Search
  • Follow NativePlanet
Share
» »ಅನುಕರಣೀಯ ಮತ್ತು ಸ್ಪೂರ್ತಿ ನೀಡುವಂತಹ ಭಾರತದ ಈ ಹಳ್ಳಿಗಳಿಗೆ ಭೇಟಿ ನೀಡಿ

ಅನುಕರಣೀಯ ಮತ್ತು ಸ್ಪೂರ್ತಿ ನೀಡುವಂತಹ ಭಾರತದ ಈ ಹಳ್ಳಿಗಳಿಗೆ ಭೇಟಿ ನೀಡಿ

ಒಂದು ದೇಶದ ಅಭಿವೃದ್ದಿ ಮತ್ತು ಏಳಿಗೆಯಲ್ಲಿ ಹಳ್ಳಿಗಳು ನಿಸ್ಸಂದೇಹವಾಗಿಯೂ ಮಹತ್ವದ ಪಾತ್ರವಹಿಸುತ್ತದೆ. ಈ ಭೂಮಿಯ ಪ್ರತಿಯೊಂದು ರಾಷ್ಟ್ರವೂ ಕೂಡಾ ಒಂದೊಮ್ಮೆ ಅಥವಾ ಹಳ್ಳಿಯಾಗಿತ್ತು ಅಥವಾ ಅದರ ಒಂದು ಸಣ್ಣ ಭಾಗವಾಗಿತ್ತು. ಇದರ ಪರಿಣಾಮವಾಗಿ ಹಳ್ಳಿಗಳು ಪ್ರತಿಯೊಂದು ರಾಷ್ಟ್ರದ ದೀರ್ಘಕಾಲ ಉಳಿವು ಮತ್ತು ಸ್ಥಿರತೆಗಾಗಿ ಅಥವಾ ಬಾಳಿಕೆಗಾಗಿ ಆಧಾರ ಸ್ತಂಭಗಳೆನಿಸಿವೆ ಎಂದರೆ ತಪ್ಪಾಗಲಾರದು.

ಭಾರತವು ಅದ್ಬುತಗಳ ಭೂಮಿ ಎಂದರೆ ತಪ್ಪಾಗಲಾರದು ಇದಕ್ಕೆ ಪೂರಕ ಎನ್ನುವಂತೆ ಭಾರತದ ಹಳ್ಳಿಗಳು ಇದನ್ನು ನಿಸ್ಸಂಶಯವಾಗಿ ಸಾಬೀತು ಗೊಳಿಸಿವೆ. "ಭಾರತದ ಜೀವವು ಅದರ ಹಳ್ಳಿಗಳಲ್ಲಿವೆ" ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಒಂದೊಮ್ಮೆ ನುಡಿದಿದ್ದರು. ಅವರ ಈ ನಿರೀಕ್ಷಿತ ಚಿಂತನೆ ಭಾರತೀಯ ಹಳ್ಳಿಗಳಿಗಿದ್ದ ಮಹತ್ವವನ್ನು ಸಾಬೀತು ಪಡಿಸುತ್ತದೆ. ಅಲ್ಲದೆ ಇದು ಅಕ್ಷರಶ: ಸತ್ಯವಾದುದಾಗಿದೆ. ಕಾಲಕ್ರಮೇಣ ಹಳ್ಳಿಗಳನ್ನು ಕಡಿಮೆ ಗಣನೆಗೆ ತೆಗೆದುಕೊಳ್ಳಲಾಗಿದ್ದರೂ ಸಹ ಹಲವಾರು ಆದರ್ಶಪ್ರಾಯವಾದ ಹಳ್ಳಿಗಳು ಇನ್ನೂ ಅಸ್ತಿತ್ವದಲ್ಲಿವೆ. ಇವು ಖಂಡಿತವಾಗಿಯೂ ದೇಶದ ಹಿರಿಮೆಯನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ ಮಾತ್ರವಲ್ಲದೆ ಪ್ರತಿಯೊಂದು ಆಧುನಿಕ ನಗರಗಳಿಗೂ ಪಾಠವಾಗಿದೆ.

ಹಾಗಿದ್ದಲ್ಲಿ, ಮೆಟ್ರೋ ಮತ್ತು ವಾಣಿಜ್ಯೀಕರಣದಲ್ಲಿ ಮುಳುಗಿರುವ ನಗರಗಳನ್ನು ಹಿಂದಿಕ್ಕಿ ಭಾರತದ ಜೀವವೆನಿಸಿರುವ ಹಳ್ಳಿಗಳ ಅನ್ವೇಷಣೆ ಮಾಡಿದರೆ ಹೇಗೆ? ಹೌದು, ನೀವು ಈ ದಾರಿಯಲ್ಲಿ ಮುನ್ನಡೆಯಲು ದೃಡ ನಿರ್ಧಾರವನ್ನು ಹೊಂದಿದ್ದಲ್ಲಿ, ಈ ವರ್ಷ ನಿಮ್ಮ ಪ್ರಯಾಣದ ಪಟ್ಟಿಯಲ್ಲಿ ಈ ಕೆಲವು ಅದ್ಭುತ ಗ್ರಾಮಗಳನ್ನು ಸೇರಿಸಿಕೊಳ್ಳಿ.

