Search
  • Follow NativePlanet
Share
» »ದುರ್ಗಾಪೂಜಾ 2022 : ಕೊಲ್ಕತ್ತಾದಲ್ಲಿ ದುರ್ಗಾಪೂಜಾ ಪೆಂಡಾಲನ್ನು ವಾಟಿಕನ್ ಸಿಟಿಯ ಥೀಮ್ ನಲ್ಲಿ ವಿನ್ಯಾಸಮಾಡಲಾಗಿದ

ದುರ್ಗಾಪೂಜಾ 2022 : ಕೊಲ್ಕತ್ತಾದಲ್ಲಿ ದುರ್ಗಾಪೂಜಾ ಪೆಂಡಾಲನ್ನು ವಾಟಿಕನ್ ಸಿಟಿಯ ಥೀಮ್ ನಲ್ಲಿ ವಿನ್ಯಾಸಮಾಡಲಾಗಿದ

ಇಲ್ಲಿದೆ "ವ್ಯಾಟಿಕನ್ ಸಿಟಿ" ಥೀಮ್ ನಲ್ಲಿ ವಿಶಿಷ್ಟ ಮಾದರಿಯ ದುರ್ಗಾ ಪೂಜೆಯ ಪೆಂಡಾಲ್!!

ಕೊಲ್ಕತ್ತಾವು ದುರ್ಗಾದೇವಿಯನ್ನು ಸ್ವಾಗತಿಸುವುದಕ್ಕಾಗಿ ನಾನಾ ಬಗೆಯ ತಯಾರಿಗಳನ್ನು ನಡೆಸುತ್ತಿದೆ. ಈ ವರ್ಷದ ಪೆಂಡಾಲನ್ನು "ವ್ಯಾಟಿಕನ್ ಸಿಟಿ" ಎಂಬ ವಿಷಯ ಇಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ವ್ಯಾಟಿಕನ್ ಸಿಟಿಯಲ್ಲಿನ ಸೇಂಟ್ ಪೀಟರ್ಸ್ ಬೆಸಿಲಿಕಾ ಥೀಮ್ ಹೊಂದಿರುವ ದುರ್ಗಾ ಪೂಜೆಯ ಮಂಟಪವು ಸಾರ್ವಜನಿಕವಾಗಿ ಪ್ರಕಟವಾಗುವ ಮೊದಲೇ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಚರ್ಚೆಯಾಗಿದೆ.

ಕೋಲ್ಕತ್ತಾದ ಈ ಸುಂದರವಾದ ಮತ್ತು ಅತ್ಯಂತ ವೆಚ್ಚದ ಈ ಪೆಂಡಾಲ್ ಕೆಲವು ಹೊಸ ವಿಷಯಗಳು ಮತ್ತು ವಿಭಿನ್ನವಾದವುಗಳೊಂದಿಗೆ ಪ್ರತೀವರ್ಷ ಮಾಡಲಾಗುತ್ತಿದ್ದು ಇದು ಈ ಹಬ್ಬದಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತದೆ.

vaticancity

ಈ ವರ್ಷ ಬಿಧನ್ನಾರಿನಲ್ಲಿರುವ ಶ್ರೀ ಭೂಮಿ ಸ್ಪೋರ್ಟಿಂಗ್ ಕ್ಲಬ್ ನ ಪಂಡಾಲ್ ಗಮನ ಸೆಳೆದಿದೆ. ಈ ಕ್ಲಬ್ ಸತತವಾಗಿ ಉತ್ತಮ ದರ್ಜೆಯ ಥೀಮ್ ನೊಂದಿಗೆ ಪಂಡಾಲ್ ಅನ್ನು ರಚಿಸುತ್ತಾ ತನ್ನ ಅದ್ಬುತವಾದ ಪ್ಯಾಂಡಲ್‌ಗಳೊಂದಿಗೆ ಜನರನ್ನು ಸೆಳೆಯುತ್ತದೆ. ಕ್ಲಬ್ ಈ ವರ್ಷ ವ್ಯಾಟಿಕನ್ ಸಿಟಿ ಥೀಮ್‌ನೊಂದಿಗೆ ತನ್ನ ಅದ್ಭುತವಾದ ಪೂಜಾ ಪಂಡಲ್‌ನೊಂದಿಗೆ ಮತ್ತೊಮ್ಮೆ ಎಲ್ಲರನ್ನೂ ಬೆರಗುಗೊಳಿಸಿತು. ಈ ವರ್ಷ, ಕ್ಲಬ್ ತನ್ನ 50 ನೇ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ ಅದರ ಅಂಗವಾಗಿ, ನಿಸ್ಸಂದೇಹವಾಗಿ ಅನನ್ಯ ಮತ್ತು ಅವಿಸ್ಮರಣೀಯಗೊಳಿಸುವಂತಹ ಪಂಡಲ್ ಅನ್ನೂ ಸಹ ವಿನ್ಯಾಸಗೊಳಿಸಿದೆ !

