Search
  • Follow NativePlanet
Share
» »ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಮಾನ್ಸೂನ್ ಆನಂದವನ್ನು ಅನುಭವಿಸಿ

ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಮಾನ್ಸೂನ್ ಆನಂದವನ್ನು ಅನುಭವಿಸಿ

By Manjula Balaraj Tantry

ಭಾರತದಲ್ಲಿ ಮಾನ್ಸೂನ್ ಅದೂ ವಿಶೇಷವಾಗಿ ಕರ್ನಾಟಕದಲ್ಲಿ ಒಂದು ವಿದ್ಯಾಮಾನದಂತೆ ಆಗಿದೆ. ಪಶ್ಚಿಮ ಘಟ್ಟಗಳ ನೈಸರ್ಗಿಕ ಸಂಪತ್ತುಗಳು ಮತ್ತು ಇಲ್ಲಿಗೆ ಹತ್ತಿರದಲ್ಲಿ ವಾಸಿಸುವ ಜನರಿಗೆ ಮಾನ್ಸೂನ್ ಮಳೆಗಾಲವು ಒಂದು ವಿಶಿಷ್ಟವಾದ ಭಾವನೆಯನ್ನು ಮೂಡಿಸುತ್ತದೆ. ಪಶ್ಚಿಮ ಕರಾವಳಿಯುದ್ದಕ್ಕೂ ಭಾರತದ ದಕ್ಷಿಣದ ಪರ್ಯಾಯ ದ್ವೀಪವು ಪರ್ವತ ಶ್ರೇಣಿಗಳ ದೀರ್ಘ ಪರ್ವತವನ್ನು ಹೊಂದಿದೆ. ಇದನ್ನೇ ಪಶ್ಚಿಮ ಘಟ್ಟವೆಂದು ಕರೆಯಲಾಗುತ್ತದೆ.ಈ ಪರ್ವತ ಶ್ರೇಣಿಗಳು ಮಾನ್ಸೂನ್ ಮಳೆಗಾಲದಲ್ಲಿ ಟ್ರಕ್ಕಿಂಗ್ ಮಾಡಲು ಕರ್ನಾಟಕ ಸೂಕ್ತವಾದ ಸ್ಥಳಗಳಾಗಿವೆ. ಮತ್ತು ಇದರಲ್ಲಿರುವ ಕಾಡುಗಳು ಮಳೆಯನ್ನು ಸಂಗ್ರಹಿಸುವ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತವೆ. ಇದನ್ನು ಇತ್ತೀಚೆಗೆ ಯುನೆಸ್ಕೋ ವಿಶ್ವಪರಂಪರೆಯ ತಾಣಗಳಲ್ಲೊಂದೆಂದು ಘೋಷಿಸಲಾಗಿದೆ.

ಆಗುಂಬೆಯ ರೈನ್ ಫಾರೆಸ್ಟ್ ರಿಸರ್ವ್‌ ಸ್ಟೇಶನ್

ಆಗುಂಬೆಯ ರೈನ್ ಫಾರೆಸ್ಟ್ ರಿಸರ್ವ್‌ ಸ್ಟೇಶನ್

Shashidhara halady

ಆಗುಂಬೆಯು ಕರ್ನಾಟಕದಲ್ಲಿಯ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಭಾರತದ ಎರಡನೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಈ ಅರಣ್ಯಗಳ ಒಳಗೆ ನೀವು ಸ್ಥಳೀಯ ಸರೀಸೃಪ ಜಾತಿಗಳಾದ (ಕಾಳಿಂಗ ಸರ್ಪ) ಮತ್ತು ಅವುಗಳನ್ನು ಈ ಅರಣ್ಯಗಳ ಸಂರಕ್ಷಣೆಯಲ್ಲಿ ರಕ್ಷಿಸಲಾಗುತ್ತದೆ.

ಆಗುಂಬೆಯಿಂದ ಕೆಲವೇ ಕೆಲವು ಕಿಲೋಮೀಟರ್ ದೂರದಲ್ಲಿ ಕವಲೆದುರ್ಗಾ ಕೋಟೆ ಇದೆ. ಇದು 9ನೇ ಶತಮಾನಕ್ಕೆ ಸೇರಿದ ಕೋಟೆಯಾಗಿದ್ದು, ಆಗುಂಬೆಯ ಆಸು ಪಾಸಿನಲ್ಲಿ ನೀವು ಇದ್ದಲ್ಲಿ ಇಲ್ಲಿಗೆ ಒಮ್ಮೆ ಭೇಟಿ ಕೊಡಲು ಮರೆಯದಿರಿ. ಇದನ್ನು ವಿಜಯನಗರ ಆಡಳಿತದ ಅಡಿಯಲ್ಲಿದ್ದ ಕೆಲವು ಪ್ರಸಿದ್ದ ವಿದ್ವಾಂಸರುಗಳಿಂದ ನಿರ್ಮಿಸಲಾಯಿತು.

