Search
  • Follow NativePlanet
Share
» »600 ಮೀಟರ್ ಒಳಗೆ ಪ್ರವೇಶಿಸಬೇಕು ಬೀದರ್‍ನ ಈ ಮಾಹಿಮಾನ್ವಿತ ದೇವಾಲಯಕ್ಕೆ!!

600 ಮೀಟರ್ ಒಳಗೆ ಪ್ರವೇಶಿಸಬೇಕು ಬೀದರ್‍ನ ಈ ಮಾಹಿಮಾನ್ವಿತ ದೇವಾಲಯಕ್ಕೆ!!

ನಮ್ಮ ಕರ್ನಾಟಕದ ಬೀದರ್‍ನಲ್ಲಿ ಒಂದು ಆಶ್ಚರ್ಯಕರವಾದ ದೇವಾಲಯವಿದೆ. ಅದೆನೆಂದರೆ 600 ಮೀಟರ್ ಒಳಭಾಗದಲ್ಲಿ ಒಂದು ನೀರಿನ ಮಧ್ಯೆ ಪ್ರಯಾಣ ಮಾಡಿದರೆ ಮಾಹಿಮಾನ್ವಿತವಾದ ದೇವತ ಮೂರ್ತಿ ದೊರೆಯುತ್ತದೆ.

ಬೀದರ್ ... ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ಸರಿಹದ್ದು ಪ್ರದೇಶದಲ್ಲಿ ಇರುವ ಒಂದು ಜಿಲ್ಲೆ. ಮುಸ್ಲಿಂ ಪ್ರಾಬಲ್ಯ ಅಧಿಕವಾಗಿ ಇರುವ ಜಿಲ್ಲೆಗಳಲ್ಲಿ ಇದು ಒಂದು. ಹಿಂದೊಮ್ಮೆ ಹೈದ್ರಾಬಾದ್ ರಾಜ್ಯದಲ್ಲಿ ಇದ್ದ ಈ ಜಿಲ್ಲೆಯು, ನವೆಂಬರ್ 1, 1956 ರಲ್ಲಿ ಮೈಸೂರಿಗೆ ಸೇರಿತು. ಈ ಬೀದರ್ ಜಿಲ್ಲೆಯಲ್ಲಿ ಕನ್ನಡ, ತೆಲುಗು ಹಾಗು ಮರಾಠಿ ಭಾಷೆಯನ್ನು ಕೂಡ ಮಾತಾನಾಡುತ್ತಾರೆ.

ಚರಿತ್ರೆಯ ಪ್ರಕಾರ ಬಹುಮನಿ ಸುಲ್ತಾನ್ ಅಹ್ಮದ್ ಷಾ ಬೀದರ್ ಅನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದನು. ಇಲ್ಲಿಯೇ ಒಂದು ಅಪೂರ್ವವಾದ ಕೋಟೆಯನ್ನು ನಿರ್ಮಿಸಿಕೊಂಡು, ನಿವಾಸವಿದ್ದು ಬಹುಮನಿ ರಾಜ್ಯವನ್ನು ಪಾಲಿಸಿದನು. ಹೈದ್ರಾಬಾದ್ ಸಮೀಪದಲ್ಲಿನ ಒಂದು ಚಾರಿತ್ರಿಕವಾದ ಪ್ರದೇಶ ಬೀದರ್ ಆಗಿದೆ.

ಹೈದ್ರಾಬಾದ್‍ನಿಂದ ಬೀದರ್‍ಗೆ ಸುಮಾರು 140 ಕಿ,ಮೀ ದೂರ ಹಾಗೂ ಬೆಂಗಳೂರಿನಿಂದ 690 ಕಿ,ಮೀ ದೂರದಲ್ಲಿದೆ. ನಮ್ಮ ಕರ್ನಾಟಕದ ಬೀದರ್‍ನಲ್ಲಿ ಒಂದು ಆಶ್ಚರ್ಯಕರವಾದ ದೇವಾಲಯವಿದೆ. ಅದೆನೆಂದರೆ 600 ಮೀಟರ್ ಒಳಭಾಗದಲ್ಲಿ ಒಂದು ನೀರಿನ ಮಧ್ಯೆ ಪ್ರಯಾಣ ಮಾಡಿದರೆ ಮಾಹಿಮಾನ್ವಿತವಾದ ದೇವತ ಮೂರ್ತಿ ದೊರೆಯುತ್ತದೆ.

