Search
  • Follow NativePlanet
Share
» »ಹುಲಿಗಳ ಈ ಕಾಡುಗಳಲ್ಲಿ ನಿಮಗೆ ಪ್ರವಾಸ ಮಾಡಲು ಧೈರ್ಯವಿದೆಯೆ?

ಹುಲಿಗಳ ಈ ಕಾಡುಗಳಲ್ಲಿ ನಿಮಗೆ ಪ್ರವಾಸ ಮಾಡಲು ಧೈರ್ಯವಿದೆಯೆ?

By Vijay

ಹುಲಿ ಒಂದು ಅದ್ಭುತ ಕಾಡು ಪ್ರಾಣಿ. ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿರುವ ಈ ಪ್ರಾಣಿ ಭಾರತದ ರಾಷ್ಟ್ರೀಯ ಪ್ರಾಣಿಯೂ ಹೌದು. ತನ್ನ ಗಂಭೀರ ನಡೆ, ಆಕರ್ಷಕ ಮೈಮಾಟ ಹಾಗೂ ಅಪಾರ ದೈಹಿಕ ಸಾಮರ್ಥ್ಯದಿಂದಾಗಿ ಪ್ರಾಣಿಪ್ರಿಯ ಪ್ರವಾಸಿಗರಲ್ಲಿ ಹೆಚ್ಚು ಕುತೂಹಲ ಕೆರಳಿಸುತ್ತದೆ.

ಹುಲಿಗಳ ವೀಕ್ಷಣೆ, ಅಧ್ಯಯನಕ್ಕೆಂದೆ ಎಷ್ಟೊ ವಿದೇಶಿ ಪ್ರವಾಸಿಗರು ಭಾರತ ದೇಶಕ್ಕೆ ಪ್ರವಾಸ ಕೈಗೊಳ್ಳುತ್ತಾರೆ. ಅವನತಿಯ ಅಂಚಿನಲ್ಲಿರುವ ಈ ಅದ್ಭುತ ಜೀವಿಗಳ ರಕ್ಷಣೆಗೆಂದೆ ಭಾರತ ಕಳೆದ ಕೆಲ ದಶಕಗಳಿಂದ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಅದರ ಫಲವಾಗಿಯೆ ಇಂದು ಜಗತ್ತಿನಲ್ಲಿರುವ ಒಟ್ಟು ಹುಲಿಗಳ ಸಂಖ್ಯೆಯ 70% ರಷ್ಟು ಭಾರತದಲ್ಲೆ ಇವೆಯೆಂದರೆ ಹೆಮೆ ಪಡಬೇಕಾದ ವಿಷಯವೆ ಹೌದು.

ತಲ್ಲಣಗೊಳಿಸುವ ಈಶಾನ್ಯ ಭಾರತದ ಈ ಕಾಡುಗಳು ಹೇಗಿವೆ ಗೊತ್ತೆ?

ಜುಲೈ 29, ಸಾಮಾನ್ಯವಾಗಿ ಎಲ್ಲೆಡೆ ಅಂತಾರಾಷ್ಟ್ರೀಯ ಹುಲಿ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಹುಲಿಗಳು ಕಾಡಿನ ಅವಿಭಾಜ್ಯ ಅಂಗಗಳಾಗಿದ್ದು ಚರ್ಮ್ಮಕ್ಕೊಸ್ಕರ ಅವುಗಳ ಬೇಟೆಯಾಡುತ್ತಿರುವುದರ ವಿರುದ್ಧವಾಗಿ ಜನರಲ್ಲಿ ಜಾಗೃತಿ ಮೂಡಿಸಲು, ಮುಂದಿನ ಪೀಳಿಗೆಗೆ ಈ ಕಾಡು ಪ್ರಾಣಿಗಳ ಕುರಿತು ವಿಷಯ ಕೇವಲ ಪುಸ್ತಕಗಳಲ್ಲಿ ದೊರೆಯುವಂತೆ ಮಾಡದಿರಲು ಈ ದಿನವನ್ನು ಆಚರಿಸಲಾಗುತ್ತದೆ.

