Search
  • Follow NativePlanet
Share
» »ಪರಿಸರ ಸ್ನೇಹಿ ರೆಸಾರ್ಟ್ ಗಳು ಎಲ್ಲೆಲ್ಲಿವೆ ಗೊತ್ತಾ?

ಪರಿಸರ ಸ್ನೇಹಿ ರೆಸಾರ್ಟ್ ಗಳು ಎಲ್ಲೆಲ್ಲಿವೆ ಗೊತ್ತಾ?

By Manjula Balaraj Tantry

ಭಾರತದಲ್ಲಿರುವ ಪರಿಸರ ಸ್ನೇಹಿ ರೆಸಾರ್ಟ್ ಗಳು ಬೇಸಿಗೆ ರಜೆ ಕಳೆಯಲು ಒಂದು ಸೂಕ್ತವಾದ ತಾಣಗಳೆನಿಸಿವೆ. ಮತ್ತು ಬಹುಶ: ಬೇರೆ ಎಲ್ಲಿಯೂ ಇಂತಹ ಪರಿಸರ ಸ್ನೇಹಿ ರೆಸಾರ್ಟ್ ಗಳನ್ನು ನಿಮಗೆ ಕಾಣಲು ಸಾಧ್ಯವಿಲ್ಲ ಆದುದರಿಂದ ಇಲ್ಲಿಗೆ ಹೋಗುವುದರ ಬಗ್ಗೆ ಮಗುದೊಮ್ಮೆ ಯೋಚಿಸಿ ಭಾರತದಲ್ಲಿಯ ಈ ಕೆಲವು ಸುಂದರ ರೆಸಾರ್ಟ್ ಗಳನ್ನು ವಲಯಗಳಿಗೆ ಅನುಗುಣವಾಗಿ ವಿಂಗಡಿಸಲಾಗಿದೆ. ಇಲ್ಲಿ ಕೆಲವು ಪಶ್ಚಿಮ ಮತ್ತು ಮಧ್ಯ ಭಾರತದ ಅತ್ಯುತ್ತಮ ಪರಿಸರ ಸ್ನೇಹಿ ರೆಸಾರ್ಟ್ ಗಳಿವೆ.

1. ಸ್ಪೈಸ್ ವಿಲೇಜ್

1. ಸ್ಪೈಸ್ ವಿಲೇಜ್

ಇದು ತೆಕ್ಕಾಡಿಯ ಮಂಜಿನ ಗುಡ್ಡದ ಮೇಲೆ ಉದ್ದಕ್ಕೂ ವಿಸ್ತರಿಸಲ್ಪಟ್ಟಿದೆ. ಸ್ಪೈಸ್ ವಿಲೇಜ್ ಪೆರಿಯಾರ್ ಹುಲಿಗಳ ಅಭಯಾರಣ್ಯದಿಂದ ಸ್ವಲ್ಪವಷ್ಟೆ ದೂರದಲ್ಲಿರುವ ರಿಸಾರ್ಟ್ . ಸುಮಾರು 14 ಎಕರೆಯಷ್ಟು ಪ್ರದೇಶದಲ್ಲಿ ವಿಶಾಲವಾಗಿರುವ, 140 ಕ್ಕೂ ಹೆಚ್ಚಿನ ವಿವಿಧ ರೀತಿಯ ಮರಗಳನ್ನು ಹೊಂದಿದ್ದು ಇದರ ಜೊತೆಗೆ ಮಸಾಲೆಗಳ ತೋಟ ಮತ್ತು ಸಾವಯವ ತರಕಾರಿ ಕೃಷಿ ಭೂಮಿಯನ್ನೂ ಹೊಂದಿದೆ.

