Search
  • Follow NativePlanet
Share
» »ಈ ಮಂದಿರದೊಳಗಿದ್ದಾಳೆ ಮುಸ್ಲಿಂ ದೇವಿ, ವಿದೇಶಕ್ಕೆ ಹೋಗ್ಬೇಕಾದ್ರೆ ಇಲ್ಲಿ ಕೈ ಮುಗಿಯಿರಿ

ಈ ಮಂದಿರದೊಳಗಿದ್ದಾಳೆ ಮುಸ್ಲಿಂ ದೇವಿ, ವಿದೇಶಕ್ಕೆ ಹೋಗ್ಬೇಕಾದ್ರೆ ಇಲ್ಲಿ ಕೈ ಮುಗಿಯಿರಿ

ನಮ್ಮ ದೇಶದಲ್ಲಿ ಎಷ್ಟೆಲ್ಲಾ ದೇವಿ ದೇವತೆಯರ ಮಂದಿರವಿದೆ. ಮಂದಿರವೆಂದರೆ ಎಲ್ಲರ ಪ್ರಕಾರ ಅದು ಹಿಂದೂ ದೇವಾಲಯವಾಗಿರುತ್ತದೆ. ಅಲ್ಲಿ ಹಿಂದೂ ದೇವಿ ಅಥವಾ ದೇವತೆಯ ಪೂಜೆ ನಡೆಯುತ್ತದೆ . ಆದರೆ ಇಂದು ನಾವು ಒಂದು ವಿಶೇಷ ಮಂದಿರದ ಬಗ್ಗೆ ತಿಳಿಸಲಿದ್ದೇವೆ. ಅಲ್ಲಿ ಹಿಂದೂ ದೇವರಲ್ಲ ಬದಲಾಗಿ ಮುಸ್ಲಿಂ ಮಹಿಳೆಯನ್ನು ಪೂಜಿಸುತ್ತಾರೆ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

ಈ ವಿಶೇಷ ದೇವಾಲಯವು ಗುಜರಾತ್‌ನ ಅಹಮದಾಬಾದ್‌ನಿಂದ 40 ಕಿ.ಮೀ ದೂರದಲ್ಲಿನ ಜುಲಾಸನ್ ಎನ್ನುವ ಹಳ್ಳಿಯಲ್ಲಿದೆ. ಈ ಮಂದಿರವನ್ನು ಡೋಲಾ ಮಾತಾ ಮಂದಿರ ಎಂದು ಕರೆಯಲಾಗುತ್ತದೆ.

ಬಾಬಾ ಬುಡನ್ ಗಿರಿ ಬಳಿ ಇರುವ ಎಂದಿಗೂ ಬತ್ತದ ಈ ಜಲಪಾತ ನೋಡಿದ್ದೀರಾ?<br /> ಬಾಬಾ ಬುಡನ್ ಗಿರಿ ಬಳಿ ಇರುವ ಎಂದಿಗೂ ಬತ್ತದ ಈ ಜಲಪಾತ ನೋಡಿದ್ದೀರಾ?

ಹಿಂದೂಗಳ ಧಾರ್ಮಿಕ ತಾಣ

ಹಿಂದೂಗಳ ಧಾರ್ಮಿಕ ತಾಣ

ಈ ಮಂದಿರದಲ್ಲಿ ಹಿಂದೂ ಭಕ್ತರು ಅನೇಕ ವರ್ಷಗಳಿಂದ ಪೂಜಿಸುತ್ತಾ ಬಂದಿದ್ದಾರೆ. ಅನೇಕ ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಬಂದು ತಮ್ಮ ಬೇಡಿಕೆಯನ್ನು ದೇವಿಯ ಮುಂದಿಡುತ್ತಾರೆ. ಇಂದಿಗೂ ನವರಾತ್ರಿ ಸಂದರ್ಭದಲ್ಲಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಹಳ್ಳಿಯ ರಕ್ಷಣೆಗಾಗಿ ಬಲಿದಾನ ನೀಡಿದಳು

