Search
  • Follow NativePlanet
Share
» »ಗಣಪತಿ ಬಪ್ಪ ಮೋರಿಯ: ಪ್ರಸಿದ್ದ ದೊಡ್ಡಗಣೇಶನ ದೇವಾಲಯಕ್ಕೆ ಭೇಟಿ ಕೊಡಿ

ಗಣಪತಿ ಬಪ್ಪ ಮೋರಿಯ: ಪ್ರಸಿದ್ದ ದೊಡ್ಡಗಣೇಶನ ದೇವಾಲಯಕ್ಕೆ ಭೇಟಿ ಕೊಡಿ

ಬೆಂಗಳೂರಿನ ಬಸವನಗುಡಿಗೆ ಭೇಟಿ ಕೊಟ್ಟು ದೊಡ್ಡಗಣೇಶನ ಕೃಪೆಗೆ ಪಾತ್ರರಾಗಿ

ಕಡಲೆಕಾಯಿಯು ಭೂಮಿಯ ಅಡಿ ಭಾಗದಲ್ಲಿ ಬೆಳೆಯುವಂಹುದಾಗಿದ್ದು, ಎಲ್ಲಾ ರೈತರು ಒಂದು ಸೂಕ್ತ ಸಮಯದಲ್ಲಿ ಅದರ ಕಟಾವು ಮಾಡುವ ತಯಾರಿಯಲ್ಲಿರುತ್ತಾರೆ. ಅದೇ ಸಮಯದದಲ್ಲಿ ಅಲ್ಲಿಗೆ ಬರುವ ಒಂದು ರಾಕ್ಷಸ ಗಾತ್ರದ ಗೂಳಿಯು ಅದನ್ನು ನಾಶಮಾಡುವ ಆತಂಕವನ್ನು ಹೊಂದುತ್ತಾರೆ ಈ ಸಮಯದಲ್ಲಿ ರೈತರೆಲ್ಲಾ ಸೇರಿ ಈ ಗೂಳಿಯನ್ನು ಒಟ್ಟಾಗಿ ಸೇರಿ ಓಡಿಸುವುದಾಗಿ ಉಪಾಯ ಮಾಡುತ್ತಾರೆ. ಕಡೆಗೂ ಆ ಗೂಳಿಯು ನೆಲಕಡಲೆ ಬೆಳೆಯನ್ನು ತಿನ್ನುವ ಸಲುವಾಗಿ ಗದ್ದೆಗೆ ಬರುತ್ತದೆ ಆ ಸಮಯದಲ್ಲಿ ರೈತರು ಅದನ್ನು ಭಯಪಡಿಸಿ ಓಡಿಸಲು ಪ್ರಾರಂಭಿಸುತ್ತಾರೆ. ಹೀಗೆ ಓಡಿಸಲ್ಪಟ್ಟ ಗೂಳಿಯು ಒಂದು ಹಳ್ಳಿಯ ಆಲದ ಮರದ ಅಡಿಯಲ್ಲಿರುವ ಚಪ್ಪಡಿ ಕಲ್ಲಿನ ವೇದಿಕೆಯ ಮೇಲೆ ಕುಳಿತುಕೊಳ್ಳುತ್ತದೆ. ಜನರು ಹತ್ತಿರ ಬಂದು ನೋಡುವಾಗ ಅದೇ ಗೂಳಿಯು ಕಲ್ಲಾಗಿರುವುದನ್ನು ಕಾಣುತ್ತಾರೆ.