ಕಾಫೀ ತೋಟಗಳ ಭೂಮಿ , ಸಕಲೇಶಪುರ

ಕಾಫೀ ತೋಟಗಳ ಭೂಮಿ , ಸಕಲೇಶಪುರ

Shameersh

ಸಕಲೇಶಪುರವು ಜಗತ್ತಿನ ಅತ್ಯಂತ ಪ್ರಮುಖ 24 ಜೀವವೈವಿಧ್ಯತೆಗಳಲ್ಲಿ ಒಂದಾಗಿದೆ. ಇದು ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾಗಿದೆ. ಇದು ಅಗಸ್ಟ್ ತಿಂಗಳುಗಳಲ್ಲಿ ಕರ್ನಾಟಕದ ಪ್ರತಿಯೊಬ್ಬರನ್ನೂ ಇಲ್ಲಿಗೆ ಭೇಟಿ ಕೊಡಲೇ ಬೇಕೆನ್ನುವಂತೆ ಮಾಡುವ ಸ್ಥಳವಾಗಿದೆ.

ಇಲ್ಲಿಯ ಉಪಉಷ್ಣವಲಯಯದ ಹವಾಮಾನ ಮತ್ತು ಜೋರಾದ ಮಳೆ ಬೀಳುವ ವಾತಾವರಣದಿಂದಾಗಿ ಕೆಲವು ವಿಭಿನ್ನ ಜಾತಿಯ ಸಸ್ಯಗಳು ಮತ್ತು ಪ್ರಾಣಿಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಇಲ್ಲಿಯ ಆಫ್ಬೀಟ್ ಹಾದಿಗಳು ಮತು ತೆಳುವಾದ ರಸ್ತೆಗಳ ಮೂಲಕ ಮತ್ತು ಕಾಫೀ ತೋಟಗಳ ಹಾದಿಗಳಲ್ಲಿ ಸೈಕ್ಲಿಂಗ್ ಮಾಡುವುದನ್ನು ಮಾತ್ರ ತಪ್ಪಿಸಿಕೊಳ್ಳಲೇ ಬಾರದು.
ಮಂಜರಾಬಾದ್ ಕೋಟೆ ಸಕಲೇಶಪುರಕ್ಕಿಂತ ಸ್ವಲ್ಪ ಹೊರಭಾಗದಲ್ಲಿರುವ ಒಂದು ಪ್ರಸಿದ್ದ ಪ್ರವಾಸಿ ತಾಣವಾಗಿದೆ. ಈ ಕೋಟೆಯು ಮೈಸೂರಿನ ಹಿಂದಿನ ದೊರೆಯಾದ ಟಿಪ್ಪು ಸುಲ್ತಾನನಿಂದ ನಿರ್ಮಿಸಲಾಯಿತು ಎಂದು ಪ್ರಸಿದ್ದಿಯನ್ನು ಪಡೆದಿದೆ. ಈ ಕೋಟೆಯಲ್ಲಿ ಒಂದು ಸುರಂಗವನ್ನು ಶ್ರೀರಂಗಪಟ್ಟಣದ ಬಳಿ ಇರುವ ಇನ್ನೊಂದು ಕೋಟೆಗೆ ಸೇರುವಂತೆ ನಿರ್ಮಿಸಲಾಗಿತ್ತು ಎಂದು ನಂಬಲಾಗುತ್ತದೆ

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೂಲಕ ಒಂದು ಸವಾರಿ

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೂಲಕ ಒಂದು ಸವಾರಿ

Vidyadhar Atkore

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದು ಹೋಗುವಾಗ ಒಂದು ಶಾಖೆಯ ಮೇಲೆ ಸಾಮಾನ್ಯವಾಗಿ ಬಿಳಿ ಮಂಗಗಳು ಅಥವಾ ಕೆಲವು ದೈತ್ಯಾಕಾರದ ಮಲಬಾರ್ ಅಳಿಲುಗಳನ್ನು ಕಾಣುವುದನ್ನು ತಪ್ಪಿಸಬೇಡಿ. ಅಲ್ಲದೆ ಇಲ್ಲಿಯ ದಟ್ಟವಾದ ಹಸಿರು ಕಾಡುಗಳ ಮಧ್ಯೆ ಹಾದುಹೋಗುವಾಗ ಸಾಂಬಾರ್ ಜಿಂಕೆಗಳನ್ನು ನೋಡಿ.
ಅಲ್ಲಿಂದ ನಂತರ ಶೃಂಗೇರಿ ಇದೊಂದು ಶ್ರೀಮಂತ ಕಥೆಗಳು ಮತ್ತು ಪರಂಪರೆಯನ್ನು ಹೊಂದಿರುವ ಭೂಮಿಯಾಗಿದೆ. ಇದು ಅಗಸ್ಟ್ ತಿಂಗಳಿನಲ್ಲಿ ಕರ್ನಾಟಕದಲ್ಲಿ ಭೇಟಿ ನೀಡಬಹುದಾದಂತಹ ಒಂದು ಅತ್ಯುತ್ತಮವಾದ ಸ್ಥಳವಾಗಿದೆ. ರಾಷ್ಟ್ರೀಯ ಉದ್ಯಾನವನವು ಅಲ್ಲಿಯ ಹಚ್ಚ ಹಸಿರು ಮತ್ತು ಶ್ರೀಮಂತ ಜೀವವೈವಿಧ್ಯಗಳಿಂದ ನಿಮ್ಮನ್ನು ತೃಪ್ತಿಪಡಿಸುತ್ತದೆ.

