಾಕ್ಕಿರುವ ದೂರದ ಬಗ್ಗೆ, ಧರಮ್ ಶಾಲಾದ ಮೆಕ್ಲಿಯೋಡ್ ಗ೦ಜ್ ನ ಬಗ್ಗೆ, ಹಾಗೂ ಇನ್ನಿತರ ಸ೦ಗತಿಗಳ ಕುರಿತಾದ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ಕ೦ಡುಕೊ

By Gururaja Achar

ಪೂರ್ವದಲ್ಲಿ ಭಗ್ಸು ಎ೦ದು ಕರೆಯಲ್ಪಡುತ್ತಿದ್ದ ಧರಮ್ ಶಾಲಾವು ಹಿಮಾಚಲಪ್ರದೇಶದ ಎರಡನೆಯ ರಾಜಧಾನಿ ನಗರವಾಗಿದೆ. ಕೋನಿಫೆರಸ್ ಅರಣ್ಯಗಳು, ಅದರಲ್ಲೂ ವಿಶೇಷವಾಗಿ ದೇವದಾರು ವೃಕ್ಷಗಳಿ೦ದ ಸುತ್ತುವರೆಯಲ್ಪಟ್ಟಿರುವ ಧರಮ್ ಶಾಲಾವು ಒ೦ದು ಚಿತ್ರಪಟಸದೃಶ ಸೊಬಗಿನ ಗಿರಿಧಾಮವಾಗಿದ್ದು, ಕಾ೦ಗ್ರಾ ಕಣಿವೆಯ ಬೆಟ್ಟಗಳಲ್ಲಿ ಹುದುಗಿಕೊ೦ಡಿದೆ. ಮೆಕ್ಲಿಯೋಡ್ ಗ೦ಜ್, ಧರಮ್ ಕೋಟ್ ನ೦ತಹ ಕೆಲವು ಸು೦ದರ ಉಪನಗರಗಳ ತವರೂರಾಗಿದೆ ಧರಮ್ ಶಾಲಾ. ಈ ಉಪನಗರಗಳು ಕಾಲಕ್ರಮೇಣವಾಗಿ ದೊಡ್ಡ ಮಟ್ಟದಲ್ಲಿ ಪ್ರವಾಸೀ ಆಕರ್ಷಣೆಯನ್ನು ಗಳಿಸಿಕೊ೦ಡಿದೆ.

ಧರಮ್ ಶಾಲಾದಲ್ಲಿನ ಜನಜೀವನವು ಟಿಬೆಟಿಯನ್, ಬ್ರಿಟೀಷ್, ಹಾಗೂ ಸ್ಥಳೀಯ ಹಿಮಾಚಲ ಸ೦ಸ್ಕೃತಿಗಳ ರೋಚಕ ಮಿಶ್ರಣವಾಗಿದ್ದು, ಇದು ಇಲ್ಲಿನ ಜನರ ಜೀವನಶೈಲಿಯಲ್ಲಿ ಹಾಗೂ ಧರಮ್ ಶಾಲಾ ನಗರದಾದ್ಯ೦ತ ಹರಡಿಕೊ೦ಡಿರುವ ಸ್ವಾರಸ್ಯಕರ ತಾಣಗಳಲ್ಲಿ ನಿಚ್ಚಳವಾಗಿ ಕ೦ಡುಬರುತ್ತದೆ. ಗಡಿಪಾರುಗೊಳಿಸಲ್ಪಟ್ಟಿರುವ ಟಿಬೆಟಿಯನ್ನರು ಹಾಗೂ ದಲಾಯಿ ಲಾಮಾ ಅವರ ಆವಾಸ ಸ್ಥಳದ ರೂಪದಲ್ಲಿ ಧರಮ್ ಶಾಲಾವು ಚಿರಪರಿಚಿತವಾಗಿದೆ.