ಆ ದೇವಾಲಯದ ಬಗ್ಗೆ ಲೇಖನದ ಮೂಲಕ ತಿಳಿಯೋಣ.

ಝರಣಿ ನರಸಿಂಹ ಕ್ಷೇತ್ರ

ಝರಣಿ ನರಸಿಂಹ ಕ್ಷೇತ್ರ

ನಮ್ಮ ಭಾರತ ದೇಶವು ಅಧ್ಯಾತ್ಮಿಕವಾದ ನಿಲಯವಾಗಿದೆ. ನಮ್ಮ ಮನಸ್ಸು ಪ್ರಶಾಂತವಾಗಿ ಇರಬೇಕು ಎಂದರೆ ದೇವಾಲಯಕ್ಕೆ ಆಗಾಗ ತೆರಳುತ್ತಿರುತ್ತೇವೆ. ಅಂತಹ ಕ್ಷೇತ್ರಗಳಲ್ಲಿ ಒಂದು. ನೀವೂ ತಪ್ಪದೇ ಭೇಟಿ ನೀಡಲೇಬೇಕಾದ ದೇವಾಲಯವೆಂದರೆ ಅದು ಝರಣಿ ನರಸಿಂಹ ಕ್ಷೇತ್ರ.

ಈ ಕ್ಷೇತ್ರದಲ್ಲಿನ ಸ್ವಾಮಿಯು ಎಂದಿನಿಂದ ನೆಲೆಸಿದ್ದಾರೆ?

ಈ ಕ್ಷೇತ್ರದಲ್ಲಿನ ಸ್ವಾಮಿಯು ಎಂದಿನಿಂದ ನೆಲೆಸಿದ್ದಾರೆ?

ಕ್ರಿ.ಪೂ 400 ಕ್ಕಿಂತ ಈ ಕ್ಷೇತ್ರದಲ್ಲಿ ಸ್ವಾಮಿ ನರಸಿಂಹನು ನೆಲೆಸಿದ್ದಾನೆ ಎಂದು ಹೇಳುತ್ತಿರುತ್ತಾರೆ. ನಮ್ಮ ದೇಶದ ಎಲ್ಲಾ ದೇವಾಲಯಗಳಿಗಿಂತ ಈ ದೇವಾಲಯವು ಅತ್ಯಂತ ವಿಶೇಷತೆಯನ್ನು ಹೊಂದಿದೆ. ಅದೆನೆಂದರೆ....

ದೇವಾಲಯ ಎಲ್ಲಿದೆ?

ದೇವಾಲಯ ಎಲ್ಲಿದೆ?

ಈ ದೇವಾಲಯದ ಸುತ್ತಲೂ ಪರ್ವತಗಳು, ಪ್ರಶಾಂತವಾದ ವಾತಾವರಣವಿದ್ದು ಹಲವಾರು ಪ್ರವಾಸಿಗರಿಗೆ ಇಷ್ಟವಾಗುವ ತಾಣವಾಗಿದೆ. ಈ ದೇವಾಲಯವು ಕರ್ನಾಟಕ ರಾಜ್ಯದಲ್ಲಿನ ಬೀದರ್ ಜಿಲ್ಲೆಗೆ ಸಮೀಪದಲ್ಲಿನ ಮಂಗಳ ಪೇಟ್ ಎಂಬಲ್ಲಿ ಈ ನರಸಿಂಹ ಸ್ವಾಮಿ ಕ್ಷೇತ್ರವಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಒಂದು ಗುಹೆಯಲ್ಲಿ ಜನರು ಹರಿಯುತ್ತಿರುವ ನೀರಿನ ಆಳದಲ್ಲಿ ಇಳಿದು 600 ಮೀಟರ್ ನಡೆದುಕೊಂಡು ಗರ್ಭಗುಡಿಯಲ್ಲಿ ನೆಲೆಸಿರುವ ಝರಣಿ ನರಸಿಂಹಸ್ವಾಮಿಯನ್ನು ದರ್ಶನ ಮಾಡಿಕೊಳ್ಳಬೇಕು.

