Search
  • Follow NativePlanet
Share
» »ಭೇತಾಳ ವಾಲಾಡುತ್ತಿದ್ದ ಮರ ನಮ್ಮ ಭಾರತದಲ್ಲಿ ಎಲ್ಲಿ ಇದೆ ಗೊತ್ತಾ?

ಭೇತಾಳ ವಾಲಾಡುತ್ತಿದ್ದ ಮರ ನಮ್ಮ ಭಾರತದಲ್ಲಿ ಎಲ್ಲಿ ಇದೆ ಗೊತ್ತಾ?

ಲ್ಲರಿಗೂ ತಿಳಿದ ಹಾಗೆ ಭೇತಾಳ ಹಾಗೂ ವಿಕ್ರಮಾರ್ಕ ಮಹಾರಾಜನ ನಡುವೆ ನಡೆಯುವ ಹಲವಾರು ಪ್ರಶ್ನೋತ್ತರಗಳು ಊಹಿಸಲು ಸಾಧ್ಯವಾಗದಂತಹ ಉತ್ತರಗಳನ್ನು ವಿಕ್ರಮಾರ್ಕನಿಂದ ತಿಳಿಯಬಹುದು. ಅಸಲಿಗೆ ಭೇತಾಳ ಯಾರು?. ಭೇತಾಳನು ಯಾವಾಗಲೂ ಮರದ ಮೇಲೆ ತಲೆ ಕೆಳಗೆ ಮಾ

ಚಿಕ್ಕ ವಯಸ್ಸಿನಿಂದಲೂ ಹಲವಾರು ಕಥೆಗಳನ್ನು ಕೇಳಿದ್ದೇವೆ. ಅದರಲ್ಲಿ ಅತ್ಯಂತ ಇಷ್ಟವಾಗುವ ಕಥೆ ಎಂದರೆ ಭೇತಾಳನ ಕಥೆಗಳು. ಈತನ ಕಥೆಗಳು ಅತ್ಯಂತ ರೋಚಕವಾಗಿರುತ್ತದೆ. ನಮ್ಮ ಅಜ್ಜಿ ಭೇತಾಳನ ಕಥೆಯನ್ನು ಅತ್ಯಂತ ಸೊಗಸಾಗಿ ಹೇಳುತ್ತಿದ್ದರು. ಅದರಲ್ಲೂ ಭೇತಾಳನ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಪರಾಕ್ರಮಶಾಲಿ ವಿಕ್ರಮಾರ್ಕ ರಾಜನ ಉತ್ತರಗಳಂತೂ ಮನದಲ್ಲಿ ಅಚ್ಚಳಿಸಿದೆ.

ಎಲ್ಲರಿಗೂ ತಿಳಿದ ಹಾಗೆ ಭೇತಾಳ ಹಾಗೂ ವಿಕ್ರಮಾರ್ಕ ಮಹಾರಾಜನ ನಡುವೆ ನಡೆಯುವ ಹಲವಾರು ಪ್ರಶ್ನೋತ್ತರಗಳು ಊಹಿಸಲು ಸಾಧ್ಯವಾಗದಂತಹ ಉತ್ತರಗಳನ್ನು ವಿಕ್ರಮಾರ್ಕನಿಂದ ತಿಳಿಯಬಹುದು. ಅಸಲಿಗೆ ಭೇತಾಳ ಯಾರು?. ಭೇತಾಳನು ಯಾವಾಗಲೂ ಮರದ ಮೇಲೆ ತಲೆ ಕೆಳಗೆ ಮಾಡಿ ವಾಲುಡುತ್ತಿದ್ದ ಮರವಾದರೂ ಯಾವುದು? ಎಂದು ಒಮ್ಮೆಯಾದರು ಸಹಜವಾಗಿ ಯೋಚಿಸಿರುತ್ತೀರ. ಹಾಗಾದರೆ ಗೋಣ್ಯಾಡ್ಯು ಸಂಸ್ಕøತದಲ್ಲಿ ರಚಿಸಿದ ಬೃಹತ್ ಕಥ ಭೇತಾಳನ ಕಥೆಯಲ್ಲಿ ಭೇತಾಳ ವಾಲಾಡುತ್ತಿದ್ದ ಮರದ ಬಗ್ಗೆ ವಿಸ್ತಾರವಾಗಿ ಹೇಳಿದ್ದಾನೆ.

ಪ್ರಸ್ತುತ ಲೇಖನದ ಮೂಲಕ ಭೇತಾಳನ ಮರದ ಬಗ್ಗೆ ತಿಳಿಯೋಣ.

