• Follow NativePlanet
Share
Menu
» »ಕಪಿಲತೀರ್ಥದ ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತ?

ಕಪಿಲತೀರ್ಥದ ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತ?

Written By:

ಆಂಧ್ರಪ್ರದೇಶದಲ್ಲಿನ ಸುಪ್ರಸಿದ್ಧವಾದ ಶೈವ ಕ್ಷೇತ್ರಗಳಲ್ಲಿ ಕಪಿಲತೀರ್ಥವು ಕೂಡ ಒಂದು. ಪ್ರಪಂಚ ಪ್ರಖ್ಯಾತಿ ಪಡೆದ ವೈಷ್ಣವ ಕೇತ್ರ ತಿರುಪತಿ. ಈ ಮಾಹಿಮಾನ್ವಿತವಾದ ಪಟ್ಟಣದಲ್ಲಿರುವುದು ವಿಶೇಷವಾಗಿದೆ. ಹರಿಹರರಿಗೆ ಯಾವುದೇ ಭೇದ ಮಾಡಬಾದರು ಎಂದು ನಿರೂಪಿಸಿ ನೆಲೆಸಿರುವ ಈ ತೀರ್ಥವನ್ನು ತಿರುಪತಿಯಲ್ಲಿನ ಅಲಿಪಿರಿ ಮಾರ್ಗದಲ್ಲಿ ಕಾಣಬಹುದು. ಶೇಷಾಚಲ ಪರ್ವತ ಪಾದದಲ್ಲಿರುವ ಈ ಕ್ಷೇತ್ರದಲ್ಲಿ ಮನೋಹರವಾದ ಪ್ರಕೃತಿ, ಪ್ರಶಾಂತವಾದ ವಾತಾವಣ, ಅತ್ಯಂತ ಸುಂದರವಾದ ಜಲಪಾತಗಳನ್ನು ಕಣ್ಣುತುಂಬಿಕೊಳ್ಳಬಹುದಾಗಿದೆ.

ನಿಮ್ಮ ಜೀವನದಲ್ಲಿ ಎಂದೂ ಕಂಡು ಕೇಳರಿಯದ ವಿಭಿನ್ನವಾದ ಶಿವಲಿಂಗಗಳು!

ಕೃತಯುಗದಲ್ಲಿ ಈಶ್ವರನಿಗಾಗಿ ತಪ್ಪಸ್ಸು ಮಾಡಿದ ಕಪಿಲ ಮಹರ್ಷಿಯ ಭಕ್ತಿಗೆ ಮೆಚ್ಚಿ ಪಾತಾಳದಿಂದ ಬಂದ ಶಿವನು ಈ ಪವಿತ್ರವಾದ ತೀರ್ಥವಾಗಿ ನೆಲೆಸಿದ್ದಾನೆ ಎಂಬುದು ಒಂದು ಸ್ಥಳ ಪುರಾಣವಾಗಿದೆ. ಕಪಿಲನ ತಪ್ಪಸ್ಸಿಗೆ ಮೆಚ್ಚಿ ನೆಲೆಸಿದ ಸ್ವಾಮಿಯನ್ನು ಕಪಿಲೇಶ್ವರ ಸ್ವಾಮಿ ಎಂದು ಕರೆಯಲಾಗುತ್ತದೆ.

ಇಂದಿಗೂ ನಿಗೂಢವಾಗಿಯೇ ಇರುವ ಬರಾಬರ್ ಗುಹೆ!

ಇಲ್ಲಿನ ದೇವಾಲಯವು ಅತ್ಯಂತ ಪುರಾತನವಾದುದು ಹಾಗು ಮಾಹಿಮಾನ್ವಿತವಾದುದು. ಈ ಸಮಯದಲ್ಲಿ ಆ ಪ್ರದೇಶವನ್ನು ಆಳುತ್ತಿದ್ದ ರಾಜಮನೆತನ ಎಂದರೆ ಅದು ಚೋಳರು, ರಾಜ ರಾಜೇಂದ್ರ. ಆ ಅವಧಿಯಲ್ಲಿ ಅತ್ಯಂತ ಭಕ್ತಿ, ಶ್ರದ್ಧೆಯಿಂದ ನಿರ್ಮಾಣ ಮಾಡಿದರು ಎಂದು ನಂಬಲಾಗಿದೆ.

