Search
  • Follow NativePlanet
Share
» »ಬೇಸಿಗೆಯಲ್ಲಿ ಪ್ರವಾಸ ಮಾಡುವಾಗ ಈ 14ಸಾಮಗ್ರಿಗಳು ನಿಮ್ಮ ಜೊತೆಗಿರಲಿ

ಬೇಸಿಗೆಯಲ್ಲಿ ಪ್ರವಾಸ ಮಾಡುವಾಗ ಈ 14ಸಾಮಗ್ರಿಗಳು ನಿಮ್ಮ ಜೊತೆಗಿರಲಿ

By Manjula Balaraj Tantry

ಈ ಬೇಸಿಗೆ ರಜೆಯಲ್ಲಿ ರಸ್ತೆ ಮೂಲಕ ಪ್ರಯಾಣ ಮಾಡಲು ಬೇಕಾದ ಅವಶ್ಯಕ ವಸ್ತುಗಳನ್ನು ಇರಿಸಿಕೊಳ್ಳಬೇಕಾದುದರ ಬಗ್ಗೆ ಸ್ವಲ್ಪ ಗಮನ ಹರಿಸಬೇಕಾಗುವುದು. ರಸ್ತೆ ಮೂಲಕ ಪ್ರವಾಸವು ಅತ್ಯಂತ ಕುತೂಹಲಕಾರಿಯಾಗಿದ್ದು ಅದೂ ನಿಮ್ಮ ಸ್ನೇಹಿತರ ಜೊತೆಗಾದರೆ ಇನ್ನೂ ಆನಂದಕ್ಕೆ ಪಾರವೇ ವುದಿಲ್ಲ. ಆದರೆ ಪ್ರವಾಸ ಹೋಗುವ ಉತ್ಸಾಹದಲ್ಲಿ ನೀವು ನಿಮಗೆ ಬೇಕಾಗುವ ಕೆಲವು ಅವಶ್ಯಕ ವಸ್ತುಗಳನ್ನು ಮನೆಯಲ್ಲಿಯೇ ಬಿಡಬಾರದು. ರಸ್ತೆಯ ಮೂಲಕ ಪ್ರಯಾಣಿಸಬೇಕಾದಲ್ಲಿ ನೀವು ನಿಮಗೆ ಎಲ್ಲಾ ಸಂಧರ್ಭಗಳಲ್ಲೂ ಅನುಕೂಲವಾಗುವಂತಹ ಎಲ್ಲಾ ತರಹದ ತಯಾರಿಯನ್ನು ಮಾಡಿಕೊಳ್ಳಬೇಕು. ಆದುದರಿಂದ ರಸ್ತೆ ಮೂಲಕ ಪ್ರವಾಸ ಹೋಗುವವರು ತಮ್ಮಲ್ಲಿ ಯಾವ ಅವಶ್ಯಕವಾದ ವಸ್ತುಗಳನ್ನು ಇರಿಸಿಕೊಳ್ಳಬೇಕು ಎಂಬುದರ ಬಗ್ಗೆ ಇಲ್ಲಿ ಪಟ್ಟಿಯಿದೆ.

1. ಕಾರು ಕೈಪಿಡಿ

1. ಕಾರು ಕೈಪಿಡಿ

PC:Cameron Kirby

ಇದನ್ನು ಕೇಳುವುದಕ್ಕೆ ಸ್ವಲ್ಪ ಇಷ್ಟವಾಗದೇ ಇರಬಹುದು ಅಥವಾ ನೀವು ಇದನ್ನು ಉಪಯೋಗವಿಲ್ಲದೇ ಇರುವುದು ಎಂದು ಭಾವಿಸಬಹುದು ಆದರೆ ರಸ್ತೆ ಮೂಲಕ ಪ್ರವಾಸ ಮಾಡುವುದಾದರೆ ಇದು ಒಂದು ಅತ್ಯಂತ ಮುಖ್ಯವಾದ ವಸ್ತುವಾಗಿದೆ. ನೀವು ಗೊತ್ತಿರದೇ ಇರುವ ದೂರದ ಸ್ಥಳದಲ್ಲಿದ್ದು ಕಾರು ಸರಿಮಾಡುವ ಕೇಂದ್ರದ ಬಗ್ಗೆ ಮಾಹಿತಿ ಇಲ್ಲದೇ ಇರುವ ಪಕ್ಷದಲ್ಲಿ, ಈ ಕಾರಿನ ಕೈಪಿಡಿ(ಮ್ಯಾನ್ಯುಯಲ್) ನಿಮ್ಮ ಸಹಾಯಕ್ಕೆ ಬರುವ ಏಕೈಕ ವಸ್ತುವಾಗಿದೆ.