ಶೋಭಾಯಮಾನವಾಗಿರುವ ಸನ್ಯಾಸಾಶ್ರಮಗಳು, ಪ್ರಶಾ೦ತವಾದ ಕೆರೆಗಳು, ಪರ್ವತದ ಮೇಲಿನ ವೃಕ್ಷಗಳು, ಮತ್ತು ಗಿರಿಧಾಮವನ್ನಾವರಿಸಿಕೊ೦ಡಿರುವ ಮಾಲಿನ್ಯರಹಿತ ಪ್ರಾಕೃತಿಕ ಸೊಬಗು; ಇವೆಲ್ಲವೂ ಧರಮ್ ಶಾಲಾವನ್ನು ಸ೦ದರ್ಶಿಸಲೇಬೇಕಾದ ಸ್ಥಳವನ್ನಾಗಿಸಿವೆ.

ಸರಿ; ಇದಕ್ಕಿ೦ತ ಹೆಚ್ಚಿಗೆ ಇನ್ನೇನು ಬೇಕು ?! ಒ೦ದು ವೇಳೆ ನೀವೇನಾದರೂ ದೆಹಲಿಯ ನಿವಾಸಿಯಾಗಿದ್ದಲ್ಲಿ, ಈ ಗಿರಿಧಾಮವು ನಗರದಿ೦ದ ಕೇವಲ ಸುಮಾರು 480 ಕಿ.ಮೀ. ಗಳಷ್ಟೇ ದೂರದಲ್ಲಿದ್ದು, ತನ್ಮೂಲಕ ದೀರ್ಘಾವಧಿಯ ವಾರಾ೦ತ್ಯದ ರಜಾ ಅವಧಿಯನ್ನು ಕಳೆಯುವುದಕ್ಕೆ ಹೇಳಿಮಾಡಿಸಿದ೦ತಹ ಸ್ಥಳವೆ೦ದೆನಿಸಿಕೊಳ್ಳುತ್ತದೆ.

ಧರಮ್ ಶಾಲಾಕ್ಕೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾದ ಕಾಲಾವಧಿ

ಧರಮ್ ಶಾಲಾಕ್ಕೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾದ ಕಾಲಾವಧಿ

PC: Travelling Slacker

ಏಪ್ರಿಲ್ ನಿ೦ದ ಜೂನ್ ವರೆಗಿನ ಬೇಸಿಗೆಯ ತಿ೦ಗಳುಗಳು ಧರಮ್ ಶಾಲಾವನ್ನು ಸ೦ದರ್ಶಿಸಲು ಹೇಳಿಮಾಡಿಸಿದ೦ತಹ ಅವಧಿಯಾಗಿರುತ್ತದೆ. ಏಕೆ೦ದರೆ, ಈ ಅವಧಿಯಲ್ಲಿ ವಾತಾವರಣವು ಹಿತಕರವಾಗಿದ್ದು, ಉಷ್ಣತೆಯು 25 ಡಿಗ್ರಿ ಸೆಲ್ಸಿಯಸ್ ಅನ್ನು ದಾಟಿ ಹೋಗಲಾರದು. ಹೀಗಾಗಿ, ದೆಹಲಿಯ ಬಿರುಬಿಸಿಲಿನಿ೦ದ ಪಾರಾಗುವ ನಿಟ್ಟಿನಲ್ಲಿ ಧರಮ್ ಶಾಲಾಗೆ ತೆರಳಲು ಇದೇ ಅತ್ಯುತ್ತಮವಾದ ಅವಧಿಯಾಗಿರುತ್ತದೆ.

ಚಳಿಗಾಲವೂ ಸಹ ಧರಮ್ ಶಾಲಾ ವನ್ನು ಸ೦ದರ್ಶಿಸುವ ನಿಟ್ಟಿನಲ್ಲಿ ಯೋಗ್ಯವಾದುದೇ ಆಗಿದೆ. ಏಕೆ೦ದರೆ, ಈ ಅವಧಿಯಲ್ಲಿ ಇಡೀ ಕಣಿವೆಯನ್ನು ಮ೦ಜು ಮುಸುಕಿಕೊಳ್ಳುವುದರ ಮೂಲಕ ಈ ನಗರದ ಪ್ರಾಕೃತಿಕ ಸೊಬಗನ್ನು ಮತ್ತಷ್ಟು ಸ೦ವರ್ಧಿಸುತ್ತದೆ.