ಪ್ರಸ್ತುತ ಲೇಖನದಲ್ಲಿ ಕಪಿಲತೀರ್ಥದ ಮಹತ್ವವನ್ನು ತಿಳಿಯೋಣ.

ವೈಷ್ಣವ ತೀರ್ಥ

ವೈಷ್ಣವ ತೀರ್ಥ

ವಿಜಯನಗರರಾಜ ಕಾಲದಲ್ಲಿ ಈ ತೀರ್ಥವನ್ನು ವೈಷ್ಣವ ತೀರ್ಥ ಎಂದು ಪರಿಗಣಿಸಲಾಗಿತ್ತು. ಆಳ್ವರ್ ತೀರ್ಥ ಎಂದು ಹೆಸರು ಇಟ್ಟು ಕರಿಯಲು ಆರಂಭ ಮಾಡಿದರು. ಪ್ರಸ್ತುತವಿರುವ ದೇವಾಲಯಕ್ಕೆ ಮುಂದೆ ಇರುವ ಚಿಕ್ಕದಾದ ಗುಡಿಯನ್ನು ಆಳ್ವಾರು ಎಂಬ ಹೆಸರಿನಿಂದ ನಿರ್ಮಾಣ ಮಾಡಿರುವುದು ಎಂದು ವಾದಿಸುತ್ತಿದ್ದರು.

ವಿಜಯನಗರ ಪರಿಪಾಲನೆ

ವಿಜಯನಗರ ಪರಿಪಾಲನೆ

ವಿಜಯನಗರ ಪರಿಪಾಲನೆಯ ಕೊನೆಯ ಅವಧಿಯಲ್ಲಿ ಈ ಪ್ರದೇಶಕ್ಕೆ ಒಂದು ದೇವದಾಸಿ ಬಂದು ಗಣಪತಿ ಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಟಾಪಿಸಿದಳು ಎಂದು ಹೇಳಲಾಗುತ್ತದೆ. ಈ ದೇವಾಲಯದ ಪ್ರಾಂಗಣದಲ್ಲಿ ಕಪಿಲೇಶ್ವರ ಸ್ವಾಮಿಯ ಜೊತೆ ಜೊತೆಗೆ ಕಾರ್ತೀಕೇಯ, ಶ್ರೀ ಕೃಷ್ಣ, ಅಗಸ್ತ್ಯ ಮಹಾ ಮುನಿ, ಕಾಶಿ ವಿಶ್ವೇಶ್ವರ, ಸಹಸ್ರಲಿಂಗೇಶ್ವರ, ಲಕ್ಷ್ಮೀ ನಾರಾಯಣ ಇನ್ನು ಹಲವಾರು ದೇವತಾ ಮೂರ್ತಿಯನ್ನು ಇಲ್ಲಿ ಕಾಣಬಹುದಾಗಿದೆ.

ಮಕ್ಕಳು ಇಲ್ಲದೇ ಇರುವವರು

ಮಕ್ಕಳು ಇಲ್ಲದೇ ಇರುವವರು

ಮಕ್ಕಳು ಇಲ್ಲದೇ ಇರುವವರು ಈ ಕ್ಷೇತ್ರದ ಸ್ವಾಮಿಯನ್ನು ಆರಾಧಿಸಿ, ಇಲ್ಲಿಯೇ ಒಂದು ರಾತ್ರಿ ಮಲಗಿದರೆ ಸಂತಾನ ಭಾಗ್ಯ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಪುಣ್ಯ ಸ್ನಾನ