ಜಲ ನರಸಿಂಹ ಸ್ವಾಮಿ ದೇವಾಲಯ

ಜಲ ನರಸಿಂಹ ಸ್ವಾಮಿ ದೇವಾಲಯ

ಈ ದೇವಾಲಯವನ್ನು ಜಲ ನರಸಿಂಹ ಸ್ವಾಮಿ ಎಂದೂ ಸಹ ಕರೆಯುತ್ತಾರೆ. ಹೀಗೆ ಕರೆಯಲು ಕಾರಣವೆನೆಂದರೆ ನರಸಿಂಹ ಸ್ವಾಮಿಯ ಪಾದ ಕಮಲದಿಂದ ನೀರು ಪ್ರವಹಿಸುವ ಕಾರಣವಾಗಿ ಸ್ವಾಮಿಯನ್ನು ಜಲ ನರಸಿಂಹ ಸ್ವಾಮಿ ದೇವಾಲಯವೆಂದು ಕರೆಯುತ್ತಾರೆ.

ಪುರಾಣಗಳ ಪ್ರಕಾರ

ಪುರಾಣಗಳ ಪ್ರಕಾರ

ಆದರೆ ಸ್ಥಳ ಪುರಾಣಗಳ ಪ್ರಕಾರ ಈ ಗುಹೆಯಲ್ಲಿ ಶಿವನ್ನು ತಪಸ್ಸು ಮಾಡುವ ಸಮಯದಲ್ಲಿ ಜಲಾಸುರ ಎಂಬ ರಾಕ್ಷಸನು ಆತನ ತಪ್ಪಸ್ಸನ್ನು ಭಗ್ನ ಮಾಡಲು ಬರುತ್ತಾನೆ. ಆ ಸಮಯದಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಯು ಸಂಹಾರ ಮಾಡಲು ಮುಂದದಾಗ ತನ್ನ ಕೊನೆಯ ಕೋರಿಕೆಯನ್ನು ಸ್ವಾಮಿಯ ಬಳಿ ಕೇಳಿಕೊಳ್ಳುತ್ತಾನೆ. ಆ ಕೋರಿಕೆಯೇ ಸ್ವಾಮಿಯ ಪಾದದ ಮೇಲೆ ನೀರಾಗಿ ಪ್ರವಹಿಸುತ್ತಿರುವುದು.

ಜಲ ನರಸಿಂಹ ಎಂಬ ಹೆಸರು ಹೇಗೆ ಬಂದಿತು?

ಜಲ ನರಸಿಂಹ ಎಂಬ ಹೆಸರು ಹೇಗೆ ಬಂದಿತು?

ಜಲಾಸುರ ತನ್ನ ಹೆಸರನ್ನು ಬಳಸಿ ಈ ಕ್ಷೇತ್ರವನ್ನು ಭಕ್ತರು ಕರೆಯಬೇಕು ಎಂದು ಸ್ವಾಮಿಯ ಬಳಿ ವಿನಂತಿ ಮಾಡಿಕೊಂಡದ್ದರಿಂದ ಈ ಪುಣ್ಯ ಕ್ಷೇತ್ರವನ್ನು ಜಲ ನರಸಿಂಹಸ್ವಾಮಿ ಎಂದು ಹೆಸರು ಬಂದಿತು.

ಜಲಾಸುರ

ಜಲಾಸುರ

ಈ ಗುಹೆಯಲ್ಲಿ ಶಿವನು ತಪ್ಪಸ್ಸು ಮಾಡುವಾಗ "ಜಲಾಸುರ" ಎಂಬುವ ರಾಕ್ಷಸನು ಶಿವನ್ನು ನಿಂದಿಸುತ್ತಿದ್ದನಂತೆ.

ಲಕ್ಷ್ಮಿ ನರಸಿಂಹ ಸ್ವಾಮಿ

ಲಕ್ಷ್ಮಿ ನರಸಿಂಹ ಸ್ವಾಮಿ

ಆಗ ಲಕ್ಷ್ಮಿ ನರಸಿಂಹ ಸ್ವಾಮಿ ಬಂದು ಜಲಾಸುರನನ್ನು ಸಂಹರಿಸಿದನಂತೆ. ಜಲಾಸುರ ಕೆಲವು ಪುಣ್ಯಫಲಗಳು ಹೊಂದಿದ್ದರಿಂದ ಯಾವುದಾದರೂ ಒಳ್ಳೆಯ ಬೇಡಿಕೆಯನ್ನು ಬೇಡಿಕೊ ತೀರಿಸುತ್ತೇನೆ ಎಂದು ಹೇಳುತ್ತಾನೆ ನರಸಿಂಹಸ್ವಾಮಿ.