ಭಾರತದಲ್ಲಿ "ಪ್ರಾಜೆಕ್ಟ್ ಟೈಗರ್" ಯೋಜನೆಯಲ್ಲಿ ಒಟ್ಟು 49 ಹುಲಿ ಸಂರಕ್ಷಿತ ಅಥವಾ ಹುಲಿ ಮೀಸಲು ಕಾಡುಗಳಿದ್ದು ಜಂಗಲ್ ಸಫಾರಿಯಂತಹ ಪ್ರವಾಸಿ ಚಟುವಟಿಕೆಗಳಿಂದಲೂ ಇವು ಹೆಸರುವಾಸಿಯಾಗಿವೆ. ಪ್ರಸ್ತುತ ಲೇಖನದ ಮೂಲಕ ಹುಲಿಗಳಿರುವ ಕೆಲವು ಆಯ್ದ ಅದ್ಭುತ ಕಾಡುಗಳು ಯಾವುವು ಎಂಬುದರ ಕುರಿತು ತಿಳಿಯಿರಿ.

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ಅಚಾನಕಮಾರ್ ಅಭಯಾರಣ್ಯ : ಛತ್ತೀಸಗಡ್ ರಾಜ್ಯದ ಮುಂಗೇಲಿ-ಬಿಲಾಸಪುರ ಕಾಡಿನ ಭಾಗವಾಗಿರುವ ಈ ಅಭಯಾರಣ್ಯ ಸಂರಕ್ಷಿತ ಹುಲಿ ಮೀಸಲು ಪ್ರದೇಶವಾಗಿದೆ. ಇದು ಬಿಲಾಸಪುರದಿಂದ 55 ಕಿ.ಮೀ ಹಾಗೂ ಅಮರಕಂಟಕದಿಂದ 21 ಕಿ.ಮೀ ದೂರವಿದೆ. ನವಂಬರ್ ನಿಂದ ಹಿಡಿದು ಜೂನ್ ಮಧ್ಯದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Mathias Appel

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ಬಂಡೀಪುರ ರಾಷ್ಟ್ರೀಯ ಉದ್ಯಾನ : ಭಾರತದಲ್ಲೆ ಅದ್ಭುತವಾದ ರಾಷ್ಟ್ರೀಯ ಉದ್ಯಾನಗಳಲ್ಲೊಂದಾದ ಬಂಡೀಪುರ ರಾಷ್ಟ್ರೀಯ ಉದ್ಯಾನವು ಒಂದು ಮಹತ್ವದ ಹುಲಿ ಮೀಸಲು ಪ್ರದೇಶವೂ ಸಹ ಆಗಿದೆ. ಜಂಗಲ್ ಸಫಾರಿ ಚಟುವಟಿಕೆ ಲಭ್ಯವಿರುವ ಈ ಉದ್ಯಾನವು ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ವ್ಯಾಪಿಸಿದೆ.

ಚಿತ್ರಕೃಪೆ: Prabukumar84

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ : ಬೆಂಗಳೂರು ನಗರ ಕೇಂದ್ರದಿಂದ ಕೇವಲ 20 ಕಿ.ಮೀ ದೂರವಿರುವ ಹಾಗೂ ಬೆಂಗಳೂರು ನಗರ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಒಂದು ಸಂರಕ್ಷಿತ ಹುಲಿ ಪ್ರದೇಶವೂ ಹೌದು.

ಚಿತ್ರಕೃಪೆ: Pallavibarman10

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ಭದ್ರಾ ಅಭಯಾರಣ್ಯ : ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ಪಟ್ಟಣ ಕೇಂದ್ರದಿಂದ ವಾಯವ್ಯಕ್ಕೆ ಸುಮಾರು 38 ಕಿ.ಮೀ ದೂರದಲ್ಲಿರುವ ಭದ್ರಾ ಅಭಯಾರಣ್ಯವು ಅದ್ಭುತ ಪ್ರವಾಸಿ ತಾಣವಾಗಿರುವುದಲ್ಲದೆ ಒಂದು ಹುಲಿ ಮೀಸಲು ಪ್ರದೇಶವೂ ಸಹ ಆಗಿರುವುದು ವಿಶೇಷ.