ಇಲ್ಲಿನ ವಿಶೇಷವೇನೆಂದರೆ, ಇದರ ಅಡುಗೆ ಮನೆಯಲ್ಲಿ ಬೇಯಿಸಿದ ಎಲ್ಲಾ ಆಹಾರಗಳನ್ನೂ ಇಲ್ಲಿಯ 50 ಮೈಲಿ ವ್ಯಾಪ್ತಿಯಲ್ಲಿ ಬೆಳೆದ ವಸ್ತುಗಳಿಂದಲೇ ತಯಾರಿಸಲ್ಪಡುತ್ತದೆ. ಇಲ್ಲಿಗೆ ಬರುವ ಅತಿಥಿಗಳು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಒಂದು ವಾಕ್ ಹೋಗಬಹುದು ಮತ್ತು ರಾತ್ರಿ ಸಮಯದಲ್ಲಿ ಟ್ರಕ್ಕಿಂಗ್ ಕೂಡಾ ಮಾಡಬಹುದು. ದಿನದ ಸಮಯದಲ್ಲಿ ಇಲ್ಲಿಗೆ ಹತ್ತಿರವಿರುವ ಮೆಣಸಿನ ತೋಟಗಳಿಗೆ ಒಂದು ಪ್ರವಾಸ ಮಾಡಿ, ಅಲ್ಲದೆ ಸಾಂಪ್ರದಾಯಿಕ ಅಡುಗೆಗಳನ್ನು ಕಲಿಯಬಹುದು, ಪಕ್ಷಿ ವೀಕ್ಷಣೆ ಮತ್ತು ಮೀನುಗಾರಿಕೆಗೂ ಹೋಗಬಹುದು. ಈ ಪೂರ್ತಿ ಎಸ್ಟೇಟ್ ರಾಸಾಯನಿಕ ಮುಕ್ತವಾದುದಾಗಿದೆ.

ಈ ಎಸ್ಟೇಟ್ ನಲ್ಲಿ ಸಂಪೂರ್ಣವಾಗಿ ನೈಸರ್ಗಿಕ ಎಣ್ಣೆಗಳು, ಇಲ್ಲಿಯ ಸಸ್ಯಗಳಿಗೆ ಕರ್ಪೂರವನ್ನು ಉಪಯೋಗಿಸಿ ಕೀಟನಾಶಕಗಳನ್ನು ಬಳಸಲಾಗುತ್ತದೆ ಮತ್ತು ಅದಕ್ಕೆ ಬೇಕಾದ ಕೀಟನಾಶಕಗಳನ್ನು ಇಲ್ಲೇ ತಯಾರಿಸಲಾಗುತ್ತದೆ. ದೈನಂದಿನ ತ್ಯಾಜ್ಯಗಳನ್ನು ಬೇರ್ಪಡಿಸಲಾಗುತ್ತದೆ ಮತ್ತು ತರಕಾರಿ ಮತ್ತು ಗಿಡಮೂಲಿಕೆಯ ತೋಟಗಳಿಗೆ ಸಾವಯವ ಗೊಬ್ಬರ ತಯಾರಿಸಲು ಆಂತರಿಕ ವರ್ಮಿಕಾಂಪೋಸ್ಟ್ ಸಸ್ಯದಲ್ಲಿ ಮರುಬಳಕೆ ಮಾಡಲಾಗುತ್ತದೆ.

2. ಖೇಮ್ ವಿಲ್ಲಾಸ್

2. ಖೇಮ್ ವಿಲ್ಲಾಸ್

ರಣತಂಬೋರ್ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ರಣತಂಬೋರ್ ನೆಲೆಸಿದ್ದು, ಈ ಹುಲಿ ಶಿಬಿರವು ಸರೋವರಗಳು, ತೆರೆದ ಹುಲ್ಲುಗಾವಲುಗಳು ಮತ್ತು ಮರಗಳಿಂದ ಕೂಡಿದ 12 ಎಕರೆ ಕಾಡುಗಳಿಂದ ಆವೃತವಾಗಿದೆ. ಇಲ್ಲಿಗೆ ಬರುವ ಅಥಿತಿಗಳು , ಕಾಡು ಬೆಕ್ಕುಗಳು, ಕತ್ತೆಕಿರುಬ, ಮರುಭೂಮಿಯ ನರಿಗಳು, ಮೊಸಳೆಗಳು ಮತ್ತು ವಿವಿಧ ಪಕ್ಷಿಗಳನ್ನು ನೋಡುವ ಸಲುವಾಗಿ ಕಾಡಿನಲ್ಲಿ ಸಂಚಾರ ಚಟುವಟಿಕೆಗಳನ್ನು ಪ್ರವಾಸಿಗರು ಕೈಗೊಳ್ಳಬಹುದು.