ಪೋಥನಿಕ್ಕಾಡ್, ಕೇರಳ

ಪೋಥನಿಕ್ಕಾಡ್, ಕೇರಳ

ಗ್ರಾಮೀಣ ಜೀವನ ಮತ್ತು ಸಾಕ್ಷರತೆ ಎಂದಿಗೂ ಕೈ ಜೋಡಿಸುವುದಿಲ್ಲ ಎಂದು ಹೇಳುತ್ತಾರೆ. ಹೌದು ಈ ಹೇಳಿಕೆಯನ್ನು ಸುಳ್ಳು ಮಾಡುವಲ್ಲಿ ಪೋಥಾನಿಕಾಡ್ ಯಶಸ್ವಿಯಾಗಿದೆ. ಈ ಹಳ್ಳಿಯು 100% ಸಾಕ್ಷರತೆಯನ್ನು ಹೊಂದಿದ ಭಾರತದ ಮೊದಲ ಹಳ್ಳಿಯೆನಿಸಿದೆ. ಪೊಥಾನಿಕಾಡ್ ಸರ್ಕಾರಿ ಮತ್ತು ಖಾಸಗಿ ಮಧ್ಯಂತರ ಶಾಲೆಗಳನ್ನು ಹೊಂದಿದ್ದು, ಹೆಚ್ಚು ಸಾಕ್ಷರತೆಯ ಗ್ರಾಮವಾಗಿ ಅಭಿವೃದ್ಧಿ ಹೊಂದುವಲ್ಲಿ ಸಹಕರಿಸಿದೆ ಅಲ್ಲದೆ ಅವು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಈ ಹಳ್ಳಿಯು ತನ್ನ ಪುರಾತನ ಸಂಸ್ಕೃತಿ ಮತ್ತು ಸಂಪ್ರದಾಯವಗಳನ್ನೂ ಸಹ ತನ್ನಲ್ಲಿ ಹೊಂದಿದೆ.

ನೀವು ಹಳ್ಳಿಗಾಡಿನ ಪ್ರಯಾಣವನ್ನು ಪ್ರಕೃತಿಯೊಂದಿಗೆ ಮಾಡಲು ಕಾತುರರಾಗಿದ್ದಲ್ಲಿ, ಈ ಹಳ್ಳಿಯಿಂದ ಕೇವಲ 16ಕಿ.ಮೀ ದೂರದಲ್ಲಿರುವ ತೋಮ್ಮನ್ಕುತು ಜಲಪಾತವು ನಿಮ್ಮನ್ನು ಸ್ವಾಗತಿಸುತ್ತದೆ. ಇದಲ್ಲದೆ ಈ ಹಳ್ಳಿಯಲ್ಲಿ ಪೋಥಾನಿಕಾಡ್ ಸೇಂಟ್ ಮೇರಿಸ್ ಜಾಕೋಬೈಟ್ ಸಿರಿಯನ್ ಚರ್ಚ್ ಮತ್ತು ಪೊಥಾನಿಕಾಡ್ ಉಮ್ಮನಿಕುನು ಸೇಂಟ್ ಮೇರಿಸ್ ಆರ್ಥೋಡಾಕ್ಸ್ ಸಿರಿಯನ್ ನಂತಹ ಚರ್ಚುಗಳಿಗೂ ನೀವು ಭೇಟಿ ನೀಡಬಹುದು.