ವಿಕ್ರಮಾರ್ಕ

ವಿಕ್ರಮಾರ್ಕ

ಈ ವಿಕ್ರಮಾರ್ಕ ರಾಜ ಗೋದಾವರಿ ನದಿ ತೀರದಲ್ಲಿದ್ದ ಒಂದು ಸಾಮ್ರಾಜ್ಯಕ್ಕೆ ರಾಜನಾಗಿದ್ದ. ಒಬ್ಬ ಭೀಕ್ಷುವು ದಿನವೂ ಒಂದು ಹಣ್ಣಿನ ಒಳಗೆ ರತ್ನವನ್ನು ಉಡುಗೊರೆಯಾಗಿ ವಿಕ್ರಮಾರ್ಕನಿಗೆ ನೀಡುತ್ತಿದ್ದನು. ಈ ವಿಷಯವು ವಿಕ್ರಮಾರ್ಕನಿಗೆ ತಿಳಿದಿರಲಿಲ್ಲ. ಕೆಲವು ದಿನಗಳ ಬಳಿಕ ಹಣ್ಣಿನಲ್ಲಿ ರತ್ನವಿರುವುದು ತಿಳಿಯಿತು.

PC:YOUTUBE

ವಿಶ್ವಾಸ

ವಿಶ್ವಾಸ

ರತ್ನವನ್ನು ಕಂಡು ಭೀಕ್ಷುವಿನ ಬಳಿ ವಿನಯದಿಂದ ನಿಮ್ಮ ಈ ವಿಶ್ವಾಸಕ್ಕೆ ಮೆಚ್ಚಿದ್ದೇನೆ. ರತ್ನವನ್ನು ನೀಡುತ್ತಿದ್ದ ಕಾರಣವನ್ನು ಹೇಳುವವರೆಗೂ ಎಂದಿಗೂ ಹಣ್ಣನ್ನು ಮತ್ತೆ ಸ್ವೀಕರಿಸುವುದಿಲ್ಲ ಎಂದು ನುಡಿದನು.


PC:YOUTUBE

ಭೀಕ್ಷು

ಭೀಕ್ಷು

ಭೀಕ್ಷುವು ತಾನು ಒಂದು ಮಂತ್ರವನ್ನು ಸಾಧಿಸಬೇಕು ಹಾಗಾಗಿ ಒಂದು ವೀರನ ಸಾಹಯ ಬೇಕಾಗಿದೆ ಅದ್ದರಿಂದ ನಿಮ್ಮ ಹತ್ತಿರ ಬಂದೆ ಎಂದು ವಿಕ್ರಮಾರ್ಕನಿಗೆ ತಿಳಿಸುತ್ತಾನೆ.


PC:YOUTUBE

ಒಪ್ಪಿಗೆ

ಒಪ್ಪಿಗೆ

ಭೀಕ್ಷುವಿನ ವಿಶ್ವಾಸಕ್ಕೆ ವಿಕ್ರಮಾರ್ಜುನ ಒಪ್ಪಿಗೆ ಸೂಚಿಸುತ್ತಾನೆ. ಮುಂದೆ ಬರುವ ಕೃಷ್ಣ ಚರ್ತುದಶಿಯ ರಾತ್ರಿ ಮಹಾ ಸ್ಮಶಾನಕ್ಕೆ ಬರಲು ಭೀಕ್ಷುವು ತಿಳಿಸುತ್ತಾನೆ. ವಿಕ್ರಮಾರ್ಕ ಕೂಡ ಕೃಷ್ಣ ಚರ್ತುದಶಿಯಂದು ತೆರಳುತ್ತಾನೆ.

PC:YOUTUBE

ಶಿಷುಂಭಾ ಮರ

ಶಿಷುಂಭಾ ಮರ

ವಿಕ್ರಮಾರ್ಕನಿಗೆ ಶಿಷುಂಭಾ ಮರದ ಮೇಲಿರುವ ಪುರುಷನ ಶವವನ್ನು ತಂದು ಒಪ್ಪಿಸುವಂತೆ ತಿಳಿಸುತ್ತಾನೆ. ಇದಕ್ಕೆ ಒಪ್ಪಿದ ವಿಕ್ರಮಾರ್ಕ ಶಿಷುಂಭಾ ಮರದ ಮೇಲಿನ ಪುರುಷನ ಶವವನ್ನು ತೆಗೆದುಕೊಳ್ಳಲು ಮುಂದಾಗುತ್ತಾನೆ. ಆಗ ಮರದ ಮೇಲಿದ್ದ ಶವವನ್ನು ಕೆಳಗೆ ಇಳಿಸುತ್ತಾನೆ. ಆ ಶವವು ವಿಕ್ರಮಾರ್ಕನ ಬೆನ್ನ ಮೇಲೆ ಎರಗುತ್ತಾನೆ.

