Search
  • Follow NativePlanet
Share
» »ಗುಜರಾತಿನ ದೆವ್ವಗಳ ಬೀಚ್ ದುಮಾಸ್ ಬಗ್ಗೆ ಗೊತ್ತಾ?

ಗುಜರಾತಿನ ದೆವ್ವಗಳ ಬೀಚ್ ದುಮಾಸ್ ಬಗ್ಗೆ ಗೊತ್ತಾ?

By Manjula Balaraj Tantry

ದಿನದ ಸಮಯದಲ್ಲಿ ದೇವರ ನಿವಾಸದಂತೆ ಇರುವ ಈ ಬೀಚ್ ಸೂರ್ಯಾಸ್ತವಾಗುತ್ತಿದ್ದಂತೆಯೇ ದೆವ್ವಗಳ ಸ್ವರ್ಗವಾಗುತ್ತದೆ. ಇದು ಸೂರತ್ ನಲ್ಲಿರುವ ಒಂದು ಮುಖ್ಯವಾದ ಪ್ರವಾಸೀ ಆಕರ್ಷಣೆಯಾಗಿದೆ. ಈ ಬೀಚ್ ಗೆ ಪ್ರತೀ ದಿನ ನೂರಾರು ಜನ ಪ್ರವಾಸಿಗರು ಮತ್ತು ಪ್ರಯಾಣಿಕರು ಭೇಟಿ ನೀಡುತ್ತಾರೆ ಆದರೆ ಕತ್ತಲಾಗುತ್ತಿದ್ದಂತೆಯೇ ಜನರು ಇಲ್ಲಿಂದ ಹೊರಡುವುದು ಸೂಕ್ತವೆಂದು ಹೊರಡುತ್ತಾರೆ. ಈ ಬೀಚ್ ನಲ್ಲಿ ಕತ್ತಲಾದ ನಂತರವೂ ಇರಲು ಸವಾಲು ಹಾಕಿ ಇರ ಬಯಸಿದವರು ಯಾರೂ ಮರಳಿ ಬಂದಿಲ್ಲ ಅಥವಾ ಅನೇಕ ಭಯಾನಕ ಕೆಟ್ಟ ಅನುಭವಕ್ಕೆ ಒಳಗಾದುದನ್ನು ಹಂಚಿಕೊಂಡಿದ್ದಾರೆ.

ದುಮಾಸ್ ಬೀಚ್ ಸುತ್ತಲಿನ ರಹಸ್ಯ

ದುಮಾಸ್ ಬೀಚ್ ಸುತ್ತಲಿನ ರಹಸ್ಯ

Harshal 04

ಅರಬ್ಬಿ ಸಮುದ್ರದೊಂದಿಗೆ ಇರುವ ಗುಜರಾತಿನಲ್ಲಿರುವ ದುಮಾಸ್ ನ ಅತ್ಯಂತ ಭಯಾನಕ ಸ್ಥಳಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ಈ ಬೀಚ್ ಎರಡು ವಿಷಯಗಳಿಗೆ ಹೆಸರುವಾಸಿಯಾಗಿದೆ ಒಂದು, ಇಲ್ಲಿಯ ಕಪ್ಪು ಮಣ್ಣು ಮತ್ತು ಇನ್ನೊಂದು ಇಲ್ಲಿಯ ಭಯಾನಕ ದೆವ್ವಗಳಿಗೆ ! ದುಮಾಸ್ ಬೀಚ್ ಒಂದು ಕಾಲದಲ್ಲಿ ಹಿಂದುಗಳ ರುದ್ರಭೂಮಿಯಾಗಿತ್ತು ಮತ್ತು ಇದರಿಂದಾಗಿ ಆತ್ಮಗಳು ಶಕ್ತಿಯು ಈ ಜಾಗವನ್ನು ಬಿಟ್ಟು ಹೋಗಲೇ ಇಲ್ಲ ಎಂದು ಹೇಳಲಾಗುತ್ತದೆ. ಜನಪದ ಅಧ್ಯಯನದ ಪ್ರಕಾರ ಇಲ್ಲಿರುವ ಸತ್ತವರನ್ನು ಈ ಜಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸುಡುತ್ತಿದ್ದುದರಿಂದ ಅದರ ಬೂದಿಯು ಇಲ್ಲಿಯ ಬಿಳಿ ಮಣ್ಣಿನೊಂದಿಗೆ ಸೇರಿ ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ಹೇಳಲಾಗುತ್ತದೆ.