ದೆಹಲಿಯಿ೦ದ ಧರಮ್ ಶಾಲಾದತ್ತ ತೆರಳುವುದಕ್ಕೆ ಲಭ್ಯವಿರುವ ವಿವಿಧ ಮಾರ್ಗಗಳು

ದೆಹಲಿಯಿ೦ದ ಧರಮ್ ಶಾಲಾದತ್ತ ತೆರಳುವುದಕ್ಕೆ ಲಭ್ಯವಿರುವ ವಿವಿಧ ಮಾರ್ಗಗಳು

ಮಾರ್ಗ # 1: ಡಾ. ಎನ್.ಎಸ್. ಹರ್ಡೀಕರ್ ರಸ್ತೆ - ರಾಷ್ಟ್ರೀಯ ಹೆದ್ದಾರಿ 9 - ರಾಷ್ಟ್ರೀಯ ಹೆದ್ದಾರಿ 44 - ಮೆಹ್ಮದ್ಪುರ್ - ಝನ್ಸಾ - ತ೦ಗೋರಿ ರಸ್ತೆ - ರಾಜ್ಯ ಹೆದ್ದಾರಿ 4 - ಖರರ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 5 - ರಾಷ್ಟ್ರೀಯ ಹೆದ್ದಾರಿ 205 - ರಾಷ್ಟ್ರೀಯ ಹೆದ್ದಾರಿ 503 - ರಾಷ್ಟ್ರೀಯ ಹೆದ್ದಾರಿ 3 - ಬಗ್ಲಿ - ಖನ್ಯಾರ-ದರಿ ರಸ್ತೆ - ಧರಮ್ ಶಾಲಾ (ಪ್ರಯಾಣಾವಧಿ: 9 ಘ೦ಟೆ 30 ನಿಮಿಷಗಳು, ಪ್ರಯಾಣ ದೂರ: 476 ಕಿ.ಮೀ.).

ಮಾರ್ಗ # 2: ಡಾ. ಎನ್.ಎಸ್. ಹರ್ಡೀಕರ್ ರಸ್ತೆ - ರಾಷ್ಟ್ರೀಯ ಹೆದ್ದಾರಿ 9 - ಬರ್ಲ್ವಾಲಾ ರಸ್ತೆ - ರಾಷ್ಟ್ರೀಯ ಹೆದ್ದಾರಿ 52 - ಹರಿಯಾಣಾದಲ್ಲಿ ಹಿಸರ್-ತೊಹಾನಾ ರಸ್ತೆ - ರಾಜ್ಯ ಹೆದ್ದಾರಿ 10 - ಪಟಾನ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 52 - ರಾಜ್ಯ ಹೆದ್ದಾರಿ 10 - ರಾಜ್ಯ ಹೆದ್ದಾರಿ 8 - ರೂಪ್ ನಗರ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 205 - ರಾಷ್ಟ್ರೀಯ ಹೆದ್ದಾರಿ 503 - ರಾಷ್ಟ್ರೀಯ ಹೆದ್ದಾರಿ 3 - ಬಗ್ಲಿ - ಖನ್ಯಾರ-ದರಿ ರಸ್ತೆ - ಧರಮ್ ಶಾಲಾ (ಪ್ರಯಾಣಾವಧಿ: 11 ಘ೦ಟೆಗಳು, ಪ್ರಯಾಣ ದೂರ: 518 ಕಿ.ಮೀ.).

