Search
  • Follow NativePlanet
Share
» »ಚೆನ್ನಪಟ್ಟಣದಲ್ಲಿದೆಯಂತೆ ನಾಯಿ ದೇವಸ್ಥಾನ...ಇದರ ಬಗ್ಗೆ ಕೇಳಿದ್ದೀರಾ?

ಚೆನ್ನಪಟ್ಟಣದಲ್ಲಿದೆಯಂತೆ ನಾಯಿ ದೇವಸ್ಥಾನ...ಇದರ ಬಗ್ಗೆ ಕೇಳಿದ್ದೀರಾ?

ಭಾರತದಲ್ಲಿ ಮೊದಲೇ ದೇವಸ್ಥಾನಗಳ ಸಂಖ್ಯೆ ಅಧಿಕ. ಇಲ್ಲಿ ದೇವರುಗಳಿಗೆ ಮಾತ್ರವಲ್ಲ ಪ್ರಾಣಿಗಳಿಗೂ ದೇವಸ್ಥಾನವನ್ನು ಕಟ್ಟಿಸುತ್ತಾರೆ. ನಾವಿಂದು ಹೇಳಹೊರಟಿರುವುದು ನಾಯಿ ದೇವಸ್ಥಾನದ ಬಗ್ಗೆ. ಹೌದು ನಾಯಿಗಳಿಗೂ ದೇವಸ್ಥಾನವಿದೆ .

ಇಲ್ಲಿ ಬುಲೆಟ್‌ ಬೈಕೇ ದೇವರು...ರಾಜಸ್ತಾನದಲ್ಲಿದೆ ಬುಲೆಟ್ ಬಾಬಾ ಮಂದಿರ !ಇಲ್ಲಿ ಬುಲೆಟ್‌ ಬೈಕೇ ದೇವರು...ರಾಜಸ್ತಾನದಲ್ಲಿದೆ ಬುಲೆಟ್ ಬಾಬಾ ಮಂದಿರ !

ಎಲ್ಲಿದೆ ಈ ದೇವಸ್ಥಾನ

ಎಲ್ಲಿದೆ ಈ ದೇವಸ್ಥಾನ

PC:Vershita yadav
ಕರ್ನಾಟಕದ ರಾಮನಗರ ಜಿಲ್ಲೆಯ ಚೆನ್ನಪಟ್ಟಣದ ಅಗ್ರಹಾರ ವಲಗೇರೆಹಳ್ಳಿ ಎನ್ನುವ ಸ್ಥಳದಲ್ಲಿದಲ್ಲಿ ಈ ನಾಯಿ ದೇವಸ್ಥಾನವಿದೆ. ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ. ಕೇರಳದಲ್ಲಿ ನಾಯಿಯನ್ನು ಕೊಲ್ಲುತ್ತಾರೆ. ಚೀನಾದಲ್ಲಿ ನಾಯಿ ಮಾಂಸವನ್ನೇ ತಿನ್ನುತ್ತಾರೆ. ಹೀಗಿರುವಾಗ ಕರ್ನಾಟಕದಲ್ಲಿ ಈ ನಾಯಿಯನ್ನು ಪೂಜಿಸುತ್ತಾರೆ.

ಊರಿನವರಿಗೆ ಗೊತ್ತಿಲ್ಲ ನಾಯಿ ದೇವಸ್ಥಾನ

ಊರಿನವರಿಗೆ ಗೊತ್ತಿಲ್ಲ ನಾಯಿ ದೇವಸ್ಥಾನ

ಚೆನ್ನಪಟ್ಟಣ ಸಣ್ಣ ಊರಾದರೂ ಈ ದೇವಸ್ಥಾನದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ನಾಯಿದೇವಸ್ಥಾನ ಇದೆ ಎಂದೇ ಗೊತ್ತಿಲ್ಲ. ಅಲ್ಲಿ ಅಕ್ಕಪಕ್ಕದಲ್ಲೇ ಎರಡು ಗುಡಿಗಳಿದ್ದವು. ಒಂದು ದೊಡ್ಡದು ಹಾಗೂ ಇನ್ನೊಂದು ಸಣ್ಣದು . ಸಣ್ಣ ಗುಡಿಯಲ್ಲಿ ಎರಡು ನಾಯಿಗಳನ್ನು ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಒಂದು ಬಿಳಿ ಬಣ್ಣದ ನಾಯಿ ಇನ್ನೊಂದು ಕಂದು ಬಣ್ಣದ ನಾಯಿ.