ಸತ್ಯ ಅಥವಾ ವಿಜ್ಞಾನ?

ಸತ್ಯ ಅಥವಾ ವಿಜ್ಞಾನ?

Marwada

ಕಡಲ ತೀರವು ವಿಲಕ್ಷಣವಾದ ಅನುಭವವನ್ನು ಹೊಂದಿರುವುದನ್ನು ನಿರಾಕರಿಸುವಂತಿಲ್ಲ. ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳು ಸುಂದರವಾಗಿದ್ದರೂ ಕೂಡ ಒಂದು ಭಯಾನಕವಾಗಿ ಕಾಡುವ ಅನುಭವನ್ನು ನೀಡಿ ನಮ್ಮಲ್ಲಿ ಖಿನ್ನತೆಯನ್ನುಂಟು ಮಾಡುತ್ತವೆ ಅಲ್ಲದೆ ಈ ಸ್ಥಳದಲ್ಲಿಯ ಒಂದು ಋಣಾತ್ಮಕತೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಚಂದ್ರೋದಯದ ನಂತರ ಈ ಪ್ರದೇಶದಲ್ಲಿ ಅನೇಕ ಅಸಾಮಾನ್ಯ ಘಟನೆಗಳು ನಡೆದಿರುವುದು ವರದಿಯಾಗಿದೆ. ವರದಿಗಳ ಪ್ರಕಾರ ಹಲವಾರು ಪ್ರವಾಸಿಗರು ಮತ್ತು ಸ್ಥಳೀಯರು ಸೂರತ್ ನ ಈ ದೆವ್ವಗಳ ಬೀಚ್ ಎನಿಸಿರುವ ದುಮಾಸ್ ನಿಂದ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಒಬ್ಬ ವ್ಯಕ್ತಿಯು ಈ ಕಡಲತೀರದಲ್ಲಿ ಸತ್ತು ಬಿದ್ದಿದ್ದು ಅವನ ನಾಲಗೆಯು ಹೊರಚಾಚಿಕೊಂಡಿತ್ತು ಎನ್ನಲಾಗಿದೆ. ಈ ಅವಗಢದ ಹಿಂದಿರುವ ಕಾರಣವನ್ನು ಯಾರೂ ಈ ವರೆಗೆ ವಿವರಣೆ ನೀಡಿಲ್ಲ.

ದುಮಾಸ್ ಬೀಚ್ ಗೆ ತಲುಪುವ ಬಗೆ

ದುಮಾಸ್ ಬೀಚ್ ಗೆ ತಲುಪುವ ಬಗೆ

Marwada

ದುಮಾಸ್ ಬೀಚ್ ಗೆ ತಲುಪಲು ಅನೇಕ ದಾರಿಗಳಿದ್ದು ಇಲ್ಲಿಗೆ ತಲುಪುವುದು ಬಹಳ ಸುಲಭ. ಈ ಬೀಚ್ ಸೂರತ್ ನಗರದಿಂದ ಸುಮಾರು 20 ಕಿ.ಮೀ ದೂರದಲ್ಲಿದ್ದು, ಇಲ್ಲಿಗೆ ತಲುಪಲು ಸುಮಾರು ಅರ್ಧ ಗಂಟೆಗಳು ಬೇಕಾಗುವುದು. ದುಮಾಸ್ ಬೀಚ್ ತಲುಪಲು ನಗರದಿಂದ ಅನೇಕ ಸ್ಥಳೀಯ ವಾಹನಗಳು ಸಿಗುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X