ಮಾವ್ಲಿನಾಂಗ್ ಮೇಘಾಲಯ

ಮಾವ್ಲಿನಾಂಗ್ ಮೇಘಾಲಯ

ರಮಣೀಯ ಭೂದೃಶ್ಯಗಳು ಮತ್ತು ಸುಂದರವಾದ ನೋಟಗಳನ್ನು ಹೊಂದಿರುವ ಪರಿಸರವು ನೈಸರ್ಗಿಕ ಸೌಂದರ್ಯತೆಯನ್ನು ಹೊಂದಿರುವುದು ಈ ರಾಜ್ಯಕ್ಕೆ ಹೊಸತೇನಲ್ಲ. ಇವೆಲ್ಲದರ ಹೊರತಾಗಿಯೂ ಮಾವ್ಲಿನಾಂಗ್ ಖಂಡಿತವಾಗಿಯೂ ಅದರ ನಿವಾಸಿಗಳು ಮಾಡಿದ ಪವಾಡದ ಕಲೆ ಎನ್ನಬಹುದು. 2003 ರಲ್ಲಿ, ಈ ಗ್ರಾಮಕ್ಕೆ ಏಷ್ಯಾದ ಅತೀ ಸ್ವಚ್ಚ ಗ್ರಾಮ ಎಂಬ ಬಿರುದನ್ನು ನೀಡಲಾಯಿತು ಮತ್ತು ಅಂದಿನಿಂದ ಇದು ಆಫ್‌ಬೀಟ್ ಪ್ರಯಾಣಿಕರಿಗೆ ಜನಪ್ರಿಯ ತಾಣವಾಗಿದೆ.

ಶಿಲ್ಲಾಂಗ್ ನಿಂದ ಸುಮಾರು 80 ಕಿಮೀ ಅಂತರದಲ್ಲಿರುವ ಮಾವ್ಲಿನಾಂಗ್ ಅದರ ಸ್ವಚ್ಚತೆ ಮತ್ತು ನೈರ್ಮಲ್ಯತೆಯ ಬಗೆಗಿನ ದಿಟ್ಟ ನಿಲುವಿನಿಂದಾಗಿ ಇಡೀ ದೇಶಕ್ಕೆ ಇದೊಂದು ಮಾದರಿಯಾಗಿದೆ ಎನ್ನಬಹುದು. ಇಲ್ಲಿ ಸ್ವಚ್ಚವಾದ ರಸ್ತೆಗಳಿಂದ ಹಿಡಿದು ಬಿದಿರಿನ ಕಸದ ಬುಟ್ಟಿಗಳವರೆಗೆ ಎಲ್ಲೆಂದರಲ್ಲಿ ಸ್ವಚ್ಚತೆಯನ್ನು ಸಾರುತ್ತಿದ್ದು ಈ ಹಳ್ಳಿಯು ಯಾವುದೇ ನಿಯಮಗಳಿಗೂ ಅನುಗುಣವಾಗಿರದೆ ಕೊಳಕು ಮುಕ್ತವಾಗಿದೆ.

ಲಿವಿಂಗ್ ರೂಟ್ ಸೇತುವೆಗಳು ಮತ್ತು ಜಲಪಾತಗಳ ಅದ್ಭುತ ದೃಶ್ಯಗಳನ್ನು ಸಹ ಇಲ್ಲಿ ನೀವು ಆನಂದಿಸಬಹುದು ಮತ್ತು ಮಾವ್ಲಿನಾಂಗ್‌ನ ಸ್ಥಳೀಯ ಬಾಯಿ ನೀರೂರಿಸುವಂತಹ ಆಹಾರವನ್ನು ಸಹ ಸವಿಯಬಹುದು.

ಶನಿ ಸಿಂಗನಾಪುರ್, ಮಹಾರಾಷ್ಟ್ರ

ಶನಿ ಸಿಂಗನಾಪುರ್, ಮಹಾರಾಷ್ಟ್ರ

ಬಾಗಿಲುಗಳಿಲ್ಲದ ಮನೆಗಳ ಬಗ್ಗೆ ಎಂದಾದರೂ ಕೇಳಿರುವಿರ? ಹೌದು, ಶನಿ ಸಿಂಗನಾಪುರದಲ್ಲಿ ಯಾವುದೇ ಮನೆಗಳಿಗೆ ಬಾಗಿಲುಗಳು ಅಥವಾ ಬೀಗಗಳಿಲ್ಲದೇ ಇರುವುದನ್ನು ಕಾಣಬಹುದಾಗಿದೆ. ಅಲ್ಲದೆ ಈ ಸ್ಥಳವು ಭಾರತದಲ್ಲಿಯ ಪೋಲೀಸ್ ಠಾಣೆಗಳಿಲ್ಲದೆ ಇರುವ ಹಾಗೂ ಅತ್ಯಂತ ಸುರಕ್ಷಿತ ಸ್ಥಳವೆಂಬ ಹೆಮ್ಮೆಗೆ ಪಾತ್ರವಾದ ಸ್ಥಳವಾಗಿದೆ. ಶನಿ ದೇವರನ್ನು ಪೂಜಿಸಲ್ಪಡುವ ಅನೇಕ ದೇವಾಲಯಗಳಿಗೆ ಈ ಸ್ಥಳವು ಪ್ರಸಿದ್ದಿಯನ್ನು ಪಡೆದಿದೆ. ಮಹಾರಾಷ್ಟ್ರದ ಈ ಸುಂದರವಾದ ಪಟ್ಟಣದಲ್ಲಿ ನೀವು ಆಧ್ಯಾತ್ಮಿಕ ಪರಿಸರವನ್ನೂ ಸಹ ಆನಂದಿಸಬಹುದಾಗಿದೆ. ಇದೊಂದು ಅದ್ಬುತವೇ ಸರಿ ಅಲ್ಲವೆ? ಆದುದರಿಂದ ನಿಮ್ಮ ಪ್ರವಾಸದ ಪಟ್ಟಿಯೊಳಗೆ ಈ ಸ್ಥಳದ ಹೆಸರನ್ನು ಸೇರಿಸಿದರೆ ಹೇಗೆ?

