Search
  • Follow NativePlanet
Share
» »ಉತ್ತರದ ಶಿಮ್ಲಾ ಜನಪ್ರೀಯತೆಯ ರಹಸ್ಯ!

ಉತ್ತರದ ಶಿಮ್ಲಾ ಜನಪ್ರೀಯತೆಯ ರಹಸ್ಯ!

ಉತ್ತರ ಭಾರತದ ಹಿಮಾಚಲ ಪ್ರದೇಶ ರಾಜ್ಯದ ರಾಜಧಾನಿ ನಗರವಾಗಿರುವ ಶಿಮ್ಲಾ ಪ್ರವಾಸಿ ದೃಷ್ಟಿಯಿಂದ ಮಹತ್ವದ ಸ್ಥಳವಾಗಿದ್ದು ಭಾರತದ ಅದ್ಭುತ ಪ್ರವಾಸಿ ತಾಣಗಳಲ್ಲಿ ಒಂದಾಗಿ ಗಮನಸೆಳೆಯುತ್ತದೆ

By Vijay

ಡಿಸೆಂಬರ್ ಪ್ರಾರಂಭವಾಗುತ್ತಿದ್ದಂತೆಯೆ ಸಾಕು, ಎಲ್ಲೆಡೆ ಮೈಕೊರೆವ, ಗಡ ಗಡ ಎಂದು ಬಾಯ್ ನಡುಗಿಸುವ ಚಳಿ, ಹಸಿರಿನಿಂದ ಕಂಗೊಳಿಸುವ ಸಸ್ಯರಾಶಿಗಳ ಮೇಲೆ ಹಾಲಿನಂತಹ ಅಭಿಶೇಕ, ಪ್ರಕೃತಿಯು ಭೂಮಿಯ ಮೇಲ್ಮೈ ಮೇಲೆ ಶ್ವೇತ ವರ್ಣದ ಹಾಸಿಗೆ ಹಾಸಿ ನಾಚಿ ನೀರಾಗಿ ನಿಂತಂತಹ ನೋಟ.

ಸ್ನೋ ಬಿದ್ದರೆ ಹಾಗೆ ಕಾಣುತ್ತದೆ ಶಿಮ್ಲಾ ನಗರ. ಹೌದು ಭಾರತದಲ್ಲಿ ಕಂಡುಬರುವ ಆಕರ್ಷಕ ಹಾಗೂ ಜನಪ್ರೀಯ ಪ್ರವಾಸಿ ತಾಣಗಳ ಪೈಕಿ ಶಿಮ್ಲಾ ನಗರವೂ ಸಹ ಒಂದು. ಇಲ್ಲಿನ ಪ್ರಕೃತಿ ಸೌಂದರ್ಯ ಕಣ್ಣಿಗೆ ಹಬ್ಬವನ್ನೆ ಉಂಟುಮಾಡುತ್ತದೆ. ಉತ್ತರ ಭಾರತದ ಹಿಮಾಚಲ ರಾಜ್ಯದ ರಾಜಧಾನಿಯಾಗಿ ಮೆರೆಯುತ್ತಿರುವ ಶಿಮ್ಲಾ ಚಿತ್ರೀಕರಣಕ್ಕೂ ಹೇಳಿ ಮಾಡಿಸಿದಂತಹ ತಾಣವಾಗಿದೆ.

ಜೀವನದಲ್ಲಿ ಒಮ್ಮೆಯಾದರೂ ಸಾಕು, ಶಿಮ್ಲಾದಂತಹ ಆಕರ್ಷಕ ಸ್ಥಳವನ್ನು ಖಂಡಿತವಾಗಿಯೂ ನೋಡಲೇಬೇಕು. ಭವ್ಯ ಭಾರತದ ಅಗಾಧ ಸೌಂದರ್ಯ ಸಾಗರದಲ್ಲಿ ಹಲವಾರು ರತ್ನಗಳಿದ್ದು ಯಾವುದಾದರೊಂದು ರತ್ನವನ್ನು ನೋಡದಿದ್ದರೂ ಪ್ರವಾಸ ದೃಷ್ಟಿಯಿಂದ ಪರಿಪೂರ್ಣತೆಯ ಭಾವ ಮೂಡದು.