ಪುಣ್ಯ ಸ್ನಾನ

ಇಲ್ಲಿನ ತೀರ್ಥ ಅತ್ಯಂತ ಪುಣ್ಯ ಪ್ರಧಾನವಾದುದು. ಹಾಗಾಗಿ ಇಲ್ಲಿ ಸ್ನಾನ ಮಾಡಿದವರಿಗೆ ಪಾಪಗಳು ನಾಶವಾಗುತ್ತದೆ ಎಂಬುದು ಒಂದು ಪ್ರಬಲವಾದ ವಿಶ್ವಾಸ. ವಿಶೇಷವಾಗಿ ಇಲ್ಲಿ ಕಾರ್ತಿಕ ಮಾಸದಲ್ಲಿ ಲಕ್ಷಾಂತರ ಭಕ್ತರು ಸ್ವಾಮಿಯ ದರ್ಶನ ಕೋರಿ ಭೇಟಿ ನೀಡುತ್ತಾರೆ. ಪುಣ್ಯ ತೀರ್ಥದಲ್ಲಿ ಸ್ನಾನವನ್ನು ಮಾಡಿ ಸ್ವಾಮಿಗೆ ದೀಪವನ್ನು ಹಚ್ಚಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ.

ಕಾರ್ತಿಕ ಮಾಸ

ಕಾರ್ತಿಕ ಮಾಸ

ಕಾರ್ತಿಕ ಮಾಸದಲ್ಲಿ ಬರುವ ಆರುದ್ರಾ ನಕ್ಷತ್ರದ ದಿನದಂದು ಕಪಿಲೇಶ್ವರ ಸ್ವಾಮಿಗೆ ಅತ್ಯಂತ ವೈಭವವಾಗಿ ಪೂಜೆಗಳು, ಅಭಿಷೇಕಗಳು ನಿರ್ವಹಿಸುತ್ತಾರೆ. ಇಲ್ಲಿ ಮಹಾಶಿವರಾತ್ರಿಯ ಮುಂಚೆ ನಡೆಯುವ ಬ್ರಹೋತ್ಸವಗಳು, ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ಉತ್ಸವಗಳು ನಡೆಯುತ್ತದೆ. ಕಪಿಲ ತೀರ್ಥವನ್ನು ಚಕ್ರತೀರ್ಥ ಅಥವಾ ಆಳ್ವಾರ್ ತೀರ್ಥ ಎಂದು ಸಹ ಕರೆಯುತ್ತಾರೆ.

ಕಪಿಲಲಿಂಗ

ಕಪಿಲಲಿಂಗ

ಕಾರ್ತಿಕ ಮಾಸದ ದಿನಕ್ಕೆ ಬರುವ ಕಾರ್ತಿಕ ದೀಪದ ದಿನದಂದು ಇಲ್ಲಿನ ಪರ್ವತದ ಮೇಲೆ ದೀಪ ಸಾಕ್ಷಾತ್ ಕರಿಸುತ್ತದೆ. ಭಕ್ತರೆಲ್ಲಾರು ಕಪಿಲತೀರ್ಥದ ದಿಕ್ಕಿಗೆ ದೀಪ ನಮಸ್ಕಾರ ಮಾಡುತ್ತಾರೆ. ಶಿವರಾತ್ರಿ ಮತ್ತು ಬ್ರಹ್ಮೋತ್ಸವದಲ್ಲಿ ವೈಭವವಾಗಿ ಹಬ್ಬಗಳು ನಡೆಯುತ್ತವೆ.

