Search
  • Follow NativePlanet
Share
» »ಈ ಗ್ರಾಮದ ಜನರಿಗೆ ಹನುಮನೆಂದರೆ ಅಷ್ಟಕ್ಕಷ್ಟೆ!

ಈ ಗ್ರಾಮದ ಜನರಿಗೆ ಹನುಮನೆಂದರೆ ಅಷ್ಟಕ್ಕಷ್ಟೆ!

By Vijay

ಇಲ್ಲಿ ಮೂಡಿಬರುವ ಪ್ರವಾಸಿ ಲೇಖನಗಳಲ್ಲಿ ಒಂದು ಲೇಖನದ ಮೂಲಕ ಮಹಾರಾಷ್ಟ್ರದಲ್ಲಿರುವ ಒಂದು ಗ್ರಾಮದಲ್ಲಿ ಆಂಜನೇಯನನ್ನು ಎಂದೂ ಆರಾಧಿಸಲಾಗಿರುವುದರ ಕುರಿತು ತಿಳಿದಿದ್ದಿರಿ. ಗೊತ್ತಿಲ್ಲದಿದ್ದರೆ ಇಲ್ಲಿ ಕ್ಲಿಕ್ ಮಾಡಿ. ಈಗ ವಿಷಯ ಏನಪ್ಪಾ ಅಂದರೆ ಅದೇ ರೀತಿಯ ಇನ್ನೊಂದು ಗ್ರಾಮವೂ ಸಹ ಇದ್ದು ಮೊದ ಮೊದಲು ಇಲ್ಲಿನ ಜನರು ಆಂಜನೇಯ ಎಂದರೆ ಕೆಂಡಾಮಂಡಲವಾಗುತ್ತಿದ್ದರು.

ಆಂಜನೇಯನ ಕಿಷ್ಕಿಂಧೆಗೊಂದು ಭೇಟಿ

ಆದರೆ ಇಂದು ಪರಿಸ್ಥಿತಿಯು ಸಾಕಷ್ಟು ಸುಧಾರಿಸಿದೆ ಎಂದು ಹೇಳುತ್ತಾರಾದರೂ ಕುತೂಹಲ ಬಯಸುವ ಪ್ರವಾಸಿಗರ ಪಾಲಿಗೆ ಇಂದಿಗೂ ಇದು ಆಂಜನೇಯನನ್ನೆ ಕಡೆಗಣಿಸಲಾಗಿರುವ ಗ್ರಾಮವಾಗಿ ಆಕರ್ಷಿಸುತ್ತದೆ. ಅಲ್ಲದೆ ಈ ಗ್ರಾಮಕ್ಕೆ ಚಾರಣದ ಮೂಲಕ ಪ್ರವೇಶಿಸಬಹುದಾಗಿದ್ದು ಪ್ರವಾಸಿ ಚಾರಣ ಮಾರ್ಗವಾಗಿಯೂ ಇದು ಪ್ರಸಿದ್ಧವಾಗಿದೆ.

ಈ ಗ್ರಾಮದ ಜನರಿಗೆ ಹನುಮನೆಂದರೆ ಅಷ್ಟಕ್ಕಷ್ಟೆ!

ಚಿತ್ರಕೃಪೆ: gautamnguitar

ಈ ಗ್ರಾಮವಿರುವುದು ಉತ್ತರಾಖಂಡದ ಅಲ್ಮೋರಾನಲ್ಲಿ. ಧೌಲಿ ಗಂಗಾ ನದಿಯಗುಂಟ ಜುಮ್ಮಾ ಎಂಬ ಸ್ಥಳದವರೆಗೆ ವಾಹನಗಳ ಮೂಲಕ ತಲುಪಬಹುದಾಗಿದ್ದು, ನಂತರ ಜುಮ್ಮಾದಿಂದ ಈ ಗ್ರಾಮಕ್ಕೆ ಚಾರಣ ಕೈಗೊಳ್ಳಬಹುದು. ಈ ಗ್ರಾಮದ ಹೆಸರು ದ್ರೋಣಗಿರಿ. ದುಣಗಿರಿ ಎಂತಲೂ ಸಹ ಕರೆಯಲ್ಪಡುತ್ತದೆ.

ಇನ್ನೊಂದು ವಿಶೇಷವೆಂದರೆ ಹಿಮಾಲಯ ಪರ್ವತಗಳಿಗೆ ಸನ್ನಿಹಿತವಾಗಿರುವ ದ್ರೋಣಗಿರಿ ಎಂಬ ಪರ್ವತದ ಕೆಳಗೆ ಈ ಗ್ರಾಮ ಸ್ಥಿತವಿದ್ದು ಪರ್ವತದ ಹೆಸರಿನಿಂದಲೆ ಈ ಗ್ರಾಮ ಕರೆಸಿಕೊಳುತ್ತದೆ. ಹಿಮಾಲಯ ಸರಣಿಯಲ್ಲಿ ಇನ್ನೊಂದು ದ್ರೋಣಗಿರಿಯಿದ್ದು ಅದರೊಂದಿಗೆ ಈ ದ್ರೋಣಗಿರಿಯನ್ನು ಕಲ್ಪಿಸಿಕೊಳ್ಳಬೇಡಿ.

ಈ ಗ್ರಾಮದ ಜನರಿಗೆ ಹನುಮನೆಂದರೆ ಅಷ್ಟಕ್ಕಷ್ಟೆ!