ಉತ್ತರದಿಂದ ದಕ್ಷಿಣದವರೆಗೂ ಹರಡಿರುವ ಅಂತಹ ಸಾವಿರಾರು ರತ್ನಗಳ ಪೈಕಿ ಶಿಮ್ಲಾ ನಗರವೂ ಸಹ ಒಂದು. 70-80 ರ ದಶಕದಲ್ಲಿ ಬಹುತೇಕ ಹಿಂದಿ ಚಿತ್ರಗಳು ಶಿಮ್ಲಾದಂತಹ ತಾಣಗಳಲ್ಲೆ ಚಿತ್ರೀಕರಣಗೊಳ್ಳುತ್ತಿದ್ದವು. ಇಂದಿಗೂ ತನ್ನ ರಮಣೀಯ ಪರಿಸರವನ್ನು ಹಾಗೆ ಉಳಿಸಿಕೊಂಡು ಬಂದಿರುವ ಶಿಮ್ಲಾ ಹಿರಿಯ ಪ್ರವಾಸಿಗರನ್ನು ನೆನಪಿನ ಲೋಕಕ್ಕೊಯ್ಯುವುದು ನಿಸ್ಸಂದೇಹ.

ಆದಾಗ್ಯೂ ಶಿಮ್ಲಾ ಏಕೆ ಅಷ್ಟೊಂದು ಜನಪ್ರೀಯ? ಅಂಥದ್ದೇನಿದೆ ಶಿಮ್ಲಾದಲ್ಲಿ ನೋಡಲು? ಇದರ ಪ್ರಸಿದ್ಧತೆಯ ಹಿಂದಿರುವ ರಹಸ್ಯವಾದರೂ ಏನು? ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಈ ಲೇಖನವನ್ನೊಮ್ಮೆ ಓದಿ ನೋಡಿ.

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶ

ಶಿಮ್ಲಾ ನಗರವು ಒಂದು ಸುಂದರ ಗಿರಿಧಾಮವಾಗಿದ್ದು, ಹಿಮಾಚಲ್ ಪ್ರದೇಶದ ರಾಜಧಾನಿಯಾಗಿದೆ. ಈ ಸ್ಥಳವು "ಬೇಸಿಗೆಯ ಆಶ್ರಯ ತಾಣ" ಮತ್ತು " ಗಿರಿಧಾಮಗಳ ರಾಣಿ" ಎಂದೆ ಖ್ಯಾತಿ ಪಡೆದಿದೆ. ಇದು ಸಮುದ್ರ ಮಟ್ಟದಿಂದ 2202 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವುದರಿಂದ ಅದ್ಭುತ ಸೃಷ್ಟಿ ಸೌಂದರ್ಯವನ್ನು ಇಲ್ಲಿ ಸವಿಯಬಹುದಾಗಿದೆ.

ಚಿತ್ರಕೃಪೆ: DevashishP

ಶ್ಯಾಮಲ!

ಶ್ಯಾಮಲ!

ಈ ಸ್ಥಳದ ಹೆಸರು ಕಾಳಿ ಮಾತೆಯ ಇನ್ನೊಂದು ಹೆಸರಾದ "ಶ್ಯಾಮಲ" ಎಂಬ ಹೆಸರಿನಿಂದ ಬಂದಿದೆ. ಜಖು, ಪ್ರೊಸ್ಪೆಕ್ಟ್, ಅಬ್ಸರ್ವೇಟರಿ, ಇಲಿಸಿಯಂ ಶಿಮ್ಲಾದಲ್ಲಿರುವ ಪ್ರಮುಖ ಪರ್ವತಗಳಾಗಿವೆ. 1864ರಲ್ಲಿ ಈ ಸ್ಥಳವನ್ನು ಬ್ರಿಟೀಷ್ ಇಂಡಿಯಾದ ಬೇಸಿಗೆ ರಾಜಧಾನಿಯನ್ನಾಗಿ ಘೋಷಿಸಲಾಗಿತ್ತು.

ಚಿಇತ್ರಕೃಪೆ: Deepaksharma.ds2

ರಾಜಧಾನಿ

ರಾಜಧಾನಿ

ಸ್ವಾತಂತ್ರಾನಂತರ ಶಿಮ್ಲಾವು ಪಂಜಾಬಿನ ರಾಜಧಾನಿಯಾಗಿ ಕಾರ್ಯನಿರ್ವಹಿಸಿತ್ತು. ಆನಂತರ ಇದು ಹಿಮಾಚಲ್ ಪ್ರದೇಶದ ರಾಜಧಾನಿಯಾಯಿತು. ಈ ನಯನ ಮನೋಹರ ಗಿರಿಧಾಮವು ಪ್ರವಾಸಿಗರಿಗೆ ಅತ್ಯಾಕರ್ಷಕ ಸ್ಥಳಗಳನ್ನು ವೀಕ್ಷಿಸುವ ಅವಕಾಶವನ್ನು ಒದಗಿಸುತ್ತದೆ.