ಪಶ್ಚಿಮ ಬಂಗಾಳದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಮತ್ತು ಶ್ರೀಭೂಮಿ ಸ್ಪೋರ್ಟಿಂಗ್ ಕ್ಲಬ್‌ನ ಅಧ್ಯಕ್ಷ ಸುಜಿತ್ ಬೋಸ್ ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದು, ರೋಮ್‌ನಲ್ಲಿರುವ ವ್ಯಾಟಿಕನ್ ಸಿಟಿಯ ಬಗ್ಗೆ ಅನೇಕ ಜನರು ಕೇಳಿದ್ದರೆ, ಇನ್ನು ಕೆಲವೇ ಜನರಿಗೆ ಅಲ್ಲಿಗೆ ಭೇಟಿ ನೀಡುವ ಭಾಗ್ಯ ದೊರಕುತ್ತದೆ ಹೀಗಾಗಿ, ಥೀಮ್ ವ್ಯಾಟಿಕನ್‌ಗೆ ಭೇಟಿ ನೀಡುವ ಜನರ ಬಯಕೆಯನ್ನುಈ ಪೆಂಡಾಲ್ ಸ್ವಲ್ಪ ಮಟ್ಟಿಗೆ ಈಡೇರಿಸಲಿದೆ ಎಂದಿದ್ದಾರೆ.

vaticancity pooja-2

ಅವರು ಈ ಪೆಂಡಾಲ್ ಬಗ್ಗೆ ಇನ್ನಷ್ಟು ಮಾಹಿತಿ ನೀಡುತ್ತಾ ಇದನ್ನು ರಚಿಸಲು ಸುಮಾರು 100 ಜನ ಇದನ್ನು ರಚಿಸಲು ಮತ್ತು ಮುಗಿಸಲು 100 ಕಲಾವಿದರು 60 ದಿನಗಳ ಕಾಲ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾವನ್ನು ಥೀಮ್ ಆಗಿ ಇಟ್ಟುಕೊಂಡುಶ್ರೀಭೂಮಿ ಸ್ಪೋರ್ಟಿಂಗ್ ಕ್ಲಬ್ ವತಿಯಿಂದ ರಚಿಸಲಾದ ಪೆಂಡಾಲ್ ಕಳೆದ ವರ್ಷ ಸಂದರ್ಶಕರನ್ನು ಸೆಳೆಯಲು ಸಾಧ್ಯವಾಯಿತು.

ಚರ್ಚ್ ಹೊಂದಿರುವ ಮುಖ್ಯ ಪೆಂಡಾಲ್ 54 ಅಡಿ ಅಗಲ ಮತ್ತು 65 ಅಡಿ ಎತ್ತರವಿದೆ ಇದು ನವೋದಯ ಶೈಲಿಯಲ್ಲಿದೆ. ಪೆಂಡಾಲ್ ನ ಸುತ್ತಲೂ, ನಿಜವಾದ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಕಂಡುಬರುವ ವಿವಿಧ ನವೋದಯ ಆಧಾರಿತ ಮತ್ತು ಬರೋಕ್ ಕಲಾಕೃತಿಗಳ ಪ್ರತಿಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X