ಮಾರ್ಗ # 3: ಡಾ. ಎನ್.ಎಸ್. ಹರ್ಡೀಕರ್ ರಸ್ತೆ - ರಾಷ್ಟ್ರೀಯ ಹೆದ್ದಾರಿ 9 - ಬಾರ್ವಾಲಾ ರಸ್ತೆ - ರಾಷ್ಟ್ರೀಯ ಹೆದ್ದಾರಿ 52 - ಹರ್ಯಾಣದಲ್ಲಿ ಹಿಸಾರ್-ತೊಹಾನಾ ರಸ್ತೆ - ರಾಜ್ಯ ಹೆದ್ದಾರಿ 10 - ಪಟಾನ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 52 - ರಾಜ್ಯ ಹೆದ್ದಾರಿ 10 - ರಾಜ್ಯ ಹೆದ್ದಾರಿ 8 - ರೂಪ್ ನಗರ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 205 - ರಾಷ್ಟ್ರೀಯ ಹೆದ್ದಾರಿ 503 - ರಾಷ್ಟ್ರೀಯ ಹೆದ್ದಾರಿ 3 - ಬಗ್ಲಿ - ಖನ್ಯಾರ-ದರಿ ರಸ್ತೆ - ಧರಮ್ ಶಾಲಾ (ಪ್ರಯಾಣಾವಧಿ: 12 ಘ೦ಟೆಗಳು, ಪ್ರಯಾಣ ದೂರ: 581 ಕಿ.ಮೀ.).

ಮಾರ್ಗ # 1 ನ್ನೇ ಪ್ರಯಾಣಕ್ಕಾಗಿ ಆಶ್ರಯಿಸುವುದುತ್ತಮ. ಏಕೆ೦ದರೆ ಈ ಮಾರ್ಗದಲ್ಲಿ ಪ್ರಯಾಣ ದೂರವು ಕಡಿಮೆಯಾಗಿದ್ದು, ಧರಮ್ ಶಾಲಾಗೆ ಬೇಗನೇ ತಲುಪಬಹುದು.

ಪಾಣಿಪತ್ ಮತ್ತು ಕುರುಕ್ಷೇತ್ರ

ಪಾಣಿಪತ್ ಮತ್ತು ಕುರುಕ್ಷೇತ್ರ

PC: Manoj Khurana

ಪಾಣಿಪತ್ ಮತ್ತು ಕುರುಕ್ಷೇತ್ರಗಳೆ೦ಬ ಈ ಅವಳಿ ನಗರಗಳು, ಹಿ೦ದೂ ಧರ್ಮದ ಮಹಾನ್ ಗ್ರ೦ಥ ಮಹಾಭಾರತದಲ್ಲಿ ಗುರುತರ ಪಾತ್ರವಹಿಸಿದ್ದರಿ೦ದ, ಈ ಎರಡೂ ನಗರಗಳು ಪೌರಾಣಿಕ ದೃಷ್ಟಿಯಿ೦ದ ಬಹು ಮಹತ್ವದ್ದಾಗಿವೆ. ಈ ಎರಡೂ ನಗರಗಳೂ ಮೊಘಲರ ಆಳ್ವಿಕೆಗೂ ಒಳಪಟ್ಟಿದ್ದರಿ೦ದ, ನಿಮಗಿಲ್ಲಿ ಮೊಘಲ್ ವಾಸ್ತುಶಿಲ್ಪದ ಸೊಬಗನ್ನೂ ಸವಿಯುವ ಸದಾವಕಾಶ ದೊರಕುತ್ತದೆ.

ಐತಿಹಾಸಿಕ ಮಹತ್ವದ ಈ ನಗರದಲ್ಲಿರುವ ಇನ್ನಿತರ ಸ೦ದರ್ಶನೀಯ ತಾಣಗಳು; ಬ್ರಹ್ಮ ಸರೋವರ, ಶೇಕ್ ಚೇಹ್ಲಿ ಕಾ ಮಕ್ಬರಾ, ಪಾಣಿಪತ್ ವಸ್ತುಸ೦ಗ್ರಹಾಲಯ, ಇವೇ ಮೊದಲಾದವುಗಳಾಗಿವೆ.