ಚಿತ್ರಕೃಪೆ: Deepaksharma.ds2

ಸ್ಕ್ಯಾಂಡಲ್ ಪಾಯಿಂಟ್

ಸ್ಕ್ಯಾಂಡಲ್ ಪಾಯಿಂಟ್

ಪ್ರವಾಸಿಗರು ಇಲ್ಲಿ ವಿಶಾಲವಾದ ಲಕ್ಕರ್ ಬಜಾರ್ ಮತ್ತು ಸ್ಕ್ಯಾಂಡಲ್ ಪಾಯಿಂಟ್ ಎಂಬ ಸ್ಥಳದಿಂದ ಮೂಕವಿಸ್ಮಿತಗೊಳ್ಳುವ ಪರ್ವತ ಶ್ರೇಣಿ ಮತ್ತು ಕಣಿವೆಗಳ ದೃಶ್ಯವನ್ನು ನೋಡಿ ಸವಿಯಬಹುದು. ಜಖು ದೇವಾಲಯವು ಹನುಮಾನ್ ದೇವಾಲಯವಾಗಿದ್ದು, ಸಮುದ್ರ ಮಟ್ಟದಿಂದ 8048 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ.

ಚಿತ್ರಕೃಪೆ: Sarmistha samanta

ಕರ್ನಲ್ ವಿನ್ಯಾಸ!

ಕರ್ನಲ್ ವಿನ್ಯಾಸ!

ಅಲ್ಲದೆ ಕರ್ನಲ್ ಜೆ. ಟಿ ಬೊಯಿ ಲೌರವರು ವಿನ್ಯಾಸಗೊಳಿಸಿರುವ ಸುಂದರವಾದ ಚರ್ಚ್ ಒಂದನ್ನು ಇಲ್ಲಿ ಕಾಣಬಹುದು. ಇದು ಗಾಜಿನ ತುಣುಕುಗಳಿಂದ ಶೃಂಗಾರಗೊಂಡಿದ್ದು, ಪ್ರಪಾತದ ಪಕ್ಕದಲ್ಲಿ ತಲೆ ಎತ್ತಿ ನಿಂತಿದೆ. ಈ ದೃಶ್ಯ ರೋಮಾಂಚನ ಉಂಟುಮಾಡುತ್ತದೆ.

ಚಿತ್ರಕೃಪೆ: মনিদীপা

ಬೌದ್ಧ ಮಠ

ಬೌದ್ಧ ಮಠ

ಇಲ್ಲಿ ಹಲವು ಬೌದ್ಧ ಮಠಗಳಿದ್ದು ಅವುಗಳಲ್ಲಿ ಡೊರ್ಜೆ ಡ್ರಾಕ್ ಬೌದ್ಧ ಮಠವೂ ಒಂದು. ಇದು ನೈಂಗಿಮ ಸಂಪ್ರದಾಯಕ್ಕೆ ಸೇರಿದ ಮಠವಾಗಿದ್ದು, ಟಿಬೇಟಿಯನ್ ಬೌದ್ಧ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಇದರೊಂದಿಗೆ ಕಾಳಿ ಬರಿ ದೇವಾಲಯವನ್ನು ಕಾಳಿಮಾತೆಗಾಗಿ ಇಲ್ಲಿ ನಿರ್ಮಿಸಲಾಗಿದೆ. ಪ್ರತಿ ವರ್ಷವು ಇಲ್ಲಿಗೆ ಸಹಸ್ರಾರು ಭಕ್ತಾಧಿಗಳು ಭೇಟಿ ಕೊಡುತ್ತಾರೆ.