ಐಶಾರಾಮಿ ಕಾಟೇಜ್ ಗಳು, ಟೆಂಟ್ ಗಳು ಮತ್ತು ಕೊಠಡಿಗಳು ಪರಿಸರದ ಸೂಕ್ಷ್ಮವಾದ ಮತ್ತು ಸ್ಥಳೀಯ ವಸ್ತುಗಳನ್ನು ಸೇರಿಸಿ ಮಾಡಲ್ಪಟ್ಟಿದೆ. ಇದರ ಮಾಲಕರಾದ ಹುಲಿ ಸಂರಕ್ಷಕರಾದ ಪತೇಹ್ ಸಿಂಗ್ ರಾಥೋಡ್ ಅವರ ಮಗ ಮಾಲಕ ಗೋವರ್ಧನ್ ಸಿಂಗ ರಾಥೋಡ್ ಅವರು ಇಲ್ಲಿ ಸುಮಾರು ಎರಡು ದಶಕಗಳ ಕಾಲ ಇದ್ದು ಇಲ್ಲಿ ಸ್ಥಳೀಯ ಮರಗಳನ್ನು ನೆಟ್ಟಿದ್ದರು ಮತ್ತು ಸಣ್ಣ ಕೊಳವನ್ನೂ ಕೂಡಾ ಈ ಪ್ರದೇಶದಲ್ಲಿ ನಿರ್ಮಿಸಿದರು. ಅವರು ಹುಲಿಗಳನ್ನು ಸಂರಕ್ಷಿಸುವ ಎಜಿಓ ಅನ್ನು ಕೂಡಾ ನಡೆಸುತ್ತಾರೆ ಮತ್ತು ಸ್ಥಳೀಯ ಸಮುದಾಯವರು ಈ ಖೇಮ್ ವಿಲ್ಲಾಸ್ ನಲ್ಲಿ ಕೆಲಸ ಮಾಡುತ್ತಾರೆ.

3. ಎಲಿಫೆಂಟ್ ವ್ಯಾಲಿ

3. ಎಲಿಫೆಂಟ್ ವ್ಯಾಲಿ

ಕೊಡೈಕೆನಾಲ್ ಇದು 100 ಎಕರೆಯಷ್ಟು ಜಾಗವು ಸಂರಕ್ಷಿತವಾದುದಾಗಿದೆ ಮತ್ತು ಸಾವಯವ ಭೂಮಿಗಳನ್ನು ಹೊಂದಿದೆ ಇಲ್ಲಿಯ ತಮಿಳುನಾಡು ಮಾರ್ಗದಲ್ಲಿಯ ಪಣಿಬೆಟ್ಟಗಳ ಮಾರ್ಗದಲ್ಲಿ ಹಳೆಯ ಮಂತ್ರ ಮುಗ್ಧಗೊಳಿಸುವಂತಹ ಪಾಚಿಡರ್ಮ್ ನಲ್ಲಿ ಮಂತ್ರಮುಗ್ದಗೊಳಿಸುವಂತಹ ತಾಣವಿದೆ.
ಇಲ್ಲಿಂದ ಕೊಡೈಕೆನಾಲ್ 20 ಕಿ.ಮೀ ಅಂತರದಲ್ಲಿದ್ದರೂ ನೀವು ಈ ಸ್ವರ್ಗ ಸದೃಶದಂತಿರುವ ರೆಸಾರ್ಟ್ ನಲ್ಲಿ ತಂಗಬಹುದಾಗಿದೆ. ಇದರ 20 ಪರಿಸರ ಸ್ನೇಹಿ ಬಂಗಲೆಗಳು ಸ್ಥಳೀಯ ವಸ್ತುಗಳಾದ ಗ್ರಾನೈಟ್ , ಮರು ನಿರ್ಮಾಣಗೊಂಡ ಮರದ ಬಾಗಿಲುಗಳು ಮತ್ತು ಮರಗಳು ಮತ್ತು ಸೋಲಾರ್ ದೀಪದ ವ್ಯವಸ್ಥೆ, ಕಡಿಮೆ ಬಳಕೆಯ ಬಲ್ಬುಗಳು ,ಎರಕಹೊಯ್ದ ಕಬ್ಬಿಣದ ಮರದ ಸ್ಟೌವ್ ಗಳು, ಮತ್ತು ಉರುವಲು ಇಂಧನ ಬಳಸಿ ಮಾಡಲಾದ ಬಿಸಿ ನೀರಿನ ಶವರ್ ಗಳು ಇತ್ಯಾದಿಗಳನ್ನು ಈ ಬಂಗಲೆಗಳು ಹೊಂದಿವೆ.