ಚಿತ್ರಕೃಪೆ: Yathin S Krishnappa

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ಬುಕ್ಸಾ ರಾಷ್ಟ್ರೀಯ ಉದ್ಯಾನ : ಪಶ್ಚಿಮ ಬಂಗಾಳ ರಾಜ್ಯದ ಅಲಿಪುರದುವಾರ್ ಜಿಲ್ಲೆಯಲ್ಲಿರುವ ಬುಕ್ಸಾ ರಾಷ್ಟ್ರೀಯ ಉದ್ಯಾನದ ಒಂದು ಭಾಗವು ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಅದ್ಭುತ ಕಾಡಿನ ಸೌಂದರ್ಯ ಹೊಂದಿರುವ ಈ ಪ್ರದೇಶವು ನಿಸರ್ಗಪ್ರಿಯ ಪ್ರವಾಸಿಗರ ಮನ ಕದಿಯುವಲ್ಲಿ ಎರಡು ಮಾತಿಲ್ಲ.

ಚಿತ್ರಕೃಪೆ: Ssandipchatterjee2016

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ದಾಂಡೇಲಿ ವನ್ಯಜೀವಿ ಅಭಯಾರಣ್ಯ : ಅಣಶಿ ರಾಷ್ಟ್ರೀಯ ಉದ್ಯಾನದೊಂದಿಗೆ ಹೊಂದಿಕೊಂಡಿರುವ ದಾಂಡೇಲಿ ಅಭಯಾರಣ್ಯವನ್ನು ಒಟ್ಟಾಗಿ ಸೇರಿಸಿ 2006 ರಲ್ಲಿ ಅಣಸಿ-ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲಾಗಿದೆ. ಇದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿದೆ.

ಚಿತ್ರಕೃಪೆ: Amoghavarsha

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ಕಾಲಕ್ಕಾಡ್ ಮುಂಡತುರೈ : ತಮಿಳುನಾಡಿನ ತಿರುನೆಲ್ವೇಲಿ ಹಾಗೂ ಕನ್ಯಾಕುಮಾರಿ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಗಳಲ್ಲಿ ಸ್ಥಿತವಿರುವ ಕಾಲಕ್ಕಾಡ್ ಮುಂಡತುರೈ ಅಭಯಾರಣ್ಯವು ಒಂದು ಸಂರಕ್ಷಿತ ಹುಲಿ ಮೀಸಲು ಪ್ರದೇಶವಾಗಿದೆ.

ಚಿತ್ರಕೃಪೆ: Zwoenitzer

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ಕಾನ್ಹಾ ರಾಷ್ಟ್ರೀಯ ಉದ್ಯಾನ : ಮಧ್ಯ ಪ್ರದೇಶ ರಾಜ್ಯದ ಬಲಘಾಟ್ ಹಾಗೂ ಮಂಡ್ಲಾ ಜಿಲ್ಲೆಯಲ್ಲಿ ವ್ಯಾಪಿಸಿರುವ ಈ ರಾಷ್ಟ್ರೀಯ ಉದ್ಯಾನ ಒಂದು ಅದ್ಭುತ ವನ್ಯಜೀವಿ ಪ್ರವಾಸಿಧಾಮ ಹಾಗೂ ಹುಲಿ ಸಂರಕ್ಷಿತ ಪ್ರದೇಶವಾಗಿದೆ.

ಚಿತ್ರಕೃಪೆ: Ashishmahaur

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ನಾಗಾರ್ಜುನಸಾಗರ-ಶ್ರೀಶೈಲಂ ಹುಲಿ ಮೀಸಲು ಪ್ರದೇಶ : ಇದು ಭಾರತದಲ್ಲಿಯೆ ಅತಿ ದೊಡ್ಡದಾದ ಹುಲಿ ಸಂರಕ್ಷಿತ ಪ್ರದೇಶ. ಇದು ತೆಲ್ಂಗಾಣ ರಾಜ್ಯದ ನಲಗೊಂಡ ಜಿಲ್ಲೆ, ಮೆಹಬೂಬನಗರ ಜಿಲ್ಲೆ ಹಾಗೂ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ, ಪ್ರಕಾಶಂ ಜಿಲ್ಲೆ ಹಾಗೂ ಗುಂಟೂರು ಜಿಲ್ಲೆಗಳಲ್ಲಿ ಸಮೃದ್ಧವಾಗಿ ಹರಡಿದೆ. ನಾಗಾರ್ಜುನ ಸಾಗರ ಹಾಗೂ ಶ್ರೀಶೈಲಂ ಇದಕ್ಕೆ ಹತ್ತಿರದಲ್ಲಿರುವ ಅದ್ಭುತ ಪ್ರವಾಸಿ ತಾಣಗಳಾಗಿವೆ.