2. ವೈದ್ಯಕೀಯ ಕಿಟ್

2. ವೈದ್ಯಕೀಯ ಕಿಟ್

PC: pixabay

ವೈದ್ಯಕೀಯ ಕಿಟ್ ಇದೊಂದು ಅತ್ಯಂತ ಮುಖ್ಯವಾದ ವಸ್ತುವಾಗಿದ್ದು ಇದನ್ನು ನೀವು ನಿಮ್ಮೊಂದಿಗೆ ಯಾವಾಗಲೂ ಇರಿಸಿಕೊಳ್ಳಬೇಕಾದುದಾಗಿದೆ. ರೋಡ್ ಪ್ರವಾಸಕ್ಕೆ ಹೋಗುವುದರ ಮೊದಲು ನೀವು ನಿಮ್ಮ ಬ್ಯಾಗಿನ ತುಂಬಾ ಬ್ಯಾಂಡೇಜ್ ಗಳನ್ನು , ಆಂಟಿ ಬ್ಯಾಕ್ಟೀರಿಯಾದ ಕ್ರೀಂಗಳು, ನೋವು ನಿವಾರಕಗಳು, ಉದರ ಸಂಭಂಧಿ ಕಾಯಿಲೆಯ ಮಾತ್ರೆಗಳು ಮತ್ತು ಇನ್ನಿತರ ಮುಖ್ಯವಾದ ಮದ್ದುಗಳನ್ನು ಇರಿಸಿಕೊಳ್ಳುವುದು ಅತ್ಯವಶ್ಯಕ.

3. ಪ್ರಯಾಣ ವಿಮಾ ದಾಖಲೆಗಳು

3. ಪ್ರಯಾಣ ವಿಮಾ ದಾಖಲೆಗಳು

PC: pixabay

ನಿಮ್ಮ ಪ್ರಯಾಣಕ್ಕೆ ಮೊದಲೇ ಪ್ರಯಾಣಕ್ಕೆ ಸಂಬಂಧಿಸಿದ ವಿಮೆಯನ್ನು ಮಾಡಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ರಸ್ತೆ ಮೂಲಕ ಪ್ರಯಾಣಿಸುವಾಗ ಇದಕ್ಕೆ ಬೇಕಾದ ಎಲ್ಲಾ ಅವಶ್ಯಕವಾದ ದಾಖಲೆಗಳನ್ನು ನಿಮ್ಮ ಜೊತೆ ಒಯ್ಯಲು ಮರೆಯದಿರಿ. ಇದು ನಿಮಗೆ ಕೆಲವು ತುರ್ತು ಸಂಧರ್ಭದಲ್ಲಿ ಅನುಕೂಲಕ್ಕೆ ಬರುವುದು ಅಥವಾ ಕೆಲವು ಅಹಿತಕರ ಘಟನೆ ನಡೆದರೆ ಅಂತಹ ಸಂದರ್ಭಕ್ಕೆ ಅನುಕೂಲವಾಗುವುದು.