ಪ್ರತೀ ಬಂಗಲೆಗಳೂ ತಮ್ಮದೇ ಆದ ಸ್ವಂತ ತೋಟಗಳನ್ನು ಹೊಂದಿವೆ ಅದರ ಜೊತೆಗೆ ಗಂಗಾವಾರ್ ನದಿ ಮತ್ತು ಕೀಟನಾಶಕ ಮುಕ್ತ ಕಾಫೀ ತೋಟಗಳನ್ನೂ ಹೊಂದಿದೆ. ಇಲ್ಲಿಗೆ ಬರುವ ಅತಿಥಿಗಳಿಗೆ ಇಲ್ಲಿಯ ಸಾವಯವ ತೋಟಗಳಿಂದ ಉತ್ಪಾದಿಸಲ್ಪಟ್ಟ ಆಹಾರ ಪದಾರ್ಥಗಳಿಂದ ತಾಜಾ ಆಹಾರವನ್ನು ತಯಾರಿಸಿಕೊಡಲಾಗುತ್ತದೆ ಮತ್ತು ಹಬೆಯಾಡುವ ಸ್ಥಳೀಯ ತೋಟಗಳಿಂದ ತಯಾರಿಸಲಾದ ಫಿಲ್ಟರ್ ಕಾಫಿಯನ್ನು ಮಾಡಿ ಕೊಡಲಾಗುತ್ತದೆ. ಇಲ್ಲಿಯ ಸ್ಥಳೀಯ ವನ್ಯಜೀವಿ, ಪಕ್ಷಿಗಳು ಮತ್ತು ಸಸ್ಯ ಜೀವಿಗಳನ್ನು ನೋಡಲು ಒಂದು ಪ್ರಕೃತಿ ನಡೆಯಲು ಮರೆಯದಿರಿ.

4. ಹ್ಯ್ಸಾವ್ ಲಾಕ್ ನ ಬ್ಯಾರ್ ಫೂಟ್

4. ಹ್ಯ್ಸಾವ್ ಲಾಕ್ ನ ಬ್ಯಾರ್ ಫೂಟ್

ಅಂಡಮಾನ್ ಏಷ್ಯಾದ ಅತ್ಯುತ್ತಮ ಕಡಲತೀರವೆಂದು ಕರೆಯಲ್ಪಡುತ್ತದೆ ಮತ್ತು ಇದು ಭತ್ತದ ತೋಟಗಳು, ಬಾಳೆ ತೋಟಗಳು ಮತ್ತು ಮಹುವಾ ಅರಣ್ಯಗಳಿಂದ ಆವೃತವಾಗಿದೆ, ಹಾವ್ಲಾಕ್‌ನಲ್ಲಿರುವ ಬ್ಯಾರ್ ಫೂಟ್ ಅನ್ನು ನೀಲಿ ಮತ್ತು ಹಸಿರು ಬಣ್ಣಗಳಲ್ಲಿ ಚಿತ್ರೀಕರಿಸಲಾಗಿದೆ.ಈ ಪೂರ್ತಿ ಪ್ರದೇಶವು ಕೀಟನಾಶಕ ಮತ್ತು ರಾಸಾಯನಿಕ ಮುಕ್ತವಾದುದಾಗಿದೆ. ಇಲ್ಲಿಯ ಏಳು ಎಕರೆ ಪ್ರದೇಶದಲ್ಲಿ 25 ಹವಾನಿಯಂತ್ರಿತ ಮತ್ತು ಫ್ಯಾನ್ ನಿಂದ ತಂಪು ಮಾಡುವಂತಹ ಚಾವಣಿ ಇರುವ ಟೆಂಟ್ ಗಳು, ವಿಲ್ಲಾಗಳು ಮತ್ತು ಕಾಟೇಜ್ ಗಳಿವೆ ಇವುಗಳನ್ನು ಇಲ್ಲಿಯ ಸ್ಥಳೀಯ ವಸ್ತುಗಳನ್ನು ಉಪಯೋಗಿಸಿ ನಿರ್ಮಿಸಲಾಗಿದೆ. ಇಲ್ಲಿ ಬೀಚ್ ಗಳಲ್ಲಿ ಸಮಯ ಕಳೆಯುವುದಕ್ಕಿಂತಲೂ ಜಾಸ್ತಿಯಾದುದನ್ನು ಇಲ್ಲಿ ಆನಂದಿಸಬಹುದಾಗಿದೆ. ಇದು ಇಲ್ಲಿರುವ ಏಕೈಕ ಪಾಡಿ ಪಂಚತಾರೆಯಾಗಿದೆ.