ಚಿತ್ರಕೃಪೆ: Betelgeuse

ಅದ್ದೂರಿಯಾಗಿ ನಡೆಯುತ್ತವೆ

ಅದ್ದೂರಿಯಾಗಿ ನಡೆಯುತ್ತವೆ

ಇನ್ನೂ ಸಾಂಪ್ರದಾಯಿಕವಾಗಿ ಇಲ್ಲಿ ದೀಪಾವಳಿ, ನವರಾತ್ರಿ ಮತ್ತು ದುರ್ಗಾ ಪೂಜೆಯಂತಹ ಹಿಂದೂ ಹಬ್ಬಗಳನ್ನು ಅತ್ಯಂತ ಶ್ರದ್ಧಾ, ಭಕ್ತಿ ಹಾಗು ಸಂಭ್ರಮಗಳೊಂದಿಗೆ ಆಚರಿಸಲಾಗುತ್ತದೆ. ಭಕ್ತಾಧಿಗಳು ಇಲ್ಲಿರುವ ಹನುಮಾನ್ ದೇವಾಲಯವಾದ ಸಂಕಟ ಮೋಚನ್ ದೇವಾಲಯಕ್ಕೆ ಸಹ ಭೇಟಿಕೊಡಬಹುದು.

ಚಿತ್ರಕೃಪೆ: Biswarup Ganguly

ವಿವಿಧ ಸನ್ನಿಧಿಗಳು

ವಿವಿಧ ಸನ್ನಿಧಿಗಳು

ಸಂಕಟ ಮೋಚನ್ ದೇವಾಲಯವು ಸಮುದ್ರ ಮಟ್ಟದಿಂದ 1975 ಮೀಟರ್ ಗಳಷ್ಟು ಎತ್ತರದಲ್ಲಿ ಸ್ಥಿತವಿದೆ. ಈ ದೇವಾಲಯವನ್ನು 1966ರಲ್ಲಿ ನಿರ್ಮಿಸಲಾಯಿತು. ಅಲ್ಲದೆ ಇಲ್ಲಿ ವಿವಿಧ ಹಿಂದೂ ದೇವತೆಗಳ ಪೂಜಾ ಮಂದಿರಗಳನ್ನು ಹೊಂದಿರುವ ವಿವಿಧ ಸಂಕೀರ್ಣಗಳನ್ನೂ ಸಹ ಕಾಣಬಹುದು.

ಚಿತ್ರಕೃಪೆ: Rvbalaiyer

ಸಾಕಷ್ಟಿವೆ ಇಲ್ಲಿ

ಸಾಕಷ್ಟಿವೆ ಇಲ್ಲಿ

ಶಿಮ್ಲಾವು ವಸಾಹತು ಶಾಹಿ ಶೈಲಿಯ ಪಾರಂಪರಿಕ ಕಟ್ಟಡಗಳಿಗೆ ಹೆಸರುವಾಸಿಯಾಗಿದೆ. ಇವೆಲ್ಲವು ಬ್ರಿಟೀಷರ ವಾಸ್ತುಶೈಲಿಯನ್ನು ಪ್ರತಿನಿಧಿಸುತ್ತವೆ. ರೋಟ್ನಿ ಕೋಟೆಯು ಇಲ್ಲಿ ಮುಖ್ಯವಾಗಿ ಹೇಳಲೆ ಬೇಕಾಗಿರುವ ಸ್ಥಳವಾಗಿದೆ. ಇದು ಅಲನ್ ಅಕ್ಟಾವಿನ್ ಹ್ಯೂಮ್‍ರ ನಿವಾಸವಾಗಿತ್ತು.

ಚಿತ್ರಕೃಪೆ: Biswarup Ganguly

ಪ್ರವಾಸಿ ಆಕರ್ಷಣೆ

ಪ್ರವಾಸಿ ಆಕರ್ಷಣೆ

ಪ್ರವಾಸಿಗರು ಇಲ್ಲಿ ಮನೋರ್ ವಿಲ್ಲೆ ಮಹಲ್‍ನ್ನು ವೀಕ್ಷಿಸಬಹುದು. ಇಲ್ಲಿ 1945ರಲ್ಲಿ ಮಹಾತ್ಮ ಗಾಂಧಿ, ಜವಹಾರ್ ಲಾಲ್ ನೆಹರೂ, ಸರ್ದಾರ್ ವಲ್ಲಭ ಭಾಯಿ ಪಟೇಲ್ ಮತ್ತು ಮೌಲಾನ ಆಜಾದ್‍ರವರು ಲಾರ್ಡ್ ವಾವೆಲ್‍ರ ಜೊತೆಗೆ ಭಾರತದ ಸ್ವಾತಂತ್ರದ ಕುರಿತು ಚರ್ಚೆನಡೆಸಿದರು ಎಂಬ ಕಾರಣಕ್ಕೆ ಇದು ಖ್ಯಾತಿ ಪಡೆದಿದೆ. ಕ್ಯಾಥೋಲಿಕ್ ಚರ್ಚ್