4. ಫೋನಿನ ಅವಶ್ಯಕ ವಸ್ತುಗಳು

4. ಫೋನಿನ ಅವಶ್ಯಕ ವಸ್ತುಗಳು

PC: pixabay

ಸ್ಮಾರ್ಟ್ ಫೋನಿನ ಯುಗವಾದ ಇಂದು ಜನರು ತಮ್ಮ ಎಲ್ಲಾ ಚಟುವಟಿಕೆಗಳಿಗೂ ಮೊಬೈಲ್ ಫೋನ್ ಅನ್ನು ಉಪಯೋಗಿಸುವುದು ಸರ್ವೇ ಸಾಮಾನ್ಯ. ಆದುದರಿಂದ ಚಾರ್ಚರ್ ಹೊರತಾಗಿ ಒಂದು ಜೊತೆಗೆ ಒಯ್ಯಬಹುದಾದ ಮೊಬೈಲ್ ಯು ಎಸ್ ಬಿ ಯನ್ನು ನೀವು ನಿಮ್ಮ ಪ್ರಯಾಣ ಮಾಡಬೇಕಾದಲ್ಲಿ ಜೊತೆಗೆ ಕೊಂಡೊಯ್ಯುವ ಪಟ್ಟಿಯಲ್ಲಿ ಸೇರಿಸ ಬೇಕಾದ ಇನ್ನೊಂದು ಪ್ರಮುಖ ವಸ್ತುವಾಗಿದೆ. ನೀವು ಚಾಲನೆ ಮಾಡುವಾಗ ರಸ್ತೆಗಳನ್ನು ಪತ್ತೆ ಹಚ್ಚಲು ಜಿಪಿಎಸ್ ಮೌಂಟ್ ನಿಮಗೆ ಸಹಾಯ ಮಾಡುತ್ತದೆ.

5. ನೀರು ಮತ್ತು ಆಹಾರ

5. ನೀರು ಮತ್ತು ಆಹಾರ

PC: Dmitry Mashkin

ಪ್ರವಾಸದ ಸಮಯದಲ್ಲಿ, ಹೋಟೇಲುಗಳಾಗಲಿ, ಯಾವುದೇ ಅಂಗಡಿಗಳಾಗಲಿ ಅಥವಾ ಉತ್ತಮ ಗುಣಮಟ್ಟದ ಸ್ವಚ್ಚ ವಾಗಿರುವ ಆಹಾರ ಅಥವಾ ಧಾನ್ಯಗಳು ನಿಮಗೆ ಸಿಗದೇ ಇರುವ ಸ್ಥಳಗಳಲ್ಲಿ ನೀವು ಪ್ರಯಾಣಿಸಬೇಕಾಗಬಹುದು ಅಲ್ಲದೆ ನಿಮ್ಮ ರಸ್ತೆ ಮೂಲಕ ಪ್ರಯಾಣದ ಸಮಯದಲ್ಲಿ ಆರೋಗ್ಯಕರವಲ್ಲದ ಆಹಾರಗಳನ್ನು ಸೇವಿಸುವುದು ನಿಮಗೆ ಒಳ್ಳೆಯದಲ್ಲವಾದುದರಿಂದ ನೀರು ಮತ್ತು ಆಹಾರವನ್ನು ನಿಮ್ಮ ಜೊತೆಗೆ ಕೊಂಡೊಯ್ದರೆ ನಿಮ್ಮನ್ನು ಬಾಯಾರಿಕೆ ಮತ್ತು ಹಸಿವಿನಿಂದ ಪಾರು ಮಾಡಬಹುದಾಗಿದೆ.

6. ಛತ್ರಿ

6. ಛತ್ರಿ

PC: pixabay

ನೀವು ಪ್ರಯಾಣ ಮಾಡುವಾಗ ಕೆಲವು ವಿಭಿನ್ನ ಹವಾಗುಣಗಳನ್ನು ಅನುಭವಿಸಬೇಕಾಗಬಹುದು ಅಥವಾ ಅಚಾನಕವಾಗಿ ಮಳೆಯನ್ನು ಎದುರಿಸಬೇಕಾಗಬಹುದು. ನಿಮ್ಮಲ್ಲಿ ಛತ್ರಿ ಅಥವಾ ರೈನ್ ಕೋಟ್ ನಿಮ್ಮಲ್ಲಿ ಹೊಂದಿದ್ದರೆ ನಿಮ್ಮ ಕಾರನ್ನು ಎಲ್ಲಾದರೂ ಸುರಕ್ಷಿತ ಸ್ಥಳಗಳಲ್ಲಿ ನಿಲ್ಲಿಸಿ ಕೆಲವು ಜಾಗದಲ್ಲಿ ನಿಮಗೆ ಬೇಕಾದಲ್ಲಿ ಆಶ್ರಯ ಪಡೆಯಬಹುದಾಗಿದೆ.