ಪುನ್ಸಾರಿ, ಗುಜರಾತ್

ಪುನ್ಸಾರಿ, ಗುಜರಾತ್

ಅನುಕರಣೀಯ ಹಳ್ಳಿಗಳ ಪಟ್ಟಿಯಲ್ಲಿ ಪುನ್ಸಾರಿಯ ಹೆಸರನ್ನು ಸೇರಿಸದಿದ್ದಲ್ಲಿ ಆ ಪಟ್ಟಿಯು ಅಪೂರ್ಣವೇ ಸರಿ. ಸಿಸಿಟಿವಿ ಕ್ಯಾಮೆರಾಗಳಿಂದ ಹಿಡಿದು ವೈ-ಫೈ ಸೌಲಭ್ಯಗಳವರೆಗೆ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಗ್ರಾಮ ಇದು; ಪುನ್ಸಾರಿ ಗ್ರಾಮವು ಯಾವ ಸೌಕರ್ಯಗಳಿಂದಲೂ ವಂಚಿತನಾಗಿಲ್ಲ. ಭಾರತದ ಅನೇಕ ಆಧುನಿಕ ನಗರಗಳಿಗೆ ಪೈಪೋಟಿಯನ್ನು ನೀಡುವ ಈ ಆದರ್ಶ ಗ್ರಾಮವು ಕಡಿಮೆ ಅದ್ಬುತವೇನಲ್ಲ.

ಅಹಮದಾಬಾದ್‌ನಿಂದ ಕೇವಲ 2 ಗಂಟೆ ಪ್ರಯಾಣಿಸಿದಲ್ಲಿ, ಪುನ್ಸಾರಿಯನ್ನು ಸುಲಭವಾಗಿ ತಲುಪಬಹುದು ಮತ್ತು ಆಧುನಿಕ ಜಗತ್ತಿನ ಸೌಲಭ್ಯಗಳ ನಡುವೆ ಗ್ರಾಮೀಣ ವ್ಯವಸ್ಥೆಯನ್ನು ಆನಂದಿಸಬಹುದು.

ಧರ್ನೈ, ಬಿಹಾರ್

ಧರ್ನೈ, ಬಿಹಾರ್

ಧರ್ನಾಯ್‌ನ ಬಿಹಾರದ ಒಂದು ಸಣ್ಣ ಹಳ್ಳಿ ಖಂಡಿತವಾಗಿಯೂ30 ವರ್ಷಗಳ ಕಾಲ ಕತ್ತಲೆಯಲ್ಲಿದ್ದ ನಂತರ ತನ್ನದೇ ಆದ ಶಕ್ತಿಯನ್ನು ಉತ್ಪಾದಿಸುವ ಸಂಶೋಧಕ ಹಳ್ಳಿಯಾಗಿದೆ. ಗ್ರೀನ್‌ಪೀಸ್‌ನ ಸಹಯೋಗದೊಂದಿಗೆ ಇದು ಖಂಡಿತವಾಗಿಯೂ ಸ್ವತಂತ್ರವಾಗಿರುವ ಭಾರತದ ಮೊದಲ ಸೌರಶಕ್ತಿ ಚಾಲಿತ ಗ್ರಾಮವಾಗಿದೆ.

ಇಂದು, ಇಡೀ ಧರ್ನೈ ಗ್ರಾಮವು ಸೌರಶಕ್ತಿಯಿಂದ ನಡೆಯುವ ಗ್ರಾಮವಾಗಿದೆ ಮಾತ್ರವಲ್ಲದೆ ಇದರಿಂದಾಗಿ ಈ ಸಣ್ಣ ಹಳ್ಳಿಯ ಪ್ರತಿಯೊಬ್ಬ ನಿವಾಸಿಗಳ ಜೀವನದಲ್ಲಿ ಬೆಳಕನ್ನು ತಂದಿದೆ. ಸ್ಫೂರ್ತಿ ಪಡೆಯಲು ಈ ವರ್ಷ ಈ ಮಾದರಿ ಹಳ್ಳಿಗೆ ಭೇಟಿ ನೀಡಿದರೆ ಹೇಗಿರಬಹುದು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more