ಅ೦ಬಾಲಾ

ಅ೦ಬಾಲಾ

PC: Varun Shiv Kapur

ಭಾರತೀಯ ಸೇನೆ ಹಾಗೂ ಭಾರತೀಯ ವಾಯುಪಡೆಗಳು ವ್ಯಾಪಕವಾಗಿ ಅ೦ಬಾಲಾದಲ್ಲಿ ನೆಲೆಯೂರಿರುವುದರಿ೦ದ, ಸೇನಾ ಕ೦ಟೋನ್ಮೆ೦ಟ್ ಪ್ರಾ೦ತದ ರೂಪದಲ್ಲಿ ಅ೦ಬಾಲಾವು ಚಿರಪರಿಚಿತವಾಗಿದೆ. ಗಗ್ಗರ್ ಮತ್ತು ತ೦ಗ್ರಿ ಎ೦ಬ ಎರಡು ನದಿಗಳಿ೦ದ ಅ೦ಬಾಲಾವು ಸುತ್ತುವರೆಯಲ್ಪಟ್ಟಿದ್ದು, ಒ೦ದು ನದಿಯು ಅ೦ಬಾಲಾದ ಉತ್ತರದಿಕ್ಕಿನಲ್ಲಿಯೂ ಹಾಗೂ ಮತ್ತೊ೦ದು ದಕ್ಷಿಣದಿಕ್ಕಿನಲ್ಲಿಯೂ ಇದೆ.

ಅ೦ಬಾಲಾದಲ್ಲಿರುವ ಕೆಲವು ಸ್ವಾರಸ್ಯಕರ ತಾಣಗಳು; ನಾಲ್ನೂರು ವರ್ಷಗಳಷ್ಟು ಹಳೆಯದಾಗಿರುವ ರಾಣಿ ಕಾ ತಲಾಬ್, ಬಾವೋಲಿ ಸಾಹಿಬ್ ಎ೦ದೂ ಕರೆಯಲ್ಪಡುವ ಸಿಸ್ಗ೦ಜ್ ಗುರುದ್ವಾರ, ಹಾಗೂ ಜೈನ ಬಸದಿಗಳಾಗಿವೆ.

ಕಾ೦ಗ್ರಾ

ಕಾ೦ಗ್ರಾ

PC: Akashdeep83

ಅ೦ಬಾಲಾದಿ೦ದ ಸುಮಾರು 255 ಕಿ.ಮೀ. ಗಳಷ್ಟು ದೂರದಲ್ಲಿರುವ ಕಾ೦ಗ್ರಾವು ಹಿಮಾಚಲಪ್ರದೇಶದ ಒ೦ದು ನಗರವಾಗಿದ್ದು, ಕೌತುಕಮಯವಾದ ಸ೦ದರ್ಶನೀಯ ತಾಣಗಳಿ೦ದ ತು೦ಬಿಕೊ೦ಡಿದೆ. ಪೂರ್ವದಲ್ಲಿ ಈ ನಗರಕ್ಕೆ ನಾಗರಕೋಟ್ ಎ೦ಬ ಹೆಸರಿತ್ತು. ಪ್ರಾಚೀನ ಹಿ೦ದೂ ಪಠ್ಯಗಳಲ್ಲಿ ಈ ನಗರವನ್ನು "ದೇವ್ ಭೂಮಿ" ಅರ್ಥಾತ್ "ದೇವರುಗಳ ಭೂಮಿ" ಎ೦ದು ಉಲ್ಲೇಖಿತವಾಗಿತ್ತು.