ಚಿತ್ರಕೃಪೆ: Raj srikanth800

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ನಾಗಝಿರಾ ರಾಷ್ಟ್ರೀಯ ಉದ್ಯಾನ : ಇದು ಮಹಾರಾಷ್ಟ್ರ ರಾಜ್ಯದ ಭಂಡಾರಾ ಹಾಗೂ ಗೊಂಡಿಯಾ ಜಿಲ್ಲೆಗಳಲ್ಲಿ ವ್ಯಾಪಿಸಿದ ಅಭಯಾರಣ್ಯ ಪ್ರದೇಶವಾಗಿದೆ. ಈ ಹುಲಿ ಸಂರಕ್ಷಿತ ಕಾಡು ಮನಸೆಳೆವಂತಹ ಅದ್ಭುತವಾದ ಕಾಡು ಸೌಂದರ್ಯದಿಂದ ಕೂಡಿದ್ದು ಪ್ರತಿ ವರ್ಷ 30,000 ಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ.

ಚಿತ್ರಕೃಪೆ: Grassjewel

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ನಮ್ದಫಾ ರಾಷ್ಟ್ರೀಯ ಉದ್ಯಾನ : ಈಶಾನ್ಯ ಭಾರತದ ಅರುಣಾಚಲ ಪ್ರದೇಶ ರಾಜ್ಯದಲ್ಲಿರುವ ಇದು ಪೂರ್ವ ಹಿಮಾಲಯದ ಜೀವವೈವಿಧ್ಯತೆಯಿಂದ ಕೂಡಿರುವ ಮಹತ್ವದ ಸ್ಥಳಗಳ ಪೈಕಿ ಒಂದಾಗಿದೆ ಹಾಗೂ ಒಂದು ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಹುಲಿಗಳಲ್ಲದೆ ಇಲ್ಲಿ ವಿರಳವಾಗಿ ಕಂಡುಬರುವ ಹೂಬಳ್ಳಿಗಳು, ಸಸ್ತನಿ ಪ್ರಾಣಿಗಳು ಸಹ ಸಾಕಷ್ಟು ಸಂಖ್ಯೆಯಲ್ಲಿವೆ.

ಚಿತ್ರಕೃಪೆ: Rohit Naniwadekar

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ನಾಮೇರಿ ರಾಷ್ಟ್ರೀಯ ಉದ್ಯಾನ : ಪೂರ್ವ ಹಿಮಾಲಯದ ತಪ್ಪಲಿನಲ್ಲಿರುವ ಅಸ್ಸಾಂ ರಾಜ್ಯದ ಸೋನಿತಪುರ್ ಜಿಲ್ಲೆಯಲ್ಲಿರುವ ನಾಮೇರಿ ರಾಷ್ಟ್ರೀಯ ಉದ್ಯಾನವು ಪ್ರಾಕೃತಿಕವಾಗಿ ಸುಂದರವಾದ, ಒಂದು ಹುಲಿ ಸಂರಕ್ಷಿತ
ಪ್ರದೇಶವಾಗಿದೆ.

ಚಿತ್ರಕೃಪೆ: Nilutpal Mahanta

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ಪರಾಂಬಿಕುಲಂ ವನ್ಯಜೀವಿಧಾಮ : ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಚಿತ್ತೂರು ತಾಲೂಕಿನಲ್ಲಿರುವ ಪರಾಂಬಿಕುಲಂ ವನ್ಯಜೀವಿಧಾಮವು ಒಂದು ಅದ್ಭುತ ಪ್ರವಾಸಿ ಆಕರ್ಷಣೆಯಾಗಿರುವುದೂ ಅಲ್ಲದೆ ಹುಲಿ ಸಂರಕ್ಷಿತ ಪ್ರದೇಶವಾಗಿಯೂ ಸಾಕಷ್ಟು ಹೆಸರುವಾಸಿಯಾಗಿದೆ. 2010 ರಲ್ಲಿ ಇದು ಹುಲಿ ಮೀಸಲು ಪ್ರದೇಶವಾಗಿ ಬಡ್ತಿ ಪಡೆದಿದೆ.