5. ಮೀನುಗಾರಿಕೆ ಮತ್ತು ಆಯುರ್ವೇದ

5. ಮೀನುಗಾರಿಕೆ ಮತ್ತು ಆಯುರ್ವೇದ

ಅಂಡಮಾನ್ ದ್ವೀಪಗಳಲ್ಲಿನ ತರಬೇತುದಾರ ಅಭಿವೃದ್ಧಿ ರೆಸಾರ್ಟ್ ಮತ್ತು ಸ್ನಾರ್ಕಲಿಂಗ್, ಮೀನುಗಾರಿಕೆ ಮತ್ತು ಆಯುರ್ವೇದಗಳ ಜೊತೆಗೆ ಡೈವಿಂಗ್ ಕೋರ್ಸ್ ಗಳನ್ನು ಒದಗಿಸುತ್ತದೆ. ಇದು ವರ್ಣರಂಜಿತ ಚಿಟ್ಟೆಗಳು ಮತ್ತು ಹಲವಾರು ಪಕ್ಷಿಗಳಿಗೆ ಹಾಗೆಯೇ ಒಂದು ಅಪರೂಪದ ಈಜು ಆನೆಗಳಿಗೆ ನೆಲೆಯಾಗಿದೆ.

ಈ ರೆಸಾರ್ಟ್ ಗಳು ಪರಿಸರ ಶಿಕ್ಷಣದ ಕೇಂದ್ರವನ್ನು ನಡೆಸುತ್ತದೆ ಇದು ಇದರ ಸಂದರ್ಶಕರಿಗೆ ಮತ್ತು ನಿವಾಸಿಗಳಿಗೆ ಅಂಡಮಾನಿನ ಶ್ರೀಮಂತ ಜೀವ ವೈವಿಧ್ಯತೆಗಳ ಬಗ್ಗೆ ಶಿಕ್ಷಣ ನೀಡುತ್ತದೆ. ಇಲ್ಲಿಗೆ ಬರುವ ಅತಿಥಿಗಳು ಬೀಚ್ ಸ್ವಚ್ಚಮಾಡುವ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು ಈ ಕಾರ್ಯಕ್ರಮವು ಪ್ರತೀ ಬೆಳಿಗ್ಗೆ ರಾಧಾನಗರ್ ಬೀಚ್ ನಲ್ಲಿ ನಡೆಯುತ್ತದೆ ಇದಕ್ಕೆ ಬದಲಾಗಿ ಒಂದು ಪ್ರಮಾಣ ಪತ್ರ ಮತ್ತು ಟೀ ಶರ್ಟ್ ನ್ನು ಉಚಿತವಾಗಿ ನೀಡಲಾಗುತ್ತದೆ. ಈ ರೆಸಾರ್ಟ್ ಪ್ರವಾಸಿಗರನ್ನು ಮಿನರಲ್ ನೀರಿನ ಬದಲಾಗಿ ಆರ್ ಓ ನೀರನ್ನು ಕುಡಿಯಲು ಪ್ರೋತ್ಸಾಹಿಸುತ್ತದೆ. ಇದರ ಉದ್ದೇಶವೇನೆಂದರೆ ಪ್ಲಾಸ್ಟಿಕ್ ಬಾಟಲುಗಳ ಬಳಕೆ ಕಡಿಮೆಗೊಳಿಸುವುದಾಗಿದೆ.