ಚಿತ್ರಕೃಪೆ: Numerounovedant

ಟೌನ್ ಹಾಲ್

ಟೌನ್ ಹಾಲ್

ಟೌನ್ ಹಾಲ್ ಇಲ್ಲಿರುವ ಇನ್ನೊಂದು ಆಕರ್ಷಕ ಪಾರಂಪರಿಕ ಕಟ್ಟಡವಾಗಿದೆ. ಇದು 1910ರಲ್ಲಿ ನಿರ್ಮಾಣಗೊಂಡಿತು. ಪ್ರಸ್ತುತ ಇದು ಶಿಮ್ಲಾದ ನಗರ ಸಭೆಯ ಕಛೇರಿಯನ್ನು ಹೊಂದಿದೆ. ವೈಸ್‍ರೀಗಲ್ ಲಾಡ್ಜ್ ಅಥವಾ ರಾಷ್ಟ್ರಪತಿ ನಿವಾಸ್ ಎಂದು ಕರೆಯಲಾಗುವ ಕಟ್ಟಡವನ್ನು ನಾವು ಇಲ್ಲಿ ಕಾಣಬಹುದು.

ಚಿತ್ರಕೃಪೆ: Biswarup Ganguly

ಉದ್ಯಾನವನಗಳು

ಉದ್ಯಾನವನಗಳು

ಇದು 1888ರಲ್ಲಿ ನಿರ್ಮಾಣಗೊಂಡ ಕಟ್ಟಡವಾಗಿದೆ. ಇದು ಆರು ಅಂತಸ್ತಿನ ಕಟ್ಟಡವಾಗಿದ್ದು, ಸುತ್ತಲು ಸುಂದರವಾದ ಹುಲ್ಲು ಹಾಸು ಮತ್ತು ಉದ್ಯಾನವನಗಳನ್ನು ನಾವು ಇಲ್ಲಿ ನೋಡಬಹುದು. ಪ್ರಸ್ತುತ ಈ ಕಟ್ಟಡದಲ್ಲಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಅಡ್ವಾನ್ಸ್ ಡ್ ಸ್ಟಡಿ ಕೇಂದ್ರವು ಕಾರ್ಯ ನಿರ್ವಹಿಸುತ್ತಿದೆ.

ಚಿತ್ರಕೃಪೆ: Deepaksharma.ds2

ಹೆನ್ರಿ ಇರ್ವಿನ್

ಹೆನ್ರಿ ಇರ್ವಿನ್

ಗೈಟಿ ಪಾರಂಪರಿಕ ಸಾಂಸ್ಕೃತಿಕ ಸಂಕೀರ್ಣವು ಹೆನ್ರಿ ಇರ್ವಿನ್‍ರವರಿಂದ ನಿರ್ಮಾಣಗೊಂಡಿದ್ದು, ಗೋಥಿಕ್ ವಿಕ್ಟೋರಿಯನ್ ವಾಸ್ತುಶೈಲಿಯನ್ನು ಪ್ರತಿನಿಧಿಸುತ್ತದೆ. ಈ ಕಟ್ಟಡದ ಸಂಕೀರ್ಣವು ಪ್ರವಾಸಿಗರಿಗೆ ಆಧುನಿಕ ಮತ್ತು ಸಾಂಪ್ರದಾಯಿಕವಾದ ಕಲಾವಸ್ತುಗಳನ್ನು ವೀಕ್ಷಿಸುವ ಅವಕಾಶವನ್ನು ಒದಗಿಸುತ್ತದೆ. ಈ ಕಟ್ಟಡದಲ್ಲಿ ಒಂದು ಸಭಾಂಗಣ ಮತ್ತು ಹಳೆಯ ಥಿಯೇಟರ್ ಇದೆ. ಗೈಟಿ ಥಿಯೇಟರ್.

ಚಿತ್ರಕೃಪೆ: Shyamal L.

ವುಡ್ ವಿಲ್ಲೆ

ವುಡ್ ವಿಲ್ಲೆ

ಶಿಮ್ಲಾದಲ್ಲಿರುವ ವುಡ್‍ವಿಲ್ಲೆಯು ಬಮ್ಗಲೆಯು ಜನರಲ್ ಸರ್ ವಿಲಿಯಂ ರೋಸ್ ಮ್ಯಾನ್ಸ್ ಫೀಲ್ಡ್ ರವರ ನಿವಾಸವಾಗಿತ್ತು. ಇವರು ಬ್ರಿಟೀಷರಕಾಲದಲ್ಲಿ ಭಾರತದ ಕಮಾಂಡರ್ - ಇನ್- ಚೀಫ್ ಆಗಿ ಕಾರ್ಯ ನಿರ್ವಹಿಸಿದರು. ಈ ಕಟ್ಟಡವನ್ನು 1977ರಲ್ಲಿ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದೆ.