ಚಿತ್ರಕೃಪೆ: Prashanth dotcompals

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ಪಿಲಿಭೀಟ್ : ಉತ್ತರ ಪ್ರದೇಶದಲ್ಲಿರುವ ಹುಲಿ ಮೀಸಲು ಪ್ರದೇಶ ಇದಾಗಿದೆ. ರಾಜ್ಯದ ಪಿಲಿಭಿಟ್, ಲಖಿಂಪುರ್ ಹಾಗೂ ಬಹ್ರೇಚ್ ಜಿಲ್ಲೆಗಳಲ್ಲಿ ಈ ಹುಲಿ ಮೀಸಲು ಪ್ರದೇಶ ವ್ಯಾಪಿಸಿದೆ. ಕಾಡಿನಲ್ಲಿರುವ ವೀಕ್ಷಣಾ ಗೋಪುರ.

ಚಿತ್ರಕೃಪೆ: Makks2010

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ಸರಿಸ್ಕಾ ಹುಲಿ ಮೀಸಲು ಪ್ರದೇಶ : ರಾಜಸ್ಥಾನ ರಾಜ್ಯದ ಅಲ್ವಾರ್ ಜಿಲ್ಲೆಯಲ್ಲಿರುವ ಸರಿಸ್ಕಾ ಒಂದು ಅದ್ಭುತವಾದ ಹುಲಿ ಮೀಸಲು ಪ್ರದೇಶವಾಗಿದೆ. ಸರಿಸ್ಕಾ ಹುಲಿ ಮೀಸಲು ಪ್ರದೇಶ ಎರಡು ಹೆಗ್ಗಳಿಕೆಗಳಿಗೆ ಪಾತ್ರವಾಗಿದೆ. ಒಂದು ಇದು ತನ್ನಲ್ಲಿರುವ ಬಂಗಾಳ ಹುಲಿಗಳಿಗೆ ಹೆಸರುವಾಸಿಯಾಗಿದೆ. ಎರಡನೇಯದಾಗಿ ಜಗತ್ತಿನಲ್ಲೆ ಮೊದಲ ಬಾರಿಗೆ ಸ್ಥಳಾಂತರಿಸಲಾದ ಹುಲಿಗಳು ಯಶಸ್ವಿಯಾಗಿ ನೆಲೆಸಿರುವ ತಾಣವಾಗಿದೆ.

ಚಿತ್ರಕೃಪೆ: Ekabhishek

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ಸತ್ಯಮಂಗಲಂ ಕಾಡು : ತಮಿಳುನಾಡಿನ ಪಶ್ಚಿಮ ಘಟ್ಟಗಳಲ್ಲಿ ಹರಡಿರುವ ಸತ್ಯಮಂಗಲಂ ಅಭಯಾರಣ್ಯವು ಒಂದು ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಭೌಗೋಳಿಕವಾಗಿ ಸತ್ಯಮಂಗಲಂ ಕಾಡು ವನ್ಯಜೀವನದ ಅದ್ಭುತ ಪ್ರವೇಶ ದ್ವಾರವಾಗಿದೆ. ಏಕೆಂದರೆ ಇದು ಬಂಡೀಪುರ, ಮುದುಮಲೈ, ಬಿಳಿಗಿರಿರಂಗ ನಂತಹ ಕಾಡುಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಚಿತ್ರಕೃಪೆ: Suniltg

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ಸತಪುರಾ ರಾಷ್ಟ್ರೀಯ ಉದ್ಯಾನ : ಮಧ್ಯ ಪ್ರದೇಶ ರಾಜ್ಯದ ಹೋಶಂಗಾಬಾದ್ ಜಿಲ್ಲೆಯಲ್ಲಿ ಈ ಹುಲಿ ಮೀಸಲು ಪ್ರದೇಶವಿದೆ. ಸತಪುರಾ ಪರ್ವತ ಶ್ರೇಣಿಗಳಲ್ಲಿ ಆವರಿಸಿರುವುದರಿಂದ ಇದಕ್ಕೆ ಸತಪುರಾ ಎಂಬ ಹೆಸರು ಬಂದಿದೆ. ಈ ಹುಲಿ ಸಂರಕ್ಷಿತ ಪ್ರದೇಶ ಜೀವ ವೈವಿಧ್ಯತೆಯಿಂದ ಕೂಡಿದೆ.