6. ಡುನೇ ಪರಿಸರ ಸ್ನೇಹಿ ಹಳ್ಳಿ ಮತ್ತು ಸ್ಪಾ

6. ಡುನೇ ಪರಿಸರ ಸ್ನೇಹಿ ಹಳ್ಳಿ ಮತ್ತು ಸ್ಪಾ

ಪಾಂಡಿಚೇರಿಯ ಕಡಲತೀರವು ಸುಮಾರು 35 ಎಕರೆಗಳಷ್ಟು ಜಾಗದಲ್ಲಿ ವಿಸ್ತರಿಸಿರುವ ಡುನೇ ಎಕೋ ವಿಲೇಜ್ (ಪರಿಸರ ಸ್ನೇಹಿ ಹಳ್ಳಿ) ಮತ್ತು ಸ್ಪಾ ಒಂದು ಶ್ರೀಮಂತವಾದ ಮತ್ತು ಪ್ರಶಾಂತವಾದ ಒಯಸಿಸ್ ನಂತಿದೆ. ಇಲ್ಲಿರುವ 55 ಬಂಗಲೆಗಳಲ್ಲಿಯೂ ಸೋಲಾರ್ ನೀರಿನ ವ್ಯವಸ್ಥೆಯನ್ನು ಬಳಸಲಾಗಿದೆ ಕಡಿಮೆ ಬಳಕೆಯ ಬಲ್ಬುಗಳು, ಮತ್ತು ಸಾವಯವ ಲೆನಿನ್ ಅನ್ನು ಇಲ್ಲಿ ಬಳಸಲಾಗುತ್ತದೆ. ಇಲ್ಲಿ ಕೆಲವರು ಸ್ಥಳೀಯ ವಸಾಹತುಶಾಹಿ ಮನೆಗಳು, ತೋಟಗಾರರ ಮಹಲುಗಳು ಮತ್ತು ಚೆಟ್ಟಿನಾಡ್ ಅರಮನೆಗಳು, ಮತ್ತು ಸಮುದ್ರದ ತಂಗಾಳಿಯಲ್ಲಿ ತಾಜಾ ಹೊಂದಲು ಹವಾನಿಯಂತ್ರಣಗಳನ್ನು ಬಳಸಲಾಗಿದೆ. ಡುನೇ ಯಲ್ಲಿ ಏಳು ಎಕರೆಗಳಷ್ಟು ಸಾವಯವ ಕೃಷಿ ನಡೆಸುವ ಭೂಮಿಯಿದೆ. ಇವುಗಳು ಸ್ವನಿರ್ಮಿತ ಅಂಗಳಗಳನ್ನು ಹೊಂದಿದ್ದು ಇವು ಆಂತರಿಕ ಬಳಕೆಗಾಗಿ ತಾಜಾ ಉತ್ಪನ್ನಗಳನ್ನು ಒದಗಿಸುತ್ತವೆ.

7. ಸ್ವಸ್ವರ, ಗೋಕರ್ಣಾ

7. ಸ್ವಸ್ವರ, ಗೋಕರ್ಣಾ

ಇದು ಗೋಕರ್ಣಾದ ಓಂ ಬೀಚ್ ನಲ್ಲಿ ನೆಲೆಗೊಂಡಿದೆ. ಸ್ವಸ್ವರ ಕ್ಷೇಮಾಭಿವೃದ್ದಿಯನ್ನು ಪ್ರೋತ್ಸಾಹಿಸುತ್ತಾ, ಇಲ್ಲಿಗೆ ಬರುವ ಅತಿಥಿಗಳು ಇಲ್ಲಿಯ ಬೀಚ್ ಗಳಲ್ಲಿ ಯೋಗ, ಧ್ಯಾನ, ಆಯುರ್ವೇದದ ಮಸಾಜ್ ಗಳು ಮತ್ತು ಚಿಕಿತ್ಸೆಗಳು ಮತ್ತು ಮಡಕೆ ತಯಾರಿಸುವ ತರಗತಿಗಳು ಅಥವಾ ವರ್ಲಿ ಚಿತ್ರಕಲೆಗಳನ್ನು ಕಲಾ ಸ್ಟುಡಿಯೋಗಳಲ್ಲಿ ಕಲಿಯಬಹುದು ಮತ್ತು ಶೆಫ್ ಗಳಿಂದ ಅಡುಗೆಗಳನ್ನು ಕಲಿಯುವಂತಹ ಅನೇಕ ಚಟುವಟಿಕೆಗಳನ್ನು ಇಲ್ಲಿ ಮಾಡಬಹುದಾಗಿದೆ.
ರೆಸಾರ್ಟ್ ವರ್ಮಿಕಾಂಪೋಸ್ಟಿಂಗ್ ಅನ್ನು ಇಲ್ಲಿ ಜಾರಿಗೆ ಗೊಳಿಸುತ್ತದೆ , ಮಳೆನೀರಿನ ಹಾರ್ವೆಸ್ಟ್ ಅದರ ಜೊತೆಗೆ ತೋಟದಲ್ಲಿನ ತ್ಯಾಜ್ಯ ನೀರಿನ ಪುನರ್ಬಳಕೆ ಮತ್ತು ಘನ ತ್ಯಾಜ್ಯಗಳನ್ನು ಬಯೋಗ್ಯಾಸ್ ಗೆ ಬಳಸಿ ಅಡುಗೆ ಮಾಡಲು ಉಪಯೋಗಿಸಲಾಗುತ್ತದೆ ಮತ್ತು ಇನ್ನಿತರ ತ್ಯಾಜ್ಯಗಳನ್ನು ರಸಗೊಬ್ಬರವಾಗಿ ಬಳಸಲಾಗುತ್ತದೆ ಇದರ ಜೊತೆಗೆ, ನೆರೆಹೊರೆಯ ಶಾಲೆಗಳು ಮತ್ತು ಸ್ವಸಹಾಯ ಗುಂಪುಗಳ ಸಮುದಾಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂರನೇ ಒಂದು ಭಾಗದ ಸಿಬ್ಬಂದಿಗಳು ಸ್ಥಳೀಯವಾಗಿ ನೇಮಕಗೊಂಡವರಾಗಿರುತ್ತಾರೆ.