PC:YOUTUBE

ಭೇತಾಳ

ಭೇತಾಳ

ವಿಕ್ರಮಾರ್ಕನು ಭೇತಾಳನನ್ನು ಕಂಡು ಯಾವುದೇ ರೀತಿಯಲ್ಲಿ ಭಯಪಡದೇ ಇರುವುದನ್ನು ಕಂಡು ಭೇತಾಳನಿಗೆ ಆಶ್ಚರ್ಯವಾಗುತ್ತದೆ. ವಿಕ್ರಮಾರ್ಕನ ಧೈರ್ಯ, ಪರಾಕ್ರಮವನ್ನು ಕಂಡು ತನ್ನ ಪ್ರಶ್ನೆಗಳಿಗೆಲ್ಲಾ ಸರಿಯಾದ ಉತ್ತರವನ್ನು ನೀಡಿದರೆ ಈ ಶವವನ್ನು ನಿನಗೆ ಒಪ್ಪಿಸುವೆ ಇಲ್ಲವಾದರೆ ಶಿರಛೇದನ ಮಾಡಿಬಿಡುವೆ ಎಂದು ಹೇಳುತ್ತಾನೆ.

PC:YOUTUBE

ಪ್ರೆಶ್ನೆ

ಪ್ರೆಶ್ನೆ

ಇದಕ್ಕೆ ಒಪ್ಪಿದ ವಿಕ್ರಮಾರ್ಕ ಭೇತಾಳನ ಹಲವಾರು ಪ್ರೆಶ್ನೆಗಳಿಗೆಲ್ಲಾ ಒಂದಾದಾಗಿ ಉತ್ತರ ನೀಡುತ್ತಾ ಮುಂದೆ ಸಾಗುತ್ತಾನೆ.


PC:YOUTUBE

ಭೇತಾಳನ ಪ್ರಶ್ನೆಗಳು

ಭೇತಾಳನ ಪ್ರಶ್ನೆಗಳು

ಭೇತಾಳನ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ವಿಕ್ರಮಾರ್ಕ ನೀಡುತ್ತಾನೆ. ಇದರಿಂದ ಪರಾಕ್ರಮ ಶಾಲಿ ವಿಕ್ರಮಾರ್ಕನಿಗೆ ಆ ನೀಚ ಭೀಕ್ಷುವಿನ ಕುತಂತ್ರದ ಬಗ್ಗೆ ತಿಳಿಸುತ್ತಾನೆ.


PC:YOUTUBE

ಶಿಷುಂಭಾ ಮರ ಯಾವುದು?

ಶಿಷುಂಭಾ ಮರ ಯಾವುದು?

ಈ ಶಿಷುಂಭಾ ಮರವು ಪೂರ್ವ ಹಾಗೂ ದಕ್ಷಿಣ ಭಾರತದಲ್ಲಿ ಅತ್ಯಂತ ಉಷ್ಣಮಯ ವಾತಾವರಣದಲ್ಲಿ ಬೆಳೆಯುವಂತಹದು. ಇದನ್ನು ಆಂಗ್ಲ ಭಾಷೆಯಲ್ಲಿ ರೋಸ್ ವುಡ್ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಬಿ.ಟಿ ಮರ ಎಂದು ಕರೆಯುತ್ತಾರೆ.


PC:YOUTUBE

ಬಿ.ಟಿ ಮರ

ಬಿ.ಟಿ ಮರ

ಬಿ.ಟಿ ಮರದಲ್ಲಿ ಹಲವಾರು ಉಪಯೋಗಗಳಿವೆ. ಈ ಮರದಲ್ಲಿನ ಹಾಲನ್ನು ಗಾಯವನ್ನು ವಾಸಿ ಮಾಡಲು ಬಳಸುತ್ತಾರೆ. ಕುರ್ಚಿಗಳು, ಗಿಟಾರ್‍ಗಳನ್ನು ತಯಾರು ಮಾಡುತ್ತಾರೆ. ಈ ವೃಕ್ಷವು ಸುಮಾರು 40 ಮೀಟರ್‍ನಷ್ಟು ಎತ್ತರದಲ್ಲಿರುತ್ತದೆ.


PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X