ಚಿತ್ರಕೃಪೆ: gautamnguitar

ಅದು ಹಿಮಚ್ಛಾದಿತ ದ್ರೋಣಗಿರಿಯಾದರೆ ಇದು ದಟ್ಟ ಹಸಿರಿನ ಸಸ್ಯ ಸಂಪತ್ತಿನಿಂದ ಕಂಗೊಳಿಸುವ ದ್ರೋಣಗಿರಿ. ಸ್ಥಳ ಪುರಾಣದಂತೆ ಹಿಂದೆ ರಾಮಾಯಣದಲ್ಲಿ ಉಲ್ಲೇಖಿಸಲಾಗಿರುವ ಸಂಜೀವಿನಿ ಪರ್ವತ ಇದೆ ಆಗಿದೆ. ಇದು ಅತ್ಯಮುಲ್ಯ ಜೀವ ರಕ್ಷಕ ಔಷಧೀಯ ಗುಣವುಳ್ಳ ವಿವಿಧ ಸಸ್ಯಗಳಿಂದ ಕೂಡಿದ್ದ ಪರ್ವತವಾಗಿದ್ದು ಇದರ ಬಳಿ ವಾಸಿಸುತ್ತಿದ್ದ ಭೂಟಿಯಾ ಬುಡಕಟ್ಟು ಜನಾಂಗದವರು ಈ ಪರ್ವತವನ್ನು ತಮ್ಮ ಅಧಿ ದೇವತೆಯಾಗಿ ಪೂಜಿಸುತ್ತಿದ್ದರು.

ರಾಮಾಯಣ, ಮಹಾಭಾರತದ ಸ್ಥಳಗಳು

ರಾಮಾಯಣ ಯುದ್ಧದಲ್ಲಿ ಲಕ್ಷ್ಮಣನು ಗಾಯಗೊಂಡಾಗ ಆತನನ್ನು ರಕ್ಷಿಸಲು ಆಂಜನೇಯನಿಗೆ ನಿರ್ದಿಷ್ಟ ಸಸ್ಯವೊಂದನ್ನು ತರಬೇಕಾಗಿತ್ತು. ಆ ಸಸ್ಯ ಇಲ್ಲಿ ದೊರಕುತ್ತಿದ್ದರಿಂದ ಆಂಜನೇಯ ಇಲ್ಲಿಗೆ ಬಂದು ಆ ಸಸ್ಯದ ಗುರುತು ಸಿಗದೆ ಪರ್ವತದ ಒಂದು ಭಾಗವನ್ನೆ ಕಡಿದೊಯ್ದಿದ್ದರಿಂದ ಈ ಜನಾಂಗದವರಿಗೆ ಆಂಜನೇಯನ ಮೇಲೆ ಸಿಟ್ಟು ಬರಲು ಕಾರಣವಾಯಿತೆನ್ನಲಾಗಿದೆ.

ಈ ಗ್ರಾಮದ ಜನರಿಗೆ ಹನುಮನೆಂದರೆ ಅಷ್ಟಕ್ಕಷ್ಟೆ!

ಚಿತ್ರಕೃಪೆ: wikimedia

ಇದಕ್ಕೆ ಕುರುಹು ಎಂಬಂತೆ ಪರ್ವತದ ಮೇಲಿನ ಭಾಗವು ಚೂಪಾಗಿರದೆ ಕಡಿಯಲಾಗಿದೆ ಎನ್ನುವಂತಿದೆ. ಆದರೆ ಇಂದು ಇಲ್ಲಿ ಅನೇಕ ಸಸ್ಯಗಳು ಬೆಳೆದಿರುವುದರಿಂದ ಇಲ್ಲಿನ ಜನರಿಗೆ ಸಾಕಷ್ಟು ಸಂತಸವಾಗಿದೆ. ಅಲ್ಲದೆ ಇತ್ತೀಚೆಗೆ ಪತಂಜಲಿ ಕೇಂದ್ರದ ಪಂಡಿತರು ಇಲ್ಲಿಗೆ ಭೇಟಿ ನೀಡಿ ಕೆಲವು ಅದ್ಭುತ ಔಷಧೀಯ ಸಸ್ಯಗಳಿರುವುದನ್ನು ಪತ್ತೆ ಹಚ್ಚಿದ್ದಾರೆ.

ಈ ಗ್ರಾಮದ ಜನರಿಗೆ ಹನುಮನೆಂದರೆ ಅಷ್ಟಕ್ಕಷ್ಟೆ!

ದ್ರೋಣಗಿರಿ ದೇವಿ ದೇವಾಲಯ, ಚಿತ್ರಕೃಪೆ: Gautam Dhar

ನೀವು ಈ ಪರ್ವತ ನೋಡಲು ಬಯಸಿದ್ದರೆ ಉತ್ತರಾಖಂಡಕ್ಕೆ ಪ್ರವಾಸ ಯೋಜಿಸಿದಾಗ ಇದಕ್ಕೆ ತೆರಳುವುದನ್ನೂ ಯೋಜಿಸಿ. ದೆಹಲಿಯಿಂದ ಸುಮಾರು 400 ಕಿ.ಮೀ ಗಳಷ್ಟು ದೂರದಲ್ಲಿ ಈ ಗ್ರಾಮವಿದೆ. ಇನ್ನೊಂದು ವಿಷಯವೆಂದರೆ ಇದು ಶಕ್ತಿ ದೇವಿಗೆ ಹೆಸರುವಾಸಿಯಾಗಿದ್ದು ಗ್ರಾಮದಲ್ಲಿ ದುಣಗಿರಿ ದೇವಿಯ ದೇವಾಲಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X