ಮಳೆಗಾಲದಲ್ಲಿ

ಮಳೆಗಾಲದಲ್ಲಿ

ಮುಖ್ಯವಾಗಿ ಮಳೆಗಾಲದ ಕಾಲದಲ್ಲಿ ಇಲ್ಲಿ ಬಂದರೆ ಪ್ರಕೃತಿಯ ಸೌಂದರ್ಯದಿಂದ ಕಂಗೊಳಿಸುತ್ತಿರುವ ಜಲಪಾತದ ದೃಶ್ಯಗಳನ್ನು ಕಂಡು ಅಸ್ವಾಧಿಸಬಹುದು. ಇಲ್ಲಿನ ಪ್ರಶಾಂತವಾದ ವಾತಾರಣ ಎಂಥವರನ್ನು ಮಂತ್ರ ಮುಗ್ಧಗೊಳಿಸುತ್ತದೆ.

ಅಗ್ನಿದೇವ

ಅಗ್ನಿದೇವ

ತ್ರೇತಾಯುಗದಲ್ಲಿ ಅಗ್ನಿದೇವ ಈ ಕ್ಷೇತ್ರದಲ್ಲಿ ಪರಮಶಿವನನ್ನು ಕುರಿತು ತಪಸ್ಸು ಮಾಡಿದನಂತೆ. ಹಾಗಾಗಿ ಇಲ್ಲಿನ ಲಿಂಗವನ್ನು ಆಗ್ನೆಯ ಲಿಂಗ ಎಂದು ಕೂಡ ಕರೆಯುತ್ತಾರೆ. ಇಲ್ಲಿನ ಕಪಿಲೇಶ್ವರನು ಕಾಮಾಕ್ಷಿ ಸಮೇತವಾಗಿ ನೆಲೆಸಿದ್ದಾನೆ.

11 ನೇ ಶತಮಾನದಲ್ಲಿ

11 ನೇ ಶತಮಾನದಲ್ಲಿ

11 ನೇ ಶತಮಾನದಲ್ಲಿ ಈ ಪ್ರದೇಶವನ್ನು ಆಳ್ವಿಕೆ ಮಾಡಿದ ಮೊದಲ ರಾಜೇಂದ್ರ ಚೋಳನ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಯಿತು ಎಂಬುದು ಅಲ್ಲಿನ ಆಧಾರಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ. ಅಂದಿನ ರಾಯನ್ ರಾಜೇಂದ್ರಚೋಳ ಎಂಬ ಚೋಳ ಅಧಿಕಾರಿ ಇದರ ನಿರ್ಮಾಣದ ಸೂತ್ರಧಾರಿ. ಚೋಳರು ಶಿವಭಕ್ತರಾಗಿದ್ದ ಕಾರಣದಿಂದಾಗಿ ಅತ್ಯಂತ ಭಕ್ತಿ, ನಿಷ್ಟೆಯಿಂದ ದೇವಾಲಯವನ್ನು ನಿರ್ಮಾಣ ಮಾಡಿದರು.

ಈ ತೀರ್ಥಕ್ಕೆ ಹೇಗೆ ಸಾಗಬೇಕು?

ಈ ತೀರ್ಥಕ್ಕೆ ಹೇಗೆ ಸಾಗಬೇಕು?

ತಿರುಪತಿ ನಗರದಿಂದ ಪ್ರಧಾನ ಬಸ್ಸು ನಿಲ್ದಾಣದಿಂದ ಸುಮಾರು 2 ಕಿ.ಮೀ ದೂರದಲ್ಲಿ ಅಲಿಪಿರಿ ಮಾರ್ಗದಲ್ಲಿರುವ ಕಪಿಲತೀರ್ಥಕ್ಕೆ ಸುಲಭವಾಗಿ ಬಸ್ಸು, ಟ್ಯಾಕ್ಸಿಗಳ ಸೌಕರ್ಯವಿದೆ. ಪ್ರತಿ ಅರ್ಥಗಂಟೆಗೆ ಒಮ್ಮೆ ಈ ಸ್ಥಳಕ್ಕೆ ಬಸ್ಸುಗಳು ಈ ಮಾರ್ಗವಾಗಿ ಪ್ರಯಾಣ ಮಾಡುತ್ತಿರುತ್ತವೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