ಜಲಾನರಸಿಂಹ

ಜಲಾನರಸಿಂಹ

ಅದಕ್ಕೆ ಜಲಾಸುರನು ನೀನು ಇಲ್ಲಿ ನೆಲೆಸಬೇಕು. ನಿನ್ನನ್ನು ನನ್ನ ಹೆಸರನ್ನು ಸೇರಿಸಿ ಭಕ್ತರು ಕರೆಯಬೇಕು ಎಂದು ಕೇಳಿಕೊಳ್ಳುತ್ತಾನೆ. ಆಗ ಜಲಾಸುರ ಕೋರಿದ ಕೋರಿಕೆಯಂತೆಯೇ ನರಸಿಂಹ ಸ್ವಾಮಿಯು ನೆಲಸಿ ಜಲಾನರಸಿಂಹಸ್ವಾಮಿ ಎಂದು ಪ್ರಸಿದ್ಧಿ ಪಡೆದನು.

ಸ್ವಯಂ ಭೂ

ಸ್ವಯಂ ಭೂ

ಈ ಜಲಾನರಸಿಂಹ ಸ್ವಾಮಿಯು ಸ್ವಯಂ ಭೂ ದೇವತಾ ವಿಗ್ರಹವಾಗಿದೆ. ಈ ನರಸಿಂಹನು ಬಂದ ಭಕ್ತರನ್ನು ಸಲಹುವ ಮಾಹಿಮಾನ್ವಿತ ಮೂರ್ತಿಯಾಗಿದ್ದಾನೆ.

ದರ್ಶನ ಹೇಗೆ ಮಾಡಬೇಕು?

ದರ್ಶನ ಹೇಗೆ ಮಾಡಬೇಕು?

ಜಲಾ ಎಂದರೆ ನೀರು, ನರಸಿಂಹ ಸ್ವಾಮಿಯ ಪಾದಗಳಿಂದ ನೀರು ಆ ಗುಹೆಯಲ್ಲಿ ಪ್ರವಹಿಸುತ್ತದೆ. ಹೀಗೆ 600 ಮೀಟರ್ ಒಳಗೆ ನೀರಿನ ಮಧ್ಯೆ ಪ್ರಯಾಣ ಮಾಡಿದರೆ ಮಾತ್ರ ನರಸಿಂಹ ಸ್ವಾಮಿಯ ದರ್ಶನವನ್ನು ನೀವು ಪಡೆಯಬಹುದು.

ಬೆಂಗಳೂರಿನಿಂದ ಎಷ್ಟು ದೂರದಲ್ಲಿದೆ?

ಬೆಂಗಳೂರಿನಿಂದ ಎಷ್ಟು ದೂರದಲ್ಲಿದೆ?

ಈ ಜಲಾನರಸಿಂಹ ಸ್ವಾಮಿಯ ದೇವಾಲಯವು ಕರ್ನಾಟಕದ ಬೀದರ್ ಜಿಲ್ಲೆಯಲ್ಲಿದೆ. ಬೆಂಗಳೂರಿನಿಂದ ಈ ದೇವಾಲಯಕ್ಕೆ ಸುಮಾರು 670 ಕಿ.ಮೀ ದೂರದಲ್ಲಿದೆ.

ಸಮೀಪದ ವಿಮಾನ ನಿಲ್ದಾಣ?

ಸಮೀಪದ ವಿಮಾನ ನಿಲ್ದಾಣ?

ಮಾಹಿಮಾನ್ವಿತ ಜಲಾನರಸಿಂಹ ಸ್ವಾಮಿ ದೇವಾಲಯಕ್ಕೆ ತೆರಳಲು ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಹೈದ್ರಾಬಾದ್ ವಿಮಾನ ನಿಲ್ದಾಣವಾಗಿದೆ.

ರೈಲ್ವೆ ಸ್ಟೇಷನ್

ರೈಲ್ವೆ ಸ್ಟೇಷನ್

ಈ ದೇವಾಲಯಕ್ಕೆ ತೆರಳಲು ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಬೀದರ್ ರೈಲ್ವೆ ನಿಲ್ದಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X