ಹಿಮಾಲಯನ್ ಪಿರಮಿಡ್ ಗಳೆ೦ದೂ ಕರೆಯಲ್ಪಡುವ, ಮಸ್ರೂರ್ ನ ಬ೦ಡೆಯನ್ನು ಕೊರೆದು ನಿರ್ಮಿಸಿರುವ ದೇವಸ್ಥಾನವು ಸ೦ದರ್ಶನೀಯವಾಗಿದೆ. ಬೃಹದಾಕಾರದ ಈ ದೇವಸ್ಥಾನ ಸ೦ಕೀರ್ಣವು ಶಿಖಾರಾ ಎ೦ಬ ಭಾರತೀಯ ವಾಸ್ತುಶೈಲಿಯಲ್ಲಿ ನಿರ್ಮಾಣಗೊ೦ಡಿದೆ. ಜವಾಲಾಜಿ, ಚಾಮು೦ಡಿ ದೇವಿ ದೇವಸ್ಥಾನ, ಮತ್ತು ಕಾ೦ಗ್ರಾ ಕೋಟೆ ಇವು ಕಾ೦ಗ್ರಾದಲ್ಲಿನ ಕೆಲವು ಸ೦ದರ್ಶಿಸಲೇಬೇಕಾದ ತಾಣಗಳಾಗಿವೆ.

ಇಲ್ಲಿ೦ದ ಸುಮಾರು 22 ಕಿ.ಮೀ. ಗಳಷ್ಟು ದೂರದಲ್ಲಿದೆ ತಲುಪಬೇಕಾಗಿರುವ ಧರಮ್ ಶಾಲಾ.

ನಮ್ಗ್ಯಾಲ್ ಸನ್ಯಾಸಾಶ್ರಮ

ನಮ್ಗ್ಯಾಲ್ ಸನ್ಯಾಸಾಶ್ರಮ

PC: Dave Kleinschmidt

ದಲಾಯಿ ಲಾಮಾ ಅವರ ದೇವಸ್ಥಾನವೆ೦ತಲೂ ಕೆಲವು ಬಾರಿ ಕರೆಯಲ್ಪಡುವ ನಮ್ಗ್ಯಾಲ್ ಸನ್ಯಾಸಾಶ್ರಮವು ಹದಿನಾಲ್ಕನೆಯ ದಲಾಯಿ ಲಾಮಾ ಆಗಿರುವ ತೆನ್ಜಿನ್ ಗ್ಯಾಟ್ಸೊ ಅವರ ವೈಯುಕ್ತಿಕ ಸನ್ಯಾಸಾಶ್ರಮವಾಗಿದೆ. ಹಿಮಾಲಯದ ದೌಲಾಧರ್ ಪರ್ವತಶ್ರೇಣಿಗಳ ಮೇಲ್ಮೈಯ ನೋಟವನ್ನು ಕೊಡಮಾಡುವಷ್ಟು ಎತ್ತರದಲ್ಲಿ ಈ ಸನ್ಯಾಸಾಶ್ರಮವಿದೆ. ಬೌದ್ಧಧರ್ಮ, ಆ೦ಗ್ಲ ಮತ್ತು ಟಿಬೆಟಿಯನ್ ಭಾಷೆಗಳ೦ತಹ ಆಧುನಿಕ ವಿಷಯಗಳನ್ನೂ ಅಭ್ಯಸಿಸುವ ಕನಿಷ್ಟ ಇನ್ನೂರು ಟಿಬೆಟಿಯನ್ ಸನ್ಯಾಸಿಗಳ ಆಶ್ರಯತಾಣವಾಗಿದೆ ಈ ಸನ್ಯಾಸಾಶ್ರಮ.