ಚಿತ್ರಕೃಪೆ: Shyamal L.

ರೈಲ್ವೇ ಬೋರ್ಡ್

ರೈಲ್ವೇ ಬೋರ್ಡ್

ಗೋರ್ಟನ್ ದುರ್ಗ ಮತ್ತು ರೈಲ್ವೇ ಬೋರ್ಡ್ ಕಟ್ಟಡಗಳು ಶಿಮ್ಲಾದಲ್ಲಿನ ವಸಾಹತು ಕಾಲದ ವಾಸ್ತುಶಿಲ್ಪದ ಅದ್ಭುತಗಳ ಸಾಲಿನಲ್ಲಿ ನಿಂತಿವೆ. ಭಾರತೀಯ ಸೇನೆ ಕಚೇರಿ.

ಚಿತ್ರಕೃಪೆ: Biswarup Ganguly

ಮೋನಲ್

ಮೋನಲ್

ಹಿಮಾಲಯನ್ ಅವಿಯರಿ (ಹಕ್ಕಿ ಗೂಡು)ಯು ಪ್ರವಾಸಿಗರಿಗೆ ವಿವಿಧ ಬಗೆಯ ಪಕ್ಷಿಗಳನ್ನು ನೋಡುವ ಅವಕಾಶವನ್ನು ಒದಗಿಸುತ್ತದೆ. ಇದರಲ್ಲಿ ಈ ರಾಜ್ಯದ ಪಕ್ಷಿಯಾದ ಮೋನಲ್ ಅನ್ನೂ ಸಹ ಕಾಣಬಹುದು. ಇದು ವಿಹಾರಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಮೋನಲ್ ಪಕ್ಷಿ.

ಚಿತ್ರಕೃಪೆ: HRUDANAND CHAUHAN

ಗ್ಲೆನ್

ಗ್ಲೆನ್

ಶಿಮ್ಲಾದಲ್ಲಿ ಗ್ಲೆನ್ ಎಂಬ ಸ್ಥಳವಿದೆ. ಕಮರಿಯಿಂದ 4 ಕಿ,ಮೀ ದೂರದಲ್ಲಿ ನೆಲೆಗೊಂಡಿರುವ ಈ ಸ್ಥಳವು ಅದ್ಭುತವಾದ ಹರಿಯುವ ನಿರಿನ ತೊರೆಗಳು ಹಾಗೂ ಹಚ್ಚ ಹಸಿರಿನಿಂದ ಕೂಡಿದ ಪ್ರದೇಶವಾಗಿದ್ದು ಪ್ರಕೃತಿಯ ಅಮೋಘ ಸೊಬಗನ್ನು ಸವಿಯುವ ಅವಕಾಶವನ್ನು ಒದಗಿಸುತ್ತದೆ. ಪ್ರವಾಸಿಗರು ಅನ್ನಡೇಲ್‍ನಲ್ಲಿ ಸಹ ವಿಹಾರಕ್ಕೆ ಹೋಗಬಹುದು.

ಚಿತ್ರಕೃಪೆ: Shyamal

ಪುಟಾಣಿ ರೈಲು

ಪುಟಾಣಿ ರೈಲು

ಬ್ರಿಟೀಷರ ಆಡಳಿತಾವಧಿಯಲ್ಲಿ ಇಲ್ಲಿನ ಹೊರಾಂಗಣದಲ್ಲಿ ರೇಸ್, ಪೋಲೊ ಮತ್ತು ಕ್ರಿಕೇಟ್ ಆಟಗಳನ್ನು ಆಡಲಾಗುತ್ತಿತ್ತಂತೆ. ಲಾರ್ಡ್ ಕರ್ಜನ್ 1903ರಲ್ಲಿ ಇಲ್ಲಿ ಐತಿಹಾಸಿಕ ಪುಟಾಣಿ ರೈಲು ಪ್ರಯಾಣವನ್ನು ಉದ್ಘಾಟಿಸಿದನಂತೆ. ಈ ಪ್ರಯಾಣವು ಅತ್ಯದ್ಭುತವಾದ 96 ಕಿ.ಮೀ ಗಳ ಪ್ರವಾಸವಾಗಿದ್ದು, ಪ್ರವಾಸಿಗರಿಗೆ ಸುಂದರವಾದ ಕಣಿವೆಗಳ ಮತ್ತು ಪರ್ವತಗಳ ಸೊಬಗನ್ನು ಸವಿಯುವ ಅವಕಾಶವನ್ನು ನೀಡುತ್ತದೆ.

