Search
  • Follow NativePlanet
Share
» »ಒಂದೇ ರಾತ್ರಿಯಲ್ಲಿ, ಒಂದೇ ಕೈಯಲ್ಲಿ ನಿರ್ಮಿಸಿದ ಶಿವಾಲಯ, ಆದರೂ ಇಲ್ಲಿ ಪೂಜೆ ನಡೆಯೋಲ್ಲ

ಒಂದೇ ರಾತ್ರಿಯಲ್ಲಿ, ಒಂದೇ ಕೈಯಲ್ಲಿ ನಿರ್ಮಿಸಿದ ಶಿವಾಲಯ, ಆದರೂ ಇಲ್ಲಿ ಪೂಜೆ ನಡೆಯೋಲ್ಲ

ಶ್ರಾವಣ ಮಾಸದಲ್ಲಿ ಶಿವನನನ್ನು ಆರಾಧಿಸಲಾಗುತ್ತದೆ. ಇಡೀ ಭಾರತದಲ್ಲಿ ಶ್ರಾವಣ ಮಾಸದಂದು ಶಿವನ ಆರಾಧನೆ ಮಾಡುವುದನ್ನು ಶುಭ ಎನ್ನಲಾಗುತ್ತದೆ. ಈ ಸಂದರ್ಭದಲ್ಲಿ ಉತ್ತರಖಂಡ, ಉತ್ತರ ಪ್ರದೇಶ, ಜಾರ್ಖಂಡ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇರುವ ಶಿವ ಮಂದಿರಗಳಲ್ಲಿ ಭಕ್ತರ ದಂಡೇ ಇರುತ್ತದೆ.

ಬಹಳಷ್ಟು ಶಿವನ ದೇವಸ್ಥಾನದ ಬಗ್ಗೆ ನಿಮಗೆ ಗೊತ್ತಿದೆ. ಇಂದು ನಾವು ನಿಮಗೆ ಶಿವನ ಒಂದು ವಿಶೇಷ ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ. ಈ ಬಗ್ಗೆ ನೀವು ತಿಳಿದಿರಲಿಕ್ಕಿಲ್ಲ. ಆ ದೇವಸ್ಥಾನವನ್ನು ಒಂದೇ ರಾತ್ರಿಯಲ್ಲಿ ಅದೂ ಕೂಡಾ ಒಂದೇ ಕೈಯಲ್ಲಿ ನಿರ್ಮಿಸಲಾಗಿದೆಯಂತೆ. ಈ ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಆದರೆ ಅಲ್ಲಿ ಪೂಜೆ ಮಾಡಲು ಭಯಪಡುತ್ತಾರೆ.

ಎಲ್ಲಿದೆ ಈ ಮಂದಿರ?

ಎಲ್ಲಿದೆ ಈ ಮಂದಿರ?

PC: Ashok singh negi 41

ಶಿವನ ಈ ವಿಚಿತ್ರ ಮಂದಿರವು ಉತ್ತರಖಂಡದ ಪಿತೌರ್‌ಘಡ್ ಬಲ್ತಿರ್ ಹಳ್ಳಿಯಲ್ಲಿದೆ. ಈ ಮಂದಿರವನ್ನು ಒಂದು ಕೈಯ ದೇವಾಲಯ ಎನ್ನುತ್ತಾರೆ. ಯಾಕೆಂದರೆ ಈ ದೇವಸ್ಥಾನವನ್ನು ಒಂದು ಕೈಯಲ್ಲಿ ನಿರ್ಮಿಸಲಾಗದೆ. ಸ್ಥಳೀಯ ಮಾಹಿತಿಯ ಪ್ರಕಾರ, ಓರ್ವ ಶಿಲ್ಪಿಯು ಶಿವನ ಈ ಮಂದಿರವನ್ನು ಒಂದು ಕೈಯಲ್ಲೇ ನಿರ್ಮಿಸಿದನು. ಈ ದೇವಾಲಯಕ್ಕೆ ಸಂಬಂಧಿಸಿದಂತೆ ಅನೇಕ ರೋಚಕ ಕಥೆಗಳು ಇವೆ.