7.ಟಾರ್ಚ್

7.ಟಾರ್ಚ್

PC: pixabay

ನಿಮ್ಮ ಪ್ರವಾಸದ ಸಂದರ್ಭಗಳಲ್ಲಿ ಅನೇಕ ಲೆಕ್ಕವಿಲ್ಲದಷ್ಟು ಸನ್ನಿವೇಶಗಳನ್ನು ಎದುರಿಸಬೇಕಾಗಬಹುದು ಆದುದರಿಂದ ಟಾರ್ಚ್ ಇದು ಇನ್ನೊಂದು ನೀವು ನಿಮ್ಮೊಂದಿಗೆ ಒಯ್ಯಲು ಮರೆಯಲೇ ಬಾರದಂತಹ ಇನ್ನೊಂದು ಅತ್ಯಂತ ಮುಖ್ಯವಾದ ವಸ್ತುವಾಗಿದೆ. ನಿಮ್ಮ ಜೊತೆಯಲ್ಲಿ ಟಾರ್ಚಿಗಾಗಿ ನೀವು ಹೆಚ್ಚುವರಿ ಬ್ಯಾಟರಿಗಳನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ ಇದರಿಂದಾಗಿ ಚಾರ್ಜ್ ಮಾಡುವ ಸಮಸ್ಯೆಯಿಂದ ಪಾರಾಗಬಹುದು.

8. ನೋಟ್ ಪುಸ್ತಕ ಮತ್ತು ಪೆನ್

8. ನೋಟ್ ಪುಸ್ತಕ ಮತ್ತು ಪೆನ್

PC: pixabay

ರಸ್ತೆ ಮೂಲಕ ಪ್ರವಾಸದ ಸಂಧರ್ಭಗಳಲ್ಲಿ ನಿಮ್ಮ ದಾರಿಯಲ್ಲಿ ಬರುವ ಕೆಲವು ವಿಷಯಗಳನ್ನು ಅಥವಾ ಮಾಹಿತಿಗಳನ್ನು ಗುರುತಿಸಿಕೊಳ್ಳಲು ಈ ಎರಡು ವಸ್ತುಗಳು ನಿಮಗೆ ಉಪಯೋಗಕ್ಕೆ ಬರುವುದು. ಆದುದರಿಂದ ಯಾವಾಗಲಾದರೂ ರಸ್ತೆ ಪ್ರವಾಸ ಮಾಡುವ ಸಂಧರ್ಭಗಳಲ್ಲಿ ಈ ಅವಶ್ಯಕ ವಸ್ತುಗಳನ್ನು ನಿಮ್ಮ ಪ್ರಯಾಣದ ಅವಶ್ಯಕ ಸಾಮಗ್ರಿಗಳೊಂದಿಗೆ ಇರಿಸುವುದಕ್ಕೆ ಮರೆಯದಿರಿ.

9. ಮ್ಯೂಸಿಕ್

9. ಮ್ಯೂಸಿಕ್

PC:pixabay

ನಿಮ್ಮ ಕಾರಿನಲ್ಲಿ ರೇಡಿಯೋ ಇರುವಾಗ ಈ ಮ್ಯೂಸಿಕ್ ಪ್ಲೇಯನ್ನು ಏಕೆ ಇರಿಸಿಕೊಳ್ಳಬೇಕೆಂದು ಆಶ್ಚರ್ಯಪಡುತ್ತಿರುವಿರಾ? ಹೌದು ರೇಡಿಯೋ ನಿಮ್ಮನ್ನು ಕೆಲವು ಗಂಟೆಗಳ ಕಾಲ ಮಾತ್ರ ಮನೋರಂಜಿಸಬಹುದು ಮತ್ತು ನೀವು ಕೆಲವು ಸ್ಥಳಗಳಲ್ಲಿ ಪ್ರಯಾಣಿಸುವಾಗ ಈ ಮ್ಯೂಸಿಕ್ ಕೇಂದ್ರಗಳಿಂದ ಅಸ್ಪಸ್ಟವಾಗಿ ಸಂಗೀತ ಕೇಳಿಬರಬಹುದು. ಆದುದರಿಂದ ನೀವು ನಿಮ್ಮೊಂದಿಗೆ ಸಂಗೀತದ ಪ್ಲೇ ಪಟ್ಟಿಯನ್ನು ನಿಮ್ಮೊಂದಿಗೆ ಒಯ್ಯುವುದು ಒಳಿತು. ಇದರಿಂದಾಗಿ ಡ್ರೈವಿಂಗ್ ಸಮಯದಲ್ಲಿ ನಿರಂತರವಾಗಿ ಸಂಗೀತ ಕೇಳಬಹುದಾಗಿದೆ.