ಕೆಂಪಮ್ಮ ದೇವಸ್ಥಾನ

ಕೆಂಪಮ್ಮ ದೇವಸ್ಥಾನ

PC: youtube
ಕೆಂಪಮ್ಮ ದೇವಸ್ಥಾನವನ್ನು ಉದ್ಯಮಿಯೊಬ್ಬರು 2006ರಲ್ಲಿ ನಿರ್ಮಿಸಿದ್ದರು. ಅದರ ಪಕ್ಕದಲ್ಲಿ ಈ ನಾಯಿ ದೇವಸ್ಥಾನವನ್ನು 2010ರಲ್ಲಿ ನಿರ್ಮಿಸಲಾಗಿದೆ. ಕೆಂಪಮ್ಮನ ಕಾವಲಿಗಾಗಿ ಈ ನಾಯಿ ದೇವಸ್ಥಾನವನ್ನು ಪಕ್ಕದಲ್ಲೇ ನಿರ್ಮಿಸಲಾಗಿದೆ.

ಈ ದೇವಸ್ಥಾನದ ಹಿಂದಿನ ಕಥೆ

ಈ ದೇವಸ್ಥಾನದ ಹಿಂದಿನ ಕಥೆ

PC:Oleg Yunakov
ಈ ಊರಿನ ಮುಖ್ಯ ದೇವರೆ ಕೆಂಪಮ್ಮ. ಏಕಾಏಕಿ ಈ ಊರಿನ ಎರಡು ನಾಯಿಗಳು ಕಾಣೆಯಾಗುತ್ತವೆ. ಆಗ ಆ ದೇವಿ ಯಾರದ್ದೋ ಕನಸಿನಲ್ಲಿ ಬಂದು ಆ ಎರಡು ನಾಯಿಗಳು ನನ್ನ ಕಾವಲು ಕಾಯಲು ಬೇಕು. ಹಾಗೂ ಊರಿನ ರಕ್ಷಣೆಗೆ ಬೇಕು ಎಂದು ಹೇಳಿರುವುದಾಗಿ ಹೇಳಿದರು. ಹಾಗಾಗಿ ಆ ಎರಡು ನಾಯಿಗಳ ಮೂರ್ತಿಯನ್ನು ಕೆಂಪಮ್ಮನ ಗುಡಿಯ ಪಕ್ಕದಲ್ಲೇ ನಿರ್ಮಿಸಲಾಗಿದೆ. ಈ ಗುಡಿ ನಿರ್ಮಿಸಿ 8 ವರ್ಷಗಳಾದರೂ ಹೆಚ್ಚಿನವರಿಗೆ ಇದರ ಬಗ್ಗೆ ಮಾಹಿತಿ ಇಲ್ಲ.

ವಾರದಲ್ಲಿ ಮೂರು ದಿನ ಪೂಜೆ

ವಾರದಲ್ಲಿ ಮೂರು ದಿನ ಪೂಜೆ

PC: Victorgrigas
ಈ ಎರಡೂ ದೇವಸ್ಥಾನಗಳಲ್ಲಿ ವಾರದಲ್ಲಿ ಮೂರು ದಿನ ಸಂಜೆ ಪೂಜೆ ನೆರವೇರುತ್ತದೆ. ವರ್ಷದಲ್ಲಿ ಒಮ್ಮೆ ಜಾತ್ರೆ ನೆರವೇರುತ್ತದೆ. ಭಾನುವಾರ, ಸೋಮವಾರ, ಗುರುವಾರ ಈ ಮೂರು ದಿನ ಸಂಜೆ 4ರಿಂದ 6 ಗಂಟೆ ವರೆಗೆ ಪೂಜೆ ನಡೆಯುತ್ತದೆ.

ಕುರಿ ಬಲಿ ಕೊಡ್ತಾರೆ

ಕುರಿ ಬಲಿ ಕೊಡ್ತಾರೆ

PC:Karishma Goenka
ವರ್ಷದಲ್ಲಿ ಒಮ್ಮೆ ನಡೆಯುವ ಜಾತ್ರೆಯಲ್ಲಿ ಕುರಿಯನ್ನು ಕಡಿಯಲಾಗುತ್ತದೆ. ಇಲ್ಲಿನ ಜನ ದುಷ್ಟಶಕ್ತಿಗಳಿಂದ ಊರನ್ನು ಕಾಪಾಡುವಂತೆ ಈ ದೇವಸ್ಥಾನದಲ್ಲಿ ಪ್ರಾರ್ಥಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X