ಬಿಡದಿ ಸ್ಪೆಶಲ್ ತಟ್ಟೆ ಇಡ್ಲಿ ಟೇಸ್ಟ್‌ ಮಾಡಿದ್ದೀರಾ?ಬಿಡದಿ ಸ್ಪೆಶಲ್ ತಟ್ಟೆ ಇಡ್ಲಿ ಟೇಸ್ಟ್‌ ಮಾಡಿದ್ದೀರಾ?

ಅಭಿಷೆಕ ಮಾಡುತ್ತಾರೆ

ಅಭಿಷೆಕ ಮಾಡುತ್ತಾರೆ

ಈ ಮಂದಿರದ ವಿಶೇಷತೆಯಿಂದಾಗಿ ಇಲ್ಲಿಗೆ ಭಕ್ತರು ಬಂದು ಹೋಗುತ್ತಾ ಇರುತ್ತಾರೆ. ಹಾಲು ಹಾಗೂ ನೀರಿನ ಅಭೀಷೇಕ ಮಾಡುತ್ತಾರೆ. ಆದರೆ ಪೂಜಿಸಲು ಹೆದರುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಚಿತ್ರ ವಿಚಿತ್ರ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಅದ್ಭುತ ವಾಸ್ತುಕಲೆ

ಅದ್ಭುತ ವಾಸ್ತುಕಲೆ

ಈ ಮಂದಿರದಲ್ಲಿ ಜನರು ಪೂಜೆ ಮಾಡಲು ಹೆದರುತ್ತಿದ್ದರೂ ಇಲ್ಲಿನ ಶಿಲ್ಪಕಲೆಯು ಈ ದೆವಸ್ಥಾನಕ್ಕೆ ಬರುವ ಭಕ್ತರನ್ನು ಪ್ರಬಾವಿಸುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರು ಈ ಮಂದಿರದ ವಾಸ್ತುಶಿಲ್ಪವನ್ನು ನೋಡಿ ಬೆಚ್ಚಿ ಬೀಳುತ್ತಾರೆ. ಒಂದೇ ಕೈ ವ್ಯಕ್ತಿ ಇಷ್ಟೊಂದು ಭವ್ಯವಾದ ದೇವಾಲಯವನ್ನು ನಿರ್ಮಾಣ ಮಾಡಿದನೆಂದರೆ ಆಶ್ಚರ್ಯವಾಗುವುದು ಸಹಜವೇ.

ತಿರುಪತಿ ವೆಂಕಟೇಶ್ವರ ವೈಕುಂಠದಿಂದ ಇಳಿದು ಬಂದಿದ್ದು ಇಲ್ಲಿಂದವಂತೆ !ತಿರುಪತಿ ವೆಂಕಟೇಶ್ವರ ವೈಕುಂಠದಿಂದ ಇಳಿದು ಬಂದಿದ್ದು ಇಲ್ಲಿಂದವಂತೆ !

ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ವದಂತಿ

ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ವದಂತಿ

ಶಿವನ ಈ ಅದ್ಭುತ ಮಂದಿರದಲ್ಲಿ ಒಂದು ವದಂತಿಯೂ ಇದೆ. ಈ ಊರಿನಲ್ಲಿ ಒಬ್ಬ ಶಿಲ್ಪಿ ಇದ್ದ. ಆತ ಕಲ್ಲಿನಿಂದ ಅದ್ಭುತವಾದ ಶಿಲ್ಪಕಲಾಕೃತಿಯನ್ನು ರಚಿಸುತ್ತಿದ್ದ. ಯಾವುದೋ ದುರ್ಘಟನೆಯಲ್ಲಿ ಆತನ ಒಂದು ಕೈ ನಿಷ್ಕ್ರೀಯವಾಗುತ್ತದೆ. ಊರಿನ ಜನರಿಂದ ಬೇಸತ್ತು ಆತ ಆ ಊರನ್ನು ಬಿಡುವ ನಿರ್ಧಾರ ಮಾಡುತ್ತಾನೆ. ಆದರೆ ಊರನ್ನು ಬಿಡುವ ಮೊದಲು ಒಂದು ದೇವಸ್ಥಾನವನ್ನು ನಿರ್ಮಿಸುವುದನ್ನು ಯೋಚಿಸಿ, ಊರಿನ ಬಳಿ ಇರುವ ಬೆಟ್ಟದ ಮೇಲೆ ತನ್ನ ಒಂದು ಕೈಯಿಂದ ಶಿವಾಲಯವನ್ನು ನಿರ್ಮಿಸಿದನು.

