Search
  • Follow NativePlanet
Share
» »ಏನಾಶ್ಚರ್ಯ! ಶಕುನಿಗೂ ಇದೆ ದೇವಾಲಯ!

ಏನಾಶ್ಚರ್ಯ! ಶಕುನಿಗೂ ಇದೆ ದೇವಾಲಯ!

By Vijay

ಜಗತ್ತಿನಲ್ಲೆ ಅತ್ಯಂತ ಶ್ರೀಮಂತವಾದ ಸಂಸ್ಕೃತಿ-ಸಂಪ್ರದಾಯಾಚರಣೆಗಳನ್ನು ಹೊಂದಿರುವ ಭಾರತದಲ್ಲಿ ಅದೆಷ್ಟೊ ಚಿತ್ರ ವಿಚಿತ್ರ ಆಚರಣೆಗಳಿವೆ, ದೇವಾಲಯಗಳಿವೆ ಎಂದರೆ ತಪ್ಪಾಗಲಾರದು. ಆ ಒಂದು ನಿಟ್ಟಿನಲ್ಲಿ ಪ್ರಸ್ತುತ ಲೇಖನವು ಅಚ್ಚರಿ ಪಡಬಹುದಾದ ಒಂದು ದೇವಾಲಯದ ಕುರಿತು ತಿಳಿಸುತ್ತದೆ. ಇದೊಂದು ಸಾಮಾನ್ಯ ದೇವಾಲಯವಾಗಿದ್ದರೂ ಇದು ಯಾರಿಗೆ ಮುಡಿಪಾಗಿದೆ ಎಂದು ನೋಡಿದಾಗ ಅಸಾಮಾನ್ಯವೆನಿಸುತ್ತದೆ.

ನೀವು ದುರ್ಯೋಧನನನ್ನೂ ಪೂಜಿಸಬೇಕೆ?

ನಿಮಗೆಲ್ಲ ತಿಳಿದಿರುವ ಹಾಗೆ ಶಕುನಿಯು ಮಹಾಭಾರತದಲ್ಲಿ ಬರುವ ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬ. ಅದರಲ್ಲೂ ವಿಶೇಷವಾಗಿ ಕುಖ್ಯಾತಿ ಪಡೆದ ಪಾತ್ರ ಶಕುನಿಯದು. ಮಹಾಭಾರತ ಯುದ್ಧದ ಸಂಭವಿಸುವುದಕ್ಕೆ ಪ್ರಮುಖ ಕೈವಾಡವಿರುವ ವ್ಯಕ್ತಿ ಎಂದೆ ಶಕುನಿಯನ್ನು ವಿಶ್ಲೇಷಿಸಲಾಗುತ್ತದೆ. ಇಂತಹ ಒಬ್ಬ ಶತ್ರುವಿಗೆ ಮುಡಿಪಾದ ದೇವಾಲಯವಿರುವುದು ಇನ್ನೂ ವಿಶೇಷವೆ ಅಂತ ಹೇಳಬಹುದಲ್ಲವೆ.

ಏನಾಶ್ಚರ್ಯ! ಶಕುನಿಗೂ ಇದೆ ದೇವಾಲಯ!

ಚಿತ್ರಕೃಪೆ: wikipedia

ಗಾಂಧಾರ ರಾಜ್ಯದ ರಾಜಕುಮಾರ ಹಾಗೂ ಗಾಂಧಾರಿಯ ಸಹೋದರನಾಗಿದ್ದ ಶಕುನಿಯು ಸೌಬಲ ಎಂಬ ಹೆಸರಿನ ರಾಜಕುಮಾರನೂ ಹೌದು. ಶಕುನಿಯನ್ನು ದ್ವಾಪರ ಯುಗಕ್ಕೆ ಹೋಲಿಸಲಾಗುತ್ತದೆ. ಅಂದರೆ ದ್ವಾಪರಯುಗವನ್ನು ಶಕುನಿಗೆ ವ್ಯಕ್ತೀಕರಣ ಮಾಡಲಾಗಿದೆ.

ಹಿಂದುಗಳು ಸಾಮಾನ್ಯವಾಗಿ ಮನುಷ್ಯನಲ್ಲಿರುವ ಒಳ್ಳೆಯ ಅಥವಾ ಸಾತ್ವಿಕ ಗುಣಗಳನ್ನು ಯಾವಾಗಲೂ ಪ್ರಶಂಸಿಸುತ್ತಾರೆ. ಅದರ ಒಂದು ಉದಾಹರಣೆಯಾಗಿ ಈ ದೇವಾಲಯವನ್ನು ಹೆಸರಿಸಬಹುದು. ತಾಮಸಿಕ ಸ್ವಭಾವದ ಶಕುನಿಯಲ್ಲಿ ಕೆಲವು ಸಾತ್ವಿಕ ಗುಣಗಳೂ ಸಹ ಹೇರಳವಾಗಿದ್ದವು. ಕೇರಳ ರಾಜ್ಯದಲ್ಲಿರುವ ಒಂದು ಸಮುದಾಯದವರು ಶಕುನಿಯ ಈ ಗುಣಗಳನ್ನು ಮೆಚ್ಚಿ ಅವನನ್ನು ಆರಾಧಿಸುತ್ತರೆ.

ಏನಾಶ್ಚರ್ಯ! ಶಕುನಿಗೂ ಇದೆ ದೇವಾಲಯ!