ಹಳ್ಳಿಯ ರಕ್ಷಣೆಗಾಗಿ ಬಲಿದಾನ ನೀಡಿದಳು

ಈ ಮಂದಿರಕ್ಕೆ ಸಂಬಂಧಿಸಿದಂತೆ ಒಂದು ಕಥೆ ಇದೆ. 250 ವರ್ಷಗಳ ಹಿಂದೆ ಡೋಲಾ ಎನ್ನುವ ಹೆಸರಿನ ಮುಸ್ಲಿಂ ಮಹಿಳೆ ಇದ್ದಳು. ಆಕೆ ಬಹಳ ಶೌರ್ಯವಂತೆಯಾಗಿದ್ದಳು. ಬೇರೆ ಊರಿನವರು ಈ ಊರಿಗೆ ಬಂದು ತೊಂದರೆ ನೀಡುತ್ತಿದ್ದಾಗ ಆಕೆ ಎಲ್ಲರನ್ನು ಎದುರಿಸಿ ನಿಂತಳು. ಶತ್ರುಗಳಿಂದ ತಮ್ಮ ಊರನ್ನು ಉಳಿಸುತ್ತಾ ಆಕೆ ತನ್ನ ಪ್ರಾಣತ್ಯಾಗ ಮಾಡಿದಳು.

ಅಯ್ಯಪ್ಪ ಸ್ವಾಮಿಯನ್ನು ವರಿಸಲು ಕಾದಿರುವ ಮಲ್ಲಿಕಾಪುರಥಮ್ಮನ ದೇವಾಲಯದ ಬಗ್ಗೆ ಗೊತ್ತಾ?ಅಯ್ಯಪ್ಪ ಸ್ವಾಮಿಯನ್ನು ವರಿಸಲು ಕಾದಿರುವ ಮಲ್ಲಿಕಾಪುರಥಮ್ಮನ ದೇವಾಲಯದ ಬಗ್ಗೆ ಗೊತ್ತಾ?

ಕೊನೆ ಘಳಿಗೆಯಲ್ಲಿ ನಡೆಯುತು ಚಮತ್ಕಾರ

ಕೊನೆ ಘಳಿಗೆಯಲ್ಲಿ ನಡೆಯುತು ಚಮತ್ಕಾರ

ಆಕೆ ಕೊನೆ ಘಳಿಗೆಯಲ್ಲಿ ಉಸಿರಾಡುತ್ತಿದ್ದಾಗ ಆಕೆಯ ಶರೀರ ಹೂವಾಗಿ ಬದಲಾಗಲಾರಂಭಿಸಿತು. ಊರಿನ ಜನರಿಗೆ ತಮ್ಮ ಕಣ್ಣಲ್ಲಿ ನಂಬಲಾರದಾದರು. ಆಕೆಯ ಬಲಿದಾನದ ನೆನಪಿಗಾಗಿ ಈ ಮಂದಿರವನ್ನು ನಿರ್ಮಿಸಲಾಯಿತು. ಆ ಮಂದಿರಕ್ಕೆ ಡೋಲಾ ಮಾತಾ ಮಂದಿರ ಎನ್ನುವ ಹೆಸರನ್ನಿಟ್ಟರು. ಇಲ್ಲಿ ಒಂದು ಕಲ್ಲಿನ ಪೂಜೆ ನಡೆಯುತ್ತದೆ. ಅದನ್ನು ಸೀರೆಯಲ್ಲಿ ಮುಚ್ಚಲಾಗಿದೆ.

ವಿದೇಶಕ್ಕೆ ಹೋಗಬೇಕಾದ್ರೆ ಇಲ್ಲಿ ಪೂಜೆ ಮಾಡಿ

ವಿದೇಶಕ್ಕೆ ಹೋಗಬೇಕಾದ್ರೆ ಇಲ್ಲಿ ಪೂಜೆ ಮಾಡಿ

ಈ ಮಂದಿರವನ್ನು ಡಾಲರ್ ಮಾತಾ ಮಂದಿರ ಎಂದೂ ಕರೆಯುತ್ತಾರೆ. ಯಾಕೆಂದರೆ ಈ ಹಳ್ಳಿಯ ಹೆಚ್ಚಿನ ಜನರು ಅಮೇರಿಕಾದಲ್ಲಿ ನೆಲೆಸಿದ್ದಾರೆ. ೭-೮ ಸಾವಿರ ಜನಸಂಖ್ಯೆ ಇರುವ ಈ ಹಳ್ಳಿಯ ಸುಮಾರು ೨ ಸಾವಿರ ಜನ ಅಮೇರಿಕಾದಲ್ಲಿದ್ದಾರೆ. ವಿದೇಶಕ್ಕೆ ಹೋಗಬೇಕೆಂದಿರುವವರು ತಮ್ಮ ಬೇಡಿಕೆಯನ್ನು ಹಿಡಿದುಕೊಂಡು ಬಂದು ದೇವಿಯ ಮುಂದೆ ಇಡುತ್ತಾರೆ. ಅವರ ಬೇಡಿಕೆ ಈಡೇರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X