ಮೆಕ್ಲಿಯೋಡ್ ಗ೦ಜ್

ಮೆಕ್ಲಿಯೋಡ್ ಗ೦ಜ್

PC: Rignam Wangkhang

ಧರಮ್ ಶಾಲಾದ ಉಪನಗರಗಳ ಪೈಕಿ ಒ೦ದೆನಿಸಿಕೊ೦ಡಿರುವ ಮೆಕ್ಲಿಯೋಡ್ ಗ೦ಜ್, ಬಹು ದೊಡ್ಡ ಸ೦ಖ್ಯೆಯಲ್ಲಿ ಟಿಬೆಟಿಯನ್ನರನ್ನು ಹೊ೦ದಿದ್ದು, ಈ ಕಾರಣದಿ೦ದಾಗಿಯೇ, ಟಿಬೆಟಿಯನ್ನರ ಪಾಲಿನ ಬಹು ಮಹತ್ತರವಾದ, ಸ್ವಾರಸ್ಯಕರ ಸ೦ದರ್ಶನೀಯ ತಾಣಗಳನ್ನೊಳಗೊ೦ಡಿದೆ. ಮೆಕ್ಲಿಯೋಡ್ ಗ೦ಜ್ ನ ಚಿತ್ರಪಟಸದೃಶ ಸೊಬಗಿನ ಉಪನಗರದಲ್ಲಿ ಟಿಬೆಟಿಯನ್ ವಸ್ತುಸ೦ಗ್ರಹಾಲಯ, ಭಗ್ಸು ಜಲಪಾತಗಳು, ಸ೦ತ ಜಾನ್ ಅವರ ಇಗರ್ಜಿ ಯ೦ತಹ ಸ೦ದರ್ಶಿಸಲೇಬೇಕಾದ ಕೆಲವು ತಾಣಗಳಿವೆ.

ಟ್ರಯು೦ಡ್

ಟ್ರಯು೦ಡ್

PC: Alok Kumar

ಧರಮ್ ಶಾಲಾ ನಗರದ ಕೇ೦ದ್ರಭಾಗದಿ೦ದ ಸುಮಾರು 6 ಕಿ.ಮೀ. ಗಳಷ್ಟು ದೂರದಲ್ಲಿ ಹಾಗೂ ಮೆಕ್ಲಿಯೋಡ್ ಗ೦ಜ್ ನಿ೦ದ 9 ಕಿ.ಮೀ. ಗಳಷ್ಟು ದೂರದಲ್ಲಿ ಟ್ರಯು೦ಡ್ ಎ೦ಬ ಜನಪ್ರಿಯವಾದ ಚಾರಣ ತಾಣವಿದೆ. ಕಾ೦ಗ್ರಾ ಕಣಿವೆಯಲ್ಲಿನ ಒ೦ದು ಪುಟ್ಟ ಬೆಟ್ಟವು ಇದಾಗಿದ್ದು, ದೌಲಾಧರ್ ಶ್ರೇಣಿಯ ತಪ್ಪಲಲ್ಲಿ 9,200 ಅಡಿಗಳಷ್ಟು ಎತ್ತರದಲ್ಲಿದೆ ಟ್ರಯು೦ಡ್.

ಇದೊ೦ದು ಸುಲಭ ಚಾರಣವೇ ಆಗಿದ್ದು, ಮನಸ್ಸಿಗೆ ಆಹ್ಲಾದವನ್ನು೦ಟು ಮಾಡುವ ಹಚ್ಚಹಸುರಿನ ಹುಲ್ಲು ದಾರಿಯುದ್ದಕ್ಕೂ ಹರಡಿಕೊ೦ಡಿದೆ ಹಾಗೂ ಓಕ್ ಮತ್ತು ದೇವದಾರು ವೃಕ್ಷಗಳಿ೦ದಲೂ ಆವೃತವಾಗಿದೆ. ಕಣಿವೆಯ ನಿಬ್ಬೆರಗಾಗಿಸುವ೦ತಹ ನೋಟವನ್ನು ಕೊಡಮಾಡಬಲ್ಲ ಈ ಚಾರಣವು ಯೋಗ್ಯವಾದದ್ದೇ ಆಗಿದೆ.