nandi3

ಬಸವನಗುಡಿಯಲ್ಲಿರುವ ನಂದಿ ವಿಗ್ರಹ

ದೊಡ್ಡ ಬಸವನಗುಡಿ (ನಂದಿ ದೇವಾಲಯ) ಜನಪದ ಕಥೆಯು ಬಹಳ ಆಸಕ್ತಿದಾಯಕವಾದುದಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲಿ ನಂದಿಯ ಬೃಹದ್ ಪ್ರತಿಮೆಯನ್ನು ಕಾಣಬಹುದಾಗಿದೆ. ದೇವಾಲಯದ ಇನ್ನೊಂದು ಬದಿಯಲ್ಲಿ ದಾಜನನಿಬಿಡ ರಸ್ತೆಯ ಎರಡೂ ಬದಿಯಲ್ಲಿ ಎತ್ತರದ ಮರಗಳಿಂದ ಕೂಡಿದೆ. ಇದು ಹಳೆಯ ಬೆಂಗಳೂರಿನ ಚಿತ್ರಣವನ್ನು ನೀಡುತ್ತಾ, ಬಸವನಗುಡಿ ಪ್ರದೇಶಕ್ಕೆ ನಿಮ್ಮನ್ನು ಆಹ್ವಾನಿಸುತ್ತದೆ. ಹಸಿರು ಕಲ್ಲಿನ ಉದ್ಯಾನವನದ ಹಿನ್ನೆಲೆಯಲ್ಲಿ ನೆಲೆಗೊಂಡಿರುವ, ಹಳೆಯ ಪರಂಪರೆಯನ್ನು ಹೊಂದಿದ ದೊಡ್ಡ ಗಣೇಶನ ಗುಡಿಯು ಬೆಂಗಳೂರಿನ ಆತ್ಮವಾಗಿದೆ.

entranceofganeshatemple

ದೊಡ್ಡ ಗಣೇಶ ದೇವಾಲಯದ ಪ್ರವೇಶದ್ವಾರ

ದೊಡ್ಡ ಎಂದರೆ ಬೃಹದ್ ಎಂದು ಕನ್ನಡದಲ್ಲಿ ಅರ್ಥೈಸುವ ಈ ದೇವಾಲಯದ ಗಣೇಶನ ವಿಗ್ರಹವು ಏಕ ಶಿಲೆಯದ್ದಾಗಿದ್ದು ಅತ್ಯಂತ ಪವಿತ್ರವಾದ ದೇವರಾಗಿದೆ. ಹೊಸ ವಾಹನವಾಗಲಿ ಅಥವಾ ಹೊಸ ಚಿತ್ರದ ಮುಹೂರ್ತ (ಆರಂಭ) ಎಲ್ಲವೂ ನಗರದ ಈ ದೇವಸ್ಥಾನದಿಂದ ಆರಂಭವಾಗುತ್ತದೆ. ನಂದಿ ದೇವಾಲಯದ ಜೊತೆಗೆ ದೊಡ್ಡ ಗಣೇಶ ದೇವಾಲಯವು ಬೆಂಗಳೂರಿನ ಗತಕಾಲ ವೈಭವವನ್ನು ನೆನಪಿಸುತ್ತದೆ.

ಆನೆಯ ತಲೆಯ ಗಣಪತಿ ದೇವರ ಆಶೀರ್ವಾದದೊಂದಿಗೆ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದು ಸಾಮಾನ್ಯವಾಗಿ ಹಿಂದೂ ಸಂಪ್ರದಾಯವಾಗಿದೆ. ಬೆಂಗಳೂರಿನಲ್ಲಿ ಪ್ರಮುಖ ಘಟನೆಗಳು ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಿಂದ ಪ್ರಾರಂಭವಾಗುತ್ತವೆ.

nandi1

ನಂದಿ ದೇವಾಲಯದ ಗೋಪುರ (ಬುಲ್ ಟೆಂಪಲ್)

ದೊಡ್ಡ ಗಣೇಶನ ವಿಗ್ರಹವಿರುವ ಒಳಗಿನ ಗರ್ಭಗುಡಿ ಪ್ರವೇಶದ್ವಾರದಿಂದ ಗೋಚರಿಸುತ್ತದೆ. ಆವರಣವನ್ನು ಪ್ರವೇಶಿಸುವ ಮೊದಲು ಚಪ್ಪಲಿಯನ್ನು ಹೊರಗೆ ಬಿಡಲಾಗುತ್ತದೆ. ಗಣೇಶನ ದೇವಸ್ಥಾನದ ಪಕ್ಕದಲ್ಲಿ, ಬುಲ್ ಟೆಂಪಲ್‌ಗೆ ನಿಮ್ಮನ್ನು ಕರೆದೊಯ್ಯುವ ಎತ್ತರದ ಮಾರ್ಗವಿದೆ.

nandi4

ಬುಲ್ ಟೆಂಪಲ್ (ನಂದಿ ದೇವಾಲಯ)

ಇಲ್ಲಿಯ ನಂದಿ ವಿಗ್ರಹವು ವರ್ಷದಿಂದ ವರ್ಷಕ್ಕೆ ಬೆಳೆಯುತ್ತದೆ ಎಂದು ನಂಬಲಾಗುತ್ತದೆ. ಇದು ಮುಂದಕ್ಕೆ ಬೆಳೆಯುವುದನ್ನು ನಿಲ್ಲಿಸುವ ಸಲುವಾಗಿ ವಿಗ್ರಹದ ತಲೆಯ ಮೇಲೆ ಮರದ ಹಲಗೆಯನ್ನು ಹಾಕಿದ್ದರೆನ್ನಲಾಗುತ್ತಿದ್ದು ಅದು ಇಂದಿಗೂ ಕಂಡುಬರುತ್ತದೆ.