ಚಿತ್ರಕೃಪೆ: Smeet Chowdhury

ಸಂಗ್ರಹಾಲಯ

ಸಂಗ್ರಹಾಲಯ

ಸೋಲನ್ ಬ್ರಿವರಿ, ದರ್ಲಘಾಟ್, ಸ್ಕ್ಯಾಂಡಲ್ ಪಾಯಿಂಟ್, ಕಮ್ನ ದೇವಿ ದೇವಾಲಯ, ಜಖು ಬೆಟ್ಟ ಮತ್ತು ಗುರ್ಖಾ ಗೇಟ್‍ಗಳು ಇಲ್ಲಿರುವ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಾಗಿವೆ. ಹಿಮಾಚಲ್ ಪ್ರದೇಶ ರಾಜ್ಯ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯವು ಪಹರಿ ಮಿನಿಯೇಚರ್, ಮೊಘಲ್, ರಾಜಸ್ಥಾನಿ ಮತ್ತು ಸಮಕಾಲೀನ ವರ್ಣಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದೆ. ರಾಜ್ಯ ಗ್ರಂಥಾಲಯ ಕಟ್ಟಡ.

ಚಿತ್ರಕೃಪೆ: Biswarup Ganguly

ವ್ಯಾಪಾರ ಕೇಂದ್ರಗಳು

ವ್ಯಾಪಾರ ಕೇಂದ್ರಗಳು

ಇಲ್ಲಿ ಹಲವಾರು ಕಂಚಿನ ಕಲಾಕೃತಿಗಳು, ಛಾಯಾಚಿತ್ರಗಳು, ಅಂಚೆ ಚೀಟಿಗಳು, ಮಾನವ ಶಾಸ್ತ್ರದ ವಸ್ತುಗಳನ್ನು ನಾವು ನೋಡಬಹುದು. ಶಿಮ್ಲಾವು ಪ್ರವಾಸಿಗರಿಗೆ ಅನುಪಮವಾದ ವ್ಯಾಪಾರ ಕೇಂದ್ರಗಳನ್ನು ಒದಗಿಸುತ್ತದೆ. ಮಾಲ್, ಲೋವರ್ ಬಜಾರ್ ಮತ್ತು ಲಕ್ಕರ್ ಗಳು ಇಲ್ಲಿನ ಪ್ರಮುಖ ವ್ಯಾಪಾರಿ ಕೇಂದ್ರಗಳಾಗಿದ್ದು, ಪ್ರವಾಸಿಗರು ಇಲ್ಲಿ ಬೇಕಾದ್ದನ್ನು ಕೊಳ್ಳಬಹುದು. ಇವು ಮರದ ಕಲಾಕೃತಿಗಳಿಗೆ ಮತ್ತು ಆಭರಣಗಳಿಗೆ ಖ್ಯಾತಿಯನ್ನು ಪಡೆದಿವೆ. ಮಾಲ್ ರಸ್ತೆ.

ಚಿತ್ರಕೃಪೆ: Biswarup Ganguly

ರೋಮಾಂಚನ

ರೋಮಾಂಚನ

ಶಿಮ್ಲಾವು ಭಾರತದಲ್ಲಿ ಅತ್ಯಂತ ದೊಡ್ಡ ಐಸ್ ಸ್ಕೇಟಿಂಗ್ ರಿಂಗನ್ನು ಹೊಂದಿದೆ. ಚಳಿಗಾಲದಲ್ಲಿ ಈ ಅಂಗಣವು ನೈಸರ್ಗಿಕವಾದ ಹಿಮದಿಂದ ಮುಚ್ಚಲ್ಪಡುತ್ತದೆ. ಆಗ ಸ್ಕೇಟಿಂಗ್‍ನ ಮಜವನ್ನು ಅನುಭವಿಸಲು ಹೇಳಿ ಮಾಡಿಸಿದ ಸಮಯವಾಗಿದೆ (ಡಿಸೆಂಬರ್ - ಫೆಬ್ರವರಿ). ಚಾರಣವು ಸಹ ಇಲ್ಲಿನ ಪ್ರಸಿದ್ಧ ಚಟುವಟಿಕೆಯಾಗಿದೆ.