ಊರು ಬಿಟ್ಟು ಹೋದ ಶಿಲ್ಪಿ

ಊರು ಬಿಟ್ಟು ಹೋದ ಶಿಲ್ಪಿ

ಇಡೀ ರಾತ್ರಿ ಆತ ದೇವಸ್ಥಾನದ ಕೆಲಸ ಮಾಡಿದ. ಆನಂತರ ಆತ ಆ ಊರಿನಲ್ಲಿ ಕಾಣಿಸಲೇ ಇಲ್ಲ. ಆತನನ್ನು ಹುಡುಕಾಡಿದರು ಆತ ಸಿಗಲೇ ಇಲ್ಲ. ಇಂದಿಗೂ ಆ ಊರಿನಲ್ಲಿ ಆ ದೇವಸ್ಥಾನದ ವಾಸ್ತುಶಿಲ್ಪವನ್ನು ಕೊಂಡಾಡಲಾಗುತ್ತದೆ.

ಅಭಿಶಪ್ತ ಎಂದು ಯಾಕೆ ಹೇಳಲಾಗುತ್ತದೆ?

ಅಭಿಶಪ್ತ ಎಂದು ಯಾಕೆ ಹೇಳಲಾಗುತ್ತದೆ?

PC: Ashok singh negi 41

ಶಿಲ್ಪಿಯು ಭವ್ಯವಾದ ಶಿವಾಲಯವನ್ನು ನಿರ್ಮಿಸಿದನು ಆದರೆ ಆತನಿಂದ ಒಂದು ತಪ್ಪಾಗಿದೆ. ಅದೇನೆಂದರೆ ಆತ ಶಿವಲಿಂಗವನ್ನು ವಿರುದ್ಧ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿದ್ದಾನೆ. ಆ ದಿಕ್ಕಿನಲ್ಲಿರುವ ಶಿವಲಿಂಗವನ್ನು ಪೂಜಿಸಲಾಗುವುದಿಲ್ಲ. ಯಾಕೆಂದರೆ ಇದೊಂದು ದೋಷಪೂರ್ಣ ಮೂರ್ತಿಯಾಗಿದೆ. ಹಾಗಾಗಿ ಜನರು ಈ ಮೂರ್ತಿಯನ್ನು ಪೂಜಿಸಲು ಭಯಪಡುತ್ತಾರೆ.

ಜಯಲಲಿತಾ , ಕರುಣಾನಿಧಿ ಸಮಾಧಿ ಇರುವ ಮರೀನಾ ಬೀಚ್‌ನ ವಿಶೇಷತೆ ಏನು ಗೊತ್ತಾ?ಜಯಲಲಿತಾ , ಕರುಣಾನಿಧಿ ಸಮಾಧಿ ಇರುವ ಮರೀನಾ ಬೀಚ್‌ನ ವಿಶೇಷತೆ ಏನು ಗೊತ್ತಾ?

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Belur Ashok

ಈ ಮಂದಿರವು ಉತ್ತರಖಂಡದ ಪಿತೌರ್‌ಘಡ್‌ನಿಂದ 70 ಕಿ.ಮೀ ದೂರದಲ್ಲಿದೆ. ಅಲ್ಲಿ ನೀವು ಡೆಹರಾಡೂನ್‌ನ ರಸ್ತೆಯನ್ನು ಸುಲಭವಾಗಿ ಕಂಡುಕೊಳ್ಳಬಹುದು. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಡೆಹರಾಡೂನ್‌ನಲ್ಲಿರುವ ಜಲಿಗ್ರಂಟ್‌. ರೈಲು ಮಾರ್ಗದ ಮೂಲಕ ಹೋಗುವುದಾದರೆ ಟನ್‌ಪುರ, ಪಿತೌರ್‌ಘಡ್‌ನ ರೈಲು ನಿಲ್ದಾಣದ ಮೂಲಕ ಹೋಗಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X