ಶಕುನಿಯ ದೇವಾಲಯ, ಚಿತ್ರಕೃಪೆ: Girishchavare

ಹೀಗಾಗಿ ಶಕುನಿಗೆ ಈ ದೇವಾಲಯ ಮುಡಿಪಾಗಿದೆ. ಈ ಶಕುನಿ ದೇವಾಲಯವು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ತಾಲೂಕಿನಲ್ಲಿರುವ ಪವಿತ್ರೇಶ್ವರಂ ಎಂಬ ಗ್ರಾಮದಲ್ಲಿ ಸ್ಥಿತವಿದೆ. ಕರುವರ ಎಂಬ ಸಮುದಾಯದವರಿಂದ ಈ ದೇವಾಲಯದ ನಿರ್ವಹಣೆ ಮಾಡಲಾಗುತ್ತದೆ. ಇಲ್ಲಿ ಸಿಂಹಾಸನವೊಂದಿದ್ದು ಅದು ಶಕುನಿಯ ಸಿಂಹಾಸನವೆಂದು ನಂಬಲಾಗುತ್ತದೆ. ಇಲ್ಲಿ ಯಾವುದೆ ಪೂಜಾ ವಿಧಿ ವಿಧಾನಗಳು ನಡೆಯುವುದಿಲ್ಲ.

ಶಕುನಿಗೆಂದು ಎಳೆನೀರು, ಕಳ್ಳು(ಸಾರಾಯಿ), ರೇಷ್ಮೆ ಮುಂತಾದವುಗಳನ್ನು ಅರ್ಪಿಸಲಾಗುತ್ತದೆ. ಶಕುನಿಯನ್ನು ಆರಾಧಿಸುವ ಇಲ್ಲಿನ ಕುರವ ಜನಾಂಗದವರು ನಂಬಿರುವಂತೆ ಮಹಾಭಾರತ ಯುದ್ಧದ ನಂತರ ಶಕುನಿಯು ಈ ದೇವಾಲಯ ಸ್ಥಿತವಿರುವ ಸ್ಥಳಕ್ಕೆ ಬಂದು ತಪಗೈದು ಶಿವನ ಕೃಪೆಯಿಂದ ಮೋಕ್ಷ ಹೊಂದಿ ಶಕುನಿ ಭಗವಂತನಾದನಂತೆ.

ಏನಾಶ್ಚರ್ಯ! ಶಕುನಿಗೂ ಇದೆ ದೇವಾಲಯ!

ಪವಿತ್ರೇಶ್ವರಂ ಮಹಾದೇವ ದೇವಾಲಯ, ಚಿತ್ರಕೃಪೆ: Vineshvputhoor

ಶಕುನಿಯನ್ನು ಹೊರತುಪಡಿಸಿ, ದೇವಿ ಭುವನೇಶ್ವರಿ, ಕಿರಾತ ಮೂರ್ತಿ ಹಾಗೂ ನಾಗರಾಜನಿಗೆ ಮುಡಿಪಾದ ಉಪಸನ್ನಿಧಿಗಳನ್ನೂ ಸಹ ಇಲ್ಲಿ ಕಾಣಬಹುದು. ಪ್ರಾಯಶಃ ಭಾರತದಲ್ಲಷ್ಟೆ ಅಲ್ಲ, ಪ್ರಪಂಚದಲ್ಲಿಯೆ ಶಕುನಿಗೆಂದು ಮುಡಿಪಾದ ಏಕೈಕ ದೇವಾಲಯ ಇದಾಗಿರುವುದರಿಂದ ಇಲ್ಲಿಗೆ ಭೇಟಿ ನೀಡಲು ಸಾಕಷ್ಟು ಜನರನ್ನು ಪ್ರೇರೇಪಿಸಬಹುದು. ನಿಮಗೂ ಇಚ್ಛೆಯಿದ್ದಲ್ಲಿ ಶಕುನಿಗೊಂದು "ವಿಸಿಟ್" ಕೊಟ್ಟು ಬಂದ್ಬಿಡಿ!

ತಾಯಿಯ ಅಪ್ಪಣೆಯಿಲ್ಲದೆ ಇಲ್ಲಿ ಹೋಗಲು ಸಾಧ್ಯವೆ ಇಲ್ಲ!

ಶಕುನಿಯಲ್ಲದೆ ಇಲ್ಲಿ ಇತರೆ ಕೆಲವು ದೇವಾಲಯಗಳೂ ಸಹ ಇದ್ದು ಗಮನಸೆಳೆಯುತ್ತವೆ. ಪವಿತ್ರೇಶ್ವರಂ ಮಹಾದೇವ ದೇವಾಲಯವೂ ಸಾಕಷ್ಟು ಗಮನಸೆಳೆವ ಹಾಗೂ ಶಿವನಿಗೆ ಮುಡಿಪಾದ ಗ್ರಾಮದ ಪ್ರಮುಖ ದೇವಾಲಯವಾಗಿದೆ. ಕೊಟ್ಟಾರಕ್ಕರ ಕೊಲ್ಲಂನಿಂದ 27 ಕಿ.ಮೀ ದೂರವಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ. ಇನ್ನೂ ಪವಿತ್ರೇಶ್ವರಂ ಕೊಟ್ಟಾರಕ್ಕರದಿಂದ ಕೇವಲ 15 ಕಿ.ಮೀ ಗಳಷ್ಟು ದೂರದಲ್ಲಿದೆ.

ಕೊಲ್ಲಂಗಿರುವ ರೈಲುಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X