ಚಿತ್ರಕೃಪೆ: BSSKrishnaS

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ಸುಂದರಬನ್ಸ್ : ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ಸುಂದರಬನ್ಸ್ ಗೆ ಅಕ್ಷರಶಃ ಸುಂದರಬನ್ ಅಂದರೆ ಭಾಷಾಂತರಿಸಿದಾಗ ಕನ್ನಡದಲ್ಲಿ "ಸುಂದರ ವನ" ಎಂದಾಗುತ್ತದೆ. ಇಲ್ಲಿನ ಕಾಡಿನ ಅಪರಿಮಿತ ಸೌಂದರ್ಯದಿಂದಲೊ ಏನೊ ಇದಕ್ಕೆ ಸುಂದರಬನ್ ಎಂಬ ಹೆಸರು ಬಂದಿದೆ. ಇದೊಂದು ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಹುಲಿ ಸಂರಕ್ಷಿತ ಪ್ರದೇಶವಾಗಿದೆ.

ಚಿತ್ರಕೃಪೆ: Fabian Lambeck

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ತಡೋಬಾ ಅಂಧಾರಿ ಹುಲಿ ಮೀಸಲು ಪ್ರದೇಶ : ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿರುವ ಈ ರಾಷ್ಟ್ರೀಯ ಉದ್ಯಾನ ರಾಜ್ಯದ ಅತಿ ಹಳೆಯ ಹಾಗೂ ದೊಡ್ಡದಾದ ಉದ್ಯಾನ ಎಂಬ ಕೀರ್ತಿಗೆ ಪಾತ್ರವಾಗಿದೆ.

ಚಿತ್ರಕೃಪೆ: Sundarraj Kaushik

ಹುಲಿಗಳಿರುವ ಅದ್ಭುತ ಕಾಡುಗಳು:

ಹುಲಿಗಳಿರುವ ಅದ್ಭುತ ಕಾಡುಗಳು:

ತ್ಯಾವರೆಕೊಪ್ಪ : ಕರ್ನಾಟಕದ ಶಿವಮೊಗ್ಗದಿಂದ ಹತ್ತು ಕಿ.ಮೀ ದೂರದಲ್ಲಿರುವ ತ್ಯಾವರೆಕೊಪ್ಪದ ಕಾಡು ಪ್ರದೇಶವು ಕೇವಲ ಹುಲಿ ಮಾತ್ರವಲ್ಲದೆ ಸಿಂಹಗಳ ಸಂರಕ್ಷಿತ ಪ್ರದೇಶವಾಗಿಯೂ ಹೆಸರುವಾಸಿಯಾಗಿದೆ. ವಿಶೇಷವೆಂದರೆ ಇಲ್ಲಿ ಹುಲಿ ಹಾಗೂ ಸಿಂಹಗಳು ಪ್ರತ್ಯೇಕವಾಗಿ ನೆಲೆಸಿರುವಂತೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಜೀಪುಗಳ ಮೂಲಕ ಸಫಾರಿಯ ಸೌಲಭ್ಯವನ್ನೂ ಸಹ ಪ್ರವಾಸಿಗರಿಗೆ ಒದಗಿಸಲಾಗಿದೆ. ಯಾವುದೆ ಅಹಿತಕರ ಘಟನೆ ಸಂಭವಿಸದಂತೆ ದೂರದಿಂದ ವೀಕ್ಷಿಸುವಂತೆ ಹಾಗೂ ರಕ್ಷಣಾ ಬೇಲಿಗಳ ವ್ಯವಸ್ಥೆ ಇಲ್ಲಿದೆ.

ಚಿತ್ರಕೃಪೆ: Harikrishnan18

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X