138562779021

ಬ್ಯೂಗಲ್ ರಾಕ್ ಉದ್ಯಾನವನ

ಬ್ಯೂಗಲ್ ರಾಕ್ ಬ್ಯೂಗಲ್ ರಾಕ್ ಹಳೆಯ ಉದ್ಯಾನವನವಾಗಿದ್ದು, ಕೆಂಪೇಗೌಡರ (ನಗರದ ಸ್ಥಾಪಕ) ಸೈನ್ಯವು ಬಗಲ್ ಊದಲು ಬಳಸಲಾಗುತ್ತಿತ್ತು. ದೊಡ್ಡ ಗಣೇಶನ ಗುಡಿಯ ಹಿಂದೆ ಇರುವ ಈ ಉದ್ಯಾನವನವು ಬೆಂಗಳೂರಿನ ನೆಚ್ಚಿನ ಆಕರ್ಷಣೆಗಳಲ್ಲಿ ಒಂದಾಗಿದೆ.

peanut-festival-2

ಕಡಲೆಕಾಯಿ ಪರಿಷೆ (ಕಡಲೆಕಾಯಿ ಉತ್ಸವ)

ಪ್ರತೀವರ್ಷ 3-ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆ ಅಥವಾ ಮೇಳವು ನಗರದಲ್ಲಿ ನಡೆಯುವ ಅತ್ಯಂತ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಕಡ್ಲೆಕಾಯಿ ಪರಿಷೆಯು ವರ್ಣರಂಜಿತ ಮತ್ತು ರೋಮಾಂಚನಕಾರಿ ಜಾತ್ರೆಯಾಗಿದ್ದು ಇದು ದೊಡ್ಡಗಣೇಶ ಹಾಗೂ ನಂದಿ ದೇವಸ್ಥಾನದ ಬಳಿ ನಡೆಯುತ್ತದೆ ಮತ್ತು ಆ ದಿನಗಳಲ್ಲಿ ಈ ಸ್ಥಳಗಳಲ್ಲಿ ಸಂಚಾರವನ್ನು ಸಹ ನಿರ್ಬಂಧಿಸಲಾಗುತ್ತದೆ.

ಬೆಂಗಳೂರಿನಲ್ಲಿ ಪ್ರವಾಸದಲ್ಲಿದ್ದು, ದೊಡ್ಡ ಗಣೇಶನ ದೇವಾಲಯಕ್ಕೆ ಭೇಟಿ ಕೊಡದಿದ್ದರೆ ನಿಮ್ಮ ಪ್ರವಾಸವು ಅಪೂರ್ಣವೆಂದೇ ಹೇಳಬಹುದು. ದೊಡ್ಡ ಗಣಪತಿ ದೇವರು ಈ ನಗರದ ರಕ್ಷಕ ಎಂಬುದು ಜನರ ನಂಬಿಕೆಯಾಗಿದ್ದು, ಜನರು ಈ ದೇಗುಲದ ಬಗ್ಗೆ ಅಪಾರ ಭಕ್ತಿ ಮತ್ತು ಪ್ರೀತಿಯನ್ನು ಹೊಂದಿದ್ದಾರೆ ಅಷ್ಟೇ ಅಲ್ಲದೆ ಗಣಪತಿಯ ದೈತ್ಯಾಕಾರದ ವಿಗ್ರಹವನ್ನು ನೋಡುತ್ತಿದ್ದಂತೆಯೇ ನಿಮ್ಮನ್ನು ತಕ್ಷಣವೇ ಈ ದೇವರಲ್ಲಿ ಪ್ರೀತಿ ಹಾಗೂ ಭಕ್ತಿಯ ಭಾವವನ್ನು ಮೂಡಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X