8. ಕಾಲ್ಮಾತ್ಯ ಸಂಗಮ್

8. ಕಾಲ್ಮಾತ್ಯ ಸಂಗಮ್

ಅಲ್ಮೋರಾ ಬೆಟ್ಟದ ಮೇಲಿರುವ ಕಲ್ಮಾತಿಯಾ ಸಂಗಮ್ ರೆಸಾರ್ಟ್ ಉತ್ತರಾಖಂಡದ ಕುಮಾವೂನ್ ಪ್ರದೇಶದಲ್ಲಿ 14 ಎಕರೆ ಎಸ್ಟೇಟ್ ನಲ್ಲಿ ವ್ಯಾಪಿಸಿದೆ. ಇದು ಅನೇಕ ವೈವಿಧ್ಯಮಯ ಶ್ರೇಣಿಯ ಸಸ್ಯಮತ್ತು ಪ್ರಾಣಿಗಳಿಗೆ ಮತ್ತು ಸ್ಥಳೀಯ ಮತ್ತು ವಲಸೆ ಬಂದ ಹಕ್ಕಿಗಳಿಗೆ ನೆಲೆಯಾಗಿದೆ.

ಇಲ್ಲಿಯ ಪ್ರತೀ ಹತ್ತು ಕಲ್ಲಿನ ಕಾಟೇಜ್ ಗಳು ನಿಮಗೆ ಹಿಮಾಲಯದ ಒಂದು ಅದ್ಬುತ ದೃಶ್ಯದ ನೋಟವನ್ನು ಒದಗಿಸಿಕೊಡುತ್ತವೆ. ಇಲ್ಲಿಯ ಬೆಟ್ಟಗಳಲ್ಲಿಯ ವರ್ಷಪೂರ್ತಿಯ ನೀರಿನ ಕೊರತೆಯನ್ನು ನೀಗಿಸಲು ಇಲ್ಲಿ ಮಳೆ ನೀರಿನ ಹಾರ್ವೆಸ್ಟಿಂಗ್ ಮಾಡಲಾಗುತ್ತದೆ.
ಜೈವಿಕ ಮತ್ತು ಜೈವಿಕವಲ್ಲದ ಕಸವನ್ನು ಬೇರ್ಪಡಿಸಲಾಗುತ್ತದೆ, ಮತ್ತು ಸಾವಯವ ತ್ಯಾಜ್ಯವನ್ನು ಮಿಶ್ರಗೊಬ್ಬರ ಮಾಡಲಾಗುತ್ತದೆ. ಇದು ಸುತ್ತಮುತ್ತಲಿನ ಗ್ರಾಮಗಳಿಂದ ಇಂಗ್ಲಿಷ್-ಮಾತನಾಡುವ ಮಾರ್ಗದರ್ಶಿಗಳ ನೇತೃತ್ವದಲ್ಲಿ ಕುಮಾನ್ ಗ್ರಾಮದ ಚಾರಣಗಳನ್ನು ಆಯೋಜಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X