ಚಿತ್ರಕೃಪೆ: Bharatkaistha

ಚಾರಣಮಾರ್ಗಗಳು

ಚಾರಣಮಾರ್ಗಗಳು

ಜುಂಗ, ಚೈಲ್, ಚುರ್ದಾರ್, ಶಲಿ ಪರ್ವತ, ಹಟು ಪರ್ವತ ಮತ್ತು ಕುಲುಗಳಿಗೆ ಶಿಮ್ಲಾದಿಂದ ಚಾರಣ ಮಾರ್ಗಗಳಿವೆ. ಅಲ್ಲದೆ ಪ್ರವಾಸಿಗರು ಶಿಮ್ಲಾದಿಂದ ಮೌಂಟೆನ್ ಬೈಕಿಂಗ್ ( ಸೈಕಲ್ ಸವಾರಿ) ಮೂಲಕ ನಲ್ಡೆಹರ ಮತ್ತು ಸಲೊಗ್ರಗಳಿಗೆ ಭೇಟಿ ಕೊಡಬಹುದು. ಬಿಯಾಸ್, ರಾವಿ ,ಚಿನಬ್ ಮತ್ತು ಝೀಲಮ್‍ನಂತಹ ನದಿಗಳು ಪ್ರವಾಸಿಗರಿಗೆ ನದಿಯಲ್ಲಿ ರಾಫ್ಟಿಂಗ್‍ ನಡೆಸುವ ಅವಕಾಶವನ್ನು ಒದಗಿಸುತ್ತದೆ.

ಚಿತ್ರಕೃಪೆ: Bharatkaistha

ಸಾರಿಗೆ ಮಾರ್ಗ

ಸಾರಿಗೆ ಮಾರ್ಗ

ಶಿಮ್ಲಾವು ಸಾರಿಗೆಯ ಮೂರು ವಿಧಗಳ ಮೂಲಕ ಹೊರ ಪ್ರಪಂಚದೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ನೀವು ಶಿಮ್ಲಾಗೆ ಬರಲು ವಿಮಾನ, ರಸ್ತೆ ಮತ್ತು ರೈಲು ಮಾರ್ಗಗಳು ಲಭ್ಯವಿವೆ. ಜುಬ್ಬರ್ ಹಟ್ಟಿ ವಿಮಾನ ನಿಲ್ದಾಣವು ಶಿಮ್ಲಾಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ.

ಚಿತ್ರಕೃಪೆ: DARSHAN SIMHA

ವಿಮಾನ

ವಿಮಾನ

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಲ್ಲಿಗೆ ನಿಯಮಿತವಾಗಿ ವಿಮಾನಗಳು ಬಂದು ಹೋಗುತ್ತಿರುತ್ತವೆ. ಪ್ರವಾಸಿಗರು ಇಲ್ಲಿಗೆ ಕಲ್ಕ ರೈಲು ನಿಲ್ದಾಣದಿಂದ ಸಹ ತಲುಪಬಹುದು. ಹತ್ತಿರದ ಪ್ರಮುಖ ನಗರಗಳಿಂದ ಶಿಮ್ಲಾಗೆ ಬಸ್ಸುಗಳು ಸಹ ಬಂದು ಹೋಗುತ್ತಿರುತ್ತವೆ.

ಚಿತ್ರಕೃಪೆ: Shyamal

ಅನುಭವಿಸಲೇಬೇಕು

ಅನುಭವಿಸಲೇಬೇಕು

ಚಳಿಗಾಲವು ಇಲ್ಲಿ ಸ್ಕೆಯಿಂಗ್ ಮತ್ತು ಐಸ್ ಸ್ಕೇಟಿಂಗ್‍ಗಳ ಮೋಜನ್ನು ಅನುಭವಿಸಲು ಹೇಳಿ ಮಾಡಿಸಿದ ಸಮಯವಾಗಿದೆ. ಆದರು ಬೇಸಿಗೆ ಕಾಲವು ಇಲ್ಲಿ ಸ್ಥಳ ವೀಕ್ಷಣೆಗೆ ಮತ್ತು ಚಾರಣಕ್ಕೆ ಹೇಳಿ ಮಾಡಿಸಿದ ಸಮಯವಾಗಿದೆ.

ಚಿತ್ರಕೃಪೆ: Aguynamedvaibhav

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X