10. ಹ್ಯಾಂಡ್ (ಕೈ) ಸ್ಯಾನಿಟೈಸರ್

10. ಹ್ಯಾಂಡ್ (ಕೈ) ಸ್ಯಾನಿಟೈಸರ್

PC:pixabay

ಸಾರ್ವಜನಿಕ ಜಾಗಗಳು ಕೀಟಾಣುಗಳಿಗೆ ಒಂದು ಸೂಕ್ತವಾದ ಜಾಗವಾಗಿರುತ್ತದೆ ಆದುದರಿಂದ ಹ್ಯಾಂಡ್ ಸ್ಯಾನಿಟೈಸರ್ ಅನ್ನು ನಿಮ್ಮೊಂದಿಗೆ ನಿಮ್ಮ ಪ್ರವಾಸಿ ಕಿಟ್ ನೊಳಗೆ ಇರಿಸಿಕೊಳ್ಳುವುದನ್ನು ಮರೆಯಲೇ ಬಾರದಂತಹ ವಸ್ತುವಾಗಿದ್ದು ಇದು ಕೀಟಾಣುಗಳಿಂದ ರಕ್ಷಣೆ ನೀಡುತ್ತದೆ. ನಿಮ್ಮ ಸುತ್ತ ಮುತ್ತಲಿರುವ ಸೋಂಕು ನಿವಾರಣೆಗೆ ಸಹಾಯಮಾಡುವ ಕೆಲವು ರೋಗ ನಿರೋಧಕ ಒರೆಸುವ ಬಟ್ಟೆಗಳನ್ನು ಕೂಡಾ ನಿಮ್ಮೊಂದಿಗೆ ಒಯ್ಯಬಹುದು.

11.ಸೊಳ್ಳೆ ನಿವಾರಕ ಅಥವಾ ತಿಗಣೆ ನಿವಾರಕ ಸ್ಪ್ರೇ

11.ಸೊಳ್ಳೆ ನಿವಾರಕ ಅಥವಾ ತಿಗಣೆ ನಿವಾರಕ ಸ್ಪ್ರೇ

PC:Perfect Dude

ಸೊಳ್ಳೆ ಅಥವಾ ಯಾವುದೇ ಕೀಟಗಳು ನಿಮ್ಮ ಸುಂದರವಾಗಿ ಆಯೋಜಿಸಲ್ಪಟ್ಟ ರಸ್ತೆ ಪ್ರವಾಸದಲ್ಲಿ ಬಾಧೆಯನ್ನುಂಟು ಮಾಡಬಹುದು ಅದೂ ಬೇಸಿಗೆ ಕಾಲದಲ್ಲಿ ಸೂರ್ಯಾಸ್ತದ ನಂತರ ಆದುದರಿಂದ ಸೊಳ್ಳೆ ನಿವಾರಕ ಅಥವಾ ತಿಗಣೆ ಸ್ಪ್ರೇಯನ್ನು ಇಟ್ಟು ಕೊಳ್ಳುವುದೂ ಸೂಕ್ತ ಆದರೆ ಇದನ್ನು ಸ್ವಲ್ಪ ಬೇರೆ ಜಾಗದಲ್ಲಿ ನಿಮ್ಮಿಂದ ದೂರದಲ್ಲಿಇಟ್ಟುಕೊಳ್ಳಬೇಕು.