ಮರವಂತೆ ಬೀಚ್

ಮರವಂತೆ ಬೀಚ್

ಅರಬ್ಬೀ ಸಮುದ್ರದ ಬಲಭಾಗದಲ್ಲಿರುವ ಈ ಬೀಚು ಮತ್ತು ಎಡ ಭಾಗದಲ್ಲಿ ಸೌಪರ್ಣಿಕಾ ನದಿಯನ್ನು ಹೊಂದಿದ ಈ ಸ್ಥಳವು ಭಾರತದ ಅತ್ಯಂತ ಉತ್ತಮವಾದ ಬೀಚುಗಳಲ್ಲಿ ಒಂದಾಗಿದೆ. ದೇಶದ ಇನ್ನಿತರ ಬೀಚುಗಳಂತೆ ಮರವಂತೆ ಬೀಚು ಕೂಡಾ ಸಾಕಷ್ಟು ಶಾಂತವಾಗಿದೆ ಮತ್ತು ಪ್ರಕೃತಿ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಹಾಗಿದೆ.

ವಿಶ್ರಾಂತಿ ಪಡೆದು , ಪುನಶ್ಚೇತನಗೊಳಿಸಿಕೊಳ್ಳಿ ಮತ್ತು ಕರಾವಳಿಯ ಆಹಾರವನ್ನು ಇಲ್ಲಿರುವಾಗ ಒಮ್ಮೆ ಸವಿಯಿರಿ. ಇದು ಕರ್ನಾಟಕದಲ್ಲಿಯ ಮಳೆಗಾಲದ ಸಮಯದಲ್ಲಿ ಭೇಟಿ ಕೊಡಬಹುದಾದಂತಹ ಸ್ಥಳಗಳ ಪಟ್ಟಿಯಲ್ಲಿ ಸೇರಿಸಬಹುದಾದ ಇನ್ನೊಂದು ಸ್ಥಳವಾಗಿದೆ.

ಬಾಲೂರು ಒಂದು ವಿಭಿನ್ನವಾದ ಮಲೆನಾಡಿನ ಹಳ್ಳಿ

ಬಾಲೂರು ಒಂದು ವಿಭಿನ್ನವಾದ ಮಲೆನಾಡಿನ ಹಳ್ಳಿ

Moheen Reeyad

ಬಾಲೂರು ಒಂದು 400 ಎಕರೆಯ ಕಾಫೀ ತೋಟವಾಗಿದ್ದು ಇದು 1800ರಷ್ಟು ಹಿಂದಿನ ಇತಿಹಾಸವನ್ನು ಹೊಂದಿದೆ. ಈ ಎಸ್ಟೇಟಿನಿಂದ ಸ್ವಲ್ಪ ಮೇಲಿನ ಭಾಗದಲ್ಲಿ ಹೇಮಾವತಿ ನದಿಯು ಹುಟ್ಟುತ್ತದೆ. ಇಲ್ಲಿಯ ತೋಟದ ಮಾಲೀಕರ ಬಂಗಲೆಯು ಸುಮಾರು 1853 ರಕಾಲದಿಂದಲೂ ಇಲ್ಲಿದೆ.

ಈ ಎಸ್ಟೇಟು ಶ್ರೀಮಂತವಾದ ತೊರೆಗಳು ಜಲಪಾತಗಳು ಕರ್ನಾಟಕದಲ್ಲಿ ಮಳೆಯ ಸಮಯದಲ್ಲಿ ಇನ್ನೂ ಸೊಂಪಾಗಿ ಬೆಳೆಯುವ ಹಸಿರು ತೋಟಗಳು ಇವೆಲ್ಲವನ್ನೂ ಹೊಂದಿದೆ. ಇದರ ಜೊತೆಗೆ ರುಚಿಕರವಾದ ಆಹಾರವು ಇಲ್ಲಿ ಸಿಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X