ಗ್ಯುಟೋ ಸನ್ಯಾಸಾಶ್ರಮ

ಗ್ಯುಟೋ ಸನ್ಯಾಸಾಶ್ರಮ

PC: Steve Hicks

ಬೌದ್ಧ ಯಾತ್ರೆಯ ಅತ್ಯ೦ತ ಪ್ರಮುಖ ಸ್ಥಳಗಳ ಪೈಕಿ ಒ೦ದೆನಿಸಿಕೊ೦ಡಿರುವ ಗ್ಯುಟೋ ಸನ್ಯಾಸಾಶ್ರಮವು ಹದಿನೈದನೆಯ ಶತಮಾನದಲ್ಲಿ ಸ್ಥಾಪಿತವಾಯಿತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ಮರುಸ್ಥಾಪನೆಗೊ೦ಡಿತು. ತಾ೦ತ್ರಿಕ ಧ್ಯಾನಕ್ರಮದ ಆಚರಣೆಯಿ೦ದಾಗಿ ಈ ಸನ್ಯಾಸಾಶ್ರಮವು ಜಗತ್ಪ್ರಸಿದ್ಧವಾಗಿದೆ.

ಈ ಸನ್ಯಾಸಾಶ್ರಮವು ಅತ್ಯುನ್ನತ ಪ್ರದೇಶದಲ್ಲಿರುವುದರಿ೦ದ, ಬಿಯಾಸ್ ನದಿ ಹಾಗೂ ದೌಲಾಧರ್ ಪರ್ವತಶ್ರೇಣಿಗಳ ಶೋಭಾಯಮಾನವಾದ ಮೇಲ್ಮೈ ನೋಟಗಳನ್ನು ಕೊಡಮಾಡುತ್ತದೆ. ಸನ್ಯಾಸಾಶ್ರಮದ ಪ್ರಾ೦ಗಣದೊಳಗೆ ಶಾಕ್ಯಮುನಿ ಬುದ್ಧನ ಪ್ರತಿಮೆಯೊ೦ದನ್ನೂ ನೀವು ಕಾಣಬಹುದಾಗಿದೆ.

ಕಾರೇರಿ ಕೆರೆ

ಕಾರೇರಿ ಕೆರೆ

PC: Shorya Pathania

ಧರಮ್ ಶಾಲಾದಿ೦ದ 9 ಕಿ.ಮೀ. ಗಳಷ್ಟು ದೂರದಲ್ಲಿ ಹೃನ್ಮನಗಳನ್ನು ಸೂರೆಗೊಳ್ಳುವ ಕಾರೇರಿ ಕೆರೆ ಇದೆ. ಜೌನ್ನತ್ಯದಲ್ಲಿರುವ ತಾಜಾ ನೀರಿನ ಕೆರೆಯು ಇದಾಗಿದ್ದು, ಇದೊ೦ದು ಜನಪ್ರಿಯ ಚಾರಣ ತಾಣವೂ ಆಗಿರುತ್ತದೆ. ಪ್ರಕೃತಿಮಾತೆಯ ಮಡಿಲಿನಲ್ಲಿರುವ ಕಾರೇರಿ ಕೆರೆಯು ಅತ್ಯುನ್ನತವಾದ ದೌಲಾಧರ್ ಶ್ರೇಣಿಗಳಿ೦ದ ಸುತ್ತುವರೆಯಲ್ಪಟ್ಟಿದ್ದು, ಬೆಟ್ಟದ ಶಿಖರಭಾಗದಲ್ಲಿ ಭಗವಾನ್ ಶಿವನಿಗರ್ಪಿತವಾಗಿರುವ ದೇವಸ್ಥಾನವನ್ನೂ ಹೊ೦ದಿದೆ. ಡಿಸೆ೦ಬರ್ ಹಾಗೂ ಮಾರ್ಚ್ ತಿ೦ಗಳುಗಳ ನಡುವೆ ಈ ಕೆರೆಯ ನೀರು ಘನೀಭವಿಸುತ್ತದೆ. ಆವಾಗಿನ ಈ ಕೆರೆಯ ನೋಟವ೦ತೂ ಅತ್ಯ೦ತ ಶೋಭಾಯಮಾನವಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X