12. ನಕ್ಷೆಗಳು

12. ನಕ್ಷೆಗಳು

PC: rawpixel.com

ನೀವು ನಿಮ್ಮೊಂದಿಗೆ ನಿಮ್ಮ ಜಿಪಿಎಸ್ ಅನ್ನು ಒಯ್ದರೂ ಕೂಡಾ ಒಂದು ನಕ್ಷೆಯ ಪ್ರತಿಯನ್ನು ನಿಮ್ಮೊಂದಿಗೆ ಒಯ್ದರೆ ಇನ್ನೂ ಒಳಿತು. ಇದು ನಿಮ್ಮ ರಸ್ತೆ ಪ್ರವಾಸದಲ್ಲಿ ಅವಶ್ಯಕವಿದ್ದಲ್ಲಿ ಮಾರ್ಗದರ್ಶನ ಮಾಡುತ್ತದೆ. ಕೆಲವು ಜಾಗಗಳಲ್ಲಿ ಗೂಗಲ್ ನಕ್ಷೆಯ ಅಥವಾ ಜಿಪಿಎಸ್ ನ ಸೇವೆಯು ಸಿಗುವುದಿಲ್ಲ ಅಥವಾ ಮೊಬೈಲ್ ನ ಸಂಪರ್ಕವೂ ಇರುವುದಿಲ್ಲ. ಇಂತಹ ಸಮಯದಲ್ಲಿ ಈ ನಕ್ಷೆಯು ನಿಮ್ಮ ಸಹಾಯಕ್ಕೆ ಬರುತ್ತದೆ.

13.ಹಣ/ ದುಡ್ಡು

13.ಹಣ/ ದುಡ್ಡು

PC: pixabay

ನಿಮ್ಮಲ್ಲಿ ಹಣವನ್ನು ಇಟ್ಟು ಕೊಳ್ಳುವುದು ಯಾವತ್ತಿಗೂ ಒಳಿತು ಮತ್ತು ನಿಮ್ಮ ರಸ್ತೆ ಪ್ರವಾಸದಲ್ಲಿ ಇದು ಇನ್ನೂ ಉಪಯೋಗಕ್ಕೆ ಬರುವಂತಹ ವಿಷಯವಾಗಿದೆ. ಕೆಲವು ಒಳ ಪ್ರದೇಶ ಅಥವಾ ದೂರದ ಪ್ರದೇಶಗಳಲ್ಲಿ ಎಟಿಎಂ ಅನುಕೂಲವು ಇರದೇ ಇರಬಹುದು ಆದುದರಿಂದ ಇಂತಹ ಸಮಯದಲ್ಲಿ ನಿಮ್ಮ ಹತ್ತಿರ ಹಣವನ್ನು ಇಟ್ಟುಕೊಂಡರೆ ನಿಮಗೆ ಅನುಕೂಲವಾಗುವುದು. ಹೀಗೆ ಹಣ ಇಟ್ಟುಕೊಳ್ಳುವುದರಿಂಡ ನೀವು ಕೆಲವು ಅಗತ್ಯವಾದ ಬಿಲ್ಲುಗಳಾದ ಟೋಲ್ ಟ್ಯಾಕ್ಸ್, ಪಾರ್ಕಿಂ ಮೀಟರ್ ಗಳು ಮತ್ತು ಇನ್ನಿತರ ಹಣಗಳನ್ನು ಭರಿಸಬಹುದಾಗಿದೆ.

14. ಗಾರ್ಬೇಜ್ ಚೀಲ

14. ಗಾರ್ಬೇಜ್ ಚೀಲ

PC:pixabay

ಒಮ್ಮೆ ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪಿದಲ್ಲಿ, ನಿಮ್ಮ ಕಾರನ್ನು ಸ್ವಚ್ಛಗೊಳಿಸುವುದು ಒಂದು ದೊಡ್ಡ ಕೆಲಸವಾಗಿದೆ . ಆದುದರಿಂದ ನಿಮ್ಮೊಂದಿಗೆ ಗಾರ್ಬೇಜ್ ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗುವುದರಿಂದ ಬೇಡದೇ ಇರುವ ವಸ್ತುಗಳನ್ನು ಇದರೊಳಗೆ ಬಿಸಾಡಬಹುದು ಮತ್ತು ಇದನ್ನು ಸೂಕ್ತವಾದ ತ್ಯಾಜ್ಯಗಳನ್ನು ಬಿಡುವ ಜಾಗದಲ್ಲಿ ಹಾಕಲು ಅನುಕೂಲವಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X